Tag: amulya

  • ಅಮೂಲ್ಯ ಸ್ನೇಹಿತರ ವಿಚಾರಣೆ – ಹುಟ್ಟೂರಿಗೆ ಭೇಟಿ ನೀಡಲಿದೆ ಎಸ್‍ಐಟಿ

    ಅಮೂಲ್ಯ ಸ್ನೇಹಿತರ ವಿಚಾರಣೆ – ಹುಟ್ಟೂರಿಗೆ ಭೇಟಿ ನೀಡಲಿದೆ ಎಸ್‍ಐಟಿ

    – ಅಮೂಲ್ಯಗೆ ನಕ್ಸಲ್ ನಂಟು ಶಂಕೆ
    – ಭಾಷಣದ ಹಿಂದೆ ಹಲವು ಜನರ ಶ್ರಮವಿದೆ ಎಂದಿದ್ದ ದೇಶದ್ರೋಹಿ

    ಬೆಂಗಳೂರು: ಪಾಕಿಸ್ತಾನ ಪರ ಘೋಷಣೆ ಕೂಗಿ ಜೈಲು ಪಾಲಾಗಿರುವ ಅಮೂಲ್ಯಾ ಲಿಯೋನಾ ಹುಟ್ಟುರಿಗೆ ವಿಶೇಷ ತನಿಖಾ ತಂಡ(ಎಸ್‍ಐಟಿ) ತೆರಳಲು ಸಿದ್ಧತೆ ನಡೆಸಿದೆ.

    ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ಚಿಕ್ಕಪೇಟೆ ಎಸಿಪಿ ಮಾಂತಾ ರೆಡ್ಡಿ, ಉಪ್ಪಾರಪೇಟೆ ಇನ್ಸ್ ಪೆಕ್ಟರ್ ಸುರೇಶ್ ಹಾಗೂ ಮಾರುಕಟ್ಟೆ ಠಾಣೆಯ ಇನ್ಸ್ ಪೆಕ್ಟರ್ ಸತೀಶ್ ನೇತೃತ್ವದ ತಂಡದಿಂದ ಪ್ರಕರಣದ ತನಿಖೆ ಮಾಡಲಾಗುತ್ತಿದೆ. ಸದ್ಯ ಆರೋಪಿ ಅಮೂಲ್ಯಳ ನಿಕಟ ಸಂಪರ್ಕದಲ್ಲಿರುವ ಸ್ನೇಹಿತರ ವಿಚಾರಣೆ ಮಾಡಲಾಗುತ್ತಿದೆ. ಸ್ನೇಹಿತರ ವಿಚಾರಣೆ ಮಾಹಿತಿ ಕಲೆ ಹಾಕಿದ ಮೇಲೆ ಆರೋಪಿ ಅಮೂಲ್ಯಾಳ ಹುಟ್ಟೂರಿಗೆ ತೆರಳಲು ಸಜ್ಜಾಗಿದೆ.

    ಆರೋಪಿ ಅಮೂಲ್ಯಾಳಿಗೆ ನಕ್ಸಲ್ ನಂಟಿರುವ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿರುವುದರಿಂದ ತನಿಖಾ ತಂಡ ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಿದೆ. ಆರೋಪಿ ಅಮೂಲ್ಯಾಳ ಹುಟ್ಟೂರು ಚಿಕ್ಕಮಗಳೂರಿನ ಕೊಪ್ಪಕ್ಕೆ ಭೇಟಿ ನೀಡಿ ತಂದೆ ತಾಯಿಯರನ್ನು ತನಿಖಾ ತಂಡ ವಿಚಾರಣೆ ಮಾಡಲಿದೆ.

    ಆರೋಪಿ ಬಂಧನವಾದ ಬಳಿಕ ಪೊಲೀಸರ ಮುಂದೆ ಹಲವು ವಿಚಾರಗಳ ಕುರಿತು ಮಾಹಿತಿ ನೀಡಿದ್ದು, ಸಿಎಎ ವಿರುದ್ಧ ಕಾರ್ಯಕ್ರಮದಲ್ಲಿ ಮಾತನಾಡಲು ಹೇಳಿಕೊಡಲು ಗಾಡ್ ಫಾದರ್ ಗಳು ಇದ್ದಾರೆ ಎಂದು ಹೇಳಿಕೊಂಡಿದ್ದಾಳೆ. ಆರೋಪಿಯ ಹಿಂದೆ ಕೆಲಸ ಮಾಡುತ್ತಿರುವವರು ಯಾರು ಎನ್ನುವುದನ್ನು ತಿಳಿದುಕೊಳ್ಳಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

    ವಿಡಿಯೋದಲ್ಲಿ ಮಾತನಾಡಿದ್ದ ಅಮೂಲ್ಯ, ನನ್ನ ಭಾಷಣದ ಹಿಂದೆ ಹಲವು ಮಂದಿ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ನನ್ನ ಬೆನ್ನ ಹಿಂದಿದ್ದಾರೆ. ಅವರೆಲ್ಲ ನಿಜವಾದ ಹೀರೋಗಳು. ಅವರ ಪ್ರತಿನಿಧಿಯಾಗಿ ನಾನು ಮಾತನಾಡುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದಳು.

    ಆರೋಪಿ ಅಮೂಲ್ಯ ಬಂಧನವಾದ ಬಳಿಕ ಅವರ ತಂದೆ ಪ್ರತಿಕ್ರಿಯಿಸಿ, ನನ್ನ ಮಗಳು ಕೆಲ ಮುಸ್ಲಿಮರೊಂದಿಗೆ ನಂಟು ಹೊಂದಿದ್ದಳು ಎಂದು ಹೇಳಿಕೆ ನೀಡಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ತನಿಖಾ ತಂಡ, ಕೊಪ್ಪಕ್ಕೆ ಹೋಗಿ ತಂದೆ ತಾಯಿಯನ್ನು ವಿಚಾರಣೆ ನಡೆಸಿ, ಕೆಲ ವಿಚಾರಗಳ ಬಗ್ಗೆ ಸ್ಪಷ್ಟನೆ ಪಡೆದುಕೊಳ್ಳಲಿದ್ದಾರೆ ಏನ್ನಲಾಗಿದೆ.

    ನಡೆದಿದ್ದೇನು?
    ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸಿ ಗುರುವಾರ ನಗರದ ಪ್ರೀಡಂ ಪಾರ್ಕಿನಲ್ಲಿ ಆಸಾದುದ್ದೀನ್ ಓವೈಸಿ ಭಾಗವಹಿಸಿದ್ದ ಪ್ರತಿಭಟನಾ ಕಾರ್ಯಕ್ರಮದ ವೇದಿಕೆಯಲ್ಲೇ ಅಮೂಲ್ಯ ಲಿಯೋನಾ, ‘ಪಾಕಿಸ್ತಾನ ಜಿಂದಾಬಾದ್’ ಎಂದು ಜೈಕಾರ ಕೂಗಿದ್ದಳು. ಅಮೂಲ್ಯ ಈ ರೀತಿ ಘೋಷಣೆ ಕೂಗುತ್ತಿದ್ದಂತೆ ಓವೈಸಿ ಗೊಂದಲಗೊಂಡಿದ್ದು, ಆಕೆಯನ್ನು ಮಾತನಾಡದಂತೆ ತಡೆಯಲು ಪ್ರಯತ್ನಿಸಿದರು. ಕೂಡಲೇ ತಕ್ಷಣ ಸಂಘಟಕರು ಮೈಕ್ ಕಿತ್ತುಕೊಂಡು ಅಮೂಲ್ಯಳನ್ನು ತಡೆದಿದ್ದರು. ಕೋರ್ಟ್ ಈಕೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ಪರಪ್ಪನ ಅಗ್ರಹಾರ ಸೇರಿದ್ದಾಳೆ.

  • ಸಿಎಎ, ಎನ್​ಆರ್​ಸಿ, 370 ರದ್ದು ಪ್ರತಿಭಟನೆಯಿಂದ ಪ್ರಚೋದನೆಗೆ ಒಳಗಾಗಿದ್ದೆ – ಆರ್ದ್ರಾ

    ಸಿಎಎ, ಎನ್​ಆರ್​ಸಿ, 370 ರದ್ದು ಪ್ರತಿಭಟನೆಯಿಂದ ಪ್ರಚೋದನೆಗೆ ಒಳಗಾಗಿದ್ದೆ – ಆರ್ದ್ರಾ

    ಬೆಂಗಳೂರು: ಸಿಎಎ, ಎನ್​ಆರ್​ಸಿ ಹಾಗೂ ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿ ರದ್ದು ವಿರೋಧವಾಗಿ ನಡೆಯುತ್ತಿದ್ದ ಪ್ರತಿಭಟನೆಯಿಂದ ನಾನು ಪ್ರಚೋದನೆಗೆ ಒಳಗಾಗಿದ್ದೆ. ಎಲ್ಲೆಲ್ಲಿ ಸಿಎಎ, ಎನ್​ಆರ್​ಸಿ ವಿರುದ್ಧವಾಗಿ ನಡೆಯುವ ಎಲ್ಲಾ ಪ್ರತಿಭಟನೆಯಲ್ಲೂ ನಾನು ಭಾಗಿಯಾಗುತ್ತಿದ್ದೆ ಎಂದು ಆರ್ದ್ರಾ ಅಲಿಯಾಸ್ ಅನ್ನಪೂರ್ಣೇಶ್ವರಿ ಸ್ವಇಚ್ಚಾ ಹೇಳಿಕೆ ನೀಡಿದ್ದಾಳೆ.

    ಎಸ್‍ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಹಲವು ವಿಚಾರಗಳನ್ನು ತಿಳಿಸಿರುವ ಈಕೆ, ಎಲ್ಲೆಲ್ಲಿ ಕಾರ್ಯಕ್ರಮಗಳು ನಿಗದಿಯಾಗುತ್ತಿತ್ತೋ ಆ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿ ಕಾರ್ಯಕ್ರಮಗಳಿಗೆ ತಾನೇ ಮುಂದಾಗಿ ಹೋಗುತ್ತಿದ್ದೆ ಎಂದಿದ್ದಾಳೆ.

     

    ಗುರುವಾರ ಸಂಜೆ ಫ್ರೀಡಂ ಪಾರ್ಕಿನಲ್ಲಿ ಅಮೂಲ್ಯ ಭಾಗಿಯಾಗಿದ್ದ ಕಾರ್ಯಕ್ರಮಕ್ಕೆ ತೆರಳಿದ್ದೆ. ಈ ವೇಳೆ ಅಮೂಲ್ಯಳ ‘ಪಾಕಿಸ್ತಾನ್ ಜಿಂದಾಬಾದ್’ ಹೇಳಿಕೆಗೆ ಪೊಲೀಸರು ಆಕೆಯನ್ನು ಬಂಧಿಸಿ ಜೈಲಿಗಟ್ಟಿದ್ದರು. ಶುಕ್ರವಾರ ಅಮೂಲ್ಯ ವಿರುದ್ಧವಾಗಿ ಹಿಂದೂಪರ ಸಂಘಟನೆಗಳು ಇಂದು ಟೌನ್ ಹಾಲ್ ಬಳಿ ಸೇರಿ ಪ್ರತಿಭಟನೆ ನಡೆಸಲಿದ್ದಾರೆ ಎನ್ನುವ ವಿಚಾರ ತಿಳಿಯಿತು. ಹೀಗಾಗಿ ಗುರುವಾರವೇ ನಾನು ಮುಸಲ್ಮಾನ್ ಹಾಗೂ ದಲಿತರನ್ನ ಮುಕ್ತಗೊಳಿಸಿ, ಫ್ರೀ ಕಾಶ್ಮೀರ್ ಎಂಬ ಇಂಗ್ಲೀಷ್ ಹಾಗೂ ಕನ್ನಡದ ಬರಹಗಳಿರುವ ಸಂದೇಶಗಳನ್ನ ಬರೆದು ಇಟ್ಟುಕೊಂಡಿದ್ದೆ ಎಂದು ಹೇಳಿಕೆ ನೀಡಿದ್ದಾಳೆ.

    ಪಿಜಿ ಬಳಿಯಿದ್ದ ಅಂಗಡಿಯಿಂದ ಪೇಂಟ್ ತಗೆದುಕೊಂಡು ಬಂದು ಖಾಕಿ ಬಾಕ್ಸ್ ಗೆ ಮುಸಲ್ಮಾನ್, ಕಾಶ್ಮೀರ, ದಲಿತ್, ಟ್ರಾನ್ಸ್, ಆದಿವಾಸಿ ಮುಕ್ತಿ ಎಂದು ಬರೆದಿದ್ದೆ ಎಂಬುದಾಗಿ ತಿಳಿಸಿದ್ದಾಳೆ.

    ಸ್ನೇಹಿತರು ಹೇಳೋದು ಏನು?
    ಪಿಜಿಯಲ್ಲಿ ತೀರ್ಮಾನ ಮಾಡಿಕೊಂಡು ಬೆಳಗ್ಗೆ ಪ್ಲಕಾರ್ಡ್ ತಯಾರು ಮಾಡಿಕೊಂಡು ಬಂದಿದ್ದಳು. ಆಕೆಯ ಹೋರಾಟ ಮತ್ತು ಹೇಳಿಕೆ ಬಗ್ಗೆ ಗೊತ್ತಿಲ್ಲ. ಆಕೆಯ ಹೇಳಿಕೆಗೂ ನಮಗು ಯಾವುದೇ ಸಂಬಂಧ ಇಲ್ಲ. ನಾವು ಸ್ನೇಹಿತರಾದ ಕಾರಣ ಬಂದಿದ್ದೇವೆ ಅಷ್ಟೇ. ನಾವು ಯಾವ ಹೋರಾಟದಲ್ಲೂ ಭಾಗಿಯಾಗಿಲ್ಲ. ಯಾವ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ಅಮೂಲ್ಯ ಮತ್ತು ಆರ್ದ್ರಾ ಸ್ನೇಹಿತರಾದ ಪರನ್ ಅಮಿತವ್, ನಾಜಿಬುಲ್ಲ ತಿಳಿಸಿದ್ದಾರೆ.

  • ದೇಶದ್ರೋಹಿ ಅಮೂಲ್ಯ ಲಿಯೋನಾ ವಿರುದ್ಧ ಯೋಧ ಆಕ್ರೋಶ

    ದೇಶದ್ರೋಹಿ ಅಮೂಲ್ಯ ಲಿಯೋನಾ ವಿರುದ್ಧ ಯೋಧ ಆಕ್ರೋಶ

    ಯಾದಗಿರಿ: ದೇಶದ್ರೋಹಿ ಅಮೂಲ್ಯ ಲಿಯೋನಾ ವಿರುದ್ಧ ಯೋಧರೊಬ್ಬರು ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

    ಸದ್ಯ ನಾಗಲ್ಯಾಂಡ್ ಗಡಿಯಲ್ಲಿ ದೇಶ ಸೇವೆ ಮಾಡುತ್ತಿರುವ, ಸಿಆರ್‌ಪಿಎಫ್‌ ಯೋಧ ದೇವೆಂದ್ರಪ್ಪ ಅವರು ಅಮೂಲ್ಯ ಲಿಯೋನಾ ವಿರುದ್ಧ ಹೋರಾಟ ಮಾಡುವಂತೆ ದೇಶದ ಜನರಿಗೆ ಕರೆ ಕೊಟ್ಟಿದ್ದಾರೆ. ಮೂಲತಃ ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಸಗರ ಗ್ರಾಮದ ಯೋಧ ದೇವೆಂದ್ರಪ್ಪ 8 ವರ್ಷದಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ದೇಶದ್ರೋಹ ಘೋಷಣೆ ಪ್ರಕರಣ- ಪರಪ್ಪನ ಅಗ್ರಹಾರಕ್ಕೆ ಅಮೂಲ್ಯ ಶಿಫ್ಟ್

    ತಮ್ಮ ಕಾರ್ಯಸ್ಥಾನದಿಂದ ವಿಡಿಯೋ ಮಾಡಿ ತಮ್ಮ ಆಕ್ರೋಶ ಹಂಚಿಕೊಂಡಿರುವ ದೇವೆಂದ್ರಪ್ಪ, ನಾವು ಗಡಿಯಲ್ಲಿ ನಿಂತು ಭಾರತಾಂಬೆಯ ಸೇವೆ ಮಾಡುತ್ತೇವೆ. ಆದರೆ ದೇಶದ ಒಳಗಡೆ ಅಮೂಲ್ಯನಂತಹ ವಿಕೃತ ಮನಸ್ಸಿನವರು ಇದ್ದಾರೆ. ನಮ್ಮ ದೇಶದಲ್ಲಿ ಬ್ರಿಟಿಷರು 200 ವರ್ಷ ಆಳ್ವಿಕೆ ನಡೆಸಲು ಅಮೂಲ್ಯನಂತ ವಿಕೃತ ಮನಸ್ಸಿನವರು ಕಾರಣ ಎಂದರು. ಇದನ್ನೂ ಓದಿ: ಮಗಳು ಮಾಡಿದ್ದು ತಪ್ಪು, ಅವಳ ಕೈ-ಕಾಲು ಮುರಿಯಲಿ: ಅಮೂಲ್ಯ ತಂದೆ

    ಅಲ್ಲದೆ ಮೀರ್ ಜಾಫರ್ ನಂತಹ ಮನಸ್ಥಿತಿವುಳ್ಳ ಅಮೂಲ್ಯ ಅಂತವರು ಸ್ವಪ್ರತಿಷ್ಠೆಗೋಸ್ಕರ ಪಾಕಿಸ್ತಾನದ ಪರ ಘೋಷಣೆ ಕೂಗುತ್ತಾರೆ. ಇಂಥವರನ್ನು ದೇಶದಲ್ಲಿ, ಸಮಾಜದಲ್ಲಿ ಬೆಳೆಯಲು ಬಿಡಬಾರದು. ಎಲ್ಲಿಯವರೆಗೂ ಸಮಾಜ ಬಲಿಷ್ಠವಾಗಿ ಒಗ್ಗಟ್ಟಾಗಿ ಇಂಥವರ ವಿರುದ್ಧ ನಿಲ್ಲುವುದಿಲ್ಲವೋ ಅಲ್ಲಿಯವರೆಗೂ ಇಂಥವರು ಇರುತ್ತಾರೆ. ತಮ್ಮ ಪ್ರಚಾರಕ್ಕಾಗಿ ದೇಶದ ವಿರುದ್ಧ ಇಂತಹ ಹೇಳಿಕೆಯನ್ನು ಕೊಡುತ್ತಿರುತ್ತಾರೆ. ಇಂತವರ ವಿರುದ್ಧ ಜನ ಹೋರಾಟ ನಡೆಸಬೇಕು. ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮುಂದೇನು ಮಾತನಾಡುತ್ತಿದ್ದಳು ಎಂದು ಕಾದು ನೋಡಬೇಕಿತ್ತು: ಅಮೂಲ್ಯ ತಾಯಿ

    ಸಿಎಎ ಹಾಗೂ ಎನ್‍ಸಿಆರ್ ವಿರೋಧಿಸಿ ಗುರುವಾರ ನಗರದ ಪ್ರೀಡಂ ಪಾರ್ಕಿನಲ್ಲಿ ಆಸಾದುದ್ದೀನ್ ಓವೈಸಿ ಭಾಗವಹಿಸಿದ್ದ ಪ್ರತಿಭಟನಾ ಕಾರ್ಯಕ್ರಮದ ವೇದಿಕೆಯಲ್ಲೇ ಅಮೂಲ್ಯ ಪಾಕಿಸ್ತಾನ ಜಿಂದಾಬಾದ್ ಎಂದು ಜೈಕಾರ ಕೂಗಿದ್ದಳು. ಅಮೂಲ್ಯ ಈ ರೀತಿ ಘೋಷಣೆ ಕೂಗುತ್ತಿದ್ದಂತೆ ಓವೈಸಿ ಆಕೆಯನ್ನು ತಡೆದಿದ್ದರು. ಅಮೂಲ್ಯ ಪಾಕಿಸ್ತಾನಕ್ಕೆ ಜೈಕಾರ ಕೂಗುತ್ತಿದ್ದಂತೆ ಓವೈಸಿ ಗೊಂದಲಗೊಂಡರು. ತಕ್ಷಣ ಸಂಘಟಕರು ಮೈಕ್ ಕಿತ್ತುಕೊಂಡು ಅಮೂಲ್ಯ ಅವರನ್ನು ತಡೆದಿದ್ದಾರೆ.

  • ಅಮೂಲ್ಯ ದೇಶದ್ರೋಹಿ ಹೇಳಿಕೆಗೆ ರೊಚ್ಚಿಗೆದ್ದ ಹಿಂದೂಪರ ಸಂಘಟನೆಗಳು – ಮನೆ ಮೇಲೆ ಕಲ್ಲು ತೂರಾಟ

    ಅಮೂಲ್ಯ ದೇಶದ್ರೋಹಿ ಹೇಳಿಕೆಗೆ ರೊಚ್ಚಿಗೆದ್ದ ಹಿಂದೂಪರ ಸಂಘಟನೆಗಳು – ಮನೆ ಮೇಲೆ ಕಲ್ಲು ತೂರಾಟ

    – ಅಮೂಲ್ಯ ತಂದೆ, ಮನೆಗೆ ಪೊಲೀಸ್ ಭದ್ರತೆ

    ಚಿಕ್ಕಮಗಳೂರು: ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದ ಅಮೂಲ್ಯ ಘೋಷಣೆ ಹಿಂದೂಪರ ಸಂಘಟನೆಗಳನ್ನ ಕೆರಳಿಸಿದೆ. ಚಿಕ್ಕಮಗಳೂರಿನ ಕೊಪ್ಪದ ಶಿವಪುರದಲ್ಲಿರುವ ಅಮೂಲ್ಯ ನಿವಾಸಕ್ಕೆ ಹಿಂದೂಪರ ಸಂಘಟನೆಗಳು ಮುತ್ತಿಗೆ ಹಾಕಿ, ಮನೆ ಮೇಲೆ ಕಲ್ಲು, ಇಟ್ಟಿಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಗಳು ಮಾಡಿದ್ದು ತಪ್ಪು, ಅವಳ ಕೈ-ಕಾಲು ಮುರಿಯಲಿ: ಅಮೂಲ್ಯ ತಂದೆ

    ಇತ್ತ ಹಿಂದೂ ಪರ ಸಂಘಟನೆಗಳು ಮನೆ ಮೇಲೆ ಕಲ್ಲು ತೂರಾಟ ಮಾಡುತ್ತಿದ್ದಂತೆ ಪೊಲೀಸರು ಎಚ್ಚೆತ್ತಿದ್ದು, ಅಮೂಲ್ಯ ತಂದೆ ವಾಜಿ ಹಾಗೂ ಮನೆಗೆ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. 25ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತ ಕ್ರಮ ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ದೇಶದ್ರೋಹ ಘೋಷಣೆ ಪ್ರಕರಣ- ಪರಪ್ಪನ ಅಗ್ರಹಾರಕ್ಕೆ ಅಮೂಲ್ಯ ಶಿಫ್ಟ್

    ಅಷ್ಟೇ ಅಲ್ಲದೇ ಅಮೂಲ್ಯ ಹೇಳಿಕೆ ಖಂಡಿಸಿ ಇಂದು ಚಿಕ್ಕಮಗಳೂರಿನ ಜಯಪುರ, ಬಾಳೆಹೊನ್ನೂರಿನಲ್ಲಿ ವಿಶ್ವಹಿಂದೂ ಪರಿಷತ್, ಭಜರಂಗದಳ ಪ್ರತಿಭಟನೆಗೆ ಕರೆ ನೀಡಿದೆ. ಹಾಗೆಯೇ ಈಕೆ ವಿರುದ್ಧ ಸಚಿವ ಸಿ.ಟಿ ರವಿ ಅವರು ಕೂಡ ಆಕ್ರೋಶ ಹೊರಹಾಕಿ ಅವಳು ಯಾವ ಸಂಘಟನೆಗೆ ಸೇರಿದವಳು, ಎಲ್ಲಿ ತರಭೇತಿ ಪಡೆದಿದ್ದಾಳೆಂದು ತನಿಖೆಯಾಗಬೇಕೆಂದು ಎಂದು ಆಗ್ರಹಿಸಿದ್ದಾರೆ. ಮಗಳ ದೇಶದ್ರೋಹಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅಮೂಲ್ಯ ತಂದೆ, ಅವಳು ಮಾಡಿದ್ದು ತಪ್ಪು, ಆಕೆಯ ಕೈಕಾಲು ಮುರೀರಿ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಮುಂದೇನು ಮಾತನಾಡುತ್ತಿದ್ದಳು ಎಂದು ಕಾದು ನೋಡಬೇಕಿತ್ತು: ಅಮೂಲ್ಯ ತಾಯಿ

    ಬೆಂಗಳೂರು, ಮಂಗಳೂರು, ಬಳ್ಳಾರಿಗಳಲ್ಲಿ ಎವಿವಿಪಿ ಕಾರ್ಯಕರ್ತರು ಅಮೂಲ್ಯ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇಂದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಅತ್ತ ಯಾದಗಿರಿಯ ಯೋಧ ದೇವೇಂದ್ರ ಅವರು ಪ್ರತಿಕ್ರಿಯಿಸಿ, ನಾವು ಗಡಿಯಲ್ಲಿ ನಿಂತು ಭಾರತಾಂಬೆಯ ಸೇವೆ ಮಾಡುತ್ತೇವೆ. ಆದರೆ ದೇಶದ ಒಳಗಡೆ ಅಮೂಲ್ಯನಂತ ವಿಕೃತ ಮನಸ್ಸಿನವರು ಇದ್ದಾರೆ ಅಂತ ಕಿಡಿಕಾರಿದ್ದಾರೆ.

  • ಒಂದೇ ಹೃದಯದಲ್ಲಿ 40 ಫೋಟೋ ಹಾಕಿ ಬೆಸ್ಟ್ ಮೆಮೊರಿ ಎಂದ ಅಮೂಲ್ಯ

    ಒಂದೇ ಹೃದಯದಲ್ಲಿ 40 ಫೋಟೋ ಹಾಕಿ ಬೆಸ್ಟ್ ಮೆಮೊರಿ ಎಂದ ಅಮೂಲ್ಯ

    ಬೆಂಗಳೂರು: ನಟಿ ಅಮೂಲ್ಯ ಮದುವೆಯಾದ ನಂತರ ಚಿತ್ರರಂಗದಿಂದ ದೂರವಿದ್ದಾರೆ. ಆದರೂ ಸದಾ ಕಾಲ ಟ್ವಿಟ್ಟರ್, ಫೇಸ್‍ಬುಕ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದಾರೆ. ಈಗ ಅವರು ಫೋಟೋ ಟ್ವೀಟ್ ಮಾಡಿದ್ದು, ಆ ಫೋಟೋಗೆ ಅಧಿಕ ಲೈಕ್ಸ್ ಬರುತ್ತಿದೆ.

    ನಟಿ ಅಮೂಲ್ಯ ಅವರು ಜಗದೀಶ್ ಅವರನ್ನು 2017 ರಂದು ಮದುವೆಯಾಗಿದ್ದರು. ಅಂದಿನಿಂದಲೂ ಆಗಾಗ ಪತಿ, ಸ್ನೇಹಿತರ ಜೊತೆ ವಿದೇಶಕ್ಕೆ ಪ್ರಯಾಣ ಬೆಳಸುತ್ತಿರುತ್ತಾರೆ. ಇತ್ತೀಚೆಗಷ್ಟೆ ಅಮೂಲ್ಯ ತಮ್ಮ ಪತಿ ಜೊತೆ ವಿದೇಶಕ್ಕೆ ತೆರಳಿದ್ದರು. ಅಲ್ಲಿನ ಸುಂದರ ಸ್ಥಳಗಳಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು.

    ಈಗ ತಮ್ಮ ಜೀವನದ ಪ್ರತಿಯೊಂದು ಸಂತಸದ ಕ್ಷಣಗಳು ತುಂಬಾ ಮಹತ್ವದ್ದಾಗಿದ್ದು, ಅವು ನಮ್ಮ ಜೀವನದಲ್ಲಿ ಸದಾ ನೆನಪಿನಲ್ಲಿ ಉಳಿದುಕೊಳ್ಳುತ್ತದೆ ಎಂದು ಹೇಳುವ ಮೂಲಕ ತಮ್ಮ ಸಂತಸ ಸುಂದರ ಕ್ಷಣಗಳನ್ನು ಒಂದು ಹಾರ್ಟಿನಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ.

    ಅಮೂಲ್ಯ ಅವರು ಟ್ವೀಟ್ ಮಾಡಿರುವ ಒಂದು ಫೋಟೋ ನೂರಾರು ನೆನಪನ್ನು, ಖುಷಿಯನ್ನು ಹೇಳುತ್ತದೆ. ಅಮೂಲ್ಯ ತನ್ನ ಪತಿಯೊಂದಿಗಿನ ಸಂತಸದ ಕ್ಷಣದ, ಮದುವೆ ಫೋಟೋ, ಜೊತೆಗೆ ತಮ್ಮ ಹಾಗೂ ಪತಿ ಒಂದೊಂದು ಸುಂದರ ಫೋಟೋಗಳನ್ನು ಮುತ್ತುಗಳನ್ನು ಜೋಡಿಸಿ ಸರ ಮಾಡುವಂತೆ ಒಂದೆಡೆ ಸೇರಿಸಿದ್ದಾರೆ.

    ವಿಶೇಷ ಏನೆಂದರೆ ಮೊದಲಿಗೆ ಒಂದು ಗೋಡೆಯ ಮೇಲೆ ಹೃದಯಾಕಾರದಲ್ಲಿ ಡ್ರಾಯಿಂಗ್ ಸೀಟ್ ಹಾಕಿ ಅದಕ್ಕೆ ತಮ್ಮ ಸುಂದರ ಕ್ಷಣಗಳ ಫೋಟೋಗಳನ್ನು ಹೃದಯ ಶೇಪ್ ರೀತಿಯಲ್ಲಿ ಹಾಕಿದ್ದಾರೆ. ಈ ರೀತಿಯ ಡೆಕೋರೇಷನ್ ನನ್ನು ತಮ್ಮ ರೂಮಿನಲ್ಲಿ ಮಾಡಿಕೊಂಡಿದ್ದು, ಅದಕ್ಕೆ “ಜೀವನದ ಪ್ರತಿಯೊಂದು ಸಂತೋಷದ ಕ್ಷಣಗಳು ಅತ್ಯಾಮುಲ್ಯವಾದುದ್ದು” ಎಂದು ಬರೆದು ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುಟ್ಟುಹಬ್ಬದ ದಿನ ಪತಿಗೆ ಬಿಗ್ ಸರ್ಪ್ರೈಸ್ ಕೊಟ್ಟ ಅಮೂಲ್ಯ

    ಹುಟ್ಟುಹಬ್ಬದ ದಿನ ಪತಿಗೆ ಬಿಗ್ ಸರ್ಪ್ರೈಸ್ ಕೊಟ್ಟ ಅಮೂಲ್ಯ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಅವರು ತಮ್ಮ ಪತಿ ಜಗದೀಶ್ ಹುಟ್ಟುಹಬ್ಬದ ಪ್ರಯುಕ್ತ ಸರ್ಪ್ರೈಸ್ ಕೊಟ್ಟಿದ್ದಾರೆ.

    ಇತ್ತೀಚೆಗಷ್ಟೆ ಜಗದೀಶ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೂಲ್ಯ ಪತಿಗೆ ಸರ್ಪ್ರೈಸ್ ಕೊಡಬೇಕೆಂದು ಬರ್ತ್ ಡೇ ಪಾರ್ಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಸ್ಪೆಷಲ್ ಅತಿಥಿಯಾಗಿ ಆಹ್ವಾನಿಸಿದ್ದರು. ಅಮೂಲ್ಯ ಬಾಲನಟಿ ಆಗಿದ್ದಾಗನಿಂದಲೂ ದರ್ಶನ್ ಜೊತೆಗೆ ಉತ್ತಮ ಭಾಂದವ್ಯವಿದೆ. ಹೀಗಾಗಿ ಅಮೂಲ್ಯ ಕರೆದಿದ್ದರಿಂದ ದರ್ಶನ್ ಪಾರ್ಟಿಗೆ ಬಂದು ಅಮೂಲ್ಯ ಪತಿಗೆ ಶಾಕ್ ಕೊಟ್ಟಿದ್ದಾರೆ.

    ಅಷ್ಟೇ ಅಲ್ಲದೇ ಜಗದೀಶ್ ಅವರಿಗಾಗಿ ಅಮೂಲ್ಯ ವಿಶೇಷವಾದ ಕೇಕ್ ಸಿದ್ಧಪಡಿಸಿದ್ದರು. ಅದರಲ್ಲಿ ಅಮೂಲ್ಯ ಮತ್ತು ಜಗದೀಶ್ ಅವರ ಫೋಟೋ ಹಾಕಲಾಗಿತ್ತು. ವಿಶೇಷ ಅತಿಥಿಯಾಗಿ ಆಗಮಿಸಿದ್ದ ದರ್ಶನ್ ಜಗದೀಶ್ ಅವರ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಬಳಿಕ ಪರಸ್ಪರ ಮೂವರು ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾರೆ. ಈ ಪಾರ್ಟಿಯಲ್ಲಿ ದರ್ಶನ್ ಮಾತ್ರವಲ್ಲದೇ ಬಿಗ್ ಬಾಸ್ ಸ್ಪರ್ಧಿ ಭುವನ್ ಗೌಡ, ಪ್ರಿಯಾಂಕಾ ಉಪೇಂದ್ರ, ಹರ್ಷಿಕಾ ಪೂಣಚ್ಚ ಹಾಗೂ ಶಿಲ್ಪಾ ಗಣೇಶ್ ಸೇರಿದಂತೆ ಅನೇಕ ಸಿನಿತಾರೆಯನ್ನು ಪಾಲ್ಗೊಂಡಿದ್ದರು.

    ಜಗದೀಶ್ ಅವರು ತಮ್ಮ ಹುಟ್ಟುಹಬ್ಬವನ್ನ ಸ್ಪೆಷಲ್ ಆಗಿ ಆಚರಿಸಿದ್ದಕ್ಕಾಗಿ ಪತ್ನಿ ಅಮೂಲ್ಯ ಹಾಗೂ ದರ್ಶನ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇತ್ತ ತಮ್ಮ ಮಾತಿಗೆ ಗೌರವ ಕೊಟ್ಟು ಬಂದಿದ್ದಕ್ಕೆ ದರ್ಶನ್ ಅವರಿಗೂ ಅಮೂಲ್ಯ ಥ್ಯಾಂಕ್ಸ್ ಹೇಳಿದ್ದಾರೆ. ಈ ಬಗ್ಗೆ ಸ್ವತಃ ಜಗದೀಶ್ ಮತ್ತು ಅಮೂಲ್ಯ ತಮ್ಮ ಟ್ವಿಟ್ಟರ್ ನಲ್ಲಿ ಫೋಟೋ ಸಮೇತ ಖುಷಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಕೂಡ ಟ್ವಿಟ್ಟರ್ ನಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡು ಶೇರ್ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿಮ್ಮನ್ನ ತುಂಬಾನೇ ಪ್ರೀತಿಸ್ತೀನಿ ಅಂದ್ರು ಅಮೂಲ್ಯ..!

    ನಿಮ್ಮನ್ನ ತುಂಬಾನೇ ಪ್ರೀತಿಸ್ತೀನಿ ಅಂದ್ರು ಅಮೂಲ್ಯ..!

    ಬೆಂಗಳೂರು: ಚಾಲೆಂಜಿಂಗ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಹುಟ್ಟುಹಬ್ಬ ಪ್ರಯುಕ್ತ ನಟಿ ಅಮೂಲ್ಯ ಜಗದೀಶ್ ಶುಭಾಶಯ ಕೋರಿದ್ದಾರೆ.

    ನಟಿ ಅಮೂಲ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ವಿಜಯಲಕ್ಷ್ಮಿ ಅವರ ಜೊತೆಗಿದ್ದ ಫೋಟೋಗಳನ್ನು ಪೋಸ್ಟ್ ಮಾಡಿ ಶುಭಾಶಯವನ್ನು ತಿಳಿಸಿದ್ದಾರೆ. ” ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು ಅಕ್ಕ. ನೀವು ಯಾವಾಗಲೂ ಸಂತೋಷದಿಂದ ಇರಬೇಕು” ಎಂದು ಟ್ವೀಟ್ ಮಾಡಿ ಶುಭ ಕೋರಿದ್ದಾರೆ.

    ನಟಿ ಅಮೂಲ್ಯ, ವಿಜಯಲಕ್ಷ್ಮಿ ಮತ್ತು ನಟ ದರ್ಶನ್ ಪಾರ್ಟಿಗಳಲ್ಲಿ ಆಗಾಗ ಭೇಟಿಯಾಗುತ್ತಿರುತ್ತಾರೆ. ಅದರಲ್ಲೂ ಅಮೂಲ್ಯ ಮತ್ತು ವಿಜಯಲಕ್ಷ್ಮಿ ಅವರು ಆತ್ಮೀಯರಾಗಿದ್ದು, ಅಮೂಲ್ಯ ಯಾವಾಗಲೂ ಅವರನ್ನು ಅಕ್ಕ ಎಂದು ಕರೆಯುತ್ತಾರೆ. ಇಂದು ಕೂಡ ಪ್ರೀತಿಯ ಅಕ್ಕನಿಗೆ ಬರ್ತ್ ಡೇ ಶುಭಾಶಯವನ್ನು ಕೋರಿದ್ದಾರೆ.

    ಇತ್ತೀಚೆಗೆಷ್ಟೆ ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿಯ ಮಗ ವಿನೀಶ್ ಬರ್ತ್ ಡೇ ಇತ್ತು. ಮಗನ ಹುಟ್ಟುಹಬ್ಬದ ಪಾರ್ಟಿಯನ್ನು ಅದ್ಧೂರಿಯಾಗಿ ಆಚರಿಸಿದ್ದು, ಪಾರ್ಟಿಗೆ ಸಂಬಂಧಿಕರು, ಸ್ನೇಹಿತರು ಮತ್ತು ಸಿನಿಮಾರಂಗದವರು ಬಂದ ಸಂತೋಷದಿಂದ ಆಚರಿಸಿದ್ದರು. ಮಗನ ಬರ್ತ್ ಡೇ ಪಾರ್ಟಿಯಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರು ಸಂತೋಷದಿಂದ ಸಮಯವನ್ನು ಕಳೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಅಮೂಲ್ಯ ಬೆನ್ನೇರಿದ ಹೊಸ ಖುಷಿ!

    ಅಮೂಲ್ಯ ಬೆನ್ನೇರಿದ ಹೊಸ ಖುಷಿ!

    ಬೆಂಗಳೂರು: ಮದುವೆಯಾದ ನಂತರ ಅಮೂಲ್ಯ ಚಿತ್ರರಂಗದಿಂದ ದೂರ ನಿಂತಿದ್ದರೂ ನಾನಾ ಕಾರಣಗಳಿಂದ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚೆಗಷ್ಟೇ ಪತಿಯೊಂದಿಗೆ ವಿದೇಶ ಸಂಚಾರವನ್ನೂ ಮಾಡಿ ಆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಖುಷಿ ಹಂಚಿಕೊಂಡಿದ್ದವರು ಅಮೂಲ್ಯ. ಇದೀಗ ಮತ್ತೊಂದು ಖುಷಿ ಅವರ ಬೆನ್ನೇರಿಕೊಂಡಿದೆ!

    ಅಮೂಲ್ಯ ಹೊಸಾದೊಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಬೆನ್ನಿನ ಮೇಲೆ ಇತ್ತೀಚೆಗಷ್ಟೇ ಹಾಕಿಸಿಕೊಂಡಿರೋ ಈ ಆಂಕರ್ ಟ್ಯಾಟೂ ಫೋಟೋವನ್ನು ಇನ್ ಸ್ಟಾಗ್ರಾಮ್ ಮೂಲಕ ಅಭಿಮಾನಿಗಳ ಮುಂದೆ ಪ್ರದರ್ಶಿಸಿ ಅಮೂಲ್ಯ ಸಂಭ್ರಮಿಸಿದ್ದಾರೆ.

     

    ಇಂಥಾ ಖುಷಿಗಳ ಮೂಲಕವೇ ಅಮೂಲ್ಯ ಮತ್ತೆ ಚಿತ್ರರಂಗದತ್ತಲೂ ಮುಖ ಮಾಡಿದ್ದಾರೆ. ದರ್ಶನ್ ಅವರ ಚಿತ್ರದಲ್ಲಿ ತಂಗಿಯಾಗಿ ನಟಿಸೋ ಮೂಲಕ ಅಮಾಲ್ಯಾ ನಟನೆಗೆ ಮರಳೋ ಸೂಚನೆಗಳಿವೆ. ಮದುವೆಯಾದ ನಂತರ ಒಂದಷ್ಟು ಕಾಲದ ಬಳಿಕವಾದರೂ ಅಮೂಲ್ಯ ನಟಿಸಲು ಶುರು ಮಾಡುತ್ತಾರೆಂಬ ನಿರೀಕ್ಷೆ ಅಭಿಮಾನಿಗಳದ್ದಾಗಿತ್ತು. ಆದರೆ ಅದಾಗಲೇ ಚುನಾವಣೆ ಬಂದಿದ್ದರಿಂದ ಮಾವನ ರಾಜಕೀಯ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದ ಅವರು ಇದೀಗ ಪತಿಯೊಂದಿಗೆ ಜಾಲಿ ಟ್ರಿಪ್ಪನ್ನೂ ಮುಗಿಸಿಕೊಂಡು ನಟಿಸಲು ಮನಸು ಮಾಡಿದ್ದಾರೆ.

    ಆದರೆ ಅಮೂಲ್ಯ ಅಭಿಮಾನಿಗಳದ್ದು ಅವರು ಮತ್ತೆ ನಾಯಕಿಯಾಗಿ ಮಿಂಚಬೇಕೆಂಬ ಆಸೆ. ಅಮೂಲ್ಯ ಇದನ್ನು ಮನಗಂಡು ಸಾಕಾರಗೊಳಿಸುತ್ತಾರಾ ಎಂಬುದು ಸದ್ಯದ ಪ್ರಶ್ನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/Bm0LZ3mAkql/?hl=en&taken-by=amulya_moulya

  • ಪ್ಯಾರಿಸ್ ನಲ್ಲಿ ಅಮೂಲ್ಯ ಜಗದೀಶ್ ಸುತ್ತಾಟ!

    ಪ್ಯಾರಿಸ್ ನಲ್ಲಿ ಅಮೂಲ್ಯ ಜಗದೀಶ್ ಸುತ್ತಾಟ!

    ಬೆಂಗಳೂರು: ಸ್ಯಾಂಡಲ್ ವುಡ್ ನ ನಟಿ ಅಮೂಲ್ಯ ತನ್ನ ಪತಿ ಜೊತೆ ಪ್ಯಾರಿಸ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

    ಅಮೂಲ್ಯ ಅವರು ತನ್ನ ಪತಿ ಜಗದೀಶ್ ಮತ್ತು ಸ್ನೇಹಿತರ ಜೊತೆ ಪ್ಯಾರಿಸ್ ಗೆ ಪ್ರವಾಸಕ್ಕೆ ತೆರಳಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ವೇಳೆ ಮಾವನ ಪರ ಭರ್ಜರಿ ಪ್ರಚಾರದಲ್ಲಿ ತೊಡಗಿ ಬ್ಯುಸಿಯಾಗಿದ್ದ ಅಮೂಲ್ಯ ಅವರು ಇದೀಗ ರಿಲ್ಯಾಕ್ಸ್ ಗಾಗಿ ಪ್ಯಾರಿಸ್ ನಲ್ಲಿ ಸುತ್ತಾಡುತ್ತಿದ್ದಾರೆ.

    ಅಮೂಲ್ಯ ಪ್ಯಾರಿಸ್ ನಲ್ಲಿ ಪತಿ ಮತ್ತು ಸ್ನೇಹಿತರ ಜೊತೆ ಭೇಟಿ ನೀಡಿದ ಸ್ಥಳಗಳ ಫೋಟೋಗಳನ್ನು ತಮ್ಮ ಇನ್ಸ್ ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ. ಅಮೂಲ್ಯ ಪ್ಯಾರೀಸ್ ನ ಐಫೆಲ್ ಟವರ್ ಬಳಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಐಫೆಲ್ ಟವರ್ ಗೆ ಕಿಸ್ ಕೊಡುವ ರೀತಿಯಲ್ಲಿಯೇ ಫೋಟೋ ತೆಗೆಸಿಕೊಂಡಿದ್ದಾರೆ. ಪತಿ ಜಗದೀಶ್ ಮತ್ತು ಸ್ನೇಹಿತರ ಜೊತೆ ಕಳೆದ ಕೆಲವು ಕ್ಷಣಗಳನ್ನು ಫೋಟೋಗಳಲ್ಲಿ ಸೆರೆ ಹಿಡಿದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

    ಜಗದೀಶ್ ಅವರು ಕೂಡ ಐಫೆಲ್ ಟವರ್ ಬಳಿ ಫೆರಾರಿ ಕಾರಿನಲ್ಲಿ ಜಾಲಿ ರೈಡ್ ಹೋಗಿದ್ದಾರೆ. ಆ ವಿಡಿಯೋವನ್ನು ಇನ್ಸ್ ಸ್ಟಾಗ್ರಾಂನಲ್ಲಿ ಹಾಕಿ, ಇದು ಒಳ್ಳೆಯ ಅನುಭವ ಕೊಟ್ಟಿದೆ ಎಂದು ಬರೆದುಕೊಂಡಿದ್ದಾರೆ.

    ಇತ್ತೀಚೆಗೆ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದ ನಟ-ನಟಿಯರು ವಿದೇಶ ಪ್ರಯಾಣ ಹೋಗುತ್ತಿದ್ದು, ನಟಿ ಹರ್ಷಿಕಾ ಪೂಣಚ್ಚ ಕೂಡ ಆಮ್ ಸ್ಟರ್  ಡ್ಯಾಮಿಗೆ ಹೋಗಿ ಸುತ್ತಾಟ ಮಾಡುತ್ತಿದ್ದಾರೆ.

    https://www.instagram.com/p/Bl6IDj1Bqdy/?utm_source=ig_embed&utm_campaign=embed_loading_state_control

    https://www.instagram.com/p/Bl68-aYAQ0E/?utm_source=ig_embed&utm_campaign=embed_loading_state_control

  • ಶ್ರೀ ವಿರಾಂಜನೇಯನ ದರ್ಶನ ಪಡೆದ ನಟಿ ಅಮೂಲ್ಯ, ಪತಿ ಜಗದೀಶ್ ಗೌಡ!

    ಶ್ರೀ ವಿರಾಂಜನೇಯನ ದರ್ಶನ ಪಡೆದ ನಟಿ ಅಮೂಲ್ಯ, ಪತಿ ಜಗದೀಶ್ ಗೌಡ!

    ಚಿಕ್ಕಬಳ್ಳಾಪುರ: ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಗೌಡ ಚಿಕ್ಕಬಳ್ಳಾಪುರ ನಗರ ಹೊರವಲಯದ ಶ್ರೀ ವಿರಾಂಜನೇಯನ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

    ಆದಿಚುಂಚನಗಿರಿ ಶಾಖಾ ಮಠದ ಉಸ್ತುವಾರಿಯಲ್ಲಿರುವ ಸೂಲಾಲಪ್ಪನದಿನ್ನೆ ಶ್ರೀ ವೀರಾಂಜನೇಯ ದೇಗುಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಭಕ್ತಿಭಾವದಿಂದ ಇಷ್ಟಾರ್ಥಸಿದ್ದಿಗಾಗಿ ಅಮೂಲ್ಯ ದಂಪತಿ ಬೇಡಿಕೊಂಡರು. ಆದಿಚುಂಚನಗಿರಿ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ವಿರಾಂಜನೇಯನಿಗೆ ವಿಶೇಷ ಆರತಿ ಬೆಳಗಿ ಪೂಜೆ ಸಲ್ಲಿಸಿದರು.

    ಇದೇ ವೇಳೆ ನಿರ್ಮಲಾನಂದನಾಥ ಸ್ವಾಮೀಜಿ ಅಮೂಲ್ಯ ಹಾಗೂ ಜಗದೀಶ್ ಗೌಡ ದಂಪತಿಗೆ ಗೌರವ ಸಮರ್ಪಣೆ ಮಾಡಿ ಆಶೀರ್ವಾದಿಸಿದರು. ನಂತರ ಅಗಲಗುರ್ಕಿ ಗ್ರಾಮದ ಬಳಿಯ ಬಿಜಿಎಸ್ ಶಾಲೆಯಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ದಿನಾಚರಣೆಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ನಟಿ ಅಮೂಲ್ಯ ಹಾಗೂ ಪತಿ ಜಗದೀಶ್ ಗೌಡ ಪಾಲ್ಗೊಂಡಿದ್ದರು.

    ಇನ್ನೂ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ದಿನಾಚರಣೆಯ ಅಂಗವಾಗಿ ಬಿಜಿಎಸ್ ಶಾಲೆಯ ಕಲರ್ ಫುಲ್ ರಂಗೇರಿತ್ತು. ಬಣ್ಣ ಬಣ್ಣದ ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟು ವಿದ್ಯಾರ್ಥಿಗಳು ಜಾನಪದ ಕಲಾ ತಂಡಗಳೊಂದಿಗೆ ಅತಿಥಿಗಳಿಗೆ ಅದ್ಧೂರಿ ಸ್ವಾಗತ ಕೋರಿದ್ರು. ನಟಿ ಅಮೂಲ್ಯ ಕಂಡ ವಿದ್ಯಾರ್ಥಿಗಳು ಹಾಗೂ ಪೋಷಕರು ಸಂತಸಗೊಂಡರು. ಇನ್ನೂ ವಿದ್ಯಾರ್ಥಿಗಳು ವೇಷಭೂಷಣ ಹಾಗೂ ನೃತ್ಯ ಕಂಡ ನಟಿ ಅಮೂಲ್ಯ ದಂಪತಿ ಕೂಡ ಅಷ್ಟೇ ಸಂತಸಗೊಂಡರು.