Tag: amulya

  • ಗೋಲ್ಡನ್ ಕ್ವೀನ್ ತಾಯ್ತನದ ಜರ್ನಿಗೆ ಎರಡು ತಿಂಗಳು: ಅಮೂಲ್ಯ ಭಾವನಾತ್ಮಕ ಮಾತು

    ಗೋಲ್ಡನ್ ಕ್ವೀನ್ ತಾಯ್ತನದ ಜರ್ನಿಗೆ ಎರಡು ತಿಂಗಳು: ಅಮೂಲ್ಯ ಭಾವನಾತ್ಮಕ ಮಾತು

    ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ ಅವಳಿ ಗಂಡು ಮಕ್ಕಳಿಗೆ ತಾಯಿಯಾಗಿ ತಾಯ್ತನದ ಖುಷಿಯನ್ನು ಅನುಭವಿಸುತ್ತಿದ್ದಾರೆ. ಎರಡು ತಿಂಗಳ ತಾಯ್ತನದ ಖುಷಿಯಲ್ಲಿ ಈ ಹಿಂದಿನ ತಮ್ಮ ಬೇಬಿ ಬಂಪ್ ಫೋಟೋಶೂಟ್‌ನ ಈಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    `ಚೆಲುವಿನ ಚಿತ್ತಾರ’ ಚಿತ್ರದ ಮೂಲಕ ಚಂದನವನಕ್ಕೆ ಪರಿಚಿತರಾದ ನಟಿ ಅಮೂಲ್ಯ, ಸಾಕಷ್ಟು ಸಿನಿಮಾಗಳ ಮೂಲಕ ಛಾಪು ಮೂಡಿಸಿದ್ರು. ಬಳಿಕ ಜಗದೀಶ್ ಆರ್ ಚಂದ್ರ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಚಿತ್ರರಂಗದಿಂದ ಅಂತರ ಕಾಯ್ದುಕೊಂಡ್ರು. ಈಗ ಸಂಸಾರ, ತಮ್ಮ ಅವಳಿ ಮಕ್ಕಳ ಜತೆ ಖುಷಿಯಿಂದ ಕಾಲಕಳೆಯುತ್ತದ್ದಾರೆ. ಇದೀಗ ಅಮೂಲ್ಯ ತಮ್ಮ ಬೇಬಿ ಬಂಪ್ ಫೋಟೋಶೂಟ್ ಜತೆಗೆ ತಮ್ಮ ಮಕ್ಕಳ ಕುರಿತು ಎಮೋಷನಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಮಾರ್ಚ್ ಒಂದಕ್ಕೆ ಮಹಾಶಿವರಾತ್ರಿಯಂದು ಅವಳಿ ಮಕ್ಕಳಿಗೆ ಅಮೂಲ್ಯ ತಾಯಿಯಾಗಿದ್ದರು. ಇದೀಗ ಪೋಸ್ಟ್‌ನಲ್ಲಿ ತಾಯ್ತನದ ಎರಡು ತಿಂಗಳು ಇಂದಿಗೆ, ಇದು ಖಂಡಿತವಾಗಿ ನನ್ನ ಜೀವನದ ಮುಖ್ಯ ಪ್ರಯಾಣವಾಗಿದೆ. ನಾನು ಅವಳಿ ಮಕ್ಕಳಿಗೆ ತಾಯಿಯಾಗಲಿದ್ದೇನೆ ಎಂದು ಕೇಳಿದಾಗ, ನನ್ನ ಹೃದಯ ಬಡಿತ ತಪ್ಪಿಸಿತು. ನನ್ನ ಗರ್ಭಾವಸ್ಥೆಯ ಎಲ್ಲಾ ಸವಾಲುಗಳನ್ನು ಮರೆತುಬಿಡುವಂತೆ ಮಾಡಿತ್ತು. ಜತೆಗೆ ನಾನು ಈಗಾಗಲೇ ನನ್ನ ಬಂಪ್‌ನ್ನು ಕಳೆದುಕೊಂಡಿದ್ದೇನೆ. ತಾಯಿಯು ಜಗತ್ತಿಗೆ ಕೆಚ್ಚೆದೆಯ ಮುಖವನ್ನು ತೋರಿಸುತ್ತಾಳೆ. ಆಕೆಯ ಕಷ್ಟದ ಹಾದಿ ಅವಳಿಗೆ ಮಾತ್ರ ಗೊತ್ತು. ಇದನ್ನೂ ಓದಿ: ʻಆಕಾಶ್ʼ ಚಿತ್ರಕ್ಕೆ 17 ವರ್ಷ : ಈ ಸಿನಿಮಾದ ಹಿಂದಿದೆ ಇಂಟ್ರಸ್ಟಿಂಗ್ ಸ್ಟೋರಿ

     

    View this post on Instagram

     

    A post shared by Amulya (@nimmaamulya)

    ಕೊನೆಯಲ್ಲಿ ನನ್ನ ಪುಟ್ಟ ಮಕ್ಕಳ ಪಾದಗಳನ್ನು ನೋಡಿ..ಖಂಡಿತಾ ಮಕ್ಕಳಿಗೆ ನನ್ನ ಕೈಲಾದಷ್ಟು ಸೇವೆ ಮಾಡಿದ್ದೇನೆ ಮುಂದೆ ಹೀಗೆ ಮುಂದೆವರೆಸಿಕೊಂಡು ಹೋಗುತ್ತೇನೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಇನ್ನು ಈ ಹಿಂದಯೇ ಮಾಡಲಾಗಿದ್ದ ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಅಮೂಲ್ಯ ಗ್ರೀನ್ ಕಲರ್ ಸೀರೆನಲ್ಲಿ ರಾಣಿಯಂತೆ ಕಾಣಿಸಿಕೊಂಡಿದ್ದಾರೆ. ಸದ್ಯ ಅಮೂಲ್ಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

  • ಬೀದಿ ವ್ಯಾಪಾರಿಯಿಂದ ಮಕ್ಕಳಿಗೆ ಮೊದಲ ಆಟಿಕೆ ವಸ್ತು ಕೊಂಡ ಅಮೂಲ್ಯ ಪತಿ

    ಬೀದಿ ವ್ಯಾಪಾರಿಯಿಂದ ಮಕ್ಕಳಿಗೆ ಮೊದಲ ಆಟಿಕೆ ವಸ್ತು ಕೊಂಡ ಅಮೂಲ್ಯ ಪತಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅಮೂಲ್ಯ (Amulya) ಮತ್ತು ಜಗದೀಶ್ ದಂಪತಿ ಅವಳಿ ಮಕ್ಕಳ ಪೋಷಕರಾಗಿರುವುದು ಗೊತ್ತಿರುವ ವಿಚಾರವಾಗಿದೆ. ಇದೀ ತಮ್ಮ ಅವಳಿ ಮಕ್ಕಳಿಗೆ ಜಗದೀಶ್ ಅವರು ಕಾಲಿಲ್ಲದ ವ್ಯಕ್ತಿಯಿಂದ ಮಕ್ಕಳಿಗೆ ಬಲೂನ್ ಖರೀದಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಈ ಬಗ್ಗೆ ಜಗದೀಶ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇತ್ತೀಚಿಗೆ ನಡೆದ ಘಟನೆಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ. ಸುಸಜ್ಜಿತ ಶಾಪ್‍ಗೂ ಫುಟ್‍ಪಾತ್‍ನಲ್ಲಿ ಮಾರುವ ಪುಟ್ಟ ಅಂಗಡಿಗೂ ಎಷ್ಟೊಂದು ವ್ಯತ್ಯಾಸವಿದೆ ಎಂದು ಮನಸ್ಸಿಗೆ ಅನ್ನಿಸಿತು. ಕೆಲವೊಮ್ಮೆ ದುಬಾರಿ ಬೆಲೆ ತೆತ್ತು ಕೊಂಡುಕೊಳ್ಳುವ ಶಾಪ್‍ನಲ್ಲಿ ಹೃದಯ ಶ್ರೀಮಂತಿಕೆಯೇ ಬಹಳ ಕಡಿಮೆ ಎಂದೆನಿಸಬಹುದು. ಆದರೆ ಕಡಿಮೆ ಬೆಲೆ ಕೊಟ್ಟು ಸಣ್ಣ ಅಂಗಡಿ ಅಥವಾ ಫುಟ್‍ಪಾತ್‍ನಲ್ಲಿ ಏನನ್ನಾದರೂ ತೆಗೆದುಕೊಂಡರೆ ಅವರಲ್ಲಿ ಹೆಚ್ಚಿನ ಪ್ರೀತಿ ವಿಶ್ವಾಸ ಗಮನಕ್ಕೆ ಬರುತ್ತದೆ. ಇದನ್ನೂ ಓದಿ: ಹೊಟ್ಟೆ ಡುಮ್ಮ ಅಂದಿದ್ದಕ್ಕೆ ಸೂಪರ್ ಸ್ಟಾರ್ ಅಜಿತ್ ಮಾಡಿದ್ದೇನು?

     

    View this post on Instagram

     

    A post shared by Jagdish R Chandra (@jagdishrchandra)

    ಶಿವರಾತ್ರಿಯ ದಿನದಂದು ಜಯನಗರದ ಆಸ್ಪತ್ರೆಯ ಬಲಭಾಗದ ಫುಟ್‍ಪಾತ್‍ನಲ್ಲಿ ಬಲೂನ್ ಮತ್ತು ಆಟಿಕೆಗಳನ್ನು ಮಾರುತ್ತಿದ್ದ ಕಾಲುಗಳಿಲ್ಲದ ವ್ಯಕ್ತಿ ರವಿ ಎನ್ನುವವರು ಅಮೂಲ್ಯ ಮೇಡಂಗೆ ಅವಳಿ ಮಕ್ಕಳಾಗಿದ್ದು ಕೇಳಿ ತುಂಬಾ ಸಂತೋಷವಾಯ್ತು ಸರ್. ಎಲ್ಲರೂ ಚೆನ್ನಾಗಿದಾರಲ್ವಾ? ನೀವು ಯಾವಾಗ ಹೊರಗೆ ಬರುತ್ತೀರಾ ಎಂದು ಕಾಯುತ್ತಿದ್ದೆ ಎಂದು ಆತ್ಮೀಯವಾಗಿ ಮಾತನಾಡಿಸಿದ್ದನ್ನು ಕೇಳಿ ನನಗೆ ನಿಜಕ್ಕೂ ಆಶ್ಚರ್ಯ ಮತ್ತು ಸಂತೋಷ ಎರಡೂ ಆಯಿತು. ಇದನ್ನೂ ಓದಿ: ಕನ್ನಡದ ಎವರ್‌ಗ್ರೀನ್ ಸಾಂಗ್‍ಗೆ ದನಿಯಾದ ರಾಬರ್ಟ್ ರಾಣಿ!

    ಶ್ರೀಮಂತರಲ್ಲದಿದ್ದರೂ ಅವರ ಹೃದಯ ಶ್ರೀಮಂತಿಕೆ ಎಷ್ಟು ದೊಡ್ಡದಲ್ವಾ? ಕಾಲುಗಳಿಲ್ಲದಿದ್ದರೂ ಸ್ವಾಭಿಮಾನದಿಂದ ನಿತ್ಯ ತನ್ನ ಕೆಲಸ ಮಾಡಿಕೊಂಡು ಶ್ರಮವಹಿಸಿ ತನ್ನ ಜೀವನ ನಡೆಸುತ್ತಿರುವ ಆ ವ್ಯಕ್ತಿಯಿಂದ ಮಕ್ಕಳಿಗಾಗಿ ಮೊದಲ ಆಟಿಕೆಗಳ ರೂಪದಲ್ಲಿ ಎರಡು ಬಲೂನ್‍ನ್ನು ಕೊಂಡೆವು ಎಂದಿದ್ದಾರೆ.

    ಎಲ್ಲವೂ ಕಮರ್ಷಿಯಲ್ ಮತ್ತು ದುಬಾರಿ ಆಗಿರುವ ಈಗಿನ ಕಾಲದಲ್ಲಿ ಈ ರೀತಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ಹೃದಯವಂತರ ಬಳಿ ನಾವು ವಸ್ತುಗಳನ್ನು ಕೊಂಡುಕೊಳ್ಳುವುದರಲ್ಲಿ ತಪ್ಪೇನಿಲ್ಲ ಅಲ್ವಾ? ಈ ರೀತಿ ಮಾಡುವುದರಿಂದ ಅವರಿಗೂ ಸಹಾಯವಾಗುತ್ತದೆ. ಅವರು ಇನ್ನಷ್ಟು ಆತ್ಮನಿರ್ಭರವಾಗಿ ಜೀವನ ನಡೆಸಲು ಅನುಕೂಲವಾಗುತ್ತದೆ. ನಿಮಗೇನಾದರೂ ಈ ರೀತಿ ಬೀದಿ ಬೀದಿಗಳಲ್ಲಿ ವ್ಯಾಪಾರ ಮಾಡುವವರು ಕಂಡರೆ ನೀವೂ ಅವರ ಬಳಿ ವಸ್ತುಗಳನ್ನು ಖರೀದಿಸಿ ಅವರನ್ನು ಪ್ರೋತ್ಸಾಹಿಸಿ ಎಂದು ಬರೆದುಕೊಂಡಿದ್ದಾರೆ.

  • ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ

    ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ

    ನಟಿ ಅಮೂಲ್ಯ ಇಂದು ಬೆಂಗಳೂರಿನ ಜಯನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಬೆಳಗ್ಗೆ 11.27ಕ್ಕೆ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಜತೆ ಮಾತನಾಡಿದ ಅಮೂಲ್ಯ ಅವರ ಸಹೋದರ, ನಿರ್ದೇಶಕ ದೀಪಕ್ “ಸಹೋದರಿ ಅವಳಿ ಮಕ್ಕಳ ತಾಯಿಯಾಗಿದ್ದರು. ಮನೆಗೆ ಮಕ್ಕಳು ಬಂದಿದ್ದು ಖುಷಿ ತಂದಿದೆ. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ” ಎಂದು ಖುಷಿ ಹಂಚಿಕೊಂಡರು.

     

     

    View this post on Instagram

     

    A post shared by Jagdish R Chandra (@jagdishrchandra)

    ಕೆಲ ತಿಂಗಳಿಂದ ಅಮೂಲ್ಯ ತಾಯಿಯಾದ ಸುದ್ದಿಯೇ ಹೆಚ್ಚು ಸದ್ದು ಮಾಡಿತ್ತು. ಸೀಮಂತ, ಬೇಬಿ ಬಂಪ್ಸ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

  • ನೀರಿನ ಮಧ್ಯೆ ಹೂವಿನ ಉಯ್ಯಾಲೆಯಲ್ಲಿ ಕುಳಿತು ಅಮೂಲ್ಯ ಬೇಬಿ ಬಂಪ್ ಫೋಟೋಶೂಟ್

    ನೀರಿನ ಮಧ್ಯೆ ಹೂವಿನ ಉಯ್ಯಾಲೆಯಲ್ಲಿ ಕುಳಿತು ಅಮೂಲ್ಯ ಬೇಬಿ ಬಂಪ್ ಫೋಟೋಶೂಟ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಗೋಲ್ಡನ್ ಕ್ವೀನ್ ಅಮೂಲ್ಯ ತಾಯಿ ಆಗುತ್ತಿರುವ ವಿಚಾರ ತಿಳಿದಿದೆ. ಸೀಮಂತವನ್ನು ಅದ್ಧೂರಿಯಾಗಿ ಮಾಡಿಕೊಂಡಿದ್ದ ಅಮೂಲ್ಯ ಅವರು ಇದೀಗ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ.

    ಅಮೂಲ್ಯ ಅವರು ಪತಿ ಜಗದೀಶ್ ಜೊತೆ ಬೇಬಿ ಶವರ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನೀಲಿ ಬಣ್ಣದ ಡ್ರೆಸ್ ಧರಿಸಿ, ನೀರಿನ ನಡುವೆ ಹೂವಿನ ಉಯ್ಯಾಲೆಯ ಮೇಲೆ ಕುಳಿತು ಅಮೂಲ್ಯ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಸುಂದರವಾದ ಫೋಟೋಗಳು ಅಭಿಮಾನಿಗಳಿಗೂ ತುಂಬಾ ಇಷ್ಟವಾಗಿದೆ. ಜ್ಯೂನಿಯರ್ ಅಮೂಲ್ಯರನ್ನು ನೋಡಲು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ: ಅಮೂಲ್ಯ ಸೀಮಂತದ ಪಾರ್ಟಿಗೆ ಸ್ಯಾಂಡಲ್‍ವುಡ್ ತಾರೆಯರ ಮೆರುಗು

    ಇತ್ತೀಚೆಗಷ್ಟೇ ತಾವು ತಾಯಿ ಆಗುತ್ತಿರುವ ಸಿಹಿ ಸುದ್ದಿಯನ್ನು ನಟಿ ಅಮೂಲ್ಯ ಶೇರ್ ಮಾಡಿಕೊಂಡಿದ್ದರು. ಪತಿ ಜಗದೀಶ್ ಜೊತೆ ಫೋಟೋಶೂಟ್ ಮಾಡಿಸಿ, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ನಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಬರೆದುಕೊಂಡಿದ್ದರು. ಅಭಿಮಾನಿಗಳು. ಸ್ನೇಹಿತರು, ಕಲಾವಿದರು ಕಾಮೆಂಟ್ ಮಾಡುವ ಮೂಲಕವಾಗಿ ಶುಭಕೋರಿದ್ದರು.

    ಅಮೂಲ್ಯ ಅವರು ಹೊಸದಾಗಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇತ್ತೀಚೆಗೆ ಅಮೂಲ್ಯ ಅವರ ಸೀಮಂತ ಶಾಸ್ತ್ರ ನಡೆಯಿತು ಪತಿ ಜಗದೀಶ್ ಮತ್ತು ಅಮೂಲ್ಯ ಅವರ ಇಡೀ ಕುಟುಂಬದವರು ಸೀಮಂತ ಶಾಸ್ತ್ರದಲ್ಲಿ ಹಾಜರಿದ್ದರು.

    ಬಾಲನಟಿಯಾಗಿ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದ ಅಮೂಲ್ಯ ಸ್ಯಾಂಡಲ್‍ವುಡ್‍ನ ಬಹುತೇಕ ಎಲ್ಲಾ ಸ್ಟಾರ್ ಗಳ ಜೊತೆ ನಟಿಸಿದ್ದಾರೆ ಅಮೂಲ್ಯ. ಮದುವೆ ನಂತರ ನಟನೆಯಿಂದ ಸ್ವಲ್ಪ ದೂರ ಉಳಿದಿದ್ದಾರೆ. ಇದೀಗ ಅಮೂಲ್ಯ ತಾವು ತಾಯಿ ಆಗುತ್ತಿರುವ ಕ್ಷಣಗಳಿಗೆ ಎದುರು ನೋಡುತ್ತಿದ್ದಾರೆ.

  • ಸ್ಯಾಂಡಲ್‍ವುಡ್ ಪದ್ಮಾವತಿ ರಮ್ಯಾ ಕಮ್ ಬ್ಯಾಕ್ ಪಕ್ಕಾ

    ಸ್ಯಾಂಡಲ್‍ವುಡ್ ಪದ್ಮಾವತಿ ರಮ್ಯಾ ಕಮ್ ಬ್ಯಾಕ್ ಪಕ್ಕಾ

    ಬೆಂಗಳೂರು: ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ಮತ್ತೆ ಸಿನಿಮಾ ರಂಗಕ್ಕೆ ಬರುವುದು ಪಕ್ಕಾ ಆಗಿದೆ. ಹಾಗಾಗಿಯೇ ಅವರು ಪದೇ, ಪದೇ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅಲ್ಲದೇ, ಮಾಧ್ಯಮಗಳ ಮುಂದೆಯೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

    ಇತ್ತೀಚೆಗಷ್ಟೇ ನಡೆದ ನಟಿ ಅಮೂಲ್ಯ ಅವರ ಸೀಮಂತ ಕಾರ್ಯಕ್ರಮದಲ್ಲಿ ರಮ್ಯಾ ಹಾಜರಿದ್ದರು. ಅಂದು ರಾಧಿಕಾ ಪಂಡಿತ್, ಗಣೇಶ್, ನೆನಪಿರಲಿ ಪ್ರೇಮ್, ಹರಿಪ್ರಿಯಾ, ಪ್ರಿಯಾಂಕ ಉಪೇಂದ್ರ, ಉಪೇಂದ್ರ, ಹಿರಿಯ ನಟಿ ಭಾರತೀ ವಿಷ್ಣುವರ್ಧನ್ ಸೇರಿದಂತೆ ಸಾಕಷ್ಟು ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆಗಲೂ ಕೂಡ ರಮ್ಯಾ ಸಿನಿಮಾ ರಂಗಕ್ಕೆ ವಾಪಸ್ಸು ಬರುವ ಕುರಿತು ಮಾತನಾಡಿದ್ದಾರೆ. ಹಾಗಾಗಿ ಸ್ಯಾಂಡಲ್‍ವುಡ್ ಪದ್ಮಾವತಿ ಮತ್ತೆ ತೆರೆಯ ಮೇಲೆ ಮಿಂಚೋದು ಪಕ್ಕಾ ಆಗಿದೆ. ಇದನ್ನೂ ಓದಿ: ಚಂದನವನದಲ್ಲಿ ಲವ್ಲಿ ವ್ಯಾಲೆಂಟೈನ್ಸ್ ಡೇ – ಅಭಿಮಾನಿಗಳೊಂದಿಗೆ ಹಂಚಿಕೊಂಡ್ರು ಸ್ಪೆಷಲ್ ಫೋಟೋ!

    ಪುನೀತ್ ರಾಜ್ ಕುಮಾರ್ ನಿಧನರಾದ ಸಂದರ್ಭದಲ್ಲಿಯೂ ಕೂಡ ತಾವು ಸಿನಿಮಾ ರಂಗಕ್ಕೆ ವಾಪಸ್ಸಾಗುವ ಕುರಿತು ಮಾತನಾಡಿದ್ದರು. ಸ್ವತಃ ಪುನೀತ್ ರಾಜ್ ಕುಮಾರ್ ಅವರೇ ರಮ್ಯಾಗೆ ಕಾಲ್ ಮಾಡಿ, ತಮ್ಮ ಮುಂದಿನ ಚಿತ್ರದಲ್ಲಿ ನಟಿಸುವಂತೆ ಕೋರಿದ್ದರು. ಅಪ್ಪು ಮಾತಿಗೆ ರಮ್ಯಾ ಕೂಡ ಒಪ್ಪಿಗೆ ಸೂಚಿಸಿದ್ದರು. ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ಪುನೀತ್ ಮತ್ತು ರಮ್ಯಾ ಕಾಂಬಿನೇಷನ್‍ನ ಚಿತ್ರ ಸೆಟ್ಟೇರುತ್ತಿತ್ತು. ಆದರೆ, ವಿಧಿ ಬೇರೆ ರೀತಿಯಲ್ಲಿಯೇ ಆಟವಾಡಿತು. ಇದನ್ನೂ ಓದಿ: ಅಮೂಲ್ಯ ಸೀಮಂತದ ಪಾರ್ಟಿಗೆ ಸ್ಯಾಂಡಲ್‍ವುಡ್ ತಾರೆಯರ ಮೆರುಗು

    ಭಾರೀ ಬೇಡಿಕೆ ಇರುವಾಗಲೇ ಸಿನಿಮಾ ರಂಗದಿಂದ ರಮ್ಯಾ ದೂರವಾದರು. ಆನಂತರ ರಾಜಕೀಯ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡರು. ಕೆಲ ತಿಂಗಳಿಂದ ಅವರು ರಾಜಕಾರಣದಲ್ಲೂ ಸಕ್ರಿಯರಾಗಿಲ್ಲ. ಸೋಶಿಯಲ್ ಮೀಡಿಯಾದ ಹೊರತಾಗಿ ರಮ್ಯಾ ಅವರ ಹಾಜರಾತಿ ಎಲ್ಲಿಯೂ ಇರುತ್ತಿರಲಿಲ್ಲ. ಇದೀಗ ಹೆಚ್ಚೆಚ್ಚು ಅವರು ಜನರ ಹತ್ತಿರಕ್ಕೆ ಬರುತ್ತಿದ್ದಾರೆ. ಈ ಮೂಲಕ ಸಿನಿಮಾ ರಂಗಕ್ಕೆ ವಾಪಸ್ಸಾಗುವ ಸೂಚನೆಗಳನ್ನು ನೀಡುತ್ತಿದ್ದಾರೆ.

  • ಅಮೂಲ್ಯ ಸೀಮಂತದ ಪಾರ್ಟಿಗೆ ಸ್ಯಾಂಡಲ್‍ವುಡ್ ತಾರೆಯರ ಮೆರುಗು

    ಅಮೂಲ್ಯ ಸೀಮಂತದ ಪಾರ್ಟಿಗೆ ಸ್ಯಾಂಡಲ್‍ವುಡ್ ತಾರೆಯರ ಮೆರುಗು

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಅಮೂಲ್ಯರ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ಆಚರಿಸಲಾಗಿದೆ. ಇದೀಗ ಸ್ಯಾಂಎಲ್‍ವುಡ್ ತಾರೆಯರು ಅಮೂಲ್ಯ ಸೀಮಂತ ಪಾರ್ಟಿ ಮಾಡಿದ್ದಾರೆ. ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಅಮೂಲ್ಯರ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ಮನೆಯವರಲ್ಲೇ ಸೇರಿ ಮಾಡಿದ್ದರು. ಆ ಕಾರ್ಯಕ್ರಮದ ನಂತರ ಅಮೂಲ್ಯ ಸ್ನೇಹಿತರು ಸೇರಿ ಸಹ ಒಂದು ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಇದರಲ್ಲಿ ನಟಿಯರಾದ ರಮ್ಯಾ, ಭಾರತಿ ವಿಷ್ಣುವರ್ಧನ್, ಸುಧಾರಾಣಿ, ರಾಧಿಕಾ ಪಂಡಿತ್, ಶ್ರುತಿ, ಮಾಳವಿಕಾ ಅವಿನಾಶ್, ಗಣೇಶ್  ಮುಂತಾದರು ಭಾಗವಹಿಸಿದ್ದಾರೆ. ಈ ಫೋಟೋಗಳನ್ನು ಅಮೂಲ್ಯ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಧರ್ಮ ಮುಖ್ಯ ಎಂದು ಪರೀಕ್ಷೆಯನ್ನೇ ಬಹಿಷ್ಕರಿಸಿದ ಶಿವಮೊಗ್ಗ ವಿದ್ಯಾರ್ಥಿನಿಯರು

     

    View this post on Instagram

     

    A post shared by Amulya (@nimmaamulya)

    ಪಾರ್ಟಿಯನ್ನು ಬೆಂಗಳೂರಿನ ರೆಸಾರ್ಟ್ ಒಂದರಲ್ಲಿ ಆಯೋಜಿಸಲಾಗಿತ್ತು, ರಂಗು ರಂಗಿನಿಂದ ಕೂಡಿದ್ದ ಈ ಕಾರ್ಯಕ್ರಮ ಎಲ್ಲರ ಗಮನ ಸೆಳೆದಿದೆ. ಅಮೂಲ್ಯ ಲೈಟ್ ಪಿಂಕ್ ಬಣ್ಣದ ಗೌನ್ ಧರಿಸಿ ಮಿಂಚಿದ್ದಾರೆ. ವಿಭಿನ್ನ ಥೀಮ್‍ನಲ್ಲಿ ನಡೆದ ಈ ಪಾರ್ಟಿಯಲ್ಲಿ ಹಲವಾರು ಗಣ್ಯರು ಭಾಗವಹಿಸಿ, ಅಮೂಲ್ಯಗೆ ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ. ತುಂಬು ಗರ್ಭಿಣಿ ಅಮೂಲ್ಯಗೆ ವಿಧ-ವಿಧವಾದ ಗಿಫ್ಟ್‍ಗಳನ್ನು ನೀಡಿ, ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಕಂದಮ್ಮನ ಆಗಮನಕ್ಕಾಗಿ ಕಾಯ್ತಿದ್ದೇನೆ- ಅಮೂಲ್ಯಗೆ ಹರಿಪ್ರಿಯಾ ವಿಶ್

     

    View this post on Instagram

     

    A post shared by Amulya (@nimmaamulya)

    ಅಮೂಲ್ಯ 2017ರಲ್ಲಿ ಜಗದೀಶ್ ಅವರ ಜೊತೆ ಸಪ್ತಪದಿ ತುಳಿದಿದ್ದರು. ಅಮೂಲ್ಯ ಜಗದೀಶ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಸುದ್ದಿಯನ್ನು ಅಭಿಮಾನಿಗಳಿಗೆ ಇನ್ಸ್ಟಾಗ್ರಾಂ ಮೂಲಕ ತಿಳಿಸಿದ್ದರು.

  • ಕಂದಮ್ಮನ ಆಗಮನಕ್ಕಾಗಿ ಕಾಯ್ತಿದ್ದೇನೆ- ಅಮೂಲ್ಯಗೆ ಹರಿಪ್ರಿಯಾ ವಿಶ್

    ಕಂದಮ್ಮನ ಆಗಮನಕ್ಕಾಗಿ ಕಾಯ್ತಿದ್ದೇನೆ- ಅಮೂಲ್ಯಗೆ ಹರಿಪ್ರಿಯಾ ವಿಶ್

    ಬೆಂಗಳೂರು: ಸ್ಯಾಂಡಲ್‍ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಇಂದು ನಟಿ ಹರಿಪ್ರಿಯಾ ಅವರು ಶುಭಕೋರಿದ್ದಾರೆ.

    ತುಂಬು ಗರ್ಭಿಣಿ ಅಮೂಲ್ಯ ಜೊತೆಗಿನ ಫೋಟೋದೊಂದಿಗೆ ಇನ್ ಸ್ಟಾಗೆ ಅಪ್ಲೋಡ್ ಮಾಡಿರುವ ಹರಿಪ್ರಿಯಾ, ತಾಯಿಯಾಗುತ್ತಿರುವ ಅಮೂಲ್ಯಗೆ ಶುಭಾಶಯಗಳು. ಪುಟ್ಟ ಕಂದಮ್ಮನ ಆಗಮನಕ್ಕಾಗಿ ಕಾಯುತ್ತಿದ್ದು, ಮಗುವನ್ನು ನೋಡಲು ಉತ್ಸುಕಳಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Hariprriya (@iamhariprriya)

     

    ಕೆಲ ದಿನಗಳ ಹಿಂದೆಯಷ್ಟೇ ಅಮೂಲ್ಯ ಹಾಗೂ ಪತಿ ಜಗದೀಶ್ ವಿಜಯನಗರದ ಆದಿಚುಂಚನಗಿರಿ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಈ ಸಂದರ್ಭದಲ್ಲಿ ಸ್ವಾಮೀಜಿ ಅವರಿಂದ ಭಗವದ್ಗೀತೆ ಗ್ರಂಥವನ್ನು ಪಡೆದಿದ್ದು, ಮನಸ್ಸಿಗೆ ಸಂತೋಷ ನೀಡಿತು ಎಂದು ನಟಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು. ಇದನ್ನೂ ಓದಿ: ತುಂಬು ಗರ್ಭಿಣಿ ಅಮೂಲ್ಯಾ ಜೊತೆ ಗೋಲ್ಡನ್ ಸ್ಟಾರ್ ಪತ್ನಿ -ಫೋಟೋ ವೈರಲ್

    2017ರಲ್ಲಿ ಜಗದೀಶ್ ಜೊತೆ ಅಮೂಲ್ಯ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆ ಬಳಿಕ ಅವರು ಸಿನಿಮಾಗಳಿಗಿಂತಲೂ ಹೆಚ್ಚಾಗಿ ಕುಟುಂಬದ ಕಡೆಗೆ ಜಾಸ್ತಿ ಗಮನ ನೀಡಿದ್ದರು. ಇದೀಗ ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದು, ತಮ್ಮನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಲು ಬರುತ್ತಿರುವ ಗೆಳೆಯರ ಜೊತೆ ಫೋಟೋ ತೆಗೆಸಿಕೊಂಡು ಅದನ್ನು ತಮ್ಮ ಸೋಶಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

  • ಆದಿಚುಂಚನಗಿರಿ ಶ್ರೀಗಳ ಆಶೀರ್ವಾದ ಪಡೆದ ತುಂಬು ಗರ್ಭಿಣಿ ಅಮೂಲ್ಯ

    ಆದಿಚುಂಚನಗಿರಿ ಶ್ರೀಗಳ ಆಶೀರ್ವಾದ ಪಡೆದ ತುಂಬು ಗರ್ಭಿಣಿ ಅಮೂಲ್ಯ

    ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಮತ್ತು ಜಗದೀಶ್ ದಂಪತಿ ಇಂದು ವಿಜಯನಗರದ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    ಇಂದು ವಿಜಯನಗರದ ಶ್ರೀ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆಯಲಾಯಿತು. ಈ ಸಂದರ್ಭದಲ್ಲಿ ಸ್ವಾಮೀಜಿ ಅವರಿಂದ ಭಗವದ್ಗೀತೆ ಗ್ರಂಥವನ್ನು ಪಡೆದಿದ್ದು, ಮನಸ್ಸಿಗೆ ಸಂತೋಷ ನೀಡಿತು ಎಂದು ತಿಳಿಸಿದ್ದಾರೆ.

    2017ರಲ್ಲಿ ಜಗದೀಶ್ ಜೊತೆ ಅಮೂಲ್ಯ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾಗಳಿಗಿಂತಲೂ ಹೆಚ್ಚಾಗಿ ಕುಟುಂಬದ ಕಡೆಗೆ ಜಾಸ್ತಿ ಗಮನ ನೀಡುತ್ತಿದ್ದಾರೆ. ತಾವು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇರುವ ವಿಚಾರವನ್ನು ಕೆಲವೇ ದಿನಗಳ ಹಿಂದೆ ಅಮೂಲ್ಯ ಮತ್ತು ಜಗದೀಶ್ ದಂಪತಿ ತಿಳಿಸಿದ್ದರು. ಇದನ್ನೂ ಓದಿ:  ಬಿಕಿನಿ ಫೋಟೋಗೆ ಕಾಮೆಂಟ್ ಮಾಡಿದ್ದ ಅರ್ಜುನ್‍ಗೆ ಚೋರ್ ಎಂದ ಮಲೈಕಾ

    ಕೆಲವು ದಿನಗಳ ಹಿಂದೆ ಅಮೂಲ್ಯ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದರು. ಅದ್ದೂರಿಯಾಗಿ ಸೀಮಂತ ಶಾಸ್ತ್ರ ನಡೆದಿದೆ. ಸೀಮಂತದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಾಡಿದ್ದರು. ಇದನ್ನೂ ಓದಿ:  ಸಖತ್ ಹಾಟ್ ಫೋಟೋಗಳಿಂದ ಮೋಡಿ ಮಾಡಿದ ರಾಯ್ ಲಕ್ಷ್ಮೀ

  • ತುಂಬು ಗರ್ಭಿಣಿ ಅಮೂಲ್ಯಾ ಜೊತೆ ಗೋಲ್ಡನ್ ಸ್ಟಾರ್ ಪತ್ನಿ -ಫೋಟೋ ವೈರಲ್

    ತುಂಬು ಗರ್ಭಿಣಿ ಅಮೂಲ್ಯಾ ಜೊತೆ ಗೋಲ್ಡನ್ ಸ್ಟಾರ್ ಪತ್ನಿ -ಫೋಟೋ ವೈರಲ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅಮೂಲ್ಯಾ ಅವರು ತುಂಬು ಗರ್ಭಿಣಿಯಾಗಿದ್ದಾರೆ. ಅಮೂಲ್ಯಯವರ ಜೊತೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ಅವರು ಫೋಟೋಗಳಿಗೆ ಪೋಸ್ ಕೊಟ್ಟಿದ್ದು, ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ನಟಿ ಅಮೂಲ್ಯ ಮತ್ತು ಶಿಲ್ಪಾ ಗಣೇಶ್ ನಡುವೆ ಉತ್ತಮ ಬಾಂಧವ್ಯ ಇದೆ. ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಅಮೂಲ್ಯ ಜೊತೆ ಶಿಲ್ಪಾ ಗಣೇಶ್ ಅವರು ಫೋಟೋ ಕ್ಲಿಕ್ಕಿಸಿಕೊಂಡು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    2017ರಲ್ಲಿ ಜಗದೀಶ್ ಜೊತೆ ಅಮೂಲ್ಯ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾಗಳಿಗಿಂತಲೂ ಹೆಚ್ಚಾಗಿ ಕುಟುಂಬದ ಕಡೆಗೆ ಜಾಸ್ತಿ ಗಮನ ನೀಡುತ್ತಿದ್ದಾರೆ. ತಾವು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇರುವ ವಿಚಾರವನ್ನು ಕೆಲವೇ ದಿನಗಳ ಹಿಂದೆ ಅಮೂಲ್ಯ ಮತ್ತು ಜಗದೀಶ್ ದಂಪತಿ ತಿಳಿಸಿದ್ದರು. ಇದನ್ನೂ ಓದಿ: ದೀಪಿಕಾ ಪಡುಕೋಣೆಯನ್ನು ಸಮರ್ಥಿಸಲು ಬಂದಿಲ್ಲ: ಕಂಗನಾ ರಣಾವತ್

    ವಿಶೇಷ ಫೋಟೋಶೂಟ್ ಮೂಲಕ ಸಿಹಿ ಸುದ್ದಿ ಹಂಚಿಕೊಂಡಿದ್ದರು. ಕೆಲವು ದಿನಗಳ ಹಿಂದೆ ಅಮೂಲ್ಯ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದರು. ಅದ್ದೂರಿಯಾಗಿ ಸೀಮಂತ ಶಾಸ್ತ್ರ ನಡೆದಿದೆ. ಸೀಮಂತದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಾಡಿದ್ದರು. ಇದನ್ನೂ ಓದಿ: ನಮ್ಮಲ್ಲೇ ಒಳ್ಳೊಳ್ಳೆಯ ನಟಿಯರಿದ್ದಾರೆ, ಕನ್ನಡ ಪ್ರತಿಭೆಗಳಿಗೆ ಅವಕಾಶ ಕೊಡಿ: ಶಿವಣ್ಣ

    ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಟಿ ಅಮೂಲ್ಯ ಕುಟುಂಬದ ನಡುವೆ ಒಡನಾಟ ಇದೆ. ಹಲವು ವಿಶೇಷ ಸಂದರ್ಭಗಳಲ್ಲಿ ಈ ಎರಡೂ ಕುಟುಂಬದ ಸದಸ್ಯರು ಜೊತೆಯಾಗಿ ಸೇರುತ್ತಾರೆ. ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ ಅಮೂಲ್ಯ ಚೆಲುವಿನ ಚಿತ್ತಾರ, ನಾನು ನನ್ನ ಕನಸು, ಗಜ ಕೇಸರಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.

  • ಅದ್ದೂರಿಯಾಗಿ ಜರುಗಿದ ಅಮೂಲ್ಯ ಸೀಮಂತ ಶಾಸ್ತ್ರ!

    ಅದ್ದೂರಿಯಾಗಿ ಜರುಗಿದ ಅಮೂಲ್ಯ ಸೀಮಂತ ಶಾಸ್ತ್ರ!

    ಬೆಂಗಳೂರು: ಚಂದನವನದ ಐಸು ಅಮೂಲ್ಯ ಸೀಮಂತ ಶಾಸ್ತ್ರ ಇಂದು ಅದ್ದೂರಿಯಾಗಿ ಜರುಗಿದೆ.

    ಐಸು ಎಂದೇ ಖ್ಯಾತಿ ಹೊಂದಿರುವ ಅಮೂಲ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಇಂದು ಹಸಿರು ಥೀಮ್ ನಲ್ಲಿ ಅದ್ದೂರಿಯಾಗಿ ಸೀಮಂತ ಶಾಸ್ತ್ರ ನಡೆದಿದೆ. ಸೀಮಂತದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಫೋಟೋದಲ್ಲಿ ಅಮೂಲ್ಯ ಕ್ಯೂಟ್ ಆಗಿ ಕಾಣುತ್ತಿದ್ದಾರೆ.

    ಫೋಟೋದಲ್ಲಿ ಅಮೂಲ್ಯ ಪತಿ ಜಗದೀಶ್ ಮತ್ತು ಕುಟುಂಬಸ್ಥರು ಇದ್ದು, ಹೂಗಳಿಂದ ಸಿಗರಗೊಂಡಿರುವ ವೇದಿಕೆ ಮೇಲೆ ಅಮೂಲ್ಯ ಕುಳಿತುಕೊಂಡಿದ್ದಾರೆ. ಹೂಗಳಿಂದ ಗಿಳಿಗಳನ್ನು ಮಾಡಿದ್ದು, ಅಲಂಕಾರ ಸಖತ್ ಆಗಿದೆ. ಇದನ್ನೂ ಓದಿ: ಬೇಬಿ ಬಂಪ್ ಫೋಟೋಶೂಟ್‍ನಲ್ಲಿ ನಟಿ ಅಮೂಲ್ಯ

    ಕಳೆದ ವಾರ ತುಂಬು ಗರ್ಭಿಣಿಯಾಗಿರುವ ಅಮೂಲ್ಯ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಾಡಿದ್ದರು.

    ತಾವು ತಾಯಿಯಾಗುತ್ತಿರುವ ವಿಚಾರವನ್ನು ಸ್ವತಃ ಅಮೂಲ್ಯ ಅವರೇ ತಿಳಿಸಿದ್ದರು. ಪತಿ ಜಗದೀಶ್ ಜೊತೆ ಇರುವ ಒಂದು ವಿಶೇಷ ಫೋಟೋವನ್ನು ಹಂಚಿಕೊಂಡು ಸದ್ಯ ನಾವು ಈಗ ಇಬ್ಬರಲ್ಲ. 2022ರಲ್ಲಿ ಮೂವರಾಗುತ್ತಿದ್ದೇವೆ ಎಂದು ಬರೆದುಕೊಂಡಿದ್ದರು. ಇದೀಗ ಬೇಬಿ ಬಂಪ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕಿಟ್‌ಕ್ಯಾಟ್ ರ‍್ಯಾಪರ್‌ನಲ್ಲಿ ಲಾರ್ಡ್ ಪುರಿ ಜಗನ್ನಾಥ ಫೋಟೋ – ಪ್ಯಾಕ್‌ಗಳನ್ನು ಹಿಂತೆಗೆದುಕೊಂಡ ನೆಸ್ಲೆ ಇಂಡಿಯಾ