Tag: Amulya Jagadeesh

  • ಅಮೂಲ್ಯ ಅತ್ತಿಗೆ ಸಖತ್ ಸ್ವೀಟ್- ಹೊಗಳಿದ ಭವ್ಯಾ ಗೌಡ

    ಅಮೂಲ್ಯ ಅತ್ತಿಗೆ ಸಖತ್ ಸ್ವೀಟ್- ಹೊಗಳಿದ ಭವ್ಯಾ ಗೌಡ

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಸ್ಪರ್ಧಿ ಭವ್ಯಾ ಗೌಡ (Bhavya Gowda) ಅವರು ಬಿಗ್ ಬಾಸ್ ಆಟ ಮುಗಿದ್ಮೇಲೆ ಮದುವೆ, ವೃತ್ತಿ ಜೀವನದ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇನ್ನೂ ‘ಚೆಲುವಿನ ಚಿತ್ತಾರ’ ಖ್ಯಾತಿಯ ನಟಿ ಅಮೂಲ್ಯ ಜೊತೆಗಿನ ಬಾಂಧವ್ಯದ ಬಗ್ಗೆ ಭವ್ಯಾ ಮಾತನಾಡಿದ್ದಾರೆ. ಅಮೂಲ್ಯ (Amulya) ಅತ್ತಿಗೆ ಸಖತ್ ಸ್ವೀಟ್ ಎಂದಿದ್ದಾರೆ.

    ಬಿಗ್ ಬಾಸ್‌ಗೆ ಹೋಗುವಾಗ ಜಗದೀಶ್ ಅಣ್ಣ ಮತ್ತು ಅಮೂಲ್ಯ ಅತ್ತಿಗೆ ಆಲ್ ದಿ ಬೆಸ್ಟ್ ಹೇಳಿದ್ರು. ನಾನ್ ಬಿಗ್ ಬಾಸ್‌ಗೆ ಹೋದ್ಮೇಲೆಯೂ ಅಮೂಲ್ಯ ಅತ್ತಿಗೆ ತುಂಬಾ ಸಪೋರ್ಟ್ ಮಾಡಿದ್ದಾರೆ. 2 ದಿನದಿಂದ ಅಂದುಕೊಳ್ಳುತ್ತೇಲೆ ಇದ್ದೇನೆ. ಅವರ ಮನೆಗೆ ಅಮೂಲ್ಯ ಅತ್ತಿಗೆ ಹಾಗೂ ಅಣ್ಣನ್ನು ಭೇಟಿಯಾಗಬೇಕು ಅಂತ. ಸದ್ಯದಲ್ಲೇ ಅವರನ್ನು ಭೇಟಿಯಾಗುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:ನಾನೊಬ್ಬರಿಗೆ ಪಾರ್ಟ್ನರ್ ಆಗಿದ್ದೇನೆ: ರಿಲೇಷನ್‌ಶಿಪ್ ಬಗ್ಗೆ ಮಾತನಾಡಿದ ರಶ್ಮಿಕಾ ಮಂದಣ್ಣ

    ಇನ್ನೂ ಅಮೂಲ್ಯ ಅತ್ತಿಗೆ ಯಾವಾತ್ತೂ ಆ್ಯಕ್ಟಿಂಗ್ ಹಾಗೇ ಮಾಡು ಹೀಗೆ ಎಂದು ಸಜೇಷನ್ ಕೊಟ್ಟಿಲ್ಲ. ಆದರೆ ನೀನು ಏನು ಮಾಡುತ್ತಿದ್ದಿಯೋ ಅದು ನಿನಿಗೆ ಗೊತ್ತಿರಬೇಕು. ಕೆಲಸದಲ್ಲಿ 100% ಕೊಡು ಒಂದಿಷ್ಟು ಸಲಹೆ ಕೊಟ್ಟಿದ್ದಾರೆ. ಅಮೂಲ್ಯ ಅತ್ತಿಗೆ ಸಖತ್ ಸ್ವೀಟ್, ಅದು ಎಲ್ಲರಿಗೂ ಗೊತ್ತು. ಅವರು ಸಖತ್ ಹಂಬಲ್, ಯಾರೇ ಮನೆಗೆ ಬಂದ್ರೂ ಖುಷಿಯಿಂದ ಮಾತನಾಡಿಸುತ್ತಾರೆ. ಜಗದೀಶ್ ಅಣ್ಣ ಹೇಳ್ತಾರೆ, ನಿಮಗೆ ಏನು ಹೇಳೋದು. ನಿಮ್ಮ ಮನೆಗೆ ನೀವೇ 4 ಜನ ಗಂಡು ಮಕ್ಕಳು ಅಂತ. ನೀವು ಬೆಳೆಯುತ್ತಿರುವ ರೀತಿ ಖುಷಿಯಿದೆ ಎಂದು ಸಾಕಷ್ಟು ಬಾರಿ ಹೇಳಿದ್ದಾರೆ. ನಮ್ಮ ಒಳ್ಳೆಯದನ್ನೇ ಅವರು ಬಯಸುತ್ತಾರೆ ಎಂದು ಭವ್ಯಾ ಹೇಳಿದ್ದಾರೆ.

    ಇನ್ನೂ ಭವ್ಯಾಗೆ ಸಂಬಂಧದಲ್ಲಿ ಜಗದೀಶ್ ಅವರು ಅಣ್ಣ ಆಗಬೇಕು, ದೊಡ್ಡಪ್ಪನ ಮಗ. ಅಮೂಲ್ಯ ಅವರು ಅತ್ತಿಗೆ ಆಗುತ್ತಾರೆ.

  • ಅಮೂಲ್ಯ ಅವಳಿ ಮಕ್ಕಳಿಗೆ ಆಶೀರ್ವದಿಸಿದ ಸಾಲು ಮರದ ತಿಮ್ಮಕ್ಕ

    ಅಮೂಲ್ಯ ಅವಳಿ ಮಕ್ಕಳಿಗೆ ಆಶೀರ್ವದಿಸಿದ ಸಾಲು ಮರದ ತಿಮ್ಮಕ್ಕ

    ಗೋಲ್ಡನ್ ಕ್ವೀನ್ ಅಮೂಲ್ಯ (Amulya) ಇತ್ತೀಚೆಗಷ್ಟೇ ತಮ್ಮ ಅವಳಿ ಮಕ್ಕಳ ನಾಮಕರಣ ಮಾಡಿದ್ದರು. ಇದೀಗ ನಟಿ ಅಮೂಲ್ಯ ಮನೆಗೆ ಸಾಲು ಮರದ ತಿಮ್ಮಕ್ಕ (Salu Marada Thimmakka) ಭೇಟಿ ನೀಡಿ, ಅಮೂಲ್ಯ ಮಕ್ಕಳಿಗೆ ಶುಭಹಾರೈಸಿದ್ದಾರೆ.

    ನಟಿ ಅಮೂಲ್ಯ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಗಮನ ಸೆಳೆದಿದ್ದರು. ಫೇಮ್ ಇರೋವಾಗಲೇ ಜಗದೀಶ್ (Jagadeesh) ಜೊತೆ ಹಸೆಮಣೆ ಏರಿದ್ದರು. ನಟನೆಯಿಂದ ದೂರ ಸರಿದು, ಸಂಸಾರ, ಮಕ್ಕಳ ಆರೈಕೆ ಅಂತಾ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವಳಿ ಮಕ್ಕಳಿಗೆ ಅದ್ದೂರಿಯಾಗಿ ನಾಮಕರಣ ಮಾಡಿದ್ದರು. ಅಥರ್ವ್ ಮತ್ತು ಆಧವ್ ಎಂದು ಹೆಸರಿಟ್ಟಿದ್ದಾರೆ.

     

    View this post on Instagram

     

    A post shared by Jagdish R Chandra (@jagdishrchandra)

    ಇದೀಗ ನಟಿ ಅಮೂಲ್ಯ ಸ್ವಗೃಹಕ್ಕೆ ವೃಕ್ಷ ಮಾತೆ ಸಾಲು ಮರ ತಿಮ್ಮಕ್ಕ ಭೇಟಿ ನೀಡಿದ್ದಾರೆ. ಅಮೂಲ್ಯ ಮಕ್ಕಳಿಗೆ ಶುಭಹಾರೈಸಿದ್ದಾರೆ. ಪದ್ಮಶ್ರೀ ಪ್ರಶಸ್ತಿ ವಿಜೇತೆ ತಿಮ್ಮಕ್ಕನವರು ಹಾರೈಸಿದ ಕ್ಷಣದ ತುಣುಕುಗಳನ್ನ ಅಮೂಲ್ಯ ಪತಿ ಜಗದೀಶ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಇಬ್ಬರು ಫೈನಲಿಸ್ಟ್ ಹೆಸರು ಘೋಷಿಸಿದ ಕಿಚ್ಚ ಸುದೀಪ್

    ಅವರ ಆಗಮನ ಖುಷಿ ಕೊಟ್ಟಿದೆ ಎಂದು ಕೂಡ ಜಗದೀಶ್ ಬರೆದುಕೊಂಡಿದ್ದಾರೆ. ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನ ಚುಮು ಚುಮು ಚಳಿಗೆ ವಾಟ್ ಎ ವೆದರ್ ಎಂದ ಅಮೂಲ್ಯ

    ಬೆಂಗಳೂರಿನ ಚುಮು ಚುಮು ಚಳಿಗೆ ವಾಟ್ ಎ ವೆದರ್ ಎಂದ ಅಮೂಲ್ಯ

    ಸ್ಯಾಂಡಲ್‌ವುಡ್ (Sandalwood) ನಟಿ ಅಮೂಲ್ಯ (Amulya) ಇತ್ತೀಚೆಗಷ್ಟೇ ಮುದ್ದು ಮಕ್ಕಳ ನಾಮಕರಣ ಮಾಡಿ ಸುದ್ದಿಯಲ್ಲಿದ್ದರು. ಇದೀಗ ಸಿಲಿಕಾನ್ ಸಿಟಿಯ ಚುಮು ಚುಮು ಚಳಿಗೆ ವಾಟ್ ಎ ವೆದರ್ ಎಂದಿದ್ದಾರೆ. ಕೂಲ್ ವೆದರ್‌ನಲ್ಲಿ ನಟಿ ಚೆಂದದ ಫೋಟೋಶೂಟ್‌ ಮಾಡಿಸಿದ್ದಾರೆ. ಈ ಫೋಟೋ ಸೋಷಿಯಲ್‌ ಮೀಡಿಯಾ ಸದ್ದು ಮಾಡ್ತಿದೆ.

    ಗೋಲ್ಡನ್ ಕ್ವೀನ್ ಅಮೂಲ್ಯ (Golden Queen Amulya) ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಸೈಕ್ಲೋನ್ ಎಫೆಕ್ಟ್ ಬೆಂಗಳೂರಿಗೂ ತಟ್ಟಿದೆ. ಸಿಟಿಯಲ್ಲಿ ಸಿಕ್ಕಾಪಟ್ಟೆ ಚಳಿಯಿದೆ. ಜಿಟಿ ಜಿಟಿ ಮಳೆ ಕೂಡ ಆರ್ಭಟಿಸುತ್ತಿದೆ. ಸೂಪರ್ ವಾತಾವರಣ ನಿರ್ಮಾಣವಾಗಿದೆ. ಈ ವೇಳೆ ಕೂಲ್ ಕೂಲ್ ವೆದರ್‌ನಲ್ಲಿ ಅಮೂಲ್ಯ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.

     

    View this post on Instagram

     

    A post shared by Amulya (@nimmaamulya)

    ಚಳಿ ಮಳೆಯಿಂದ ಬೆಂಗಳೂರು ಕೂಲ್ ಆಗಿದೆ. ವಾಟ್ ಎ ವೆದರ್ ಸೂಪರ್ ಬೆಂಗಳೂರು ಎಂದು ನಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಗಿಳಿ ಹಸಿರು ಚಕ್ಸ್ ಡ್ರೆಸ್‌ನಲ್ಲಿ ನಟಿ ಕ್ಯಾಮೆರಾ ಕಣ್ಣಿಗೆ ಕ್ಯೂಟ್ ಆಗಿ ಪೋಸ್ ನೀಡಿದ್ದಾರೆ. ನಟಿಯ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ಹಿರಿಯ ನಟ ಶರತ್‌ಕುಮಾರ್‌ಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು

    ಬಂಗಾಳಕೊಲ್ಲಿಯಲ್ಲಿ ಮ್ಯಾಂಡಸ್ ಚಂಡಮಾರುತ ಸೃಷ್ಟಿಯಾಗಿದ್ದು, ಚೆನ್ನೈ ಸೇರಿದಂತೆ ತಮಿಳುನಾಡಿನ  ಹಲವೆಡೆ ಮಳೆ ಆರ್ಭಟಿಸುತ್ತಿದೆ. ಈ ಪರಿಣಾಮ ಕರ್ನಾಟಕದ ಹಲವು ಕಡೆ ಚಳಿ ಮತ್ತು ಮಳೆ ಜೋರಾಗಿದೆ.

    Live Tv
    [brid partner=56869869 player=32851 video=960834 autoplay=true]

  • ತಿರುಪತಿಯಲ್ಲಿ ಅವಳಿ ಮಕ್ಕಳ ಮುಡಿ ಕೊಟ್ಟ ಅಮೂಲ್ಯ ಜಗದೀಶ್ ದಂಪತಿ

    ತಿರುಪತಿಯಲ್ಲಿ ಅವಳಿ ಮಕ್ಕಳ ಮುಡಿ ಕೊಟ್ಟ ಅಮೂಲ್ಯ ಜಗದೀಶ್ ದಂಪತಿ

    ಸ್ಯಾಂಡಲ್‌ವುಡ್(Sandalwood) ಗೋಲ್ಡನ್ ಕ್ವೀನ್ ಅಮೂಲ್ಯ(Actree Amulya) ತಾಯ್ತನದ ಖುಷಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಅವಳಿ ಮಕ್ಕಳ ನಾಮಕರಣವನ್ನ ಅದ್ದೂರಿಯಾಗಿ ಮಾಡಿದ್ದರು. ಈ ಬೆನ್ನಲ್ಲೇ ಅವಳಿ ಮಕ್ಕಳ ಮುಡಿ ಅಮೂಲ್ಯ ಮುಡಿ ಕೊಟ್ಟಿದ್ದಾರೆ.

    `ಚೆಲುವಿನ ಚಿತ್ತಾರ’ ಸಿನಿಮಾ ಮೂಲಕ ಸಂಚಲನ ಮೂಡಿಸಿದ್ದ ನಟಿ ಅಮೂಲ್ಯ ಇದೀಗ ಸಂಸಾರಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗೆ ಬ್ರೇಕ್ ಹಾಕಿ, ಮದುವೆ, ಪತಿ ಮತ್ತು ಮಕ್ಕಳು ಅಂತಾ ಬ್ಯುಸಿಯಾಗಿದ್ದಾರೆ. ಇದೀಗ ಇಡೀ ಕುಟುಂಬ ಸಮೇತ ತಿರುಪತಿಗೆ ತೆರಳಿದ್ದಾರೆ. ನಾಮಕರಣ ಆಗಿ ಕೆಲವೇ ದಿನಗಳಲ್ಲಿ ಅಮೂಲ್ಯಾ ಮತ್ತು ಜಗದೀಶ್ ದಂಪತಿ ಮಕ್ಕಳ ಮುಡಿ ಕೊಟ್ಟಿದ್ದಾರೆ. ಇದನ್ನೂ ಓದಿ:ಕನ್ನಡತಿ ಅನುಷಾ ಶೆಟ್ಟಿ ಜೊತೆ ಹಸೆಮಣೆ ಏರಿದ ತೆಲುಗು ನಟ ನಾಗಶೌರ್ಯ

    ಹೊಸ ಲುಕ್‌ಲ್ಲಿ ಕಾಣಿಸಿಕೊಂಡಿರುವ ಅಥರ್ವ್ ಮತ್ತು ಆಧವ್ ಜೊತೆ ಇಡೀ ಕುಟುಂಬ ಕ್ಯಾಮರಾಗೆ ಪೋಸ್ ನೀಡಿದೆ. ಅಥರ್ವ ಮತ್ತು ಆಧವ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ತಿರುಪತಿ ದೇವ್ಥಾನದ ಮುಂದೆ ನಿಂತು ಕ್ಯಾಮರಾಗೆ ಪೋಸ್ ನೀಡಿರುವ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಥರ್ವ್-ಆಧವ್ ಎಂದು ಅವಳಿ ಮಕ್ಕಳಿಗೆ ಮುದ್ದಾದ ಹೆಸರಿಟ್ಟ ನಟಿ ಅಮೂಲ್ಯ

    ಅಥರ್ವ್-ಆಧವ್ ಎಂದು ಅವಳಿ ಮಕ್ಕಳಿಗೆ ಮುದ್ದಾದ ಹೆಸರಿಟ್ಟ ನಟಿ ಅಮೂಲ್ಯ

    ಗೋಲ್ಡನ್ ಕ್ವೀನ್ ಅಮೂಲ್ಯ(Amulya) ಸದ್ಯ ತಾಯ್ತನದ ಖುಷಿಯಲ್ಲಿದ್ದಾರೆ. ಇಬ್ಬರು ಮುದ್ದು ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇಂದು ಅವಳಿ ಮಕ್ಕಳಿಗೆ ನಾಮಕರಣ ಮಾಡಿದ್ದಾರೆ.

     

    View this post on Instagram

     

    A post shared by Jagdish R Chandra (@jagdishrchandra)

    ಚಂದನವನದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಯಾಗಿ ಮಿಂಚಿದ ಗೋಲ್ಡನ್ ನಟಿ ಅಮೂಲ್ಯ ಮದುವೆ, ಸಂಸಾರ, ಮಕ್ಕಳು ಎಂದು ಬ್ಯುಸಿಯಾಗಿದ್ದಾರೆ. ಕೆಲ ತಿಂಗಳುಗಳ ಹಿಂದೆ ಅಮೂಲ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅಮೂಲ್ಯ ಜಗದೀಶ್ ದಂಪತಿ ಅವಳಿ ಮಕ್ಕಳಿಗೆ (ನ.10) ನಾಮಕರಣ ಶಾಸ್ತ್ರ ಮಾಡಿದ್ದಾರೆ. ಇದನ್ನೂ ಓದಿ:ದೊಡ್ಮನೆ ಕುಡಿ ಯುವ ಚಿತ್ರದ ಬಗ್ಗೆ ಗುಡ್ ನ್ಯೂಸ್ ಕೊಟ್ರು ಸಂತೋಷ್ ಆನಂದ್‌ರಾಮ್

    ಅಮೂಲ್ಯ ತಮ್ಮ ಅವಳಿ ಮಕ್ಕಳಿಗೆ ಅಥರ್ವ್ ಮತ್ತು ಆಧವ್(Atharva & Aadhav) ಎಂಬ ಭಿನ್ನ ಹೆಸರನ್ನ ಇಟ್ಟಿದ್ದಾರೆ. ಇನ್ನೂ ಈ ಅದ್ದೂರಿ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ ತಾರೆಯರು, ಆಪ್ತರು ಸಾಕ್ಷಿಯಾಗಿದ್ದಾರೆ. ಮುದ್ದಾದ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಮೂಲಕ ಫ್ಯಾನ್ಸ್ ಶುಭಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತಾಯಿಯಾಗ್ತಿದ್ದಾರೆ ನಟಿ ಅಮೂಲ್ಯ ಜಗದೀಶ್

    ತಾಯಿಯಾಗ್ತಿದ್ದಾರೆ ನಟಿ ಅಮೂಲ್ಯ ಜಗದೀಶ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಜಗದೀಶ್ ಅವರು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

    ಹೌದು. ನಟಿ ಅಮೂಲ್ಯ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈ ವಿಚಾರವನ್ನು ಸ್ವತಃ ‘ಐಶ್’ ಅವರೇ ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಪತಿ ಜಗದೀಶ್ ಜೊತೆ ಇರುವ ಒಂದು ವಿಶೇಷ ಫೋಟೋವನ್ನು ಹಂಚಿಕೊಂಡು ‘ಸದ್ಯ ನಾವು ಈಗ ಇಬ್ಬರಲ್ಲ. 2022ರಲ್ಲಿ ಮೂವರಾಗುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ. ಅಮೂಲ್ಯ ಈ ರೀತಿ ಬರೆದುಕೊಳ್ಳುತ್ತಿದ್ದಂತೆಯೇ ಅಭಿಮಾನಿಗಳು ವಿಶ್ ಮಾಡಲು ಆರಂಭಿಸಿದ್ದಾರೆ.

    ಬಾಲನಟಿಯಾಗಿಯೇ ಚಿತ್ರರಂಗಕ್ಕೆ ಕಾಲಿಟ್ಟ ಅಮೂಲ್ಯ ಅವರು ‘ಚೆಲುವಿನ ಚಿತ್ತಾರ’ ಸಿನಿಮಾ ಮೂಲಕ ಹೀರೋಯಿನ್ ಆಗಿ ಚಿರಪರಿಚಿತರಾದರು. ಚಿಕ್ಕ ವಯಸ್ಸಿನಲ್ಲಿಯೇ ಸ್ಟಾರ್ ನಟರೊಂದಿಗೆ ಅಭಿನಯಿಸಿದ ಕೀರ್ತಿ ಇವರದ್ದಾಗಿದೆ. ಇತ್ತ ಚಿತ್ರರಂಗದಲ್ಲಿ ಬೇಡಿಕೆ ಇರುವಾಗಲೇ 2017ರಲ್ಲಿ ರಾಜಕೀಯ ಹಿನ್ನೆಲೆ ಇರುವ ಕುಟುಂಬದ ಜಗದೀಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಇದನ್ನೂ ಓದಿ: ಕಡಲೆಕಾಯಿ ಪರಿಷೆಯಲ್ಲಿ ನಕ್ಕುನಲಿದ ವೈಷ್ಣವಿಗೌಡ

    ಕನ್ನಡದ ಹಲವಾರು ಸಿನಿಮಾಗಳಲ್ಲಿ ಅಮೂಲ್ಯ ನಟಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಯಾವುದೇ ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಈ ಮೂಲಕ ಅವರು ಸಂಸಾರದ ಕಡೆಗೆ ಅವರು ಹೆಚ್ಚು ಗಮನ ನೀಡಿದ್ದಾರೆ. ಈಗ ಅವರು ತಾಯಿ ಆಗುತ್ತಿರುವ ಸುದ್ದಿ ಕೇಳಿ ಅಭಿಮಾನಿಳು ಸಂತಸ ವ್ಯಕ್ತಪಡಿಸಿದ್ದಾರೆ.

     

    View this post on Instagram

     

    A post shared by Amulya (@nimmaamulya)

  • ದರ್ಶನ್ ರೋಡ್ ಶೋನಲ್ಲಿ ನಟಿ ಅಮೂಲ್ಯ ಜಗದೀಶ್ ಭಾಗಿ

    ದರ್ಶನ್ ರೋಡ್ ಶೋನಲ್ಲಿ ನಟಿ ಅಮೂಲ್ಯ ಜಗದೀಶ್ ಭಾಗಿ

    ಬೆಂಗಳೂರು: ಉಪಕದನ ಕಣ ರಂಗೇರುತ್ತಿದ್ದು, ಇಂದು ಆರ್‍ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಖಾಡಕ್ಕಿಳಿದಿದ್ದಾರೆ.

    ರೋಡ್ ಶೋ ಆರಂಭ ಮಾಡಿದಾಗ ಅಭಿಮಾನಿಗಳು ದರ್ಶನ್ ಗೆ ಹೂವಿನ ಸ್ವಾಗತ ಕೋರಿದರು. ಅಲ್ಲದೆ ಬಿಜೆಪಿ ಹಾಗೂ ದರ್ಶನ್ ಪರ ಘೋಷಣೆಗಳನ್ನು ಕೂಗಿದರು. ದರ್ಶನ್ ಹಾಗೂ ಮುನಿರತ್ನಗೆ ರಾಕ್‍ಲೈನ್ ವೆಂಕಟೇಶ್, ತೇಜಸ್ವಿನಿ ಗೌಡ ಸಾಥ್ ನೀಡಿದರು.

    ಇತ್ತ ನಟಿ ಅಮೂಲ್ಯ ಅವರು ತಮ್ಮ ಪತಿ ಜಗದೀಶ್ ಜೊತೆ ರೋಡ್ ಶೋನಲ್ಲಿ ಭಾಗವಹಿಸಿದ್ದಾರೆ. ಅಮೂಲ್ಯ ಮೇಲೂ ಹೋವಿನ ಸುರಿಮಳೆಗೈದು ಅಭಿಮಾನಿಗಳು ಪ್ರಚಾರಕ್ಕೆ ಬರಮಾಡಿಕೊಂಡರು.

    ಯಶವಂತಪುರ ವಾರ್ಡ್ ನ ಪ್ರಮುಖ ಬೀದಿಗಳಲ್ಲಿ ದರ್ಶನ್ ರೋಡ್ ಶೋ ಮಾಡುತ್ತಿದ್ದಾರೆ. ಸಾರಥಿಯ ನೋಡಲು ಜನ ಮನೆ, ಕಟ್ಟಡಗಳ ಮೇಲೆ ನಿಂತಿದ್ದಾರೆ. ಅಲ್ಲದೆ ದರ್ಶನ್ ಗೆ ಜೈಕಾರ, ಹೂ ಎರಚಿ ಅಭಿಮಾನ ಮೆರೆಯುತ್ತಿದ್ದಾರೆ.

    ಪ್ರಚಾರಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್, ಮುನಿರತ್ನ ಅವರು ಕೊರೊನಾ ಲಾಕ್ ಡೌನ್ ಸಮಯದಲ್ಲಿ ಕ್ಷೇತ್ರದ ಜನತೆಗೆ ದಿನಸಿ ವಿತರಿಸುವ ಮೂಲಕ ಸಾಕಷ್ಟು ಸಹಾಯ ಮಾಡಿದ್ದಾರೆ. ಹೀಗಾಗಿ ಮಾನವೀಯತೆಯ ದೃಷ್ಟಿಯಿಂದ ನಾನು ಅವರ ಪರ ಪ್ರಚಾರಕ್ಕೆ ತೆರಳುತ್ತಿದೇನೆ. ಮುನಿರತ್ನ ಬೆಂಬಲಿಸಲು ಅವರು ಮಾಡಿರುವ ಸಹಾಯವೇ ಸಾಕು. ಅವರು ಕರೆದಲ್ಲಿಗೆ ಹೋಗಿ ಪ್ರಚಾರ ಮಾಡ್ತೀನಿ. ಅವರು ನನ್ನ ಅತ್ಯಂತ ಆಪ್ತರು. ಸಂಕಷ್ಟಕ್ಕೆ ನಿಂತವರ ಪರ ಪ್ರಚಾರಕ್ಕೆ ಹೋಗುತ್ತಿದ್ದೇನೆ ಎಂದರು.

  • ಗಮನ ಸೆಳೆದ ಆತ್ಮರಕ್ಷಣಾ ಕಲೆ – ಮೀಟೂ ಬಗ್ಗೆ ಅಮೂಲ್ಯ ಮಾತು

    ಗಮನ ಸೆಳೆದ ಆತ್ಮರಕ್ಷಣಾ ಕಲೆ – ಮೀಟೂ ಬಗ್ಗೆ ಅಮೂಲ್ಯ ಮಾತು

    ಚಿಕ್ಕಬಳ್ಳಾಪುರ: ವಿಶೇಷವಾಗಿ ವಿದ್ಯಾರ್ಥಿನಿಯರು ಆತ್ಮರಕ್ಷಣಾ ಕಲೆ ಸೇರಿದಂತೆ ಒಳ್ಳೆಯದನ್ನ ಕಲಿಯುವುದರಲ್ಲಿ ನಿರ್ಲಕ್ಷ ಮಾಡಬೇಡಿ. ಮುಂದೊಂದು ದಿನ ಯಾವುದೇ ಸಂದರ್ಭದಲ್ಲಿ ಆತ್ಮರಕ್ಷಣೆ ಮಾಡಿಕೊಳ್ಳುವ ಸಂದರ್ಭ ಬಂದಾಗ ಕರಾಟೆಯ ಮಹತ್ವ ಗೊತ್ತಾಗಲಿದೆ ಎಂದು ನಟಿ ಅಮೂಲ್ಯ ಅವರು ಹೇಳಿದ್ದಾರೆ.

    ಚಿಕ್ಕಬಳ್ಳಾಪುರ ನಗರ ಹೊರಹೊಲಯದ ಎಸ್.ಜೆ.ಸಿ.ಐ.ಟಿ ಕಾಲೇಜಿನಲ್ಲಿ ಮಿಷನ್ ಸಾಹಸಿ ಆತ್ಮ ರಕ್ಷಣೆಯ ಕಲೆಯ ಬಗ್ಗೆ ಶಿಬಿರ ಕಾರ್ಯಕ್ರಮ ನಡೆದಿದೆ. ಈ ತರಬೇತಿಯಲ್ಲಿ ನಟಿ ಅಮೂಲ್ಯ ಮತ್ತು ಮಹಿಳಾ ಕ್ರಿಕೆಟರ್ ತಮ್ಮ ಅನುಭವಗಳನ್ನು ಹೇಳಿ ಇನ್ನಿತರ ವಿದ್ಯಾರ್ಥಿನಿಯರು ತಮ್ಮ ಆತ್ಮರಕ್ಷಣೆಗೆ ಕರಾಟೆ ಕಲಿಯುವಂತೆ ಪ್ರೇರಣೆ ನೀಡಿದ್ದಾರೆ.

    ಈ ವೇಳೆ ಮಾಧ್ಯಮಗಳ ಜೊತೆ ಮೀಟೂ ಬಗ್ಗೆ ಮಾತನಾಡಿದ ಅಮೂಲ್ಯ ಅವರು, ಮೀಟೂ ಬಗ್ಗೆ ನಾನು ಏನು ಹೇಳಲು ಇಷ್ಟಪಡುವುದಿಲ್ಲ. ಅವರವರ ದೃಷ್ಠಿಕೋನ ಬೇರೆ ಇರುತ್ತದೆ. ನನ್ನ ದೃಷ್ಠಿಕೋನವೇ ಬೇರೆ ಇರುತ್ತದೆ. ಆದ್ದರಿಂದ ಅದರ ಬಗ್ಗೆ ನಾನು ಹೇಳುವುದಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.

    ಇದೇ ವೇಳೆ ಆತ್ಮರಕ್ಷಣಾ ಕಲೆ ಬಗ್ಗೆ ಮಾತನಾಡಿ, ಪ್ರತಿಯೊಬ್ಬ ಹೆಣ್ಣು ಮಕ್ಕಳು ಕಲಿಯಬೇಕಾದ ಕಲೆ ಇದು. ಈ ಕಲೆ ನಿಮ್ಮ ಕಷ್ಟದ ಸಮಯದಲ್ಲಿ ಸಹಾಯವಾಗುತ್ತದೆ. ನಾನು ಚಿಕ್ಕವಳಿದ್ದಾಗ ಭರತ ನಾಟ್ಯ ಕಲಿತೆ ಅದು ನನಗೆ ನಟನೆಯಲ್ಲಿ ಸಹಾಯವಾಯಿತು. ಅದೇ ರೀತಿ ನಿಮಗೂ ಈ ವಿದ್ಯೆ ಉಪಯೋಗವಾಗುತ್ತದೆ. ನೀವು ಬೇರೆಯವರನ್ನು ನಿಮ್ಮ ರಕ್ಷಣೆಗೆ ಹುಡುಕಿಕೊಂಡು ಹೋಗುದುವುದಕ್ಕಿಂತ ನೀವೇ ನಿಮ್ಮ ರಕ್ಷಣೆ ಮಾಡಿಕೊಳ್ಳುತ್ತೀರಿ ಎಂದು ಹೇಳಿದ್ದಾರೆ.

    ತಾವು ದೇಶದಿಂದ ದೇಶಕ್ಕೆ ಒಬ್ಬಂಟಿಯಾಗಿ ಹೋಗುವಾಗ ಕರಾಟೆ ನನಗೆ ಆತ್ಮಸ್ಥೈರ್ಯ ನೀಡುತ್ತದೆ ಎಂದು ಇಂಡಿಯನ್ ಮಹಿಳಾ ಕ್ರಿಕೆಟರ್ ರಾಜೇಶ್ವರಿ ಗಾಯಕ್ವಾಡ ಹೇಳಿದ್ದಾರೆ. ಈ ಕಾರ್ಯಕ್ರಮಕ್ಕೆ ಬೆಂಗಳೂರು ಗ್ರಾಮಾಂತರ ಎ.ಬಿ.ವಿ.ಪಿ ಹಾಗೂ ಎಸ್.ಜೆ.ಸಿ.ಐ.ಟಿ ಕಾಲೇಜು ಆಡಳಿತ ಮಂಡಳಿ ಸಾಥ್ ನೀಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾದರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ಅಮೂಲ್ಯ

    ಮಾದರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ಅಮೂಲ್ಯ

    -ಪತಿಯಿಂದ ಸಿಕ್ತು ಗಿಫ್ಟ್, ಮನೆಗೆ ಬಂದ ಅಭಿಮಾನಿಗಳಿಗೂ ಉಡುಗೊರೆ ನೀಡಿದ ಗೋಲ್ಡನ್ ಕ್ವೀನ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಗೋಲ್ಡನ್ ಕ್ವೀನ್ ಅಮೂಲ್ಯ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಹಿಳೆಯರಿಗೆ ಸ್ವಾವಲಂಬಿ ಬದುಕು ರೂಪಿಸಿಕೊಳ್ಳುವುದಕ್ಕಾಗಿ ಹೊಲಿಗೆ ಯಂತ್ರಗಳನ್ನ ವಿತರಣೆ ಮಾಡಿದ್ದಾರೆ.

    ಶುಕ್ರವಾರ ಅಮೂಲ್ಯ ಮೊದಲು ತಮ್ಮ ಅಮ್ಮನ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಬಳಿಕ ತಮ್ಮ ಪತಿ ಮನೆ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರ ಜೊತೆ ಕೇಕ್ ಮಾಡಿ ಬರ್ತ್ ಡೇ ಸೆಲೆಬ್ರೆಟ್ ಮಾಡಿಕೊಂಡಿದ್ದರು. ಅಭಿಮಾನಿಗಳು ಕೂಡ ಅಪಾರವಾಗಿ ಬಂದಿದ್ದು, ಕೇಕ್ ತಂದು ಕಟ್ ಮಾಡಿಸಿದ್ದಾರೆ. ಬರ್ತ್ ಡೇ ಪ್ರಯುಕ್ತ ಮಹಿಳೆಯರಿಗೆ ಸ್ವಾಲಂಬಿ ಬದುಕು ಕಟ್ಟಿಕೊಳ್ಳಲು ಹೊಲಿಗೆ ಯಂತ್ರಗಳನ್ನು ನೀಡಿದ್ದಾರೆ.

    ಇದೇ ವೇಳೆ ಮಾತನಾಡಿದ ಅಮೂಲ್ಯ, ಪ್ರತಿದಿನ ಯಾರಿಗಾದರೂ ಒಳ್ಳೆಯದನ್ನು ಮಾಡಬೇಕು ಎಂದು ನಮ್ಮ ಪತಿ ಹೇಳುತ್ತಿರುತ್ತಾರೆ. ನಾವು ಹುಟ್ಟಿದ ದಿನವನ್ನು ಬೇರೆಯವರು ನೆನಪಿಸಕೊಳ್ಳಬೇಕು ಎಂದು ಹೇಳುತ್ತಾರೆ. ನನಗೆ ಒಳ್ಳೆಯ ಕುಟುಂಬ, ಪ್ರೀತಿ ಸಿಕ್ಕಿದೆ. ಅಭಿಮಾನಿಗಳ ಪ್ರೀತಿಗೆ ನಾವು ಚಿರುಋಣಿಯಾಗಿದ್ದೇವೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

    ಇತ್ತೀಚೆಗೆ ಮಹಿಳೆಯರಿಗೆ ಉದ್ಯೋಗ ಕೊಡಿಸಬೇಕು ಎಂದು ಯೋಜನೆ ಮಾಡಿ ಮನೆಯಲ್ಲಿಯೇ ಕುಳಿತು ಕೆಲಸ ಮಾಡುವವರಿಗೆ ಹೊಲಿಗೆ ಯಂತ್ರಗಳನ್ನು ಕೊಟ್ಟಿದ್ದೇವೆ. ಇದುವರೆಗೂ ನಮ್ಮ ಪತಿ ಎಲ್ಲೂ ಶಾಪಿಂಗ್ ಕರೆದುಕೊಂಡು ಹೋಗಿಲ್ಲ. ಆದರೆ ನನಗೋಸ್ಕರ ಶಾಪಿಂಗ್ ಬಂದು ನನಗೆ ಉಡುಗೊರೆಯಾಗಿ ಸೀರೆ ಕೊಡಿಸಿದ್ದಾರೆ ಎಂದು ಹೇಳಿದ್ದಾರೆ.

    ಇದೇ ವೇಳೆ ಸಿನಿಮಾದ ಬಗ್ಗೆ ಮಾತನಾಡಿದ ಅಮೂಲ್ಯ, ಸದ್ಯಕ್ಕೆ ಕಥೆ ಕೇಳುತ್ತಿದ್ದೇವೆ. ತುಂಬಾ ಪ್ಲಾನ್ ಗಳಿವೆ ಒಂದೊಂದು ಸಿನಿಮಾ ಮಾಡುತ್ತೇನೆ. ದರ್ಶನ್ ಜೊತೆ ಒಮ್ಮೆ ಮಾತನಾಡಿದ್ದೀವಿ. ಆದರೆ ಖಚಿತವಾದ ಮೇಲೆ ಹೇಳುತ್ತೇವೆ ಎಂದು ತಿಳಿಸಿದ್ದಾರೆ.

    ನಾವು ಕೆಲವು ಮಹಿಳೆಯರಿಗೆ ಹೊಲಿಗೆ ತರಬೇತಿ ಕೊಟ್ಟಿದ್ದೇವು. ಅವರಿಗೆ ಈಗ ಹೊಲಿಗೆ ಯಂತ್ರ ಕೊಟ್ಟಿದ್ದೇವೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಬೇಕು ಎನ್ನುವ ಉದ್ದೇಶದಿಂದ ಸರ್ಕಾರಿ ಶಾಲಾ ಶಿಕ್ಷಕಿಯರನ್ನು ಕರೆದು ಅಮೂಲ್ಯ ಅವರಿಂದ ಬಾಗಿನ ಕೊಟ್ಟಿದ್ದೇವೆ. ಇನ್ನು ಹುಟ್ಟುಹಬ್ಬದ ಪ್ರಯುಕ್ತ ಬಂದವರಿಗೆ ಗಿಡ ಕೊಟ್ಟಿದ್ದೇವೆ ಎಂದು ಅಮೂಲ್ಯ ಪತಿ ಜಗದೀಶ್ ಅವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚೆಲುವಿನ ಚಿತ್ತಾರದ ಬೆಡಗಿಗೆ ಇಂದು ಬರ್ತ್ ಡೇ ಸಂಭ್ರಮ

    ಚೆಲುವಿನ ಚಿತ್ತಾರದ ಬೆಡಗಿಗೆ ಇಂದು ಬರ್ತ್ ಡೇ ಸಂಭ್ರಮ

    ಬೆಂಗಳೂರು: ಸ್ಯಾಂಡಲ್ ವುಡ್ ಚಿಲುವಿನ ಚಿತ್ತಾರದ ಹುಡುಗಿ ಅಮೂಲ್ಯ ಜಗದೀಶ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ತಮ್ಮ ಮನೆಯವರ ಜೊತೆಗೆ ಬರ್ತ್  ಡೇಯನ್ನು ಆಚರಣೆ ಮಾಡಿಕೊಂಡಿದ್ದಾರೆ.

    ಅಮೂಲ್ಯ ತನ್ನ ತವರು ಮನೆಯಲ್ಲಿ ಹುಟ್ಟಹಬ್ಬವನ್ನು ಆಚರಣೆ ಮಾಡಿಕೊಂಡಿದ್ದು, ಇಂದು ಬೆಳಗ್ಗೆ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಪತಿ ಮನೆಯವರು ಮತ್ತು ಅಭಿಮಾನಿಗಳ ಮುಂದು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬದ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಅವುಗಳನ್ನು ತಮ್ಮ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

    ಗುರುವಾರ ಗೌರಿ-ಗಣೇಶ ಹಬ್ಬದಂದು ಅಮೂಲ್ಯ ಜಗದೀಶ್ ಅವರು ಮಣ್ಣಿ ಗಣಪನನ್ನು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ನಿಮ್ಮ ಮನೆಯಲ್ಲೂ ಪರಿಸರ ಸ್ನೇಹಿ ಮಣ್ಣಿನ ಗಣಪನನ್ನು ಪ್ರತಿಷ್ಠಾಪನೆ ಮಾಡಿ ಎಂದು ಗೌರಿ-ಗಣೇಶ ಹಬ್ಬದ ಶುಭಾಶಯವನ್ನು ತಿಳಿಸಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು.

    ಹಬ್ಬಕ್ಕೆಂದು ಅಮ್ಮನ ಮನೆಗೆ ಬಂದಿದ್ದ ಅಮೂಲ್ಯಗೆ ಅಂದು ಮಧ್ಯರಾತ್ರಿಯೇ ಅವರ ಅಮ್ಮ, ಅಣ್ಣ ಮತ್ತು ಕುಟುಂಬದ ಆಪ್ತರು ಕೇಕ್ ತಂದು ಕತ್ತರಿಸಿ ಶುಭಾಶಯವನ್ನು ತಿಳಿಸಿದ್ದಾರೆ. ಬಳಿಕ ಅವರ ಪತಿ ಜಗದೀಶ್ ಮತ್ತು ಅತ್ತೆ, ಮಾವ ಎಲ್ಲರು ಕೇಕ್ ಕತ್ತರಿಸಿ ಶುಭಾ ಕೋರಿದ್ದಾರೆ.

    ಬರ್ತ್ ಡೇ ಫೋಟೋಗಳನ್ನು ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಅಮೂಲ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಅಮೂಲ್ಯ ನಟ ಗಣೇಶ್ ಅಭಿನಯದ ‘ಮುಗುಳು ನಗೆ’ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ `ವೇದಾಲಂ’ ತಮಿಳು ರಿಮೇಕ್ ಸಿನಿಮಾ ಮಾಡಲಿದ್ದು, ಈ ಚಿತ್ರದಲ್ಲಿ ದರ್ಶನ್ ತಂಗಿಯ ಪಾತ್ರದಲ್ಲಿ ಅಮೂಲ್ಯ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv