Tag: amruthpal

  • ಅಮೃತ್‍ಪಾಲ್‍ಗೆ ಆಶ್ರಯ ಕೊಟ್ಟಿದ್ದ ಮಹಿಳೆ ಅರೆಸ್ಟ್

    ಅಮೃತ್‍ಪಾಲ್‍ಗೆ ಆಶ್ರಯ ಕೊಟ್ಟಿದ್ದ ಮಹಿಳೆ ಅರೆಸ್ಟ್

    ಚಂಡೀಗಢ: ಆರು ದಿನಗಳ ಹಿಂದೆ ಪಂಜಾಬ್‍ (Punjab) ನಿಂದ ಎಸ್ಕೇಪ್ ಆಗಿದ್ದ ಖಲಿಸ್ತಾನ್ ಬೆಂಬಲಿಗ ಅಮೃತ್‍ಪಾಲ್ ಸಿಂಗ್ (Amritpal Singh) ಹರಿಯಾಣದಲ್ಲಿ ತಲೆಮರೆಸಿಕೊಂಡಿರುವ ಕುರುಹುಗಳು ಸಿಕ್ಕಿವೆ. ಸ್ಕೂಟರ್‍ನಲ್ಲಿ ತನ್ನ ಅನುಯಾಯಿ ಜೊತೆ ಕುರುಕ್ಷೇತ್ರಕ್ಕೆ ಬಂದಿದ್ದ ಅಮೃತ್‍ಪಾಲ್ ಸಿಂಗ್ ಮಹಿಳೆಯೊಬ್ಬರ ಮನೆಯಲ್ಲಿ ಒಂದು ರಾತ್ರಿ ತಲೆ ಮರೆಸಿಕೊಂಡಿದ್ದ ವಿಚಾರ ಬೆಳಕಿಗೆ ಬಂದಿದೆ.

    ಅಮೃತ್‍ಪಾಲ್‍ಗೆ ಒಂದು ರಾತ್ರಿ ಆಶ್ರಯಕೊಟ್ಟಿದ್ದ ಮಹಿಳೆ ಬಲ್ಜಿತ್ ಕೌರ್‍ರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇದೀಗ ಹರಿಯಾಣದಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ. ಅತ್ತ ಲಂಡನ್‍ನಲ್ಲಿ ಖಲಿಸ್ತಾನಿ ಬೆಂಬಲಿಗರು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ. ಭಾರೀ ಬಂದೋಬಸ್ತ್ ನಡುವೆಯೂ ಭಾರತೀಯ ಹೈಕಮೀಷನ್ ಕಚೇರಿ ಮೇಲೆ ನೀರಿನ ಬಾಟಲಿ ಎಸದಿದ್ದಾರೆ. ಯೋಜಿತ ರೀತಿಯಲ್ಲಿ ಹೈಕಮೀಷನ್ ಕಚೇರಿ ಬಳಿ ಬಂದ ಮಕ್ಕಳು, ಮಹಿಳೆಯರನ್ನು ಒಳಗೊಂಡ 2ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ಖಲಿಸ್ತಾನ್ ಪರ ಘೋಷಣೆ ಕೂಗಿದ್ರು. ಇದನ್ನೂ ಓದಿ: ಮಹಿಳೆಯರ ಅಶ್ಲೀಲ ವೀಡಿಯೋಗಳನ್ನಿಟ್ಟುಕೊಂಡು ಬ್ಲಾಕ್‌ಮೇಲ್ – ಅಮೃತ್‌ಪಾಲ್ ಕರಾಳ ಮುಖ ಬಯಲು

    ಭಾರತ ವಿರೋಧಿ ಘೋಷಣೆ ಕೂಗಿದ್ರು. ಇದಕ್ಕೆ ಪ್ರತಿಯಾಗಿ ಭಾರತೀಯ ಹೈಕಮಿಷನ್ ಸಿಬ್ಬಂದಿ ಭಾರತದ ಧ್ವಜ ಪ್ರದರ್ಶಿಸಿ ತಿರುಗೇಟು ಕೊಟ್ಟರು. ಈ ಹಂತದಲ್ಲೇ ಖಲಿಸ್ತಾನಿ ಬೆಂಬಲಿಗರು ಹೈಕಮಿಷನ್ ಕಚೇರಿ ಮೇಲೆ ಬಾಟಲ್‍ಗಳನ್ನು ಎಸೆದರು. ಕೂಡಲೇ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಇಂಡಿಯಾ ಹೌಸ್ ಪ್ರಾಂತ್ಯದಲ್ಲಿ ಇನ್ನಷ್ಟು ಭದ್ರತೆ ಹೆಚ್ಚಿಸಿದ್ರು. ಅಮೆರಿಕಾದ ಸ್ಯಾನ್‍ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಗೂ ಮುಂಜಾಗ್ರತಾ ಕ್ರಮವಾಗಿ ಭದ್ರತೆ ಹೆಚ್ಚಿಸಲಾಗಿದೆ.