Tag: amulya

  • ಯಾವ ಅದ್ಧೂರಿ ಮದುವೆಗೂ ಕಡಿಮೆ ಇಲ್ಲ ಅಮ್ಮು-ಜಗ್ಗು ನಿಶ್ಚಿತಾರ್ಥ

    ಯಾವ ಅದ್ಧೂರಿ ಮದುವೆಗೂ ಕಡಿಮೆ ಇಲ್ಲ ಅಮ್ಮು-ಜಗ್ಗು ನಿಶ್ಚಿತಾರ್ಥ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಗೋಲ್ಡನ್ ಗರ್ಲ್ ಖ್ಯಾತಿಯ ನಟಿ ಅಮೂಲ್ಯ- ಜಗದೀಶ್ ವಿವಾಹ ನಿಶ್ಚಿತಾರ್ಥ ಸಮಾರಂಭ ಸೋಮವಾರ ಕೆಂಗೇರಿಯ ಶ್ರೀ ಸಾಯಿ ಪ್ಯಾಲೇಸ್‍ನಲ್ಲಿ ಅದ್ಧೂರಿಯಾಗಿ ನಡೆಯಿತು.

    ಗೋಲ್ಡನ್ ಸ್ಟಾರ್ ಗಣೇಶ್ ದಂಪತಿಯ ಮೂಲಕ ಪರಿಚಯವಾದ ಎರಡೂ ಕುಟುಂಬ ಗುರು ಹಿರಿಯ ನಿಶ್ಚಯದ ಮೇರೆಗೆ ಮದುವೆ ನಿಶ್ಚಯಿಸಿದೆ. ಮೇ ತಿಂಗಳು 10, 11 ಅಥವಾ 20, 21 ಕ್ಕೆ ಮದುವೆ ನಡೆಸಲು ತೀರ್ಮಾನಿಸಲಾಗಿದೆ.

    ನಿಶ್ಚಿತಾರ್ಥ ಸಮಾರಂಭದಲ್ಲಿ ಜರತಾರಿ ಸೀರೆಯುಟ್ಟು ಅಮೂಲ್ಯ ಮಿಂಚಿದರೆ, ಇಂಡೋ ವೆಸ್ಟರ್ನ್ ಶೈಲಿಯ ಕುರ್ತಾದಲ್ಲಿ ಜಗದೀಶ್ ಕಂಗೊಳಿಸಿದ್ರು. ಗಣೇಶ್ ಶಿಲ್ಪಾ ದಂಪತಿ ಮನೆಯ ಸದಸ್ಯರಂತೆ ಓಡಾಡಿಕೊಂಡಿದ್ದರು. ಅತ್ತ ಹಲವಾರು ಕಲಾವಿದರು ಆಗಮಿಸಿ ಭಾವೀ ದಂಪತಿಗೆ ಶುಭ ಹಾರೈಸಿದರು.

    ಕಾರ್ಯಕ್ರಮ ಹೀಗೆ ನಡೆಯಿತು:
    ಮೊದಲು ಅಮೂಲ್ಯ ಕುಟುಂಬ ಸಾಯಿಗೊಲ್ಡ್ ಪ್ಯಾಲೇಸ್‍ಗೆ ಬಂದರು. ಅಮೇಲೆ ಗಂಡಿನ ಕಡೆಯವರು ಕಲ್ಯಾಣ ಮಂಟಪಕ್ಕೆ ಬಂದರು. ಗಂಡಿನ ಕಡೆಯವರಿಗೆ ಸಾಂಪ್ರದಾಯಕವಾಗಿ ರಂಗೋಲಿ ಮತ್ತು ಕೋಲ್ಡ್ ಫಾಗ್ ಮೂಲಕ ಅಮೂಲ್ಯ ಮನೆಯವರು ಸ್ವಾಗತಿಸಿದರು.

    ಅಮೂಲ್ಯ ಮನೆಯವರು ಗಂಡಿನ ಕಡೆಯವರಿಗೆ ಸ್ವಾಗತಿಸಿದ ನಂತರ ನವ ಜೋಡಿಗಳು ದೀಪ ಬೆಳಗಿಸುವುದರ ಮೂಲಕ ಈ ಶುಭಾ ಕಾರ್ಯಕ್ಕೆ ಚಾಲನೆನೀಡಿದರು. ಎರಡು ಕುಟುಂಬದವರು ವಿಘ್ನ ವಿನಾಯಕನನ್ನು ನೆನೆದು ಗಣಹೋಮ ನೇರವೇರಿಸಿದರು.

    ಕಲ್ಯಾಣ ಮಂಟಪ ಮಿನಿ ಅರಮನೆಯಂತೆ ಸಿಂಗಾರಗೊಂಡಿತ್ತು. ಒಕ್ಕಲಿಗರ ಸಂಪ್ರದಾಯದಂತೆ ನಿಶ್ಚಿತಾರ್ಥ ನೆರವೇರಿತ್ತು. ಇಂಡೋ ವೆಸ್ಟರ್ನ್ ಸ್ಟೈನ್‍ನಲ್ಲಿ ಜಗದೀಶ್ ಝಗಮಗಿಸುತ್ತಿದ್ದರೆ, ಅಮ್ಮು ಜರತಾರಿ ಸೀರೆಯುಟ್ಟು ಮಹಾರಾಣಿಯಂತೆ ಕಂಗೊಳಿಸುತ್ತಿದ್ದರು.

    ಭೂರಿ ಭೋಜನ ವ್ಯವಸ್ಥೆ:
    ಅಮೂಲ್ಯ-ಜಗದೀಶ್ ಎಂಗೇಜ್‍ಮೆಂಟ್‍ಗಾಗಿ ಭೂರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಬಾದಮ್ ಪೂರಿ, ಹೆಸರು ಬೇಳೆ ಪಾಯಸ, ಪೂರಿ, ಅವರೇ ಬೇಳೆ ಗೊಜ್ಜು, ಮಾವಿನ ಕಾಯಿ ಚಿತ್ರನ್ನಾ, ಕಾಯಿ ಚಟ್ನಿ, ಕೊಸಂಬರಿ, ಮಿಕ್ಸ್ ಪಲ್ಲಾವ್, ಅನ್ನ, ನೂಗ್ಗೆಕಾಯಿ ಸಂಬಾರು, ಮದ್ರಾಸ್ ರಸಂ, ಆಲು ಬೋಂಡಾ.. ತರಹೇ ವಾರಿ ಅಡುಗೆಗಳನ್ನ ತಯಾರು ಮಾಡಲಾಗಿತ್ತು.

    ಮಧ್ಯಾಹ್ನದಿಂದಲೇ ನಿಶ್ಚಿತಾರ್ಥ ಕಾರ್ಯಕ್ರಮ ಶುರುವಾದ ಕಾರಣ ಮಧ್ಯಾಹ್ನನವೇ ಸುಮಾರು 300 ಮಂದಿ ಅತಿಥಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ಎಂಗೇಜ್‍ಮೆಂಟ್‍ಗೆ ಬರುವ ಸುಮಾರು 3000 ಅತಿಥಿಗಳಿಗಾಗಿ ತರಹೆವಾರಿ ಅಡುಗೆ ಸಿದ್ದಪಡಿಸಲಾಗಿದೆ.

    ಮದುವೆಯಾದ ನಂತರ ಅಮೂಲ್ಯ ಚಿತ್ರದಲ್ಲಿ ಆಕ್ಟ್ ಮಾಡ್ತಾರಾ ಎನ್ನುವ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದೆ. ಎಂಗೇಜ್‍ಮೆಂಟ್ ಆದ ಬಳಿಕ ಮಾಧ್ಯಮದ ಮುಂದೆ ಮಾತನಾಡಿದ ಅಮೂಲ್ಯ,”ಹತ್ತು ವರ್ಷ ಸಿನಿಮಾರಂಗದಲ್ಲಿದ್ದೀನಿ. ಅದ್ರಿಂದಲೇ ನಾನು ಅನ್ನ ತಿಂದಿದ್ದೀನಿ. ಒಳ್ಳೆಯ ಸಬ್ಜೆಕ್ಟ್ ಸಿಕ್ಕಿದ್ರೆ ಖಂಡಿತ ಸಿನಿಮಾ ಮಾಡ್ತೀನಿ” ಅಂತ ಪ್ರತಿಕ್ರಿಯಿಸಿದ್ದಾರೆ.

    ಇದನ್ನೂ ಓದಿ: ನಟಿ ಅಮೂಲ್ಯ, ಜಗದೀಶ್ ಪ್ರಪೋಸಲ್ ಹೇಗಾಯ್ತು: ನಟ ಗಣೇಶ್ ದಂಪತಿ ಹೇಳ್ತಾರೆ

    ಅದ್ಧೂರಿ ಮದುವೆ:
    ಜಗದೀಶ್ ಕೈಗೆ ಅಮೂಲ್ಯ ಸಾಲಿಟೇರ್ ರಿಂಗ್ ತೊಡಿಸಿದರೆ, ಅಮೂಲ್ಯಗೆ ಜಗದೀಶ್ ಡೈಮಂಡ್ ರಿಂಗ್ ತೊಡಿಸಿದ್ದಾರೆ. ಈ ವಿವಾಹ ನಿಶ್ವಿತಾರ್ಥ ಸಮಾರಂಭದಲ್ಲಿ ಆಪ್ತರಿಗಷ್ಟೇ ಆಹ್ವಾನ ನೀಡಿದ್ದ ಎರಡೂ ಕುಟುಂಬಗಳು ಮದುವೆಯನ್ನು ಇನ್ನೂ ಅದ್ಧೂರಿಯಾಗಿ ಮಾಡಲು ತೀರ್ಮಾನಿಸಿದೆ.

  • ಇಂದು ಸಂಜೆ ನಟಿ ಅಮೂಲ್ಯ-ಜಗದೀಶ್ ನಿಶ್ಚಿತಾರ್ಥ

    ಇಂದು ಸಂಜೆ ನಟಿ ಅಮೂಲ್ಯ-ಜಗದೀಶ್ ನಿಶ್ಚಿತಾರ್ಥ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ನಟಿ ಅಮೂಲ್ಯಾರಿಗೆ ಕಂಕಣ ಬಲ ಕೂಡಿಬಂದಿದೆ. ಗುರು ಹಿರಿಯರ ಒಪ್ಪಿಗೆಯಂತೆ ಅಮೂಲ್ಯ ಜಗದೀಶ್ ಕೈ ಹಿಡಿಯೋಕೆ ನಿರ್ಧರಿಸಿದ್ದಾರೆ. ಇಂದು ಸಂಜೆ ಬೆಂಗಳೂರಿನಲ್ಲಿ ಇವರ ವಿವಾಹ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ.

    ಇಂದು ಸಂಜೆ 6 ಗಂಟೆಗೆ ನಗರದ ಶ್ರೀ ಸಾಯಿ ಪ್ಯಾಲೇಸ್‍ನಲ್ಲಿ ನಟಿ ಅಮೂಲ್ಯ ಜಗದೀಶ್ ಕೈಗೆ ಉಂಗುರ ತೊಡಿಸಲಿದ್ದಾರೆ. ಗುರು ಹಿರಿಯರ ಒಪ್ಪಿಗೆಯಂತೆ ನಿಶ್ಚಯವಾದ ಈ ಮದುವೆಗೆ ಕಳೆದ ವಾರ ಹೆಣ್ಣು ನೋಡುವ ಶಾಸ್ತ್ರ ಮಾಡಲಾಗಿತ್ತು. ಇದೀಗ ನಿಶ್ಚಿತಾರ್ಥ ಸಮಾರಂಭ ನಡೆಸಿ ಶೀಘ್ರದಲ್ಲೇ ಮದುವೆ ದಿನಾಂಕವನ್ನೂ ನಿಗದಿಪಡಿಸಲಾಗುತ್ತೆ ಅನ್ನೋದನ್ನ ಕುಟುಂಬದ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಮದುವೆಯಾದ ಬಳಿಕ ಚಿತ್ರದಲ್ಲಿ ಆ್ಯಕ್ಟ್ ಮಾಡ್ತೀರಾ: ಅಮೂಲ್ಯ ಉತ್ತರ ಇದು 

    ಈ ನಿಶ್ಚಿತಾರ್ಥ ಸಮಾರಂಭದಲ್ಲಿ ಜರತಾರಿ ಸೀರೆಯುಡುವ ಅಮೂಲ್ಯ, ಜಗದೀಶ್ ಕೈಗೆ ಸಾಲಿಟೇರ್ ರಿಂಗ್ ತೊಡಿಸಲಿದ್ದಾರಂತೆ. ಅತ್ತ ಜಗದೀಶ್ ಅಮೂಲ್ಯಾರಿಗೆ ಡೈಮಂಡ್ ರಿಂಗ್ ತೊಡಿಸಲಿದ್ದಾರೆ.

    ಈ ವಿವಾಹ ನಿಶ್ಚಯ ಸಮಾರಂಭಕ್ಕೆ ಸಿನಿಮಾ ಹಾಗೂ ರಾಜಕೀಯ ಗಣ್ಯರು ಆಗಮಿಸುವ ನಿರೀಕ್ಷೆ ಇದೆ. ಅಮೂಲ್ಯ ಕೈ ಹಿಡಿಯಲಿರುವ ಜಗದೀಶ್ ಮಾಜಿ ಕಾರ್ಪೋರೇಟರ್ ಮಗ. ಲಂಡನ್‍ನಲ್ಲಿ ಎಂಬಿಎ ಮಾಡಿದ್ದು ಬೆಂಗಳೂರಿನ ಆರ್‍ಆರ್ ನಗರ ನಿವಾಸಿ. ಬಹು ಬೇಡಿಕೆಯಲ್ಲಿರುವಾಗಲೇ ಹಸೆಮಣೆ ಏರೋಕೆ ರೆಡಿಯಾಗಿರೋ ಅಮೂಲ್ಯಾರ ಮದುವೆ ದಿನಾಂಕ ಶೀಘ್ರದಲ್ಲೇ ಹೊರಬೀಳಲಿದೆ.

    ಇದನ್ನೂ ಓದಿ: ನಟಿ ಅಮೂಲ್ಯ, ಜಗದೀಶ್ ಪ್ರಪೋಸಲ್ ಹೇಗಾಯ್ತು: ನಟ ಗಣೇಶ್ ದಂಪತಿ ಹೇಳ್ತಾರೆ

     

  • ನಟಿ ಅಮೂಲ್ಯ ನಿಶ್ಚಿತಾರ್ಥ ಕಾರ್ಡ್ ರೆಡಿ- ಇಲ್ಲಿದೆ ನೋಡಿ

    ನಟಿ ಅಮೂಲ್ಯ ನಿಶ್ಚಿತಾರ್ಥ ಕಾರ್ಡ್ ರೆಡಿ- ಇಲ್ಲಿದೆ ನೋಡಿ

    ಬೆಂಗಳೂರು: ಈಗಾಗಲೇ ತಾಂಬೂಲ ಬದಲಿಸಿಕೊಂಡಿರುವ ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಮದುವೆ ನಿಶ್ಚಿತಾರ್ಥದ ಆಮಂತ್ರಣ ಪತ್ರಿಕೆ ರೆಡಿಯಾಗಿದೆ.

    ನಟಿ ಅಮೂಲ್ಯ ಮಾಜಿ ಕಾರ್ಪೊರೇಟರ್ ಮಗ ಜಗದೀಶ್ ಅವರನ್ನು ಶೀಘ್ರವೇ ಕೈಹಿಡಿಯಲಿದ್ದಾರೆ. ಸಂಪ್ರದಾಯದಂತೆ ಮಾರ್ಚ್ 6 ರಂದು ಕೆಂಗೇರಿಯ ಶ್ರೀ ಸಾಯಿ ಪ್ಯಾಲೇಸ್‍ನಲ್ಲಿ ಅಮೂಲ್ಯ ಮತ್ತು ಜಗದೀಶ್ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ.

    ಈ ಶುಭ ಸಂದರ್ಭದಲ್ಲಿ ಲಂಡನ್‍ನಲ್ಲಿ ಓದಿರೋ ಎಂಬಿಎ ಪದವೀಧರ ಜಗದೀಶ್ ಕೈಗೆ ಅಮೂಲ್ಯ ಡೈಮಂಡ್ ರಿಂಗ್ ತೊಡಿಸಲಿದ್ದಾರೆ. ಅತ್ತ ಜಗದೀಶ್ ತನ್ನ ಗೋಲ್ಡನ್ ಗರ್ಲ್‍ಗೆ ಸಾಲಿಟೇರ್ ರಿಂಗ್ ತೊಡಿಸಲಿದ್ದಾರೆ.

    ಈ ವಿವಾಹ ನಿಶ್ಚಿತಾರ್ಥ ಸಮಾರಂಭಕ್ಕೆ ಸಿನಿಮಾ ಮತ್ತು ರಾಜಕೀಯ ಗಣ್ಯರು ಆಗಮಿಸುವ ನಿರೀಕ್ಷೆ ಇದೆ. ಮಾತ್ರವಲ್ಲದೇ ಶೀಘ್ರದಲ್ಲೇ ಅಮೂಲ್ಯ ಮದುವೆಯ ದಿನಾಂಕ ಕೂಡ ಹೊರಬೀಳಲಿದೆ.

    ಇದನ್ನೂ ಓದಿ: ಮದುವೆಯಾದ ಬಳಿಕ ಚಿತ್ರದಲ್ಲಿ ಆ್ಯಕ್ಟ್ ಮಾಡ್ತೀರಾ: ಅಮೂಲ್ಯ ಉತ್ತರ ಇದು

    ಇದನ್ನೂ ಓದಿ: ನಟಿ ಅಮೂಲ್ಯ, ಜಗದೀಶ್ ಪ್ರಪೋಸಲ್ ಹೇಗಾಯ್ತು: ನಟ ಗಣೇಶ್ ದಂಪತಿ ಹೇಳ್ತಾರೆ

  • ಸೆಲ್ಫಿ ಅಪ್ಲೋಡ್ ಮಾಡಿ ಗಣೇಶ್ ದಂಪತಿಗೆ ಥ್ಯಾಂಕ್ಸ್ ಎಂದ ಅಮೂಲ್ಯ

    ಸೆಲ್ಫಿ ಅಪ್ಲೋಡ್ ಮಾಡಿ ಗಣೇಶ್ ದಂಪತಿಗೆ ಥ್ಯಾಂಕ್ಸ್ ಎಂದ ಅಮೂಲ್ಯ

    ಬೆಂಗಳೂರು: ನಟಿ ಅಮೂಲ್ಯ, ಜಗದೀಶ್ ಅವರ ನಿಶ್ಚಿತಾರ್ಥ ಸಮಾರಂಭ ಮಾರ್ಚ್ 6 ರಂದು ನಡೆಯಲಿರುವುದು ನಿಮಗೆ ಗೊತ್ತೇ ಇದೆ. ಈ ಮದುವೆಗೆ ಕಾರಣರಾದ ಶಿಲ್ಪಾ ಗಣೇಶ್ ದಂಪತಿಗೆ ಅಮೂಲ್ಯ ಈಗ ಧನ್ಯವಾದ ಹೇಳಿದ್ದಾರೆ.

    ಅಮೂಲ್ಯ ಅವರು ಬಾವಿ ಪತಿ ಜೊತೆಗಿರುವ ಸೆಲ್ಫಿಯನ್ನು ಇದೇ ಮೊದಲ ಬಾರಿಗೆ ಟ್ವಿಟ್ಟರ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಫೋಟೋದ ಜೊತೆ ಜಗದೀಶ್ ಅವರನ್ನು ಪರಿಚಯಿಸಿದ್ದಕ್ಕೆ ಗಣೇಶ ದಂಪತಿಗೆ ಧನ್ಯವಾದ ಹೇಳಿ ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: ನಟಿ ಅಮೂಲ್ಯ, ಜಗದೀಶ್ ಪ್ರಪೋಸಲ್ ಹೇಗಾಯ್ತು: ನಟ ಗಣೇಶ್ ದಂಪತಿ ಹೇಳ್ತಾರೆ

    ನನ್ನ ಜೀವನದಲ್ಲಿ ಬೆನ್ನೆಲುಬಾಗಿ ನಿಂತಿರುವ ನೀವಿಬ್ಬರೂ ನನಗೆ ಸಿಕ್ಕಿರುವುದು ನನ್ನ ಪುಣ್ಯ ಎಂದು ಅಮುಲ್ಯ ಶಿಲ್ಪಾ ದಂಪತಿಯನ್ನು ಹೊಗಳಿ ಮತ್ತೊಂದು ಗ್ರೂಪ್ ಫೋಟೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

    ಗುರುವಾರ ಇವರಿಬ್ಬರ ಮದುವೆ ವಿಚಾರವಾಗಿ ಮಾತುಕತೆ ನಡೆದಿತ್ತು. ಮಾರ್ಚ್ 6ಕ್ಕೆ ಅಮೂಲ್ಯ ಜಗದೀಶ್ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಲಿದ್ದು, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಈ ಜೋಡಿ ಸಪ್ತಪದಿ ತುಳಿಯಲಿದೆ.

    ಇದನ್ನೂ ಓದಿ: ಮದುವೆಯಾದ ಬಳಿಕ ಚಿತ್ರದಲ್ಲಿ ಆ್ಯಕ್ಟ್ ಮಾಡ್ತೀರಾ: ಅಮೂಲ್ಯ ಉತ್ತರ ಇದು

  • ಮದುವೆಯಾದ ಬಳಿಕ ಚಿತ್ರದಲ್ಲಿ ಆ್ಯಕ್ಟ್ ಮಾಡ್ತೀರಾ: ಅಮೂಲ್ಯ ಉತ್ತರ ಇದು

    ಮದುವೆಯಾದ ಬಳಿಕ ಚಿತ್ರದಲ್ಲಿ ಆ್ಯಕ್ಟ್ ಮಾಡ್ತೀರಾ: ಅಮೂಲ್ಯ ಉತ್ತರ ಇದು

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಬಹುಬೇಡಿಕೆಯ ನಟಿ ಅಮೂಲ್ಯ ಬೆಂಗಳೂರಿನ ಮಾಜಿ ಪಾಲಿಕೆ ಸದಸ್ಯ ರಾಮಚಂದ್ರೇಗೌಡರ ಮಗ ಜಗದೀಶ್ ಜೊತೆ ಮಾರ್ಚ್ 6 ರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.

    ಈ ಹಿನ್ನೆಲೆಯಲ್ಲಿ ಮಾಧ್ಯಮ ಮಂದಿ ಅಮೂಲ್ಯರನ್ನು ಮಾತನಾಡಿಸಿದಾಗ ಎರಡು ವರ್ಷದಿಂದ ಜಗದೀಶ್ ಅವರು ನನಗೆ ನಟ ಗಣೇಶ್ ಪತ್ನಿ ಶಿಲ್ಪಾರಿಂದಾಗಿ ಪರಿಚಯ ಆಗಿದ್ರು. ತದ ನಂತ್ರ ಅವರನ್ನು ನಾನು ಕಾರ್ಯಕ್ರಮದಲ್ಲಿ ನೋಡಿದ್ದೆ ಅಂತಾ ಹೇಳಿದರು.

    ಇದು ಅರೆಂಜ್ ಮ್ಯಾರೇಜ್ ಆಗಿದ್ದು, ಈಗಾಗಲೇ ಮೊದಲ ಶಾಸ್ತ್ರ ಮುಗಿಸಿದ್ದೇವೆ. ಮದುವೆ ಶೀಘ್ರವೇ ನಡೆಯಲಿದೆ. ಮದುವೆ ಬಳಿಕ ಚಿತ್ರಗಳಲ್ಲಿ ನಟಿಸುವ ಬಗ್ಗೆ ಇನ್ನೂ ಚಿಂತಿಸಿಲ್ಲ ಅಂದ್ರು. ಶಿಲ್ಪಾ ಮೇಡಂ ನನಗೆ ಜಗದೀಶ್ ಬಗ್ಗೆ ಹೇಳಿದ್ದಾರೆ. ಒಟ್ಟಿನಲ್ಲಿ ಜಗದೀಶ್‍ದ್ದು ತುಂಬಾ ಫ್ರೆಂಡ್ಲಿ ನೇಚರ್ ಅಂತಾ ಅಮೂಲ್ಯ ತನ್ನ ಭಾವಿ ಪತಿ ಬಗ್ಗೆ ಹೇಳಿದ್ರು.

    ಮದ್ವೆ ಅಂದಮೇಲೆ ಎಲ್ರಿಗೂ ನಂಗೆ ಇಂತಹ ಹುಡ್ಗಿ ಬೇಕು ಅನ್ನೋ ಕನಸುಗಳಿರುತ್ತವೆ. ಮೊದಲ ಬಾರಿಗೆ ಮೂವಿ ಕಾರ್ಯಕ್ರಮವೊಂದರಲ್ಲಿ ಅಮೂಲ್ಯರನ್ನ ಭೇಟಿ ಮಾಡಿದ್ದೇನೆ. ಆ ಬಳಿಕ ಎರಡು ಬಾರಿ ಅವರನ್ನ ಭೇಟಿ ಮಾಡಿದ್ದೇನೆ. ಆದ್ರೆ ಈ ಮೂರು ಬಾರಿ ಭೇಟಿಯಾದಗ್ಲೂ ನಾನು ಅವರನ್ನ ಮದುವೆ ಆಗುತ್ತೇನೆ ಅಂತಾ ಕಲ್ಪನೆ ಮಾಡಿಕೊಂಡಿರಲಿಲ್ಲ. ಆದ್ರೆ ಅವರ ಬಗ್ಗೆ ಚೆನ್ನಾಗಿ ಗೊತ್ತಿದೆ. ಪ್ರಪೋಸಲ್ ಹೇಳಿದಾಗ ಇಬ್ರ ಜಾತಕ ನೋಡೋಣ ಅಂತಾ ತೀರ್ಮಾನಿಸಿದ್ದೆ. ಅಂತೆಯೇ ನಮ್ಮಿಬ್ಬರ ಜಾತಕ ಕೂಡಿ ಬಂದಿದ್ದು, ಇಂದು ಮೊದಲ ಶಾಸ್ತ್ರ ಮುಗಿಸಿದ್ದೇವೆ. ಇದು ಗಣೇಶ್ ಮತ್ತು ಶಿಲ್ಪಾ ಮೇಡಮ್ ಅವರಿಂದಾಗಿ ನಾವಿಬ್ಬರೂ ಮದುವೆ ಆಗಲು ಸಾಧ್ಯವಾಯಿತು ಅಂತಾ ಹೇಳಿದ್ರು.

    ಒಟ್ಟಿನಲ್ಲಿ ಲಂಡನ್‍ನಲ್ಲಿ ಉನ್ನತ ವ್ಯಾಸಂಗ ಮಾಡಿಕೊಂಡು ಬೆಂಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ಜಗದೀಶ್ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಸಪ್ತಪದಿ ತುಳಿಯಲಿದ್ದಾರೆ.

  • ನಟಿ ಅಮೂಲ್ಯ, ಜಗದೀಶ್ ಪ್ರಪೋಸಲ್ ಹೇಗಾಯ್ತು: ನಟ ಗಣೇಶ್ ದಂಪತಿ ಹೇಳ್ತಾರೆ

    ನಟಿ ಅಮೂಲ್ಯ, ಜಗದೀಶ್ ಪ್ರಪೋಸಲ್ ಹೇಗಾಯ್ತು: ನಟ ಗಣೇಶ್ ದಂಪತಿ ಹೇಳ್ತಾರೆ

    ಬೆಂಗಳೂರು: ಮನೆಯವರ ಒಪ್ಪಿಗೆಯಂತೆ ಗುರುವಾರ ಅಮೂಲ್ಯ-ಜಗದೀಶ್ ಮೊದಲನೇ ಶಾಸ್ತ್ರ ಮುಗಿಸಿದ್ದಾರೆ. ತುಂಬಾ ಸಂತೋಷವಾಗ್ತಿದೆ. ಜಗದೀಶ್ ಬಗ್ಗೆ ಹೆಚ್ಚಿಗೆ ಯಾರಿಗೂ ತಿಳಿದಿಲ್ಲ. ಆದ್ರೆ ನನಗೆ ಅವರ ಬಗ್ಗೆ ಚೆನ್ನಾಗಿ ತಿಳಿದಿದೆ. ಅವರ ಇಡೀ ಕುಟುಂಬ ನನ್ನ ಕುಟುಂಬ ಇದ್ದಂತೆ. ಬಹಳ ಒಳ್ಳೆಯ ಕುಟುಂಬವಾಗಿದೆ. ಮಾತ್ರವಲ್ಲದೇ ಜಗದೀಶ್ ಕೂಡ ಒಳ್ಳೆಯ ಹುಡುಗ. ಹೀಗಾಗಿ ನಮ್ಮ ಅಮೂಲ್ಯ ಕೂಡ ಒಳ್ಳೆಯ ಹುಡುಗಿ ಅಂತಾ ತಿಳಿದಿರುವ ವಿಷಯ. ಹೀಗಾಗಿ ಇವರಿಬ್ಬರು ಬಾಳಲ್ಲಿ ಒಂದಾಂದ್ರೆ ಮುಂದೆ ಚೆನ್ನಾಗಿರಬಹುದೆಂದು ನಮ್ಮ ನಂಬಿಕೆ. ಒಟ್ಟಿನಲ್ಲಿ ಇದೀಗ ಮೊದಲನೇ ಶಾಸ್ತ್ರ ಮುಗಿಸಿದ್ದೀವಿ. ಮಾರ್ಚ್ 6ರಂದು ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ. ಎಲ್ಲವೂ ಚೆನ್ನಾಗಿ ನಡೆಯಲಿ ಅಂತಾ ನಟ ಗಣೇಶ್ ಆಶಿಸಿದ್ರು.

    ಪ್ರಪೋಸಲ್ ಹೇಗೆ ಬಂತು?: ಜಗದೀಶ್ ಗೆ ಮನೆಯಲ್ಲಿ ಹುಡುಗಿ ಹುಡುತ್ತಾ ಇದ್ರು. ಇತ್ತ ನಮ್ಮಿಬ್ರಿಗೂ ಬಹಳ ಬೇಕಾದವ್ರು ಒಬ್ಬರು ಇದ್ರು. ಅವರ ಕೈಯಲ್ಲಿ ಈ ಪ್ರಪೋಸಲನ್ನು ನಾವು ಕರೆಸಿದ್ವಿ. ಆಮೇಲೆ ಜಾತಕ ಕೂಡಿ ಬರುತ್ತಾ ಅಂತಾ ಚೆಕ್ ಮಾಡಿದ್ವಿ. ಆ ಸಂದರ್ಭದಲ್ಲಿ ಇಬ್ಬರ ಜಾತಕವೂ ಕೂಡಿ ಬಂತು ಅಂತಾ ಗಣೇಶ್ ಹೇಳಿದ್ರು.

    ಸಾಮಾನ್ಯವಾಗಿ ಒಕ್ಕಲಿಗರ ಮದುವೆ ಕಾರ್ಯಕ್ರಮದಲ್ಲಿ ಹುಡುಗಿ ನೋಡಿ ಓಕೆ ಆದ ಬಳಿಕ ಎರಡೂ ಕಡೆಯವರು ಒಬ್ಬರನೊಬ್ಬರ ಮನೆಗೆ ಹೋಗಿ ಮಾತುಕತೆ ನಡೆಲಿದೆ. ಅಂತೆಯೇ ಇಲ್ಲಿ ಕೂಡ ಅದೇ ಸಂಪ್ರದಾಯವನ್ನು ಮಾಡಿದ್ದೇವೆ ಅಂತಾ ಹೇಳಿದ್ರು.

    ಅಮೂಲ್ಯ ಸಾಕಷ್ಟು ಸಿನಿಮಾಗಳನ್ನು ನಿಮ್ಮ ಜೊತೆ ಮಾಡಿದ್ದಾರೆ. ಆದ್ರೆ ಇದೂವರೆಗೆ ಯಾವ ಹಿರೋ, ಹೀರೋಯಿನ್ ಮದುವೆಗೆ ಸಹಾಯ ಮಾಡಿಲ್ಲ ಅಲ್ಲವೇ ಎಂದು ಕೇಳಿದ್ದಕ್ಕೆ, ನಮ್ಮದೇ ಹುಡ್ಗಿ. ಜಗದೀಶ್ ಕೂಡ ನಮ್ಮ ಮನೆಯವರಂತೆ ಇದ್ದಾರೆ. ಆದುದರಿಂದ ಇನ್ನು ಮುಂದೆ ಅಮೂಲ್ಯನೂ ನಮ್ಮ ಮನೆಯಲ್ಲೇ ಇರ್ತಾರೆ ಅನ್ನೋ ಖುಷಿಯಿದೆ ಅಂತಾ ಹೇಳಿದ್ರು.

    ಇಷ್ಟೊಂದು ಗೌಪ್ಯವಾಗಿಟ್ಟು, ಶಾಕಿಂಗ್ ಕೊಡುವ ಪ್ಲಾನ್ ನಿಮ್ಮದಾಗಿತ್ತಾ ಅಂತ ಕೇಳಿದ್ದಿಕೆ, ಹೌದು ಯಾಕಂದ್ರೆ ನಾನು ಕೂಡ ಅಭಿಮಾನಿಗಳಿಗೆ ಶಾಕ್ ಕೊಟ್ಟೆ ಮದುವೆ ಆಗಿದ್ದೆ. ಹಾಗಾಗಿ ನನ್ನ ಜೊತೆ ಇರುವವರೂ ಅಭಿಮಾನಿಗಳಿಗೆ ಶಾಕಿಂಗ್ ಆಗಿ ಸುದ್ದಿ ನೀಡಬೇಕು ಅಂತಾ ನಕ್ಕುಬಿಟ್ಟರು.

    ಯಾವತ್ತು ಅಷ್ಟೇ ಯಾವುದೇ ಕೆಲಸವಾಗಲಿ ಮುಗಿದ ಬಳಿಕ ಹೇಳೋದೆ ಒಳ್ಳೆಯದು. ಅದ್ರಲ್ಲೂ ಮದುವೆ ಮುಂತಾದ ವಿಚಾರಗಳನ್ನು ಹುಡುಗ-ಹುಡುಗಿ ಒಪ್ಪಿಕೊಂಡ ಮೇಲೆ ಬಹಿರಂಗಪಡಿಸುವುದು ಒಳ್ಳೆಯದು ಅಂತಾ ನನ್ನ ಅನಿಸಿಕೆ ಗಣೇಶ್ ಹೇಳಿದರು.

    ಒಟ್ಟಿನಲ್ಲಿ ಜಗದೀಶ್ ಖುಷಿಯಿಂದ ಓಡಾಡ್ತಾ ಇದ್ದ, ಇತ್ತ ಅಮೂಲ್ಯ ಮನೆಯಲ್ಲಿ ಸುಮ್ನೆ ಕುಳಿತಿದ್ದಳು. ಅದಕ್ಕೆ ಇಬ್ರಿಗೂ ಜವಾಬ್ದಾರಿ ಕೊಡಿಸೋಣ ಎಂದು ಮದುವೆ ಮಾಡಲು ಮುಂದಾದ್ವಿ ಅಂತಾ ನಟ ಗಣೇಶ್ ಮತ್ತು ಪತ್ನಿ ಶಿಲ್ಪಾ ಕಿಚಾಯಿದ್ರು.

     

  • ಸ್ಯಾಂಡಲ್‍ವುಡ್ `ಚಿತ್ತಾರ’ದ ಬೆಡಗಿಗೆ ಮ್ಯಾರೇಜ್ ಫಿಕ್ಸ್

    ಸ್ಯಾಂಡಲ್‍ವುಡ್ `ಚಿತ್ತಾರ’ದ ಬೆಡಗಿಗೆ ಮ್ಯಾರೇಜ್ ಫಿಕ್ಸ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಚಿತ್ತಾರ ಹುಡುಗಿ ಅಮೂಲ್ಯ ಸದ್ದಿಲ್ಲದೇ ಸದ್ಯದಲ್ಲಿಯೇ ಸಪ್ತಪದಿ ತುಳಿಯಲು ಸಜ್ಜಾಗುತ್ತಿದ್ದಾರೆ. ಬೆಂಗಳೂರಿನ ಮಾಜಿ ಪಾಲಿಕೆ ಸದಸ್ಯ ರಾಮಚಂದ್ರೇಗೌಡರ ಮಗನಾಗಿರುವ ಜಗದೀಶ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.

    ಲಂಡನ್‍ನಲ್ಲಿ ಉನ್ನತ ವ್ಯಾಸಂಗ ಮಾಡಿಕೊಂಡು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ಜಗದೀಶ್ ಗೋಲ್ಡನ್ ಸ್ಟಾರ್ ಗಣೇಶ್ ಶಿಲ್ಪಾ ದಂಪತಿಗೆ ಪರಿಚಿತರು. ನಟ ಗಣೇಶ್ ಮನೆಗೆ ಆಗಾಗ ಪಾರ್ಟಿಗೆ ಹೋಗುತ್ತಿದ್ದಾಗ ಅಮೂಲ್ಯರ ಪರಿಚಯ ಜಗದೀಶ್ ಅವರಿಗೆ ಆಗಿದೆ. ಈ ಪರಿಚಯ ಪ್ರೇಮವಾಗಿ ಈಗ ಮದುವೆಯ ತನಕ ಬಂದು ನಿಂತಿದೆ.

    ಅಮೂಲ್ಯ ಹಾಗೂ ಜಗದೀಶ್ ಕುಟುಂಬದ ಸಮ್ಮತಿಯ ಮೇರೆಗೆ ಮಾರ್ಚ್ 6ಕ್ಕೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಈ ನವ ಜೋಡಿ ಸಪ್ತಪದಿ ತುಳಿಯಲಿದೆ.

    ಮದುವೆಯ ನಂತರ ಚಿತ್ರರಂಗದಲ್ಲಿ ಮುಂದುವರೆಯಲ್ಲಿದ್ದಾರಾ ಎನ್ನುವ ಪ್ರಶ್ನೆಗೆ ಅಮೂಲ್ಯ ಕಡೆಯಿಂದ ಉತ್ತರ ಸಿಗಬೇಕಿದೆ.