Tag: amul

  • ಬೆಂಗಳೂರು ಮಾರುಕಟ್ಟೆಗೆ ಅಮುಲ್‌ – ನಂದಿನಿ ಉಳಿಸಲು ಕನ್ನಡಿಗರಿಂದ #SaveNandini ಅಭಿಯಾನ

    ಬೆಂಗಳೂರು ಮಾರುಕಟ್ಟೆಗೆ ಅಮುಲ್‌ – ನಂದಿನಿ ಉಳಿಸಲು ಕನ್ನಡಿಗರಿಂದ #SaveNandini ಅಭಿಯಾನ

    – ಆರೋಗ್ಯಕರ ಸ್ಪರ್ಧೆಗೆ ಅಮುಲ್‌ ಬಂದರೆ ಸಮಸ್ಯೆ ಏನು?
    – ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆ

    ಬೆಂಗಳೂರು: ಗುಜರಾತ್‌ನ ಅಮುಲ್‌  ಸಂಸ್ಥೆ ಬೆಂಗಳೂರಿನಲ್ಲಿ ಹಾಲಿನ ವ್ಯವಹಾರಕ್ಕೆ ಇಳಿದಿರುವುದರ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿದೆ.

    ಕರ್ನಾಟಕದಲ್ಲಿ ನಮ್ಮ ಹಿರಿಯರು ಕಟ್ಟಿ ಬೆಳೆಸಿದ್ದ ಬ್ಯಾಂಕುಗಳನ್ನು ತಿಂದು ಮುಕ್ಕಿದ್ದಾಯಿತು. ಈಗ ರೈತರ ಪಾಲಿನ ಸಂಜೀವಿನಿಯಾಗಿರುವ ನಂದಿನಿಯನ್ನು ಆಪೋಶನ ತೆಗೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಸಂಚು ಹೂಡಿದ್ದಾರೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇತ್ತ ಅಮುಲ್‌ ಪರ ಕೆಲವರು ಬ್ಯಾಟಿಂಗ್‌ ಮಾಡಿದ್ದು ಅಮುಲ್‌ ವ್ಯವಹಾರದಂತೆ ನಂದಿನಿ ಯಾಕೆ ಆನ್‌ಲೈನ್‌ ಮೂಲಕ ಹಾಲನ್ನು ವಿತರಣೆ ಮಾಡಬಾರದು. ಆರೋಗ್ಯಕರ ಸ್ಪರ್ಧೆ ಇದ್ದರೆ ಸಮಸ್ಯೆ ಏನು ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.

    ಏನಿದು ವಿವಾದ?
    ಅಮುಲ್ ಕುಟುಂಬ ಬೆಂಗಳೂರು ನಗರಕ್ಕೆ ಹಾಲು ಮತ್ತು ಮೊಸರಿನ ರೂಪದಲ್ಲಿ ಹೊಸ ತಾಜಾತನವನ್ನು ತರುತ್ತಿದೆ. ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದ್ದು, ಅವುಗಳನ್ನು ನಿಮ್ಮ ಮನೆ ಬಾಗಿಲಿಗೆ ಆರ್ಡರ್ ಮಾಡಬಹುದು ಎಂದು ಅಮುಲ್‌ ಕನ್ನಡ ಏಪ್ರಿಲ್‌ 5 ರಂದು ಟ್ವೀಟ್‌ ಮಾಡಿತ್ತು. ಈ ಟ್ವೀಟ್‌ ಮಾಡಿದ ಬೆನ್ನಲ್ಲೇ ಕನ್ನಡಿಗರು, ರಾಜಕೀಯ ನಾಯಕರು ಅಮುಲ್‌ ಮತ್ತು ಬಿಜೆಪಿ ವಿರುದ್ಧ ಟೀಕೆ ಮಾಡಲು ಆರಂಭಿಸಿದ್ದಾರೆ.

    ಸಿದ್ದರಾಮಯ್ಯ ಹೇಳಿದ್ದೇನು?
    ಕೆಎಂಎಫ್ ಮತ್ತು ಅಮುಲ್ ಸಂಸ್ಥೆಗಳ ವಿಲೀನದ ಬಗ್ಗೆ ಕೇಂದ್ರ ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಪ್ರಸ್ತಾಪ ಮಾಡಿದ ದಿನದಿಂದ ರಾಜ್ಯದ ಹೈನು ಉದ್ಯಮಕ್ಕೆ ಗರ ಬಡಿದಿದೆ. ವಿಲೀನದ ಪ್ರಸ್ತಾವಕ್ಕೆ ಕನ್ನಡಿಗರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಹಿಂಬಾಗಿಲಿನಿಂದ ಅಮುಲ್ ಪ್ರವೇಶಿಸುತ್ತಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಮೊಸರು ಮಾರುಕಟ್ಟೆಯಲ್ಲಿ ಮಾಯವಾಗುತ್ತಿದೆ. ಇದೇ ವೇಳೆ ಅಮುಲ್ ಉತ್ಪನ್ನಗಳ ಮಾರಾಟ ಭರದಿಂದ ಪ್ರಾರಂಭವಾಗಿದೆ. ಸಚಿವ ಅಮಿತ್ ಶಾ ನೇರ ಉಸ್ತುವಾರಿಯಲ್ಲಿಯೇ ಇವೆಲ್ಲ ನಡೆಯುತ್ತಿದೆ ಎನ್ನುವುದು ನಿಸ್ಸಂಶಯ.

    ಗುಜರಾತ್ ಮೂಲದ ಅಮುಲ್ ಹಾಲು ಮತ್ತು ಮೊಸರು ಮಾರಾಟದ ಮೂಲಕ ಕರ್ನಾಟಕದ ಮಾರುಕಟ್ಟೆ ಪ್ರವೇಶಿಸಲು ಹಿಂದೆಯೂ ಪ್ರಯತ್ನಿಸಿತ್ತು. ಅದಕ್ಕೆ ನಾವು ಅವಕಾಶ ಕೊಡಲಿಲ್ಲ. ಈಗ ಬಿಜೆಪಿ ಕೆಂಪುಕಂಬಳಿ ಹಾಸಿ ಸ್ವಾಗತಿಸಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಕೆಎಂಎಫ್ ನಲ್ಲಿ ಹಾಲಿನ ಸಂಗ್ರಹ ಕಡಿಮೆಯಾಗುತ್ತಿದೆ. ದಿನಕ್ಕೆ 99 ಲಕ್ಷ ಲೀಟರ್ ಹಾಲು ಸಂಗ್ರಹವಾಗಬೇಕಾಗಿದ್ದ ಕಡೆ ಕೇವಲ 71 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದು ಕೆಎಂಎಫ್ ವಿರುದ್ಧದ ಷಡ್ಯಂತ್ರವೇ?


    ನಮ್ಮ ಸರ್ಕಾರವು ಹಾಲಿಗೆ ನೀಡುವ ಸಹಾಯಧನವನ್ನು ಲೀಟರಿಗೆ 5 ರೂ.ಗಳಷ್ಟು ಹೆಚ್ಚಿಸಿತ್ತು. ಇದರಿಂದಾಗಿ 2012-13 ರಲ್ಲಿ 45 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲಿನ ಪ್ರಮಾಣವು 2017 ರ ವೇಳೆಗೆ 73 ಲಕ್ಷ ಲೀಟರಿಗೆ ಏರಿಕೆಯಾಗಿತ್ತು. ಈಗ ಕಡಿಮೆಯಾಗುತ್ತ ಸಾಗಲು ಕಾರಣವೇನು? ನಮ್ಮ ಸರ್ಕಾರ ಐದು ವರ್ಷಗಳಲ್ಲಿ 1,356 ಕೋಟಿ ರೂಪಾಯಿಗಳನ್ನು ಹಾಲಿನ ಸಹಾಯಧನಕ್ಕಾಗಿ ರೈತರಿಗೆ ಕೊಟ್ಟಿದ್ದೆವು. ಆದರೆ ಬಿಜೆಪಿ ಸರ್ಕಾರ 2020 -21 ರಲ್ಲಿ1186 ಕೋಟಿ ಖರ್ಚು ಮಾಡಿದ್ದರೆ 2023-24ಕ್ಕೆ ಕೇವಲ 1200 ಕೋಟಿ ರೂಪಾಯಿಗಳನ್ನು ಬಜೆಟ್‌ನಲ್ಲಿ ಒದಗಿಸಿ ರೈತರಿಗೆ ಅನ್ಯಾಯ ಮಾಡಿದೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಕ್ಷಣ ಮಧ್ಯಪ್ರವೇಶಿಸಿ ಹಿಂಬಾಗಿಲಿನಿಂದ ಪ್ರವೇಶಿಸುತ್ತಿರುವ ಅಮುಲ್ ಸಂಸ್ಥೆಯನ್ನು ತಡೆಯಬೇಕಾಗಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಿಗೆ ರಾಜ್ಯದ ಜನಾಭಿಪ್ರಾಯವನ್ನು ಗಮನಕ್ಕೆ ತಂದು ಈ ದ್ರೋಹ ಚಿಂತನೆಯನ್ನು ನಿಲ್ಲಿಸಬೇಕು.

    ಅಮುಲ್‌ ಪರ ವಾದವೇನು?
    ನಂದಿನಿ ಕೇವಲ ಕರ್ನಾಟಕದಲ್ಲಿ ಮಾತ್ರ ಹಾಲನ್ನು ಮಾರಾಟ ಮಾಡುತ್ತಿಲ್ಲ. ಉಳಿದ ರಾಜ್ಯಗಳಲ್ಲೂ ಹಾಲನ್ನು ಮಾರಾಟ ಮಾಡುತ್ತಿದೆ. ಹೀಗಿರುವಾಗ ಅಮುಲ್‌ ಬೇಡ ಎಂದು ಹೇಳಲು ಒಕ್ಕೂಟ ವ್ಯವಸ್ಥೆಯಲ್ಲಿ  ಯಾವ ಅಧಿಕಾರವಿದೆ. ಯಾವುದು ಬೇಕೋ ಅದನ್ನು ಗ್ರಾಹಕ ಖರೀದಿಸುತ್ತಾನೆ. ಇದನ್ನೂ ಓದಿ: ಸುದೀಪ್ ವಿರುದ್ಧ ಚುನಾವಣೆ ಆಯೋಗಕ್ಕೆ ಜೆಡಿಎಸ್ ಪತ್ರ

    ಯಾವುದೇ ಸಂಸ್ಥೆಯದರೂ ಸರಿಯಾದ ಸ್ಪರ್ಧೆ ಇಲ್ಲದೇ ಇದ್ದರೆ ಗುಣಮಟ್ಟದ ಉತ್ಪನ್ನ ನೀಡಲು ಸಾಧ್ಯವಿಲ್ಲ. ಕೆಎಂಎಫ್‌ ಚುನಾವಣೆಗಳಲ್ಲಿ ಹಣದ ಹೊಳೆ ಹರಿಯುತ್ತದೆ. ರಾಜಕೀಯ ಪಕ್ಷಗಳ ಮುಖಂಡರೇ ದೊಡ್ಡ ಹುದ್ದೆಗಳನ್ನು ಅಲಂಕರಿಸುತ್ತಾರೆ. ಮುಖ್ಯವಾಗಿ ವಿಚಾರದ ಬಗ್ಗೆ ನಾವು ಚರ್ಚೆಯೇ ಮಾಡುವುದಿಲ್ಲ. ಮಂಡ್ಯದಲ್ಲಿ ನೀರು ಮಿಶ್ರಿತ ಹಾಲು ವಿತರಣೆ ಮಾಡಿರುವುದು ನಮ್ಮ ಕಣ್ಣ ಮುಂದೆಯೇ ಇದೆ. ಈಗಾಗಲೇ ಸರ್ಕಾರಿ ಸ್ವಾಮ್ಯದ ಕಂಪನಿಗಳು ನಷ್ಟ ಅನುಭವಿಸಿ ಬಾಗಿಲು ಮುಚ್ಚಿದೆ. ಹೀಗಾಗಿ ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿ ಗುಣಮಟ್ಟದ ಹಾಲನ್ನು ಕೆಎಂಎಫ್‌ ನೀಡಬೇಕು. ಸ್ಪರ್ಧೆ ಇದ್ದಷ್ಟು ಗುಣಮಟ್ಟ ಹೆಚ್ಚಾಗುತ್ತದೆ. ಅಂತಿಮವಾಗಿ ಇದರ ಲಾಭ ರೈತರಿಗೆ ಮತ್ತು ಗ್ರಾಹಕರಿಗೆ ಆಗುತ್ತದೆ ಎಂದು ಕೆಲವರು ವಾದ ಮಾಡುತ್ತಿದ್ದಾರೆ.

    ಒಟ್ಟಿನಲ್ಲಿ ಕರ್ನಾಟಕ ಚುನಾವಣೆಯ ಸಮಯದಲ್ಲಿ ಅಮುಲ್‌ ಆನ್‌ಲೈನಿನಲ್ಲಿ ಹಾಲನ್ನು ಮಾರಾಟ ಮಾಡಲು ಮುಂದಾಗಿರುವುದು ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್‌ ಮಾಡಿ.

  • ಇಂದಿನಿಂದ ಮತ್ತೆ ಅಮುಲ್ ಹಾಲಿನ ಬೆಲೆ ಏರಿಕೆ

    ಇಂದಿನಿಂದ ಮತ್ತೆ ಅಮುಲ್ ಹಾಲಿನ ಬೆಲೆ ಏರಿಕೆ

    ಗಾಂಧಿನಗರ: ಅಮುಲ್ ಬ್ರ‍್ಯಾಂಡ್ ಹೆಸರಿನಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (GCMMF) ಮತ್ತೆ ಹಾಲಿನ ಬೆಲೆ ಏರಿಕೆ ಮಾಡಿದೆ.

    ಹಾಲಿನ ಬೆಲೆ ಪ್ರತಿ ಲೀಟರ್‌ಗೆ 3 ರೂ. ಹೆಚ್ಚಿಸಿದೆ. ದರ ಪರಿಕ್ಷರಣೆಯ ನಂತರ ಅಮುಲ್ ಗೋಲ್ಡ್ ಹಾಲಿನ ಬೆಲೆ ಪ್ರತಿ ಲೀಟರ್‌ಗೆ 66 ರೂ. ಆಗಿದೆ. ಅಮುಲ್ ತಾಜಾ 1 ಲೀಟರ್‌ಗೆ 54 ರೂ. ಹಾಗೂ ಅಮುಲ್ ಎ2 ಎಮ್ಮೆ ಹಾಲಿನ ದರ ಪ್ರತಿ ಲೀಟರ್‌ಗೆ 70 ರೂ.ಗಳಿಗೆ ಏರಿಕೆ ಕಂಡಿದೆ. ಈ ದರ ಫೆ.3ರಿಂದಲೇ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

    ಜಿಸಿಎಂಎಂಎಫ್ 2022ರ ಅಕ್ಟೋಬರ್‌ನಲ್ಲಿ ಗೋಲ್ಡ್, ತಾಜಾ ಹಾಗೂ ಶಕ್ತಿ ಬ್ರ್ಯಾಂಡ್‌ಗಳ ಹಾಲಿನ ಬೆಲೆಯನ್ನು 2 ರೂ. ಹೆಚ್ಚಿಸಿತ್ತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಜಿ20 ಶೃಂಗಸಭೆ – ತಾಜ್ ವೆಸ್ಟ್ ಎಂಡ್ ಆವರಣದ ಮೇಲೆ No Fly Zone ಜಾರಿ

    ಇದೀಗ ಫೆ.3ರಿಂದ ಜಾರಿಗೆ ಬರುವಂತೆ ಅಮುಲ್ ಪ್ಯಾಕೆಟ್ ಹಾಲಿನ ಬೆಲೆಯನ್ನು ಪರಿಷ್ಕರಿಸಿದೆ. ಹಾಲಿನ ಒಟ್ಟಾರೆ ಕಾರ್ಯಾಚರಣೆ ಮತ್ತು ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳ ಆಗಿರುವುದು ಹಾಗೂ ದನಗಳ ಮೇವಿನ ವೆಚ್ಚ ಏರಿಕೆಯಾಗಿರುವುದರಿಂದ ಹಾಲಿನ ದರ ಹೆಚ್ಚಿಸಲಾಗಿದೆ ಎಂದು ಅಮಲ್ ಹೇಳಿದೆ. ಇದನ್ನೂ ಓದಿ: `ಕಲಾತಪಸ್ವಿ’ ಖ್ಯಾತ ಚಲನಚಿತ್ರ ನಿರ್ಮಾಪಕ ಕೆ. ವಿಶ್ವನಾಥ್ ನಿಧನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೊಸ ಪಕ್ಷ ಕಟ್ಟಿದೋರು ಉಳಿದಿಲ್ಲ, ಎಷ್ಟು ಮಂದಿ ಜನಾರ್ದನ ಬಂದ್ರೂ ಏನೂ ಆಗಲ್ಲ- ಮುನಿರತ್ನ

    ಹೊಸ ಪಕ್ಷ ಕಟ್ಟಿದೋರು ಉಳಿದಿಲ್ಲ, ಎಷ್ಟು ಮಂದಿ ಜನಾರ್ದನ ಬಂದ್ರೂ ಏನೂ ಆಗಲ್ಲ- ಮುನಿರತ್ನ

    ಕೋಲಾರ: ಹೊಸ ಪಕ್ಷ ಕಟ್ಟಿದವರು ಈಗ ಯಾರೂ ಉಳಿದಿಲ್ಲ. ಹಾಗೆಯೇ ಎಷ್ಟು ಮಂದಿ ಜನಾರ್ದನ (Janardhana Reddy) ಬಂದರೂ ಬಿಜೆಪಿಗೆ (BJP) ಯಾವುದೇ ತೊಂದರೆ ಆಗಲ್ಲ ಎಂದು ಸಚಿವ ಮುನಿರತ್ನ (Muniratna) ತಿರುಗೇಟು ನೀಡಿದ್ದಾರೆ.

    ಕೋಲಾರದಲ್ಲಿ (Kolar) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಗಾರಪ್ಪ, ದೇವರಾಜ ಅರಸು ಸೇರಿದಂತೆ ಹಲವು ನಾಯಕರು ಪಕ್ಷ ಕಟ್ಟಿದ್ರು, ಅವು ಯಾವುದೂ ಈಗ ಕಣ್ಣಿಗೆ ಕಾಣಿಸ್ತಿಲ್ಲ. ಜನಾರ್ದನ ರೆಡ್ಡಿ ಅವರು ಗಂಗಾವತಿಗೆ ಮಾತ್ರ ಅಭ್ಯರ್ಥಿ ಆಗುತ್ತೇನೆ ಅಂತಾ ಹೇಳಿಕೊಂಡು ಬಂದಿದ್ದರು. ಈಗ ಪಕ್ಷ ಕಟ್ಟುತ್ತೇನೆ ಅಂತಾರೆ. ಎಷ್ಟು ಮಂದಿ ಜನಾರ್ದನ ಬಂದ್ರೂ ಬಿಜೆಪಿಗೆ ಸಣ್ಣ ತೊಂದರೆಯೂ ಆಗೊಲ್ಲ. ಇನ್ನೂ ಇಪ್ಪತ್ತು ಮಂದಿ ಪಕ್ಷ ಕಟ್ಟಿದರೂ ನಮ್ಮ ಪಕ್ಷಕ್ಕೆ ಏನೂ ಆಗೋಲ್ಲ ಎಂದು ಬೀಗಿದ್ದಾರೆ.

    ಜನಾರ್ದನ ರೆಡ್ಡಿ ವಿಚಾರದಲ್ಲಿ ಕೇಂದ್ರದ ನಾಯಕರ ತೀರ್ಮಾನ ಇರುತ್ತದೆ. ರೆಡ್ಡಿಯವರು ಆತುರದ ತೀರ್ಮಾನ ತೆಗೆದುಕೊಂಡಿದ್ದಾರೆ. ರಾಜಕಾರಣಿಗಳಿಗೆ ತಾಳ್ಮೆ ಬಹಳ ಮುಖ್ಯ, ಕೇಂದ್ರದ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ಮಾಡಬೇಕಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾವು ಕೋಲಾರವನ್ನ ಗೆದ್ದೇ ಗೆಲ್ಲುತ್ತೇವೆ, ಅದರಲ್ಲಿ ಯಾವುದೇ ಅನುಮಾನವಿಲ್ಲ: ಮುನಿರತ್ನ

    ಕೆಎಂಎಫ್ ವಿಲೀನ ವಿಚಾರದಲ್ಲಿ ಕಾಂಗ್ರೆಸ್ (Congress) ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿ, ಕಾಂಗ್ರೆಸ್‌ನವರಿಗೆ ಮಾಡಲು ಕೆಲಸ ಇಲ್ಲ. ಅಮುಲ್ (Amul) ಜೊತೆ ಕೆಎಂಎಫ್ (KMF) ವಿಲೀನದ ಬಗ್ಗೆ ಈವರೆಗೆ ಯಾವುದೇ ಚರ್ಚೆ ಆಗಿಲ್ಲ. ಸಭೆ ನಡೆದಿಲ್ಲ. ಇದು ಕಾಂಗ್ರೆಸ್‌ನವರ ಪಿತೂರಿ ಎಂದಿದ್ದಾರೆ. ಇದನ್ನೂ ಓದಿ: ನಾಟಕದಲ್ಲಿ ಸಿದ್ದರಾಮಯ್ಯಗೆ ಅವಮಾನ- ರಂಗಾಯಣದ ವಿರುದ್ಧ ಅಭಿಮಾನಿಗಳ ಆಕ್ರೋಶ

    ನೋಟ್ ಬ್ಯಾನ್ (Note Ban) ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ವಿಚಾರದಲ್ಲಿ ನ್ಯಾಯಾಲಯದ ತೀರ್ಪು ಸರಿಯಾಗಿದೆ. ಜನಗಳೇನೂ ದಂಗೆ ಎದ್ದಿಲ್ಲ. ಅಂದು ಪ್ರಧಾನಿ ನರೇಂದ್ರ ಮೋದಿ (Narendra Modi) ತೆಗೆದುಕೊಂಡ ತೀರ್ಮಾನ ಸರಿ ಇದೆ. ಜನ ಅದಕ್ಕೆ ಹೊಂದಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಮುಂದಿನ ಸರ್ಕಾರ ನಮ್ಮ ಪಕ್ಷದ್ದೇ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಮುಲ್ ಜೊತೆ ಕೆಎಂಎಫ್‌ ವಿಲೀನ ಇಲ್ಲ: ಸಿಎಂ  ಬೊಮ್ಮಾಯಿ

    ಅಮುಲ್ ಜೊತೆ ಕೆಎಂಎಫ್‌ ವಿಲೀನ ಇಲ್ಲ: ಸಿಎಂ ಬೊಮ್ಮಾಯಿ

    ಬೆಂಗಳೂರು: ಗುಜರಾತ್‌ನ ಅಮುಲ್(Amul) ಜೊತೆ ಕೆಎಂಎಫ್‌(KMF) ವಿಲೀನ ಮಾಡುವುದಿಲ್ಲ ಎಂದು ಸಿಎಂ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ.

    ಗೃಹ ಸಚಿವ ಅಮಿತ್‌ ಶಾ(Amit Shah) ಹೇಳಿಕೆ ಸಂಬಂಧ ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಸಿಎಂ ಆಗಿ ಹೇಳುತ್ತಿದ್ದೇನೆ. ಯಾವುದೇ ಕಾರಣಕ್ಕೂ ಅಮುಲ್ ಕೆಎಂಎಫ್‌ ವಿಲೀನ ಮಾಡುವುದಿಲ್ಲ. ಅಮಿತ್ ಶಾ ತಮ್ಮ ಭಾಷಣದಲ್ಲಿ ವಿಲೀನ ಮಾಡುತ್ತೇವೆ ಎಂದು ಎಲ್ಲೂ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: `ನಂದಿನಿ’ ಕನ್ನಡಿಗರ ಜೀವನಾಡಿ, ಅದರ ತಂಟೆಗೆ ಬಂದ್ರೆ ಬಿಜೆಪಿ ಭಸ್ಮವಾಗುತ್ತೆ HDK ಎಚ್ಚರಿಕೆ

    ಯಾರಿಗೂ ತಪ್ಪು ಕಲ್ಪನೆ ‌ಬೇಡ. ಮುಂದೆ 100 ವರ್ಷವಾದರೂ ಕೆಎಂಎಫ್‌ ಹಾಗೆಯೇ ಇರುತ್ತದೆ. ಊಹೆ ಮಾಡಿ ಟೀಕೆ ಮಾಡುವವರಿಗೆ ಏನು ಹೇಳುವುದು? ಒಬ್ಬರಿಗೊಬ್ಬರು ತಾಂತ್ರಿಕ ಸಹಾಯದಿಂದ ಕೆಲಸ ಮಾಡಬೇಕು ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಯಾರಿಗೂ ತಪ್ಪು ತಿಳುವಳಿಕೆ ಬೇಡ ಎಂದು ತಿಳಿಸಿದರು.

    ಕೆಲ ಭಾಗದಲ್ಲಿ ತಾಂತ್ರಿಕ, ಆಡಳಿತ ವಿಚಾರಗಳನ್ನು ಹಂಚಿಕೊಂಡು ಕೆಲಸ ಮಾಡಬೇಕು ಎಂದು ಅಮಿತ್‌ ಶಾ ಹೇಳಿದ್ದಾರೆ. ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಿಎಂ ಹೇಳಿದರು.

    ಶಾ ಹೇಳಿದ್ದೇನು?
    ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಮಿಲ್ಕ್ ಡೈರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಮಿತ್ ಶಾ, ಗುಜರಾತ್‌ನ `ಅಮುಲ್’ ಜತೆ ಕರ್ನಾಟಕದ `ನಂದಿನಿ’ಯನ್ನು ಒಂದುಗೂಡಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.

    ಗುಜರಾತ್‌ನಲ್ಲಿ ಸಹಕಾರ ಒಕ್ಕೂಟವು ಪ್ರಗತಿಯ ಹಾದಿಯಲ್ಲಿದೆ. ಹಾಗೆಯೇ 1975 ರಿಂದಲೂ ಕೆಎಂಎಫ್ ಕೂಡ ಅಭಿವೃದ್ಧಿ ಹೊಂದುತ್ತಿದೆ. ಅಮೂಲ್ ಹಾಗೂ ನಂದಿನಿ ಒಂದಾದರೆ ಕರ್ನಾಟಕದ ಹಾಲು ಉತ್ಪಾದಕರಿಗೆ ಇನ್ನಷ್ಟು ಅನುಕೂಲವಾಗುತ್ತದೆ. ಮುಂದಿನ ಮೂರು ವರ್ಷಗಳಲ್ಲಿ ದೇಶದಲ್ಲಿ 2 ಲಕ್ಷಕ್ಕೂ ಅಧಿಕ ಪ್ರಾಥಮಿಕ ಡೈರಿಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಾಪನೆ ಮಾಡಲಾಗುವುದು. ಆ ಮೂಲಕ ಹಾಲಿನ ಉತ್ಪನ್ನಗಳನ್ನು ಇತರ ರಾಷ್ಟ್ರಗಳಿಗೆ ರಫ್ತು ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಹಾಲಿನ ದರ 2 ರೂ. ಹೆಚ್ಚಳ- ವರ್ಷದಲ್ಲಿ 3ನೇ ಬಾರಿಗೆ ದರ ಏರಿಕೆ

    ಹಾಲಿನ ದರ 2 ರೂ. ಹೆಚ್ಚಳ- ವರ್ಷದಲ್ಲಿ 3ನೇ ಬಾರಿಗೆ ದರ ಏರಿಕೆ

    ನವದೆಹಲಿ: ಅಮೂಲ್ (Amul) ಬಳಿಕ ಮದರ್ ಡೈರಿ (Mother Dairy) ಸಹ ಹಸು ಹಾಗೂ ಎಮ್ಮೆ ಹಾಲಿನ ಬೆಲೆಯನ್ನು (Milk Price) ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಿದೆ. ಅಕ್ಟೋಬರ್ 16ರಿಂದಲೇ ನಿಗದಿತ ಬೆಲೆ ಜಾರಿಗೆ ಬರಲಿದೆ ಎಂದು ಮದರ್ ಡೈರಿ ವಕ್ತಾರರು ತಿಳಿಸಿದ್ದಾರೆ.

    ಅಮೂಲ್ ಸದ್ದಿಲ್ಲದೇ ಹಾಲಿನ ದರ ಹೆಚ್ಚಿಸಿದ ಕೆಲವೇ ಗಂಟೆಗಳಲ್ಲಿ ಮದರ್ ಡೈರಿ ಈ ನಿರ್ಧಾರ ತೆಗೆದುಕೊಂಡಿದೆ. ಇದು ವರ್ಷದಲ್ಲಿ 3ನೇ ಬಾರಿಗೆ ಬೆಲೆ ಏರಿಕೆಯಾಗಿದೆ. ಇದನ್ನೂ ಓದಿ: ಹಾಡಹಗಲೇ ವ್ಯಕ್ತಿಯಿಂದ 7 ಲಕ್ಷ ರೂ. ದೋಚಿದ ಕಳ್ಳರು

    ಅಮುಲ್ ಬ್ರಾಂಡ್ ಅಡಿಯಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನ ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (GCMMF) ಗುಜರಾತ್ ಹೊರತುಪಡಿಸಿ ಎಲ್ಲಾ ಮಾರುಕಟ್ಟೆಗಳಲ್ಲಿ ಅಮುಲ್ ಗೋಲ್ಡ್ ಮತ್ತು ಎಮ್ಮೆಯ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ 2 ರಷ್ಟು ಹೆಚ್ಚಿಸಿತು. ನಂತರ ಮದರ್ ಡೈರಿ (MotherDairy) ಈ ಕ್ರಮಕ್ಕೆ ಮುಂದಾಗಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ಬಂದಿದ್ದ ಕೈ ನಾಯಕನಿಗೆ ಹೃದಯಾಘಾತ!

    ಜಿಸಿಎಂಎಂಎಫ್ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ಸೋಧಿ ಮಾತನಾಡಿ, `ಕೊಬ್ಬಿನ ಬೆಲೆ ಏರಿಕೆಯಿಂದಾಗಿ ಅಮುಲ್ ಗೋಲ್ಡ್ (Amul Gold) ಮತ್ತು ಎಮ್ಮೆ ಹಾಲಿನ ಬೆಲೆಯನ್ನು ಲೀಟರ್‌ಗೆ 2ರೂ. ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರತಿ ಲೀಟರ್‌ಗೆ 2 ರೂಪಾಯಿ ದರ ಹೆಚ್ಚಿಸಿದ ಅಮುಲ್

    ಪ್ರತಿ ಲೀಟರ್‌ಗೆ 2 ರೂಪಾಯಿ ದರ ಹೆಚ್ಚಿಸಿದ ಅಮುಲ್

    ನವದೆಹಲಿ: ಅಮುಲ್ ತನ್ನ ಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಿಸುವುದಾಗಿ ಘೋಷಿಸಿದೆ. ಅಮುಲ್ ಬ್ರಾಂಡ್ ಹೆಸರಿನಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ದೆಹಲಿ-ಎನ್‍ಸಿಆರ್, ಪಶ್ಚಿಮ ಬಂಗಾಳ, ಮುಂಬೈ ಮತ್ತು ಇತರ ಎಲ್ಲಾ ಮಾರುಕಟ್ಟೆಗಳಲ್ಲಿ ಆಗಸ್ಟ್ 17ರಿಂದ ಹೊಸ ಹಾಲಿನ ಬೆಲೆ ಜಾರಿಗೆ ಬರಲಿದೆ.

    ಅಮುಲ್ ಗೋಲ್ಡ್ ಬೆಲೆ 500 ಎಂಎಲ್‍ಗೆ 31 ರೂ., ಅಮುಲ್ ತಾಜಾ 500 ಎಂಎಲ್‍ಗೆ 25 ರೂ., ಅಮುಲ್ ಶಕ್ತಿ 500 ಎಂಎಲ್‍ಗೆ 28 ರೂ. ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಳವಾಗಿದ್ದು, ಎಂಆರ್‌ಪಿಯಲ್ಲಿ ಶೇಕಡಾ 4 ರಷ್ಟು ಹೆಚ್ಚಳವಾಗಿದೆ. ಇದು ಸರಾಸರಿ ಆಹಾರ ಹಣದುಬ್ಬರಕ್ಕಿಂತ ಕಡಿಮೆಯಾಗಿದೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಅಕ್ಕ, ತಂಗಿಯರು ಮಂಚ ಹತ್ತಿಯೆ ನೌಕರಿಗೆ ಹೋಗಿದ್ದಾರಾ: ಪಾಟೀಲ್ ಗರಂ

    ಕಳೆದ ವರ್ಷಕ್ಕೆ ಹೋಲಿಸಿದರೆ ಜಾನುವಾರುಗಳ ಮೇವಿನ ವೆಚ್ಚವು ಸರಿಸುಮಾರು 20 ಪ್ರತಿಶತಕ್ಕೆ ಹೆಚ್ಚಾಗಿದೆ ಎಂದು ಅಮುಲ್ ಹೇಳಿದೆ. ಇನ್‍ಪುಟ್ ವೆಚ್ಚದಲ್ಲಿನ ಏರಿಕೆಯನ್ನು ಪರಿಗಣಿಸಿ, ನಮ್ಮ ಸದಸ್ಯ ಒಕ್ಕೂಟಗಳು ಹಿಂದಿನ ವರ್ಷಕ್ಕಿಂತ 8-9 ಶೇಕಡಾ ವ್ಯಾಪ್ತಿಯಲ್ಲಿ ಬೆಲೆಗಳನ್ನು ಹೆಚ್ಚಿಸಿವೆ ಎಂದು ಅಮುಲ್ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಬಸ್, ತೈಲ ಟ್ಯಾಂಕರ್ ನಡುವೆ ಡಿಕ್ಕಿ – ಸುಟ್ಟು ಕರಕಲಾದ 20 ಜನ

    Live Tv
    [brid partner=56869869 player=32851 video=960834 autoplay=true]

  • ಕಾರು ಅಪಘಾತ – ಅಮೂಲ್ ಎಂಡಿ ಸೋಧಿಗೆ ಪೆಟ್ಟು, ಆಸ್ಪತ್ರೆಗೆ ದಾಖಲು

    ಕಾರು ಅಪಘಾತ – ಅಮೂಲ್ ಎಂಡಿ ಸೋಧಿಗೆ ಪೆಟ್ಟು, ಆಸ್ಪತ್ರೆಗೆ ದಾಖಲು

    ಗಾಂಧಿನಗರ: ಅಮೂಲ್ ಬ್ರ್ಯಾಂಡ್‌ನ ಅಡಿಯಲ್ಲಿ ಉತ್ಪನ್ನ ತಯಾರಿಸುವ GCMMF ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ಸೋಧಿ ಅವರು ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ.

    ಗುಜರಾತಿನ ಆನಂದ್ ಪಟ್ಟಣದ ಸಮೀಪ ಬುಧವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಸೋಧಿ ಅವರು ಪ್ರಾಣಾಪಾಯಯದಿಂದ ಪಾರಾಗಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಡೆದಿದ್ದೇನು?: ಸೋಧಿ ಅವರು ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಆನಂದ್-ಬಕ್ರೋಲ್ ರಸ್ತೆಯಲ್ಲಿ ಚಲಿಸುತ್ತಿದ್ದ ವೇಳೆ ಕಾರು ಚಾಲಕ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಗುದ್ದಿದ ಪರಿಣಾಮ ಉರುಳಿ ಬಿದ್ದಿದೆ. ಕಾರು ನಿಯಂತ್ರಣ ಕಳೆದುಕೊಳ್ಳಲು ನಿಖರ ಕಾರಣ ಏನೆಂಬುದು ಕಂಡುಬಂದಿಲ್ಲ. ಆದರೆ ಸ್ಥಳೀಯ ಮೂಲಗಳು ಹೇಳುವಂತೆ ಚಾಲಕ ದ್ವಿಚಕ್ರ ವಾಹವೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿ, ತಿರುವು ತೆಗೆದುಕೊಂಡಿದ್ದರಿಂದ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಪಘಾತ ಸಂಭವಿಸಿದೆ ಎಂಬುದಾಗಿ ತಿಳಿದು ಬಂದಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಬಿಡಿ ಜಡೇಜಾ ತಿಳಿಸಿದ್ದಾರೆ.

    CRIME

    ಅಪಘಾತಕ್ಕೀಡಾದ ಸೋಧಿ ಹಾಗೂ ಚಾಲಕನನ್ನು ಸ್ಥಳೀಯರು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಮಾಹಿತಿ ನೀಡಿದ್ದಾರೆ.

    ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಸಂಸ್ಥೆ ನಿಯಮಿತವು (GCMMF) ಆನಂದ್ ಪಟ್ಟಣದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ. ಅಮೂಲ್ ಬ್ರ‍್ಯಾಂಡ್ ಹೆಸರಿನ ಅಡಿ ಅದು ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಸೋಧಿ ಅವರು 2019 ರಿಂದಲೂ ಅದರ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

    Live Tv

  • ಚೆನ್ನೈ ತಂಡದ ಹೊಸ ಸೂಪರ್ ಕಿಂಗ್‍ಗೆ ಪೋಸ್ಟ್ ಮೂಲಕ ಶುಭಕೋರಿದ ಅಮುಲ್

    ಚೆನ್ನೈ ತಂಡದ ಹೊಸ ಸೂಪರ್ ಕಿಂಗ್‍ಗೆ ಪೋಸ್ಟ್ ಮೂಲಕ ಶುಭಕೋರಿದ ಅಮುಲ್

    ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನೂತನ ನಾಯಕ ರವೀಂದ್ರ ಜಡೇಜಾ ಮತ್ತು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ 15ನೇ ಆವೃತ್ತಿ ಐಪಿಎಲ್ ಆರಂಭಕ್ಕೂ ಮುನ್ನ ಸಿಹಿತಿಂಡಿಗಳ ಕಂಪನಿ ಅಮುಲ್ ಪೋಸ್ಟ್ ಒಂದನ್ನು ಹಾಕಿಕೊಂಡು ಶುಭಕೋರಿದೆ.

    ಚೆನ್ನೈ ತಂಡದ ನಾಯಕತ್ವವನ್ನು ಧೋನಿ ತ್ಯಜಿಸಿ ರವೀಂದ್ರ ಜಡೇಜಾಗೆ ಪಟ್ಟ ಕಟ್ಟಿದ್ದಾರೆ. ಇಂದು 15ನೇ ಆವೃತ್ತಿ ಐಪಿಎಲ್ ಆರಂಭವಾಗುತ್ತಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಎದುರುಬದುರಾಗುತ್ತಿದೆ. ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ನೂತನ ನಾಯಕನೊಂದಿಗೆ ಕಣಕ್ಕಿಳಿಯುತ್ತಿದೆ. ಚೆನ್ನೈ ತಂಡದ ನಾಯಕ ಜಡ್ಡು ಮೊಟ್ಟ ಮೊದಲ ಬಾರಿ ನಾಯಕನಾಗಿ 4 ಬಾರಿ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಸಿಎಸ್‍ಕೆ ತಂಡವನ್ನು ಮುನ್ನಡೆಸಲಿದ್ದಾರೆ. ಹಾಗಾಗಿ ಅಮುಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದು, ಈ ಪೋಸ್ಟ್‌ನಲ್ಲಿ  ಚೆನ್ನೈನ ಹೊಸ ಸೂಪರ್ ಕಿಂಗ್‍ಗೆ Amul SIRV WITH LOVE ಎಂದು ಬರೆದುಕೊಂಡಿದೆ. ಇದನ್ನೂ ಓದಿ:  ಇಂದಿನಿಂದ ಐಪಿಎಲ್ ಆರಂಭ – ಅತಿ ಹೆಚ್ಚು ರನ್ ಸಿಡಿಸಿದ ಟಾಪ್ ತಂಡಗಳು

    ಇಂದು ಅಧಿಕೃತವಾಗಿ ಟೂರ್ನಿ ಆರಂಭವಾಗುತ್ತಿದ್ದು, ಕೋಲ್ಕತ್ತಾ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿದ್ದಾರೆ. ಅಯ್ಯರ್ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಇತ್ತ ಜಡೇಜಾ ಮೊಟ್ಟ ಮೊದಲ ಬಾರಿಗೆ ಸಿಎಸ್‍ಕೆ ತಂಡವನ್ನು ಮುನ್ನಡೆಸುತ್ತಿದ್ದರೂ ಕೂಡ ಧೋನಿ ಜೊತೆಗಿರುವ ನಂಬಿಕೆಯಲ್ಲಿದ್ದಾರೆ. ಎರಡು ತಂಡಗಳು ಕೂಡ ಬಲಿಷ್ಠ ಬ್ಯಾಟಿಂಗ್ ಲೈನ್ ಆಪ್ ಹೊಂದಿದ್ದು, ರೋಚಕ ಕಾದಾಟಕ್ಕೆ ಪಂದ್ಯ ಸಾಕ್ಷಿಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಸಿಎಸ್‍ಕೆ ನಾಯಕ ಸ್ಥಾನಕ್ಕೆ ಧೋನಿ ರಾಜೀನಾಮೆ

    ಸಿಎಸ್‌ಕೆ ಮತ್ತು ಕೆಕೆಆರ್‌ ನಡುವೆ ಇಂದು ಸಂಜೆ 7:30ಕ್ಕೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು, ಈ ಮೂಲಕ ಮುಂದಿನ 3 ತಿಂಗಳ ಕಾಲ ಕ್ರಿಕೆಟ್ ಜಾತ್ರೆಗೆ ಅಧಿಕೃತ ಚಾಲನೆ ಸಿಗಲಿದೆ.

  • ಅಮೂಲ್ ಹಾಲಿನ ದರ 2 ರೂ. ಹೆಚ್ಚಳ

    ಅಮೂಲ್ ಹಾಲಿನ ದರ 2 ರೂ. ಹೆಚ್ಚಳ

    ಗಾಂಧೀನಗರ: ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (GCMMF) ಅಮೂಲ್ ತನ್ನ ಹಾಲಿನ ದರವನ್ನು 2 ರೂ. ಏರಿಕೆ ಮಾಡಿದೆ.

    ಅಮೂಲ್ ಹಾಲು ಮತ್ತು ಹಾಲಿನ ಇತರ ಉತ್ಪನ್ನಗಳ ಮೂಲಕ ಭಾರತದಲ್ಲಿ ಹೆಸರುವಾಸಿಯಾಗಿದ್ದು, ಇದೀಗ ಹಾಲಿನ ದರವನ್ನು ಮಾತ್ರ ಮಾರ್ಚ್ 1 ರಿಂದ 2 ರೂ. ಏರಿಕೆಗೆ ಮುಂದಾಗಿದೆ. ಇದನ್ನೂ ಓದಿ: ಯುವರತ್ನನಿಗೆ ವಿಶೇಷವಾಗಿ ಗೌರವ ಸಲ್ಲಿಸಿದ ಅಮೂಲ್

    ಅಹಮದಾಬಾದ್ ಮತ್ತು ಸೌರಾಷ್ಟ್ರ ಮಾರುಕಟ್ಟೆಯಲ್ಲಿ ಪ್ರಸ್ತುತ ಅಮೂಲ್ ಗೋಲ್ಡ್ ಹಾಲಿನ ದರ ಅರ್ಧ ಲೀ. 30 ರೂ., ಅಮೂಲ್ ತಾಜಾ 24 ರೂ. ಮತ್ತು ಅಮೂಲ್ ಶಕ್ತಿ 27 ರೂ. ಇದೆ. ಇದೀಗ ಇರುವ ಬೆಲೆಯಲ್ಲಿ 2 ರೂ. ಏರಿಕೆ ಆಗುತ್ತಿದ್ದು, ಈ ಮೂಲಕ MRP ದರದಲ್ಲಿ 4% ಏರಿಕೆ ಆಗಿದೆ ಎಂದು ಅಮೂಲ್ ಸಂಸ್ಥೆ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಸೈಬರ್ ಮೋಸದ ಜಾಲದಕ್ಕೆ ಸಿಕ್ಕಿ 1.48 ಲಕ್ಷ ಕಳೆದುಕೊಂಡ ನಟಿ!

  • ‘ಪುಷ್ಪಾ’ ಸಿನಿಮಾಗೆ ಮುದ್ದಾದ ಗೌರವ ಸಲ್ಲಿಸಿದ ಅಮುಲ್

    ‘ಪುಷ್ಪಾ’ ಸಿನಿಮಾಗೆ ಮುದ್ದಾದ ಗೌರವ ಸಲ್ಲಿಸಿದ ಅಮುಲ್

    ಹೈದರಾಬಾದ್: ಅಮುಲ್ ತನ್ನ ಜಾಹಿರಾತಿಗಾಗಿ ‘ಪುಷ್ಪಾ:ದಿ ರೈಸ್’ ಸಿನಿಮಾದ ಪಾತ್ರಗಳನ್ನು ಬಳಸಿಕೊಂಡಿದೆ.

    ಸಿನಿಮಾ ತಾರೆಗಳಿಗೆ ತಮ್ಮ ಅಭಿಮಾನವನ್ನು ಗೌರವ ಸಲ್ಲಿಸಲು ಹಲವು ರೀತಿ ಶ್ರಮಪಡುತ್ತಾರೆ. ಅದರಂತೆ ದೇಶದ ಪ್ರಮುಖ ಗ್ರಾಹಕ ಉತ್ಪನ್ನ ಬ್ರಾಂಡ್‍ಗಳಲ್ಲೊಂದಾದ ಅಮುಲ್ ತನ್ನ ಜಾಹೀರಾತುಗಳ ಮೂಲಕ ‘ಪುಷ್ಪಾ’ ಸಿನಿಮಾಗೆ ಮುದ್ದಾದ ಗೌರವವನ್ನು ಸಲ್ಲಿಸಿದೆ. ಈ ಜಾಹೀರಾತು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

    ಪುಷ್ಪಾ ಪಾತ್ರದಲ್ಲಿ ಅಲ್ಲು ಅರ್ಜುನ್ ಮತ್ತು ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ಪಾತ್ರಗಳನ್ನು ಅಮುಲ್ ತನ್ನ ಹೊಸ ಜಾಹೀರಾತಿನಲ್ಲಿ ಬಳಸಿಕೊಂಡಿದೆ.

    ಫೋಟೋದಲ್ಲಿ ಏನಿದೆ?
    ‘ಸಾಮಿ ಸಾಮಿ’ ಸಾಂಗ್ ಟ್ರ್ಯಾಕ್ ನಲ್ಲಿ ರಶ್ಮಿಕಾ ಹೆಜ್ಜೆಯನ್ನು ಸ್ತ್ರೀ ಕಾರ್ಟೂನ್ ಪಾತ್ರಕ್ಕೆ ನೀಡಲಾಗಿದೆ. ಶ್ರೀವಲ್ಲಿಯ ಪಾತ್ರದ ಕಾರ್ಟೂನ್ ಸ್ಟೈಲಿಷ್ ಆಗಿದೆ. ಶ್ರೀವಲ್ಲಿ ಕೈಯಲ್ಲಿ ಬೆಣ್ಣೆ ಇಟ್ಟುಕೊಂಡಿದ್ದು, ಪುಷ್ಪನನ್ನು ಬೆಣ್ಣೆ ತಿನ್ನಲು ಕರೆಯುವ ಸಂಭಾಷಣೆ ನಡೆಯುವ ರೀತಿ ಕಾರ್ಟೂನ್ ರೆಡಿ ಮಾಡಲಾಗಿದೆ.

    ತಮ್ಮ ಸೃಜನಾತ್ಮಕ ಶೀರ್ಷಿಕೆಗಳಿಗೆ ಹೆಸರುವಾಸಿಯಾದ ಅಮುಲ್, ಚಿತ್ರವು ಪ್ರೇಕ್ಷಕರ ಮೇಲೆ ಪ್ರಭಾವ ಬೀರಿದೆ ಎಂದು ಹೇಳಲು ‘ಪುಷ್ಪ್ಯಾಕ್ ದಿ ಸ್ಲೈಸ್’ ಎಂಬ ಪದವನ್ನು ಬಳಸಿದ್ದಾರೆ. ಅದರಲ್ಲಿಯೂ ಅಲ್ಲು ಅರ್ಜುನ್ ಅವರ ಹೆಸರನ್ನು ಸೃಜನಾತ್ಮಕವಾಗಿ ಬಳಸಿದೆ. ‘ಅಮುಲ್ಲು’ ಎಂದು ಬಳಸಿದ್ದು ‘ಅಮುಲ್’ ಹಾಗೂ ‘ಅಲ್ಲು’ ಪದ ಸೇರಿದೆ.

    ಪುಷ್ಪಾ: ದಿ ರೈಸ್ ತಂಡ ಅಮುಲ್‍ನ ಈ ಜಾಹಿರಾತಿನಿಂದ ಫುಲ್ ಖುಷ್ ಆಗಿದ್ದು, ಪುಷ್ಪಾ ಸಿನಿಮಾದ ಕಾರ್ಟೂನ್ ಫೋಟೋವನ್ನು ಟ್ವೀಟ್ ಮಾಡಿದೆ.

    ಪುಷ್ಪಾ: ದಿ ರೈಸ್ ಸಿನಿಮಾಗೆ ಸುಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ಕಳೆದ ಡಿಸೆಂಬರ್ 17 ರಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರ ಮೆಚ್ಚುಗೆಗ ಪಾತ್ರವಾಗಿದೆ. ಈ ಚಿತ್ರವು ವಿಶ್ವಾದ್ಯಂತ 350 ಕೋಟಿ ರೂ. ಗೂ ಹೆಚ್ಚು ಗಳಿಸಿದೆ. ಈ ಸಿನಿಮಾ ಜನವರಿ 7 ರಂದು ಓಟಿಟಿಯಲ್ಲಿಯೂ ರಿಲೀಸ್ ಆಗಿದೆ. ಈ ಸಿನಿಮಾದ ಮುಂದುವರೆದ ಭಾಗ ಡಿಸೆಂಬರ್ 2022 ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.