Tag: amul

  • ಯುವರತ್ನನಿಗೆ ವಿಶೇಷವಾಗಿ ಗೌರವ ಸಲ್ಲಿಸಿದ ಅಮೂಲ್

    ಯುವರತ್ನನಿಗೆ ವಿಶೇಷವಾಗಿ ಗೌರವ ಸಲ್ಲಿಸಿದ ಅಮೂಲ್

    ನವದೆಹಲಿ: ಚಂದನವನದ ಯುವರತ್ನ ಪುನೀತ್ ರಾಜ್‍ಕುಮಾರ್ ಅವರಿಗೆ ಅಮೂಲ್ ವಿಶೇಷವಾಗಿ ಗೌರವವನ್ನು ಸಲ್ಲಿಸಿದೆ.

    ಶುಕ್ರವಾರದಂದು ಕನ್ನಡದ ಸೂಪರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನವು ಅವರ ಅಭಿಮಾನಿಗಳು, ಸ್ನೇಹಿತರು ಮತ್ತು ಹಿತೈಷಿಗಳಿಗೆ ಆಘಾತವನ್ನುಂಟು ಮಾಡಿತ್ತು. ಇಂದು ಅವರ ಅಂತ್ಯಸಂಸ್ಕಾರವಾಗಿದ್ದು, ಇದನ್ನು ಇನ್ನೂ ಕೆಲವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಕರ್ನಾಟಕ ಮಾತ್ರವಲ್ಲ ಪುನೀತ್ ಸಾವಿಗೆ ಇಡೀ ಭಾರತವೇ ಶೋಕಚರಣೆಯಲ್ಲಿ ಮುಳುಗಿತ್ತು. ಇದನ್ನೂ ಓದಿ: ಇಂದಿರಾ ಗಾಂಧಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮೋದಿ

    ಇನ್‍ಸ್ಟಾಗ್ರಾಮ್ ನಲ್ಲಿ, ‘ಯುವರತ್ನಾ ಫಾರ್ ಮಿಲಿಯನ್ಸ್’ ಅಂಡ್ ‘ಪುನೀತ್ ರಾಜ್‍ಕುಮಾರ್ 1975-2021’ ಎಂಬ ಪೋಸ್ಟ್ ಹಾಕಿದ್ದು, ಕನ್ನಡದ ಸೂಪರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಎಂದು ಬರೆದು ಶೇರ್ ಮಾಡಿದೆ. ಈ ಹಿನ್ನೆಲೆ ಅಪ್ಪು ಅಭಿಮಾನಿಗಳು ಈ ಪೋಸ್ಟ್ ಗೆ ಹಾರ್ಟ್ ಎಮೋಜಿಗಳನ್ನು ಕಳುಹಿಸುತ್ತಿದ್ದಾರೆ.

    46ನೇ ವಯಸ್ಸಿಗೆ ಪುನೀತ್ ಶುಕ್ರವಾರ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾದರು. ಈ ಹಿನ್ನೆಲೆ ಇವರನ್ನು ನೋಡಲು ಲಕ್ಷಾಂತರ ಅಭಿಮಾನಿ ಬಳಗ ಬಂದಿದ್ದು, ಕನ್ನಡದ ಸ್ಟಾರ್ ನಟರು ಮಾತ್ರವಲ್ಲದೇ ಬೇರೆ ಭಾಷೆಯ ಸ್ಟಾರ್ ನಟರೂ ಸಹ ಅಪ್ಪುನನ್ನು ನೋಡಲು ಬಂದಿದ್ದರು. ಇಂದು ನಮ್ಮ ಚಿತ್ರತಂಡ ಒಬ್ಬ ಯಶಸ್ವಿ ನಟನನ್ನು ಕಳೆದುಕೊಂಡಿದೆ. ಇದನ್ನೂ ಓದಿ: ಪ್ರತಿಭಟನಾಕಾರರನ್ನು ಬಲವಂತವಾಗಿ ಹೊರಹಾಕಲು ಪ್ರಯತ್ನಿಸಿದರೆ ಪರಿಣಾಮ ಎದುರಿಸಬೇಕಾಗುತ್ತೆ: ರಾಕೇಶ್ ಟಿಕಾಯತ್

  • 10 ಕೋಟಿ ಮಂದಿಗೆ ಉದ್ಯೋಗ ನೀಡುತ್ತಾ? – ಪೇಟಾ ವಿರುದ್ಧ ಅಮುಲ್ ಗರಂ

    10 ಕೋಟಿ ಮಂದಿಗೆ ಉದ್ಯೋಗ ನೀಡುತ್ತಾ? – ಪೇಟಾ ವಿರುದ್ಧ ಅಮುಲ್ ಗರಂ

    ನವದೆಹಲಿ: ಈ ಹಿಂದೆ ಕರಾವಳಿಯ ಪ್ರಸಿದ್ಧ ಜಾನಪದ ಕ್ರೀಡೆ ಕಂಬಳ ಮತ್ತು ತಮಿಳುನಾಡಿನ ಜಲ್ಲಿಕಟ್ಟು ನಿಷೇಧಿಸುವಂತೆ ಆಗ್ರಹಿಸಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರಾಣಿ ದಯಾ ಸಂಘ(ಪೇಟಾ)ನೀಡಿದ ಸಲಹೆಗೆ ಅಮುಲ್ ಸಂಸ್ಥೆ ಗರಂ ಆಗಿದೆ.

    ಹಾಲು ಉತ್ಪಾದನೆಯ ಬೃಹತ್ ಸಹಕಾರಿ ಸಂಸ್ಥೆಯಾದ ಅಮುಲ್‍ಗೆ ಪೇಟಾ ಪತ್ರ ಬರೆದು ವಿಚಿತ್ರ ಸಲಹೆಯನ್ನು ನೀಡಿದೆ. ಈಗ ಮಾರುಕಟ್ಟೆ ಬದಲಾಗಿದೆ. ದನದಿಂದ ಹಾಲನ್ನು ಕರೆಯುವ ಬದಲು ಸಸ್ಯಗಳ ಉತ್ಪನ್ನಗಳಿಂದ ಕಾರ್ಖಾನೆಗಳಲ್ಲಿ ಹಾಲನ್ನು ತಯಾರಿಸಬೇಕು. ಈ ಬದಲಾವಣೆಯನ್ನು ಅಮುಲ್ ಒಪ್ಪಿಕೊಳ್ಳುತ್ತದೆ ಎಂಬ ಭರವಸೆ ನನ್ನದು ಎಂದು ಹೇಳಿದೆ.

    ಈ ಸಲಹೆ ಅಮುಲ್ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ಸೋಧಿ ಕೆಂಡಾಮಂಡಲವಾಗಿದ್ದಾರೆ. ಹೈನುಗಾರಿಕೆಯನ್ನು ನಂಬಿರುವ ದೇಶದ 10 ಕೋಟಿ ಮಂದಿಗೆ ಪೇಟಾ ಉದ್ಯೋಗ ನೀಡುತ್ತಾ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ : ಕುದುರೆ ರೇಸಲ್ಲಿ ಹಿಂಸೆ ಇಲ್ವಾ? ಪೇಟಾದ್ದು ಅತಿಯಾಯ್ತು- ಸಚಿವ ಡಿವಿಎಸ್ ವಾಗ್ದಾಳಿ

    ಹೈನುಗಾರಿಕೆ ಉದ್ಯೋಗ ಮಾಡುತ್ತಿರುವ ಶೇ.75 ಮಂದಿಗೆ ಭೂಮಿಯೇ ಇಲ್ಲ. ಈ ರೈತರ ಮಕ್ಕಳ ಶಾಲಾ ಶಿಕ್ಷಣಕ್ಕೆ ಹಣ ನೀಡುತ್ತಾ? ದೇಶದ ಬಡ ಜನತೆಗೆ ಇರುವ ಹಾಲಿನ ಅಗತ್ಯವನ್ನು ಕಡಿಮೆ ಬೆಲೆಗೆ ನೀಡುತ್ತಾ? ಲ್ಯಾಬ್ ಗಳಲ್ಲಿ ರಸಾಯನಿಕ ಮತ್ತು ಸಿಂಥೆಟಿಕ್ ವಿಟಮಿನ್ ಬಳಸಿ ತಯಾರಾಗುವ ಈ ಫ್ಯಾಕ್ಟರಿ ಆಹಾರವನ್ನು ಎಷ್ಟು ಮಂದಿ ಖರೀದಿಸಲು ಸಾಧ್ಯ ಎಂದು ಸೋಧಿ ಖಾರವಾಗಿ ಪ್ರಶ್ನಿಸಿದ್ದಾರೆ.

    ಈ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಪೇಟಾ ಫೋರ್ಬ್ಸ್ ಸುದ್ದಿಯನ್ನು ಉಲ್ಲೇಖಿಸಿ, ಸಸ್ಯಾಹಾರಿ ಆಹಾರ ಮತ್ತು ಹಾಲಿನ ಮಾರುಕಟ್ಟೆಯಲ್ಲಿ ಭಾರತ ವಿಶ್ವನಾಯಕ ಎನಿಸಿಕೊಳ್ಳಲಿದೆ. ಪ್ರಾಣಿಗಳ ಜೀವ ಉಳಿಸಲು ಭಾರತದ ರೈತರು ಮತ್ತು ಉದ್ಯಮಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದೆ.

    ವಿಚಿತ್ರ ಸಲಹೆಗೆ ಜನರು ಗರಂ ಆಗಿದ್ದು ಪೇಟಾ ಇಂಡಿಯಾವನ್ನು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ನಿಮಗೆ ಯಾಕೆ ಭಾರತದ ಮೇಲೆಯೇ ಕಣ್ಣು? ವಿದೇಶದಲ್ಲಿ ಕುಳಿತ ನೀವು ನಮಗೆ ಸಲಹೆ ನೀಡುವ ಅಗತ್ಯವಿಲ್ಲ. ಭಾರತದ ಆರ್ಥಿಕತೆಯೆ ಮೇಲೆ ಹೊಡೆತ ನೀಡಲು ಈ ಸಲಹೆ ನೀಡಿದ್ದೀರಾ ಎಂದು ಪ್ರಶ್ನಿಸಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ಐಎಂಎ ವರ್ಸಸ್ ಆರ್ಯುವೇದ, ಪೇಟಾ ವರ್ಸಸ್ ಅಮುಲ್. ಭಾರತದ ಮೇಲೆ ವ್ಯವಸ್ಥಿತ ದಾಳಿಯಾಗುತ್ತಿದೆ. ಇದರ ಬೇರುಗಳ ಬಗ್ಗೆ ನಾವು ಹುಷಾರಾಗಿರಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

    ಪೇಟಾ ನೀಡಿದ ಸಲಹೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ಅಭಿಪ್ರಾಯ ತಿಳಿಸಿ.

  • ಜಸ್ಪ್ರೀತ್ ಬುಮ್ರಾ ದಂಪತಿಗೆ ಅಮುಲ್ ಮದುವೆ ಶುಭಾಶಯ ಪೋಸ್ಟ್ ವೈರಲ್

    ಜಸ್ಪ್ರೀತ್ ಬುಮ್ರಾ ದಂಪತಿಗೆ ಅಮುಲ್ ಮದುವೆ ಶುಭಾಶಯ ಪೋಸ್ಟ್ ವೈರಲ್

    ನವದೆಹಲಿ: ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಕ್ರಿಕೆಟ್ ನಿರೂಪಕಿ ಸಂಜನಾ ಗಣೇಶನ್ ಜೋಡಿ ನಿನ್ನೆ ಗೋವಾದಲ್ಲಿ ವೈವಾಹಿಕ ಬಂಧನಕ್ಕೆ ಕಾಲಿಟ್ಟಿದ್ದರು. ಅವರಿಗೆ ಭಾರತದ ಸಿಹಿತಿಂಡಿ ಕಂಪನಿ ಅಮುಲ್ ವಿಶಿಷ್ಟ ಪೋಸ್ಟ್ ಒಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಶುಭಾಶಯ ಕೋರಿತ್ತು ಈ ಪೋಸ್ಟ್ ವೈರಲ್ ಆಗಿದೆ.

    ಬುಮ್ರಾ ಮತ್ತು ಸಂಜನಾ ಗಣೇಶನ್ ಮದುವೆ ಸಮಾರಂಭವು ಗೋವಾದಲ್ಲಿ ಸರಳವಾಗಿ ಎರಡೂ ಕುಟುಂಬದ ಆಪ್ತರ ಸಮ್ಮುಖದಲ್ಲಿ ನಡೆದಿತ್ತು. ಬೂಮ್ರಾ ಇಂದಿನಿಂದ ಹೊಸ ಜೀವನ ಆರಂಭವಾಗಿದೆ. ಇಂದು ಅತ್ಯಂತ ಸಂಭ್ರಮದ ದಿನವಾಗಿದೆ ಎಂದು ಬರೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಮದುವೆ ಸಂಭ್ರಮ ಹಂಚಿಕೊಂಡಿದ್ದರು. ಇದನ್ನು ಗಮನಿಸಿದ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಬೂಮ್ರಾ ದಂಪತಿಗೆ ಶುಭಹಾರೈಕೆ ಮಾಡಿದ್ದರು.

    ಅಮೂಲ್ ಕಂಪನಿ ಕೂಡ ತನ್ನ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಬೂಮ್ರಾ ದಂಪತಿಗೆ ಶುಭಹಾರೈಸಿ ವಿಶೇಷ ಪೋಸ್ಟ್ ಹಾಕಿತ್ತು ಅದರಲ್ಲಿ ಅಮುಲ್ ಜಾಸ್ ಕೋ ಪ್ರೀತ್ ಮಿಲ್ ಗಾಯಿ ಅಂತ ಪೋಸ್ಟ್ ನ ಮೇಲ್ಬಾಗದಲ್ಲಿ ಬರೆದಿದ್ದು, ಬೂಮ್ರಾ ಪಕ್ಕದಲ್ಲಿ ಕುಳಿತಿರುವ ಸಂಜನಾ ಗಣೇಶನ್ ಒಂದು ಕೈಯಲ್ಲಿ ಸಿಹಿತಿಂಡಿಯನ್ನು ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಮೈಕ್ ಇಡಿದು ಬೂಮ್ರಾ ಅವರನ್ನು ಮಾತನಾಡಿಸುತ್ತಿದ್ದಾರೆ. ಬೂಮ್ರಾ ಒಂದು ಕೈನಲ್ಲಿ ಸಿಹಿತಿಂಡಿ ಹಿಡಿದುಕೊಂಡಿದ್ದರೆ ಇನ್ನೊಂದು ಕೈಯಲ್ಲಿ ಕ್ರಿಕೆಟ್ ಬಾಲ್ ಮೇಲಕ್ಕೆ ಎಸೆಯುತ್ತಿದ್ದಾರೆ. ನಂತರ ಕೆಳಭಾಗದಲ್ಲಿ ಬೌಲ್ ಯೂ ಒವರ್ ಎಂದು ಬರೆದುಕೊಂಡಿದೆ.

    ಅಮುಲ್ ಈ ರೀತಿಯ ಪೋಸ್ಟ್ ಹಾಕುತ್ತಿದ್ದಂತೆ ಹಲವು ಲೈಕ್ ಗಳು ಮತ್ತು ಕಮೆಂಟ್‍ಗಳನ್ನು ಹಾಕುವ ಮೂಲಕ ಅಭಿಮಾನಿಗಳು ಪೋಸ್ಟ್ ನೋಡಿ ಖುಷಿ ಪಟ್ಟಿದ್ದಾರೆ.

    ಬೂಮ್ರಾ ಅವರ ಮದುವೆ ಸಮಾರಂಭದಲ್ಲಿ ಭಾಗಿಯಾದ ಅತಿಥಿಗಳಿಗೆ ಮೊಬೈಲ್ ಬಳಸದಂತೆ ನಿಷೇಧಿಸಲಾಗಿತ್ತು. ಕೊರೊನಾದಿಂದಾಗಿ ಮದುವೆ ಸಮಾರಂಭದಲ್ಲಿ ಕೇವಲ 20 ಜನರು ಮಾತ್ರ ಭಾಗಿಯಾಗಿದ್ದರು.

  • ಅಮುಲ್ ಜರ್ಸಿಯೊಂದಿಗೆ ಕಣಕ್ಕೆ ಇಳಿಯಲಿದೆ ನ್ಯೂಜಿಲೆಂಡ್ ಕ್ರಿಕೆಟ್ ತಂಡ

    ಅಮುಲ್ ಜರ್ಸಿಯೊಂದಿಗೆ ಕಣಕ್ಕೆ ಇಳಿಯಲಿದೆ ನ್ಯೂಜಿಲೆಂಡ್ ಕ್ರಿಕೆಟ್ ತಂಡ

    ಅಹಮದಾಬಾದ್: ಜೂನ್ ಒಂದರಿಂದ ಇಂಗ್ಲೆಂಡಿನಲ್ಲಿ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾಟದಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಅಮುಲ್ ಜರ್ಸಿಯನ್ನು ತೊಟ್ಟು ಕಣಕ್ಕೆ ಇಳಿಯಲಿದೆ.

    ವಾರ್ಷಿಕ 27 ಸಾವಿರ ಕೋಟಿ ರೂ. ವ್ಯವಹಾರ ನಡೆಸಿ ಏಷ್ಯಾದ ಅತಿ ದೊಡ್ಡ ಹಾಲು ಉತ್ಪಾದಕ ಬ್ರಾಂಡ್ ಕಂಪೆನಿಯಾಗಿ ಹೊರ ಹೊಮ್ಮಿರುವ ಅಮುಲ್ ಈಗ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಜರ್ಸಿ ಮತ್ತು ಕಿಟ್ ಬ್ಯಾಗಿನ ಪ್ರಾಯೋಜಕತ್ವವನ್ನು ಪಡೆದುಕೊಂಡಿದೆ.

    ವಿಶ್ವ ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ 4ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಮೇ 28ರಂದು ಭಾರತದ ವಿರುದ್ಧ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಅಮುಲ್ ಜರ್ಸಿಯೊಂದಿಗೆ ಕಣಕ್ಕೆ ಇಳಿಯಲಿದೆ.

    ಈ ಹಿಂದೆ ಅಮೂಲ್ ವಿಶ್ವಕಪ್ ಕ್ರಿಕೆಟ್ ನಲ್ಲಿ ಹಾಲೆಂಡ್ ಕ್ರಿಕೆಟ್ ತಂಡ, ಸ್ವಿಜರ್‍ಲ್ಯಾಂಡ್ ಗ್ರಾಂಡ್ ಪ್ರಿಕ್ಸ್, ಮತ್ತು 2011ರಲ್ಲಿ ಭಾರತದಲ್ಲಿ ನಡೆದ ಆರಂಭಿಕ ಗ್ರಾಂಡ್ ಪ್ರಿಕ್ಸ್ ನ ಪ್ರಾಯೋಜಕತ್ವವನ್ನು ವಹಿಸಿಕೊಂಡಿತ್ತು.

    ಭಾರತಕ್ಕೆ ಒಪೊ ಪ್ರಾಯೋಜಕತ್ವ:
    ಚೀನಾದ ಮೊಬೈಲ್ ಒಪೊ ಕಂಪೆನಿಯ ಜರ್ಸಿಯನ್ನು ತೊಟ್ಟು ಟೀಂ ಇಂಡಿಯಾದ ಆಟಗಾರರು ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಒಪೊ ಜೊತೆಗೆ ಬಿಸಿಸಿಐ 5 ವರ್ಷದ ಅವಧಿಗೆ ಒಟ್ಟು 1,079 ಕೋಟಿ ಮೊತ್ತದ ಪ್ರಯೋಜಕತ್ವದ ಒಪ್ಪಂದ ಮಾಡಿಕೊಂಡಿದ್ದು, ಈ ಒಪ್ಪಂದ ಏ.1  ರಿಂದಲೇ ಅನ್ವಯವಾಗಲಿದೆ.