Tag: amulya Jagadish

  • ಅವಳಿ ಮಕ್ಕಳೊಂದಿಗೆ ಅಣ್ಣಮ್ಮ ದೇವಸ್ಥಾನಕ್ಕೆ ನಟಿ ಅಮೂಲ್ಯ ಭೇಟಿ

    ಅವಳಿ ಮಕ್ಕಳೊಂದಿಗೆ ಅಣ್ಣಮ್ಮ ದೇವಸ್ಥಾನಕ್ಕೆ ನಟಿ ಅಮೂಲ್ಯ ಭೇಟಿ

    ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ ತಮ್ಮ ಅವಳಿ ಮಕ್ಕಳಿಗೆ ಮೂರು ತಿಂಗಳು ಸಮೀಪಿಸುತ್ತಿದೆ ಎಂದು ಬೆಂಗಳೂರಿನ ಅಣ್ಣಮ್ಮ ದೇಗುಲಕ್ಕೆ ಭೇಟಿ ನೀಡಿ, ದೇವಿದೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    `ಚೆಲುವಿನ ಚಿತ್ತಾರ’ ಚಿತ್ರದ ಮೂಲಕ ನಾಯಕಿಯಾಗಿ ಜನಮನಗೆದ್ದ ನಟಿ ಅಮೂಲ್ಯ, ಸಾಕಷ್ಟು ಚಿತ್ರಗಳ ಮೂಲಕ ಸ್ಟಾರ್‌ಗಳ ಜತೆ ನಟಿಸಿ ಸೈ ಎನಿಸಿಕೊಂಡವರು. ಬೇಡಿಕೆ ಇರುವಾಗಲೇ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡು ಮದುವೆ ಸಂಸಾರ ಅಂತಾ ಬ್ಯುಸಿಯಾಗಿ ಬಿಟ್ಟರು. ಇದೀಗ ಪತಿ ಜಗದೀಶ್ ಚಂದ್ರ ಮತ್ತು ಅವಳಿ ಗಂಡು ಮಕ್ಕಳೊಂದಿಗೆ ಅಣ್ಣಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ರಜನಿಕಾಂತ್ ನನ್ನ ವೈರಿಯಲ್ಲ ಎಂದ ಕಮಲ್ ಹಾಸನ್

    ಇಂದು ನಮ್ಮ ಮಕ್ಕಳಿಗೆ ಮೂರು ತಿಂಗಳು ಸಮೀಪಿಸುತ್ತಿರುವ ಶುಭ ಸಂದರ್ಭದಲ್ಲಿ, ಗಾಂಧಿನಗರದ ಮೆಜೆಸ್ಟಿಕ್‌ನಲ್ಲಿರುವ ನಗರ ದೇವತೆ, ಬೆಂಗಳೂರು ತಾಯಿ ಶ್ರೀ ಅಣ್ಣಮ್ಮ ದೇವಿಯ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ, ಪೂಜೆ ಸಲ್ಲಿಸಿ ದೇವಿಯ ಆರ್ಶೀವಾದ ಪಡೆಯಲಾಯಿತು ಎಂದು ನಟಿ ಅಮೂಲ್ಯ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  • ಗೋಲ್ಡನ್ ಕ್ವೀನ್ ತಾಯ್ತನದ ಜರ್ನಿಗೆ ಎರಡು ತಿಂಗಳು: ಅಮೂಲ್ಯ ಭಾವನಾತ್ಮಕ ಮಾತು

    ಗೋಲ್ಡನ್ ಕ್ವೀನ್ ತಾಯ್ತನದ ಜರ್ನಿಗೆ ಎರಡು ತಿಂಗಳು: ಅಮೂಲ್ಯ ಭಾವನಾತ್ಮಕ ಮಾತು

    ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ ಅವಳಿ ಗಂಡು ಮಕ್ಕಳಿಗೆ ತಾಯಿಯಾಗಿ ತಾಯ್ತನದ ಖುಷಿಯನ್ನು ಅನುಭವಿಸುತ್ತಿದ್ದಾರೆ. ಎರಡು ತಿಂಗಳ ತಾಯ್ತನದ ಖುಷಿಯಲ್ಲಿ ಈ ಹಿಂದಿನ ತಮ್ಮ ಬೇಬಿ ಬಂಪ್ ಫೋಟೋಶೂಟ್‌ನ ಈಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    `ಚೆಲುವಿನ ಚಿತ್ತಾರ’ ಚಿತ್ರದ ಮೂಲಕ ಚಂದನವನಕ್ಕೆ ಪರಿಚಿತರಾದ ನಟಿ ಅಮೂಲ್ಯ, ಸಾಕಷ್ಟು ಸಿನಿಮಾಗಳ ಮೂಲಕ ಛಾಪು ಮೂಡಿಸಿದ್ರು. ಬಳಿಕ ಜಗದೀಶ್ ಆರ್ ಚಂದ್ರ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಚಿತ್ರರಂಗದಿಂದ ಅಂತರ ಕಾಯ್ದುಕೊಂಡ್ರು. ಈಗ ಸಂಸಾರ, ತಮ್ಮ ಅವಳಿ ಮಕ್ಕಳ ಜತೆ ಖುಷಿಯಿಂದ ಕಾಲಕಳೆಯುತ್ತದ್ದಾರೆ. ಇದೀಗ ಅಮೂಲ್ಯ ತಮ್ಮ ಬೇಬಿ ಬಂಪ್ ಫೋಟೋಶೂಟ್ ಜತೆಗೆ ತಮ್ಮ ಮಕ್ಕಳ ಕುರಿತು ಎಮೋಷನಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಮಾರ್ಚ್ ಒಂದಕ್ಕೆ ಮಹಾಶಿವರಾತ್ರಿಯಂದು ಅವಳಿ ಮಕ್ಕಳಿಗೆ ಅಮೂಲ್ಯ ತಾಯಿಯಾಗಿದ್ದರು. ಇದೀಗ ಪೋಸ್ಟ್‌ನಲ್ಲಿ ತಾಯ್ತನದ ಎರಡು ತಿಂಗಳು ಇಂದಿಗೆ, ಇದು ಖಂಡಿತವಾಗಿ ನನ್ನ ಜೀವನದ ಮುಖ್ಯ ಪ್ರಯಾಣವಾಗಿದೆ. ನಾನು ಅವಳಿ ಮಕ್ಕಳಿಗೆ ತಾಯಿಯಾಗಲಿದ್ದೇನೆ ಎಂದು ಕೇಳಿದಾಗ, ನನ್ನ ಹೃದಯ ಬಡಿತ ತಪ್ಪಿಸಿತು. ನನ್ನ ಗರ್ಭಾವಸ್ಥೆಯ ಎಲ್ಲಾ ಸವಾಲುಗಳನ್ನು ಮರೆತುಬಿಡುವಂತೆ ಮಾಡಿತ್ತು. ಜತೆಗೆ ನಾನು ಈಗಾಗಲೇ ನನ್ನ ಬಂಪ್‌ನ್ನು ಕಳೆದುಕೊಂಡಿದ್ದೇನೆ. ತಾಯಿಯು ಜಗತ್ತಿಗೆ ಕೆಚ್ಚೆದೆಯ ಮುಖವನ್ನು ತೋರಿಸುತ್ತಾಳೆ. ಆಕೆಯ ಕಷ್ಟದ ಹಾದಿ ಅವಳಿಗೆ ಮಾತ್ರ ಗೊತ್ತು. ಇದನ್ನೂ ಓದಿ: ʻಆಕಾಶ್ʼ ಚಿತ್ರಕ್ಕೆ 17 ವರ್ಷ : ಈ ಸಿನಿಮಾದ ಹಿಂದಿದೆ ಇಂಟ್ರಸ್ಟಿಂಗ್ ಸ್ಟೋರಿ

     

    View this post on Instagram

     

    A post shared by Amulya (@nimmaamulya)

    ಕೊನೆಯಲ್ಲಿ ನನ್ನ ಪುಟ್ಟ ಮಕ್ಕಳ ಪಾದಗಳನ್ನು ನೋಡಿ..ಖಂಡಿತಾ ಮಕ್ಕಳಿಗೆ ನನ್ನ ಕೈಲಾದಷ್ಟು ಸೇವೆ ಮಾಡಿದ್ದೇನೆ ಮುಂದೆ ಹೀಗೆ ಮುಂದೆವರೆಸಿಕೊಂಡು ಹೋಗುತ್ತೇನೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಇನ್ನು ಈ ಹಿಂದಯೇ ಮಾಡಲಾಗಿದ್ದ ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಅಮೂಲ್ಯ ಗ್ರೀನ್ ಕಲರ್ ಸೀರೆನಲ್ಲಿ ರಾಣಿಯಂತೆ ಕಾಣಿಸಿಕೊಂಡಿದ್ದಾರೆ. ಸದ್ಯ ಅಮೂಲ್ಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

  • ಕೆಜಿಎಫ್‍ಗಾಗಿ ಕುಟುಂಬಕ್ಕೆ 25 ಟಿಕೆಟ್ ಬುಕ್ ಮಾಡಿದ್ರು ನಟಿ..!

    ಕೆಜಿಎಫ್‍ಗಾಗಿ ಕುಟುಂಬಕ್ಕೆ 25 ಟಿಕೆಟ್ ಬುಕ್ ಮಾಡಿದ್ರು ನಟಿ..!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾವನ್ನು ಈಗಾಗಲೇ ನಟ-ನಟಿಯರು, ನಿರ್ದೇಶಕರು ಸೇರಿದಂತೆ ಸಿನಿಮಾರಂಗದವರು ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಈಗ ಸ್ಯಾಂಡಲ್‍ವುಡ್ ನ ನಟಿಯೊಬ್ಬರು ಅಭಿಮಾನಿಯಾಗಿ ಇಡೀ ಕುಟುಂಬಕ್ಕೆ 25 ಟಿಕೆಟ್ ಬುಕ್ ಮಾಡಿ ಸಿನಿಮಾ ನೋಡಿದ್ದಾರೆ.

    ನಟಿ ಅಮೂಲ್ಯ ಜಗದೀಶ್ ಅವರು ತಮ್ಮ ಕುಟುಂಬಕ್ಕಾಗಿ 25 ಟಿಕಿಟ್ ಬುಕ್ ಮಾಡಿ ‘ಕೆಜಿಎಫ್’ ಸಿನಿಮಾ ನೋಡಿದ್ದಾರೆ. ಈ ಬಗ್ಗೆ ಅಮೂಲ್ಯ ಅವರೇ ಟ್ವೀಟ್ ಮಾಡಿ ಹೇಳಿಕೊಂಡಿದ್ದಾರೆ.

    ಟ್ವೀಟ್ ನಲ್ಲೇನಿದೆ..?
    ನಟಿ ಅಮೂಲ್ಯ, “ಮೊದಲ ಬಾರಿಗೆ ಕನ್ನಡ ಅಭಿಮಾನಿಯಾಗಿ ನನ್ನ ಇಡೀ ಕುಟುಂಬಕ್ಕೆ 25 ಟಿಕೆಟ್ ಬುಕ್ ಮಾಡಿ ಕೆಜಿಎಫ್ ಸಿನಿಮಾ ನೋಡಿದೆ. ಕನ್ನಡ ಇಂಡಸ್ಟ್ರಿಯನ್ನು ಒಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಕ್ಕಾಗಿ ಇಡೀ ‘ಕೆಜಿಎಫ್’ ಚಿತ್ರತಂಡಕ್ಕೆ hats off .. ‘ಕೆಜಿಎಫ್’ ಸಿನಿಮಾ ನಮಗೆ ಹೆಮ್ಮೆ ತಂದಿದೆ. ಕೆಜಿಎಫ್ ನ ಚಾಪ್ಟರ್ 2ಗಾಗಿ ಕಾಯುತ್ತಿರುವೆ” ಎಂದು ಬರೆದು ಅವರು ಬುಕ್ ಮಾಡಿದ್ದ ಟಿಕೆಟ್ ಫೋಟೋ ಜೊತೆ ಟ್ವೀಟ್ ಮಾಡಿದ್ದಾರೆ.

    ಈಗಾಗಲೇ ‘ಕೆಜಿಎಫ್’ ಸಿನಿಮಾ ಭಾರತದಾದ್ಯಂತ ಹವಾ ಕ್ರಿಯೆಟ್ ಮಾಡಿದೆ. ಕೆಜಿಎಫ್ ಸಿನಿಮಾ ಪಂಚಭಾಷೆಯಲ್ಲಿ 2000ಕ್ಕೂ ಅಧಿಕ ಚಿತ್ರಮಂದಿರಲ್ಲಿ ಬಿಡುಗಡೆಗೊಂಡು ಅಪಾರ ಮೆಚ್ಚುಗೆಯನ್ನು ಗಳಿಸುತ್ತಿದೆ. ಬಿಡುಗಡೆಯಾದ ಐದು ದಿನದಲ್ಲಿಯೇ 100 ಕೋಟಿ ರೂ. ಗಳಿಸಿದ್ದು, ಈ ಮೂಲಕ ನೂರು ಕೋಟಿ ಕ್ಲಬ್ ಪಟ್ಟಿಗೆ ಸೇರಿದ ಮೊದಲ ಕನ್ನಡ ಸಿನಿಮಾವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತಿ, ಮಾವ, ಅತ್ತೆ ಜೊತೆ ಅಮೂಲ್ಯ ಜಗದೀಶ್ ವೋಟ್

    ಪತಿ, ಮಾವ, ಅತ್ತೆ ಜೊತೆ ಅಮೂಲ್ಯ ಜಗದೀಶ್ ವೋಟ್

    ಬೆಂಗಳೂರು: ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಈ ಮೂರೂ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ರಾಜರಾಜೇಶ್ವರಿನಗರದಲ್ಲಿ ಇಂದು ಮತದಾನ ನಡೆಯುತ್ತಿದ್ದು, ಅಮೂಲ್ಯ ಜಗದೀಶ್ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ್ದಾರೆ.

    ಸದ್ಯಕ್ಕೆ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸುಗಮ ಮತದಾನ ನಡೆಯುತ್ತಿದೆ. 11 ಗಂಟೆ ಹೊತ್ತಿಗೆ ಶೇಕಡಾ 10ಕ್ಕೂ ಹೆಚ್ಚು ಮತದಾನ ಆಗಿದೆ. ಬಿಇಟಿ ಕಾನ್ವೆಂಟ್ ಸ್ಕೂಲ್ ನಲ್ಲಿ ಮತದಾನ ಮಾಡುವುದಕ್ಕೆ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಬಂದಿದ್ದರು. ರಾಮಚಂದ್ರ ಜೊತೆ ಮಗ ಜಗದೀಶ್, ಸೊಸೆ ಅಮೂಲ್ಯ ಹಾಗು ಕುಟುಂಬ ವರ್ಗದವರು ಬಂದು ಮತದಾನ ಮಾಡಿದ್ದಾರೆ.

    ಮದುವೆ ಆದಮೇಲೆ ಇದೇ ಮೊದಲ ಬಾರಿಗೆ ಪತಿ ಜಗದೀಶ್ ಜೊತೆ ಬಂದು ನಟಿ ಅಮೂಲ್ಯ ಮತ ಚಲಾಯಿಸಿದ್ದಾರೆ. ಮತ ಚಲಾಯಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅಮೂಲ್ಯ ಜಗದೀಶ್, ಇದು ನಮ್ಮ ಹಕ್ಕು, ನಮ್ಮ ಹಕ್ಕನ್ನು ನಾವೇ ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಒಂದೇ ವೇಳೆ ನಾವು ಅದನ್ನು ಉಪಯೋಗಿಸಿಕೊಳ್ಳಲಿಲ್ಲ ಅಂದರೆ ಬೇರೆಯವರು ಬೇರೆ ಬೇರೆ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ಪರಿಸ್ಥಿತಿ ಬರುತ್ತವೆ. ಹಾಗಾಗಿ ನಮ್ಮ ಹಕ್ಕನ್ನು ನಾವೇ ಯಾರಿಗೂ ಬಿಟ್ಟುಕೊಡದೆ ನಾವೇ ಮತದಾನ ಮಾಡೋಣ. ಆದ್ದರಿಂದ ಒಬ್ಬ ಒಳ್ಳೆ ವ್ಯಕ್ತಿಯನ್ನು ಶಾಸಕರಾಗಿ ಆರ್ ಆರ್ ನಗರಕ್ಕೆ ಆಯ್ಕೆ ಮಾಡಿ. ಎಲ್ಲರೂ ವೋಟ್ ಮಾಡಿ ಎಂದು ಹೇಳಿದ್ದಾರೆ.

    ಕ್ಷೇತ್ರವನ್ನು ಗೆದ್ದು ವಿಧಾನಸಭಾ ಸದಸ್ಯ ಬಲವನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ಹಪಹಪಿಸುತ್ತಿದ್ರೆ, ಮತ್ತೊಂದು ಕಡೆ ಮೈತ್ರಿಕೂಟದ ಜೆಡಿಎಸ್ ಹಾಗೂ ಕಾಂಗ್ರೆಸ್ ಪ್ರತ್ಯೇಕವಾಗಿ ಕಣಕ್ಕಿಳಿದಿವೆ. ಇಂದು ಬೆಳಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ಮತದಾನ ನಡೆಯಲಿದೆ. ಆರ್ ಆರ್ ನಗರದಲ್ಲಿ 4 ಲಕ್ಷದ 71 ಸಾವಿರದ 459 ಮತದಾರರಿದ್ದು, ಒಟ್ಟು 421 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

  • ತೆನೆ ಹೊತ್ತ ಮಹಿಳೆಗೆ ಜೈ ಎಂದ ನಟಿ ಅಮೂಲ್ಯ ಜಗದೀಶ್

    ತೆನೆ ಹೊತ್ತ ಮಹಿಳೆಗೆ ಜೈ ಎಂದ ನಟಿ ಅಮೂಲ್ಯ ಜಗದೀಶ್

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದ್ದು, ಈಗಾಗಲೇ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿವೆ.

    ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ತಮಗೆ ಟಿಕೆಟ್ ಸಿಗಲಿಲ್ಲ ಎಂದು ಮತ್ತೊಂದು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಈಗ ಚಿತ್ರ ನಟಿ ಅಮೂಲ್ಯರವರ ಮಾವ ಮಾಜಿ ಕಾರ್ಪೋರೇಟರ್ ರಾಮಚಂದ್ರ ಬೆಂಗಳೂರಿನ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ, ಅವರು ಈಗ  ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

    ಜೆಡಿಎಸ್ ಕಚೇರಿಯಲ್ಲಿ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಕೂಡಾ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಈ ವೇಳೆ ಮಾತನಾಡಿದ ಅಮೂಲ್ಯ, ನಾನು ನನ್ನ ಪತಿ ಮತ್ತು ಮಾವ ಅವರ ಜೊತೆ ಪಕ್ಷ ಸೇರ್ಪಡೆ ಆಗಿದ್ದೀನಿ. ಮುಂದಿನ ದಿನಗಳಲ್ಲಿ ಪಕ್ಷದ ಪ್ರಚಾರದಲ್ಲಿ ಭಾಗಿಯಾಗುತ್ತೇನೆ ಎಂದು ಅಮೂಲ್ಯ ತಿಳಿಸಿದ್ದಾರೆ.

    ನಾನು ಪಕ್ಷಕ್ಕಾಗಿ ದುಡಿಯುತ್ತೇನೆ. ಆರ್ ಆರ್ ನಗರಕ್ಕೆ ಟಿಕೆಟ್ ಕೊಡೋದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಟಿಕೆಟ್ ನೀಡಿದರೆ ಸ್ಪರ್ಧಿಸಿ ಗೆಲ್ಲುತ್ತೇನೆ ಎಂದು ರಾಮಚಂದ್ರ ಅವರು ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಅಲ್ಲಿ ಟಿಕೆಟ್ ಸಿಕ್ಕದ ಹಿನ್ನೆಲೆಯಲ್ಲಿ ಚಿಕ್ಕಪೇಟೆಯ ಹೇಮಚಂದ್ರಸಾಗರ್ ಮತ್ತು ಸಿ.ವಿ ರಾಮನ್ ನಗರದ ರಮೇಶ್ ಜೆಡಿಎಸ್ ಸೇರ್ಪಡೆಯಾದರು.

    ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ, ದಿನೇ ದಿನೇ ಪಕ್ಷದ ಶಕ್ತಿಯನ್ನು ಕಾರ್ಯಕರ್ತರು ಹೆಚ್ಚಿಸಿದ್ದಾರೆ. ಸಾಕಷ್ಟು ಜನ ಪಕ್ಷಕ್ಕೆ ಬಂದು ಸೇರುತ್ತಾ ಇದ್ದಾರೆ. ಈ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡೇ ಮಾಡುತ್ತಾರೆ. ನಾಳೆಯೂ ಸಾಕಷ್ಟು ಜನ ಜೆಡಿಎಸ್ ಸೇರ್ಪಡೆಯಾಗುತ್ತಾರೆ. ರಾಯಚೂರು ಹುಬ್ಬಳ್ಳಿ ಬಂಡಾಯ ಎದ್ದವರು ಬರುತ್ತಾರೆ. ಬೆಂಗಳೂರು ಒಂದರಲ್ಲೇ 8 ರಿಂದ 10 ಸೀಟು ಗೆಲ್ಲುತ್ತೇವೆ. ಇವತ್ತಿನ ಬೆಳವಣಿಗೆ ನೋಡಿದರೆ ಜೆಡಿಎಸ್ ಗೆ ಒಳ್ಳೆಯ ಕಾಲ ಬಂದಿದೆ ಎಂದು ತಿಳಿಸಿದರು.

    ಇದೇ ವೇಳೆ ಕುಮಾರಸ್ವಾಮಿ ವಿರುದ್ಧ ಕುರುಬರ ಸಂಘ ಪ್ರತಿಭಟನೆ ವಿಚಾರ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ದೇವೇಗೌಡ, ನಾನು ಕುರುಬ ಸಮುದಾಯವನ್ನು ಬೈಯೋದಿಲ್ಲ. ಆದರೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಫ್ಲೆಕ್ಸ್ ಗಳಿಗೆ ಚಪ್ಪಲಿಯಲ್ಲಿ ಹೊಡೆಸಿದ್ದಾರೆ. ಚಪ್ಪಲಿಯಿಂದ ನಮ್ಮ ಫ್ಲೆಕ್ಸ್ ಗಳಿಗೆ ಚಪ್ಪಲಿಯಿಂದ ಹೊಡೆಸಿದ್ದರೂ ನನಗೆ ಬೇಜಾರಿಲ್ಲ. ಒಳ್ಳೆಯದಾಗಲಿ ಎಂದರು.