Tag: Amulya Gowda

  • ಬಿಗ್ ಬಾಸ್ ಮನೆಯಿಂದ ಅಮೂಲ್ಯ ಗೌಡ ಔಟ್

    ಬಿಗ್ ಬಾಸ್ ಮನೆಯಿಂದ ಅಮೂಲ್ಯ ಗೌಡ ಔಟ್

    ಕಿರುತೆರೆಯ ‘ಕಮಲಿ’ ಸೀರಿಯಲ್ ಮೂಲಕ ಮನೆಮಾತಾದ ನಟಿ ಅಮೂಲ್ಯ ಗೌಡ (Amulya Gowda), ಬಿಗ್‌ಬಾಸ್ ಸೀಸನ್ 9ಕ್ಕೆ (Bigg Boss) ಎಂಟ್ರಿ ಕೊಟ್ಟಿದ್ದರು. ಈ‌ ಶೋ ಮುಖಾಂತರ ಅಪಾರ ಅಭಿಮಾನಿಗಳ ಮನಗೆದ್ದಿದ್ದರು. ಈಗ ಅಮೂಲ್ಯ ಆಟಕ್ಕೆ ಬಿಗ್ ಬಾಸ್‌ ಬ್ರೇಕ್ ಹಾಕಿದ್ದಾರೆ.

    ಟಿವಿ ಪರದೆಯಲ್ಲಿ ರಿಷಿ‌‌ ಮನದರಸಿ ಕಮಲಿಯಾಗಿ‌ ಮನಗೆದ್ದ ನಟಿ ಅಮೂಲ್ಯ ಅಭಿನಯಕ್ಕೆ ಕನ್ನಡಿಗರು ಫಿದಾ ಆಗಿದ್ದರು. ಬಳಿಕ ದೊಡ್ಮನೆಗೆ ಕಾಲಿಟ್ಟ ಅಮೂಲ್ಯ, ಅಡುಗೆ, ಟಾಸ್ಕ್, ಮನರಂಜನೆ ಹೀಗೆ ಪ್ರತಿಯೊಂದರಲ್ಲೂ ಗಟ್ಟಿ ಸ್ಪರ್ಧಿಯಾಗಿ ಹೈಲೈಟ್ ಆಗಿದ್ದರು. ರಾಕೇಶ್ ಜೊತೆಗಿನ ಒಡನಾಟದ ವಿಷ್ಯವಾಗಿಯೂ ಸದ್ದು ಮಾಡಿದ್ದರು. ಈಗ 14ನೇ ವಾರದ ಮೊದಲ ಸ್ಪರ್ಧಿಯಾಗಿ ಅಮೂಲ್ಯ ಹೊರಬಂದಿದ್ದಾರೆ. ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯಲ್ಲಿ ದಿವ್ಯಾಗೆ ಕ್ಲಾಸ್ ತಗೆದುಕೊಂಡು ಆರ್ಯವರ್ಧನ್ ಗುರೂಜಿ

    ಫಿನಾಲೆಗೆ ಕಡೆಯ ಘಟ್ಟದಲ್ಲಿ ಇರುವ ಈ ವಾರಾಂತ್ಯ ಇಬ್ಬರು ‌ಸ್ಪರ್ಧಿಗಳು ಹೊರಬರಲಿದ್ದಾರೆ. ಅದರಲ್ಲಿ ಮೊದಲ ಸ್ಪರ್ಧಿಯಾಗಿ ಅಮೂಲ್ಯ ಗೌಡ ಔಟ್ ಆಗಿದ್ದಾರೆ.

    ನವೀನರು ಹಾಗೂ ಪ್ರವೀಣರು ಎಂಬ ಟ್ಯಾಗ್ ಲೈನ್ ನೊಂದಿಗೆ ಶುರುವಾದ ಕನ್ನಡದ ಬಿಗ್ ಬಾಸ್ ಇದೀಗ ಕೊನೆಯ ಹಂತಕ್ಕೆ ಬಂದು ನಿಂತಿದೆ. ಕೊನೆಗೂ ಬಿಗ್ ಬಾಸ್ ಫಿನಾಲೆ ದಿನಾಂಕವನ್ನು ಘೋಷಣೆ ಮಾಡಿದ್ದು ಡಿಸೆಂಬರ್ 31 ಹಾಗೂ ಜನವರಿ 1ನೇ ತಾರೀಖು ಬಿಗ್ ಬಾಸ್ ಫಿನಾಲೆ ನಡೆಯುವುದು ನಿಕ್ಕಿಯಾಗಿದೆ. ಇದನ್ನೂ ಓದಿ: ಎರಡನೇ ಬಾರಿ ಬಿಗ್ ಬಾಸ್ ಮನೆಯಲ್ಲಿ ಕಳಪೆ ಬೋರ್ಡ್ ಹಾಕಿಸಿಕೊಂಡ ರಾಕೇಶ್

    Live Tv
    [brid partner=56869869 player=32851 video=960834 autoplay=true]

  • ಡೇಂಜರ್ ಝೋನ್‌ನಲ್ಲಿ 8 ಸ್ಪರ್ಧಿಗಳು, ಯಾರ ಆಟಕ್ಕೆ ಬ್ರೇಕ್ ಹಾಕಲಿದ್ದಾರೆ ಬಿಗ್ ಬಾಸ್

    ಡೇಂಜರ್ ಝೋನ್‌ನಲ್ಲಿ 8 ಸ್ಪರ್ಧಿಗಳು, ಯಾರ ಆಟಕ್ಕೆ ಬ್ರೇಕ್ ಹಾಕಲಿದ್ದಾರೆ ಬಿಗ್ ಬಾಸ್

    ದೊಡ್ಮನೆ ಇದೀಗ 86 ದಿನಗಳನ್ನ ಪೂರೈಸಿ, ಫಿನಾಲೆಯತ್ತ ಮುನ್ನುಗ್ಗುತ್ತಿದೆ. ಈ ವಾರದ ಆರಂಭದಲ್ಲೇ ಮನೆಮಂದಿಗೆ ಬಿಗ್ ಬಾಸ್ (Bigg Boss)  ಶಾಕ್ ಕೊಟ್ಟಿದ್ದಾರೆ. ಮನೆಯಲ್ಲಿರುವ 8 ಸ್ಪರ್ಧಿಗಳನ್ನ ಬಿಗ್ ಬಾಸ್ ನೇರವಾಗಿ ನಾಮಿನೇಟ್ ಮಾಡಿದ್ದಾರೆ.

    ಬಿಗ್ ಬಾಸ್ ಮನೆಯ (Bigg Boss House) ಆಟ ಇದೀಗ ಕಡೆಯ ಘಟ್ಟದಲ್ಲಿದೆ. ಬಗೆ ಬಗೆಯ ಟಾಸ್ಕ್ ಮೂಲಕ ಹಲವು ಟ್ವಿಸ್ಟ್‌ಗಳನ್ನ ಪಡೆದು ಮುನ್ನುಗ್ಗುತ್ತಿದೆ. ಇದರ ಜೊತೆಗೆ ಬಿಗ್ ಬಾಸ್ ಕೂಡ ಮನೆ ಮಂದಿಗೆ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕಸ ಎಂದ ನಿರ್ದೇಶಕನಿಗೆ ವಿವೇಕ್ ಅಗ್ನಿಹೋತ್ರಿ ಸೌಮ್ಯ ಉತ್ತರ

    ಅನುಪಮಾ (Anupama) ಎಲಿಮಿನೇಷನ್ ನಂತರ ವಾರದ ಆರಂಭದಲ್ಲಿಯೇ ಬಿಗ್ ಬಾಸ್ ಎಲ್ಲರಿಗೂ ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಅರುಣ್ ಸಾಗರ್, ದೀಪಿಕಾ ದಾಸ್, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ದಿವ್ಯಾ, ಅಮೂಲ್ಯ, ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ ಇವರೆಲ್ಲರೂ ಇದೀಗ ಡೇಂಜರ್ ಝೋನ್‌ನಲ್ಲಿದ್ದಾರೆ. ಯಾರು ಈ ವಾರ ಎಲಿಮಿನೇಟ್ ಆಗಿ ಹೊರಬರಲಿದ್ದಾರೆ ಎಂಬುದೇ ಈಗ ಎಲ್ಲರ ಕೂತೂಹಲಕ್ಕೆ ಕಾರಣವಾಗಿದೆ.

    ಬಿಗ್ ಬಾಸ್ ಶೋ ಫಿನಾಲೆ(Bigg Boss Finale) ಹತ್ತಿರವಾಗುತ್ತಿದೆ. ಈ ವಾರದ ಅಂತ್ಯ ಡಬಲ್ ಎಲಿಮಿನೇಷನ್(Elimination)  ಆಗುವ ಸಾಧ್ಯತೆಯಿದೆ.

    Live Tv
    [brid partner=56869869 player=32851 video=960834 autoplay=true]

  • ಗುರೂಜಿನ ಕಳಪೆ ಎಂದ ಅಮೂಲ್ಯಗೆ ಕಿಚ್ಚನ ಖಡಕ್ ಕ್ಲಾಸ್

    ಗುರೂಜಿನ ಕಳಪೆ ಎಂದ ಅಮೂಲ್ಯಗೆ ಕಿಚ್ಚನ ಖಡಕ್ ಕ್ಲಾಸ್

    ಬಿಗ್ ಬಾಸ್ ಮನೆಯ (Bigg Boss) ವಾರದ ಪಂಚಾಯಿತಿಯಲ್ಲಿ ಕಳಪೆ ವಿಚಾರಕ್ಕೆ ಸಂವಾದ ನಡೆದಿದೆ. ಕಳಪೆ ಕೊಡುವ ವಿಚಾರವಾಗಿ ಅಮೂಲ್ಯ ನಡೆದುಕೊಂಡ ರೀತಿಗೆ ಕಿಚ್ಚ ಸುದೀಪ್ (Kiccha Sudeep) ಖಡಕ್ ಆಗಿ ಬೆಂಡೆತ್ತಿದ್ದಾರೆ. ಕಳಪೆ ಹಣೆಪಟ್ಟಿ ಕೊಡುವ ವಿಷ್ಯದಲ್ಲಿ ನಿಮಗೆ ಜಡ್ಜ್ ಮಾಡೋಕೆ ಬಂದಿಲ್ಲ ಎಂದು ಕಿಚ್ಚನ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಪ್ರತಿ ವಾರದಂತೆ ಈ ವಾರವು ಉತ್ತಮ ಮತ್ತು ಕಳಪೆ ಕೊಡುವ ಪದ್ಧತಿ ಇತ್ತು. ಅದರಂತೆ ಮನೆಮಂದಿ ಎಲ್ಲರೂ ಈ ಕುರಿತು ವೋಟ್ ಮಾಡಬೇಕು. ಆಗ ಅಮೂಲ್ಯ ಗೌಡ (Amulya Gowda) ನನ್ನನ್ನು ಕಳಪೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಹಾಗಾಗಿ ನಾನು ಗುರೂಜಿ ಕಳಪೆ ಕೊಡುತ್ತೇನೆ. ಅದರೆ ಅವರು ಕಳಪೆ ಅಲ್ಲ ಎಂದು ಕೂಡ ಮಾತನಾಡಿದ್ದರು. ಈ ವಿಚಾರವಾಗಿ ಸುದೀಪ್, ವೀಕೆಂಡ್‌ನಲ್ಲಿ ಮಾತನಾಡಿದ್ದಾರೆ.

    ಕಳಪೆ ಮತ್ತು ಉತ್ತಮ ಎಂದು ಹೇಗೆ ಪರಿಗಣಿಸುತ್ತೇವೆ. ಬಿಗ್ ಬಾಸ್ (Bigg Boss) ಏನಾದ್ರು ಕಳಪೆಗೆ ರೂಲ್ಸ್ ಹೇಳಿದ್ದಾರಾ ಎಂದು ಸುದೀಪ್ ಕೇಳಿದ್ದಾರೆ. ಅಮೂಲ್ಯ ಅವರ ನಡೆಯ ಬಗ್ಗೆ ಕಿಚ್ಚ ಪ್ರಶ್ನೆ ಮಾಡಿದ್ದಾರೆ. ಎಲ್ಲರೂ ಈ ವಾರ ಚೆನ್ನಾಗಿ ಅಡಿದ್ದರು. ಒಬ್ಬರಿಗೆ ಕಳಪೆ ಕೊಡೋದು ಕಷ್ಟವಾಗಿತ್ತು. ಹಾಗೇ ನೋಡಿದ್ರೆ ನಾನು ಈ ವಾರ ಕೆಲ ಆಟದಲ್ಲಿ ಸೋತಿದ್ದೆ ಎಂದು ಅಮೂಲ್ಯ ಮಾತನಾಡಿದ್ದಾರೆ. ಇದನ್ನೂ ಓದಿ: ರಾಜಣ್ಣ ಮನೆಯ ಮಿಸ್ಟರ್ ಗರಗಸ ಎಂದು ಕಿಚ್ಚನ ಬಳಿ ದೂರಿಟ್ಟ ಮನೆಮಂದಿ

    ಬಳಿಕ ಸುದೀಪ್, ನಿಮಗೆ ಕಳಪೆ ಕೊಡುವ ವಿಚಾರದಲ್ಲಿ ಜಡ್ಜ್ ಮಾಡೋಕೆ ಬರಲಿಲ್ಲ ಎಂದು ಹೇಳಿ ಎಂದು ಕಿಚ್ಚ ಕೊಂಚ ಖಾರವಾಗಿಯೇ ಅಮೂಲ್ಯಗೆ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನನ್ನ ಮನಸಾಕ್ಷಿ ಒಪ್ಪುತ್ತಿಲ್ಲ: ಗುರೂಜಿಗೆ ಕಳಪೆ ಎಂದ ಅಮೂಲ್ಯ

    ನನ್ನ ಮನಸಾಕ್ಷಿ ಒಪ್ಪುತ್ತಿಲ್ಲ: ಗುರೂಜಿಗೆ ಕಳಪೆ ಎಂದ ಅಮೂಲ್ಯ

    ಬಿಗ್ ಬಾಸ್ ಮನೆಯ(Bigg Boss House) ಆಟ 12 ವಾರಗಳು ಪೂರ್ಣಗೊಂಡಿದೆ. ಫಿನಾಲೆ ಇನ್ನೂ ಕೆಲವೇ ದಿನಗಳು ಬಾಕಿಯಿದ್ದು, ಈಗಾಗಲೇ ಸ್ಪರ್ಧಿಗಳಿಗೆ ಕೌಂಟ್‌ಡೌನ್ ಶುರುವಾಗಿದೆ. ಇದೀಗ ದೊಡ್ಮನೆಯಲ್ಲಿ ಅಮೂಲ್ಯ ಗೌಡ ತನಗೆ ಕಳಪೆ ಕೊಡಲು ಮನಸಾಕ್ಷಿ ಒಪ್ಪುತ್ತಿಲ್ಲ ಎಂದು ಆರ್ಯವರ್ಧನ್ ಗುರೂಜಿಗೆ (Aryavardhan Guruji) ಕಳಪೆ ಕೊಟ್ಟಿದ್ದಾರೆ. ಅಮೂಲ್ಯ (Amulya Gowda) ಮಾತಿಗೆ ಗುರೂಜಿ ಬೇಸರ ಹೊರಹಾಕಿದ್ದಾರೆ.

    ಪ್ರತಿವಾರವೂ ಕೂಡ ಬಿಗ್ ಬಾಸ್ ಮನೆಯಲ್ಲಿ ಉತ್ತಮ ಮತ್ತು ಕಳಪೆಯನ್ನು ಸ್ಪರ್ಧಿಗಳಿಗೆ ಕೊಡಲಾಗುತ್ತದೆ. ಈ ವಾರವೂ ಕೂಡ ಉತ್ತಮ ಮತ್ತು ಕಳಪೆ ಹೆಸರನ್ನ ಸೂಚಿಸಲಾಗಿದೆ. ರೂಪೇಶ್ ಶೆಟ್ಟಿ (Roopesh Shetty) ಕ್ಯಾಪ್ಟನ್ ಆಗಿ ಮನೆಯನ್ನ ಉತ್ತಮವಾಗಿ ನಿಭಾಯಿಸಿದ್ದರು ಎಂಬ ಕಾರಣಕ್ಕೆ ರೂಪೇಶ್‌ಗೆ ಉತ್ತಮ ಕೊಡಲಾಗಿದೆ. ಹಾಗೆಯೇ ಗುರೂಜಿಗೆ ಕಳಪೆ ನೀಡಲಾಗಿದೆ. ಈ ವಾರ ಗುರೂಜಿ ಜೈಲಿಗೆ ತೆರಳಿದ್ದಾರೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ಆಯ್ತು, ಈಗ ಕಂಗನಾ ರಣಾವತ್‌ಗೂ ಕೇಸರಿ ಕಂಟಕ

    ಈ ಕಳಪೆಗೆ ಹೆಸರನ್ನ ಸೂಚಿಸಲು ಮೊದಲು ಅಮೂಲ್ಯ ಗೌಡ (Amulya Gowda) ಹಾಗೂ ಅರುಣ್ ಸಾಗರ್ (Arun Sagar) ತಕರಾರು ಮಾಡಿದರು. ಆ ನಂತರ ಅರುಣ್ ಸಾಗರ್ ಅವರು ಗುರೂಜಿ ಹೆಸರನ್ನ ಕಳಪೆಗೆ ಸೂಚಿಸಿದರು. ಇದು ಆಟದ ಫಾರ್ಮ್ಯಾಟ್ ಕಳಪೆಗೆ ಹೆಸರು ಹೇಳಲೇಬೇಕು ಎಂದು ಎಲ್ಲರೂ ಹೇಳಿದ ಬಳಿಕ ನನ್ನ ಮನಸಾಕ್ಷಿ ಒಪ್ಪುತ್ತಿಲ್ಲ. ನನಗೆ ನಾನೇ ಕಳಪೆ ಹೆಸರು ಹೇಳಲೇಬೇಕು ಎಂಬ ಕಾರಣಕ್ಕೆ ಗುರೂಜಿ ಹೆಸರು ಹೇಳುತ್ತಿದ್ದೇನೆ. ಆದರೆ, ಅವರು ನಿಜವಾಗಿಯೂ ಕಳಪೆ ಅಲ್ಲ ಎಂದು ಅಮೂಲ್ಯ ಹೇಳಿದ್ದಾರೆ.

    ಐ ಆಮ್ ಸಾರಿ ಬಿಗ್ ಬಾಸ್ ನಿಮಗೆ ನಾನು ಅಗೌರವ ತೋರುತ್ತಿಲ್ಲ. ಫಾರ್ಮ್ಯಾಟ್‌ಗೆ ಅಗೌರವ ತೋರುತ್ತಿಲ್ಲ. ನನಗೆ ಕಳಪೆ ಕಾಣಿಸುತ್ತಿಲ್ಲ. ಹೀಗಾಗಿ ಕಳಪೆ ಕೊಡೋದಕ್ಕೆ ನನ್ನ ಮನಸಾಕ್ಷಿ ಒಪ್ಪುತ್ತಿಲ್ಲ. ನನಗೆ ಶಿಕ್ಷೆ ಕೊಟ್ಟರೆ ನಾನೂ ತೆಗೆದುಕೊಳ್ಳೋಕೆ ರೆಡಿ ಇದ್ದೇನೆ. ಇದು ರಿಯಾಲಿಟಿ, ಫಾರ್ಮ್ಯಾಟ್ ಪ್ರಕಾರ ಮಾಡಲೇಬೇಕು ಎಂದು ಇತರರು ಹೇಳಿದಾಗ, ನನಗೆ ಫೋರ್ಸ್ ಮಾಡ್ತಿದ್ದೀರಾ. ಉತ್ತಮಗೆ ಕಾರಣ ಇದೆ. ಕಳಪೆಗೆ ಕಾರಣ ಸಿಗುತ್ತಿಲ್ಲ. ನನಗೆ ನಾನೇ ಕಳಪೆ ಹೇಳಲು ಮನಸಾಕ್ಷಿ ಒಪ್ಪಿಕೊಂಡಿಲ್ಲ. ಆರ್ಯವರ್ಧನ್ ಗುರೂಜಿ ನಿಜವಾಗಿಯೂ ಕಳಪೆ ಅಲ್ಲ. ಒಂದು ಹೆಸರು ಹೇಳಬೇಕಾಗಿರೋದ್ರಿಂದ ಹೇಳ್ತಿದ್ದೇನೆ ಅಷ್ಟೇ ಎಂದರು ಅಮೂಲ್ಯ ಗೌಡ.

    Live Tv
    [brid partner=56869869 player=32851 video=960834 autoplay=true]

  • ದೊಡ್ಮನೆಯಲ್ಲಿ ಬ್ರೇಕಪ್ ಮಾಡಿಕೊಂಡ ರಾಕೇಶ್ – ಅಮೂಲ್ಯ

    ದೊಡ್ಮನೆಯಲ್ಲಿ ಬ್ರೇಕಪ್ ಮಾಡಿಕೊಂಡ ರಾಕೇಶ್ – ಅಮೂಲ್ಯ

    ಬಿಗ್ ಬಾಸ್ ಮನೆಯಲ್ಲಿ (Bigg boss) ಹೈಲೈಟ್ ಆಗಿರುವ ಮತ್ತೊಂದು ಜೋಡಿ ಅಂದ್ರೆ ರಾಕೇಶ್ ಅಡಿಗ (Rakesh Agiga) ಮತ್ತು ಅಮೂಲ್ಯ ಗೌಡ (Amulya Gowda) ಇದೀಗ ಬೇರೆ ಬೇರೇ ಆಗಿದ್ದಾರೆ. ಟೀ ವಿಚಾರಕ್ಕೆ ಮನಸ್ತಾಪ ಆಗಿ, ದೂರ ದೂರ ಆಗಿದ್ದಾರೆ.

    ದೊಡ್ಮನೆಯಲ್ಲಿ ಸೋನು ನಂತರ ರಾಕೇಶ್‌ಗೆ ಸಖತ್ ಕ್ಲೋಸ್ ಆಗಿರೋದೆ ಅಮೂಲ್ಯ ಗೌಡ, ಮೊದಲಿನಿಂದಲೂ ಅಮ್ಮು ಮತ್ತೆ ರಾಕಿ ಒಬ್ಬರಿಗೊಬ್ಬರು ಸಾಥ್ ನೀಡುತ್ತಾ ಪ್ರಶಂಸೆ ವ್ಯಕ್ತಪಡಿಸುತ್ತಿದ್ದ ಈ ಜೋಡಿಯ ನಡುವೆ ಬಿರುಕು ಉಂಟಾಗಿದೆ. ಟೀ ವಿಚಾರಕ್ಕೆ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಗಲಾಟೆನೇ ಆಗಿದೆ. ಅಮ್ಮು ಮುನಿಸಿಗೆ ರಾಕಿ ಮನವೊಲಿಸಲು ಸೋತಿದ್ದಾರೆ. ಇದನ್ನೂ ಓದಿ:ನೆನಪಿರಲಿ ಪ್ರೇಮ್ ಪುತ್ರಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ: ಹೀರೋ ಯಾರು?

    ಟೀ ಅವರವರೇ ಮಾಡಿಕೋತ್ತಾರಾ, ಎಲ್ಲರಿಗೂ ಮಾಡೋದಾ ಎಂದು ರಾಕಿ ಮನೆ ಮಂದಿಗೆ ಕೇಳಿದ್ದಾರೆ. ಈ ವೇಳೆ ನನಗೆ ಹಾಲಿಗೆ ಜಾಸ್ತಿ ನೀರು ಹಾಕಬೇಡಿ. ನನಗೆ ಒಂದು ಪ್ಯಾಕೇಟ್ ಹಾಲು ಕೊಟ್ಟು ಬಿಡಿ ಎಂದು ಈ ವೇಳೆ ಅಮೂಲ್ಯ ಹೇಳಿದ್ದಾರೆ. ನನಗೆ ಪ್ರತಿಕ್ರಿಯೆ ನೀಡಿಲ್ಲ ನೀವು ಎಂದು ಅಮ್ಮು, ರಾಕಿ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ಸಾರಿ ಈ ವೇಳೆ ನನ್ನ ಗಮನಕ್ಕೆ ಬಂದಿಲ್ಲ ಎಂದ ರಾಕಿ ಮಾತಿಗೆ, ನಾನು ನಿಮ್ಮ ಗಮನಕ್ಕೆ ಬಂದಿಲ್ಲ ಎಂದಿದ್ದು ಹಿಂಸೆ ಆಯ್ತು. ನೀವು ಎರಡು ಹೆಜ್ಜೆ ಮುಂದೆ ಬಂದಿದ್ದರೆ ನಿಮ್ಮ ಇಗೋ ಕಮ್ಮಿಯಾಗುತ್ತಿರಲಿಲ್ಲ ಎಂದಿದ್ದಾರೆ.

    ನನಗೆ ಕಾಮನ್ ಸೆನ್ಸ್ ಇಲ್ಲಾ, ನಿಮ್ಮ ಅಷ್ಟು ಥಿಂಕಿಂಗ್ ಲೆವಲ್‌ಗೆ ನಾನಿಲ್ಲ ಎಂದು ರಾಕಿ ಮುಂದೆ ಕಣ್ಣೀರಿಟ್ಟಿದ್ದಾರೆ. ಒಟ್ನಲ್ಲಿ ರಾಕಿ ಕ್ಯಾಪ್ಟೆನ್ಸಿ ಸಮಯದಲ್ಲಿ ಟೀ ವಿಚಾರಕ್ಕೆ ದೊಡ್ಡ ಕಲಹ ಉಂಟಾಗಿದೆ. ಈ ಜೋಡಿ ಇದೀಗ ದೂರ ದೂರ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್‌ನಲ್ಲಿ ಮತ್ತೆ ಮುಂದುವರೆದ ರಾಕೇಶ್-ಅಮೂಲ್ಯ ಲವ್ವಿ ಡವ್ವಿ

    ಬಿಗ್ ಬಾಸ್‌ನಲ್ಲಿ ಮತ್ತೆ ಮುಂದುವರೆದ ರಾಕೇಶ್-ಅಮೂಲ್ಯ ಲವ್ವಿ ಡವ್ವಿ

    ಟಿಟಿ ಸೀಸನ್‌ನಿಂದ ಟಿವಿ ಬಿಗ್ ಬಾಸ್‌ವರೆಗೆ(Bigg Boss) ರಾಕೇಶ್ ಅಡಿಗ ಸದ್ದು ಮಾಡ್ತಿದ್ದಾರೆ. ಸೋನು ಗೌಡ ನಂತರ ಅಮೂಲ್ಯ ಜೊತೆ ರಾಕೇಶ್ ಅಡಿಗ ಕ್ಲೋಸ್ ಆಗಿದ್ದಾರೆ. ನಿನಗೆ ಏನೇ ಕಷ್ಟ ಇದ್ದರೂ ನನಗೆ ಹೇಳಿಕೋ ಎಂದು ಭರವಸೆ ಕೊಡುವ ಮೂಲಕ ಅಮೂಲ್ಯಗೆ ರಾಕಿ ಸಾಥ್‌ ನೀಡಿದ್ದಾರೆ.

    ಬಿಗ್ ಬಾಸ್(Bigg Boss) ಓಟಿಟಿಯಲ್ಲಿ ಸೋನು(Sonu Gowda) ಜೊತೆ ರಾಕೇಶ್ ಹೈಲೈಟ್ ಆಗಿದ್ದರು. ಇದೀಗ ಟಿವಿ ಬಿಗ್ ಬಾಸ್‌ನಲ್ಲಿ ಅಮೂಲ್ಯ ಜೊತೆ ರಾಕೇಶ್ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಟಾಸ್ಕ್ ಜೊತೆ ಪ್ರತಿಯೊಂದು ಹಂತದಲ್ಲೂ ಇಬ್ಬರು ಜೊತೆಯಾಗಿದ್ದಾರೆ. ಮನೆಯವರ ನೆನಪಾಗುತ್ತಿದೆ ಎಂದು ಅಮೂಲ್ಯಗೆ ರಾಕೇಶ್ (Rakesh adiga) ಮುದ್ದಾಗಿ ಸಮಾಧಾನ ಮಾಡಿದ್ದಾರೆ.

    ಮನೆಗೆ ಹೋಗಲೇಬೇಕು ಎಂದೇನಿಸುತ್ತಿದೆ. ಆದರೆ ಏನು ಮಾಡೋಕೆ ಆಗುತ್ತೆ ಎಂದು ಅಮೂಲ್ಯ ಎಂದಿದ್ದಾರೆ. ನಾವೆಲ್ಲ ಲೈಕ್ ಮೈಂಡೆಡ್ ಇರೋದರಿಂದ ಓಕೆ, ನಿನಗೆ ಏನೇ ಬೇಸರ ಇದ್ದರೂ, ಹೇಳೋದ್ದಕ್ಕೆ ಹಿಂಜರಿಯಬೇಡ. ನೀನು ನಮ್ಮ ಮನೆಯಲ್ಲಿ ಒಬ್ಬಳು ಎಂದು ಫೀಲ್ ಆಗುತ್ತೀಯಾ ಎಂದು ಅಮೂಲ್ಯಗೆ ರಾಕೇಶ್ ಹೇಳಿದ್ದಾರೆ. ಇದನ್ನೂ ಓದಿ:ಮತದಾರರ ಪಟ್ಟಿ ವಿವಾದ: ಕೆಜಿಎಫ್ ಸೇಡಿನ ಕಥೆಯೂ ಅಲ್ಲ, ಕಾಂತಾರ ದಂತಕಥೆಯೂ ಅಲ್ಲ ಎಂದ ಸಿದ್ದರಾಮಯ್ಯ

    ಇನ್ನೂ ಬಿಗ್ ಬಾಸ್ ಮನೆಯಲ್ಲಿ ಸದಾ ಹೆಣ್ಣು ಮಕ್ಕಳ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುವ ರಾಕೇಶ್ ಅಡಿಗ, ಅಮೂಲ್ಯ ಜೊತೆಗಿನ ಸ್ನೇಹ ಸಖತ್ ಹೈಲೈಟ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಸೋನು ನಂತರ ಬಿಗ್ ಬಾಸ್ ಮನೆಯಲ್ಲಿ ಹೆಚ್ಚಿದ ರಾಕಿ -ಅಮ್ಮು ಆಪ್ತತೆ

    ಸೋನು ನಂತರ ಬಿಗ್ ಬಾಸ್ ಮನೆಯಲ್ಲಿ ಹೆಚ್ಚಿದ ರಾಕಿ -ಅಮ್ಮು ಆಪ್ತತೆ

    ಬಿಗ್ ಬಾಸ್ ಮನೆಯ (Bigg Boss House)  ಲವರ್ ಬಾಯ್ ಆಗಿ ಕಾಣಿಸಿಕೊಂಡಿರುವ ರಾಕೇಶ್ ಅಡಿಗ, ಓಟಿಟಿಯಲ್ಲಿ ಸೋನು ಗೌಡ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಟಿವಿ ಬಿಗ್ ಬಾಸ್‌ನಲ್ಲಿ ನಟಿ ಅಮೂಲ್ಯ ಜೊತೆ ಹೆಚ್ಚು ಆಪ್ತತೆ ಬೆಳೆಸಿಕೊಂಡಿದ್ದಾರೆ. ಇನ್ನೂ ಅಮ್ಮುಗೆ ಸದಾ ಕೀಟಲೆ ಮಾಡ್ತಾರೆ ಜೋಶ್ ಹುಡುಗ ರಾಕೇಶ್.

    ದೊಡ್ಮನೆಯಲ್ಲಿ ಸಾನ್ಯ(Sanya Iyer) ಮತ್ತು ರೂಪೇಶ್ ಶೆಟ್ಟಿ(Roopesh Shetty) ನಂತರ ಇದೀಗ ರಾಕಿ ಮತ್ತು ಅಮ್ಮು ಜೋಡಿ ಸಖತ್ ಹೈಲೆಟ್ ಆಗುತ್ತಿದೆ. ಮನೆಯಲ್ಲಿ ಎಲ್ಲರಿಗೂ ರಾಕಿ ಅಂದ್ರೆ ತುಂಬಾ ಇಷ್ಟ. ರಾಕಿಗೂ ಹುಡುಗಿಯರು ಅಂದ್ರೆ ತುಂಬಾ ಪ್ರೀತಿ, ಸದಾ ಎಲ್ಲಾ ಹುಡುಗಿರ ಬಗ್ಗೆ ಕೇರ್ ಮಾಡ್ತಾ ಇರ್ತಾರೆ. ಇದೀಗ ಅಮೂಲ್ಯ(Amulya Gowda) ಜೊತೆ ಹೆಚ್ಚಾಗಿ ಹೈಲೈಟ್ ಆಗಿದ್ದಾರೆ. ಇದನ್ನೂ ಓದಿ:ಮತ್ತೆ `ಕಿರಿಕ್ ಪಾರ್ಟಿ’ ಟೀಮ್‌ಗೆ ರಶ್ಮಿಕಾ ಮಂದಣ್ಣ ಸಾಥ್: ಪ್ರಮೋದ್ ಶೆಟ್ಟಿ

    ಸದಾ ಅಮ್ಮುಗೆ ಕೀಟಲೆ ಕೊಡುತ್ತಾ, ನಗಿಸುತ್ತಾ ಎಲ್ಲಾ ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತಾ ಇದ್ದಾರೆ. ಇನ್ನೂ ರಾಕಿ ಅಡುಗೆ ಮನೆಗೆ ಕೂರಲು ಹೋದಾಗ ಚೇರ್ ಬೀಳುವುದರಲ್ಲಿ ಇರುತ್ತೆ. ಆಗ ದಿವ್ಯಾ ಹುಷಾರ್ ಬೀಳುತ್ತೀರಾ ಎನ್ನುತ್ತಾರೆ. ಅದಕ್ಕೆ ನೇಹಾ, ಅವನು ಯಾವಾಗಲೂ ಬಿದ್ದು ಹೋಗಿ ಆಗಿದೆ ಎಂದು ಅಮ್ಮು ವಿಚಾರವಾಗಿ ರಾಕಿ ಕಾಲೆಳೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರೂಪೇಶ್ ಶೆಟ್ಟಿ ಚಿನ್ನದ ಖಜಾನೆಗೆ ಕನ್ನಾ ಹಾಕಿದ ಕಳ್ಳರು

    ರೂಪೇಶ್ ಶೆಟ್ಟಿ ಚಿನ್ನದ ಖಜಾನೆಗೆ ಕನ್ನಾ ಹಾಕಿದ ಕಳ್ಳರು

    ದೊಡ್ಮನೆಯ ಆಟ ದಿನ ಕಳೆದಂತೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ವೀಕ್ಷಕರಿಗೆ ಟಿವಿ ಬಿಗ್ ಬಾಸ್(Bigg Boss) ನೋಡಲು ಮತ್ತಷ್ಟು ಉತ್ಸುಕರಾಗಿದ್ದಾರೆ. ಕ್ಯಾಪ್ಟೆನ್ಸಿ ವಿಚಾರವಾಗಿ ಮನೆಯಲ್ಲಿ ಸ್ಪರ್ಧಿಗಳ ನಡುವೆ ಜಟಾಪಟಿ ನಡೆಯುತ್ತಿದೆ. ಮೂರನೇ ವಾರದ ಕ್ಯಾಪ್ಟೆನ್ಸಿ ಟಾಸ್ಕ್‌ಗೆ ಸ್ಪರ್ಧಿಗಳನ್ನು ಆಯ್ಕೆ ಮಾಡಲು ಬಿಗ್ ಬಾಸ್ ಕಡೆಯಿಂದ ರೋಚಕ ಟಾಸ್ಕೊಂದು ಸಿಕ್ಕಿತ್ತು. ಚಿನ್ನದ ಗಣಿ ಟಾಸ್ಕ್‌ನಲ್ಲಿ ರೂಪೇಶ್ ಗಳಿಸಿದ ಚಿನ್ನವನ್ನು ನೇಹಾ ಮತ್ತು ಅಮೂಲ್ಯ ಕಳ್ಳತನ ಮಾಡಿದ್ದಾರೆ. ರೂಪೇಶ್ ಶೆಟ್ಟಿ (Roopesh Shetty), ಚಿನ್ನ ಸಿಗದೇ ಪರದಾಡಿದ್ದಾರೆ.

    ರೂಪೇಶ್ ಶೆಟ್ಟಿ ಅವರು ಒಟಿಟಿಯಲ್ಲಿ ಗಮನ ಸೆಳೆದಿದ್ದರು. ಒಟಿಟಿಯ ಟಾಪರ್ ಆಗಿ ಹೊರಹೊಮ್ಮಿದ್ದರು. ಈಗ ಅವರು ಟಿವಿ ಸೀಸನ್‌ನಲ್ಲೂ ಅವರು ಮಿಂಚುತ್ತಿದ್ದಾರೆ. ಚಿನ್ನದ ಗಣಿ ಟಾಸ್ಕ್‌ನಲ್ಲಿ ರೂಪೇಶ್ ಶೆಟ್ಟಿ ಅವರು ಒಳ್ಳೆಯ ಪರ್ಫಾರ್ಮೆನ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಈ ಟಾಸ್ಕ್ ನಂತರದಲ್ಲಿ ಕಳ್ಳರ ಕಾಟ ಶುರುವಾಗಿದೆ. ಇದನ್ನೂ ಓದಿ:ಕನ್ನಡದ ಹೆಸರಲ್ಲಿ ರೋಲ್‌ಕಾಲ್‌: ಪ್ರೂವ್ ಮಾಡಿದರೆ ನೇಣಿಗೇರುವೆ ಎಂದ ರೂಪೇಶ್ ರಾಜಣ್ಣ

    ಕರಾವಳಿ ಹುಡುಗ ರೂಪೇಶ್ ಬಳಿ ಒಂದೂವರೆ ಕೆ.ಜಿಗೂ ಅಧಿಕ ಚಿನ್ನ ಇತ್ತು. ಇದನ್ನು ಅಮೂಲ್ಯ ಹಾಗೂ ನೇಹಾ ಎಗರಿಸಿದ್ದರು. ರೂಪೇಶ್ ಹೋಗಿ ನೋಡಿದಾಗ ಅಲ್ಲಿ ಚಿನ್ನವೇ ಇರಲಿಲ್ಲ. ಇದನ್ನು ಕಂಡು ರೂಪೇಶ್‌ಗೆ ಶಾಕ್ ಆಗಿದೆ. ನನ್ನ ಚಿನ್ನವನ್ನು ನೀವು ಕದ್ದಿದ್ದೀರಾ ಎಂದು ಎಲ್ಲರಿಗೂ ಪ್ರಶ್ನೆ ಮಾಡಿದ್ದಾರೆ ರೂಪೇಶ್. ಆದರೆ, ನಿಜವಾದ ಕಳ್ಳ ಯಾರು ಎಂಬುದು ಗೊತ್ತಾಗದೇ ರೂಪೇಶ್ ಒದ್ದಾಡಿದ್ದಾರೆ.

    ಮಾರನೇ ದಿನ ನೇಹಾ(Neha Gowda) ಹಾಗೂ ಅಮೂಲ್ಯ (Amulya Gowda) ಬಂದು ಚಿನ್ನ ಕದ್ದಿದ್ದು ನಾವೇ ಎಂದು ಒಪ್ಪಿಕೊಂಡಿದ್ದಾರೆ. ಜತೆಗೆ ಆ ಚಿನ್ನವನ್ನು ಮರಳಿ ರೂಪೇಶ್ ಶೆಟ್ಟಿಗೆ ನೀಡಿದ್ದಾರೆ. ಕಳೆದುಕೊಂಡ ಚಿನ್ನ ಸಿಕ್ಕ ಖುಷಿಯಲ್ಲಿದ್ದಾರೆ ರೂಪೇಶ್.

    Live Tv
    [brid partner=56869869 player=32851 video=960834 autoplay=true]

  • ಮನೆಯಲ್ಲಿ ಮಾಡಿದ ಛತ್ರಿ ಕೆಲಸದ ಬಗ್ಗೆ ಬಾಯ್ಬಿಟ್ಟ ಅಮೂಲ್ಯ ಗೌಡ

    ಮನೆಯಲ್ಲಿ ಮಾಡಿದ ಛತ್ರಿ ಕೆಲಸದ ಬಗ್ಗೆ ಬಾಯ್ಬಿಟ್ಟ ಅಮೂಲ್ಯ ಗೌಡ

    `ಕಮಲಿ’ (Kamali Serial) ಧಾರಾವಾಹಿಯ ಮೂಲಕ ಮನೆಮಾತಾದ ನಟಿ ಅಮೂಲ್ಯ ಗೌಡ (Amulya Gowda) ಇದೀಗ ಬಿಗ್ ಬಾಸ್ (Bigg Boss) ಮನೆಗೆ ಕಾಲಿಟ್ಟಿದ್ದಾರೆ. ತಮ್ಮ ಹಾಟ್ ಲುಕ್ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಇದೀಗ ಚಿಕ್ಕ ವಯಸ್ಸಿನಲ್ಲಿ ತಾವು ಮನೆಯಲ್ಲಿ ಕಳ್ಳತನ ಮಾಡಿರುವ ಕಥೆಯನ್ನ ನಟಿ ರಿವೀಲ್ ಮಾಡಿದ್ದಾರೆ. ತಮ್ಮ ತರಲೆ ಕೆಲಸದ ಬಗ್ಗೆ ಅಮೂಲ್ಯ ಬಾಯ್ಬಿಟ್ಟಿದ್ದಾರೆ.

    ಮೂರನೇ ವಾರದತ್ತ ದೊಡ್ಮನೆಯ ಆಟ ಮುನ್ನುಗ್ಗುತ್ತಿದೆ. ಸಾಕಷ್ಟು ಸ್ಪರ್ಧಿಗಳ ಮಧ್ಯೆ ವಿಶಿಷ್ಟ ವ್ಯಕ್ತಿತ್ವ ಮತ್ತು ಕಾರ್ಯ ವೈಖರಿಯ ಮೂಲಕ ಅನೇಕರ ಗಮನ ಸೆಳೆದಿದ್ದಾರೆ. ಟಾಸ್ಕ್‌ಗಳಲ್ಲಿ ಸ್ಟ್ರಾಂಗ್‌ ಆಗಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನೂ ಮನೆಯಿಂದ ಹೊರಹೋಗಲು ನಾಮೀನೇಟ್ ಆಗಿದ್ದರು ಕೂಡ ಅತೀ ಹೆಚ್ಚು ವೋಟ್ ಪಡೆದು ಸೇವ್ ಆಗಿದ್ದಾರೆ. ಸದ್ಯ ತಮ್ಮ ಬಾಲ್ಯದ ತರಲೆ ಕೆಲಸದ ಬಗ್ಗೆ ಮನೆಮಂದಿಯ ಜೊತೆ ನಟಿ ಹಂಚಿಕೊಂಡಿದ್ದಾರೆ.

    ಬಾಲ್ಯದಲ್ಲಿ ಅಣ್ಣ ನಾನು ಆವಾಗವಾಗ ಮನೆಯಲ್ಲಿ ದುಡ್ಡು ಎತ್ತುತ್ತಿದ್ವಿ. ನಮ್ಮ ಮನೆಯಲ್ಲಿ ಜಾಸ್ತಿ ಹಣ ಕದ್ರೆ ಅದು ನಮ್ಮ ಅಣ್ಣ ಮಾಡಿದ್ದಾನೆ ಅಂತ. 100 ರೂಪಾಯಿ ಕಡಿಮೆ ಕದ್ದರೆ ಅದು ನಾನು ಮಾಡಿದೆ ಅಂತ. ಅವನೇ ಮಾಡಿದ್ದರೂ ಅದು ನನ್ನ ಮೇಲೆ ಬರುತ್ತಿತ್ತು. ಇದೆಲ್ಲಾ ಕಾಲೇಜ್ ಟೈಂನಲ್ಲಿ ಆಗಿರುವುದು. ಅಮ್ಮಂಗೂ ಗೊತ್ತು ನಾವು ದುಡ್ಡು ಎತ್ತುತ್ತಿದ್ವಿ ಅಂತ ಅವರು ಬಿಡು ಮಕ್ಕಳು ಅಲ್ವಾ ಅಂತ ಸುಮ್ಮನಿದ್ದರು.

     

    View this post on Instagram

     

    A post shared by Amulya M O (@amulya_gowdaa_official)

    ಒಂದು ದಿನ ಅಣ್ಣ 6 ಸಾವಿರ ರೂಪಾಯಿ ತೆಗೆದುಕೊಂಡಿದ್ದಾನೆ. ನಮ್ಮ ಮನೆಯಲ್ಲಿ ಹೇಗೆ ಅಂದ್ರೆ ಒಂದು ತಿಂಗಳು ಆ ಹಣದ ಬಗ್ಗೆ ಮಾತನಾಡುತ್ತಿರಲಿಲ್ಲ ಆಮೇಲೆ ನಾವು ಅವತ್ತು ಅಲ್ಲಿ ಹುಡುಕುತ್ತಿದ್ದ ಹಣ ನಾನೆ ಎತ್ಕೊಂಡಿದ್ದು ಅಂತಿದ್ವಿ. ಆ 6 ಸಾವಿರ ರೂಪಾಯಿ ಅಣ್ಣನ ಪ್ಯಾಂಟ್‌ನಲ್ಲಿತ್ತು. ಹೊರಗಡೆ ಹೋಗಿ ಬಂದಿದ್ದ. ಅವತ್ತು ಅವನ ಜೇಬಿಗೆ ಕೈ ಹಾಕಿದ್ದರೆ ಹಣ ಜಾಸ್ತಿ ಇದೆ. ಮನೆಯಲ್ಲಿ ಯಾರೇ ಕದ್ದಿದ್ದರು ಅದು ನಮಗೆ ಗೊತ್ತಿರುತ್ತೆ ಏಕೆಂದರೆ ಒಂದು ಅವನು ಮಾಡಬೇಕು ಇಲ್ಲ ನಾನು ಮಾಡಬೇಕು. ಇದನ್ನೂ ಓದಿ:ಬಿಗ್‍ಬಾಸ್ ಮನೆಯಿಂದ ನವಾಜ್ ಔಟ್- ಇಷ್ಟವಾಗಲಿಲ್ಲ ಹುಡುಗನ ನಡೆ

    ಅಣ್ಣ ಮಾಡಿದ ಪಿಕ್‌ಪಾಕೆಟ್‌ನಲ್ಲಿ ಅವನಿಗೆ ಗೊತ್ತಾಗದ ಹಾಗೇ ಪಾಕೆಟ್‌ನಿಂದ ದುಡ್ಡು ತೆಗೆದುಕೊಂಡೆ. ಗೊತ್ತಾದರೆ ಬೈಯುತ್ತಾನೆ ಎಂದು ಸಣ್ಣದಾಗಿ ಜೇಬಿಗೆ ತೂತು ಮಾಡಿದೆ ಅಂದ್ರೆ ಎಲ್ಲೂ ತೂತಾಗಿ ಬಿದಿತ್ತು ಅಂದುಕೊಳ್ಳಬೇಕು ಅಂತ. ಒಂದು ವಾರ ಅವನು ನನ್ನ ಜೊತೆ ಮಾತನಾಡಲಿಲ್ಲ. ಒಂದು ತಿಂಗಳು ಆದ ಮೇಲೆ ಅಮ್ಮಂಗೆ ಹೇಳಿದ. ಅಮ್ಮ ನಿನ್ನ ಮಗಳು ಎಷ್ಟು ಛತ್ರಿ ಅಂದ್ರೆ ನಾನೇ ನಿಮ್ಮ ಲಾಕರ್‌ನಿಂದ ಹಣ ತೆಗೆದಿದ್ದೆ, ಅವಳು ನನ್ನ ಪಾಕೆಟ್‌ನಿಂದ ತೆಗೆದುಕೊಂಡು ಪಾಕೆಟ್ ತೂತು ಮಾಡಿಟ್ಟಿದ್ದಾಳೆ ಎಂದು ಸತ್ಯ ಹೇಳಿದ್ದ ಎಂದು ತಮ್ಮ ಬಾಲ್ಯದಲ್ಲಿ ತನ್ನ ಛತ್ರಿ ಕೆಲಸದ ಬಗ್ಗೆ ಮಾತನಾಡಿದ್ದಾರೆ. ಅಮೂಲ್ಯ(Amulya Gowda) ಮಾಡಿದ್ದ ತರಲೆ ಕೆಲಸ ಕೇಳಿ ಮನೆ ಮಂದಿ ನಕ್ಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರಾಂಕ್ ಮಾಡಿದವರಿಗೆ ಬಿಗ್ ಶಾಕ್ ಕೊಟ್ರು ಬಿಗ್ ಬಾಸ್: ದೊಡ್ಮನೆ ಶೇಕ್

    ಪ್ರಾಂಕ್ ಮಾಡಿದವರಿಗೆ ಬಿಗ್ ಶಾಕ್ ಕೊಟ್ರು ಬಿಗ್ ಬಾಸ್: ದೊಡ್ಮನೆ ಶೇಕ್

    ದೊಡ್ಮನೆಯಲ್ಲಿ ನಗು, ಅಳು, ಜಗಳ ಜೊತೆಗೆ ಪ್ರಾಂಕ್ ಕೂಡ ಅಷ್ಟೇ ಹೈಲೆಟ್ ಆಗುತ್ತಿದೆ. ಈ ಹಿಂದೆ ಟೂತ್ ಪೇಸ್ಟ್ ಮುಕ್ಕಳಿಸಿ ಫಿಟ್ಸ್ ಬಂದಿರುವ ರೀತಿ ಅಭಿನಯಿಸಿ ರಾಕೇಶ್ ಅಡಿಗ(Rakesh Adiga) ಪ್ರಾಂಕ್ ಮಾಡಿದ್ದರು. ಇದರಿಂದ ಎಲ್ಲರೂ ಆಘಾತಗೊಂಡಿದ್ದರು. ಈ ತರಹದ ಪ್ರಾಂಕ್‌ಗಳು ಬೇಡ ಎಂದು ಕಿಚ್ಚ ಸುದೀಪ್ ಕೂಡ ಕಿವಿ ಹಿಂಡಿದ್ದರು. ಇಷ್ಟಾದರೂ, ಪ್ರಾಂಕ್ ಮಾಡೋದನ್ನ ನಿಲ್ಲಿಸಿಲ್ಲ. ರಾಕೇಶ್ ಅಡಿಗ ಮತ್ತು ಅನುಪಮಾ ಮಾಡಿದ ಪ್ರಾಂಕ್‌ಗೆ ಬಿಗ್ ಬಾಸ್ (Bigg Boss)  ಖಡಕ್ ಪಾಠ ಕಲಿಸಿದ್ದಾರೆ.

    ಎರಡನೇ ವಾರದ ಟಾಸ್ಕ್ ನಲ್ಲಿ ದೀಪಿಕಾ ದಾಸ್(Deepika Das) ಟೀಮ್ ವಿರುದ್ಧ ಅನುಪಮಾ ಗೌಡ(Anupama Gowda) ತಂಡ ಜಯಗಳಿಸಿದರು. ಇದೇ ಜೋಶ್ ನಲ್ಲಿ ಒಂದು ಹೆಜ್ಜೆ ಮುಂದಕ್ಕೆ ಹೋದ ರಾಕೇಶ್ ಅಡಿಗ ಮತ್ತು ಅನುಪಮಾ ಗೌಡ ತಮ್ಮ ಪ್ರಾಂಕ್‌ನಲ್ಲಿ ಬಿಗ್ ಬಾಸ್‌ ಹೆಸರನ್ನೂ ಬಳಸಿಕೊಂಡರು. ರೂಲ್ ಬುಕ್, ನಿಯಮ ಅಂತಾ ಹೇಳಿ ಗುರೂಜಿರನ್ನ ಏಮಾರಿಸಿದರು. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ 8 ಮಂದಿ ಪೈಕಿ 4 ಮಂದಿಯನ್ನ ಆಯ್ಕೆ ಮಾಡಬೇಕು ಅಂತ ಗುರೂಜಿಗೆ ಫೂಲ್ ಮಾಡಿದರು. ಈಗ ಇದೇ ಪ್ರಾಂಕ್ ಬ್ಯಾಕ್ ಫೈಯರ್ ಆಗಿದೆ. ಇದನ್ನೂ ಓದಿ: ಜೋಗಿ ಪ್ರೇಮ್- ಧ್ರುವ ಸರ್ಜಾ ಚಿತ್ರದ ಟೈಟಲ್ ಟೀಸರ್ ಕಾರ್ಯಕ್ರಮಕ್ಕೆ ಮೋಹನ್ ಲಾಲ್

    ಕ್ಯಾಪ್ಟನ್ ವಿಚಾರವಾಗಿ ಗುರೂಜಿಗೆ ಪ್ರಾಂಕ್ ಮಾಡಲು ರಾಕೇಶ್ ಮತ್ತು ಅನುಪಮಾ ಮುಂದಾದರು. ಪ್ರಾಂಕ್ ಐಡಿಯಾ ಕೊಟ್ಟಿದ್ದು ರಾಕೇಶ್ ಅಡಿಗ ಅವರದಾಗಿದ್ದು, ರೂಲ್ ಬುಕ್ ಕೂಡ ಈ ವೇಳೆ ಬಳಕೆ ಮಾಡಿಕೊಂಡಿದ್ದಾರೆ. ಟಾಸ್ಕ್‌ಗೆ 8 ಜನರಲ್ಲಿ 4 ಜನ ಕ್ಯಾಪ್ಟನ್‌ ಟಾಸ್ಕ್‌ಗೆ ಆಯ್ಕೆ ಮಾಡಬೇಕು ಅಂತ ಓದಿದ್ದಾರೆ. ಯಾರೂ ಗುರೂಜಿ ಅವರ ಹೆಸರನ್ನ ಹೇಳೋದು ಬೇಡ. ನಾವು ನಾವೇ ಕಿತ್ತಾಡೋಣ ಎಂದು ಅನುಪಮಾ ಗೌಡಗೆ ರಾಕೇಶ್ ಅಡಿಗ ಈ ಮೊದಲೇ ಮಾತನಾಡಿಕೊಂಡಿದ್ದಾರೆ.

    8 ಜನರ ಪೈಕಿ ವೋಟಿಂಗ್ ತೆಗೆದುಕೊಂಡಾಗ, ಯಾರೂ ಗುರೂಜಿ ಹೆಸರು ಹೇಳಲಿಲ್ಲ. ಇದರಿಂದ ಬೇಸರಗೊಂಡ ಗುರೂಜಿ, ನನಗೆ ಒಂದೂ ವೋಟ್ ಬಿದ್ದಿಲ್ಲ. ನಾನು ಯಾರಿಗೂ ವೋಟ್ ಕೊಡಲ್ಲ. ನಿಮ್ಮ ವೋಟ್‌ಗಳನ್ನ ನೀವೇ ಹಂಚಿಕೊಳ್ಳಿ ಎಂದು ರಾಂಗ್ ಆಗಿದ್ದಾರೆ. ಈ ವೇಳೆ ಎಲ್ಲರೂ ನಗಲು ಆರಂಭಿಸಿದರು. ಬಳಿಕ ಇದು ಪ್ರಾಂಕ್ ಎಂದು ಆರ್ಯವರ್ಧನ್ ಗುರೂಜಿ ಅರಿತರು.

    ಕ್ಯಾಪ್ಟನ್ಸಿ ಟಾಸ್ಕ್ ಆಯ್ಕೆ ವಿಚಾರವಾಗಿ ನಡೆದ ಪ್ರಾಂಕ್ ಇದೀಗ ಬ್ಯಾಕ್ ಫೈಯರ್ ಆದಂತಿದೆ. ಪ್ರಾಂಕ್ ಮಾಡಿದವರಿಗೆ ಬಿಗ್ ಬಾಸ್ ಬಿಗ್ ಶಾಕ್ ಕೊಟ್ಟಿದ್ದಾರೆ. ಪ್ರಾಂಕ್‌ನಲ್ಲಿ ಆಯ್ಕೆ ಆದ ನಾಲ್ಕು ಮಂದಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಆಗಿದ್ದಾರೆ ಎಂದು ಬಿಗ್ ಬಾಸ್ ಘೋಷಿಸಿದ್ದಾರೆ. ದರ್ಶ್ ,ಮಯೂರಿ, ಅನುಪಮಾ, ರಾಕೇಶ್ ಅಡಿಗ ಇಷ್ಟು ಜನ ಕ್ಯಾಪ್ಟನ್ ಟಾಸ್ಕ್ ಆಯ್ಕೆ ಆಗಿದ್ದಾರೆ ಎಂದು ಘೋಷಿಸಿ, ಬಿಗ್ ಬಾಸ್ ಶಾಕ್ ಕೊಟ್ಟಿದ್ದಾರೆ. ಬಿಗ್ ಬಾಸ್ ಹೆಸರು ಬಳಕೆ ಮಾಡಿ ಪ್ರಾಂಕ್ ಮಾಡಿದ್ದಕ್ಕೆ ಬಿಗ್ ಬಾಸ್ ಈ ಮೂಲಕ ಮನೆ ಮಂದಿಗೆ ಪಾಠ‌ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]