Tag: amrutha prem

  • ಚಿತ್ರರಂಗದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿಗೆ ಬೇಡಿಕೆ- ನಟಿಗೆ ಬಿಗ್ ಚಾನ್ಸ್

    ಚಿತ್ರರಂಗದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿಗೆ ಬೇಡಿಕೆ- ನಟಿಗೆ ಬಿಗ್ ಚಾನ್ಸ್

    ‘ಟಗರು ಪಲ್ಯ’ (Tagaru Palya) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದ ಲವ್ಲಿ ಸ್ಟಾರ್ ಪ್ರೇಮ್ (Lovely Star Prem) ಪುತ್ರಿ ಅಮೃತಾಗೆ ಬಿಗ್ ಚಾನ್ಸ್‌ವೊಂದು ಸಿಕ್ಕಿದೆ. ಮೊದಲ ಸಿನಿಮಾದಲ್ಲೇ ಗಮನ ಸೆಳೆದಿದ್ದ ನಟಿ ಈಗ ಧೀರೆನ್ ರಾಜ್‌ಕುಮಾರ್‌ಗೆ (Dheeren Rajkumar) ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ:ಆಪರೇಷನ್ ಸಿಂಧೂರ: ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸುವ ನಮ್ಮ ಸೈನಿಕರಿಗೆ ಥ್ಯಾಂಕ್ಯೂ ಎಂದ ರಶ್ಮಿಕಾ ಮಂದಣ್ಣ

    ಚಿತ್ರರಂಗದಲ್ಲಿ ಅಮೃತಾಗೆ ಬೇಡಿಕೆ ಹೆಚ್ಚಾಗಿದೆ. ‘ಟಗರು ಪಲ್ಯ’ ಚಿತ್ರದ ಬಳಿಕ ‘ಅರಸು’ ಖ್ಯಾತಿಯ ನಿರ್ದೇಶಕ ಮಹೇಶ್ ಬಾಬು ನಿರ್ದೇಶನದ ‘ಅಮ್ಮು’ ಚಿತ್ರಕ್ಕೆ ಆಯ್ಕೆಯಾಗಿದ್ದರು. ಈ ಬೆನ್ನಲ್ಲೇ ದೊಡ್ಮನೆ ಕುಡಿ ಧೀರೆನ್‌ಗೆ ಹೀರೋಯಿನ್ ಆಗಿ ನಟಿಸುವ ಅವಕಾಶ ಸಿಕ್ಕಿದೆ. ಧೀರೆನ್ ನಟನೆಯ ‘ಪಬ್ಬಾರ್’ ಸಿನಿಮಾದಲ್ಲಿ ಅವರು ನಟಿಸಲಿದ್ದಾರೆ. ಮೇ 7ರಂದು ಅದ್ಧೂರಿಯಾಗಿ ಸಿನಿಮಾಗೆ ಚಾಲನೆ ನೀಡಲಾಗಿದೆ. ಇದನ್ನೂ ಓದಿ: 12 ವರ್ಷಗಳ ಪ್ರೀತಿ- ಮೇ 9ರಂದು ಚೈತ್ರಾ ಕುಂದಾಪುರ ಮದುವೆ

    ಸಂದೀಪ್ ಸುಂಕದ್ ನಿರ್ದೇಶನದ, ಧೀರೆನ್ ಮತ್ತು ಅಮೃತಾ ನಟನೆಯ ಚಿತ್ರಕ್ಕೆ ‘ಪಬ್ಬಾರ್’ ಎಂಬ ವಿಭಿನ್ನ ಟೈಟಲ್ ಇಡಲಾಗಿದೆ. ಇದೊಂದು ಕ್ರೈಮ್ ಹಾಗೂ ಥ್ರಿಲ್ಲರ್ ಒಳಗೊಂಡಿರುವ ಚಿತ್ರವಾಗಿದೆ. ಹಿಮಾಚಲ ಪ್ರದೇಶದ ಶಿಮ್ಲಾ ಬಳಿಯ ಪಬ್ಬಾರ್ ನದಿ ಕಣಿವೆ ಇದೆ. ಚಿತ್ರದ ಕಥೆಗೂ ಈ ಜಾಗಕ್ಕೂ ಲಿಂಕ್ ಇದೆ. ಆ ಜಾಗವೇ ಚಿತ್ರದ ಕಥೆಯ ಕೇಂದ್ರಬಿಂದು. ಮೊದಲಿಗೆ ಮಡಿಕೇರಿಯಲ್ಲಿ ಚಿತ್ರೀಕರಣ ಆರಂಭಿಸಿ ಬಳಿಕ ಪಬ್ಬರ್ ಕಣಿವೆಗೆ ಹೋಗಿ ದೃಶ್ಯಗಳನ್ನು ಸೆರೆ ಹಿಡಿಯಲು ಚಿತ್ರತಂಡ ತೀರ್ಮಾನಿಸಿದೆ. ಮೇ 15ರಿಂದ ಶೂಟಿಂಗ್ ಶುರುವಾಗಲಿದೆ.

    ಸ್ಟೈಲ್ ಗುರು ರಕ್ಷಿತ್ ಜೊತೆ ಅಮ್ಮು ಚಿತ್ರ, ಧೀರೆನ್ ಜೊತೆ ‘ಪಬ್ಬರ್’ ಈ ಎರಡು ಸಿನಿಮಾಗಳ ಮೂಲಕ ಅಮೃತಾ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈ 2 ಚಿತ್ರಗಳು ಅವರ ಕೈ ಹಿಡಿಯುತ್ತಾ? ಎಂದು ಕಾದುನೋಡಬೇಕಿದೆ.

  • ‘ಟಗರು ಪಲ್ಯ’ ಚಿತ್ರದ ನಂತರ ಅಮೃತಾ ಪ್ರೇಮ್ ಏನ್ಮಾಡ್ತಿದ್ದಾರೆ?

    ‘ಟಗರು ಪಲ್ಯ’ ಚಿತ್ರದ ನಂತರ ಅಮೃತಾ ಪ್ರೇಮ್ ಏನ್ಮಾಡ್ತಿದ್ದಾರೆ?

    ‘ಟಗರು ಪಲ್ಯ’ (Tagaru Palya) ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟ ಅಮೃತಾ ಪ್ರೇಮ್ (Amrutha Prem) ಸೈಲೆಂಟ್‌ ಆಗಿದ್ದಾರೆ.  ಮೊದಲ ಚಿತ್ರದಲ್ಲೇ ಅಮೃತಾ ನಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಚೊಚ್ಚಲ ಚಿತ್ರ ಸಕ್ಸಸ್ ಕಂಡ ಮೇಲೆ ಮುಂದಿನ ಸಿನಿಮಾ ಯಾವುದು ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದರು. ಈಗ ಅದಕ್ಕೆ ಉತ್ತರ ಸಿಕ್ಕಿದೆ.

    ಡಾಲಿ ಧನಂಜಯ್ (Daali Dhananjay) ನಿರ್ಮಾಣದ ಸಿನಿಮಾದಲ್ಲಿ ನಾಗಭೂಷಣ್‌ಗೆ ನಾಯಕಿಯಾಗಿ ಅಮೃತಾ ಸೈ ಎನಿಸಿಕೊಂಡಿದ್ದರು. ಟಗರು ಪಲ್ಯ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸಕ್ಸಸ್ ಕಂಡಿತ್ತು. ಸಿನಿಮಾಗೆ ಹಾಕಿದ ಬಂಡವಾಳ ನಿರ್ಮಾಪಕರಿಗೆ ದಕ್ಕಿತ್ತು. ಈ ಚಿತ್ರದ ಮೂಲಕ ಭರವಸೆಯ ನಟಿಯಾಗಿ ಅಮೃತಾ ಹೊರಹೊಮ್ಮಿದ್ದರು. ಇದನ್ನೂ ಓದಿ:ಕನ್ನಡಕ್ಕೆ ಎಂಟ್ರಿ ಕೊಟ್ಟ ದಕ್ಷಿಣ ಭಾರತದ ನಟಿ ಐಶ್ವರ್ಯ ರಾಜೇಶ್

    ಪುತ್ರಿಯ ಮೊದಲ ಸಿನಿಮಾಗೆ ಪ್ರೇಮ್ (Lovely Star Prem) ಬೆನ್ನಿಗೆ ನಿಂತು ಪ್ರೋತ್ಸಾಹ ನೀಡಿದ್ದರು. ಟಗರು ಪಲ್ಯ ಸಿನಿಮಾ ಹಿಟ್‌ ಆದ್ಮೇಲೆ ಅಮೃತಾ ಸುಮ್ಮನೆ ಕೂತಿಲ್ಲ. ಹೊಸ ಬಗೆಯ ಕಥೆಗಳನ್ನು ಕೇಳುತ್ತಿದ್ದಾರೆ. ಒಂದಿಷ್ಟು ಕಥೆಗಳನ್ನು ಫೈನಲ್ ಮಾಡಿದ್ದಾರೆ. ಸದ್ಯದಲ್ಲೇ ಚಿತ್ರದ ಬಗ್ಗೆ ಅಧಿಕೃತ ಮಾಹಿತಿ ನೀಡಲಿದ್ದಾರೆ.

    ಸಿನಿಮಾಗಳಲ್ಲಿ ಮತ್ತಷ್ಟು ಫಿಟ್ ಆಗಿ ಕಾಣಬೇಕು ಅಂತ ಅಮೃತಾ ಜಿಮ್‌ನಲ್ಲಿ ಬೆವರಿಳಿಸುತ್ತಿದ್ದಾರೆ. ಸಿನಿಮಾಗಾಗಿ ತಯಾರಿ ಅಂತ ನಟಿ ಬ್ಯುಸಿಯಾಗಿದ್ದಾರೆ.

  • ಸೀರೆಯುಟ್ಟು ಯುವರಾಣಿಯಂತೆ ಮಿಂಚಿದ ‘ನೆನಪಿರಲಿ’ ಪ್ರೇಮ್ ಪುತ್ರಿ

    ಸೀರೆಯುಟ್ಟು ಯುವರಾಣಿಯಂತೆ ಮಿಂಚಿದ ‘ನೆನಪಿರಲಿ’ ಪ್ರೇಮ್ ಪುತ್ರಿ

    ನ್ನಡ ಚಿತ್ರರಂಗದ ಯಂಗ್ ಹೀರೋ ನೆನಪಿರಲಿ ಪ್ರೇಮ್ (Nenapirali Prem) ಪುತ್ರಿ ಅಮೃತಾ (Amrutha Prem) ಅವರು ನಟನಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಮೇಲೆ ಸದಾ ಒಂದಲ್ಲಾ ಒಂದು ಸುದ್ದಿಯ ಮೂಲಕ ಹೈಲೆಟ್ ಆಗುತ್ತಲೇ ಇರುತ್ತಾರೆ. ಈಗ ಚೆಂದದೊಂದು ಫೋಟೋಶೂಟ್ ಮಾಡಿಸುವ ಮೂಲಕ ಇಂಟರ್‌ನೆಟ್‌ನಲ್ಲಿ ನಟಿ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಇದನ್ನೂ ಓದಿ:ಯಶ್‌ಗೂ ಮುನ್ನ ಹೊಸ ಸಿನಿಮಾ ಅನೌನ್ಸ್ ಮಾಡಿದ ಶ್ರೀನಿಧಿ ಶೆಟ್ಟಿ

    ನವರಾತ್ರಿ ಹಬ್ಬದ (Navaratri Festival) ಅಂಗವಾಗಿ ಮುದ್ದಾದ ಫೋಟೋಶೂಟ್‌ವೊಂದನ್ನ ಅಮೃತಾ ಪ್ರೇಮ್ ಮಾಡಿಸಿದ್ದಾರೆ. ಲೈಟ್ ಬಣ್ಣ ಸೀರೆಯುಟ್ಟು ಯುವರಾಣಿಯಂತೆ ಅಮೃತಾ ಮಿಂಚಿದ್ದಾರೆ. ಕ್ಯಾಮೆರಾ ಕಣ್ಣಿಗೆ ಮುದ್ದಾದ ನಗೆ ಬೀರುತ್ತ ಮಸ್ತ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

    ಅಮೃತಾ ಅವರ ನಯಾ ಲುಕ್ ನೋಡಿ ಸೀರೆಯಲ್ಲಿ ಹುಡುಗಿರ ನೋಡಲೇಬಾರದು, ನಿಲ್ಲೋಲ್ಲ ಟೆಂಪ್ರೆಚರೂ ಎಂದು ಹಾಡಲು ಶುರು ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟಿಯ ಫೋಟೋಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.

    ಲವ್ಲಿ ಸ್ಟಾರ್ ಪ್ರೇಮ್ ಅವರು ‘ನೆನಪಿರಲಿ’ (Nenapirali) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದರು. ಬಣ್ಣದ ಲೋಕಕ್ಕೆ ಬಂದು 26 ವರ್ಷಗಳು ಕಳೆದರೂ ಪ್ರೇಮ್ ಅವರು ಚಾರ್ಮ್ ಕಳೆದುಕೊಂಡಿಲ್ಲ. ಇಂದಿಗೂ ಅವರ ಸಿನಿಮಾ ನೋಡಲು ಫ್ಯಾನ್ಸ್ ಎದುರು ನೋಡ್ತಾರೆ. ಈಗ ಅವರ ಪುತ್ರಿ ಅಮೃತಾ ಕೂಡ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

    ‘ಟಗರು ಪಲ್ಯ’ ಚಿತ್ರದ ಮೂಲಕ ನಾಗಭೂಷಣ್‌ಗೆ ಅಮೃತಾ ಹೀರೋಯಿನ್ ಆಗಿದ್ದಾರೆ. ಸದ್ಯದಲ್ಲೇ ಚಿತ್ರ ರಿಲೀಸ್ ಆಗಲಿದೆ. ಮೊದಲ ಚಿತ್ರದಲ್ಲೇ ಗಮನ ಸೆಳೆಯೋದ್ರಲ್ಲಿ ಯಶಸ್ವಿಯಾಗುತ್ತಾರಾ? ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಗಭೂಷಣ್, ಅಮೃತಾ ನಟನೆಯ ‘ಟಗರು ಪಲ್ಯ’ ಟೈಟಲ್ ಟ್ರ‍್ಯಾಕ್ ರಿಲೀಸ್

    ನಾಗಭೂಷಣ್, ಅಮೃತಾ ನಟನೆಯ ‘ಟಗರು ಪಲ್ಯ’ ಟೈಟಲ್ ಟ್ರ‍್ಯಾಕ್ ರಿಲೀಸ್

    ಕ್ಕಟ್, ಬಡವ ರಾಸ್ಕಲ್ (Badava Rascal) ಸಿನಿಮಾಗಳ ಖ್ಯಾತಿಯ ಪ್ರತಿಭಾನ್ವಿತ ಕಲಾವಿದ ನಾಗಭೂಷಣ್ (Nagabhushan) ಅವರಿಗಿಂದು ಜನ್ಮದಿನದ ಸಂಭ್ರಮ. ಅವರ ಹುಟ್ಟುಹಬ್ಬದ ಸ್ಪೆಷಲ್ ಆಗಿ ‘ಟಗರು ಪಲ್ಯ’ (Tagaru Palya) ಸಿನಿಮಾ ಬಳಗದಿಂದ ವಿಶೇಷ ಉಡುಗೊರೆ ಸಿಕ್ಕಿದೆ. ಡಾಲಿ ಧನಂಜಯ್ (Daali Dhananjay) ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ನಿರ್ಮಿಸುತ್ತಿರುವ ಮೂರನೇ ಚಿತ್ರ ಟಗರು ಪಲ್ಯ ಟೈಟಲ್ ಟ್ರ‍್ಯಾಕ್ ಅನ್ನು ನಾಯಕ ನಾಗಭೂಷಣ್ ಬರ್ತ್‌ಡೇ ಅಂಗವಾಗಿ ಬಿಡುಗಡೆ ಮಾಡಲಾಗಿದೆ. ಧನಂಜಯ್ ಕ್ಯಾಚಿ ಮ್ಯಾಚಿ ಪದಗಳನ್ನು ಸೇರಿಸಿ ಸಾಹಿತ್ಯ ರಚಿಸಿದ್ದು, ವಾಸುಕಿ ವೈಭವ್ ಸಂಗೀತ ನೀಡಿದ್ದು, ವಿಜಯ್ ಪ್ರಕಾಶ್ ಹಾಡಿಗೆ ಕಂಠ ಕುಣಿಸಿದ್ದಾರೆ.

    ಯುವ ನಿರ್ದೇಶಕ ಉಮೇಶ್ ಕೆ ಕೃಪಾ ನಿರ್ದೇಶನದ ಚೊಚ್ಚಲ ಚಿತ್ರವಾಗಿರುವ ಟಗರು ಪಲ್ಯ ಮೂಲಕ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ (Amrutha Prem) ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ನಾಗಭೂಷಣ್ ನಾಯಕನಾಗಿ ನಟಿಸಿದ್ದಾರೆ. ಮಂಡ್ಯ ಹಳ್ಳಿಗಳಲ್ಲಿ ನಡೆಯುವ ಆಚರಣೆ ಸುತ್ತಾ ಇಡೀ ಸಿನಿಮಾವನ್ನು ನಿರ್ದೇಶಕ ಉಮೇಶ್ ಕೆ. ಕೃಪಾ ಕಟ್ಟಿಕೊಟ್ಟಿದ್ದಾರೆ. ಇದನ್ನೂ ಓದಿ:ನಿರ್ದೇಶಕನಾದ ‘ಗೊಂಬೆಗಳ ಲವ್’ ಹೀರೋ ಅರುಣ್

    ಹಿರಿಯ ಕಲಾವಿದರಾದ ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾಬಳಗವಿರುವ ಟಗರು ಪಲ್ಯ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಎಸ್ ಕೆ ರಾವ್ ಕ್ಯಾಮೆರಾ ಹಿಡಿದಿದ್ದಾರೆ. ಟೈಟಲ್ ಟ್ರ‍್ಯಾಕ್ ಮೂಲಕ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾವನ್ನು ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ.

    ಮೊದಲ ಬಾರಿಗೆ ಅಮೃತಾ ಪ್ರೇಮ್- ನಾಗಭೂಷಣ್ (Nagabhushan) ಜೋಡಿಯಾಗಿ ಅಭಿನಯಿಸಿರುವ ‘ಟಗರು ಪಲ್ಯ’ (Tagaru Palya) ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಯಿದೆ. ಸಿನಿಮಾಗಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಾಲಿ ಧನಂಜಯ್ ನಿರ್ಮಾಣದ  ‘ಟಗರು ಪಲ್ಯ’ ಸಿ‌ನಿಮಾ ಕಂಪ್ಲೀಟ್

    ಡಾಲಿ ಧನಂಜಯ್ ನಿರ್ಮಾಣದ ‘ಟಗರು ಪಲ್ಯ’ ಸಿ‌ನಿಮಾ ಕಂಪ್ಲೀಟ್

    ಟರಾಕ್ಷಸ ಡಾಲಿ ಧನಂಜಯ್ (Dolly Dhananjay)  ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ನಿರ್ಮಿಸುತ್ತಿರುವ ಸಿನಿಮಾ ಟಗರು ಪಲ್ಯ (Tagaru Palya). ಯೋಗರಾಜ್ ಭಟ್ಟರ ಗರಡಿಯಲ್ಲಿ ಮತ್ತು ಹಲವು ಖ್ಯಾತ ನಿರ್ದೇಶಕರ ಜೊತೆ ನಿರ್ದೇಶನದ ವಿಭಾಗದಲ್ಲಿ ದುಡಿದಿರುವ ಉಮೇಶ್ ಕೆ ಕೃಪ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕಳೆದ‌ ನವೆಂಬರ್ ನಲ್ಲಿ ಸೆಟ್ಟೇರಿದ ಟಗರು ಪಲ್ಯ ಸಿನಿಮಾಗೆ ಕುಂಬಳಕಾಯಿ ಪ್ರಾಪ್ತಿಯಾಗಿದೆ.

    ಮಂಡ್ಯ, ಮಳವಳ್ಳಿ,‌ ಮುತತ್ತಿ ಹಾಗೂ ಶಿಂಶ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲೆಂದು ಹಾಗೂ ಕಂಟೆಂಟ್ ಆಧಾರಿತ ಚಿತ್ರ ನಿರ್ಮಿಸಲು ಧನಂಜಯ್ ಪ್ರಾರಂಭಿಸುವ ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ‌ ಮೂರನೇ ಕೊಡುಗೆ ಈ ಸಿನಿಮಾ. ಇದನ್ನೂ ಓದಿ:ಪಿಎಚ್‌ಡಿ ಪ್ರವೇಶ ಪರೀಕ್ಷೆ ಬರೆದ ನಟಿ ಪವಿತ್ರಾ ಲೋಕೇಶ್

    ಇಕ್ಕಟ್, ಬಡವ ರಾಸ್ಕಲ್ ಸಿನಿಮಾಗಳ ಖ್ಯಾತಿಯ ನಾಗಭೂಷಣ್ (Nagabhushan) ನಾಯಕನಾಗಿ ನಟಿಸುತ್ತಿದ್ದು, ಇವರಿಗೆ ಜೋಡಿ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ (Amrutha Prem) ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಮಂಡ್ಯ ಹಳ್ಳಿಗಳಲ್ಲಿ ನಡೆಯುವ ಆಚರಣೆ ಸುತ್ತಾ ಇಡೀ ಸಿನಿಮಾವನ್ನು ಕಟ್ಟಿಕೊಡಲಾಗಿದೆ.

    ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾಬಳಗವಿರುವ ಟಗರು ಪಲ್ಯ ಸಿನಿಮಾಗೆ ವಾಸುಕಿ ವೈಭವ್ ಟ್ಯೂನ್ ಹಾಕಿದ್ದು, ಎಸ್ ಕೆ ರಾವ್ ಕ್ಯಾಮೆರಾ ಹಿಡಿದಿದ್ದಾರೆ. ಸದ್ಯ ಶೂಟಿಂಗ್ ಮುಗಿಸಿರುವ ಚಿತ್ರ‌ತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

  • ಬೆಚ್ಚಿ ಬೀಳುವಂತಿದೆ ನಟ ಪ್ರೇಮ್‌ ಪುತ್ರಿಯ ಮೊದಲ ಚಿತ್ರದ ಸಂಭಾವನೆ

    ಬೆಚ್ಚಿ ಬೀಳುವಂತಿದೆ ನಟ ಪ್ರೇಮ್‌ ಪುತ್ರಿಯ ಮೊದಲ ಚಿತ್ರದ ಸಂಭಾವನೆ

    ಸ್ಯಾಂಡಲ್‌ವುಡ್‌ಗೆ (Sandalwood) ಇದೀಗ ಸ್ಟಾರ್ ಕಿಡ್‌ಗಳ ಹಾವಳಿ ಜೋರಾಗಿದೆ. `ನೆನಪಿರಲಿ’ ಪ್ರೇಮ್ (Nenapirali Prem) ಅವರ ಮುದ್ದು ಮಗಳು ಚಂದನವನಕ್ಕೆ ಪಾದಾರ್ಪಣೆ ಮಾಡ್ತಿದ್ದಾರೆ. ಮೊದಲ ಸಿನಿಮಾದಲ್ಲೇ ಯುವ ನಟಿಯ ಸಂಭಾವನೆ ಕೇಳಿದ್ರೆ ನಿಜಕ್ಕೂ ನೀವು ಅಚ್ಚರಿಪಡ್ತೀರಾ.

    ಗಾಂಧಿನಗರದಲ್ಲಿ ಇದೀಗ ಮುದ್ದು ಕಲಾವಿದೆಯ ಪಾದಾರ್ಪಣೆಯಾಗುತ್ತಿದೆ. ಡಾಲಿ ನಿರ್ಮಾಣದ `ಟಗರು ಪಲ್ಯ’ (Tagaru Palya) ಚಿತ್ರದ ಮೂಲಕ ನೆನಪಿರಲಿ ಪ್ರೇಮ್ ಮಗಳು ಅಮೃತಾ (Amrutha Prem) ನಟ ನಾಗಭೂಷಣಗೆ ನಾಯಕಿಯಾಗಿ ಬರುತ್ತಿದ್ದಾರೆ. ಸಾಮಾನ್ಯವಾಗಿ ಮೊದಲ ಚಿತ್ರಕ್ಕೆ ಅವಕಾಶ ಕೊಡುವುದೇ ದೊಡ್ಡ ವಿಚಾರ. ನಟಿಯ ಮೊದಲ ಚಿತ್ರದ ಸಂಭಾವನೆ ಕೇಳಿದ್ರೆ ಬೆಚ್ಚಿ ಬೀಳುವಂತಿದೆ. ಚೊಚ್ಚಲ ಚಿತ್ರಕ್ಕೆ ಅಮೃತಾ ಪ್ರೇಮ್‌ಗೆ 10 ಲಕ್ಷ ರೂ. ಸಂಭಾವನೆ ಕೊಟ್ಟಿದ್ದಾರಂತೆ ಡಾಲಿ. ಇದನ್ನೂ ಓದಿ: ಅಕ್ಷಯ್ ಕುಮಾರ್ ನಟನೆಯ ಮರಾಠಿ ಚಿತ್ರದ ಫಸ್ಟ್ ಲುಕ್ ರಿಲೀಸ್

    ಡಾಲಿ ನಿರ್ಮಾಣದ ಮೂರನೇ ಸಿನಿಮಾ `ಟಗರುಪಲ್ಯ’ ಚಿತ್ರಕ್ಕೆ ಅಮೃತಾಗೆ 10 ಲಕ್ಷ ರೂ. ಸಂಭಾವನೆ ನೀಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ನಟನೆಯ ಯಾವುದೇ ಅನುಭವವಿಲ್ಲದ ಹೊಸ ಪ್ರತಿಭೆಗೆ ಇಷ್ಟೊಂದು ಸಂಭಾವನೆನಾ ಎಂಬ ಚರ್ಚೆ ಗಾಂಧಿನಗರದಲ್ಲಿ ಜೋರಾಗಿದೆ. ಇನ್ನೂ ತಮ್ಮ ಚೊಚ್ಚಲ ಚಿತ್ರದ ಮೂಲಕ ಮುಂದಿನ ದಿನಗಳಲ್ಲಿ ಗಟ್ಟಿ ನಾಯಕಿಯಾಗಿ ನಿಲ್ಲುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಉಪ್ಪಿ ಪುತ್ರಿಗೆ ಬಿಗ್ ಆಫರ್: ದೊಡ್ಮನೆ ಯುವರಾಜನಿಗೆ ಐಶ್ವರ್ಯ ನಾಯಕಿ

    ಉಪ್ಪಿ ಪುತ್ರಿಗೆ ಬಿಗ್ ಆಫರ್: ದೊಡ್ಮನೆ ಯುವರಾಜನಿಗೆ ಐಶ್ವರ್ಯ ನಾಯಕಿ

    ಗಾಂಧಿನಗರದಲ್ಲಿ ಸೂಪರ್ ಸ್ಟಾರ್‌ಗಳ ಮಕ್ಕಳ ಎಂಟ್ರಿಯಾಗುತ್ತಿದೆ. `ನೆನಪಿರಲಿ’ ಪ್ರೇಮ್ (Nenapirali Prem)  ಪುತ್ರಿ ಅಮೃತಾ (Amrutha Prem) ನಟನೆಗೆ ಎಂಟ್ರಿ ಕೊಡ್ತಿರುವ ಬೆನ್ನಲ್ಲೇ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಮಗಳು ಐಶ್ವರ್ಯ ಎಂಟ್ರಿಯ ಬಗ್ಗೆ ಗುಸು ಗುಸು ಶುರುವಾಗಿದೆ.

    ಇತ್ತೀಚೆಗಷ್ಟೇ ಡಾಲಿ ಪಿಕ್ಚರ್ಸ್ ನಿರ್ಮಾಣದ `ಟಗರು ಪಲ್ಯ’ (Tagaru Palya) ಚಿತ್ರದಲ್ಲಿ ಅಮೃತಾ ಪ್ರೇಮ್ (Amrutha) ನಾಯಕಿಯಾಗಿರುವ ಬೆನ್ನಲ್ಲೇ ನಟ ಉಪೇಂದ್ರ ಮಗಳ ಬರುವಿಕೆಗೆ ಕೌಂಟ್‌ಡೌನ್ ಶುರುವಾಗಿದೆ. ಸ್ಟಾರ್ ನಟ ನಟಿಯರ ಮಕ್ಕಳು ಚಿತ್ರರಂಗಕ್ಕೆ ಹೆಜ್ಜೆ ಇಡ್ತಿದ್ದಾರೆ. ಇದನ್ನೂ ಓದಿ: `ಕೆಜಿಎಫ್’ ತಾತ ಕೃಷ್ಣ ಜಿ. ರಾವ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

    ಪ್ರತಿಷ್ಠಿತ ಸಂಸ್ಥೆ ಹೊಂಬಾಳೆ ಬ್ಯಾನರ್ ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ಯುವರಾಜ್‌ಕುಮಾರ್ ಅವರನ್ನ ಲಾಂಚ್ ಮಾಡ್ತಿರುವ ವಿಚಾರ ಎಲ್ಲರಿಗೂ ಗೊತ್ತೆ ಇದೆ. ಸಂತೋಷ್ ಆನಂದ್‌ರಾಮ್ ನಿರ್ದೇಶನದ ಹೊಸ ಚಿತ್ರದಲ್ಲಿ ಯುವಗೆ ನಾಯಕಿಯಾಗಿ ಐಶ್ವರ್ಯ ಉಪೇಂದ್ರ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

    ಹೊಂಬಾಳೆ ಸಂಸ್ಥೆಯಡಿ ನಾಯಕಿಯಾಗಿ ನಟಿಸುವಂತೆ ಉಪ್ಪಿ ಪುತ್ರಿಗೆ ಆಫರ್ ನೀಡಲಾಗಿದೆಯಂತೆ. ಮಗಳ ಸಿನಿ ಜರ್ನಿಗೆ ಉಪ್ಪಿ ಕುಟುಂಬ ಗ್ರೀನ್ ಸಿಗ್ನಲ್ ಕೊಡ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]