Tag: Amul Milk

  • ನಂದಿನಿ ನಮ್ಮ ಸಂಸ್ಥೆ, ‘ನಮ್ಮ ಮೆಟ್ರೋ’ದಲ್ಲಿ ಮಳಿಗೆ ಹಾಕಲು ಅವಕಾಶ ಕೊಡ್ತೀವಿ: ಡಿಕೆಶಿ

    ನಂದಿನಿ ನಮ್ಮ ಸಂಸ್ಥೆ, ‘ನಮ್ಮ ಮೆಟ್ರೋ’ದಲ್ಲಿ ಮಳಿಗೆ ಹಾಕಲು ಅವಕಾಶ ಕೊಡ್ತೀವಿ: ಡಿಕೆಶಿ

    ಬೆಂಗಳೂರು: ನಂದಿನಿ ನಮ್ಮ ಸಂಸ್ಥೆ, ನಮ್ಮ ಮೆಟ್ರೋದಲ್ಲಿ ಮಳಿಗೆ ಹಾಕುವುದಕ್ಕೆ ನಂದಿನಿಗೆ (Nandini Milk) ಅವಕಾಶ ಕೊಡೋದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ತಿಳಿಸಿದರು.

    ನಮ್ಮ ಮೆಟ್ರೋ ಮಳಿಗೆಯಲ್ಲಿ ಅಮುಲ್‌ಗೆ ಜಾಗ ಕೊಟ್ಟು ನಂದಿನಿಗೆ ಜಾಗ ಕೊಡದ ವಿಚಾರದ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಮೆಟ್ರೋದಲ್ಲಿ ಮಳಿಗೆ ಹಾಕಲು ನಾವು ಟೆಂಡರ್ ಕರೆದಿದ್ದೆವು. ನಂದಿನಿ ಅವರು ಭಾಗಿಯಾಗಿರಲಿಲ್ಲ. ಅಮುಲ್ ಅವರು ಟೆಂಡರ್‌ನಲ್ಲಿ ಭಾಗವಹಿಸಿದ್ರು. ಅವರಿಗೆ ಅವಕಾಶ ಕೊಟ್ಟಿದ್ದೇವೆ. ನಂದಿನಿ ಅವರು ಹಾಕಿದ್ರು. ಅವರಿಗೂ ಅವಕಾಶ ಕೊಡ್ತೀವಿ ಎಂದರು. ಇದನ್ನೂ ಓದಿ: ಅಮೂಲ್‌ಗೆ ಮಣೆಹಾಕಿದ್ದ BMRCLಗೆ ಮುಖಭಂಗ- ಮೆಟ್ರೋ ನಿಲ್ದಾಣಗಳಲ್ಲಿ 20 ನಂದಿನಿ ಮಳಿಗೆ ತೆರೆಯಲು ಅವಕಾಶ

    ಅಮುಲ್ ಅವರು 10 ಕಡೆ ಕೇಳಿದ್ರು. ನಾವು ಎರಡು ಕಡೆ ಅವಕಾಶ ಕೊಟ್ಟಿದ್ದೇವೆ. ನಂದಿನಿ ನಮ್ಮ ಸಂಸ್ಥೆ ಅವರು ಮುಂದೆ ಬಂದರೆ ಅವರಿಗೂ ಕೊಡ್ತೀವಿ. ಅದು ನಮ್ಮ ಸಂಸ್ಥೆ. ಕಡಿಮೆ ದರಕ್ಕೂ ಬೇಕಾದ್ರು ಕೊಡ್ತೀವಿ. ವಿರೋಧ ಮಾಡೋರು ಪ್ರಚಾರಕ್ಕೆ ಮಾಡ್ತಿದ್ದಾರೆ, ಮಾಡಲಿ ಎಂದು ಟಾಂಗ್‌ ಕೊಟ್ಟರು.

    ಕರ್ನಾಟಕದ ಬ್ರ್ಯಾಂಡ್‌ ನಂದಿನಿಯನ್ನು ಕಡೆಗಣಿಸಿ, ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮೂಲ್ (Amul) ಮಳಿಗೆಗಳನ್ನು ತೆರೆಯಲು ನಮ್ಮ ಮೆಟ್ರೋ (Namma Metro) ಮುಂದಾಗಿತ್ತು. ಈ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಮೆಟ್ರೋ ನಿಲ್ದಾಣದಲ್ಲಿ 20 ನಂದಿನಿ ಮಳಿಗೆಗಳನ್ನು ರಿಯಾಯಿತಿ ದರದಲ್ಲಿ ತೆರೆಯಲು BMRCL ಒಪ್ಪಿದೆ. ಇದನ್ನೂ ಓದಿ: ಬೆಂಗಳೂರಿನ 10 ಮೆಟ್ರೋ ಸ್ಟೇಷನ್‌ನಲ್ಲಿ ಅಮುಲ್‌ಗೆ ಪ್ರಮೋಷನ್ – ಕನ್ನಡಿಗರು ಕೆಂಡ

  • ಇಂದಿನಿಂದ ದೇಶಾದ್ಯಂತ ಅಮುಲ್ ಹಾಲಿನ ದರ 2 ರೂ. ಹೆಚ್ಚಳ

    ಇಂದಿನಿಂದ ದೇಶಾದ್ಯಂತ ಅಮುಲ್ ಹಾಲಿನ ದರ 2 ರೂ. ಹೆಚ್ಚಳ

    -ನಂದಿನಿ ಹಾಲಿನ ದರ ಏರಿಕೆ ಬಳಿಕ ಮತ್ತೆ ಗ್ರಾಹಕರಿಗೆ ಬರೆ

    ಬೆಂಗಳೂರು: ನಂದಿನಿ ಹಾಲಿನ (Nandini Milk) ದರ ಏರಿಕೆ ಬಳಿಕ ಇದೀಗ ದೇಶಾದ್ಯಂತ ಅಮುಲ್ ಹಾಲಿನ (Amul Milk)  ದರ 2 ರೂ. ಏರಿಕೆಯಾಗಿದೆ.

    ಇತ್ತೀಚಿಗಷ್ಟೇ ಕೆಎಂಎಫ್ (KMF) ನಂದಿನಿ ಹಾಲಿನ ದರವನ್ನು ಏರಿಕೆ ಮಾಡಿತ್ತು. ಇದೀಗ ಅಮುಲ್ ಹಾಲಿನ ದರ ಹೆಚ್ಚಿಸುವ ಮೂಲ ಗ್ರಾಹಕರಿಗೆ ಮತ್ತೆ ಬರೆ ಎಳೆದಂತಾಗಿದೆ. ದೇಶಾದ್ಯಂತ ಪರಿಷ್ಕೃತ ದರ ಇಂದಿನಿಂದಲೇ (ಮೇ 1) ಜಾರಿಯಾಗಿದೆ.ಇದನ್ನೂ ಓದಿ: ಧರ್ಮ, ರಾಗಿಣಿ ನಟನೆಯ ‘ಸಿಂಧೂರಿ’ ಚಿತ್ರಕ್ಕೆ ಅದ್ಧೂರಿ ಚಾಲನೆ

    ಈ ದರ ಏರಿಕೆಯು ಅಮುಲ್ ಸ್ಟ್ಯಾಂಡರ್ಡ್, ಅಮುಲ್ ಬಫೆಲೋ, ಅಮುಲ್ ಗೋಲ್ಡ್, ಅಮುಲ್ ಸ್ಲಿಮ್ ಆಂಡ್ ಟ್ರಿಮ್, ಅಮುಲ್ ಚಾಯ್‌ಮಜಾ, ಅಮುಲ್ ತಾಜಾ ಹಾಗೂ ಅಮುಲ್ ಕೌಮಿಲ್ಕ್‌ಗಳಿಗೆ ಅನ್ವಯವಾಗುತ್ತದೆ. ಕಳೆದ ವರ್ಷವಷ್ಟೇ ಗ್ರಾಹಕರಿಗೆ ರಿಲೀಫ್ ನೀಡಲು ಅಮುಲ್ ಸುಮಾರು ಐದು ತಿಂಗಳ ಕಾಲ 1 ಲೀ. ಮತ್ತು 2 ಲೀ. ಹಾಲಿನ ಪ್ಯಾಕ್‌ಗಳಲ್ಲಿ ಕ್ರಮವಾಗಿ 50 ಮಿಲಿ ಮತ್ತು 100 ಮಿಲಿ ಹೆಚ್ಚುವರಿ ಹಾಲನ್ನು ಉಚಿತವಾಗಿ ನೀಡಿತ್ತು. ಇದಲ್ಲದೆ 2025ರ ಜನವರಿಯಲ್ಲಿ 1 ಲೀ. ಪ್ಯಾಕ್‌ನ ಬೆಲೆಯನ್ನು 1 ರೂ. ಕಡಿಮೆ ಮಾಡಿತ್ತು.

    ಯಾವ ಪ್ಯಾಕೆಟ್‌ಗೆ ಎಷ್ಟು?
    ಅಮುಲ್ ಸ್ಟ್ಯಾಂಡರ್ಡ್ ಹಾಲು (500 ಮಿ.ಲೀ)
    ಹಳೆಯ ಬೆಲೆ: 30 ರೂ.-ಹೊಸ ಬೆಲೆ: 31 ರೂ.

    ಅಮುಲ್ ಬಫೆಲೋ (ಎಮ್ಮೆ ಹಾಲು) 500 ಮಿ.ಲೀ
    ಹಳೆಯ ಬೆಲೆ: 36 ರೂ.-ಹೊಸ ಬೆಲೆ: 37 ರೂ.

    ಅಮುಲ್ ಗೋಲ್ಡ್ ಮಿಲ್ಕ್ (500 ಮಿ.ಲೀ)
    ಹಳೆಯ ಬೆಲೆ: 33 ರೂ.-ಹೊಸ ಬೆಲೆ: 34 ರೂ.

    ಅಮುಲ್ ಗೋಲ್ಡ್ ಹಾಲು (1 ಲೀಟರ್)
    ಹಳೆಯ ಬೆಲೆ: 65 ರೂ.-ಹೊಸ ಬೆಲೆ: 67 ರೂ.

    ಅಮುಲ್ ಸ್ಲಿಮ್ ಆಂಡ್ ಟ್ರಿಮ್ ಮಿಲ್ಕ್ (500 ಮಿ.ಲೀ)
    ಹಳೆಯ ಬೆಲೆ: 24 ರೂ.-ಹೊಸ ಬೆಲೆ: 25 ರೂ.

    ಅಮುಲ್ ಚಾಯ್ ಮಜಾ ಹಾಲು (500 ಮಿ.ಲೀ)
    ಹಳೆಯ ಬೆಲೆ: 31 ರೂ.-ಹೊಸ ಬೆಲೆ: 32 ರೂ.

    ಅಮುಲ್ ತಾಜಾ ಹಾಲು (500 ಮಿ.ಲೀ)
    ಹಳೆಯ ಬೆಲೆ: 27 ರೂ.-ಹೊಸ ಬೆಲೆ: 28 ರೂ.

    ಅಮುಲ್ ತಾಜಾ ಹಾಲು (1 ಲೀಟರ್)
    ಹಳೆಯ ಬೆಲೆ: 53 ರೂ.-ಹೊಸ ಬೆಲೆ: 55 ರೂ.ಇದನ್ನೂ ಓದಿ: ಹೊಸ ಯೆಲ್ಲೋ ಬೋರ್ಡ್ ವಾಹನ ಖರೀದಿಸುವವರಿಗೆ ಶಾಕ್‌ – ಇಂದಿನಿಂದಲೇ ಕಟ್ಬೇಕು ಲೈಫ್‌ ಟೈಮ್‌ ಟ್ಯಾಕ್ಸ್‌!

  • ಸೋಮವಾರದಿಂದ ಅಮುಲ್‌ ಹಾಲಿನ ದರದಲ್ಲಿ 2 ರೂ. ಹೆಚ್ಚಳ

    ಸೋಮವಾರದಿಂದ ಅಮುಲ್‌ ಹಾಲಿನ ದರದಲ್ಲಿ 2 ರೂ. ಹೆಚ್ಚಳ

    ಅಹಮ್ಮದಾಬಾದ್: ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುವ ಮುನ್ನವೇ ಸಾರ್ವಜನಿಕರ ಜೇಬಿಗೆ ಹೊಡೆತ ಬಿದ್ದಿದೆ. ಅಮುಲ್ ಹಾಲಿನ (Amul Milk Price) ಬೆಲೆಯನ್ನು ಹೆಚ್ಚಿಸಲಾಗಿದೆ.

    ಅಮುಲ್ ಗೋಲ್ಡ್, ಅಮುಲ್ ಶಕ್ತಿ, ಅಮುಲ್ ಟೀ ಸ್ಪೆಷಲ್ ಬೆಲೆಯನ್ನು ಹೆಚ್ಚಿಸಲಾಗಿದೆ. ಪ್ರತಿ ಲೀಟರ್‌ಗೆ 2 ರೂ. ಹೆಚ್ಚಳ ಮಾಡಲಾಗಿದೆ. ಅಮುಲ್ ಹಾಲಿನ ಹೊಸ ಬೆಲೆ ಸೋಮವಾರ ಬೆಳಗ್ಗೆಯಿಂದಲೇ ಅನ್ವಯವಾಗಲಿದೆ.

    ಹಾಲಿನ ಒಟ್ಟಾರೆ ಕಾರ್ಯಾಚರಣೆ ಮತ್ತು ಉತ್ಪಾದನಾ ವೆಚ್ಚ ಹೆಚ್ಚಳದ ದೃಷ್ಟಿಯಿಂದ ಸೋಮವಾರದಿಂದ ಜಾರಿಗೆ ಬರುವಂತೆ ದರ ಪರಿಷ್ಕರಣೆ ಮಾಡಲಾಗಿದೆ. ಇದರೊಂದಿಗೆ ದೇಶದ ಎಲ್ಲ ಮಾರುಕಟ್ಟೆಗಳಲ್ಲಿ ಅಮುಲ್ ಪ್ಯಾಕೆಟ್‌ ಹಾಲಿನ ಬೆಲೆ ಲೀಟರ್‌ಗೆ 2 ರೂ. ಏರಿಕೆಯಾಗಲಿದೆ ಎಂದು ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (GCMMF) ತಿಳಿಸಿದೆ.

    ಈ ಹಿಂದೆ 2023 ರ ಫೆಬ್ರವರಿಯಲ್ಲಿ GCMMF ಹಾಲಿನ ದರವನ್ನು ಹೆಚ್ಚಿಸಿತ್ತು. ಈ ವೇಳೆಯೂ ರೈತರ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಈ ಹೆಚ್ಚಳದ ಅಗತ್ಯವಿದೆ ಎಂದು ಎಂಡಿ ಜಯನ್ ಮೆಹ್ತಾ ಹೇಳಿದ್ದರು.

  • ಕೇರಳದಲ್ಲಿ ಕರ್ನಾಟಕದ ನಂದಿನಿ ಹಾಲು ಮಾರಾಟಕ್ಕೆ ಕೇರಳ ಹಾಲು ಒಕ್ಕೂಟ ವಿರೋಧ

    ಕೇರಳದಲ್ಲಿ ಕರ್ನಾಟಕದ ನಂದಿನಿ ಹಾಲು ಮಾರಾಟಕ್ಕೆ ಕೇರಳ ಹಾಲು ಒಕ್ಕೂಟ ವಿರೋಧ

    ತಿರುವನಂತಪುರಂ: ಕೇರಳದಲ್ಲಿ (Kerala) ಕರ್ನಾಟಕದ ನಂದಿನಿ ಹಾಲು (Nandini Milk) ಉತ್ಪನ್ನಗಳ ಮಾರಾಟಕ್ಕೆ ಮಿಲ್ಮ ಎಂದೇ ಹೆಸರಾಗಿರುವ ಕೇರಳ ಹಾಲು ಒಕ್ಕೂಟ (Kerala Milk Federation) ವಿರೋಧ ವ್ಯಕ್ತಪಡಿಸಿದೆ.

    ಮಿಲ್ಮಾ (Milma) ಮಲಬಾರ್ ವಲಯ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಎಸ್.ಮಣಿ ಮಾತನಾಡಿ, ಭಾರತೀಯ ರಾಷ್ಟ್ರೀಯ ಸಹಕಾರಿ ಡೈರಿ ಫೆಡರೇಶನ್‌ನ ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗುಜರಾತ್‍ಗೆ Biparjoy Cyclone ಕಂಟಕ – 150 ಕಿ.ಮೀ ವೇಗದಲ್ಲಿ ಗಾಳಿ ಮಳೆ

    ದೇಶದಲ್ಲಿರುವ ಹಾಲು ಒಕ್ಕೂಟಗಳು ಇಷ್ಟು ದಿನ ಅನುಸರಿಸಿಕೊಂಡು ಬಂದಿರುವ ಕೆಲವು ನಿಯಮಗಳನ್ನು ಮುರಿಯುವುದು ನೈತಿಕವಾಗಿ ಸರಿಯಲ್ಲ. ಕರ್ನಾಟಕ ಕಾರ್ಪೊರೇಟ್ ಹಾಲು ಉತ್ಪಾದಕರು ಕೇರಳದಲ್ಲಿ ತನ್ನ ಮಳಿಗೆಗಳನ್ನು ತೆರೆಯುವ ನಿರ್ಧಾರದ ವಿರುದ್ಧ ಪತ್ರವನ್ನು ನೀಡಿದ್ದರೂ, ಅವರು ಅದನ್ನು ನಿರ್ಲಕ್ಷಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

    ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಚರ್ಚೆಯಾದ ಅಮುಲ್-ನಂದಿನಿ ಸಮಸ್ಯೆಗೂ ಮುನ್ನವೇ ಕರ್ನಾಟಕ ಕಾರ್ಪೊರೇಟ್ ಹಾಲು ಉತ್ಪಾದಕರು ಕೇರಳದಲ್ಲಿ ವ್ಯಾಪಾರ ಮಾಡಲು ನಿರ್ಧರಿಸಿದ್ದರು. ಕರ್ನಾಟಕದಲ್ಲಿ ಉದ್ಯಮ ಆರಂಭಿಸುವ ಅಮುಲ್ ನಿರ್ಧಾರ ತಪ್ಪು. ಆದರೆ ಅದನ್ನು ವಿರೋಧಿಸುವ ನೈತಿಕ ಹಕ್ಕು ನಂದಿನಿ ಅವರಿಗೆ ಇಲ್ಲ ಎಂದು ಮಣಿ ಹೇಳಿದ್ದಾರೆ. ಇದನ್ನೂ ಓದಿ: ಮೋದಿ, ಬಿಜೆಪಿ ನಾಯಕರು ಬಡವರಿಗೆ ಆಹಾರ ಧಾನ್ಯ ನಿರಾಕರಿಸುವಷ್ಟು ಕುರುಡರಾಗಬಹುದೇ?: ಸುರ್ಜೆವಾಲ ವಾಗ್ದಾಳಿ

    ಹಾಲು ಒಕ್ಕೂಟಗಳು ಕೇವಲ ವಾಣಿಜ್ಯ ಹಿತಾಸಕ್ತಿಗಳಿಗಾಗಿ ಮಾತ್ರವಲ್ಲದೆ ತಮ್ಮ ರಾಜ್ಯದಲ್ಲಿ ಹೈನುಗಾರಿಕೆ ಮಾಡುವವರ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕು. ಒಂದು ರಾಜ್ಯದ ಸಹಕಾರಿ ಸಂಸ್ಥೆಯು ಮತ್ತೊಂದು ರಾಜ್ಯದ ಸಹಕಾರಿ ಸಂಸ್ಥೆಯ ಮಾರುಕಟ್ಟೆಯಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವುದು ಸಹಕಾರದ ತತ್ವಗಳು ಮತ್ತು ಮೂಲಭೂತ ಮೌಲ್ಯಗಳಿಗೆ ವಿರುದ್ಧ ಎಂದು ಎಚ್ಚರಿಸಿದ್ದಾರೆ.

    ಮಿಲ್ಮಾ ಮುಖ್ಯವಾಗಿ ಕರ್ನಾಟಕದ ನಂದಿನಿ ಮತ್ತು ತಮಿಳುನಾಡಿನ ಆವಿನ್ ಮೇಲೆ ಹಬ್ಬದ ಋತುಗಳಲ್ಲಿ ಮತ್ತು ಕೇರಳದಲ್ಲಿ ಕಡಿಮೆ ಹಾಲು ಉತ್ಪಾದನೆ ಸಂದರ್ಭದಲ್ಲಿ ಅವಲಂಬಿತವಾಗಿದೆ. ಹೀಗಾಗಿ ನಂದಿನಿಯ ಉತ್ತಮ ಗ್ರಾಹಕರಾಗಿರುವ ಮಿಲ್ಮಾ ಸಂಸ್ಥೆಗೆ ಹೆಚ್ಚಿನ ಹಾಲು ಮಾರಾಟ ಮಾಡಿ ತೊಂದರೆ ನೀಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯ ಕೋಚಿಂಗ್ ಸೆಂಟರ್‌ನಲ್ಲಿ ಭಾರೀ ಬೆಂಕಿ – ಕಿಟಕಿಯಿಂದ ಹಾರಿ ಜೀವ ಉಳಿಸಿಕೊಂಡ ವಿದ್ಯಾರ್ಥಿಗಳು

    ಕಳೆದ ಆರು ತಿಂಗಳ ಅಂಕಿ ಅಂಶಗಳ ಪ್ರಕಾರ, ನಮ್ಮ ಉತ್ಪನ್ನ ಮಾರಾಟದಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ನಂದಿನಿಯ ಆಗಮನವು ಕೇರಳ ಮಾರುಕಟ್ಟೆಯಲ್ಲಿರುವ ಇತರ ಉತ್ಪನ್ನಗಳ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ.

    ಮಲಪ್ಪುರಂ ಜಿಲ್ಲೆಯ ಮಂಚೇರಿ ಮತ್ತು ತಿರೂರ್, ಎರ್ನಾಕುಲಂ ಜಿಲ್ಲೆಯ ಕೊಚ್ಚಿ, ಪತ್ತನಂತಿಟ್ಟ ಜಿಲ್ಲೆಯ ಪಂದಳಂನಲ್ಲಿ ನಂದಿನಿ ತಮ್ಮ ಮಳಿಗೆಗಳನ್ನು ತೆರೆದಿದೆ. ಕೇರಳದ ಪ್ರಮುಖ ನಗರಗಳ ಸೂಪರ್ ಮಾರ್ಕೆಟ್‌ಗಳಲ್ಲೂ ನಂದಿನಿ ಉತ್ಪನ್ನಗಳು ದೊರೆಯುತ್ತವೆ.

  • ಇಂದಿನಿಂದ ಹೊಸ ದುಬಾರಿ ಜೀವನ – ಎಲ್‍ಪಿಜಿ ಸಿಲಿಂಡರ್, ಹಾಲು, ಬ್ಯಾಂಕಿಂಗ್ ಚಾರ್ಜ್ ಹೆಚ್ಚಳ

    ಇಂದಿನಿಂದ ಹೊಸ ದುಬಾರಿ ಜೀವನ – ಎಲ್‍ಪಿಜಿ ಸಿಲಿಂಡರ್, ಹಾಲು, ಬ್ಯಾಂಕಿಂಗ್ ಚಾರ್ಜ್ ಹೆಚ್ಚಳ

    ನವದೆಹಲಿ: ಇಂದಿನಿಂದ ಹೊಸ ದುಬಾರಿ ಜೀವನಕ್ಕೆ ಜನರು ಹೊಂದಿಕೊಳ್ಳಬೇಕಿದೆ. ಕೊರೊನಾ ಲಾಕ್‍ಡೌನ್ ವೇಳೆ ನಿರುದ್ಯೋಗ ಸಮಸ್ಯೆ ಮತ್ತು ಆರ್ಥಿಕ ಸಂಕಷ್ಟದ ನಡುವೆ ಬೆಲೆ ಏರಿಕೆ ಹೊಡೆತ ಸಾರ್ವಜನಿಕರ ಮೇಲೆ ಬೀಳಲಿದೆ. ಹಾಲು, ಎಲ್‍ಪಿಜಿ ಸಿಲಿಂಡರ್ ಮತ್ತು ಬ್ಯಾಂಕ್ ಸೇವೆಗಳ ಶುಲ್ಕ ಇಂದಿನಿಂದ ಏರಿಕೆಯಾಗಲಿದೆ.

    ದುಬಾರಿ ಆಯ್ತು ಅಮೂಲ್ ಹಾಲು:
    ಅಮೂಲ್ ಹಾಲು ಇಂದಿನಿಂದ ತನ್ನ ಬೆಲೆಯನ್ನ ಹೆಚ್ಚಿಸಿಕೊಂಡಿದೆ. ದೆಹಲಿ, ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶದಲ್ಲಿ ಅಮೂಲ್ ಉತ್ಪನ್ನಗಳು ತುಟ್ಟಿಯಾಗಲಿವೆ. ಪ್ರತಿ ಲೀಟರ್ ಹಾಲಿನ ಮೇಲೆ ಎರಡು ರೂಪಾಯಿಯನ್ನ ಅಮೂಲ್ ಹೆಚ್ಚಳ ಮಾಡಿಕೊಂಡಿದೆ. ಅಮೂಲ್ ಒಂದೂವರೆ ವರ್ಷದ ಬಳಿಕ ತನ್ನ ಉತ್ಪನ್ನಗಳ ಮೇಲಿನ ಬೆಲೆಯನ್ನು ಏರಿಕೆ ಮಾಡಿಕೊಂಡಿದೆ. ಬುಧವಾರವೇ ಅಮೂಲ್ ತನ್ನ ಬೆಲೆ ಏರಿಕೆಯ ಮಾಹಿತಿಯನ್ನು ನೀಡಿತ್ತು.

    ಇಂದಿನಿಂದ ಅಮೂಲ್ ಗೋಲ್ಡ್ 58 ರೂ. ಪ್ರತಿ ಲೀಟರ್, ಅಮೂಕ್ ತಾಜಾ 46 ರೂ. ಪ್ರತಿ ಲೀ., ಅಮೂಲ್ ಶಕ್ತಿ 52 ರೂ.ಪ್ರತಿ ಲೀಟರ್ ಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಅಮೂಲ್ ಬಳಿಕ ಇನ್ನುಳಿದ ಹಾಲು ಉತ್ಪಾದಕ ಕಂಪನಿಗಳು ಬೆಲೆ ಏರಿಕೆ ಮಾಡುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.

    ಬ್ಯಾಂಕ್ ಚಾರ್ಜ್ ಹೆಚ್ಚಳ:
    ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್‍ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ)ತನ್ನ ಸೇವಾ ಶುಲ್ಕವನ್ನು ಹೆಚ್ಚಿಸಿಕೊಂಡಿದೆ. ಈಗ ಗ್ರಾಹಕರು ಎಟಿಎಂನಿಂದ ತಿಂಗಳಿಗೆ ನಾಲ್ಕು ಬಾರಿ ಮಾತ್ರ ಉಚಿತವಾಗಿ ಹಣ ಡ್ರಾ ಮಾಡಬಹುದು. ನಾಲ್ಕಕ್ಕಿಂತ ಹೆಚ್ಚಿನ ವಹಿವಾಟು ಮೇಲೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಪ್ರತಿ ವಹಿವಾಟಿನ ಮೇಲೆ 15 ರೂ.ಶುಲ್ಕವನ್ನು ಗ್ರಾಹಕರು ಪಾವತಿಸಬೇಕು.

    ಚೆಕ್ ಬಳಕೆ ಮೇಲೆಯೂ ಶುಲ್ಕ: ಎಟಿಎಂ ಮಾತ್ರ ಅಲ್ಲದೇ ಚೆಕ್ ಬಳಕೆಯ ಮೇಲೆಯೂ ಎಸ್‍ಬಿಐ ಶುಲ್ಕ ವಿಧಿಸುತ್ತಿದೆ. ವಿತ್ತಿಯ ವರ್ಷದಲ್ಲಿ ಒಬ್ಬ ಗ್ರಾಹಕ 10 ಚೆಕ್ ಗಳ ಬಳಕೆಗೆ ಯಾವುದೇ ಶುಲ್ಕ ಪಾವತಿಸಬೇಕಿಲ್ಲ. 10ಕ್ಕಿಂತ ಹೆಚ್ಚಾದ್ರೆ ಬ್ಯಾಂಕಿನ ಶುಲ್ಕ ಪಾವತಿಸಬೇಕು. ಎಸ್‍ಬಿಐ ಜೊತೆ ಆಕ್ಸಿಸ್, ಐಡಿಬಿಐ ಬ್ಯಾಂಕ್ ಸಹ ಎಸ್‍ಎಂಎಸ್, ಲಾಕರ್ ಚಾರ್ಜ್ ಹೆಚ್ಚಿಸಿಕೊಂಡಿವೆ. ಇಂದಿನಿಂದಲೇ ಈ ಹೊಸ ಶುಲ್ಕಗಳು ಅನ್ವಯವಾಗಲಿವೆ.

    ಟಿಡಿಎಸ್ ಕಟ್: ಕಳೆದ ಎರಡು ವರ್ಷಗಳಿಂದ ಐಟಿಆರ್ ಪಾವತಿಸದ ಜನರ ಟಿಡಿಎಸ್ ಜುಲೈನಿಂದ ಹೆಚ್ಚು ಕಟ್ ಆಗಲಿದೆ. 50 ಸಾವಿರ ರೂ.ಕ್ಕಿಂತ ಹೆಚ್ಚು ಟಿಡಿಎಸ್ ಕಟ್ ಆಗುವರಿಗೆ ಮಾತ್ರ ಈ ನಿಯಮ ಅನ್ವಯಿಸಲಿದೆ.

    ಎಲ್‍ಪಿಜಿಯೂ ತುಟ್ಟಿಯಾಯ್ತು:
    ಇದೆಲ್ಲದರ ಜೊತೆ ಎಲ್‍ಪಿಜಿ ಸಿಲಿಂಡರ್ ಬೆಲೆಯೂ ಇಂದಿನಿಂದ ಹೆಚ್ಚಳವಾಗುತ್ತಿದೆ. ಸಬ್ಸಿಡಿ ರಹಿತ ಪ್ರತಿ ಸಿಲಿಂಡರ್ ಮೇಲೆ 25 ರೂ. ಹೆಚ್ಚು ನೀಡಬೇಕು. ಗೃಹ ಬಳಕೆಯ ಸಿಲಿಂಡರ್ ಬೆಲೆ ದೆಹಲಿಯಲ್ಲಿ 834 ರೂ.ಗೆ ತಲುಪಿದೆ. ಕೋಲ್ಕತ್ತಾದಲ್ಲಿ 861 ರೂಪಾಯಿ, ಬೆಂಗಳೂರಿನಲ್ಲಿ 812 ರೂ.ಇದೆ. ಇನ್ನೂ 19 ಕೆಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ದೆಹಲಿಯಲ್ಲಿ 1,550 ರೂ.ಗೆ ಏರಿಕೆಯಾಗಿದೆ. ಇದನ್ನೂ ಓದಿ: ಮೋದಿ ಸರ್ಕಾರದಿಂದ ‘ಸಾಲ’ ರೂಪದ ಸಹಾಯ

    ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಜೊತೆ ಸದ್ಯ ಹೊಸ ಹೊಸ ಶುಲ್ಕಗಳು ಜನ ಸಾಮನ್ಯರ ಜೇಬಿಗೆ ಹಂತ ಹಂತವಾಗಿ ಕತ್ತರಿ ಹಾಕಲಿವೆ. ಕಳೆದ ತಿಂಗಳಿನಲ್ಲಿ ಒಟ್ಟು 16 ಬಾರಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಕಂಡಿದೆ. ಇದನ್ನೂ ಓದಿ: ಮೊದಲು ಲಸಿಕೆ, ನಂತರ ಮನ್ ಕೀ ಬಾತ್: ರಾಹುಲ್ ಕಿಡಿ