Tag: amrutha iyengar

  • ಡಾರ್ಲಿಂಗ್ ಕೃಷ್ಣಗೆ 2ನೇ ಬಾರಿ ನಾಯಕಿಯಾದ ಅಮೃತಾ ಅಯ್ಯಂಗಾರ್

    ಡಾರ್ಲಿಂಗ್ ಕೃಷ್ಣಗೆ 2ನೇ ಬಾರಿ ನಾಯಕಿಯಾದ ಅಮೃತಾ ಅಯ್ಯಂಗಾರ್

    ಡಾರ್ಲಿಂಗ್ ಕೃಷ್ಣ ನಟನೆಯ ಫಾದರ್ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಅಮೃತಾ ಅಯ್ಯಂಗಾರ್ (Amrutha iyengar). ಈ ನಟನ ಜೊತೆ ಎರಡನೇ ಬಾರಿ ಇವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದೊಂದು ವಿಶೇಷ ಪಾತ್ರವಾಗಿದ್ದು, ಚಿತ್ರದುದ್ದಕ್ಕೂ ಮೇಕಪ್ ಇಲ್ಲದೇ ನಟಿಸುವಂತಹ ಪಾತ್ರ ಅದಾಗಿದೆ ಎಂದಿದ್ದಾರೆ. ಇಂಥದ್ದೊಂದು ಪಾತ್ರ ಸಿಕ್ಕಿರೋದಕ್ಕೆ ಖುಷಿಯಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.

    ರ್.ಸಿ. ಸ್ಟುಡಿಯೋಸ್‌. ಇದು ಆರ್‌ ಚಂದ್ರು (R. Chandru) ಅವರ ಬಹುದೊಡ್ಡ ಕನಸು. ಇದೊಂದು ಪ್ಯಾನ್‌ ಇಂಡಿಯಾ ಬ್ಯಾನರ್.‌ ಕನ್ನಡಕ್ಕೆ ಸೀಮಿತವಾಗಿದ್ದ ಶ್ರೀ ಸಿದ್ದೇಶ್ವರ ಮೂವೀಸ್‌ ಬ್ಯಾನರ್‌ ಅನ್ನು ಸೇರಿಸಿಕೊಂಡೇ ಆರ್.ಸಿ. ಸ್ಟುಡಿಯೋಸ್‌ ಹುಟ್ಟು ಕಂಡಿದೆ. ಈವರೆಗೆ ಸ್ಟಾರ್‌ ನಟರ ಐದು ಯಶಸ್ವಿ ಸಿನಿಮಾಗಳನ್ನು ನಿರ್ಮಿಸಿದ್ದ ಆರ್.ಚಂದ್ರು, ಈಗ ಆರ್.ಸಿ. ಸ್ಟುಡಿಯೋಸ್‌ ಸಂಸ್ಥೆ ಮೂಲಕ ಒಟ್ಟಾರೆ ಆರು ಪ್ಯಾನ್‌ ಇಂಡಿಯಾ ಸಿನಿಮಾಗಳನ್ನು ಅನೌನ್ಸ್‌ ಮಾಡಿದ್ದಾರೆ. ಅವೆಲ್ಲವೂ ಬಿಗ್‌ ಬಜೆಟ್‌ ಸಿನಿಮಾಗಳು, ಬಿಗ್‌ ಸ್ಟಾರ್ಸ್‌ ಸಿನಿಮಾಗಳು ಅನ್ನೋದು ವಿಶೇಷ. ಆ ಸಾಲಿನಲ್ಲಿರುವ ಸಿನಿಮಾಗಳ ಪೈಕಿ ‘ಫಾದರ್‌’ (Father) ಎಂಬ ಆರನೇ ಸಿನಿಮಾ ಏಪ್ರಿಲ್‌ 27ರಂದು ಅದ್ಧೂರಿಯಾಗಿ  ಮುಹೂರ್ತ ನೆರವೇರುತ್ತಿದೆ. ಹುಡುಗಿಯರ ಪಾಲಿನ ಪ್ರೀತಿಯ ಡಾರ್ಲಿಂಗ್‌ ಎನಿಸಿಕೊಂಡಿರುವ ಡಾರ್ಲಿಂಗ್‌ ಕೃಷ್ಣ (Darling Krishna) ಮತ್ತು ಪಂಚಭಾಷೆ ನಟ ಪ್ರಕಾರ್‌ ರೈ (Prakash Raj) ಈ ಚಿತ್ರದ ಮುಖ್ಯ ಆಕರ್ಷಣೆ.

    ಈ ಸಿನಿಮಾದ ಶೀರ್ಷಿಕೆಯೇ ಹೇಳುವಂತೆ, ಇದೊಂದು ಅಪ್ಪ- ಮಗನ ಬಾಂಧವ್ಯ ಕುರಿತಾದ ಕಥಾಹಂದರ ಹೊಂದಿರುವ ಸಿನಿಮಾ. ಅಪ್ಪನ ಮೌಲ್ಯ ಸಾರಿದ್ದ ಆರ್.‌ ಚಂದ್ರು ಅವರ ಮೊದಲ ಸೂಪರ್‌ ಹಿಟ್‌ ಸಿನಿಮಾ ತಾಜ್‌ ಮಹಲ್‌ ಇಂದಿಗೂ ಕಾಡುತ್ತೆ. ಫಾದರ್‌ ಕೂಡ ಅಂಥದ್ದೇ ಕಂಟೆಂಟ್‌ ಹೊಂದಿರುವ ಸಿನಿಮಾ ಅನ್ನೋ ಫೀಲ್‌ ಹೆಸರಲ್ಲೇ ಇದೆ. ಮೊದಲಿಂದಲೂ ಆರ್. ಚಂದ್ರು ಕಂಟೆಂಟ್‌ಗೆ ಒತ್ತು ಕೊಟ್ಟವರು. ಈ ಫಾದರ್‌ ಕೂಡ ಅದಕ್ಕೆ ಹೊರತಾಗಿರಲ್ಲ ಎಂಬ ಭಾವನೆ ನಮ್ಮದು. ಸದ್ಯಕ್ಕೆ ಫಾದರ್‌ ಏಪ್ರಿಲ್‌ 27 ರಂದು ಸೆಟ್ಟೇರುತ್ತಿದೆ. ಅಂದಿನಿಂದಲೇ ಚಿತ್ರೀಕರಣಕ್ಕೂ ಚಾಲನೆ ಸಿಗಲಿದೆ.

    ಸಿನಿಮಾ ಅನ್ನೋದಕ್ಕೆ ದೊಡ್ಡ ಶಕ್ತಿ ಇದೆ. ಅಳು-ನಗುವಿನ ಸಂಕೇತವಿದ್ದರೂ ಅಲ್ಲೆಲ್ಲೋ ಒಂದು ಕಡೆ ಆಪ್ತವೆನಿಸೋ ಅಂಶಗಳು ನೋಡುಗರನ್ನು ಬಿಗಿದಪ್ಪುತ್ತವೆ. ಈ ಫಾದರ್‌ ಸಿನಿಮಾ ಕೂಡ ಎದೆ ಭಾರವೆನಿಸುವ ಚಿತ್ರ. ಮನಸ್ಸಿಗೆ ಖುಷಿ ಕೊಡುವ, ಕಣ್ಣಲ್ಲಿ ಆನಂದಭಾಷ್ಪ ತರುವ ಮತ್ತೆ ಮತ್ತೆ ಕಾಡುವ, ಏನೋ ಕಳೆದುಕೊಂಡ ಸಂಕಟ, ಇನ್ನೇನ್ನನ್ನೋ ಪಡೆಯಬೇಕೆಂಬ ಹಂಬಲ, ಮತ್ತೇನೋ ಉಳಿಸಿಕೊಳ್ಳಬೇಕೆಂಬ ಹಠ ಇವೆಲ್ಲದರ ಸಮ್ಮಿಶ್ರಣವೇ ಫಾದರ್ ಅಂತೆ.

     

    ಇಲ್ಲಿ ನೋವಿದೆ, ನಲಿವಿದೆ. ಬಾಂಧವ್ಯದ ಹೂರಣವಿದೆ. ಎಲ್ಲಕ್ಕಿಂತ ಹೆಚ್ಚಾಗಿ ವಾಸ್ತವದ ತಿರುಳಿದೆ. ಪ್ರತಿಯೊಬ್ಬರ ಮನಸ್ಸಿಗೂ ನಾಟುವ ಅಂಶವಿದೆ. ಕಣ್ಣಿಗೆ ಕಟ್ಟುವ ಚಿತ್ರಣವೂ ಇರಲಿದೆ. ಫಾದರ್‌ ಪ್ರತಿಯೊಬ್ಬರ ಮನಸ್ಸನ್ನು ಹಗುರಾಗಿಸೋ ಚಿತ್ರವಾದರೂ, ಏನೋ ಒಂದು ಮಿಸ್‌ ಆಯ್ತು ಅನ್ನೋ ಭಾವನೆಯ ಚಿತ್ರ ಇದಾಗಲಿದೆ. ಆರ್.ಸಿ. ಸ್ಟುಡಿಯೋದ ಮೊದಲ ಪ್ಯಾನ್‌ ಇಂಡಿಯಾ ಸಿನಿಮಾ ಇದಾಗಿರುವುದರಿಂದ ಸ್ಟುಡಿಯೋ ಮುಖ್ಯಸ್ಥ ಆರ್.ಚಂದ್ರು ಒಂದೊಳ್ಳೆಯ ಕಂಟೆಂಟ್‌ ಆಯ್ಕೆ ಮಾಡಿಕೊಂಡಿದ್ದಾರೆ. ಹೌದು, ಜಗತ್ತಿನಲ್ಲಿ ಅಪ್ಪನ ಸ್ಥಾನ ತುಂಬೋಕೆ ಯಾರಿಂದಲೂ ಸಾಧ್ಯವಿಲ್ಲ. ಅಪ್ಪ ಅನ್ನೋದು ಆಕಾಶಕ್ಕಿಂತಲೂ ಮಿಗಿಲು. ಅಪ್ಪನ ಬಿಸಿಯುಸಿರು, ಅಪ್ಪನ ಅಪ್ಪುಗೆ, ಅಪ್ಪನ ನೋವು, ಅಪ್ಪನ ಬೆವರು, ಅಪ್ಪನ ಕಾತರ, ಆತುರ, ಚಡಪಡಿಕೆ, ಆಸೆ, ಜವಾಬ್ದಾರಿ ಇತ್ಯಾದಿಗಳ ರೂಪವೇ ಈ ಫಾದರ್‌ ಅಂತಂದುಕೊಂಡರೂ ಅದಕ್ಕಿಂತಲೂ ಮಿಗಿಲಾಗಿದ್ದು ಈ ಫಾದರ್‌ ಒಳಗಿದೆ. ಇದು ಎಲ್ಲರಿಗೂ ಇಷ್ಟವಾಗುವ ಚಿತ್ರವಾಗುತ್ತೆ ಎಂಬ ಭರವಸೆ ಆರ್ ಸಿ ಸ್ಟುಡಿಯೋದ್ದು.

  • ನಮ್ಮ ನಡುವೆ ಏನಿಲ್ಲ, ಡಾಲಿಗೆ ಹೆಣ್ಣು ಕೊಡುತ್ತಿಲ್ಲ: ನಟಿ ಅಮೃತಾ

    ನಮ್ಮ ನಡುವೆ ಏನಿಲ್ಲ, ಡಾಲಿಗೆ ಹೆಣ್ಣು ಕೊಡುತ್ತಿಲ್ಲ: ನಟಿ ಅಮೃತಾ

    ಸ್ಯಾಂಡಲ್‌ವುಡ್‌ನ (Sandalwood) ಸೂಪರ್ ಹಿಟ್ ಜೋಡಿ ಡಾಲಿ- ಅಮೃತಾ ನಟನೆಯ `ಹೊಯ್ಸಳ’ (Hoysala) ಸಿನಿಮಾ ತೆರೆಗೆ ಅಬ್ಬರಿಸಲು ಸಜ್ಜಾಗಿದೆ. ಸದ್ಯ ಪ್ರಚಾ ಕಾರ್ಯದಲ್ಲಿ ಬ್ಯುಸಿಯಿರುವ ಚೆಂದುಳ್ಳಿ ಚೆಲುವೆ ಅಮೃತಾ ಸಂದರ್ಶನವೊಂದರಲ್ಲಿ ಡಾಲಿ ಬಗ್ಗೆ ಅಚ್ಚರಿಯ ಮಾಹಿತಿವೊಂದನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:`ಬಿಗ್ ಬಾಸ್’ ಅಕ್ಷತಾ ಕುಕಿ ವೆಡ್ಡಿಂಗ್ ಫೋಟೋಸ್

     

    View this post on Instagram

     

    A post shared by Amy❤️ (@amrutha_iyengar)

    `ಪಾಪ್ ಕಾರ್ನ್ ಮಂಕಿ ಟೈಗರ್’, ಬಡವ ರಾಸ್ಕಲ್, ನಂತರ `ಹೊಯ್ಸಳ’ ಚಿತ್ರದ ಮೂಲಕ ಡಾಲಿ- ಅಮೃತಾ (Amrutha Iyengar) ಮತ್ತೆ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ತೆರೆಯ ಮೇಲೆ ಬೆಸ್ಟ್ ಕಪಲ್ ಆಗಿ ಕಾಣಿಸಿಕೊಂಡಿರುವ ಈ ಜೋಡಿ ನಡುವೆ ತೆರೆಯ ಹಿಂದೆ ಲವ್ ಸ್ಟೋರಿ ನಡೆಯುತ್ತಿದೆ ಎಂದೇ ಅದೆಷ್ಟೋ ಮಂದಿ ಭಾವಿಸಿದ್ದಾರೆ. ಅದಕ್ಕೆ ಪೂರಕವೆಂಬಂತೆ ನಟ ಗಣೇಶ್ ನಿರೂಪಣೆಯ Golden Gang ಶೋನಲ್ಲಿ ಡಾಲಿ ಕೈಯಲ್ಲಿ ಅಮೃತಾಗೆ ಪ್ರಪೋಸ್ ಮಾಡಿಸಿದ್ದರು. ಡಾಲಿ(Daali) ಪ್ರೇಮ ನಿವೇದನೆ ಮಾಡಿದ ರೀತಿ ಪ್ರೇಕ್ಷಕರಿಗೆ ಹಿಡಿಸಿತ್ತು. ರೀಲ್ ಸ್ಟೋರಿಗಳ ಮಧ್ಯೆ ರಿಯಲ್ ಲವ್ ಕಥೆ ಇದೆ ಎಂದೇ ಫ್ಯಾನ್ಸ್ ಅಂದಾಜಿಸಿದ್ದಾರೆ. ಈ ಬಗ್ಗೆ ನಟಿ ಅಮೃತಾ ಕೂಡ ಸಂದರ್ಶನವೊಂದರಲ್ಲಿ ಸ್ಟಷ್ಟನೆ ನೀಡಿದ್ದಾರೆ.

    ನಮ್ಮೀಬ್ಬರ ಮಧ್ಯೆ ಪ್ರೀತಿ ಇದೆ ಎಂಬ ಹಬ್ಬಿರುವ ಸುದ್ದಿಗೆ ಧನಂಜಯ್‌ಗೆ ಯಾರು ಹೆಣ್ಣು ಕೊಡ್ತಿಲ್ಲವಂತೆ. ನಮ್ಮೀಬ್ಬರ ಮಧ್ಯೆ ಹಾಗೇನು ನಾವಿಬ್ಬರು ಸ್ನೇಹಿತರು ಎಂದು ನಟಿ ಹೇಳಿದ್ದಾರೆ. ಡಾಲಿ ಜೊತೆ ಫೋಟೋ ಹಾಕಿದ್ದರೆ, ಹಿರಿಯ ನಟರು ಸಿಕ್ಕಾಗ ಇದೇ ಕೇಳುತ್ತಾರೆ. ಸಂಬಂಧಿಕರು ಇದರ ಬಗ್ಗೆ ವಿಚಾರಿಸುತ್ತಾರೆ. ಆಗ ನಾನು ಸ್ಟಷ್ಟನೆ ಕೊಡುತ್ತೇನೆ. ಇದು ಹೇಗೆ ನಿಲ್ಲಿಸಬೇಕು ಎಂದು ತಿಳಿಯುತ್ತಿಲ್ಲ. ಸೆಟ್‌ನಲ್ಲಿ ನನಗೆ ಹೆಣ್ಣು ಕೊಡುತ್ತಿಲ್ಲ ಎಂದು ಡಾಲಿ ರೇಗಿಸುತ್ತಾರೆ ಎಂದು ಅಮೃತಾ ಸಂದರ್ಶನದಲ್ಲಿ ರೀವೀಲ್ ಮಾಡಿದ್ದಾರೆ.

    ಇನ್ನೂ ಇದೇ ಮಾರ್ಚ್ 30ಕ್ಕೆ `ಹೊಯ್ಸಳ’ ಸಿನಿಮಾ ತೆರೆಗೆ ಅಬ್ಬರಿಸುತ್ತಿದೆ. ಈ ಹಿಂದೆ `ಬಡವ ರಾಸ್ಕಲ್’ ಮೂಲಕ ಡಾಲಿ-ಅಮೃತಾ ಜೋಡಿ ಕಮಾಲ್ ಮಾಡಿದಂತೆ ಈ ಬಾರಿಯೂ ಸೌಂಡ್ ಮಾಡುತ್ತಾ ಎಂಬುದನ್ನ ಕಾದುನೋಡಬೇಕಿದೆ.

  • ಡಾಲಿ ಜೊತೆನೇ ಯಾಕೆ ಅಮೃತಾ ಸಿನಿಮಾ ಮಾಡ್ತಾರೆ? ಕಾಲೆಳೆದ ಕಿಚ್ಚ

    ಡಾಲಿ ಜೊತೆನೇ ಯಾಕೆ ಅಮೃತಾ ಸಿನಿಮಾ ಮಾಡ್ತಾರೆ? ಕಾಲೆಳೆದ ಕಿಚ್ಚ

    ಡಾಲಿ (Dali) ಮತ್ತು ಅಮೃತಾ ಅಯ್ಯಂಗಾರ್ `ಗುರುದೇವ ಹೊಯ್ಸಳ’ (Gurudeva Hoysala) ಸಿನಿಮಾದ ಮೂಲಕ ರಂಜಿಸಲು ಬರುತ್ತಿದ್ದಾರೆ. ಟ್ರೈಲರ್‌ ಲಾಂಚ್ ಕಾರ್ಯಕ್ರಮದಲ್ಲಿ ಡಾಲಿ ಮತ್ತು ಅಮೃತಾಗೆ ಕಿಚ್ಚ ಸುದೀಪ್ ಕಾಲೆಳೆದಿದ್ದಾರೆ. ಡಾಲಿ ಜೊತೆನೇ ನೀವ್ಯಾಕೆ ಸಿನಿಮಾ ಮಾಡ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಮತ್ತೊಂದು ಹೊಸ ಚಿತ್ರ ಒಪ್ಪಿಕೊಂಡ ಕ್ರೇಜಿಸ್ಟಾರ್ ರವಿಚಂದ್ರನ್

    ತೆರೆಯ ಮೇಲೆ ಮೋಡಿ ಮಾಡಿರುವ ನಟರಾಕ್ಷಸ ಡಾಲಿ- ಅಮೃತಾ ಜೋಡಿ `ಪಾಪ್‌ಕಾರ್ನ್ ಮಂಕಿ ಟೈಗರ್’ ಮತ್ತು `ಬಡವ ರಾಸ್ಕಲ್’, `ಗುರುದೇವ ಹೊಯ್ಸಳ’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಇವರ ಮಧ್ಯೆ ಒಳ್ಳೆಯ ಆಪ್ತತೆ ಬೆಳೆದಿದೆ. ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಕೂಡಯಿದೆ. ಆದರೆ, ಇದನ್ನು ಇಬ್ಬರು ಒಪ್ಪಿಕೊಂಡಿಲ್ಲ. ಅವರ ಮಧ್ಯೆ ಪ್ರೀತಿ ಇದೆಯೋ ಇಲ್ಲವೋ ಒಳ್ಳೆಯ ಫ್ರೆಂಡ್‌ಶಿಪ್ ಅಂತೂ ಇದೆ. ಸುದೀಪ್ (Sudeep) ವೇದಿಕೆ ಏರಿದಾಗ ಇವರ ವಿಚಾರವನ್ನು ಇಟ್ಟುಕೊಂಡು ಎಲ್ಲರನ್ನೂ ನಕ್ಕು ನಗಿಸಿದ್ದಾರೆ.

    ಮೊದಲು ವೇದಿಕೆ ಏರಿದ ಅಮೃತಾ ಅವರು ಡಾಲಿಯನ್ನು ನಾಲ್ಕೈದು ಬಾರಿ ಹೊಗಳಿದರು. ಅವರು ಸುಂದರವಾಗಿ ಕಾಣ್ತಿದಾರೆ ಎಂದು ಮೆಚ್ಚುಗೆ ಸೂಚಿಸಿದರು. ನಂತರ ಸುದೀಪ್ ಜೊತೆ ವೇದಿಕೆ ಏರಿದ ಡಾಲಿ ಅವರು ಒಂದೇ ಬಾರಿ ಅಮೃತಾ ಹೆಸರನ್ನು ಹೇಳಿದರು. ಇದನ್ನು ಸುದೀಪ್ ನೆನಪಿಟ್ಟುಕೊಂಡಿದ್ದರು. ಧನಂಜಯ್ ಈ ರೀತಿ ಒಂದೇ ಮಾತಲ್ಲಿ ಅಮೃತಾ ಅವರ ಬಗ್ಗೆ ಹೇಳಿದ್ದು ನ್ಯಾಯ ಅಲ್ಲ ಎಂದರು ಕಿಚ್ಚ.

    ಆಗ ಡಾಲಿ ಅಮೃತಾ ಅವರನ್ನು ಹೊಗಳಲು ಮುಂದಾಗಿದ್ದಾರೆ. ನಟಿ ಬಗ್ಗೆ ಮಾತಾಡಿ ಎಂದು ಕಿಚ್ಚ ಕೂಡ ಕಾಲೆಳೆದಿದ್ದಾರೆ.  ಮೂರು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ವಿ. ಎಲ್ಲಾ ಸಿನಿಮಾಗಳಲ್ಲೂ ಅದ್ಭುತವಾಗಿ ಕೆಲಸ ಮಾಡಿದ್ದಾರೆ ಎಂದು ಡಾಲಿ ಹೇಳುತ್ತಿದ್ದಂತೆ ಸುದೀಪ್ ಅವರು ಮತ್ತೆ ಕಾಲೆಳೆಯಲು ಮುಂದಾದರು. ಹೌದು ನೀವ್ಯಾಕೆ ಇವರೊಟ್ಟಿಗೆ ಕೆಲಸ ಮಾಡ್ತೀರಾ ಬೇರೆ ಕಲಾವಿದರಿಗೆ ಡೇಟ್ಸ್ ಕೊಡಿ. ಅವರ ಜೊತೆಯೂ ಕೆಲಸ ಮಾಡಿ. ಇವರೊಟ್ಟಿಗೆ ಸಿನಿಮಾ ಮಾಡ್ತಾ ಇದ್ರೆ ಬೇರೆ ಹೀರೋಗಳಿಗೆ ನೀವು ಹೇಗೆ ಸಿಗ್ತೀರಾ ಇಷ್ಟೆಲ್ಲ ಮಾಡಿದ್ರೂ ನಿಮ್ಮನ್ನು ಹೊಗಳುತ್ತಿಲ್ಲ ಎಂದು ಅಮೃತಾಗೆ ಸುದೀಪ್ ಹೇಳಿದರು. ಈ ಮಾತನ್ನು ಕೇಳಿ ಎಲ್ಲರೂ ನಕ್ಕರು. ಕೊನೆಯಲ್ಲಿ ಇವರ ಕೆಮಿಸ್ಟ್ರಿ ಬಗ್ಗೆ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಕಾರ್ತಿಕ್ ಮತ್ತು ಯೋಗಿ ಜಿ ನಿರ್ಮಾಣದ `ಗುರುದೇವ ಹೊಯ್ಸಳ’ ಸಿನಿಮಾ ಇದೇ ಮಾರ್ಚ್ 30ಕ್ಕೆ ತೆರೆಗೆ ಅಪ್ಪಳಿಸುತ್ತಿದೆ. ಡಾಲಿ – ಅಮೃತಾ ಜೋಡಿ ಈ ಬಾರಿ ಅದೆಷ್ಟರ ಮಟ್ಟಿಗೆ ಮೋಡಿ ಮಾಡಲಿದೆ ಎಂಬುದನ್ನ ಕಾದುನೋಡನೋಡಬೇಕಿದೆ.

  • ಡಾಲಿ ನಟನೆಯ `ಹೊಯ್ಸಳ’ ಚಿತ್ರದ ಟೈಟಲ್ ಬದಲಾಗಿದ್ದೇಕೆ?

    ಡಾಲಿ ನಟನೆಯ `ಹೊಯ್ಸಳ’ ಚಿತ್ರದ ಟೈಟಲ್ ಬದಲಾಗಿದ್ದೇಕೆ?

    ನಂಜಯ ನಟನೆಯ ಬಹುನಿರೀಕ್ಷಿತ ಸಿನಿಮಾ `ಹೊಯ್ಸಳ’ (Hoysala) ಇದೇ ಮಾರ್ಚ್ 30ಕ್ಕೆ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಚಿತ್ರ ರಿಲೀಸ್‌ಗೆ ರೆಡಿಯಾಗಿರುವ ಬೆನ್ನಲ್ಲೇ ಸಿನಿಮಾದ ಟೈಟಲ್ ಬದಲಾವಣೆ ಮಾಡಲು ಪ್ಲ್ಯಾನ್ ಮಾಡಿದ್ದಾರೆ.

    ಡಾಲಿ- ಅಮೃತಾ ಅಯ್ಯಂಗಾರ್ (Amrutha Iyengar) ಜೋಡಿ `ಹೊಯ್ಸಳ’ ಚಿತ್ರದ ಮೂಲಕ 3ನೇ ಬಾರಿ ಒಂದಾಗುತ್ತಿದ್ದಾರೆ. ಈ ಚಿತ್ರವನ್ನು ʻಕೆಆರ್‌ಜಿ ಸ್ಟುಡಿಯೋʼ (KRG Studios) ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಹಾಡುಗಳ ಮೂಲಕ ಗಮನ ಸೆಳೆದಿರುವ `ಹೊಯ್ಸಳ’ ಚಿತ್ರ ಬಿಡುಗಡೆಗೆ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಇದನ್ನೂ ಓದಿ: ನನ್ನ ಸಾವಿಗೆ ಇವರೇ ಕಾರಣವೆಂದು ಸೂಸೈಡ್‌ ನೋಟ್‌ ಬರೆದಿಟ್ಟ ʻವರ್ಷಧಾರೆʼ ನಟಿ ಪಾಯಲ್‌

    ಈ ಸಿನಿಮಾದಲ್ಲಿ ಧನಂಜಯ ಅವರು `ಗುರುದೇವ ಹೊಯ್ಸಳ’ (Gurudeva Hoysala) ಎಂಬ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಶೀರ್ಷಿಕೆಯನ್ನು ರಾಮು ಫಿಲ್ಮ್ಸ್ ಜೊತೆ ಮಾತನಾಡಿ ಪಡೆದುಕೊಂಡಿದ್ದರು. `ಹೊಯ್ಸಳ’ ಶೀರ್ಷಿಕೆ ಅವರ ಬಳಿ ಇತ್ತು. ಆದರೆ ಈಗ ಇದೇ ಹೆಸರಿನಲ್ಲಿ ಮತ್ತೊಂದು ಸಿನಿಮಾ ಸೆನ್ಸಾರ್ ಆಗಿದೆಯಂತೆ. ಹಾಗಾಗಿ, ಈ ಸಿನಿಮಾದಲ್ಲಿ ನಾಯಕ ಡಾಲಿ `ಗುರುದತ್ ಹೊಯ್ಸಳ’ ಪಾತ್ರದ ಹೆಸರನ್ನೇ ಶೀರ್ಷಿಕೆ ಮಾಡಿ, ಅದೇ ಹೆಸರಿನಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ರೆಡಿಯಾಗಿದ್ದಾರೆ.

    `ಗುಳ್ಟು’ ಹೀರೋ ನವೀನ್ ಶಂಕರ್ (Naveen Shankar) ಅವರು ಈ ಚಿತ್ರದಲ್ಲಿ ಡಾಲಿ (Dali) ಮುಂದೆ ಖಳನಾಯಕನಾಗಿ ನಟಿಸಿದ್ದಾರೆ. ರಗಡ್ ಲುಕ್‌ನಲ್ಲಿ ನವೀನ್ ಕಾಣಿಸಿಕೊಂಡಿದ್ದಾರೆ. `ಗುರುದತ್ ಹೊಯ್ಸಳ’ ಚಿತ್ರದ ಮೂಲಕ ಭಿನ್ನ ಕಥೆಯನ್ನೇ ತೆರೆಯ ಮೇಲೆ ತರಲು ಚಿತ್ರತಂಡ ಸಜ್ಜಾಗಿದ್ದಾರೆ. ಮಾರ್ಚ್ ಅಂತ್ಯದಲ್ಲಿ ತೆರೆಗೆ ಬರಲಿದ್ದಾರೆ.

  • ಅಮೃತಾಗೆ ಡಾಲಿ ವಿಶ್ ಮಾಡಿದಕ್ಕೆ ಮದುವೆ ಯಾವಾಗ ಅಂತಾ, ಡಾಲಿ ಹಿಂದೆ ಬಿದ್ದ ಫ್ಯಾನ್ಸ್

    ಅಮೃತಾಗೆ ಡಾಲಿ ವಿಶ್ ಮಾಡಿದಕ್ಕೆ ಮದುವೆ ಯಾವಾಗ ಅಂತಾ, ಡಾಲಿ ಹಿಂದೆ ಬಿದ್ದ ಫ್ಯಾನ್ಸ್

    ಚಂದನವನದ ಬ್ಯೂಟಿ ಕ್ವೀನ್ ಅಮೃತ ಅಯ್ಯಂಗಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜತೆಗೆ ಧನಂಜಯ್ ಮತ್ತು ಅಮೃತಾ ಲವ್ ಗಾಸಿಪ್ ಬೆನ್ನಲ್ಲೇ ಸಹನಟಿಗೆ ಡಾಲಿ ವಿಶ್ ಮಾಡಿದ್ದಕ್ಕೆ ಮದುವೆ ಯಾವಾಗ ಅಂತಾ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

     

    View this post on Instagram

     

    A post shared by Dhananjaya KA (@dhananjaya_ka)

    `ಪಾಪ್ ಕಾರ್ನ್ ಮಂಕಿ ಟೈಗರ್’, `ಬಡವ ರಾಸ್ಕಲ್’ ಈ ಎರಡು ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಅದರಲ್ಲೂ `ಬಡವ ರಾಸ್ಕಲ್’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ, ಜೋಡಿ ಎಲ್ಲರ ಗಮನ ಸೆಳೆದಿತ್ತು. ನಂತರ ಖಾಸಗಿ ಶೋನಲ್ಲಿ ಡಾಲಿ, ಅಮೃತಾ ಪ್ರಪೋಸ್ ಮಾಡಿದ್ರು. ಈ ಸೀನ್ ನೈಜವಾಗಿ ಮೂಡಿ ಬಂದಿತ್ತು. ಈ ಸೀನ್ ಬಳಿಕ ಇವರಿಬ್ಬರು ಪ್ರೇಮಿಗಳು ಎಂದೇ ಬಿಂಬಿತರಾಗಿದ್ದರು. ನಂತರ ಲವ್‌ ಮತ್ತು ಮದುವೆ ಗಾಸಿಪ್‌ ಸುಳ್ಳು ಎಂದು ಈ ಜೋಡಿ, ಕ್ಲ್ಯಾರಿಟಿ ಕೊಟ್ಟಿದ್ದರು. ಈಗ ಅಮೃತಾ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಕ್ಕೆ ಡಾಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ:Breaking- ಅಭಿಮಾನಿಗಳಿಗೆ ನಿವೇದಿತಾ ಗೌಡ ಗುಡ್ ನ್ಯೂಸ್

    ಧನಂಜಯ್ ಮತ್ತು ಅಮೃತಾ ಲವ್ ಗಾಸಿಪ್ ಬೆನ್ನಲ್ಲೇ ಡಾಲಿ ಬರೆದ ಸಂದೇಶ ವೈರಲ್ ಆಗಿದೆ. ಹುಟ್ಟುಹಬ್ಬದ ಶುಭಾಶಯಗಳು ಅಮೃತಾ, ದೇವರ ಹಾರೈಕೆಯಿರಲಿ, ಕೀಪ್ ರಾಕಿಂಗ್. ಈ ವರ್ಷ ಮತ್ತಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಎಂದು ಡಾಲಿ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಬಳಿಕವೇ ಫ್ಯಾನ್ಸ್ ನಿಮ್ಮ ಮದುವೆ ಯಾವಾಗ ಅಂತಾ ಕೇಳಿದ್ದಾರೆ. ಅಭಿಮಾನಿಗಳ ಈ ಪ್ರಶ್ನೆಗೆ ಈ ಜೋಡಿ ಎನು ಉತ್ತರ ನೀಡಲಿದ್ದಾರೆ. ಕಾದುನೋಡಬೇಕಿದೆ.

    `ಬಡವ ರಾಸ್ಕಲ್’ ಚಿತ್ರದ ನಂತರ ಮತ್ತೆ ಡಾಲಿ ಮತ್ತು ಅಮೃತಾ ಹೊಯ್ಸಳ ಚಿತ್ರದಲ್ಲಿ ಜತೆಯಾಗಿ ನಟಿಸುತ್ತಿದ್ದಾರೆ. ಇಬ್ಬರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದುಬೈನಲ್ಲಿ ರಮ್ಯಾ ಭೇಟಿ ಮಾಡಿದ ಮತ್ತೋರ್ವ ನಟಿ : ಸಂಜೆಗೆ ಧನ್ಯವಾದ ಎಂದ ಅಮೃತಾ

    ದುಬೈನಲ್ಲಿ ರಮ್ಯಾ ಭೇಟಿ ಮಾಡಿದ ಮತ್ತೋರ್ವ ನಟಿ : ಸಂಜೆಗೆ ಧನ್ಯವಾದ ಎಂದ ಅಮೃತಾ

    ಚಂದವನದ ಯುವನಟಿ ಅಮೃತಾ ಅಯ್ಯಂಗಾರ್ ಸಿನಿಲೋಕಕ್ಕೆ ಬಂದು ಸೂಪರ್‌ ಹಿಟ್‌ ಸಿನಿಮಾಗಳನ್ನು ಕೊಡುತ್ತಿದ್ದಾರೆ. ಚಂದನವನದ ನವತಾರೆಯಾಗಿ ಮಿಂಚುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಆಗಿರುವ ಈ ನಟಿ ತಮ್ಮ ಅಪ್ಡೇಟ್ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಈ ಪೋಸ್ಟ್‌ಗೆ ಮೋಹಕ ತಾರೆ ರಮ್ಯಾ ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದರು. ಆ ಕಾಮೆಂಟ್‌ಗಳನ್ನು ನೋಡಿ ಅಮೃತಾ ಫುಲ್ ಉತ್ಸುಕರಾಗಿ ರಮ್ಯಾ ಅವರಿಗೆ ಧನ್ಯವಾದ ಹೇಳುತ್ತಿದ್ದರು. ಆದರೆ ಈಗ ರಮ್ಯಾ ಅವರು ಅಮೃತ ಅಯ್ಯಂಗಾರ್ ಕುಟುಂಬವನ್ನು ಭೇಟಿ ಮಾಡಿದ್ದು, ಅದ್ಭುತ ಸಮಯ ಕಳೆದಿದ್ದಾರೆ. ಈ ಕುರಿತು ಅಮೃತ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ.

    ಇನ್ಸ್ಟಾಗ್ರಾಮ್ನಲ್ಲಿ ರಮ್ಯಾ ಮತ್ತು ಅವರ ತಾಯಿಯ ಜೊತೆಗಿನ ಫೋಟೋವನ್ನು ಶೇರ್ ಮಾಡಿರುವ ಅಮೃತಾ, ‘ಆಹಾ, ಇದು ಸಂಭವಿಸಿತು. ಒಂದೇ ಫ್ರೇಮ್ನಲ್ಲಿ ನನಗೆ ಸ್ಫೂರ್ತಿ ತುಂಬಿದ ಇಬ್ಬರು ಇದ್ದಾರೆ. divyaspandana ಲವ್ ಯು ದಿ ಮೋಸ್ಟ್. ಈ ಅದ್ಭುತ ಸಂಜೆಗೆ ಧನ್ಯವಾದಗಳು’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಅಮೃತಾ ಅವರ ತಾಯಿ ತನ್ನ ಒಂದು ಭುಜದಲ್ಲಿ ರಮ್ಯಾ ಅವರನ್ನು, ಇನ್ನೊಂದು ಭುಜದಲ್ಲಿ ಮಗಳು ಅಮೃತಾಳನ್ನು ಮಲಗಿಸಿಕೊಂಡಿದ್ದು, ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಇದನ್ನೂ ಓದಿ: ವೈರಲ್‌ ಆಯ್ತು ಹರ್ಷಿಕಾ ನಟನೆಯ `ತಾಯ್ತ’ ಚಿತ್ರದ ಲುಕ್

     

    View this post on Instagram

     

    A post shared by Amy❤️ (@amrutha_iyengar)

    ಈ ಫೋಟೋಗೆ ಕಾಮೆಂಟ್ ಮಾಡಿದ ಮೋಹಕ ತಾರೆ, ಆಮಿ ನಿಮ್ಮೊಂದಿಗೆ ಮತ್ತು ಕುಟುಂಬದೊಂದಿಗೆ ಕಳೆದ ಸಮಯ ನಿಮ್ಮಷ್ಟೆ ನನಗೂ ಖುಷಿ ತಂದಿದೆ. ನಿಮ್ಮ ಉಳಿದ ರಜೆಯನ್ನು ಆನಂದಿಸಿ. ನಿಮ್ಮ ಸ್ವೀಟ್ ಅಮ್ಮ, ಪ್ರಿಯಾಂಕಾ, ನಿಶಾಂತ್ ಮತ್ತು ಚಿಕ್ಕಮ್ಮನಿಗೆ ನನ್ನ ತುಂಬು ಪ್ರೀತಿಯಿದೆ ಎಂದು ಬರೆದು ಕಾಮೆಂಟ್ ಮಾಡಿದ್ದಾರೆ.

    ಈ ಫೋಟೋ ನೋಡಿದ ಸೆಲೆಬ್ರಿಟಿಗಳು ಸಖತ್ ಖುಷ್ ಆಗಿದ್ದಾರೆ. ಅದರಲ್ಲಿಯೂ ನಟಿ ನಿಶ್ವಿಕಾ, ನನಗೆ ಈ ಫೋಟೋ ನೋಡಿ ಅಸೂಯೆಯಾಗುತ್ತಿದೆ. ಆದರೂ ಈ ಫೋಟೋ ತುಂಬಾ ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಗಾಯಕ ವಾಸುಕಿ ವೈಭವ್, ಓ ಮೈ ಗಾಡ್, ನಾನು ದುಬೈಗೆ ಬರುತ್ತಿದ್ದೆ ಎಂದು ಕಾಮೆಂಟ್ ಮಾಡಿದ್ದಾರೆ. ಅಭಿಮಾನಿಗಳು ಈ ಫೋಟೋ ನೋಡಿ ಫುಲ್ ಫಿದಾ ಆಗಿದ್ದಾರೆ. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

    ಪ್ರಸ್ತುತ ಅಮೃತ ಅಯ್ಯಂಗಾರ್ ತಮ್ಮ ಕುಟುಂಬದ ಜೊತೆ ಹಾಲಿಡೇ ಎಂಜಯ್ ಮಾಡಲು ದುಬೈಗೆ ಹಾರಿದ್ದಾರೆ. ಈ ವೇಳೆ ರಮ್ಯಾ ಅವರು ಸಿಕ್ಕಿದ್ದು, ಅದ್ಭುತ ಸಮಯ ಕಳೆದಿರುವುದಾಗಿ ಪೋಸ್ಟ್ ಬರೆದುಕೊಂಡಿದ್ದಾರೆ

  • ನಟಿಗೆ ಪ್ರಪೋಸ್ ಮಾಡಿದ ಡಾಲಿ ಧನಂಜಯ್!

    ನಟಿಗೆ ಪ್ರಪೋಸ್ ಮಾಡಿದ ಡಾಲಿ ಧನಂಜಯ್!

    ಬೆಂಗಳೂರು: ಬಡವ ರಾಸ್ಕಲ್ ಗೆಲುವಿನ ಸಂಭ್ರಮದಲ್ಲಿರುವ ಡಾಲಿ ಧನಂಜಯ್ ಇದೀಗ ರೋಸ್ ಹಿಡಿದು ನಟಿಗೆ ಪ್ರಪೋಸ್ ಮಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಲವ್ ಬಗ್ಗೆ ತಲೆ ಕೆಡಸಿಕೊಳ್ಳದೇ, ಮದುವೆ ಬಗ್ಗೆ ಎಲ್ಲೂ ಬಾಯಿ ಬಿಡದ ಡಾಲಿ ಇದೀಗ ನಟಿ ಅಮೃತ ಅಯ್ಯಂಗಾರ್‌ಗೆ ಪ್ರಪೋಸ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಡಾಲಿ ಧನಂಜಯ್ ಅವರು ಅಮೃತಾ ಎದುರು ರೋಸ್ ಹಿಡಿದು ಕುಳಿತಿದ್ದಾರೆ. ಮಂಡಿಯೂರಿ ಬೇಡುವೆನು, ಹೃದಯ ಕಾಲಡಿ ಇಡುವೇನು ತೆಗೆದು ಬಚ್ಚಿಟ್ಟುಕೋ ಇಲ್ಲ ತುಳಿದು ಕಾಲ್ ತೋಳೆದುಕೋ. ಬೇಡ ಈ ಮೌನ, ನೀ ಮಾಡು ತೀರ್ಮಾನ ಎಂದು ಡಾಲಿ ಅಮೃತಾ ಎದುರು ಲವ್ ಪ್ರಪೋಸ್ ಇಟ್ಟಿದ್ದಾರೆ. ನಟಿ ಮಾತ್ರ ಮುಗುಳು ನಕ್ಕು ಸುಮ್ಮನಾಗಿದ್ದಾರೆ. ಇದನ್ನೂ ಓದಿ:  ಸೂಪರ್ ಹಾಟ್ ದೀಪಿಕಾ ಪಡುಕೋಣೆ ತೊಟ್ಟ ಡ್ರೆಸ್ ಬೆಲೆ ಎಷ್ಟು ಗೊತ್ತಾ?

    ಖಾಸಗಿ ವಾಹಿನಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿ ಕೊಡುವ ಕಾರ್ಯಕ್ರಮದಲ್ಲಿ ಈ ಜೋಡಿಗೆ ಟಾಸ್ಕ್ ನೀಡಲಾಗಿತ್ತು. ಅಮೃತಾ ಅವರಿಗೆ ಡಾಲಿ ಧನಂಜಯ್ ರೋಸ್ ಕೊಟ್ಟು ಡೈಲಾಗ್ ಹೇಳಿ ಪ್ರಪೋಸ್ ಮಾಡಬೇಕಿತ್ತು. ಜೊತೆಗೆ ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಕೂಡಾ ಮಾಡಿದ್ದಾರೆ. ಇದನ್ನೂ ಓದಿ: ಅದ್ದೂರಿಯಾಗಿ ನಡೆಯುತ್ತಿದೆ ಮೌನಿ ರಾಯ್ ಅರಿಶಿನ ಶಾಸ್ತ್ರ