Tag: Amruthahalli Police

  • ಶ್ವಾನವನ್ನು ರಕ್ಷಿಸುತ್ತಿದ್ದ ಯುವತಿಗೆ 2 ಬಾರಿ ಬ್ಯಾಡ್ ಟಚ್ – ಖಾಸಗಿ ಅಂಗ ಮುಟ್ಟಿ ವಿಕೃತಿ ಮೆರೆದಿದ್ದ ಕಾಮುಕ ಅರೆಸ್ಟ್

    ಶ್ವಾನವನ್ನು ರಕ್ಷಿಸುತ್ತಿದ್ದ ಯುವತಿಗೆ 2 ಬಾರಿ ಬ್ಯಾಡ್ ಟಚ್ – ಖಾಸಗಿ ಅಂಗ ಮುಟ್ಟಿ ವಿಕೃತಿ ಮೆರೆದಿದ್ದ ಕಾಮುಕ ಅರೆಸ್ಟ್

    ಬೆಂಗಳೂರು: ಅಪಘಾತಕ್ಕೆ ಒಳಗಾಗಿದ್ದ ಶ್ವಾನವನ್ನು ರಕ್ಷಿಸುತ್ತಿದ್ದ ಯುವತಿಯ ಖಾಸಗಿ ಅಂಗವನ್ನು 2 ಬಾರಿ ಮುಟ್ಟಿ ವಿಕೃತಿ ಮೆರೆದಿರುವ ಘಟನೆ ನಗರದ ಜಕ್ಕೂರು (Jakkuru) ಮುಖ್ಯರಸ್ತೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಬಂಧಿತ ಆರೋಪಿಯನ್ನು ಮಂಜುನಾಥ್ ಎಂದು ಗುರುತಿಸಲಾಗಿದೆ. ಸೆ.7ರಂದು ರಾತ್ರಿ 11:50ರ ಸುಮಾರಿಗೆ ಯುವತಿ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಅಪಘಾತಕ್ಕೊಳಗಾಗಿದ್ದ ಶ್ವಾನವನ್ನು ಕಂಡು ಕಾರು ನಿಲ್ಲಿಸಿ, ಅದರ ರಕ್ಷಣೆಗೆ ಮುಂದಾಗಿದ್ದರು. ಇದೇ ಸಮಯಕ್ಕೆ ಬೈಕ್‌ನಲ್ಲಿ ಬಂದ ಆರೋಪಿ ಯುವತಿಯ ಖಾಸಗಿ ಅಂಗವನ್ನು ಮುಟ್ಟಿ ಹೋಗಿದ್ದಾನೆ.ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಹೆಚ್ಚಿದ ಸರಗಳ್ಳರ ಅಟ್ಟಹಾಸ – ಕುತ್ತಿಗೆಗೆ ಲಾಂಗ್ ಇಟ್ಟು 55 ಗ್ರಾಂ ಚಿನ್ನ ಕಳ್ಳತನ

    ಶ್ವಾನವನ್ನು ರಕ್ಷಿಸಿದ ಯುವತಿ ಪೆಟ್ರೋಲ್ ಬಂಕ್‌ವೊಂದರ ಬಳಿ ಕೈತೊಳೆಯುತ್ತಿದ್ದರು. ಈ ವೇಳೆ ಪುನಃ ಬಂದ ಆಸಾಮಿ ಮತ್ತೆ ಖಾಸಗಿ ಅಂಗವನ್ನು ಮುಟ್ಟಿ, ವಿಕೃತಿ ಮೆರೆದು ಪರಾರಿಯಾಗಿದ್ದಾನೆ.

    ಈ ಸಂಬಂಧ ಯುವತಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ (Amruthahalli Police Station) ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಇದನ್ನೂ ಓದಿ: 75 ಮಂದಿ ಪ್ರಯಾಣಿಕರಿದ್ದ BMTC ಬಸ್‌ನಲ್ಲಿ ಭಾರೀ ಬೆಂಕಿ – ಬಸ್‌ ಸುಟ್ಟು ಕರಕಲು

  • ಸಲೂನ್‌ಗೆ ನುಗ್ಗಿ ಲೇಡಿ ರೌಡಿ ಗ್ಯಾಂಗ್‌ನಿಂದ ದಾಂಧಲೆ – ಮೂವರು ಅರೆಸ್ಟ್‌

    ಸಲೂನ್‌ಗೆ ನುಗ್ಗಿ ಲೇಡಿ ರೌಡಿ ಗ್ಯಾಂಗ್‌ನಿಂದ ದಾಂಧಲೆ – ಮೂವರು ಅರೆಸ್ಟ್‌

    – ಕೈಯಲ್ಲಿ ಸಿಗರೇಟ್.. ಕಾಲಿಂದ ಒದ್ದು ಮನಸೋಇಚ್ಚೆ ಹಲ್ಲೆ

    ಬೆಂಗಳೂರು: ನಗರದ ಸ್ಪಾ ವೊಂದರಲ್ಲಿ ಕೆಲಸ ಬಿಟ್ಟು ಸ್ವಂತ ಸಲೂನ್ ಮಾಡಿದ್ದಕ್ಕೆ, ಲೇಡಿ ಗ್ಯಾಂಗ್ (Lady Rowdy Gang) ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಅಮೃತಹಳ್ಳಿ ಪೊಲೀಸ್ ಠಾಣಾ (Amruthahalli Police Station) ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದಿದೆ.

    ಸಂಜು ಅನ್ನೋ 40 ವರ್ಷದ ವ್ಯಕ್ತಿ, ಕೊಡಿಗೆಹಳ್ಳಿ ಸಮೀಪದ ಸಾರಾ ಸ್ಪಾನಲ್ಲಿ ಕೆಲಸ ಮಾಡ್ತಿದ್ದ. ಅಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರಿಂದ ಅಲ್ಲಿ ಕೆಲಸ ಬಿಟ್ಟು ಸ್ವಂತ ಸಲೂನ್ ಮಾಡಿಕೊಂಡಿದ್ದ. ಇದರಿಂದ ಕೋಪಗೊಂಡ ಸಾರಾ ಸ್ಪಾ ಓನರ್ ನಿಶಾ, ಗ್ಯಾಂಗ್‌ ಕಟ್ಟಿಕೊಂಡು ಬಂದು, ಸಂಜು ನಡೆಸ್ತಿದ್ದ ಸಲೂನ್‌ಗೆ ನುಗ್ಗಿ ಧಾಂಧಲೆ ನಡೆಸಿದ್ದಾರೆ. 10-15 ನಿಮಿಷಗಳ ಕಾಲ ಮನಸೋಇಚ್ಛೆ ಥಳಿಸಿ ಸಲೂನ್‌ನಿಂದ ನೀಲಿ ಬಣ್ಣದ ಕಾರಿನಲ್ಲಿ ಎತ್ತಾಕ್ಕೊಂಡು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಸಂಜು ದೂರು ನೀಡಿದ್ದಾರೆ. ಇದನ್ನೂ ಓದಿ: ಬೇಹುಗಾರಿಕೆಗಾಗಿ ಭಾರತೀಯ ಮೊಬೈಲ್‌ ಸಿಮ್‌ ಕಾರ್ಡ್‌ ಪೂರೈಸುತ್ತಿದ್ದ ಪಾಕ್‌ ಸ್ಪೈ ಅರೆಸ್ಟ್‌

    ಸಾರಾ ಸ್ಪಾ ಓನರ್ ನಿಶಾ, ಸ್ನೇಹಿತೆ ಕಾವ್ಯ, ಮೊಹಮ್ಮದ್‌ ಹಾಗೂ ಅಪರಿಚಿತರಿಬ್ಬರ ಮೇಲೆ ದೂರು ದಾಖಲಾಗಿದೆ. ದಾಸರಹಳ್ಳಿ ಮುಖ್ಯರಸ್ತೆ ಮೂಲಕ ಜಕ್ಕೂರು ಕಡೆ ಕರೆದುಕೊಂಡು ಹೋಗಿ, ಡ್ರ್ಯಾಗನ್‌, ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಸಲೂನ್‌ಗೆ ನುಗ್ಗಿ ಹಲ್ಲೆ ಮಾಡಿರುವ ದೃಶ್ಯಗಳನ್ನ ಸಂಜು ಪತ್ನಿ ಮೊಬೈಲ್ ನಲ್ಲಿ ಸಿಸಿಟಿವಿ ದೃಶ್ಯಗಳನ್ನ ನೋಡಿ ಅಮೃತಹಳ್ಳಿ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿದ್ದಾರೆ. ಕಿಡ್ನ್ಯಾಪ್ ಮಾಡಿದ ಗ್ಯಾಂಗ್ ನಲ್ಲಿದ್ದ ಓರ್ವರನ್ನ ಪೊಲೀಸರು ಗುರ್ತಿಸಿ, ಫೋನ್‌ ಮಾಡಿ ಎಚ್ಚರಿಕೆ ನೀಡಿದ್ದಾರೆ. ಆ ಬಳಿಕ ಠಾಣೆಯ ಮುಂದೆ ಸಂಜುನನ್ನ ಬಿಟ್ಟೋಗಿದ್ದಾರೆ. ಕಣ್ಣು, ಕಿವಿ, ತಲೆ, ಹೊಟ್ಟೆ ಭಾಗಕ್ಕೆ ಗಾಯಗಳಾಗಿದ್ದು, ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಸಂಜು ಚಿಕಿತ್ಸೆ ಪಡೆದು ಪೊಲೀಸರಿಗೆ ದೂರು ನೀಡಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈದು ಪೆಟ್ರೋಲ್ ಸುರಿದು ಸುಟ್ಟಾಕ್ತಿನಿ ಎಂದು ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ನಾಲ್ಕೇ ದಿನಕ್ಕೆ KRSನಲ್ಲಿ 11 ಅಡಿ ನೀರು ಹೆಚ್ಚಳ – ಹಲವು ವರ್ಷಗಳ ಬಳಿಕ ಮೇ ತಿಂಗಳಲ್ಲೇ 100 ಅಡಿ ಭರ್ತಿ!

    ರೌಡಿ ಗ್ಯಾಂಗ್‌ನ ಅಟ್ಟಹಾಸದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಗ್ಯಾಂಗ್ ಗೆ ಸ್ಥಳೀಯ ರಾಜಕೀಯ ಮುಖಂಡ ಹಾಗೂ ರೌಡಿಶೀಟರ್ ಒಬ್ಬನ ಬೆಂಬಲ ಇದೆಯಂತೆ. ಇದೆ ಧೈರ್ಯದಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಸಲೂನ್‌ನ ಸಿಸಿಟಿವಿ ಕೇಬಲ್‌ಗಳನ್ನ ಕಿತ್ತಾಕಿ ಧಾಂಧಲೆ ನಡೆಸಿದ್ದಾರೆ ಎಂದು ದೂರಿದ್ದು, ಪೊಲೀಸರು ಹಲ್ಲೆಕೊರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಜು ದಂಪತಿ ಒತ್ತಾಯಿಸಿದ್ದಾರೆ. ರೌಡಿ ಪಟಾಲಂ ವಿರುದ್ಧ ಅಮೃತಹಳ್ಳಿ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಪರಾರಿಯಾದ ಹಲ್ಲೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: RCB ಟ್ರೋಫಿ ಗೆದ್ದರೆ ಆ ದಿನವನ್ನ ʻಆರ್‌ಸಿಬಿ ಫ್ಯಾನ್ಸ್‌ ಹಬ್ಬʼದ ದಿನವನ್ನಾಗಿ ಘೋಷಿಸಿ – ಸಿಎಂಗೆ ವಿಶೇಷ ಪತ್ರ!

  • ಅಮೃತಹಳ್ಳಿಯ ದಾಸರಹಳ್ಳಿಯಲ್ಲಿ ಜೋಡಿ ಕೊಲೆ – ಮಲತಂದೆಯಿಂದಲೇ ಇಬ್ಬರು ಹೆಣ್ಣು ಮಕ್ಕಳ ಹತ್ಯೆ!

    ಅಮೃತಹಳ್ಳಿಯ ದಾಸರಹಳ್ಳಿಯಲ್ಲಿ ಜೋಡಿ ಕೊಲೆ – ಮಲತಂದೆಯಿಂದಲೇ ಇಬ್ಬರು ಹೆಣ್ಣು ಮಕ್ಕಳ ಹತ್ಯೆ!

    ಬೆಂಗಳೂರು: ಮಲತಂದೆಯಿಂದಲೇ ಇಬ್ಬರು ಹೆಣ್ಣುಮಕ್ಕಳ ದಾರುಣ ಕೊಲೆಯಾಗಿರುವ ಘಟನೆ ಬೆಂಗಳೂರಿನ (Bengaluru) ಅಮೃತಹಳ್ಳಿ ದಾಸರಹಳ್ಳಿಯಲ್ಲಿ (Amruthahalli Dasarahalli) ನಡೆದಿದ್ದು, ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದೆ.

    ದಾಸರಹಳ್ಳಿಯ ಕಾವೇರಿ ಬಡಾವಣೆಯಲ್ಲಿ ನೆಲೆಸಿರುವ ಉತ್ತರ ಭಾರತ (North India) ಮೂಲದ ಮಹಿಳೆಯ ಮನೆಯಲ್ಲಿ ಘಟನೆ ನಡೆದಿದೆ. ಸ್ವತಃ ಮಲತಂದೆಯೇ ಸುಮಾರು 14 ಹಾಗೂ 16 ವರ್ಷದ ಹೆಣ್ಣು ಮಕ್ಕಳನ್ನು ಕೊಚ್ಚಿ ಕೊಲೆ ಮಾಡಿ, ಎಸ್ಕೇಪ್‌ ಆಗಿದ್ದಾನೆ. ಸುಮಿತ್‌ ಕೊಲೆ ಮಾಡಿ ಎಸ್ಕೇಪ್‌ ಆಗಿರುವ ಮಲತಂದೆ. ಸೃಷ್ಠಿ (14) ಮತ್ತು ಸೋನಿಯಾ(16) ಕೊಲೆಯಾದ ಅಪ್ರಾಪ್ತ ಮಕ್ಕಳು ಪೊಲೀಸ್‌ ಮೂಲಗಳು ತಿಳಿಸಿವೆ.

    ಸದ್ಯ ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು, ಈಶಾನ್ಯ ವಿಭಾಗ ಡಿಸಿಪಿ ಸಜೀತ್, ಡಾಗ್ ಸ್ಕ್ವಾಡ್, ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಹಾಗೂ ಸೊಕೊ ಟೀಂ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಇಬ್ಬರು ಹೆಣ್ಣುಮಕ್ಕಳ ಜೋಡಿ ಜೊಲೆ ಏರಿಯಾ ಜನರನ್ನ ಭಯಭೀತಗೊಳಿಸಿದೆ.

    ಪ್ರಕರಣದ ಕುರಿತು ಮಾಹಿತಿ ನೀಡಿದ ಈಶಾನ್ಯ ವಿಭಾಗ ಡಿಸಿಪಿ ಸುಜೀತ್, ಶನಿವಾರ ಮಧ್ಯಾಹ್ನ 3:30ರ ಸುಮಾರಿಗೆ ಈ ಘಟನೆ ನಡೆದಿದೆ. ಇಬ್ಬರು ಅಪ್ರಾಪ್ತ ಮಕ್ಕಳನ್ನು ಮಲತಂದೆಯೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ತಾಯಿ ಅನಿತಾ ದೂರು ಕೊಟ್ಟಿದ್ದಾರೆ. ಅಮೃತಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ತಾಯಿ ಅನಿತಾ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಮಲ ತಂದೆ ಸುಮಿತ್ ಪುಡ್ ಡಿಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ ಎಂದು ತಿಳಿಸಿದ್ದಾರೆ.

    ಅಲ್ಲದೇ ಆರೋಪಿ ಯಾವ ಕಾರಣಕ್ಕೆ ಮಕ್ಕಳನ್ನ ಕೊಲೆ ಮಾಡಿದ್ದಾನೆ ಅನ್ನೋದು ತಿಳಿದುಬಂದಿಲ್ಲ. ಸದ್ಯ ಆರೋಪಿ ತಲೆಮರಿಸಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.

  • ಬೆಂಗ್ಳೂರಲ್ಲಿ ಡಬಲ್‌ ಮರ್ಡರ್‌: ನಂಬಿಕೆ ದ್ರೋಹಿಗಳನ್ನ ಮುಗಿಸ್ತೀನಿ ಅಂತಾ ಸ್ಟೇಟಸ್‌ ಹಾಕಿದ್ದ ಹಂತಕ!

    ಬೆಂಗ್ಳೂರಲ್ಲಿ ಡಬಲ್‌ ಮರ್ಡರ್‌: ನಂಬಿಕೆ ದ್ರೋಹಿಗಳನ್ನ ಮುಗಿಸ್ತೀನಿ ಅಂತಾ ಸ್ಟೇಟಸ್‌ ಹಾಕಿದ್ದ ಹಂತಕ!

    ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಹಾಡಹಗಲೇ ಡಬಲ್‌ ಮರ್ಡರ್‌ (Double Murder) ನಡೆದಿದ್ದು, ಬೆಂಗಳೂರು ಜನತೆಯನ್ನ ಬೆಚ್ಚಿ ಬೀಳಿಸಿದೆ. ಸಂಸ್ಥೆಯ ಮಾಜಿ ಉದ್ಯೋಗಿಯಿಂದಲೇ ಏರೋನಿಕ್ಸ್ ಕಂಪನಿಯ (Aeronics Company) ಎಂಡಿ ಹಾಗೂ ಸಿಇಒ ಭೀಕರವಾಗಿ ಹತ್ಯೆಯಾಗಿಯಾಗಿದ್ದಾರೆ. ಆದ್ರೆ ಹಂತಕ ಹತ್ಯೆ ಮಾಡೋದಕ್ಕೂ ಮುನ್ನವೇ ತನ್ನ ಇನ್ಸ್ಟಾಖಾತೆಯಲ್ಲಿ ಸ್ಟೇಟಸ್‌ ಹಾಕಿದ್ದ ಅನ್ನೋ ಸತ್ಯ ಬಯಲಾಗಿದೆ.

    ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಬೆಂಗಳೂರಿನ (Bengaluru) ಹೆಬ್ಬಾಳ ಸಮೀಪದ ಅಮೃತಹಳ್ಳಿಯ ಪಂಪಾ ಬಡಾವಣೆಯಲ್ಲಿ ಹತ್ಯೆ ನಡೆದಿದೆ. ಏರೋನಿಕ್ಸ್ ಮೀಡಿಯಾ ಪ್ರೈವೆಟ್‌ ಲಿಮಿಟೆಡ್‌ ಸಂಸ್ಥೆಗೆ ನುಗ್ಗಿದ್ದ ಮೂವರು ಹಂತಕರು ಮಚ್ಚಿನಿಂದ ಕಚೇರಿಯಲ್ಲಿದ್ದ ಎಂಡಿ ಫಣೀಂದ್ರ ಸುಬ್ರಮಣ್ಯ ಹಾಗೂ ಸಿಇಒ ವಿನುಕುಮಾರ್ ಮೇಲೆ ಅಟ್ಯಾಕ್ ಮಾಡಿ ಮನ ಬಂದಂತೆ ಕೊಚ್ಚಿ ಕೊಲೆ‌ ಮಾಡಿದ್ದಾರೆ‌.

    ಕೊಲೆಯಾದ ಫಣೀಂದ್ರ 4 ತಿಂಗಳ ಹಿಂದೆ ಪಂಪಾ ಬಡಾವಣೆಯಲ್ಲಿ ಏರೋನಿಕ್ಸ್ ಮೀಡಿಯಾ ಪ್ರೈ.ಲಿ. ಹೆಸರಿನಲ್ಲಿ ಹೊಸ ಸಂಸ್ಥೆಯನ್ನ ಆರಂಭಿಸಿದ್ದರು. ಅದಕ್ಕೆ ವಿನುಕುಮಾರ್ ಸಿಇಒ ಆಗಿ ನೇಮಕವಾಗಿದ್ರು. ಮಂಗಳವಾರ ಸಂಜೆ 4 ಗಂಟೆ ವೇಳೆಗೆ ಕಂಪನಿ ಸಿಬ್ಬಂದಿ ಜೊತೆ ಎಂಡಿ ಹಾಗೂ ಸಿಇಒ ಮೀಟಿಂಗ್‌ ಕರೆದಿದ್ದರು. ಅದೇ ಸಮಯಕ್ಕೆ ಸ್ಕೆಚ್‌ ಹಾಕಿ ಕಾದು ಕುಳಿತಿದ್ದ ಹಂತಕರು ಏಕಾಏಕಿ ಕಚೇರಿಗೆ ನುಗ್ಗಿ ಮಾರಾಕಸ್ತ್ರಗಳಿಂದ ಕೊಚ್ಚಿ ಇಬ್ಬರನ್ನ ಕೊಲೆ ಮಾಡಿ ಎಸ್ಕೇಪ್‌ ಆಗಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹಾಡಹಗಲೇ ಡಬಲ್ ಮರ್ಡರ್!

    ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಮೃತಹಳ್ಳಿ ಪೊಲೀಸರು ಸಂಸ್ಥೆಯ ಗ್ರೌಂಡ್ ಫ್ಲೋರ್‌ನಲ್ಲಿ ಪರಿಶೀಲನೆ ನಡೆಸಿದಾಗ ತಲ್ವಾರ್ ನಿಂದ ಹಲ್ಲೆ ಮಾಡಿ ಕೊಲೆ ಮಾಡಿರೋದು ಗೊತ್ತಾಗಿದೆ. ನಂತರ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗಿ ಸಂಸ್ಥೆಯ ಮಾಜಿ ಉದ್ಯೋಗಿ ಫೆಲಿಕ್ಸ್ ಅಲಿಯಾಸ್ ಜೋಕರ್ ಫೆಲಿಕ್ಸ್ ಎಂಬಾತನೇ ಕೊಲೆ ಮಾಡಿರೋದು ಗೊತ್ತಾಗಿದೆ.

    ಫಣೀಂದ್ರ, ವಿನು ಕುಮಾರ್ ಹಾಗೂ ಫೆಲಿಕ್ಸ್ ಈ ಹಿಂದೆ ಬನ್ನೇರುಘಟ್ಟ ರಸ್ತೆಯ ಜಿ ನೆಟ್ ಅನ್ನೊ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಕೆಲಸ ಬಿಟ್ಟು ಫಣೀಂದ್ರ ಪ್ರತ್ಯೇಕವಾಗಿ ಕಂಪನಿ ತೆರೆದಿದ್ದರು. ಅಲ್ಲಿಯೇ ವಿನುಕುಮಾರ್‌ ಸಿಇಒ ಆಗಿ ನೇಮಕವಾಗಿದ್ದರು. ಇದರಿಂದ ಹಳೇ ಸಂಸ್ಥೆಗೆ ನಷ್ಟವಾಗಿದೆ ಅಂತಾ ಫೆಲಿಕ್ಸ್‌ ಸ್ಕೆಚ್‌ ಹಾಕಿ ಕೊಲೆ ಮಾಡಿದ್ದಾನೆ ಅನ್ನೋದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಇದನ್ನೂ ಓದಿ: ಜೈನಮುನಿ ಹತ್ಯೆ ಕೇಸ್ ತನಿಖೆ ಚುರುಕು- 7 ದಿನ ಹಂತಕರು ಪೊಲೀಸ್ ಕಸ್ಟಡಿಗೆ

    ಟಿಕ್‌ಟಾಕ್‌ ಸ್ಟಾರ್‌ ಆಗಿ ಫೇಮಸ್‌ ಆಗಿದ್ದ ಫೆಲಿಕ್ಸ್‌ ಅಲಿಯಾಸ್‌ ಜೋಕರ್‌ ಫೆಲಿಕ್ಸ್‌ ಕೊಲೆ ಮಾಡುವುದಕ್ಕೂ ಮುನ್ನ ಸ್ಟೇಟಸ್‌ ಹಾಕಿದ್ದಾನೆ. ʻಪ್ರಪಂಚದಲ್ಲಿ ನಂಬಿಕೆ ದ್ರೋಹಿಗಳು ಹೆಚ್ಚಾಗಿದ್ದಾರೆ. ದ್ರೋಹಿಗಳನ್ನ ಗಾಯ ಪಡಿಸುತ್ತೇನೆ, ಕೆಟ್ಟ ವ್ಯಕ್ತಿಗಳನ್ನ ಹರ್ಟ್ ಮಾಡುತ್ತೇನೆ. ಒಳ್ಳೆ ವ್ಯಕ್ತಿಗಳನ್ನ ಹರ್ಟ್ ಮಾಡೋದಿಲ್ಲʼ ಅಂತಾ ಸ್ಟೇಟಸ್ ಹಾಕಿದ್ದಾನೆ.

    ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡಿರೋ ಅಮೃತಹಳ್ಳಿ ಪೊಲೀಸರು ತಲೆ‌ಮರೆಸಿಕೊಂಡಿರೋ ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರಿನಲ್ಲಿ ಹಾಡಹಗಲೇ ಡಬಲ್ ಮರ್ಡರ್!

    ಬೆಂಗಳೂರಿನಲ್ಲಿ ಹಾಡಹಗಲೇ ಡಬಲ್ ಮರ್ಡರ್!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಾಡ ಹಗಲೇ ಡಬಲ್ ಮರ್ಡರ್ (Double Murder) ನಡೆದಿದ್ದು, ಜನರನ್ನ ಬೆಚ್ಚಿ ಬೀಳಿಸಿದೆ.

    ಏರೋನಿಕ್ಸ್ ಇಂಟರ್ನೆಟ್ ಕಂಪನಿಯ (Aeronics Internet Company) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಇಬ್ಬರನ್ನೂ ಹತ್ಯೆಗೈದಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿ ಠಾಣಾ (Amruthahalli Police) ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಕರೆಂಟ್ ಶಾಕ್ ಕೊಟ್ಟರೂ ಸ್ವಾಮೀಜಿ ಪ್ರಾಣ ಪಕ್ಷಿ ಹಾರಿ ಹೋಗಿರಲಿಲ್ಲ – ಎಫ್‌ಐಆರ್‌ನಲ್ಲಿ ಸ್ಫೋಟಕ ರಹಸ್ಯ ಬಯಲು

    ಏರೋನಿಕ್ಸ್ ಇಂಟರ್ನೆಟ್ ಕಂಪನಿಯ ಎಂಡಿ ಫಣೀಂದ್ರ ಸುಬ್ರಮಣ್ಯ, ಸಿಇಒ ವಿನು ಕುಮಾರ್ ಮೃತ ದುರ್ದೈವಿಗಳು. ಕಂಪನಿಯ ಮಾಜಿ ಉದ್ಯೋಗಿ ಫೆಲಿಕ್ಸ್ ಎಂಬಾತನೇ ಕೊಲೆ ಆರೋಪಿ. ಇದನ್ನೂ ಓದಿ: ಬಂಗಾಳ ಪಂಚಾಯತ್ ಚುನಾವಣೆ ಮತ ಎಣಿಕೆ ವೇಳೆ ಮತ್ತೆ ಘರ್ಷಣೆ – ಕಚ್ಚಾಬಾಂಬ್ ಸ್ಫೋಟ

    ಏರೋನಿಕ್ಸ್ ಸಂಸ್ಥೆಯ ಮಾಜಿ ಉದ್ಯೋಗಿ ಫೆಲಿಕ್ಸ್ ಕೆಲಸ ಬಿಟ್ಟು ಸ್ವಂತ ಕಂಪನಿ ಆರಂಭಿಸಿದ್ದ. ಆದ್ರೆ ತನ್ನ ಉದ್ಯಮಕ್ಕೆ ಫಣೀಂದ್ರ ಎದುರಾಳಿಯಾಗಿದ್ದರಿಂದ ಆತನನ್ನೇ ಮುಗಿಸಲು ಸ್ಕೆಚ್ ಹಾಕಿದ್ದ. ಅದರಂತೆ ಮಂಗಳವಾರ ಸಂಜೆ 4 ಗಂಟೆ ವೇಳೆಗೆ ಇನ್ನೂ ಇಬ್ಬರೊಂದಿಗೆ ಕಂಪನಿಗೆ ಎಂಟ್ರಿ ಕೊಟ್ಟ ಫೆಲಿಕ್ಸ್, ತಲ್ವಾರ್ ಮತ್ತು ಚಾಕುವಿನಿಂದ ಫಣೀಂದ್ರ ಹಾಗೂ ವಿನು ಕುಮಾರ್ ಮೇಲೆ ದಾಳಿ ಮಾಡಿದ್ದಾರೆ. ದಾಳಿ ಬಳಿಕ ಮೂವರು ಹಂತಕರು ಕಟ್ಟಡದ ಹಿಂಭಾಗದ ಕಾಂಪೌಂಡ್ ಹಾರಿ ಎಸ್ಕೇಪ್ ಆಗಿದ್ದಾರೆ.

    ಸದ್ಯ ಸ್ಥಳ ಪರಿಶೀಲನೆ ನಡೆಸುತ್ತಿರುವ ಅಮೃತಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]