Tag: amul

  • KMF ನಿರ್ಲಕ್ಷ್ಯದಿಂದ ನಮ್ಮ ಮೆಟ್ರೋದಲ್ಲಿ ನಂದಿನಿ ಮಳಿಗೆ ಹಾಕಲು ಅವಕಾಶ ಸಿಕ್ಕಿಲ್ಲ – ಭೀಮಾ ನಾಯಕ್

    KMF ನಿರ್ಲಕ್ಷ್ಯದಿಂದ ನಮ್ಮ ಮೆಟ್ರೋದಲ್ಲಿ ನಂದಿನಿ ಮಳಿಗೆ ಹಾಕಲು ಅವಕಾಶ ಸಿಕ್ಕಿಲ್ಲ – ಭೀಮಾ ನಾಯಕ್

    ಬೆಂಗಳೂರು: ಕೆಎಂಎಫ್ (KMF) ನಿರ್ಲಕ್ಷ್ಯದಿಂದಾಗಿ ನಮ್ಮ ಮೆಟ್ರೋದಲ್ಲಿ ನಂದಿನಿ ಮಳಿಗೆ ಹಾಕಲು ಸಾಧ್ಯವಾಗಿಲ್ಲ ಎಂದು ಮಾಜಿ ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ (Bhima Naik) ಆರೋಪಿಸಿದ್ದಾರೆ.

    ನಮ್ಮ ಮೆಟ್ರೋದಲ್ಲಿ ನಂದಿನಿ (Nandini) ಮಳಿಗೆಗೆ ಅವಕಾಶ ಕೊಡದ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಕೆಎಂಎಫ್ ಕಡೆಯಿಂದ ನಿರ್ಲಕ್ಷ್ಯ ಆಗಿರಬಹುದು. ನಾನು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಈಗ ನಂದಿನಿಗೆ ಅವಕಾಶ ಕೊಡಲಾಗುತ್ತದೆ ಎಂದು ಮಾತುಕತೆ ನಡೆಯುತ್ತಿದೆ. ಮುಂದೆ ಏನಾಗುತ್ತದೆ ಎಂದು ಕಾದುನೋಡಬೇಕು ಎಂದಿದ್ದಾರೆ.ಇದನ್ನೂ ಓದಿ: ಗೃಹ ಲಕ್ಷ್ಮಿ ಹಣ ಮೇ ತಿಂಗಳದ್ದು ಮಾತ್ರ ಬಾಕಿಯಿದೆ: ಹೆಬ್ಬಾಳ್ಕರ್

    ಕೆಎಂಎಫ್ ಟೆಂಡರ್‌ನಲ್ಲಿ ಭಾಗಿಯಾಗಬೇಕಿತ್ತು. ಆದರೆ ಯಾಕೆ ಭಾಗಿಯಾಗಿಲ್ಲ ಎಂದು ಗೊತ್ತಿಲ್ಲ. ಟೆಂಡರ್‌ನಲ್ಲಿ ಭಾಗಿಯಾಗದೇ ಇರುವುದು ತಪ್ಪು. ನಮ್ಮ ಲೋಪ ಇದೆ. ಮೊದಲೇ ಸಿಎಂ, ಡಿಸಿಎಂ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತಾಡಬೇಕಿತ್ತು. ಮಾಹಿತಿ ಕೊರತೆಯಿಂದಾಗಿ ಹೀಗೆ ಆಗಿರಬಹುದು ಎಂದು ತಿಳಿಸಿದ್ದಾರೆ.

    ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನಮ್ಮ ನಂದಿನಿಗೆ ಮನ್ನಣೆ ಕೊಡದೇ ಹೊರರಾಜ್ಯದ ಅಮುಲ್‌ಗೆ ಆದ್ಯತೆ ಕೊಟ್ಟು ಕಿಯೋಸ್ಕ್‌ಗಳನ್ನು ಸ್ಥಾಪಿಸಿದ್ದು ಕನ್ನಡಿಗರ ಆಕ್ರೋಶ ಕಾರಣವಾಗಿತ್ತು. ಗುಜರಾತ್ (Gujarat) ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ಅಥವಾ ಅಮುಲ್ ಜೊತೆ ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್‌ಗಳನ್ನು ಸ್ಥಾಪಿಸಲು ಪರವಾನಗಿ ಒಪ್ಪಂದಕ್ಕೆ ಬಿಎಂಆರ್‌ಸಿಎಲ್ (BMRCL) ಸಹಿ ಹಾಕಿದೆ. ಈ ಮೂಲಕ ನಮ್ಮ ರಾಜ್ಯದ ಮೆಟ್ರೋ ನಿಲ್ದಾಣಗಳಲ್ಲಿ ಗುಜರಾತ್‌ನ ಅಮುಲ್ ಬ್ರ‍್ಯಾಂಡ್ ಅನ್ನು ಪ್ರಮೋಷನ್ ಮಾಡಲಾಗುತ್ತಿದೆ. ಇದರಿಂದ ನಮ್ಮೂರ ನಂದಿನಿಗೆ ಬಿಎಂಆರ್‌ಸಿಎಲ್ ಅವಕಾಶ ಕೊಡದೇ ಇರೋದಕ್ಕೆ ಕನ್ನಡಿಗರು ಕೆಂಡವಾಗಿದ್ದರು.ಇದನ್ನೂ ಓದಿ: ಹೊಸ ಸಿನಿಮಾದ ರಗಡ್ ಲುಕ್ನಲ್ಲಿ ಕಾಣಿಸಿಕೊಂಡ ಅಜಯ್ ರಾವ್

  • ನಮ್ಮ ಮೆಟ್ರೋದಲ್ಲಿ ನಂದಿನಿಗೆ ಮೊದಲ ಆದ್ಯತೆ ಕೊಡಬೇಕು: ರಾಮಲಿಂಗಾ ರೆಡ್ಡಿ

    ನಮ್ಮ ಮೆಟ್ರೋದಲ್ಲಿ ನಂದಿನಿಗೆ ಮೊದಲ ಆದ್ಯತೆ ಕೊಡಬೇಕು: ರಾಮಲಿಂಗಾ ರೆಡ್ಡಿ

    ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ನಂದಿನಿ (Nandini) ಮಳಿಗೆಗೆ ಮೊದಲ ಆದ್ಯತೆ ಕೊಡಬೇಕು ಎಂದು ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಆಗ್ರಹ ಮಾಡಿದ್ದಾರೆ.

    ನಮ್ಮ ಮೆಟ್ರೋದಲ್ಲಿ ನಂದಿನಿ ಮಳಿಗೆಗೆ ಅವಕಾಶ ನೀಡದ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ನಂದಿನಿ ಉತ್ಪನ್ನ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಉತ್ತಮ ಗುಣಮಟ್ಟದ ಪದಾರ್ಥಗಳು ಇವೆ. ಅಮುಲ್‌ಗೆ ಅವಕಾಶ ಕೊಟ್ಟಿದ್ದಾರೆ. ಇದು ಸರಿಯಲ್ಲ. ಮೊದಲು ನಂದಿನಿಗೆ ಕೊಡಬೇಕಿತ್ತು ಎಂದು ತಿಳಿಸಿದರು. ಇದನ್ನೂ ಓದಿ: 400 ವರ್ಷಗಳಲ್ಲಿ ಇದೇ ಮೊದಲು – ವಿಶ್ವವಿಖ್ಯಾತ ಮೈಸೂರು ದಸರಾ ಈ ಬಾರಿ 11 ದಿನ!

    ಇನ್ನುಮುಂದೆ ರೈಲ್ವೆ, ಮೆಟ್ರೋ, ಎಲ್ಲೇ ಆದರೂ ಪ್ರಥಮ ಆದ್ಯತೆ ನಂದಿನಿಗೆ ಕೊಡಬೇಕು. ನಾವು ಕೆಎಸ್‌ಆರ್‌ಟಿಸಿ ಸೇರಿ ಎಲ್ಲಾ ಕಡೆ ನಂದಿನಿಗೆ ಆದ್ಯತೆ ಕೊಟ್ಟಿದ್ದೇವೆ. ಅಮುಲ್ ಹೆಚ್ಚು ಹಣ ಕೊಟ್ಟಿದ್ದಾರೆ ಅಂತ ಅವರಿಗೆ ಕೊಡಬೇಡಿ. ನಂದಿನಿಗೆ ಮೊದಲ ಆದ್ಯತೆ ಕೊಡಬೇಕು. ಸಿಎಂ, ಡಿಸಿಎಂ ಗಮನಕ್ಕೂ ಇದು ಬಂದಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬಸ್‍ನಲ್ಲಿ ಕಿಟಕಿ ಪಕ್ಕದ ಸೀಟಿಗಾಗಿ ಯುವಕನಿಗೆ ಚಾಕು ಇರಿತ – ಇಬ್ಬರು ಅಪ್ರಾಪ್ತರು ಅರೆಸ್ಟ್

  • ಅಮೂಲ್‌ಗೆ ಮಣೆಹಾಕಿದ್ದ BMRCLಗೆ ಮುಖಭಂಗ- ಮೆಟ್ರೋ ನಿಲ್ದಾಣಗಳಲ್ಲಿ 20 ನಂದಿನಿ ಮಳಿಗೆ ತೆರೆಯಲು ಅವಕಾಶ

    ಅಮೂಲ್‌ಗೆ ಮಣೆಹಾಕಿದ್ದ BMRCLಗೆ ಮುಖಭಂಗ- ಮೆಟ್ರೋ ನಿಲ್ದಾಣಗಳಲ್ಲಿ 20 ನಂದಿನಿ ಮಳಿಗೆ ತೆರೆಯಲು ಅವಕಾಶ

    ಬೆಂಗಳೂರು: ಕರ್ನಾಟಕದ ಬ್ರ್ಯಾಂಡ್‌ ನಂದಿನಿಯನ್ನು ಕಡೆಗಣಿಸಿ, ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮೂಲ್ (Amul) ಮಳಿಗೆಗಳನ್ನು ತೆರೆಯಲು ನಮ್ಮ ಮೆಟ್ರೋ (Namma Metro) ಮುಂದಾಗಿತ್ತು. ಈ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಮೆಟ್ರೋ ನಿಲ್ದಾಣದಲ್ಲಿ 20 ನಂದಿನಿ ಮಳಿಗೆಗಳನ್ನು ರಿಯಾಯಿತಿ ದರದಲ್ಲಿ ತೆರೆಯಲು BMRCL ಒಪ್ಪಿದೆ.

    BMRCL ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಹೊರ ರಾಜ್ಯದ ಅಮೂಲ್ ಸಂಸ್ಥೆಯ ಕಿಯೋಸ್ಕ್ಗಳನ್ನು ತೆರೆಯಲು ಅವಕಾಶ ಕೊಟ್ಟಿತ್ತು. ಈ ಬಗ್ಗೆ ಗುಜರಾತ್ ಮಿಲ್ಕ್ ಫೆಡರೇಶನ್ ಜೊತೆ ಒಪ್ಪಂದಕ್ಕೆ ಸಹಿ ಕೂಡ ಹಾಕಿತ್ತು. ರಾಜ್ಯದ ರೈತರ ಹೆಮ್ಮೆಯ ಕೆಎಂಎಫ್ ನಂದಿನಿಗೆ ಮಣೆ ಹಾಕಿರಲಿಲ್ಲ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಸಾವು ಗೆದ್ದು ಬಂದಿದ್ದ ವಿಶ್ವಾಸ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌

    ಈ BMRCLನ ನಿರ್ಧಾರದ ಬಗ್ಗೆ ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ಮಧ್ಯೆ ಪ್ರವೇಶಿಸಿದ ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಅವರು, BMRCL ಗ್ಲೋಬಲ್ ಟೆಂಡರ್ ಕರೆದಿದ್ದರು. ಅದಕ್ಕೆ ಅಮೂಲ್‌ನವರು ಅರ್ಜಿ ಹಾಕಿದ್ದರು. ಬೇರೆ ಯಾರೂ ಅರ್ಜಿ ಹಾಕಿದ ಕಾರಣ ಅವರಿಗೆ ಕೊಟ್ಟಿದ್ದರು. ಈಗ 10ರಲ್ಲಿ 8 ಕೆಎಂಎಫ್‌ಗೆ ಕೊಡೋಕೆ ಹೇಳಿದ್ದೇನೆ ಎಂದಿದ್ದರು. ಅಲ್ಲದೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಹ ನಮ್ಮ ಬೆಂಬಲ ಯಾವತ್ತಿಗೂ ನಂದಿನಿಗೆ ಎಂದು ಹೇಳಿದರು. ಇದನ್ನೂ ಓದಿ: ಏನಿಲ್ಲ ಏನಿಲ್ಲ ಅನ್ನುತ್ತಲೇ ಒಂದೇ ಕಾರ್‌ನಲ್ಲಿ ಹೊರಟ ರಶ್ಮಿಕಾ, ದೇವರಕೊಂಡ

    ಇನ್ನೂ ಡಿಸಿಎಂ ಡಿ.ಕೆ ಶಿವಕುಮಾರ್ ಸೂಚನೆ ಬೆನ್ನಲ್ಲೇ, ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ BMRCL ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಹಾಗೂ ಕೆಎಂಎಫ್ ಎಂಡಿ ಶಿವಸ್ವಾಮಿ ಹೈವೋಲ್ಟೇಜ್ ಮೀಟಿಂಗ್ ನಡೆಸಿದ್ದರು. ಡಿಸಿಎಂ ಹೇಳಿದಂತೆ 8 ಕಡೆ ನಂದಿನಿ ಮಳಿಗೆಗಳು ಓಪನ್ ಮಾಡಲು ಹಾಗೂ ಸರ್ಕಾರದ ನಿರ್ದೇಶನದಂತೆ 2 ಕಡೆಗಳಲ್ಲಿ ಮಾತ್ರ ಅಮೂಲ್‌ಗೆ ಅವಕಾಶ ನೀಡಲಾಗುವುದು ಎಂದರು. ಇದನ್ನೂ ಓದಿ: ನಂದಿಬೆಟ್ಟದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆ ರದ್ದು – ವಿಧಾನಸೌಧಕ್ಕೆ ಶಿಫ್ಟ್

    ಇನ್ನೂ ಮೀಟಿಂಗ್ ನಂತರ ಮಾತನಾಡಿದ ಕೆಎಂಎಫ್ (KMF) ಎಂಡಿ ಶಿವಸ್ವಾಮಿ, ನಗರದ 20 ಮೆಟ್ರೋ ನಿಲ್ದಾಣದಲ್ಲಿ ರಿಯಾಯಿತಿ ದರದಲ್ಲಿ ನಂದಿನಿ ಮಳಿಗೆ ತೆಗೆಯಲು BMRCL ಅವಕಾಶ ಕೊಡ್ತೇವೆ. ಈ ಹಿಂದೆ 2020-22ರಲ್ಲಿ ಮೆಟ್ರೋ ನಿಲ್ದಾಣದಲ್ಲಿ ಮಳಿಗೆ ತೆರೆಯಲು BMRCL ಟೆಂಡರ್ ಕರೆದಿತ್ತು. ಆಗ ಕೆಎಂಎಫ್ ಈ ಟೆಂಡರ್‌ನಲ್ಲಿ ಭಾಗಿ ಆಗಿರಲಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಮೆಟ್ರೋ ನಿಲ್ದಾಣದಲ್ಲಿ ನಂದಿನಿ ಮಳಿಗೆ ಇರಲಿದೆ ಎಂದಿದ್ದಾರೆ.

  • ಬೆಂಗಳೂರಿನ 10 ಮೆಟ್ರೋ ಸ್ಟೇಷನ್‌ನಲ್ಲಿ ಅಮುಲ್‌ಗೆ ಪ್ರಮೋಷನ್ – ಕನ್ನಡಿಗರು ಕೆಂಡ

    ಬೆಂಗಳೂರಿನ 10 ಮೆಟ್ರೋ ಸ್ಟೇಷನ್‌ನಲ್ಲಿ ಅಮುಲ್‌ಗೆ ಪ್ರಮೋಷನ್ – ಕನ್ನಡಿಗರು ಕೆಂಡ

    ಬೆಂಗಳೂರು: ಈ ಹಿಂದೆ ಮೆಟ್ರೋ (Namma Metro) ನೇಮಕಾತಿ ವಿಚಾರದಲ್ಲಿ ಕನ್ನಡಿಗರಿಗೆ ಅನ್ಯಾಯ ಮಾಡಿದ್ದ ಬಿಎಂಆರ್‌ಸಿಎಲ್ (BMRCL) ಇದೀಗ ಮೆಟ್ರೋ ನಿಲ್ದಾಣಗಳಲ್ಲಿ ಹೊರರಾಜ್ಯದ ಅಮುಲ್ (Amul) ಕಿಯೋಸ್ಕ್‌ಗಳನ್ನು ಸ್ಥಾಪಿಸಿದ್ದು, ನಮ್ಮ ನಂದಿನಿಗೆ (Nandini) ಮನ್ನಣೆ ಕೊಟ್ಟಿಲ್ಲ. ಇಷ್ಟಾದರೂ ಅಧಿಕಾರ ಬರೋ ಮುಂಚೆ ಸೇವ್ ನಂದಿನಿ ಅಭಿಯಾನ ಮಾಡಿದ್ದ ಕಾಂಗ್ರೇಸ್ ಸರ್ಕಾರ ಕಣ್ಮುಚ್ಚಿ ಕುಳಿತಿದೆ.

    ಬೆಂಗಳೂರಿಗರ ಪ್ರಮುಖ ಸಂಚಾರ ನಾಡಿಯೆಂದರೆ ಅದು ನಮ್ಮ ಮೆಟ್ರೋ. ನಮ್ಮ ಮೆಟ್ರೋದಲ್ಲಿ ಪ್ರತಿನಿತ್ಯ 6-7 ಲಕ್ಷ ಮೆಟ್ರೋ ಪ್ರಯಾಣಿಕರು ಸಂಚರಿಸಿ, ಬಿಎಂಆರ್‌ಸಿಎಲ್ ಅನ್ನು ಬೆಂಗಳೂರಿಗರು ಬೆಳೆಸುತ್ತಿದ್ದಾರೆ. ಆದರೆ ಕನ್ನಡಿಗರಿಗೆ, ಕರ್ನಾಟಕದ ಬ್ರ‍್ಯಾಂಡ್ ನಂದಿನಿಗೆ ಬೆಂಗಳೂರು ಮೆಟ್ರೋ ನಿಗಮ ಮನ್ನಣೆ ಕೊಡದೇ, ಗುಜರಾತ್‌ನ ಅಮುಲ್‌ಗೆ ಆದ್ಯತೆ ಕೊಟ್ಟು ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್ಗಳನ್ನು ತೆರೆಯಲು ಅವಕಾಶ ನೀಡಿದೆ. ಇದನ್ನೂ ಓದಿ: KRS ಡ್ಯಾಂ ಭರ್ತಿಗೆ 11 ಅಡಿಯಷ್ಟೇ ಬಾಕಿ

    ಇತ್ತೀಚಿಗೆ ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ಅಥವಾ ಅಮುಲ್ ಜೊತೆ ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್ಗಳನ್ನು ಸ್ಥಾಪಿಸಲು ಪರವಾನಗಿ ಒಪ್ಪಂದಕ್ಕೆ ಬಿಎಂಆರ್‌ಸಿಎಲ್ ಸಹಿ ಹಾಕಿದೆ. ಈ ಬಗ್ಗೆ ಜೂನ್ 16ರಂದು ಬಿಎಂಆರ್‌ಸಿಎಲ್ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಇಸ್ರೇಲ್-ಇರಾನ್ ಯುದ್ಧ ಭೀತಿ; ಭಾರತಕ್ಕೆ ಹೆಚ್ಚಿದ ಆತಂಕ

    ನಗರದ ಪಟ್ಟಂದೂರು ಅಗ್ರಹಾರ, ಇಂದಿರಾನಗರ, ಬೆನ್ನಿಗಾನಹಳ್ಳಿ, ಬೈಯಪ್ಪನಹಳ್ಳಿ, ಟ್ರಿನಿಟಿ, ಸರ್ ಎಂ ವಿಶ್ವೇಶ್ವರಯ್ಯ, ನಾಡಪ್ರಭು ಕೆಂಪೇಗೌಡ ನಿಲ್ದಾಣ ,ನ್ಯಾಷನಲ್ ಕಾಲೇಜು, ಜಯನಗರ ಮತ್ತು ಬನಶಂಕರಿಗಳಲ್ಲಿ ಕಿಯೋಸ್ಕ್ಗಳು ಆರಂಭವಾಗಲಿವೆ. ಈ ಮೂಲಕ ನಮ್ಮ ರಾಜ್ಯದ ಮೆಟ್ರೋ ನಿಲ್ದಾಣಗಳಲ್ಲಿ ಗುಜರಾತ್‌ನ ಅಮುಲ್ ಬ್ರ‍್ಯಾಂಡ್ ಅನ್ನು ಪ್ರಮೋಷನ್ ಮಾಡಲಾಗುತ್ತಿದೆ. ಈಗಾಗಲೇ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಅಮುಲ್ ಕಿಯೋಸ್ಕ್ ಸ್ಥಾಪನೆಯಾಗಿದ್ದು, ಈಗಾಗಲೇ ಅಮುಲ್ ಮಳಿಗೆಯಲ್ಲಿ ಐಸ್‌ಕ್ರೀಮ್, ಚಾಕಲೇಟ್, ಸ್ಯಾಂಡ್ ವಿಚ್, ಟೀ, ಪಿಜ್ಜಾ ಸೇರಿದಂತೆ ಹಲವು ಇನ್‌ಸ್ಟೆಂಟ್ ತಿಂಡಿಗಳನ್ನು ಮಾರಲಾಗುತ್ತಿದೆ. ಇದನ್ನೂ ಓದಿ: ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಭೇಟಿಯಾದ ಮೋದಿ – ಹೊಸ ಹೈಕಮೀಷನರ್ ನೇಮಿಸಲು ಸಮ್ಮತಿ

    ಇನ್ನೂ ಈಗೀನ ಕಾಂಗ್ರೆಸ್ ಸರ್ಕಾರ 2023ರ ಕರ್ನಾಟಕ ಚುನಾವಣೆಗೆ ಮುನ್ನ ಅಮುಲ್ ಅನ್ನು ಬೆಂಗಳೂರು ಮಾರುಕಟ್ಟೆಗೆ ಪ್ರವೇಶಿಸುವುದನ್ನು ವಿರೋಧಿಸಿತ್ತು. ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್, ಬಿಜೆಪಿ ಸರ್ಕಾರವು ಅಮುಲ್‌ಗೆ ಅವಕಾಶ ನೀಡುವ ಮೂಲಕ ಕರ್ನಾಟಕದ ನಂದಿನಿ ಬ್ರ‍್ಯಾಂಡ್ ಮತ್ತು ಡೈರಿ ರೈತರ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಂಡಿದೆ ಎಂದು ಆರೋಪಿಸಿತ್ತು. ಸೇವ್ ನಂದಿನಿ ಅಭಿಯಾನವನ್ನು ಆರಂಭಿಸಿತ್ತು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಭಿಯಾನ ನಡೆಸಿದ್ದರು. ರಾಹುಲ್ ಗಾಂಧಿ ಸಹ ಅಭಿಯಾನದಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ಯುದ್ಧ ಶುರುವಾಗಿದೆ – ಟ್ರಂಪ್‌ ಧಮ್ಕಿಗೆ ಇರಾನ್‌ ಸರ್ವೋಚ್ಚ ನಾಯಕ ಖಮೇನಿ ರಿಯಾಕ್ಷನ್‌

    ಈ ರಾಜಕೀಯ ಗುದ್ದಾಟ ಮರೆತು, ಈಗ ತನ್ನ ಮಾತಿಗೆ ಫುಲ್ ಉಲ್ಟಾ ಎನ್ನುವಂತೆ ಕಾಂಗ್ರೆಸ್ ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಶೀಘ್ರದಲ್ಲೇ ಅಮುಲ್ ಮಳಿಗೆಗಳು ಸ್ಥಾಪಿಸಲು ಅವಕಾಶ ನೀಡಿದೆ. ಇನ್ನೂ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ, ದೇಶ ವಿದೇಶದಲ್ಲಿ ಹೆಸರಾದ ನಮ್ಮ ಕನ್ನಡಿಗರ, ಕರ್ನಾಟಕದಲ್ಲಿ ‘ನಂದಿನಿ’ ಬ್ರಾಂಡ್ ಹೆಸರಾಗಿದೆ. ಆದರೆ ನಮ್ಮೂರ ನಂದಿನಿಗೆ ಬಿಎಂಆರ್‌ಸಿಎಲ್ ಅವಕಾಶ ಕೊಡದೇ ಇರೋದಕ್ಕೆ ಕನ್ನಡಿಗರು ಕೆಂಡವಾಗಿದ್ದಾರೆ. ಇದನ್ನೂ ಓದಿ: ಗಾಳಿ ಇಲ್ಲ, ಮಳೆ ಇಲ್ಲ – ಸಿಎಂ ನಿವಾಸದ ಮುಂದೆ ಧರೆಗುರುಳಿದ ಬೃಹತ್ ಮರ

  • ಫ್ಯಾಮಿಲಿ ಜೊತೆ ಅಮೂಲ್ಯ ಮಸ್ತ್ ಫೋಟೋಶೂಟ್

    ಫ್ಯಾಮಿಲಿ ಜೊತೆ ಅಮೂಲ್ಯ ಮಸ್ತ್ ಫೋಟೋಶೂಟ್

    ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ (Amulya) ಅವರು ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ. ಇದರ ನಡುವೆ ತಮ್ಮ ಪತಿ ಮತ್ತು ಅವಳಿ ಮಕ್ಕಳೊಂದಿಗೆ ಮಸ್ತ್ ಆಗಿ ಫೋಟೋಶೂಟ್ ಮಾಡಿದ್ದಾರೆ. ‘ಚೆಲುವಿನ ಚಿತ್ತಾರ’ (Cheluvina Chittara) ನಟಿಯ ಕುಟುಂಬದ ಸುಂದರ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

    ಇದೀಗ ಪತಿ ಮತ್ತು ಅವಳಿ ಮಕ್ಕಳೊಂದಿಗೆ ನಟಿ ಫೋಟೋಶೂಟ್ ಮಾಡಿಸಿದ್ದಾರೆ. ಅವಳಿ ರಾಜಕುಮಾರರ ಜೊತೆ ರಾಜ ಮತ್ತು ರಾಣಿಯಾಗಿ ಅಮೂಲ್ಯ ದಂಪತಿ ಮಿಂಚಿದ್ದಾರೆ. ಇಬ್ಬರು ಮಕ್ಕಳು ಬಿಳಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ರೆ, ಅಮೂಲ್ಯ ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಜಗದೀಶ್ ಬಿಳಿ ಬಣ್ಣ ಶೆರ್ವಾನಿಯಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಫೋಟೋಶೂಟ್‌ಗೆ ಅಭಿಮಾನಿಗಳಿಂದ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.

    ಚಿತ್ರರಂಗದಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದ್ದ ನಟಿ ಅಮೂಲ್ಯ ಅವರು ಅಪ್ಪಟ ಗೃಹಿಣಿಯಾಗಿ ಕುಟುಂಬದ ಕಡೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಅದರಲ್ಲೂ ಅವಳಿ ಮಕ್ಕಳು ಆದ್ಮೇಲಂತೂ ಮತ್ತಷ್ಟು ನಟಿ ಬ್ಯುಸಿಯಾದರು. ಈಗ ಮತ್ತೆ ತಮ್ಮ ಕೆರಿಯರ್ ಕಡೆ ನಟಿ ಮುಖ ಮಾಡಿದ್ದಾರೆ. ಇದನ್ನೂ ಓದಿ:ವಿಜಯ್ ಪಕ್ಷಕ್ಕೆ ಸೇರಿಕೊಳ್ತಾರಾ ನಟ ಸಮುದ್ರಕನಿ?

     

    View this post on Instagram

     

    A post shared by Amulya (@nimmaamulya)

    ಸದ್ಯ ಪ್ರಜ್ವಲ್ ದೇವರಾಜ್ (Prajwal Devaraj) ನಟನೆಯ ಮುಂಬರುವ ಸಿನಿಮಾದಲ್ಲಿ ಅಮೂಲ್ಯ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಹೊಸ ಕಥೆ, ಹೊಸ ಬಗೆಯ ಪಾತ್ರದ ಮೂಲಕ ಬರಲು ತಯಾರಿ ಮಾಡಿಕೊಂಡಿದ್ದಾರೆ.

    ಅಭಿಮಾನಿಗಳ ಆಸೆಯಂತೆ ಮತ್ತೆ ನಾಯಕಿಯಾಗಿ ಬರುತ್ತಿರುವ ಅಮೂಲ್ಯ ಜಿಮ್‌ನಲ್ಲಿ ವರ್ಕೌಟ್ ಮಾಡಿ, ಬ್ಯೂಟಿ ಮತ್ತು ಫಿಟ್‌ನೆಸ್ ಹೆಚ್ಚು ಒತ್ತು ಕೊಟ್ಟಿದ್ದಾರೆ. ಮದುವೆಯಾಗಿ 2 ಮಕ್ಕಳ ತಾಯಿಯಾಗಿದ್ದರೂ ಕೂಡ ಸಂತೂರ್ ಮಮ್ಮಿಯಂತೆ ಮಿಂಚ್ತಿದ್ದಾರೆ. ಯಾವ ನಾಯಕಿಯರಿಗೂ ಕಮ್ಮಿಯಿಲ್ಲ ಈ ಅಮೂಲ್ಯ.

  • ತಮಿಳುನಾಡಿನಲ್ಲಿ ಅಮುಲ್ ಹಾಲು ಸಂಗ್ರಹಿಸುವುದನ್ನು ನಿಲ್ಲಿಸಿ: ಅಮಿತ್‌ ಶಾಗೆ ಸ್ಟಾಲಿನ್‌ ಪತ್ರ

    ತಮಿಳುನಾಡಿನಲ್ಲಿ ಅಮುಲ್ ಹಾಲು ಸಂಗ್ರಹಿಸುವುದನ್ನು ನಿಲ್ಲಿಸಿ: ಅಮಿತ್‌ ಶಾಗೆ ಸ್ಟಾಲಿನ್‌ ಪತ್ರ

    ಚೆನೈ: ತಮಿಳುನಾಡಿನಲ್ಲಿ (Tamil Nadu) ಅಮುಲ್ (AMUL) ಹಾಲು ಸಂಗ್ರಹ ಮಾಡುವುದನ್ನಿ ನಿಲ್ಲಿಸಿ ಎಂದು ಮುಖ್ಯಮಂತ್ರಿ ಸ್ಟಾಲಿನ್ (M.K Stalin) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಪತ್ರ ಬರೆದಿದ್ದಾರೆ.

    ಅಮುಲ್ ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸುವುದು ದುರದೃಷ್ಟಕರ ವಿಚಾರವಾಗಿದೆ. ಇದು ಆವಿನ್ (Aavin) ಹಿತಾಸಕ್ತಿಗೆ ಹಾನಿಕರ ಮತ್ತು ಸಹಕಾರಿ ಸಂಸ್ಥೆಗಳ ನಡುವೆ ಅನಗತ್ಯ ಪೈಪೋಟಿಗೆ ಕಾರಣವಾಗಿದೆ. ಇದು ಉತ್ತಮವಾದ ಬೆಳವಣಿಗೆಯಲ್ಲ. ಪ್ರಾದೇಶಿಕ ಸಹಕಾರಿ ಸಂಸ್ಥೆಗಳು ರಾಜ್ಯಗಳಲ್ಲಿ ಡೈರಿ ಅಭಿವೃದ್ಧಿಯ ಆಧಾರವಾಗಿದೆ. ಅಮುಲ್ ಹಸ್ತಕ್ಷೇಪದಿಂದ ಸಹಕಾರಿ ಸಂಸ್ಥೆಗಳ ಬುಡಕ್ಕೆ ಹೊಡೆತ ಬೀಳುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ ಟೇಕಾಫ್‍ಗೆ ಸಿದ್ಧವಾಗಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ – ಸಮಯಪ್ರಜ್ಞೆ ಮೆರೆದ ಪೈಲೆಟ್

    ಪತ್ರದಲ್ಲಿ ಏನಿದೆ?
    ತಮಿಳುನಾಡಿನಲ್ಲಿ ಡೈರಿ ಸಹಕಾರಿ ಸಂಸ್ಥೆಯು 1981 ರಿಂದ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಹಾಲು (Milk) ಉತ್ಪಾದಕರು ಮತ್ತು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಸಹಕಾರಿ ಸಂಸ್ಥೆಗಳು ನಡೆದುಕೊಳ್ಳುತ್ತಿವೆ. ಅದ್ದರಿಂದ ಆವಿನ್‍ಗೆ ನಮ್ಮ ಅಗ್ರಸ್ಥಾನ ನೀಡುತ್ತೇವೆ.

    ಆವಿನ್ ಸಹಕಾರಿ ವ್ಯಾಪ್ತಿಯಡಿಯಲ್ಲಿ 9,673 ಹಾಲು ಉತ್ಪಾದಕರ ಸಹಕಾರ ಸಂಘಗಳು ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸುಮಾರು 4.5 ಲಕ್ಷ ಸದಸ್ಯರಿಂದ 35 ಎಲ್‍ಎಲ್‍ಪಿಡಿ ಹಾಲನ್ನು ಸಂಗ್ರಹಿಸುತ್ತಿದೆ. ನಮ್ಮ ವ್ಯವಸ್ಥೆಯಲ್ಲಿ ವರ್ಷ ಪೂರ್ತಿ ರೈತರಿಗೆ ಲಾಭ ಮತ್ತು ಎಲ್ಲರಿಗೂ ಏಕ ರೀತಿಯ ಬೆಲೆ ನೀಡಲಾಗುತ್ತಿದೆ. ಇಡೀ ದೇಶದಲ್ಲೇ ಕಡಿಮೆ ಬೆಲೆಯಲ್ಲಿ ಗ್ರಾಹಕರನ್ನು ತಲುಪುವ ಹಾಲು ನಮ್ಮ ರಾಜ್ಯದ್ದಾಗಿದೆ. ಅಲ್ಲದೆ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಜಾನುವಾರುಗಳಿಗೆ ಆಹಾರ, ಮೇವು ಹಾಗೂ ತಳಿಯನ್ನು ಉಳಿಸುವ ಕಾರ್ಯಗಳಲ್ಲಿ ತೊಡಗಿಕೊಂಡಿವೆ.

    ಇತ್ತೀಚೆಗೆ ಅಮುಲ್ ಕೃಷ್ಣಗಿರಿ ಜಿಲ್ಲೆಯಲ್ಲಿ ಹಾಲು ಸಂಗ್ರಹಣಾ ಮತ್ತು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಬಹು ರಾಜ್ಯ ಸಹಕಾರಿ ಪರವಾನಗಿಯನ್ನು ಬಳಸಿಕೊಂಡಿರುವುದು ನಮ್ಮ ಗಮನಕ್ಕೆ ಬಂದಿದೆ. ಅಮುಲ್‍ನ ಈ ಕ್ರಮವು ಹಾಲು ಮತ್ತು ಹಾಲಿನ ಉತ್ಪನ್ನಗಳ ಸಂಗ್ರಹಣೆ ಹಾಗೂ ಮಾರಾಟದಲ್ಲಿ ತೊಡಗಿರುವ ಸಹಕಾರಿ ಸಂಸ್ಥೆಗಳ ನಡುವೆ ಅನಗತ್ಯ ಸ್ಪರ್ಧೆಯನ್ನು ಸೃಷ್ಟಿಸುತ್ತದೆ. ಆದ್ದರಿಂದ ಅಮುಲ್‍ನ ಹಸ್ತಕ್ಷೇಪವನ್ನು ನಿಲ್ಲಿಸುವಂತೆ ನಿರ್ದೇಶಿಸಲು ತುರ್ತು ಮಧ್ಯಸ್ಥಿಕೆಗೆ ಅಮಿತ್ ಶಾ ಅವರಿಗೆ ವಿನಂತಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: New Parliament Building – ಕರ್ನಾಟಕ ವಿಧಾನಸೌಧದ ಉದಾಹರಣೆ ನೀಡಿ ಕಾಂಗ್ರೆಸ್‌ಗೆ ಸಂಬಿತ್‌ ಪಾತ್ರ ತಿರುಗೇಟು

  • ಕಾಂಗ್ರೆಸ್ ಸರ್ಕಾರ ಬಂದ್ರೆ ನಂದಿನಿ ಸಂಸ್ಥೆ ಗಟ್ಟಿಯಾಗುತ್ತೆ: ಪ್ರಿಯಾಂಕಾ ಗಾಂಧಿ

    ಕಾಂಗ್ರೆಸ್ ಸರ್ಕಾರ ಬಂದ್ರೆ ನಂದಿನಿ ಸಂಸ್ಥೆ ಗಟ್ಟಿಯಾಗುತ್ತೆ: ಪ್ರಿಯಾಂಕಾ ಗಾಂಧಿ

    ಮೈಸೂರು: ಬಿಜೆಪಿ (BJP) ನಂದಿನಿ ಮುಗಿಸಲು ಗುಜರಾತಿಯ (Gujarat) ಅಮುಲ್ ತರಲು ಹೊರಟಿದ್ದಾರೆ. ಆದರೆ ನಂದಿನಿ ಸಂಸ್ಥೆಯನ್ನು ಕಾಂಗ್ರೆಸ್ ಸರ್ಕಾರ ಬಂದರೆ ಗಟ್ಟಿಗೊಳ್ಳಿಸುತ್ತದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಭರವಸೆ ನೀಡಿದರು.

    ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಂದಿನಿಯ ಬ್ರಾಂಡ್ ಅನ್ನು ಒಡೆದು ಹಾಕುವ ಸಂಚು ನಡೆಯುತ್ತಿದೆ. ಮೊದಲು 90 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿತ್ತು. ಈಗ ಅದು 70 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಉದ್ದೇಶ ಪೂರ್ವಕವಾಗಿ ಹಾಲು ಉತ್ಪಾದನೆ ಕಡಿಮೆ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಆಗುತ್ತಿತ್ತು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ಕೇಂದ್ರದಿಂದ ರಾಜ್ಯಕ್ಕೆ ಬರುವ ಹಣ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದೆ. ಇಲ್ಲಿ ಪದೇ ಪದೇ ಸಿಎಂಗಳು ಬದಲಾದರು. ದುರ್ಬಲ ಸಿಎಂ ಈ ರಾಜ್ಯಕ್ಕೆ ಸಿಕ್ಕಿರುವುದರ ಪರಿಣಾಮವಾಗಿದೆ. ಸಂಪುಟ ಪೂರ್ಣ ಪ್ರಮಾಣದಲ್ಲಿ ರಚನೆ ಆಗಲಿಲ್ಲ. ಈ ಸರ್ಕಾರ 40% ಹೆಸರಿನಲ್ಲಿ ಈ ರಾಜ್ಯವನ್ನು ಲೂಟಿ ಮಾಡಿದೆ. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರು. ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದರೂ ಪ್ರಯೋಜನ ಆಗಲಿಲ್ಲ. ಎಲ್ಲಾ ಸರ್ಕಾರಿ ನೇಮಕಾತಿಯಲ್ಲೂ ಭ್ರಷ್ಟಾಚಾರ ನಡೆಯಿತು. ಕೋವಿಡ್ ರೋಗಿಗಳನ್ನು ಬಿಡಲಿಲ್ಲ. ಮಕ್ಕಳ ಮೊಟ್ಟೆಯಲ್ಲೂ ಬಿಡಲಿಲ್ಲ. ಎಲ್ಲದರಲ್ಲೂ ಭ್ರಷ್ಟಾಚಾರ. ಒಂದುವರೆ ಲಕ್ಷ ಕೋಟಿ ರೂ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.

    ಲಕ್ಷಗಟ್ಟಲೆ ಹುದ್ದೆಗಳು ಸರ್ಕಾರದಲ್ಲಿ ಖಾಲಿ ಇವೆ. ಆದರೂ ನೇಮಕಾತಿ ನಡೆಯಲಿಲ್ಲ. ಈ ಸರ್ಕಾರ ಕೊಟ್ಟ ಎಲ್ಲಾ ಭರವಸೆ ಹುಸಿ ಮಾಡಿದೆ. ರಾಜ್ಯಕ್ಕೆ ಕೊಟ್ಟ ಭರವಸೆ ಯಾಕೆ ಈಡೇರಿಸಲಿಲ್ಲ ಅಂತಾ ಕಾಂಗ್ರೆಸ್ ಕೇಳುತ್ತಿದೆ. ಮೀಸಲಾತಿ ಹೆಚ್ಚಳದಲ್ಲೂ ಮೋಸ, ವಂಚನೆಯನ್ನು ಸರ್ಕಾರ ಮಾಡಿದೆ ಎಂದು ಗುಡುಗಿದರು.

    ಕಾಂಗ್ರೆಸ್ ನಾಯಕರು ತಮ್ಮ ಸಮಾಧಿ ತೊಡಲು ತಯಾರಿ ಮಾಡುತ್ತಿದ್ದಾರೆ ಎಂದು ಪ್ರಧಾನಿ ಹೇಳುತ್ತಾರೆ. ಇದು ಚುನಾವಣಾ ವಿಷಯ ಆಗೋಕೆ ಸಾಧ್ಯನಾ? ಈ ದೇಶದಲ್ಲಿ ಒಬ್ಬ ಪ್ರಧಾನಿ ಬಗ್ಗೆ ಇಷ್ಟು ಕೆಟ್ಟದಾಗಿ ಯೋಚಿಸುವ ಜನ ಇಲ್ಲ. ಪ್ರಧಾನಿಗಳ ಹೇಳಿಕೆಯಲ್ಲಿ ಅರ್ಥವಿಲ್ಲ. ಈ ಚುನಾವಣೆ ಮೋದಿ ಅವರು ಬಗ್ಗೆ ಅಲ್ಲ. ಇದು ಕರ್ನಾಟಕದ ಭವಿಷ್ಯದ ಚುನಾವಣೆ. ಇದು ಕರ್ನಾಟಕದ ಸ್ವಾಭಿಮಾನ, ದಿನನಿತ್ಯದ ಜೀವನ ಆಧಾರಿಸಿದ ಚುನಾವಣೆ ಇದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿಯ ತದ್ರೂಪಿ ಪಕ್ಷೇತರವಾಗಿ ಸ್ಪರ್ಧೆ – ಮತದಾರರಲ್ಲಿ ಗೊಂದಲ ಸೃಷ್ಟಿ ಯತ್ನದ ಆರೋಪ

    ಕರ್ನಾಟಕದ ಈ ಸುಂದರ ಜಾಗ ನೋಡಿ ನನಗೆ ಬಹಳ ಖುಷಿಯಾಯಿತು. ಇದು ಸಂಗಮ ಸ್ಥಳ. ಕಾವೇರಿ, ಕಬಿನಿ ನದಿಯ ಸ್ಥಳ. ಇದು ಬಹಳ ಪವಿತ್ರವಾದ ಸ್ಥಳವೆಂದು ಎಲ್ಲರೂ ಹೇಳುತ್ತಾರೆ. ನಾವು ಬಹಳ ಒಳ್ಳೆಯವರು ಬೇರೆಯವರು ಕೆಟ್ಟವರು ಎಂದು ಹೇಳುತ್ತಾರೆ. ಆದರೆ, ಯಾರು ಒಳ್ಳೆಯವರು ಕೆಟ್ಟವರು ಎಂದು ಜನ ತೀರ್ಮಾನ ಮಾಡುತ್ತಾರೆ. ಜನ ಸರಿಯಾದ ದೃಷ್ಟಿಯಿಂದ ಯೋಚನೆ ಮಾಡಿ ಮತ ಹಾಕಬೇಕು. ಕರ್ನಾಟಕಕ್ಕೆ ಬಹಳ ದೊಡ್ಡ ಸಂಸ್ಕೃತಿ ಇದೆ ಎಂದರು.

    ಸೇವೆ ಸರ್ಕಾರದ ಧರ್ಮ. ಪ್ರಾಮಾಣಿಕತೆ ಸರ್ಕಾರದ ತತ್ವ ಆಗಿರಬೇಕು. ಆದರೆ, ಕರ್ನಾಟಕ ಸರ್ಕಾರದ ಸ್ಥಿತಿ ಏನಾಗಿದೆ. ಬಿಜೆಪಿ ತಪ್ಪು ದಾರಿಯಿಂದ ಹಣ ಬಳಸಿ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರಕಾರ ಬೀಳಿಸಿತು. ಸರ್ಕಾರ ಆರಂಭದಲ್ಲೇ ಜನರಿಗೆ ವಂಚನೆ ಮಾಡಿತು. ದುರಾಸೆ ಅಮಿಷದಿಂದ ಈ ಸರಕಾರ ರಚನೆ ಆಯ್ತು ಎಂದು ಹೇಳಿದರು. ಇದನ್ನೂ ಓದಿ: ಜೆಡಿಎಸ್‌ನಲ್ಲೂ ಸ್ಟಾರ್ ಕ್ಯಾಂಪೇನರ್ ಇದ್ದಾರೆ: ಹೆಚ್‌ಡಿ ದೇವೇಗೌಡ

  • ದೆಹಲಿಯಲ್ಲಿ ನಂದಿನಿ ಸಿಗಲ್ಲ, ಬೇರೆ ಉತ್ಪನ್ನ ಮುಟ್ಟಲ್ಲ ಎನ್ನೋಕಾಗುತ್ತಾ?: ನಿರ್ಮಲಾ ಸೀತಾರಾಮನ್

    ದೆಹಲಿಯಲ್ಲಿ ನಂದಿನಿ ಸಿಗಲ್ಲ, ಬೇರೆ ಉತ್ಪನ್ನ ಮುಟ್ಟಲ್ಲ ಎನ್ನೋಕಾಗುತ್ತಾ?: ನಿರ್ಮಲಾ ಸೀತಾರಾಮನ್

    – ಸಿದ್ದರಾಮಯ್ಯ ಕಾಲದಲ್ಲೇ ರಾಜ್ಯಕ್ಕೆ ಅಮುಲ್ ಎಂಟ್ರಿಯಾಗಿತ್ತು

    ಬೆಂಗಳೂರು: ಹಾಲಿನ ಉತ್ಪನ್ನಗಳಾದ ನಂದಿನಿ (Nandini) ಹಾಗೂ ಅಮುಲ್ (Amul) ವಿಲೀನ ವಿಚಾರವಾಗಿ ನಡೆಯುತ್ತಿರುವ ಗಲಾಟೆಯನ್ನು ಕಾಂಗ್ರೆಸ್ (Congress) ರಾಜಕೀಯಗೊಳಿಸುತ್ತಿದೆ. ಸಿದ್ದರಾಮಯ್ಯ (Siddaramaiah) ಅವಧಿಯಲ್ಲೇ ಅಮುಲ್ ಕರ್ನಾಟಕಕ್ಕೆ (Karnataka) ಎಂಟ್ರಿಯಾಗಿತ್ತು. ಈಗ ಅವರೇ ಈ ವಿಚಾರವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹರಿಹಾಯ್ದಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಹೇಳಿಕೆ ನೀಡಿದ ಸೀತಾರಾಮನ್, ಅಮುಲ್ ಹಾಗೂ ನಂದಿನಿ ಉತ್ಪನ್ನಗಳ ಗಲಾಟೆಯನ್ನು ಭಾವನಾತ್ಮಕವಾಗಿ ತೆಗೆದುಕೊಂಡು ಹೋಗಲಾಗುತ್ತಿದೆ. ಈ ಎರಡು ಉತ್ಪನ್ನಗಳ ವಿಚಾರವಾಗಿ ಆರೋಗ್ಯಕರ ಸ್ಪರ್ಧೆ ಇರಲಿ ಎಂದು ಸಲಹೆ ನೀಡಿದರು.

    ನಾನು ಕರ್ನಾಟಕಕ್ಕೆ ಬಂದಾಗ ನಂದಿನ ಹಾಲು, ಪೇಡಾ ಹಾಗೂ ಇತರ ಉತ್ಪನ್ನಗಳನ್ನು ಇಷ್ಟಪಟ್ಟು ತೆಗೆದುಕೊಳ್ಳುತ್ತೇನೆ. ದೆಹಲಿಗೆ ಹೋದಾಗ ಅಯ್ಯೋ ಇಲ್ಲಿ ನಂದಿನಿ ಸಿಗಲ್ಲ, ಬೇರೆ ಯಾವ ಉತ್ಪನ್ನಗಳನ್ನೂ ನಾನು ಮುಟ್ಟಲ್ಲ ಎಂದು ಹೇಳಲು ಆಗುತ್ತಾ? ಹೀಗಾಗಿ ದೆಹಲಿಗೆ ಹೋದಾಗ ಅಮುಲ್ ಉತ್ಪನ್ನಗಳನ್ನು ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಸಿದ್ದರಾಮಯ್ಯ 8 ಸಾವಿರ ಕೋಟಿ ರೂ. ಅಕ್ರಮ ಮಾಡಿದ್ದಾರೆ: ಬೊಮ್ಮಾಯಿ ಆರೋಪ

    ನಂದಿನಿ ಈಗ ಬೇರೆ ರಾಜ್ಯಗಳಲ್ಲಿಯೂ ಮಾರಾಟವಾಗುತ್ತಿದೆ. ರೈತರಿಗೆ ಹಾಲಿಗೆ ಅತಿ ಹೆಚ್ಚು ದುಡ್ಡು ಸಿಗುವಂತೆ ಮಾಡಿದ್ದು ಬಿಜೆಪಿ ಸರ್ಕಾರ ಎಂದು ಸೀತಾರಾಮನ್ ಹೇಳಿದರು. ಇದನ್ನೂ ಓದಿ: ಲಿಂಗಾಯತರೆಲ್ಲಾ ಭ್ರಷ್ಟರು ಎಂದು ನಾನು ಹೇಳಲೇ ಇಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

  • ಕರ್ನಾಟಕದ ಹೆಮ್ಮೆ.. ನಂದಿನಿಯೇ ಬೆಸ್ಟ್ ಎಂದ ರಾಹುಲ್ ಗಾಂಧಿ

    ಕರ್ನಾಟಕದ ಹೆಮ್ಮೆ.. ನಂದಿನಿಯೇ ಬೆಸ್ಟ್ ಎಂದ ರಾಹುಲ್ ಗಾಂಧಿ

    – ನಂದಿನಿ ಐಸ್‌ಕ್ರೀಮ್ ಸವಿದ ರಾಗಾ

    ಬೆಂಗಳೂರು: ಚುನಾವಣೆ (Election) ಹೊತ್ತಲ್ಲಿ ಅಮುಲ್ (Amul) ಮತ್ತು ನಂದಿನಿ (Nandini) ವಿಲೀನ ವಿವಾದ ಕಾವು ಪಡೆದಿದ್ದ ಬೆನ್ನಲ್ಲೇ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಬೆಂಗಳೂರಿನ (Bengaluru) ನಂದಿನಿ ಔಟ್‌ಲೆಟ್‌ನಲ್ಲಿ ನಂದಿನಿ ಐಸ್‌ಕ್ರೀಮ್ (Ice Cream) ಹಾಗೂ ಸಿಹಿಯನ್ನು ಸೇವಿಸಿ ಆನಂದಿಸಿದ್ದಾರೆ. ಅಲ್ಲದೇ ಈ ಕುರಿತು ತಮ್ಮ ಟ್ವಿಟ್ಟರ್ (Twitter) ಖಾತೆಯಲ್ಲಿ ಟ್ವೀಟ್ ಕೂಡಾ ಮಾಡಿದ್ದಾರೆ.

    ಭಾನುವಾರ ಕೋಲಾರದಲ್ಲಿ (Kolar) ನಡೆದ ಜೈ ಭಾರತ್ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಬೆಂಗಳೂರಿನ ಜೆಪಿ ನಗರದಲ್ಲಿ (J.P.Nagar) ಪೌರ ಕಾರ್ಮಿಕ ಹಾಗೂ ಬೀದಿ ಬದಿ ವ್ಯಾಪಾರಿಗಳೊಂದಿಗೆ ನಗರದ ಆರ್.ವಿ ಡೆಂಟಲ್ ಕಾಲೇಜ್‌ನಲ್ಲಿ ರಾಹುಲ್ ಗಾಂಧಿ ಸಂವಾದ ಏರ್ಪಡಿಸಲಾಗಿತ್ತು. ಈ ವೇಳೆ ರಾಹುಲ್ ಗಾಂಧಿ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್ (D.K.Shivakumar) ಹಾಗೂ ವೇಣುಗೋಪಾಲ್ ಅವರೊಂದಿಗೆ ನಂದಿನಿ ಐಸ್‌ಕ್ರೀಮ್ ಸವಿದು ಖುಷಿಪಟ್ಟಿದ್ದಾರೆ. ಬಳಿಕ ಡಿಕೆ ಶಿವಕುಮಾರ್ ಅವರು ಬೂತ್ ಮಾಲೀಕರಿಗೆ 1 ಸಾವಿರ ಹಣವನ್ನು ನೀಡಿದ್ದಾರೆ. ಇದನ್ನೂ ಓದಿ: ವೇದಿಕೆಯಲ್ಲಿ ನಂದಿನಿ ವೆನಿಲ್ಲಾ ಫ್ಲೇವರ್ ಹಾಲು ಕುಡಿದ ಸಿದ್ದರಾಮಯ್ಯ 

    ನಂದಿನಿ-ಅಮುಲ್ ವಿವಾದ ವಿಚಾರವಾಗಿ ಟ್ವೀಟ್ (Tweet) ಮಾಡಿರುವ ರಾಹುಲ್ ಗಾಂಧಿ, ಕರ್ನಾಟಕದ ಹೆಮ್ಮೆ.. ನಂದಿನಿ ಅತ್ಯುತ್ತಮ ಎಂದು ಬಣ್ಣಿಸಿದ್ದಾರೆ. ಅಲ್ಲದೇ ತಾವು ಐಸ್‌ಕ್ರೀಮ್ ಸವಿಯುತ್ತಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಕೆಎಂಎಫ್ (KMF) ಬ್ರ್ಯಾಂಡ್‌ ಬೆಂಬಲಿಸಿದ್ದಾರೆ. ಇದನ್ನೂ ಓದಿ: ನಂದಿನಿ ಹಾಲು ಖರೀದಿ ಮಾಡಿ ಹಂಚಿದ್ದ ಡಿಕೆಶಿಗೆ ನೀತಿ ಸಂಹಿತೆ ಉಲ್ಲಂಘನೆಯ ಬಿಸಿ 

    ಐಸ್‌ಕ್ರೀಮ್ ಸವಿಯುತ್ತಿದ್ದ ವೇಳೆ ಬೂತ್ ಮಾಲೀಕರೊಂದಿಗೆ ಈ ನಂದಿನಿ ಉತ್ಪನ್ನಗಳು ಎಲ್ಲಿಂದ ಬರುತ್ತವೆ? ನೀವು ಎಷ್ಟು ವರ್ಷದಿಂದ ಈ ಕೆಲಸ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಬೂತ್ ಮಾಲೀಕ ಈ ಉತ್ಪನ್ನಗಳು ಬಳ್ಳಾರಿಯಿಂದ ಬರುತ್ತವೆ ಎಂದು ಉತ್ತರಿಸಿ ಬಳಿಕ ರಾಹುಲ್ ಗಾಂಧಿ ಅವರೊಂದಿಗೆ ಫೋಟೋವನ್ನೂ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಈ ವಿಚಾರ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ: Amul Vs Nandini: ಅಮುಲ್‌ಗೆ KMF ಸೆಡ್ಡು – ಆನ್‌ಲೈನ್‌ನಲ್ಲೂ ನಂದಿನಿ ಉತ್ಪನ್ನ ಸೇಲ್ 

    ಅಮುಲ್ ಕುಟುಂಬ ಬೆಂಗಳೂರು ನಗರಕ್ಕೆ ಹಾಲು ಮತ್ತು ಮೊಸರಿನ ರೂಪದಲ್ಲಿ ಹೊಸ ತಾಜಾತನವನ್ನು ತರುತ್ತಿದೆ. ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ಗಳಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದ್ದು, ಅವುಗಳನ್ನು ನಿಮ್ಮ ಮನೆ ಬಾಗಿಲಿಗೆ ಆರ್ಡರ್ ಮಾಡಬಹುದು ಎಂದು ಅಮುಲ್ ಕನ್ನಡ ಏಪ್ರಿಲ್ 5 ರಂದು ಟ್ವೀಟ್ ಮಾಡಿತ್ತು. ಈ ಕುರಿತು ಕರ್ನಾಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದು, ಕನ್ನಡಪರ ಸಂಘಗಳು ಈ ಕುರಿತು ಹೋರಾಟ ನಡೆಸುತ್ತಿವೆ. ಈ ಕ್ರಮವನ್ನು ಸಮರ್ಥಿಸಿಕೊಂಡ ಸರ್ಕಾರದ ವಿರುದ್ಧ ವಿಪಕ್ಷಗಳು ಹರಿಹಾಯ್ದಿದ್ದವು. ಇದನ್ನೂ ಓದಿ: ಕೆಎಂಎಫ್‌ನಿಂದ ಫೆಡರಲ್‌ ತತ್ವ ಉಲ್ಲಂಘನೆ – ಈಗ ಕೇರಳದಲ್ಲಿ ನಂದಿನಿ ಹಾಲಿಗೆ ವಿರೋಧ

  • Amul Vs Nandini: ಅಮುಲ್‌ಗೆ KMF ಸೆಡ್ಡು – ಆನ್‌ಲೈನ್‌ನಲ್ಲೂ ನಂದಿನಿ ಉತ್ಪನ್ನ ಸೇಲ್

    Amul Vs Nandini: ಅಮುಲ್‌ಗೆ KMF ಸೆಡ್ಡು – ಆನ್‌ಲೈನ್‌ನಲ್ಲೂ ನಂದಿನಿ ಉತ್ಪನ್ನ ಸೇಲ್

    ಬೆಂಗಳೂರು: ಕೆಎಂಎಫ್ (KMF), ಅಮುಲ್ (Amul) ನಡುವಿನ ಸಮರ ತಣ್ಣಗಾಗುವಂತೆ ಕಾಣುತ್ತಿಲ್ಲ. ವಿರೋಧದ ಮಧ್ಯೆಯೂ ಆನ್‌ಲೈನ್‌ನಲ್ಲಿ (KMF Online Products) ಉತ್ಪನ್ನಗಳ ಮಾರಾಟಕ್ಕೆ ಮುಂದಾದ ಅಮುಲ್‌ಗೆ ಈಗ ಕೆಎಂಫ್ ಸೆಡ್ಡು ಹೊಡೆದಿದೆ.

    ಆನ್‌ಲೈನ್‌ನಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಹೆಚ್ಚಿಸಿದೆ. ಸದ್ಯಕ್ಕೆ ಸರಿಸುಮಾರು 2 ಲಕ್ಷ ಲೀಟರ್ ನಂದಿನಿ ಹಾಲು ಆನ್‌ಲೈನ್ ಮೂಲಕ ಸೇಲ್ ಆಗುತ್ತಿದೆ. ಇದರ ಪ್ರಮಾಣ ಇನ್ನಷ್ಟು ಹೆಚ್ಚಿಸುವ ಗುರಿಯನ್ನು ಕೆಎಂಎಫ್ ಹೊಂದಿದೆ. ಅಪಾರ್ಟ್ಮೆಂಟ್‌ಗಳು ಹಾಗೂ ಹೊರರಾಜ್ಯದವರನ್ನೇ ಕೆಎಂಎಫ್ ಟಾರ್ಗೆಟ್ ಮಾಡಿಕೊಂಡಿದೆ ಎನ್ನಲಾಗಿದೆ. ಇದನ್ನೂ ಓದಿ: ಅಮುಲ್ ದೇಶದ ಬ್ರ್ಯಾಂಡ್‌, ಭಾರತದಲ್ಲೇ ಮಾರಾಟ ಮಾಡಿದ್ರೆ ಏನು ತೊಂದ್ರೆ – ಸಿ.ಟಿ ರವಿ ಪ್ರಶ್ನೆ

    ಏನಿದು ವಿವಾದ?
    ಅಮುಲ್ ಕುಟುಂಬ ಬೆಂಗಳೂರು (Bengaluru) ನಗರಕ್ಕೆ ಹಾಲು ಮತ್ತು ಮೊಸರಿನ ರೂಪದಲ್ಲಿ ಹೊಸ ತಾಜಾತನವನ್ನು ತರುತ್ತಿದೆ. ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದ್ದು, ಅವುಗಳನ್ನು ನಿಮ್ಮ ಮನೆ ಬಾಗಿಲಿಗೆ ಆರ್ಡರ್ ಮಾಡಬಹುದು ಎಂದು ಅಮುಲ್ ಕನ್ನಡ ಏಪ್ರಿಲ್ 5 ರಂದು ಟ್ವೀಟ್ ಮಾಡಿತ್ತು. ಈ ಟ್ವೀಟ್ ಮಾಡಿದ ಬೆನ್ನಲ್ಲೇ ಕನ್ನಡಿಗರು, ರಾಜಕೀಯ ನಾಯಕರು ಅಮುಲ್ ಮತ್ತು ಬಿಜೆಪಿ ವಿರುದ್ಧ ಟೀಕೆ ಮಾಡಲು ಆರಂಭಿಸಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ನಂದಿನಿ ಬ್ರ್ಯಾಂಡ್ ಬಗ್ಗೆ‌ ಹರಿದಾಡುತ್ತಿರುವ ಸುದ್ದಿ ಸುಳ್ಳು: KMF ಸ್ಪಷ್ಟನೆ

    ಅಮುಲ್ ಪರ ವಾದವೇನು?
    ನಂದಿನಿ ಕೇವಲ ಕರ್ನಾಟಕದಲ್ಲಿ ಮಾತ್ರ ಹಾಲನ್ನು ಮಾರಾಟ ಮಾಡುತ್ತಿಲ್ಲ. ಉಳಿದ ರಾಜ್ಯಗಳಲ್ಲೂ ಹಾಲನ್ನು ಮಾರಾಟ ಮಾಡುತ್ತಿದೆ. ಹೀಗಿರುವಾಗ ಅಮುಲ್ ಬೇಡ ಎಂದು ಹೇಳಲು ಒಕ್ಕೂಟ ವ್ಯವಸ್ಥೆಯಲ್ಲಿ ಯಾವ ಅಧಿಕಾರವಿದೆ. ಯಾವುದು ಬೇಕೋ ಅದನ್ನು ಗ್ರಾಹಕ ಖರೀದಿಸುತ್ತಾನೆ.