Tag: amulya

  • ಸ್ಯಾಂಡಲ್‌ವುಡ್‌ಗೆ ಗೋಲ್ಡನ್ ಕ್ವೀನ್ ಅಮೂಲ್ಯ ಕಮ್‌ಬ್ಯಾಕ್

    ಸ್ಯಾಂಡಲ್‌ವುಡ್‌ಗೆ ಗೋಲ್ಡನ್ ಕ್ವೀನ್ ಅಮೂಲ್ಯ ಕಮ್‌ಬ್ಯಾಕ್

    ಗೋಲ್ಡನ್‌ಕ್ವೀನ್ ಅಮೂಲ್ಯ (Amulya) ಬರೋಬ್ಬರಿ 8 ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಪೀಕಬೂ (Peekaboo Movie) ಚಿತ್ರವನ್ನ ಒಪ್ಪಿಕೊಳ್ಳುವ ಮೂಲಕ ಮತ್ತೆ ಬಣ್ಣದ ಬದುಕಿಗೆ ನಟಿ ಅಮೂಲ್ಯ ಹಿಂದಿರುಗಿದ್ದಾರೆ. ಮಂಜು ಸ್ವರಾಜ್ ನಿರ್ದೇಶನದ ಪೀಕಬೂ ಚಿತ್ರದಲ್ಲಿ ಅಮೂಲ್ಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ.

    ನಟಿ ಅಮೂಲ್ಯ ಅವರಿಗೆ ಇಂದು (ಸೆ.14) ಹುಟ್ಟುಹಬ್ಬದ ಸಂಭ್ರಮ. ಈ ವೇಳೆ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆ ಆಗಿದೆ. ಮಂಜು ಸ್ವರಾಜ್ ಅಮೂಲ್ಯಗೆ ನಿರ್ದೇಶಿಸುತ್ತಿರುವ ಎರಡನೇ ಸಿನಿಮಾ. ಇದಕ್ಕೂ ಮುಂಚೆ `ಗೋಲ್ಡನ್ ಸ್ಟಾರ್’ ಗಣೇಶ ಮತ್ತು `ಗೋಲ್ಡನ್ ಕ್ವೀನ್’ ಅಮೂಲ್ಯ ಅವರೊಟ್ಟಿಗೆ ಶ್ರಾವಣಿ ಸುಬ್ರಮಣ್ಯ ಸಿನಿಮಾ ಮಾಡಿದ್ದು, ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಈಗ ಮಾಡುತ್ತಿರುವ ಸಿನಿಮಾ ಪೀಕಬೂ ಎನ್ನುವ ಶೀರ್ಷಿಕೆಯಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಇದನ್ನೂ ಓದಿ: ಅದೊಂದು ಹಾಡಿನಿಂದ ದಿಢೀರ್ ಫೇಮಸ್ ಆದ ಯುವತಿ – ಇನ್ಸ್ಟಾದಲ್ಲಿ 150 ಇದ್ದ ಫಾಲೋವರ್ಸ್ ಈಗ 40,000

    ಸದ್ಯಕ್ಕೆ ಈ ಚಿತ್ರದ ತಾಂತ್ರಿಕ ವರ್ಗ ಅಂತಿಮವಾಗಿದ್ದು, ಕಲಾವಿದರು ಇನ್ನ ಕೆಲವೇ ದಿನಗಳಲ್ಲಿ ಅಂತಿಮಗೊಳ್ಳಲಿದೆ. ಸುರೇಶ್ ಬಾಬು ಬಿ ಚಿತ್ರದ ಛಾಯಾಗ್ರಾಹಕರಾದರೆ, ವೀರ್ ಸಮರ್ಥ್ ಮತ್ತು ಶ್ರೀಧರ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಶ್ರೀ ಕೆಂಚಾಂಬಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ಗಣೇಶ್ ಕೆಂಚಾಂಬಾ ನಿರ್ಮಿಸುತ್ತಿರುವ ಸಿನಿಮಾ ಇದಾಗಿದೆ. ಅಮೂಲ್ಯ ಅವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ಟೈಟಲ್ ಟೀಸರ್ ಬಿಡುಗಡೆಯಾಗಿದೆ.

  • ಹೊಚ್ಚ ಹೊಸ ಶೋಗೆ ಸಾಕ್ಷಿಯಾಗಲಿದೆ ಜೀ ಕನ್ನಡ : ಕಿರುತೆರೆಗೆ ಶರಣ್, ಅಮೂಲ್ಯ ಎಂಟ್ರಿ

    ಹೊಚ್ಚ ಹೊಸ ಶೋಗೆ ಸಾಕ್ಷಿಯಾಗಲಿದೆ ಜೀ ಕನ್ನಡ : ಕಿರುತೆರೆಗೆ ಶರಣ್, ಅಮೂಲ್ಯ ಎಂಟ್ರಿ

    ಬೆಂಗಳೂರು: ಧಾರಾವಾಹಿಗಳು, ರಿಯಾಲಿಟಿ ಶೋ ಗಳು, ಗೆಮ್ ಶೋ ಗಳಿಂದ ವೀಕ್ಷಕರ ಮನಗೆದ್ದು ನಂಬರ್ 1 ಸ್ಥಾನದಲ್ಲಿ ಇರುವ ಮನರಂಜನೆಯ ಮಹಾತಾಣ ಜೀ ಕನ್ನಡ. ಡ್ರಾಮಾ ಜೂನಿಯರ್ಸ್, ಸರಿಗಮಪ, ವೀಕೆಂಡ್ ವಿತ್ ರಮೇಶ್, ಕಾಮಿಡಿ ಖಿಲಾಡಿಗಳು, ಡಾನ್ಸ್ ಕರ್ನಾಟಕ ಡಾನ್ಸ್, ಜೋಡಿ ನಂಬರ್ 1, ಮತ್ತು ಸೂಪರ್ ಕ್ವೀನ್ ನಂತಹ ಅನೇಕ ಜನಮೆಚ್ಚಿದ ರಿಯಾಲಿಟಿ ಶೋಗಳನ್ನು ಜನರ ಮುಂದಿಟ್ಟು ಅದರಲ್ಲಿ ಯಶಸ್ವೀ ಆಗಿರುವ ಜೀ ಕನ್ನಡ ಈಗ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದೆ.

    ಹೊಚ್ಚ ಹೊಸ ರಿಯಾಲಿಟಿ ಶೋ ಫ್ಯಾಮಿಲಿ ನಂಬರ್ ಇದೇ ಆಗಸ್ಟ್ 2 ರಿಂದ ರಾತ್ರಿ 9 ಗಂಟೆಗೆ ನಿಮ್ಮನ್ನು ಮನರಂಜಿಸಲಿದೆ. ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ ಇದು ವಿಭಿನ್ನ ಪ್ರಯತ್ನವಾಗಿದ್ದು, ನಿಮ್ಮ ನೆಚ್ಚಿನ ತಾರೆಯರು ಅವರ ಕುಟುಂಬದವರ ಜೊತೆಗೆ ಹೇಗೆ ಇರುತ್ತಾರೆ ಎಂಬುದನ್ನು ನಿಮ್ಮ ತನಕ ತಲುಪಿಸುವುದೇ ಈ ರಿಯಾಲಿಟಿ ಶೋ ದ ಮುಖ್ಯ ಉದ್ದೇಶ. ಈ ರಿಯಾಲಿಟಿ ಶೋನಲ್ಲಿ ಸಕ್ಕತ್ ಟ್ವಿಸ್ಟ್ ಜೊತೆಗೆ ಫನ್ ಇರಲಿದ್ದು ನಿಮಗೆ 100% ಮನರಂಜನೆ ಸಿಗೋದಂತೂ ಗ್ಯಾರಂಟಿ. ಅಷ್ಟೇ ಅಲ್ಲದೇ ಪ್ರತಿ ವಾರ ವಿಭಿನ್ನ ಬಗೆಯ ರೌಂಡ್ಸ್ ಇರಲಿದ್ದು ಯಾರು ಹೇಗೆ ಪರ್ಫಾರ್ಮ್ ಮಾಡ್ತಾರೆ ಎನ್ನುವುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

    ತರ್ಲೆ ಮಾತು, ವಿಭಿನ್ನ ನಿರೂಪಣಾ ಶೈಲಿಯಿಂದ ಕನ್ನಡಿಗರ ಮನಗೆದ್ದ ನಿರಂಜನ್ ದೇಶಪಾಂಡೆ ಅವರು ಫ್ಯಾಮಿಲಿ ನಂ.1 ನ ನಿರೂಪಣಾ ಜವಾಬ್ದಾರಿಯನ್ನು ಹೊತ್ತುಕೊಂಡರೆ ಗೋಲ್ಡನ್ ಕ್ವೀನ್ ಅಮೂಲ್ಯ, ಎವರ್ಗ್ರೀನ್ ಚೆಲುವೆ ಮತ್ತು ಪೊಲಿಟಿಷಿಯನ್ ತಾರಾ ಅನುರಾಧ, ಎಲ್ಲರ ನೆಚ್ಚಿನ ನಟ ಶರಣ್ ಅವರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನು ಕರುನಾಡು ಮೆಚ್ಚಿದ ಸೆಲೆಬ್ರಿಟಿಗಳಾದ ರಜತ್-ಅಕ್ಷತಾ, ಸುಜಯ್-ಸಿಂಚನ, ಪ್ರಿಯ ಕೇಸರಿ-ಶಿವರಾಂ,ಅಲ್ಲು ರಘು-ಸುಶ್ಮಿತಾ, ಮಲ್ಲಯ್ಯ-ನೀಲಮ್ಮ, ಮೋಹನ್ ಕುಮಾರ್-ಪಲ್ಲವಿ, ವಿಶಾಲ್ ಹೆಗ್ಡೆ-ಪ್ರಿಯ, ಶಿಲ್ಪಿ-ಶೈಲೇಶ್, ಸಮೀರ್ ಆಚಾರ್ಯ-ಶ್ರಾವಣಿ ತಮ್ಮ ಕುಟುಂಬದವರೊಡನೆ ಸೇರಿ ಈ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಸಲಿದ್ದಾರೆ.

    ಸಂಬಂಧ, ಒಗ್ಗಟ್ಟಿಗೆ ಬೆಲೆಕೊಡುವ ಕೊಡುವ ವಿಭಿನ್ನ ಕಾನ್ಸೆಪ್ಟ್ ಇರುವ ಹೊಚ್ಚಹೊಸ ರಿಯಾಲಿಟಿ ಶೋ ‘ನಾವು ನಮ್ಮವರು’! ಇಲ್ಲಿ ಸ್ಪರ್ಧಿಗಳು ಅನೇಕ ಟ್ವಿಸ್ಟ್ಸ್ ಇರುವ ಬೇರೆ ಬೇರೆ ಟಾಸ್ಕ್‌ಗಳಲ್ಲಿ ತಮ್ಮ ಕುಟುಂಬದವರ ಜೊತೆ ಸೇರಿ ಭಾಗವಹಿಸಲಿದ್ದಾರೆ. ಸಂಬಂಧಗಳನ್ನು ಸಂಭ್ರಮಿಸೋ ‘ನಾವು ನಮ್ಮವರು’ ರಿಯಾಲಿಟಿ ಶೋ ಕುಟುಂಬದ ಹಳೆಯ ನೆನಪುಗಳನ್ನು ಸೆಲೆಬ್ರಿಟಿ ಸ್ಪರ್ಧಿಗಳ ಮೂಲಕ ವೀಕ್ಷಕರ ಮುಂದಿಡುವ ಕನ್ನಡಿ! ಸಂಬಂಧಗಳ ಬೇರನ್ನು ಗಟ್ಟಿ ಮಾಡುವ ಹೊಸ ರಿಯಾಲಿಟಿ ಶೋ ‘ನಾವು ನಮ್ಮವರು’ ಇದೇ ಆಗಸ್ಟ್ 2 ರಿಂದ ರಾತ್ರಿ 9 ಗಂಟೆಗೆ ನಿಮ್ಮ ಜೀ ಕನ್ನಡದಲ್ಲಿ!

  • ಮತ್ತೆ ಬಣ್ಣಕ್ಕೆ ಮರಳುವ ಸುಳಿವು ಕೊಟ್ಟರಾ ನಟಿ ಅಮೂಲ್ಯ ?

    ಮತ್ತೆ ಬಣ್ಣಕ್ಕೆ ಮರಳುವ ಸುಳಿವು ಕೊಟ್ಟರಾ ನಟಿ ಅಮೂಲ್ಯ ?

    ದುವೆಯ ಬಳಿಕ ನಟಿ ಅಮೂಲ್ಯ (Amulya) ಬಣ್ಣ ಹಚ್ಚಲಿಲ್ಲ. ಹಾಗಂತ ಬಣ್ಣಕ್ಕೆ ಅವರು ವಿದಾಯವನ್ನೂ ಹೇಳಿರಲಿಲ್ಲ. ಅನೇಕ ವರ್ಷಗಳಿಂದ ಅವರು ನಟನೆಗೆ ರೀ-ಎಂಟ್ರಿ ಕೊಡ್ತಾರೆ ಎಂಬ ವದಂತಿ ಇದೆ. ಮಕ್ಕಳಿಬ್ಬರೂ ಬೆಳೆದು ದೊಡ್ಡವರಾಗುತ್ತಿದ್ದಾರೆ. ಅಮೂಲ್ಯ ಲುಕ್ ವಿಚಾರದಲ್ಲೂ ಮತ್ತದೇ ಹಳೆಯ ಚಾರ್ಮ್‌ಗೆ ಮರಳಿದ್ದಾರೆ. ಇದೀಗ ಅವರು ಪೋಸ್ಟ್ ಮಾಡಿರುವ ಹೊಸದೊಂದು ಫೋಟೋಶೂಟ್ ಮತ್ತೆ ಮರಳುವ ತಯಾರಿಯ ಸುಳಿವನ್ನ ನೀಡುತ್ತಿದೆ.

    ಸಾಮಾನ್ಯವಾಗಿ ಸಾಂಪ್ರದಾಯಿಕವಾಗೇ ಕಾಣಿಸಿಕೊಳ್ಳುವ ಅಮೂಲ್ಯ ಇದೀಗ ಜಬರ್ದಸ್ತ್ ಮಾಡರ್ನ್ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಕಪ್ಪು ಬಿಳಿ ಮಾಡರ್ನ್ ಬಟ್ಟೆ ಧರಿಸಿ ಕನ್ನಡಿಯಲ್ಲಿ ಪ್ರತಿಬಿಂಬ ಕಾಣುವಂತೆ ಪೋಸ್ ಕೊಟ್ಟಿದ್ದಾರೆ. ಇದಕ್ಕವರು ವಿಶೇಷ ಕ್ಯಾಪ್ಷನ್ ಕೊಟ್ಟಿದ್ದು “ಜೀವನವು ಅಸ್ಪಷ್ಟವಾದಾಗ ನಿಮ್ಮ ಗಮನವನ್ನು ಹೊಂದಿಸಿ” ಎಂದಿದ್ದಾರೆ. ಇದರರ್ಥ ಸಿನಿಮಾಕ್ಕೆ ಮರಳುವತ್ತ ಗಮನ ಕೊಡ್ತಿದ್ದಾರೆ ಎನ್ನಬಹುದೇ?

    ಸಿನಿಮಾರಂಗದಲ್ಲಿ ಪೀಕ್‌ನಲ್ಲಿದ್ದಾಗಲೇ ಅಮೂಲ್ಯ ಮದುವೆಯಾಗಿ ನಟನೆಯಿಂದ ಬ್ರೇಕ್ ಪಡೆದುಕೊಂಡರು. ಮುಗುಳುನಗೆ ಚಿತ್ರವೇ ಕೊನೆ. ಮತ್ತೆ ಅವರು ಬಿಗ್‌ಸ್ಕ್ರೀನ್‌ನಲ್ಲಿ ಕಾಣಿಸ್ಕೊಂಡಿರಲಿಲ್ಲ. ಮದುವೆ ಮಕ್ಕಳು ಎಂದು ಬ್ಯುಸಿಯಾಗಿದ್ದ ಅಮೂಲ್ಯ ಮತ್ತೆ ಬಣ್ಣಕ್ಕೆ ಮರಳಲಿದ್ದಾರೆ ಎಂಬ ವದಂತಿಗೆ ಪುಷ್ಠಿ ನೀಡುವಂತೆ ಇದೀಗ ಅಮೂಲ್ಯ ಫೋಟೋಶೂಟ್ ನಯಾ ಚಾಪ್ಟರ್ ಶುರುಮಾಡುತ್ತಿದೆ.

  • ಫ್ಯಾಮಿಲಿ ಜೊತೆ ಅಮೂಲ್ಯ ಕ್ಯೂಟ್ ಫೋಟೋಶೂಟ್

    ಫ್ಯಾಮಿಲಿ ಜೊತೆ ಅಮೂಲ್ಯ ಕ್ಯೂಟ್ ಫೋಟೋಶೂಟ್

    ‘ಚೆಲುವಿನ ಚಿತ್ತಾರ’ ಸಿನಿಮಾದ ನಟಿ ಅಮೂಲ್ಯ (Amulya) ಅವರು ಮಕ್ಕಳ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದಿಂದ ಅಂತರ ಕಾಯ್ದುಕೊಂಡಿರುವ ನಟಿ ಈಗ ಫ್ಯಾಮಿಲಿ ಜೊತೆಗಿನ ಕ್ಯೂಟ್ ಆಗಿರೋ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ದೀಕ್ಷಿತ್ ಶೆಟ್ಟಿ ನಿರ್ಮಾಣದ ‘ವಿಡಿಯೋ’ ಚಿತ್ರದ ಟೀಸರ್ ರಿಲೀಸ್

    ಫ್ಯಾಮಿಲಿ ಫಂಕ್ಷನ್‌ವೊಂದರಲ್ಲಿ ನಟಿ ಮಿಂಚಿದ್ದಾರೆ. ಪತಿ ಜಗದೀಶ್ (Jagadeesh) ಮತ್ತು ಅವಳಿ ಮಕ್ಕಳೊಂದಿಗೆ ಫೋಟೋಶೂಟ್ ಮಾಡಿಸಿದ್ದಾರೆ. ರೇಷ್ಮೆ ಸೀರೆಯುಟ್ಟು ಮುದ್ದಾಗಿ ಲಕ್ಷ್ಮಿಯಂತೆ ಕಂಗೊಳಿಸಿದ್ದಾರೆ ಅಮೂಲ್ಯ. ಕುಟುಂಬದ ಜೊತೆ ಹ್ಯಾಪಿ ಮೂಡ್‌ನಲ್ಲಿ ಕ್ಯಾಮೆರಾ ಪೋಸ್ ನೀಡಿದ್ದಾರೆ. ನಟಿಯ ಈ ಫೋಟೋಶೂಟ್ ನೋಡಿ ಯಾರ ಕೆಟ್ಟ ದೃಷ್ಟಿಯೂ ಈ ಕುಟುಂಬದ ಮೇಲೆ ಬೀಳದಿರಲಿ ಎಂದು ಫ್ಯಾನ್ಸ್ ಹಾರೈಸಿದ್ದಾರೆ. ಇದನ್ನೂ ಓದಿ:ಧ್ರುವ ಸರ್ಜಾಗೆ ‘ಭೈರತಿ ರಣಗಲ್’ ಡೈರೆಕ್ಟರ್ ಆ್ಯಕ್ಷನ್ ಕಟ್

    ಮದುವೆಯಾಗಿ ಇಬ್ಬರೂ ಮಕ್ಕಳಿದ್ರೂ ಅಮೂಲ್ಯಗೆ ಚಾರ್ಮ್ ಕಮ್ಮಿಯಾಗಿಲ್ಲ. ಇಂದಿಗೂ ಈ ನಟಿಯ ಮೇಲೆ ಫ್ಯಾನ್ಸ್‌ಗೆ ಕ್ರೇಜ್ ಇದೆ. ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿ ಸಿನಿಮಾ ಮಾಡಲಿ ಎಂಬುದು ಅಭಿಮಾನಿಗಳ ಆಶಯ. ನಟಿಯ ಕಡೆಯಿಂದ ಚಿತ್ರದ ಬಗ್ಗೆ ಗುಡ್ ನ್ಯೂಸ್ ಸಿಗಲಿ ಎಂದು ಕಾಯ್ತಿದ್ದಾರೆ.

     

    View this post on Instagram

     

    A post shared by Amulya (@nimmaamulya)

    ಬಾಲನಟಿಯಾಗಿ ಎಂಟ್ರಿ ಕೊಟ್ಟಿದ್ದ ಅಮೂಲ್ಯ ಅವರು 2007ರಲ್ಲಿ ಗಣೇಶ್ ನಾಯಕಿಯಾಗಿ ‘ಚೆಲುವಿನ ಚಿತ್ತಾರ’ ಚಿತ್ರದಲ್ಲಿ ನಟಿಸಿದ್ದರು. ನಾನು ನನ್ನ ಕನಸು, ಶ್ರಾವಣಿ ಸುಬ್ರಮಣ್ಯ, ಗಜಕೇಸರಿ, ಖುಷಿ ಖುಷಿಯಾಗಿ, ಮಳೆ, ಮಾಸ್ತಿ ಗುಡಿ, ಕೃಷ್ಣ ರುಕ್ಕು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  • ಅಮೂಲ್ಯ ಅತ್ತಿಗೆ ಸಖತ್ ಸ್ವೀಟ್- ಹೊಗಳಿದ ಭವ್ಯಾ ಗೌಡ

    ಅಮೂಲ್ಯ ಅತ್ತಿಗೆ ಸಖತ್ ಸ್ವೀಟ್- ಹೊಗಳಿದ ಭವ್ಯಾ ಗೌಡ

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಸ್ಪರ್ಧಿ ಭವ್ಯಾ ಗೌಡ (Bhavya Gowda) ಅವರು ಬಿಗ್ ಬಾಸ್ ಆಟ ಮುಗಿದ್ಮೇಲೆ ಮದುವೆ, ವೃತ್ತಿ ಜೀವನದ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇನ್ನೂ ‘ಚೆಲುವಿನ ಚಿತ್ತಾರ’ ಖ್ಯಾತಿಯ ನಟಿ ಅಮೂಲ್ಯ ಜೊತೆಗಿನ ಬಾಂಧವ್ಯದ ಬಗ್ಗೆ ಭವ್ಯಾ ಮಾತನಾಡಿದ್ದಾರೆ. ಅಮೂಲ್ಯ (Amulya) ಅತ್ತಿಗೆ ಸಖತ್ ಸ್ವೀಟ್ ಎಂದಿದ್ದಾರೆ.

    ಬಿಗ್ ಬಾಸ್‌ಗೆ ಹೋಗುವಾಗ ಜಗದೀಶ್ ಅಣ್ಣ ಮತ್ತು ಅಮೂಲ್ಯ ಅತ್ತಿಗೆ ಆಲ್ ದಿ ಬೆಸ್ಟ್ ಹೇಳಿದ್ರು. ನಾನ್ ಬಿಗ್ ಬಾಸ್‌ಗೆ ಹೋದ್ಮೇಲೆಯೂ ಅಮೂಲ್ಯ ಅತ್ತಿಗೆ ತುಂಬಾ ಸಪೋರ್ಟ್ ಮಾಡಿದ್ದಾರೆ. 2 ದಿನದಿಂದ ಅಂದುಕೊಳ್ಳುತ್ತೇಲೆ ಇದ್ದೇನೆ. ಅವರ ಮನೆಗೆ ಅಮೂಲ್ಯ ಅತ್ತಿಗೆ ಹಾಗೂ ಅಣ್ಣನ್ನು ಭೇಟಿಯಾಗಬೇಕು ಅಂತ. ಸದ್ಯದಲ್ಲೇ ಅವರನ್ನು ಭೇಟಿಯಾಗುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:ನಾನೊಬ್ಬರಿಗೆ ಪಾರ್ಟ್ನರ್ ಆಗಿದ್ದೇನೆ: ರಿಲೇಷನ್‌ಶಿಪ್ ಬಗ್ಗೆ ಮಾತನಾಡಿದ ರಶ್ಮಿಕಾ ಮಂದಣ್ಣ

    ಇನ್ನೂ ಅಮೂಲ್ಯ ಅತ್ತಿಗೆ ಯಾವಾತ್ತೂ ಆ್ಯಕ್ಟಿಂಗ್ ಹಾಗೇ ಮಾಡು ಹೀಗೆ ಎಂದು ಸಜೇಷನ್ ಕೊಟ್ಟಿಲ್ಲ. ಆದರೆ ನೀನು ಏನು ಮಾಡುತ್ತಿದ್ದಿಯೋ ಅದು ನಿನಿಗೆ ಗೊತ್ತಿರಬೇಕು. ಕೆಲಸದಲ್ಲಿ 100% ಕೊಡು ಒಂದಿಷ್ಟು ಸಲಹೆ ಕೊಟ್ಟಿದ್ದಾರೆ. ಅಮೂಲ್ಯ ಅತ್ತಿಗೆ ಸಖತ್ ಸ್ವೀಟ್, ಅದು ಎಲ್ಲರಿಗೂ ಗೊತ್ತು. ಅವರು ಸಖತ್ ಹಂಬಲ್, ಯಾರೇ ಮನೆಗೆ ಬಂದ್ರೂ ಖುಷಿಯಿಂದ ಮಾತನಾಡಿಸುತ್ತಾರೆ. ಜಗದೀಶ್ ಅಣ್ಣ ಹೇಳ್ತಾರೆ, ನಿಮಗೆ ಏನು ಹೇಳೋದು. ನಿಮ್ಮ ಮನೆಗೆ ನೀವೇ 4 ಜನ ಗಂಡು ಮಕ್ಕಳು ಅಂತ. ನೀವು ಬೆಳೆಯುತ್ತಿರುವ ರೀತಿ ಖುಷಿಯಿದೆ ಎಂದು ಸಾಕಷ್ಟು ಬಾರಿ ಹೇಳಿದ್ದಾರೆ. ನಮ್ಮ ಒಳ್ಳೆಯದನ್ನೇ ಅವರು ಬಯಸುತ್ತಾರೆ ಎಂದು ಭವ್ಯಾ ಹೇಳಿದ್ದಾರೆ.

    ಇನ್ನೂ ಭವ್ಯಾಗೆ ಸಂಬಂಧದಲ್ಲಿ ಜಗದೀಶ್ ಅವರು ಅಣ್ಣ ಆಗಬೇಕು, ದೊಡ್ಡಪ್ಪನ ಮಗ. ಅಮೂಲ್ಯ ಅವರು ಅತ್ತಿಗೆ ಆಗುತ್ತಾರೆ.

  • ಸುಮ್ಮನಹಳ್ಳಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಿದ ಅಮೂಲ್ಯ ಅಣ್ಣ ದೀಪಕ್ ಅಂತ್ಯಕ್ರಿಯೆ

    ಸುಮ್ಮನಹಳ್ಳಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಿದ ಅಮೂಲ್ಯ ಅಣ್ಣ ದೀಪಕ್ ಅಂತ್ಯಕ್ರಿಯೆ

    ಸ್ಯಾಂಡಲ್‌ವುಡ್ ನಟಿ ಅಮೂಲ್ಯ (Amulya) ಸಹೋದರ ದೀಪಕ್ ಅರಸ್ (Deepak Aras) ಅವರ ಅಂತ್ಯಕ್ರಿಯೆ ಇಂದು (ಅ.18) ಸಂಜೆ ಬೆಂಗಳೂರಿನ ಸುಮ್ಮನಹಳ್ಳಿಯ ಹಿಂದೂ ರುದ್ರಭೂಮಿಯಲ್ಲಿ ನಡೆದಿದೆ. ಇದನ್ನೂ ಓದಿ:‘ಶೇರ್ಷಾ’ ಬಳಿಕ ಮತ್ತೊಂದು ಲವ್ ಸ್ಟೋರಿ ಸಿನಿಮಾದಲ್ಲಿ ಸಿದ್ಧಾರ್ಥ್, ಕಿಯಾರಾ?

    ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ಅವರು ಇಂದು (ಅ.18) ಬೆಳಗ್ಗೆ 6:04ಕ್ಕೆ ನಿಧನರಾಗಿದ್ದಾರೆ. ಕಿಡ್ನಿ ವೈಫಲ್ಯದಿಂದ ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರಿಗೆ ಮದುವೆಯಾಗಿ 2 ಮಕ್ಕಳಿದ್ದರು.

    ಅಂದಹಾಗೆ, ರಾಕೇಶ್ ಅಡಿಗ ಮತ್ತು ಅಮೂಲ್ಯ ನಟಿಸಿದ್ದ ‘ಮನಸಾಲಜಿ’ ಮತ್ತು ಡಾರ್ಲಿಂಗ್ ಕೃಷ್ಣ ನಟಿಸಿದ್ದ ‘ಶುಗರ್ ಫ್ಯಾಕ್ಟರಿ’ ಚಿತ್ರಕ್ಕೆ ದೀಪಕ್ ಅರಸ್ ಆ್ಯಕ್ಷನ್ ಕಟ್ ಹೇಳಿದ್ದರು.

  • ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಸಹೋದರ ದೀಪಕ್‌ ಅರಸ್‌ ನಿಧನ

    ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಸಹೋದರ ದೀಪಕ್‌ ಅರಸ್‌ ನಿಧನ

    ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಅವರ ಸಹೋದರ ದೀಪಕ್‌ ಅರಸ್‌ (46) ನಿಧನರಾಗಿದ್ದಾರೆ.

    ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ದೀಪಕ್ ಕೊನೆಯುಸಿರೆಳೆದಿದ್ದಾರೆ. ಇವರು ಮನಸಾಲಜಿ, ಶುಗರ್ ಫ್ಯಾಕ್ಟರಿ ಸಿನಿಮಾಗಳನ್ನು ನಿರ್ದೇಶಿಸಿದ್ದರು.

    ಕಿಡ್ನಿ ವೈಫಲ್ಯದಿಂದ ನಿಧನರಾಗಿದ್ದಾರೆಂದು ತಿಳಿದುಬಂದಿದೆ. ದೀಪಕ್‌ ಅರಸ್‌ ಅವರಿಗೆ ಮದುವೆ ಆಗಿ ಇಬ್ಬರು ಮಕ್ಕಳಿದ್ದರು.

    ವಯಾಲಿ ಕಾವಲ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

  • ಅರ್ಧ ಗಂಟೆ ಕಾದು ವೋಟು ಮಾಡಿದೆ : ನಟಿ ಅಮೂಲ್ಯ

    ಅರ್ಧ ಗಂಟೆ ಕಾದು ವೋಟು ಮಾಡಿದೆ : ನಟಿ ಅಮೂಲ್ಯ

    ಆರ್.ಆರ್ ನಗರ ಮತ ಕೇಂದ್ರಕ್ಕೆ ಪತಿ ಸಮೇತ ಆಗಮಿಸಿದ್ದ ನಟಿ ಅಮೂಲ್ಯ (Amulya), ತಮ್ಮ ಮತದಾನದ (Voting) ಹಕ್ಕನ್ನು ಚಲಾಯಿಸಿದ್ದಾರೆ. ಸರದಿ ಸಾಲಿನಲ್ಲಿ ಅರ್ಧ ಗಂಟೆಗೂ ಹೆಚ್ಚು ನಿಂತಿದ್ದ ಅಮೂಲ್ಯ, ಆ ನಂತರ ಸಾಲಿನಲ್ಲಿ ನಿಂತಿದ್ದವರಿಗೆ ಮನವಿ ಮಾಡಿಕೊಂಡು ಬೇಗ ವೋಟು ಹಾಕಿದ್ದಾರೆ.

    ಮತದಾನದ ನಂತರ ಮಾತನಾಡಿದ ಅಮೂಲ್ಯ, ತುಂಬಾ ಕ್ಯೂ ಇದೆ. ಇಷ್ಟು ಜನ ನೋಡಿ ಖುಷಿಯಾಯ್ತು. ಮಕ್ಕಳಿರೋದ್ರಿಂದ ರಿಕ್ವೆಸ್ಟ್ ಮಾಡಿದೆ, ಬೇಗ ಬಿಟ್ರು. ಆದ್ರೂ ಅರ್ಧ ಗಂಟೆ ಇದ್ದೆ. ಇದು ನಮ್ಮ ಹಕ್ಕು. ನಾವು ವೋಟ್ ಮಾಡಲೇಬೇಕು. ಸಮಯ ವ್ಯರ್ಥ ಮಾಡದೆ, ವೋಟ್ ಮಾಡಬೇಕು. ಈ ಬಾರಿ ಹೆಚ್ಚು ಮತದಾನ ಆಗುತ್ತೆ ಅಂದ್ಕೊಂಡಿದ್ದೇನೆ ಎಂದರು.

    ಕಾಂತಾರ ಚಿತ್ರ ಖ್ಯಾತಿಯ ನಟಿ ಸಪ್ತಮಿ ಗೌಡ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಬೆಂಗಳೂರಿನ ಜೆ.ಪಿ ನಗರದಲ್ಲಿರುವ ಸೇಂಟ್ ಪೌಲ್ ಸ್ಕೂಲ್ ಗೆ ಆಗಮಿಸಿದ್ದ ಸಪ್ತಮಿ ಗೌಡ ಮತದಾನ ಮಾಡಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಹಕ್ಕು ಚಲಾಯಿಸಿದ್ದೇನೆ. ಎಲ್ಲರೂ ತಪ್ಪದೇ ಮತದಾನ ಮಾಡಿ. ಮತದಾನ ಎಲ್ಲರ ಕರ್ತವ್ಯ ಎಂದರು.

    ಆರ್.ಆರ್ ನಗರದ ಬೂತ್ ಗೆ ಬಂದ ನಟ ಗಣೇಶ್ ಮತ್ತು ನಿರ್ಮಾಪಕಿ ಶಿಲ್ಪಾ ಗಣೇಶ್ ಮತದಾನ ಮಾಡಿ, ಮಾದರಿಯಾದರು. ದಂಪತಿ ಸಮೇತ ಬೆಳಗ್ಗೆ 7.20ಕ್ಕೆ ಆಗಮಿಸಿದ್ದ ಗಣೇಶ್ ಮತದಾನ ಮಾಡಿದರು. ಮತದಾನ ಮಾಡಿ ಮಾತನಾಡಿದ ಗಣೇಶ್, ತಪ್ಪದೇ ಎಲ್ಲರೂ ಮತದಾನದಲ್ಲಿ ಭಾಗಿಯಾಗಿ ಎಂದರು.

     

    ಆರ್.ಆರ್ ನಗರದಲ್ಲಿ ಗಣೇಶ್ ದಂಪತಿ ತಮ್ಮ ಹಕ್ಕು ಚಲಾಯಿಸಿದರೆ, ಜೆಪಿ ನಗರ ಆಕ್ಸ್ ಫರ್ಡ್ ಮತಗಟ್ಟೆಯಲ್ಲಿ ನಟ ಸುದೀಪ್ ತಾಯಿ ಸರೋಜಾ ಅವರು ಮತ ಚಲಾಯಿಸಿದರು. ನಂತರ ಸುದೀಪ್ ಕೂಡ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಲಿದ್ದಾರೆ.

  • ಪ್ರಜ್ವಲ್ ದೇವರಾಜ್‌ಗೆ ಅಮೂಲ್ಯ ನಾಯಕಿ- ಯಾವ ಸಿನಿಮಾ?

    ಪ್ರಜ್ವಲ್ ದೇವರಾಜ್‌ಗೆ ಅಮೂಲ್ಯ ನಾಯಕಿ- ಯಾವ ಸಿನಿಮಾ?

    ‘ಚೆಲುವಿನ ಚಿತ್ತಾರ’ದ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ ಅಮೂಲ್ಯ, ಮದುವೆ ನಂತರ ಸಿನಿಮಾ ರಂಗದಿಂದ ದೂರ ಉಳಿದಿದ್ದರು. ಇತ್ತೀಚೆಗೆ ಮತ್ತೆ ಅವರು ಸಿನಿಮಾ ರಂಗಕ್ಕೆ ಬರುವ ಕುರಿತು ಸುಳಿವು ನೀಡಿದ್ದರು. ಯಾವ ಸಿನಿಮಾ ಏನು ಎಂಬುದರ ಬಗ್ಗೆ ಇದೀಗ ಅಪ್‌ಡೇಟ್ ಸಿಕ್ಕಿದೆ. ಪ್ರಜ್ವಲ್ ದೇವರಾಜ್ (Prajwal Devaraj) ನಟನೆಯ ಸಿನಿಮಾದಲ್ಲಿ ಗೋಲ್ಡನ್ ಕ್ವೀನ್ ನಟಿಸುತ್ತಿದ್ದಾರೆ.

    ಸಿನಿಮಾ ರಂಗಕ್ಕೆ ಅಮೂಲ್ಯ ಮತ್ತೆ ಮರು ಪ್ರವೇಶ ಮಾಡುತ್ತಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಲೇ ಇತ್ತು. ಆದರೆ, ಅದಕ್ಕೆ ಅಧಿಕೃತ ಮಾಹಿತಿ ಇರಲಿಲ್ಲ. ಕೆಲ ದಿನಗಳ ಹಿಂದೆ ಸ್ವತಃ ಅಮೂಲ್ಯ (Amulya) ಅವರೇ ಸಿನಿಮಾ ರಂಗಕ್ಕೆ ಮತ್ತೆ ಬರುವ ಕುರಿತು ಮಾತನಾಡಿದ್ದರು. ಅಭಿಮಾನಿಗಳಿಗೆ ಈ ಮೂಲಕ ಖುಷಿ ಸುದ್ದಿ ಕೊಟ್ಟಿದ್ದರು.

    ಗುರುದತ್ ಗಾಣಿಗ ನಿರ್ದೇಶನದ ‘ಕರಾವಳಿ’ (Karavali) ಸಿನಿಮಾದಲ್ಲಿ ಅಮೂಲ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್ ಹೀರೋಯಿನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ಪ್ರತಾಪ್ ಮತ್ತು ನನ್ನದು ಅಕ್ಕ ತಮ್ಮ ಸಂಬಂಧ: ಸಂದರ್ಶನದಲ್ಲಿ ಸಂಗೀತಾ ಮಾತು

    ಪ್ರಜ್ವಲ್ ದೇವರಾಜ್ ನಟನೆಯ ಈ ಸಿನಿಮಾದಲ್ಲಿ ಅಮೂಲ್ಯಗೆ ವಿಭಿನ್ನವಾದ ಪಾತ್ರವಿದೆಯಂತೆ. ಶೀಘ್ರದಲ್ಲೇ ಅಮೂಲ್ಯ ಆಯ್ಕೆ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಳ್ಳಲಿದೆ. ಒಟ್ನಲ್ಲಿ ಅಭಿಮಾನಿಗಳ ಆಸೆಗೆ ನಿರಾಸೆ ಮಾಡದೇ ಉತ್ತಮ ಕಥೆಯ ಮೂಲಕ ನಟಿ ಸೆಕೆಂಡ್ ಇನ್ಸಿಂಗ್ಸ್ ಶುರು ಮಾಡ್ತಿದ್ದಾರೆ.

  • ಸ್ಕ್ರಿಪ್ಟ್ ಕೇಳಿದ್ದೀನಿ: ಮತ್ತೆ ಚಿತ್ರರಂಗಕ್ಕೆ ಅಮೂಲ್ಯ ಎಂಟ್ರಿ

    ಸ್ಕ್ರಿಪ್ಟ್ ಕೇಳಿದ್ದೀನಿ: ಮತ್ತೆ ಚಿತ್ರರಂಗಕ್ಕೆ ಅಮೂಲ್ಯ ಎಂಟ್ರಿ

    ಚೆಲುವಿನ ಚಿತ್ತಾರದ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ನಟಿ ಅಮೂಲ್ಯ (Amulya), ಮದುವೆ ನಂತರ ಸಿನಿಮಾ ರಂಗದಿಂದ ದೂರ ಉಳಿದಿದ್ದರು. ಇದೀಗ ಮತ್ತೆ ಅವರು ಸಿನಿಮಾ (cinema) ರಂಗಕ್ಕೆ ಬರುವ ಕುರಿತು ಸುಳಿವು ನೀಡಿದ್ದಾರೆ. ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ 2024ರ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿದ ಅಮೂಲ್ಯ, ಆಗಲೇ ಎರಡು ಸ್ಕ್ರಿಪ್ಟ್ ಕೇಳಿದ್ದೇನೆ. ಸ್ಕ್ರಿಪ್ಟ್ ಇಷ್ಟವಾದ ತಕ್ಷಣವೇ ತಿಳಿಸುತ್ತೇನೆ ಎಂದಿದ್ದಾರೆ.

    ಸಿನಿಮಾ ರಂಗಕ್ಕೆ ಅಮೂಲ್ಯ ಮತ್ತೆ ಮರು ಪ್ರವೇಶ ಮಾಡುತ್ತಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಲೇ ಇತ್ತು. ಆದರೆ, ಅದಕ್ಕೆ ಅಧಿಕೃತತೆ ಇರಲಿಲ್ಲ. ಇಂದು ಸ್ವತಃ ಅಮೂಲ್ಯ  ಅವರೇ ಸಿನಿಮಾ ರಂಗಕ್ಕೆ ಮತ್ತೆ ಬರುವ ಕುರಿತು ಮಾತನಾಡಿದ್ದಾರೆ. ಅಭಿಮಾನಿಗಳಿಗೆ ಈ ಮೂಲಕ ಖುಷಿ ಸುದ್ದಿ ಕೊಟ್ಟಿದ್ದಾರೆ.

    ಬಾಲ್ಯದಿಂದಲೂ ನಾನು ಸಿನಿಮಾ ರಂಗದ ಜೊತೆನೇ ಬೆಳೆದೋಳು. ನನಗೆ ಸಿನಿಮಾ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಬ್ಯುಸಿನೆಸ್ ಅರ್ಥವಾಗಲ್ಲ. ಹಾಗಾಗಿ ಸಿನಿಮಾವನ್ನೇ ನಾನು ಮಾಡಬೇಕು. ಕಂಡಿತಾ ಮತ್ತೆ ಸಿನಿಮಾ ರಂಗಕ್ಕೆ ಬರ್ತೀನಿ. ಸಿನಿಮಾಗಳನ್ನು ಮಾಡುತ್ತೇನೆ. ಅತೀ ಶೀಘ್ರದಲ್ಲೇ ಎಲ್ಲವನ್ನೂ ತಿಳಿಸ್ತೀನಿ ಅಂದಿದ್ದಾರೆ ಅಮೂಲ್ಯ.