Tag: amruthadaare serial

  • ದುಬೈ ಮರಳುಗಾಡಿನಲ್ಲಿ ನಟಿ ಫೋಟೋಶೂಟ್- ಬಾಲಿವುಡ್ ಬ್ಯೂಟಿಯಂತೆ ಮಿಂಚಿದ ಇಶಿತಾ

    ದುಬೈ ಮರಳುಗಾಡಿನಲ್ಲಿ ನಟಿ ಫೋಟೋಶೂಟ್- ಬಾಲಿವುಡ್ ಬ್ಯೂಟಿಯಂತೆ ಮಿಂಚಿದ ಇಶಿತಾ

    ನಪ್ರಿಯ ‘ಅಮೃತಧಾರೆ’ (Amruthadaare) ಸೀರಿಯಲ್ ನಟಿ ಇಶಿತಾ ವರ್ಷ (Ishita Varsha) ದುಬೈ ಮರಳುಗಾಡಿನಲ್ಲಿ ಅದ್ಧೂರಿಯಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಬಾಲಿವುಡ್ ಬ್ಯೂಟಿಯಂತೆ ಕಂಗೊಳಿಸಿದ ನಟಿಯ ಕಂಡು ಫ್ಯಾನ್ಸ್ ಬೆರಗಾಗಿದ್ದಾರೆ. ಇದನ್ನೂ ಓದಿ:ರೀಲ್ಸ್ ವಿವಾದ: ನಮಗೆ ಪೊಲೀಸರ ದಿಕ್ಕು ತಪ್ಪಿಸೋ ಉದ್ದೇಶವಿಲ್ಲ ಎಂದ ವಿನಯ್ ಗೌಡ

    ಸದಾ ಒಂದಲ್ಲಾ ಒಂದು ಶೈಲಿಯಲ್ಲಿ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸೋ ಇಶಿತಾ ಇದೀಗ ದುಬೈಗೆ (Dubai) ಹಾರಿದ್ದಾರೆ. ಅಲ್ಲಿ ಮರುಳುಗಾಡಿನಲ್ಲಿ ನಿಂತು ವಿವಿಧ ಭಂಗಿಯಲ್ಲಿ ಫೋಟೋಶೂಟ್‌ ಮಾಡಿಸಿದ್ದಾರೆ. ರೆಡ್ ಕಲರ್ ಡ್ರೆಸ್ ಧರಿಸಿ ಬಾಲಿವುಡ್ ಬ್ಯೂಟಿಯಂತೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

    ಸ್ಟಾರ್ ನಟಿಯರನ್ನೇ ಸೆಡ್ಡು ಹೊಡೆಯುವಂತೆ ಇಶಿತಾ ನಯಾ ಫೋಟೋಶೂಟ್ ಮಾಡಿಸಿ ಗಮನ ಸೆಳೆದಿದ್ದಾರೆ. ಬಳುವ ಬಳ್ಳಿಯಂತೆ ಮಿಂಚಿರೋ ಇಶಿತಾರನ್ನು ಕಂಡು ಪಡ್ಡೆಹುಡುಗರು ಖುಷಿಪಟ್ಟಿದ್ದಾರೆ. ಇದನ್ನೂ ಓದಿ:ರೀಲ್ಸ್ ಮಾಡಿದ ಜಾಗದಲ್ಲಿ ವಿನಯ್‌, ರಜತ್‌ರನ್ನು ಸ್ಥಳ ಮಹಜರಿಗೆ ಕರೆತಂದ ಪೊಲೀಸರು

    ‘ಅಗ್ನಿಸಾಕ್ಷಿ’ ಸೀರಿಯಲ್‌ನಲ್ಲಿ ಮಾಯಾ ಪಾತ್ರಧಾರಿಯಾಗಿ ಸತತ 7 ವರ್ಷಗಳ ಕಾಲ ರಂಜಿಸಿದರು. ಇಂದಿಗೂ ಅವರ ಪಾತ್ರವನ್ನು ಜನರು ಸ್ಮರಿಸುತ್ತಾರೆ. ಅಷ್ಟರ ಮಟ್ಟಿಗೆ ಈ ಸೀರಿಯಲ್ ಸೂಪರ್ ಹಿಟ್ ಆಗಿತ್ತು.

    ಪ್ರಸ್ತುತ ‘ಅಮೃತಧಾರೆ’ ಸೀರಿಯಲ್‌ನಲ್ಲಿ ಗೌತಮ್ ದಿವಾನ್ ತಂಗಿಯಾಗಿ ಇಶಿತಾ ನಟಿಸುತ್ತಿದ್ದಾರೆ. ರೀಪ್ಲೇಸ್‌ಮೆಂಟ್ ಪಾತ್ರಕ್ಕೆ ಅವರು ಎಂಟ್ರಿ ಕೊಟ್ಟಿದ್ರೂ ಕೂಡ ಅದ್ಭುತವಾಗಿ ನಟಿಸುತ್ತಿದ್ದಾರೆ. ಅವರ ನಟನೆ ಮತ್ತೆ ಪ್ರೇಕ್ಷಕರ ಮನಗೆದ್ದಿದೆ.

    ನೃತ್ಯ ಸಂಯೋಜಕ ಮುರುಗಾನಂದ ಜೊತೆ ಇಶಿತಾ ಮದುವೆ ಆಗಿದ್ದಾರೆ. ಅವರ ಕೂಡ ಬಣ್ಣದ ಲೋಕದಲ್ಲಿ ಸ್ಟಾರ್ ನಟರ ಸಿನಿಮಾಗಳಿಗೆ ಕೆಲಸ ಮಾಡ್ತಿರೋದ್ರಿಂದ ಪತ್ನಿಯ ಕೆರಿಯರ್‌ಗೆ ಪ್ರೋತ್ಸಾಹಿಸುತ್ತಿದ್ದಾರೆ.

  • ಅಮೃತಧಾರೆ ಸೀರಿಯಲ್‌ಗೆ ‘ಕಾಂತಾರ’ ನಟಿ ಎಂಟ್ರಿ

    ಅಮೃತಧಾರೆ ಸೀರಿಯಲ್‌ಗೆ ‘ಕಾಂತಾರ’ ನಟಿ ಎಂಟ್ರಿ

    ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ‘ಕಾಂತಾರ’ (Kantara) ಬ್ಯೂಟಿ ಸಪ್ತಮಿ ಗೌಡ (Saptami Gowda) ಅವರು ಟಿವಿ ಪ್ರೇಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸಪ್ತಮಿ ಇದೀಗ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗಾದ್ರೆ ಸಿನಿಮಾ ಬಿಟ್ಟು ಸೀರಿಯಲ್‌ಗೆ ಎಂಟ್ರಿ ಕೊಟ್ರಾ? ಅಂತ ನೀವು ಅಂದುಕೊಂಡಿರಬಹುದು. ಆದರೆ ಅಸಲಿ ವಿಚಾರ ಬೇರೆ ಇದೆ.

    ರಿಷಬ್ ಶೆಟ್ಟಿ (Rishab Shetty) ಅವರಿಗೆ ನಾಯಕಿಯಾಗಿ ‘ಕಾಂತಾರ’ ಮೂಲಕ ಸಕ್ಸಸ್ ಕಂಡ ನಟಿ ಸಪ್ತಮಿ ಇದೀಗ ಬಹುಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಇದರ ನಡುವೆ ಕಿರುತೆರೆಗೆ ಸಪ್ತಮಿ ಹಾಜರಿ ಹಾಕಿದ್ದಾರೆ. ಇತ್ತೀಚೆಗೆ ‘ಶ್ರೀರಸ್ತು ಶುಭಮಸ್ತು’ ಸೀರಿಯಲ್‌ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ಜನಪ್ರಿಯ ‘ಅಮೃತಧಾರೆ’ ಸೀರಿಯಲ್‌ನಲ್ಲಿ ಸಪ್ತಮಿ ಕಾಣಿಸಿಕೊಂಡಿದ್ದಾರೆ.

    ಸೀರಿಯಲ್ ಪ್ರಚಾರಕ್ಕೆ ಸಪ್ತಮಿ ಬಂದಿದ್ದಾರೆ. ಈ ಹಿಂದೆ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯ ಪಾತ್ರಗಳ ನಿರೂಪಣೆ ಮಾಡಿದ್ದರು. ಈಗ ಅದೇ ರೀತಿ ‘ಅಮೃತಧಾರೆ’ (Amruthadaare) ಸೀರಿಯಲ್ ನಿರೂಪಣೆ ಮಾಡಿದ್ದಾರೆ. ತಂಗಿ ಅಪೇಕ್ಷಾ ಮದುವೆಯಲ್ಲಿ ನಡೆಯುತ್ತಿರುವ ಮೋಸದಾಟದ ವಿರುದ್ಧ ನಾಯಕಿ ಭೂಮಿಕಾ (ನಟಿ ಛಾಯಾ ಸಿಂಗ್) ತಿರುಗಿ ಬೀಳುತ್ತಾರೆ. ಖಳನಾಯಕ ಜಯದೇವ್ ಕಳ್ಳಾಟವನ್ನು ನಾಯಕಿ ಬಯಲು ಮಾಡುತ್ತಾರೆ. ಮುಂದೆ ಏನಾಗುತ್ತೆ ಎಂಬುದೇ ಟ್ವಿಸ್ಟ್. ಇದನ್ನು ಸಪ್ತಮಿ ನಿರೂಪಣೆ ಮಾಡುವ ಮೂಲಕ ಸೀರಿಯಲ್ ಕುರಿತು ಮತ್ತಷ್ಟು ಕುತೂಹಲ ಮೂಡುವಂತೆ ಮಾಡಿದ್ದಾರೆ. ಸದ್ಯ ರಿವೀಲ್ ಆಗಿರೋ ಸಪ್ತಮಿ ಪ್ರೋಮೋ ಸದ್ದು ಮಾಡುತ್ತಿದೆ.

    ‘ಕಾಂತಾರ’ (Kantara) ಚಿತ್ರದ ಸಕ್ಸಸ್ ಅನ್ನು ನಟಿ ಸದುಪಯೋಗಪಡಿಸಿಕೊಂಡಿದ್ದಾರೆ. ಕನ್ನಡದ ಜೊತೆ ಜೊತೆಗೆ ಬಾಲಿವುಡ್ ಸಿನಿಮಾಗಳಲ್ಲಿ ಸಪ್ತಮಿ ಬ್ಯುಸಿಯಾಗಿದ್ದಾರೆ. ಟಾಲಿವುಡ್‌ನಲ್ಲಿಯೂ ಕನ್ನಡದ ಬೆಡಗಿಗೆ ಸಖತ್ ಬೇಡಿಕೆಯಿದೆ.

    ತೆಲುಗು ಅಂಗಳದಲ್ಲಿ ಮೊದಲೇ ಕನ್ನಡತಿಯರ ದರ್ಬಾರ್ ಜಾಸ್ತಿಯಾಗಿದೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾ, ರುಕ್ಮಿಣಿ ವಸಂತ್ ಮಧ್ಯೆ ಸಪ್ತಮಿ ಕೂಡ ತಮ್ಮ ಚಾರ್ಮ್ ಉಳಿಸಿಕೊಂಡಿದ್ದಾರೆ. ಅಳೆದು ತೂಗಿ ಸಿನಿಮಾ ಒಪ್ಪಿಕೊಳ್ತಿದ್ದಾರೆ.

  • ಮಂತ್ರಾಲಯಕ್ಕೆ ಭೇಟಿ ನೀಡಿದ ‘ಅಮೃತಧಾರೆ’ ನಟಿ ಸಾರಾ ಅಣ್ಣಯ್ಯ

    ಮಂತ್ರಾಲಯಕ್ಕೆ ಭೇಟಿ ನೀಡಿದ ‘ಅಮೃತಧಾರೆ’ ನಟಿ ಸಾರಾ ಅಣ್ಣಯ್ಯ

    ಕಿರುತೆರೆಯ ಜನಪ್ರಿಯ ‘ಕನ್ನಡತಿ’ (Kannadati) ಸೀರಿಯಲ್ ಮೂಲಕ ಗಮನ ಸೆಳೆದ ನಟಿ ಸಾರಾ ಅಣ್ಣಯ್ಯ (Sara Annaiah) ಅವರು ಮಂತ್ರಾಲಯಕ್ಕೆ (Mantralaya)  ಭೇಟಿ ನೀಡಿದ್ದಾರೆ. ವಿಶೇಷ ಪೂಜೆ ಸಲ್ಲಿಸಿ, ರಾಯರ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ:ಮೈಸೂರಿಗೆ ಬಂದಿಳಿದ ನಟ ಉಸ್ತಾದ್ ರಾಮ್ ಪೋತಿನೇನಿ

    ‘ಕನ್ನಡತಿ’ ಸೀರಿಯಲ್‌ನ ವರುಧಿನಿ ಆಗಿ ಸೈ ಎನಿಸಿಕೊಂಡಿದ್ದ ನಟಿ ಸಾರಾ ಅವರು ಇತ್ತೀಚಿಗೆ ‘ನಮ್ಮ ಲಚ್ಚಿ’ (Namma Lacchi) ಎಂಬ ಸೀರಿಯಲ್‌ನಲ್ಲಿ ಖಳನಾಯಕಿಯಾಗಿ ನಟಿಸುತ್ತಿದ್ದರು. ಆದರೆ ಸಡನ್ ಆಗಿ ಈ ಸೀರಿಯಲ್‌ನಿಂದ ಹೊರಬಂದರು. ಈ ಬೆನ್ನಲ್ಲೇ ಹೊಸ ಧಾರಾವಾಹಿ ‘ಅಮೃತಧಾರೆ’ಯ (Amruthadaare) ಮಹಿಮ ಪಾತ್ರಕ್ಕೆ ಸಾರಾ ಜೀವ ತುಂಬುತ್ತಿದ್ದಾರೆ.

    ಸದ್ಯ ವೆಸ್ಟರ್ನ್ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೂರ್ಗ್ ಬ್ಯೂಟಿ ಸಾರಾ ಅಣ್ಣಯ್ಯ ಅವರು ಇದೀಗ ಟ್ರೆಡಿಷನಲ್ ಆಗಿ ಸೀರೆಯುಟ್ಟು ಮಂತ್ರಾಲಯಕ್ಕೆ ಭೇಟಿ ನೀಡಿ, ರಾಯರ ದರ್ಶನ ಪಡೆದಿದ್ದಾರೆ. ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಸದಾ ತುಂಡು ಬಟ್ಟೆಗಳನ್ನ ತೊಡುತ್ತಿದ್ದ ನಟಿ ಸಾರಾ ಈಗೀನ ಲುಕ್‌ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಹೀಗೆ ಟ್ರೆಡಿಷನಲ್ ಬಟ್ಟೆಗಳನ್ನ ಧರಿಸಿ ಎಷ್ಟು ಚೆಂದ ಕಾಣ್ತೀರಾ ಅಂತಾ ಮನವಿ ಮಾಡಿದ್ದಾರೆ.