ತೆರೆಯ ಮೇಲೆ ಬೆಸ್ಟ್ ಜೋಡಿಯಾಗಿ ಮಿಂಚಿರೋ ಡಾಲಿ- ಅಮೃತಾಗೆ ಅಪಾರ ಅಭಿಮಾನಿಗಳ ಬಳಗವಿದೆ. ಸಿನಿಮಾದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ಈ ಜೋಡಿ ಜಂಟಿಯಾದರೆ ಚೆನ್ನಾಗಿರುತ್ತೆ ಆಶಿಸುವ ಅಭಿಮಾನಿಗಳಿದ್ದಾರೆ. ಹೀಗಿರುವಾಗ ಇಬ್ಬರು ಎಂಗೇಜ್ ಆಗಿದ್ದಾರೆ ಎನ್ನುವ ಸುದ್ದಿ ಕೂಡ ಹಬ್ಬಿತ್ತು. ಈ ಸುದ್ದಿ ನಿಜಾನಾ? ಇಬ್ಬರ ಗೆಳೆತನ ಹೇಗಿದೆ ಎಂಬುದರ ಬಗ್ಗೆ ಅಮೃತಾ ಅಯ್ಯಂಗಾರ್ ಮಾತನಾಡಿದ್ದಾರೆ.
‘ಪಾಪ್ ಕಾರ್ನ್ ಮಂಕಿ ಟೈಗರ್’, ಬಡವ ರಾಸ್ಕಲ್, ಹೊಯ್ಸಳ ಸಿನಿಮಾದಲ್ಲಿ ಡಾಲಿ- ಅಮೃತಾ ಒಟ್ಟಿಗೆ ನಟಿಸಿದ್ದಾರೆ. ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಜನರಿಗೆ ಇಷ್ಟವಾಗಿದೆ. ಇಬ್ಬರ ಜೋಡಿ ಇಷ್ಟವಾಗುತ್ತಿದ್ದಂತೆ ಗಾಸಿಪ್ ಕೂಡ ದೊಡ್ಡ ಮಟ್ಟದಲ್ಲಿ ಹಬ್ಬಿತ್ತು. ಇಬ್ಬರು ಡೇಟ್ ಮಾಡ್ತಿದ್ದಾರೆ ಎನ್ನಲಾಗಿತ್ತು. ಸಾಕಷ್ಟು ಕಡೆ ಇಬ್ಬರಿಗೂ, ಮದುವೆ ಬಗ್ಗೆ ಸ್ನೇಹಿತರು & ಅಭಿಮಾನಿಗಳು ಕೇಳ್ತಾ ಇದ್ರು. ಇದಕ್ಕೆಲ್ಲಾ ನಟಿ ಉತ್ತರ ನೀಡಿದ್ದಾರೆ. ಇದನ್ನೂ ಓದಿ:ಟಿಪ್ಪು ಸುಲ್ತಾನ್ ಕುರಿತ ಸಿನಿಮಾಗೆ ಬಿತ್ತು ಬ್ರೇಕ್- ಅಸಲಿ ಕಾರಣ ಬಿಚ್ಚಿಟ್ಟ ನಿರ್ಮಾಪಕ
ಡಾಲಿ- ಅಮೃತಾ ಡೇಟಿಂಗ್ ಮಾಡ್ತಿದ್ದಾರಾ ಎಂಬ ಬಗ್ಗೆ ಅಮೃತಾ ನೇರವಾಗಿ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ. ನನಗೆ ಗೊತ್ತು ಅಭಿಮಾನಿಗಳು ನನ್ನ ಮತ್ತು ಡಾಲಿ ಜೋಡಿಯನ್ನ ತೆರೆಯ ಮೇಲೆ ನೋಡೋದಕ್ಕೆ ಇಷ್ಟಪಡ್ತಾರೆ ಅಂತಾ. ನಾವು ಮೂರು ಸಿನಿಮಾಗಳನ್ನ ಒಟ್ಟಿಗೆ ಮಾಡಿದ್ದೇವೆ. ಹಾಗಾಗಿ ನಮ್ಮನ್ನ ನೋಡಿ ನಮ್ಮ ನಡುವೆ ಏನೋ ಇದೆ ಅಂತಾ ಊಹೆ ಮಾಡುತ್ತಾರೆ.
ತೆರೆಮೇಲಿನ ಕೆಮಿಸ್ಟ್ರಿಗಿಂತ ತೆರೆಹಿಂದೆ ಬೇರೇ ಏನೋ ಇದೆ ಅಂತಾ ನಮ್ಮ ಬಗ್ಗೆ ಯೋಚಿಸುತ್ತಾರೆ. ನಾನು ಡಾಲಿ ಅವರೊಂದಿಗೆ ಕೆಲಸ ಮಾಡಲು ಕಂಫರ್ಟ್ ಆಗಿದ್ದೇನೆ. ನಮ್ಮ ನಡುವೆ ಒಳ್ಳೆಯ ಸ್ನೇಹವಿದೆ ಎಂದಿದ್ದಾರೆ. ನಾನಿನ್ನೂ ಸಿಂಗಲ್ ಆಗಿದ್ದೇನೆ ಎಂದು ನಟಿ ಅಮೃತಾ ಡಾಲಿ ಜೊತೆಗಿನ ಡೇಟಿಂಗ್ ವದಂತಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ನಮ್ಮ ನಡುವೆ ಏನಿಲ್ಲ, ನಾವು ಒಳ್ಳೆಯ ಸ್ನೇಹಿತರು ಎಂದು ನಟಿ ಖಚಿತಪಡಿಸಿದ್ದಾರೆ.
‘ಹೊಯ್ಸಳ’ (Hoysala)ಸಿನಿಮಾದ ಸಕ್ಸಸ್ ನಂತರ ಅಧ್ಯಕ್ಷ ನಟ ಶರಣ್‌ಗೆ (Sharan) ಅಮೃತಾ (Amrutha) ನಾಯಕಿಯಾಗಿದ್ದಾರೆ. ಡಿಫರೆಂಟ್ ಆಗಿರೋ ಕಥೆಯಲ್ಲಿ ಅಮೃತಾ ಪಾತ್ರಕ್ಕೂ ಪ್ರಾಮುಖ್ಯತೆಯಿದೆ. ಸಿನಿಮಾಗಾಗಿ ಉತ್ತರ ಕರ್ನಾಟಕ ಭಾಷೆಯನ್ನ ನಟಿ ಕಲಿಯುತ್ತಿದ್ದಾರೆ.
ಧನಂಜಯ್ (Dhananjay) ನಟನೆಯ 25ನೇ ಸಿನಿಮಾ `ಗುರುದೇವ್ ಹೊಯ್ಸಳ’ ಮಾರ್ಚ್ 30ರಂದು ತೆರೆ ಕಂಡಿದೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸೌಂಡ್ ಮಾಡ್ತಿದೆ. 25ನೇ ಸಿನಿಮಾ ರಿಲೀಸ್ ಆಗಿರುವ ಶುಭ ಸಂದರ್ಭದಲ್ಲಿ ಡಾಲಿಗೆ ವಿಶೇಷ ಉಡುಗೊರೆಯೊಂದು ಸಿಕ್ಕಿದೆ. ಈ ಕುರಿತು ಡಾಲಿ ಸೋಷಿಯಲ್ ಮೀಡಿಯಾದಲ್ಲಿ ಖುಷಿ ಸುದ್ದಿ ಹೇಳಿಕೊಂಡಿದ್ದಾರೆ.
ಡಾಲಿ- ಅಮೃತಾ ನಟನೆಯ `ಹೊಯ್ಸಳ’ ಸಿನಿಮಾ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಡಾಲಿ, ಅಮೃತಾ, ನವೀನ್ ಶಂಕರ್, ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. `ಗುರುದೇವ್ ಹೊಯ್ಸಳ’ ಕಥೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಚಿತ್ರ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಡಾಲಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ದುಬಾರಿ ಬೆಲೆಯ Toyota Vellfire ಕಾರನ್ನ ಚಿತ್ರದ ನಿರ್ಮಾಪಕರಾದ ಕಾರ್ತಿಕ್- ಯೋಗಿ ಡಾಲಿಗೆ ಉಡುಗೊರೆ ನೀಡಿದ್ದಾರೆ.
25th film and a special gift from my special people. Love you and cheers for more and more things we are going to do together. Thanks for such good memories❤️
25ನೇ ಚಿತ್ರ ಮತ್ತು ನನ್ನ ವಿಶೇಷ ವ್ಯಕ್ತಿಗಳಿಂದ ವಿಶೇಷ ಉಡುಗೊರೆ. ಲವ್ ಯೂ ನಾವು ಒಟ್ಟಿಗೆ ಮಾಡಲಿರುವ ಹೆಚ್ಚು ಹೆಚ್ಚು ಕೆಲಸಗಳಿಗಾಗಿ ಚೀರ್ಸ್. ಇಂತಹ ಒಳ್ಳೆಯ ನೆನಪುಗಳಿಗೆ ಧನ್ಯವಾದಗಳು ಎಂದು ಡಾಲಿ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಡಾಲಿ ಇದೀಗ ಕೋಟಿ ಕಾರಿನ ಒಡೆಯನಾಗಿದ್ದಾರೆ. ನಿರ್ಮಾಪಕರಾದ ಕಾರ್ತಿಕ್-ಡಾಲಿ ಉಡುಗೊರೆ ನೀಡಿರುವ Toyota Vellfire ಕಾರಿಗೆ 1 ಕೋಟಿ ಬೆಲೆಯದಾಗಿದೆ.
ಡಾಲಿ- ಅಮೃತಾ ಅಯ್ಯಂಗಾರ್ (Amrutha Iyengar) ನಟನೆಯ `ಹೊಯ್ಸಳ’ (Hoysala Film) ಸಿನಿಮಾ ಮಾ.30ರಂದು ತೆರೆಗೆ ಅಬ್ಬರಿಸಿದೆ. ಗಲ್ಲಾಪೆಟ್ಟಿಗೆಯಲ್ಲಿ ಸೌಂಡ್ ಮಾಡ್ತಿರುವ ಈ ಚಿತ್ರದ ಬಗ್ಗೆ ರಮ್ಯಾ ಹಾಡಿ ಹೊಗಳಿದ್ದಾರೆ. ಡಾಲಿ-ಅಮೃತಾ ಲವ್ ಬಗ್ಗೆ ರಮ್ಯಾ (Ramya) ಸುಳಿವು ಬಿಟ್ಟು ಕೊಟ್ಟಿದ್ದಾರೆ.
ಧನಂಜಯ್, ಅಮೃತಾ, ನವೀನ್ ಶಂಕರ್ ನಟನೆಯ `ಹೊಯ್ಸಳ’ ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಡಾಲಿಯನ್ನ ನಟ ರಾಕ್ಷಸ ಅಂದ್ರೆ, ನವೀನ್ ಅವರನ್ನ ಬಲಿ ರಾಕ್ಷಸ ಅಂತಾ ಕರೆಯುತ್ತಿದ್ದಾರೆ. ಡಾಲಿ ಖಾಕಿ ಖದರ್ ಚಿತ್ರದಲ್ಲಿ ಕಮಾಲ್ ಮಾಡಿದೆ.
ನಟಿ ರಮ್ಯಾ ಕೂಡ ಫಸ್ಟ್ ಡೇ ಫಸ್ಟ್ ಶೋ `ಹೊಯ್ಸಳ’ ಸಿನಿಮಾ ನೋಡಿ ಚಿತ್ರತಂಡಕ್ಕೆ ಭೇಷ್ ಎಂದಿದ್ದಾರೆ. ಚಿತ್ರದ ಬಗ್ಗೆ ವಿಮರ್ಶೆ ಹೇಳುವಾಗ ಡಾಲಿ- ಅಮೃತಾ ಬಗ್ಗೆ ರಮ್ಯಾ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.
ಈ ಸಿನಿಮಾದಲ್ಲಿ ಗಂಡ-ಹೆಂಡತಿಯಾಗಿ ಡಾಲಿ-ಅಮೃತ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಹೇಗಿದೆ? ನೀವೂ ಎಷ್ಟು ಮಾರ್ಕ್ಸ್ ಕೊಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ಡಾಲಿ ಹಾಗೂ ಅಮೃತಾ ಇಬ್ಬರ ಆಫ್ ಲೈನ್ ಹಾಗೂ ಆನ್ ಲೈನ್ ಕೆಮಿಸ್ಟ್ರಿ ಸೂಪರ್ ಎಂದು ಹೇಳಿದ್ದಾರೆ. ‘ಗಂಡ-ಹೆಂಡತಿಯಾಗಿ ಧನಂಜಯ್ ಮತ್ತು ಅಮೃತಾ ಚೆನ್ನಾಗಿ ನಟಿಸಿದ್ದಾರೆ. ಇಬ್ಬರ ನಟನೆಗೂ 10ಕ್ಕೆ 10 ಮಾರ್ಕ್ಸ್ ನೀಡುತ್ತೇನೆ ಎಂದಿದ್ದಾರೆ. ಈ ಮೂಲಕ ಇಬ್ಬರ ಲವ್ ಬಗ್ಗೆ ರಮ್ಯಾ ಸುಳಿವು ಬಿಟ್ಟು ಕೊಟ್ಟಿದ್ದಾರೆ.
ಸ್ಯಾಂಡಲ್‌ವುಡ್ ಮೋಹಕತಾರೆ ರಮ್ಯಾ (Ramya) ಹೊಸ ವರ್ಷ ಅದ್ದೂರಿಯಾಗಿ ಸ್ವಾಗತಿಸಲು ಲಂಡನ್‌ಗೆ (London) ಹಾರಿದ್ದಾರೆ. ಪದ್ಮಾವತಿಗೆ ಸಾಥ್ ಕೊಡಲು ಅಮೃತಾ ಅಯ್ಯಂಗಾರ್ (Amrutha Iyengar) ಕೂಡ ಬಂದಿದ್ದಾರೆ. ಇದೀಗ ರಮ್ಯಾ, ಅಮೃತಾ ಇಬ್ಬರ ಮಸ್ತ್ ಮಸ್ತ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಟಿ ರಮ್ಯಾ ಮತ್ತೆ ನಟನೆಗೆ ಕಮ್‌ಬ್ಯಾಕ್ ಆಗುತ್ತಿದ್ದಾರೆ. ಚಿತ್ರರಂಗದಲ್ಲಿ ಆಕ್ಟೀವ್ ಆಗ್ತಿದ್ದಾರೆ. ಹೀಗಿರುವಾಗ ಹೊಸ ವರ್ಷ ಸಂತಸದಿಂದ ಬರಮಾಡಿಕೊಳ್ಳಲು ನಟಿ ಅಮೃತಾ ಜೊತೆ ಲಂಡನ್‌ಗೆ ಹಾರಿದ್ದಾರೆ. ದೂರದ ದೇಶ ಲಂಡನ್‌ನಲ್ಲಿ ಹೊಸ ಹೊಸ ಜಾಗಗಳಿಗೆ ಭೇಟಿ ಕೊಡುತ್ತಾ ಎಂಜಾಯ್ ಮಾಡ್ತಿದ್ದಾರೆ. ಈಗ ಲಂಡನ್ ಪ್ರವಾಸದಲ್ಲಿ ಮಸ್ತ್ ಮಜಾ ಮಾಡುತ್ತಿರುವ ಈ ಇಬ್ಬರ ನಟಿಯರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ಪ್ರಶಾಂತ್ ನೀಲ್ ಸಿನಿಮಾದಲ್ಲಿ ಆಮೀರ್ ಖಾನ್: ಗಾಂಧಿನಗರ ಗುಸು ಗುಸು
ಇನ್ನೂ ರಮ್ಯಾ ಮತ್ತು ಡಾಲಿ (Dhananjay) ನಟನೆಯ `ಉತ್ತರಾಕಾಂಡ’ (Uttarakanda) ಸಿನಿಮಾ 2023ರ ಜನವರಿಯಿಂದ ಶೂಟಿಂಗ್ ಶುರುವಾಗಲಿದೆ. ಇಬ್ಬರ ಕಾಂಬಿನೇಷನ್ ಸಿನಿಮಾ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಸ್ಯಾಂಡಲ್‌ವುಡ್‌ನಲ್ಲಿ ಹವಾ ಕ್ರಿಯೇಟ್ ಮಾಡಿದ್ದ `ಬಡವ ರಾಸ್ಕಲ್’ ಜೋಡಿ ಮತ್ತೆ ತೆರೆಯ ಮೇಲೆ ಒಂದಾಲು ಸಜ್ಜಾಗಿದ್ದಾರೆ. ಈ ಬಾರಿ ಹೊಯ್ಸಳನಾಗಿ ಡಾಲಿ ಮಿಂಚಲಿದ್ದಾರೆ. ಸದ್ಯ `ಹೊಯ್ಸಳ’ ಚಿತ್ರತಂಡ ಅದ್ದೂರಿಯಾಗಿ ಮುಹೂರ್ತ ನೆರೆವೇರಿಕೊಂಡಿದೆ.
ವಿಜಯ್ ಕಿರಗಂದೂರ್ ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಅಡಿಯಲ್ಲಿ ಡಾಲಿ ಧನಂಜಯ ನಾಯಕರಾಗಿ ನಟಿಸುತ್ತಿರುವ `ಹೊಯ್ಸಳ’ ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಡಾಲಿಗೆ ನಾಯಕಿಯಾಗಿ ಅಮೃತಾ ಸ್ಕ್ರೀನ್ ಶೇರ್ ಮಾಡಲಿದ್ದಾರೆ.
ವಿಜಯ್ ಎನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ `ಹೊಯ್ಸಳ’ ಚಿತ್ರದಲ್ಲಿ ಡಿಫರೆಂಟ್ ರೋಲ್‌ನಲ್ಲಿ ಡಾಲಿ ಮಿಂಚಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಕಾರ್ತಿಕ್ ಎಸ್ ಛಾಯಾಗ್ರಹಣವಿದೆ. ಚಿತ್ರದಲ್ಲಿ ಅಚ್ಯುತಕುಮಾರ್, ನವೀನ್ ಶಂಕರ್, ಅವಿನಾಶ್, ರಾಜೇಶ್ ನಟರಂಗ ಹಾಗೂ ನಾಗಭೂಷಣ್ ಸಾಥ್ ನೀಡಲಿದ್ದಾರೆ. ಇದನ್ನೂ ಓದಿ: Love…ಲಿ ಅಂತಿದ್ದಾರೆ ಆಂಗ್ರಿ ಯಂಗ್ ಮ್ಯಾನ್ ವಸಿಷ್ಠ ಸಿಂಹ: ಚಿಟ್ಟೆ ನ್ಯೂ ಲುಕ್ ಹೇಗಿದೆ ಗೊತ್ತಾ?
`ಪಾಪ್ ಕಾರ್ನ್ ಮಂಕಿ ಟೈಗರ್’ ಮತ್ತು `ಬಡವ ರಾಸ್ಕಲ್’ ನಂತರ ಡಾಲಿ ಮತ್ತು ಅಮೃತಾ ಜೋಡಿ ಮತ್ತೆ ಒಟ್ಟಿಗೆ ತೆರೆ ಹಂಚಿಕೊಳ್ತಿರೋದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಡಾಲಿಯನ್ನ ಹೊಯ್ಸಳನಾಗಿ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.
ಹೈದರಾಬಾದ್: ಪ್ರಣಯ್ ಮರ್ಯಾದಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾರುತಿ ರಾವ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಕೊನೆಯದಾಗಿ ಅಮೃತಾ ತನ್ನ ತಂದೆಯ ಅಂತಿಮ ದರ್ಶನ ಪಡೆಯಲು ಹೋಗಿದ್ದರು.
ಮಾರುತಿ ರಾವ್ ಹೈದರಾಬಾದ್‍ನ ಖೈರತಾಬಾದ್ ಆರ್ಯವೈಶ್ಯ ಭವನನಲ್ಲಿ ಉಳಿದುಕೊಂಡಿದ್ದು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಈತನ ಅಂತ್ಯಕ್ರಿಯೆ ಸೋಮವಾರ ಗಾಂಧಿನಗರದಲ್ಲಿ ನಡೆದಿದೆ. ಈ ವೇಳೆ ಅಮೃತಾ ತನ್ನ ತಂದೆಯ ಅಂತಿಮ ದರ್ಶನ ಮಾಡಲೆಂದು ಹೋಗಿದ್ದರು. ಆಗ ಮಾರುತಿ ರಾವ್‍ನ ಕೊನೆಯ ವಿಧಿ-ವಿಧಾನಗಳನ್ನು ನಡೆಸಲಾಗುತ್ತಿತ್ತು. ಇದನ್ನೂ ಓದಿ: ‘ಅಮೃತಾ ಅಮ್ಮನ ಬಳಿಗೆ ಬಾ’- ಮಗಳಿಗೆ ಮಾರುತಿ ರಾವ್ ಭಾವನಾತ್ಮಕ ಸಂದೇಶ
ಅಮೃತಾ ಮೇಲೆ ಹಲ್ಲೆ ನಡೆಸುವ ಸಾಧ್ಯತೆಯಿದೆ ಎಂಬ ಅನುಮಾನದಿಂದ ಪೊಲೀಸರು ಎಚ್ಚರಿಕೆವಹಿಸಿದ್ದರು. ಹೀಗಾಗಿ ಅಮೃತಾಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಅಮೃತಾ ತನ್ನ ಮಗುವಿನೊಂದಿಗೆ ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಮಾರುತಿ ರಾವ್‍ನ ಹತ್ತಾರು ಮಂದಿ ಹಿತೈಷಿಗಳು ಅಮೃತಾರನ್ನು ಸುತ್ತುವರಿದರು. ಅಲ್ಲದೆ ಅನೇಕರು ಅಮೃತಾಗೆ ಧಿಕ್ಕಾರ ಕೂಗಿದರು.
ಅಷ್ಟೇ ಅಲ್ಲದೆ ತಂದೆಯ ಸಾವಿಗೆ ನೀನೇ ಕಾರಣ ಎಂದು ಬೈಯುತ್ತಾ, ಮಾರುತಿ ರಾವ್ ಅಮರವಾಗಿರಲಿ ಎಂದು ಘೋಷಣೆ ಕೂಗಿದರು. ಆದರೂ ಅಮೃತಾ ತಂದೆಯನ್ನು ಹತ್ತಿರದಿಂದ ನೋಡಲು ಮುಂದೆ ಹೋಗುತ್ತಿದ್ದರು. ತಕ್ಷಣ ಅನೇಕ ಮಂದಿ ಆಕೆಯನ್ನು ಅಲ್ಲೇ ತಡೆದರು. ಕೊನೆಗೆ ದೂರದಿಂದಲೇ ತಂದೆಯ ಮುಖವನ್ನು ನೋಡಿ ಪೊಲೀಸರ ಜೊತೆ ಬಂದಿದ್ದ ಕಾರಿನಲ್ಲೇ ಅಮೃತಾ ವಾಪಸ್ ಹೋಗಿದ್ದಾರೆ.
ಮಾರುತಿ ರಾವ್ ಕಿರಿಯ ಸೋದರ ಶ್ರವಣ್ ಮಾರುತಿ ರಾವ್ ನ ಅಂತಿಮ ಕ್ರಿಯೆಯನ್ನು ನೆರವೇರಿಸಿದ್ದಾರೆ. ತಂದೆಯ ಸಾವಿನ ಸುದ್ದಿ ತಿಳಿದ ನಂತರ ಮಾತನಾಡಿದ್ದ ಅಮೃತಾ, ಪ್ರಣಯ್ ಹತ್ಯೆ ಮಾಡಿದ್ದಕ್ಕೆ ಪಶ್ಚಾತ್ತಾಪ ಪಟ್ಟು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಿದ್ದರು.
ಹೈದರಾಬಾದ್: ದೇಶಾದ್ಯಂತ ಸಂಚಲನವನ್ನು ಉಂಟು ಮಾಡಿದ್ದ ಆಂಧ್ರ ಪ್ರದೇಶದ ಪ್ರಣಯ್ ಮರ್ಯಾದಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾರುತಿ ರಾವ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಇದೀಗ ಮಾರುತಿ ರಾವ್ ಕೊನೆಯದಾಗಿ ತನ್ನ ಮಗಳಿಗೆ ಭಾವನಾತ್ಮಕ ಸಂದೇಶ ಬರೆದಿರುವ ಡೆತ್‍ನೂಟ್ ಪತ್ತೆಯಾಗಿದೆ.
ಮಾರುತಿ ರಾವ್ ಹೈದರಾಬಾದ್‍ನ ಖೈರತಾಬಾದ್ ಆರ್ಯವೈಶ್ಯ ಭವನನಲ್ಲಿ ಉಳಿದುಕೊಂಡಿದ್ದು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಇದೀಗ ಅದೇ ರೂಮಿನ ಡ್ರೆಸ್ಸಿಂಗ್ ಟೇಬಲ್ ಮೇಲೆ ಡೆತ್‍ನೋಟ್ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಣಯ್ ಮರ್ಯಾದಾ ಹತ್ಯೆ ಕೇಸ್- ಅಮೃತಾ ತಂದೆ ಆತ್ಮಹತ್ಯೆ
ಡೆತ್‍ನೋಟ್‍ನಲ್ಲಿ ಪತ್ನಿ ಮತ್ತು ಮಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾನೆ. ಮೊದಲಿಗೆ ಪತ್ನಿಗೆ ಗಿರಿಜಾ ನನ್ನನ್ನು ಕ್ಷಮಿಸು ಎಂದು ಬರೆದಿದ್ದಾನೆ. ನಂತರ ಅಮೃತಾ ಅಮ್ಮನ ಬಳಿ ಬಾ ಎಂದು ಬರೆದಿದ್ದಾನೆ. ಸದ್ಯಕ್ಕೆ ಪೊಲೀಸರು ಇದು ಮಾರುತಿ ರಾವ್ ಕೈ ಬರವೇ ಎಂದು ಪರಿಶೀಲನೆ ಮಾಡುತ್ತಿದ್ದಾನೆ. ಇದನ್ನೂ ಓದಿ: ತಂದೆಯಿಂದ ಪತಿಯನ್ನು ಕಳೆದುಕೊಂಡಿದ್ದ ಅಮೃತಾಗೆ ಗಂಡು ಮಗು ಜನನ
ಪ್ರಣಯ್ ಹತ್ಯೆಯ ಬಳಿ ಅಮೃತಾ ಅಮ್ಮನ ಮನೆಗೆ ಹೋಗಿಲ್ಲ. ಬದಲಿಗೆ ಪ್ರಣಯ್ ಅಮ್ಮ ಅಮೃತಾ ಮತ್ತು ಮೊಮ್ಮಗನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅಮೃತಾಗೆ ತನ್ನ ಅಮ್ಮನ ಬಳಿ ಹೋಗುವಂತೆ ಮಾರುತಿ ರಾವ್ ಡೆತ್‍ನೋಟಿನಲ್ಲಿ ತಿಳಿಸಿದ್ದಾನೆ.
ಏನಿದು ಪ್ರಕರಣ?
ಮಾರುತಿ ರಾವ್ ನಲ್ಗೊಂಡ ಜಿಲ್ಲೆಯ ಮಿರ್ಯಾಲಗೂಡಿನಿಂದ ಕೆಲಸ ಇದೆ ಎಂದು ಮನೆಯಿಂದ ಹೈದರಾಬಾದ್‍ಗೆ ಹೋಗುವುದಾಗಿ ಪತ್ನಿ ಗಿರಿಜಾಗೆ ತಿಳಿಸಿದ್ದನು. ಆದರೆ ಯಾವ ಕೆಲಸ ಎಂದು ಪತ್ನಿಗೆ ತಿಳಿಸಿರಲಿಲ್ಲ. ಅಲ್ಲದೇ ತನ್ನ ಚಾಲಕ ರಾಜೇಶ್‍ಗೂ ಏನು ಹೇಳದೆ ಕರೆದುಕೊಂಡು ಹೋಗಿದ್ದನು. ಶನಿವಾರ ಆರ್ಯವೈಶ್ಯ ಭವನಕ್ಕೆ ಹೋಗಿ ಊಟಿ ಮಾಡಿ ರೂಮ್‍ಗೆ ಹೋಗಿದ್ದನು. ಚಾಲಕ ಕಾರಿನಲ್ಲಿಯೇ ಮಲಗಿದ್ದನು.
ಮಾರುತಿ ರಾವ್‍ಗೆ ಪತ್ನಿ ಎಷ್ಟೇ ಬಾರಿ ಫೋನ್ ಕರೆ ಮಾಡಿದರೂ ಸ್ವೀಕರಿಸಿದ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಮಾಹಿತಿ ನೀಡಿದ ವೇಳೆ ಘಟನೆ ಬೆಳಕಿಗೆ ಬಂದಿತ್ತು. ಮಾರುತಿ ರಾವ್ ಪತ್ನಿ ನೀಡಿದ ಮಾಹಿತಿ ಮೇರೆಗೆ ಆರ್ಯವೈಶ್ಯ ಭವನದ ಸಿಬ್ಬಂದಿ ಕೊಠಡಿಯ ಬಾಗಿಲು ಮುರಿದು ಒಳ ಪ್ರವೇಶ ಮಾಡಿದ್ದರು. ಈ ವೇಳೆ ಆತ ವಿಷ ಸೇವನೆ ಮಾಡಿರುವುದು ಬೆಳಕಿಗೆ ಬಂದಿತ್ತು.
ಹೈದರಾಬಾದ್: ದೇಶಾದ್ಯಾಂತ ಸಂಚಲನವನ್ನು ಉಂಟು ಮಾಡಿದ್ದ ಆಂಧ್ರಪ್ರದೇಶದ ಪ್ರಣಯ್ ಮರ್ಯಾದಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾರುತಿ ರಾವ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪುತ್ರಿ ಅಮೃತಾ ತನಗೆ ಇಷ್ಟವಿಲ್ಲದೆ ದಲಿತ ಯುವಕನೊಂದಿಗೆ ಮದುವೆಯಾದ ಕಾರಣ ಅಳಿಯ ಪ್ರಣಯ್‍ನನ್ನು ಕಳೆದ 2 ವರ್ಷಗಳ ಹಿಂದೆ ಸುಪಾರಿ ನೀಡಿ ಮಾರುತಿ ರಾವ್ ಕೊಲೆ ಮಾಡಿಸಿದ್ದ. ಈ ಪ್ರಕರಣದಲ್ಲಿ ಇತ್ತಿಚೆಗಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದ ಆರೋಪಿ ಮಾರುತಿ ರಾವ್ ಹೈದರಾಬಾದ್‍ನ ಖೈರತಾಬಾದ್ ಆರ್ಯವೈಶ್ಯ ಭವನನಲ್ಲಿ ಉಳಿದುಕೊಂಡಿದ್ದನು. ಈ ವೇಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಾರುತಿ ರಾವ್ ಪತ್ನಿ ಎಷ್ಟೇ ಬಾರಿ ಫೋನ್ ಕರೆ ಮಾಡಿದರೂ ಸ್ವೀಕರಿಸಿದ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಮಾಹಿತಿ ನೀಡಿದ ವೇಳೆ ಘಟನೆ ಬೆಳಕಿಗೆ ಬಂದಿದೆ.
ಮಾರುತಿ ರಾವ್ ಪತ್ನಿ ನೀಡಿದ ಮಾಹಿತಿ ಮೇರೆಗೆ ಆರ್ಯವೈಶ್ಯ ಭವನದ ಸಿಬ್ಬಂದಿ ಕೊಠಡಿಯ ಬಾಗಿಲು ಮುರಿದು ಒಳ ಪ್ರವೇಶ ಮಾಡಿದ್ದರು. ಈ ವೇಳೆ ಆತ ವಿಷ ಸೇವನೆ ಮಾಡಿರುವುದು ಬೆಳಕಿಗೆ ಬಂದಿತ್ತು. ಅಲ್ಲದೆ ಆ ವೇಳೆಗಾಗಲೇ ಸಾವನ್ನಪ್ಪಿರುವುದು ತಿಳಿದುಬಂದಿತ್ತು. ಕೂಡಲೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮಾರುತಿ ರಾವ್ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಇದನ್ನೂ ಓದಿ: ನನಗೆ ಹಣ, ಆಸ್ತಿ ಬೇಡ- ತಂದೆಯನ್ನ ಗಲ್ಲಿಗೇರಿಸಿ: ಅಮೃತಾ ಆಕ್ರೋಶದ ಮಾತು
ಆಂಧ್ರಪ್ರದೇಶದ ನಲ್ಗೋಂಡ ಜಿಲ್ಲೆಯ ಮಿರ್ಯಾಲಗೂಡು ನಿವಾಸಿಯಾಗಿದ್ದ ಮಾರುತಿ ರಾವ್ ರಿಯಲ್ ಎಸ್ಟೇಟ್ ವ್ಯವಹಾರದಿಂದ ಕೋಟಿ ಕೋಟಿ ಆಸ್ತಿ ಗಳಿಸಿದ್ದರು. ಆ ವೇಳೆ ಮಾರುತಿ ರಾವ್ ಪುತ್ರಿ ಅಮೃತಾ ದಲಿತ ಯುವಕ ಪ್ರಣಯ್‍ನನ್ನು ಪ್ರೀತಿಸಿ ವಿವಾಹವಾಗಿದ್ದರು. ಇದನ್ನು ಸಹಿಸದ ಮಾರುತಿ ರಾವ್ 2018ರ ಸೆ.15 ರಂದು ಐದು ತಿಂಗಳ ಗರ್ಭಿಣಿ ಅಮೃತ ಪತಿಯೊಂದಿಗೆ ನರ್ಸಿಂಗ್ ಹೋಮ್‍ಗೆ ಹೋಗಿ ವಾಪಸ್ ಬರುವ ಸಂದರ್ಭದಲ್ಲಿ ಪ್ರಣಯ್‍ನನ್ನು ಕೊಲೆ ಮಾಡಿದ್ದರು. ಅದಕ್ಕೂ ಮುನ್ನವೇ ಆತನ ಕೊಲೆಗೆ 4 ಬಾರಿ ಪ್ರಯತ್ನಿಸಿದ್ದಾಗಿ ಮಾರುತಿ ರಾವ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದ. ಇದನ್ನೂ ಓದಿ: ಮರ್ಯಾದಾ ಹತ್ಯೆ- ಗರ್ಭಿಣಿ ಅಮೃತಾಗೆ ಸರ್ಕಾರಿ ಉದ್ಯೋಗ, ಮನೆ, 8.25 ಲಕ್ಷ ರೂ. ಪರಿಹಾರ
ಪ್ರಕರಣದಲ್ಲಿ ಮಾರುತಿ ರಾವ್ ಹಾಗೂ ಆತನ ಸಹೋದರ ಸೇರಿದಂತೆ ಹಂತಕನ ವಿರುದ್ಧ ದೂರು ದಾಖಲಿಸಿ ವಿಚಾರಣೆ ನಡೆಸಲಾಗಿತ್ತು. ಪ್ರಕರಣದಲ್ಲಿ ವಾರಂಗಲ್ ಸೆಂಟ್ರಲ್ ಜೈಲಿನಲ್ಲಿದ್ದ ಮಾರುತಿ ರಾವ್ ಕೆಲ ದಿನಗಳ ಹಿಂದೆ ಜಾಮೀನು ಪಡೆದು ಹೊರ ಬಂದಿದ್ದ. ಇದನ್ನೂ ಓದಿ: ಮರ್ಯಾದಾ ಹತ್ಯೆಗೆ ಬಲಿಯಾದ ಪ್ರಣಯ್ ಬದುಕಿರುವುದು ಈ ವಿಡಿಯೋದಲ್ಲಿ ಮಾತ್ರ
ಆಸ್ತಿಗಾಗಿ ಒತ್ತಡ: ಕೊಲೆ ಪ್ರಕರಣದಲ್ಲಿ ಸಹೋದರರಿಬ್ಬರು ಜೈಲು ಪಾಲಾಗಿದ್ದರು. ಇತ್ತ ಪುತ್ರಿ ಅಮೃತಾ ಕೂಡ ಕುಟುಂಬಸ್ಥರ ವಿರೋಧದ ನಡುವೆಯೂ ಮದುವೆಯಾದ ಹಿನ್ನೆಲೆಯಲ್ಲಿ ಕೋಟಿ ಕೋಟಿ ಮೌಲ್ಯದ ಮಾರುತಿ ರಾವ್ ಆಸ್ತಿಯನ್ನು ತನ್ನ ಮಕ್ಕಳ ಹೆಸರಿಗೆ ಮಾಡಿಕೊಂಡು ಸಹೋದರ ಒತ್ತಡ ಹಾಕಿದ್ದ ಎನ್ನಲಾಗಿದೆ. ಆಸ್ತಿಗಾಗಿ ಸಹೋದರ ಒತ್ತಡ ಹಾಕುತ್ತಿದ್ದ ಹಿನ್ನೆಲೆಯಲ್ಲಿ ಮಾರುತಿರಾವ್ ಹೆಚ್ಚು ಹೈದರಾಬಾದ್‍ನಲ್ಲೇ ಉಳಿದುಕೊಳ್ಳುತ್ತಿದ್ದ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಮುಂದಾಗಿರಬಹುದು ಎಂಬ ಶಂಕೆ ಮೂಡಿದೆ. ಇದನ್ನೂ ಓದಿ: ತಂದೆಯಿಂದ ಪತಿಯನ್ನು ಕಳೆದುಕೊಂಡಿದ್ದ ಅಮೃತಾಗೆ ಗಂಡು ಮಗು ಜನನ
ಮುರುಳೀಧರ್ ಎಚ್.ಸಿ ಅವಳ ಹೊಟ್ಟೆಯಲ್ಲಿ ಕಂದಮ್ಮ ಕುಡಿಯೊಡೆಯುವಾಗ ಒಹೋ ಅದೆಂಥ ಸಂಭ್ರಮ. ಬದುಕು ಸಾರ್ಥಕವಾಯ್ತು ಅಂತಾ ತನ್ನ ತುಂಬು ಹೊಟ್ಟೆಯನ್ನು ಅದೆಷ್ಟು ಬಾರಿ ಸವರಿ ಖುಷಿಪಟ್ಟಿತ್ತೋ ಆ ತಾಯಿ ಜೀವ. ಇನ್ನೇನು ಯಾತನೆಯ ನೋವಿನ ಮಧ್ಯೆ ಅವಳ ಮಡಿಲಲ್ಲಿ ಕಂದಮ್ಮ ಕಿಲಕಿಲನೆ ನಗುತ್ತಿದ್ಲು. ನೋಡನೋಡುತ್ತಿದ್ದಂತೆ ಅಂಬೆಗಾಲಿಡುತ್ತ ಅಮ್ಮನ ಅಪ್ಪಿಕೊಳ್ಳುವ ಪುಟ್ಟ ಪುಟ್ಟ ಕೈಗೆ ಆ ಅಮ್ಮ ಅದೆಷ್ಟು ಬಾರಿ ಮುತ್ತಿಟ್ಟಿದ್ದಳು.
ಚಂದಮಾಮನ ತೋರಿಸಿ ತುತ್ತು ತಿನ್ನಿಸಿದ ಮಗಳು ದೊಡ್ಡವಳಾದ್ಲು. ಅಮ್ಮನ ಕನಸಿಗೆ ರೆಕ್ಕೆಪುಕ್ಕ ಬರುವ ಸಮಯ. ಆದರೆ ಮಗಳು, ಅಮ್ಮ ನಿರಮ್ಮಳವಾಗಿ ಸವಿನಿದ್ದೆಯ ಸಮಯದಲ್ಲಿದ್ಲು ಬಹುಶಃ ಅಮ್ಮನ ಕನವರಿಕೆಯಲ್ಲೂ ಮಗಳ ಭವಿಷ್ಯದ ಕನಸಿತ್ತೇನೋ? ಆದ್ರೇ ಅದೇ ನಿದ್ದೆಯಲ್ಲಿದ್ದಾಗ ಅಮ್ಮನ ಎದೆಗೆ ಮಗಳು ಚಾಕು ಚುಚ್ಚೇಬಿಟ್ಲು ನೋಡಿ. ಉಫ್ ಅಮ್ಮಂಗೆ ಮಗಳು ಚಾಕು ಚುಚ್ಚೋದು ಕಂಡಿತಾ? ಚಾಕು ಚುಚ್ಚಿದಕ್ಕೆ ಅಮ್ಮ ರಕ್ತಕಾರಿ ಸತ್ಲಾ? ಅಥವಾ ಮಗಳು ಚಾಕು ಚುಚ್ಚುತ್ತಾ ಇರುವ ರಕ್ತಸಿಕ್ತ ಚಾಕುವನ್ನೇ ನೋಡಿ ತಾಯಿ ಗೋಣುಚೆಲ್ಲಿದ್ಲಾ? ಗೊತ್ತಿಲ್ಲ. ಆದ್ರೇ ಬೆಂಗಳೂರಿನ ಕೆಆರ್ ಪುರಂನಲ್ಲಿ ಅಮ್ಮನ ಕೊಂದ ಕೊಲೆಗಾತಿ ಮಗಳ ಕಥೆ ಇಡೀ ರಾಜ್ಯವನ್ನು ಕಣ್ಣೀರಲ್ಲಿ ಕೈತೊಳೆಸುವಂತೆ ಮಾಡಿತ್ತು. ಥೂ ಅಮ್ಮ ತನ್ನ ಮಗಳಿಗೆ ಅದೆಷ್ಟು ಚಂದದ ಹೆಸ್ರು ಇಟ್ಟಿದ್ಲು ನೋಡಿ ಅಮೃತಾ ಅಂತಾ. ಆದ್ರೇ ತಾಯಿಯ ಬದುಕಿಗೆ ವಿಷವಾಗಿ ಬಿಟ್ಲು ಪಾಪಿ. ಅಕ್ಕಪಕ್ಕದ ಮನೆಯವರೆಲ್ಲ ಕಣ್ಣೀರಾದ್ರೂ ತನ್ನ ತಾಯಿಯನ್ನೇ ಬಿಗಿದಪ್ಪಿದ ಅದೇ ಕೈಯಿಂದ ಚಾಕು ಹಿಡಿದು ಕೊಲೆ ಮಾಡಿದ ಅಮೃತಾ ಕಣ್ಣಲ್ಲಿ ಕಣ್ಣೀರೆ ಇರಲಿಲ್ಲ. ಬಿಡಿ ಅವಳು ಮನುಷ್ಯಳಾಗೋಕೆ ಯೋಗ್ಯಳು ಅಲ್ಲ.
ನವ ಮಾಸ ಹೊತ್ತು ಹೆತ್ತವಳಿಗೆ ಆಕೆ ಕೊಟ್ಟಿದ್ದು ಮಾತ್ರ ಅದೊಂದು ದೊಡ್ಡ ಬಹುಮಾನ, ಅಂಬೆಗಾಲು ಇಡುವ ಮಗುವಿನ ಕಾಲಿಗೆ ಮುತ್ತಿಟ್ಟವಳ ಬಾಯಿ ಕಟ್ಟಿದ್ಲು. ಮಗಳೇ ಅನ್ನೋ ಪದಕ್ಕೆ ಅವಳು ಅನ್ವರ್ಥವೇ ಆಗಿಬಿಟ್ಟಳು. ಇದು ಕೋಮಲ ಹೃದಯವನ್ನೂ ಕುದಿಯವಂತೆ ಮಾಡಿತ್ತು. ಹೆಣ್ಣು ಕ್ಷಮಯಾಧರಿತ್ರಿ, ರೂಪೇಶು ಮಾತೇ ಅಂತೆಲ್ಲಾ ಕರೆಯೋ ಹೆಣ್ಣು ಜೀವ ಹೆಮ್ಮಾರಿಯಾದ್ರೆ ಏನುಬೇಕಾದ್ರೂ ಆಗಿ ಹೋಗುತ್ತೆ. ಹೆಣ್ಣು ಆದಿ ಅಂತ್ಯವೂ ಆಗಿರ್ತಾಳೆ. ಆದ್ರೆ, ಈ ಹೆಣ್ಣು ಆದಿಯಾಗಿದ್ದ ತಾಯಿಗೆ ಅಂತ್ಯವನ್ನು ಹಾಡಿದ್ಲು.
ಅಮೃತಾ ಹೆಸರೇ ಹೇಳುವಂತೆ ಅದೊಂದು ಕಲ್ಮಶವೇ ಇಲ್ಲದ ಜೀವ ಆಗಿರ್ಬೇಕಿತ್ತು. ಆದ್ರೆ, ಈ ಅಮೃತಾ ಹೆಸರಿಗೆ ಅನ್ವರ್ಥಳಾಗಿದ್ದಾಳೆ. ತಾಯಿಯನ್ನು ಅದ್ಯಾವ ಕಾರಣಕ್ಕೆ ಚಾಕು ಚುಚ್ಚಿ ಕೊಂದ್ಲೋ ದೇವರೇ ಬಲ್ಲ. ಟೆಕ್ಕಿ ಅಮೃತಾಗೆ ಒಳ್ಳೆಯ ಹುದ್ದೆ, ಕೈತುಂಬಾ ಸಂಬಳ ಇತ್ತು. ಬದುಕನ್ನು ಕರ್ಪೂರದಂತೆ ಮಗಳಿಗಾಗಿ ಸವೆಸಿದ ತಾಯಿಯ ಭರಪೂರ ಪ್ರೀತಿಯಿತ್ತು. ಸದಾ ಕಾಟ ಕೊಟ್ಟು ಜಗತ್ತಿನಲ್ಲಿ ಅತ್ಯಂತ ಪ್ರೀತಿ ಕೊಡುವ ಪುಟ್ಟ ತಮ್ಮನೂ ಇದ್ದ. ಆದ್ರೇ ಅವತ್ತು ಅದೇನಾಗಿತ್ತೋ ಈ ಪಾಪಿಗೆ ನಿದ್ದೆ ಮಂಪರಿನಲ್ಲಿದ್ದ ತಾಯಿಯ ಎದೆಗೆ ಚಾಕು ಚುಚ್ಚಿದ್ಲು. ಇನ್ನು ತನ್ನೊಂದಿಗೆ ಅಕ್ಕ ಅಕ್ಕ ಅಂತಾ ಅಮೃತಾಳಲ್ಲಿ ತಾಯಿಯನ್ನು ಕಂಡ ಆ ತಮ್ಮನ ದೇಹದಲ್ಲಿಯೂ ರಕ್ತ ಕಾಣೋಕೆ ಹಪಹಪಿಸಿದ್ಲು ರಾಕ್ಷಸಿ. ತಮ್ಮನಿಗೆ ಚಾಕು ಚುಚ್ಚೋಕೆ ಶುರು ಮಾಡಿದ್ಲು. ಆ ಹುಡ್ಗನ ಅದೃಷ್ಟ ಚೆನ್ನಾಗಿತ್ತು ಅನ್ಸುತ್ತೆ. ಜಸ್ಟ್ ಕೊಲೆಯಿಂದ ತಪ್ಪಿಸಿಕೊಂಡ. ಹಿಂಗೆ ಒಂದ್ ಕೊಲೆ, ಒಂದ್ ಕೊಲೆ ಯತ್ನ ಮಾಡಿ ಅದೆಷ್ಟು ತಣ್ಣಗೆ ಪ್ರಿಯಕರನ ಬೈಕ್‍ನ್ನು ಏರಿದ್ಲು ಅಂದ್ರೆ ಇನ್‍ಫ್ಯಾಕ್ಟ್ ಅದೇ ಬೈಕ್‍ನ್ನು ಏರಿದ್ದಕ್ಕೆ ಆಕೆ ತಗ್ಲಾಕ್ಕೊಂಡ್ಲು. ಸಿಸಿ ಕ್ಯಾಮೆರಾದಲ್ಲಿ ಈ ದೃಶ್ಯ ಹಂಗಂಗೆ ಸೆರೆಯಾಗಿತ್ತು. ಒಂದ್‍ಕ್ಷಣ ಖಾಕಿ ತೊಟ್ಟವರು ಕೂಡ ಹೊಟ್ಟೆಯಲ್ಲಿ ಹುಟ್ಟಿದ ಮಗಳೇ ಕೊಲೆ ಮಾಡಿದ್ದಾಳೆ ಅಂತಾ ನಂಬೋಕೆ ತಯಾರಿರಲಿಲ್ಲ. ಆದರೆ ಅದ್ಯಾವಾಗ ತಮ್ಮ ಅಕ್ಕನ ಪಾಪದ ಕೃತ್ಯವನ್ನು ಇಂಚಿಂಚಾಗಿ ಹೇಳೋಕೆ ಶುರುಮಾಡಿದ್ನೋ ಖಡಕ್ ಖಾಕಿ ಕಣ್ಣಲ್ಲಿ ಕೂಡ ಆ ತಾಯಿಯ ಕೊನೆಯ ಕ್ಷಣದ ಕೊಸರಾಟ ನೆನೆಸಿ ಕಣ್ಣ ನೀರನ್ನು ಮರೆಮಾಚಿದ್ರು. ಹಾ ಪ್ರಿಯಕರನ ಸೊಂಟ ಹಿಡಿದು ಬೈಕ್ ಏರಿದ ಈ ಕಿರಾತಕಿ ಹೋಗಿದ್ದೆಲ್ಲಿ ಗೊತ್ತಾ ಸೀದಾ ಅಂಡಮಾನ್‍ಗೆ. ಅಸಲಿಗೆ ಅಮ್ಮನ ಕೊಲೆ ಮಾಡಿ ಬೆಚ್ಚಗೆ ಪ್ರಿಯಕರನ ಜೊತೆ ಕೂತವಳಿಗೆ ಸಣ್ಣ ನೋವು ಕಾಡಿಲ್ವಾ ಅಂತಾ ಖಾಕಿ ಕೂಡ ಅದೆಷ್ಟೋ ಬಾರಿ ಆಕೆಯ ಕೈಗೆ ಕೋಳ ಹಾಕಿದಾಗ ಪ್ರಶ್ನಿಸಿದೆ.
ಇನ್ನು ಪ್ರಿಯಕರ. ಆತನಿಗೆ ತನ್ನ ಮನದನ್ನೆಯ ಸ್ಕೆಚ್ ಮೊದಲೇ ಗೊತ್ತಿತ್ತಾ ಗೊತ್ತಿಲ್ವಾ. ಪೊಲೀಸರಿಗೆ ಇನ್ನೂ ಕನ್‍ಫ್ಯೂಶನ್..! ಅಂಡಮಾನ್‍ಗೆ ಟ್ರಿಪ್ ಹೋಗಿದ್ದ ಅಮೃತಾಗಳಿಗೆ ಒದೆಕೊಟ್ಟು ಪೊಲೀಸರು ಎತ್ತಾಕ್ಕೊಂಡು ಬಂದ್ರು. ಕೊಲೆಗಾತಿ ಪೊಲೀಸ್ರ ಕೈಗೆ ಸಿಕ್ಕಿ ಬಿದ್ಲು, ಆದ್ರೆ, ಆಕೆ ಕೊಲೆ ಮಾಡಿದ್ಯಾಕೆ? ಕೊಲೆ ಮಾಡೋಕೆ ಆಕೆಗೆ ಇದ್ದ ಕಾರಣ ಏನು ಅನ್ನೋದು ಇನ್ನೂ ನಿಗೂಢವಾಗಿಯೇ ಉಳಿದು ಬಿಟ್ಟಿದೆ. ಒಳ್ಳೆಯ ಓದನ್ನು ಓದಿಕೊಂಡಿದ್ದ ಅಮೃತಾ ಪೊಲೀಸ್ರ ವಿಚಾರಣೆಯಲ್ಲಿ ತಡಬಡಿಸಿದ್ದು ಬಿಟ್ಟರೆ ನಿಖರ ಕಾರಣ ಇಲ್ಲಿಯವರಗೂ ಹೇಳಲೇ ಇಲ್ಲ.
ತಾಯಿಯನ್ನು ಯಾಕಮ್ಮ ಕೊಂದೆ ಅಂತ ಪೊಲೀಸ್ರು ಪರಿ ಪರಿಯಾಗಿ ಕೇಳಿದ್ರು ಆಕೆ ಹೇಳಿದ್ದು ಮಾತ್ರ, ಕಂತೆ ಕಂತೆ ಸ್ಟೋರಿಗಳನ್ನು ಮಾತ್ರ. ನಾನು ಸಾಲ ಮಾಡಿಕೊಂಡಿದ್ದೆ. ಸಾಲ ತೀರಿಸೋಕೆ ಆಗುತ್ತಿರಲಿಲ್ಲ. ಪ್ರೀತಿ ಮಾಡ್ತಾ ಇದ್ದೇ ಅದನ್ನು ಉಳಿಸಿಕೊಳ್ಳೊದಕ್ಕೂ ಆಗ್ತಾ ಇರ್ಲಿಲ್ಲ ಅನ್ನೋದನ್ನಷ್ಟೇ ಹೇಳೋ ಅಮೃತಾ ಕೊನೆಗೆ ಪೊಲೀಸ್ರಿಗೆ ಕೈ ಮುಗಿದು ನನ್ನನ್ನ ಸಾಯಿಸಿಬಿಡಿ ಅಂತಾಳೆ.
ಮಗಳು ಸಾಲ ಮಾಡಿಕೊಂಡಿದ್ದಕ್ಕೆ ತಾಯಿ ಕೊಲೆ ಮಾಡೋದು ಸರಿನಾ ಅನ್ನೋ ಪ್ರಶ್ನೆ ಬಂದೇ ಬರುತ್ತೆ. ತಾ ಮಾಡಿಕೊಂಡ ಸಾಲದ ಬಗ್ಗೆ ಹೇಳಿಕೊಂಡಿದ್ರೆ ತಾಯಿ ತನ್ನ ಕೈಲಾದ ಸಹಾಯ ಮಾಡುತ್ತಾ ಇದ್ಲು ಅಲ್ವಾ. 9 ತಿಂಗಳು ಗರ್ಭಗುಡಿಯಲ್ಲಿ ಸಾಕಿ ಸಲಹಿದ್ದವಳು ಮಗಳನ್ನು ಬೀದಿಗೆ ಬಿಡುತ್ತಾ ಇದ್ದಳಾ ಅನ್ನೋ ಪ್ರಶ್ನೆ ಹುಟ್ಟದೇ ಇರೋದಿಲ್ಲ. ಈಗ ಅಮೃತಾ ವಿಚಾರದಲ್ಲೂ ಅದೇ ಆಗಿರೋದು.
ಅಮೃತಾ ತಾಯಿಯನ್ನು ಕೊಲ್ಲೋದಕ್ಕೂ ಮುನ್ನ ಎಷ್ಟು ಪ್ಲಾನ್ ಮಾಡಿದ್ಲು ಅಂದರೆ ಅವಳು ಈ ಮಟ್ಟಿಗಿನ ಕಲ್ಮಶವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾಳೆ ಅನ್ನೋದು ಯಾರಿಗೂ ಗೊತ್ತೇ ಇರ್ಲಿಲ್ಲ. ಪ್ರಿಯತಮನ ಜೊತೆ ಅಂಡಮಾನ್‍ಗೆ ಹೋಗೋಳು 15 ದಿನ ಮುನ್ನವೇ ಟಿಕೆಟ್ ಅನ್ನು ಬುಕ್ ಮಾಡಿದ್ಲು. ಟಿಕೆಟ್ ಬುಕ್ ಮಾಡಿದವಳಿಗೆ 15 ದಿನ ಕಾಲಾವಕಾಶವೂ ಇತ್ತು. ತನ್ನ ತಪ್ಪನ್ನು ತಾಯಿಯ ಮಡಿಲಲ್ಲಿ ಮಲಗಿ ಹೇಳಿಕೊಂಡಿದ್ರೆ ನಿರ್ಮಲ ಮನಸ್ಸಿನ ತಾಯಿ ಏನಾದ್ರು ಮಾಡುತ್ತಾ ಇದ್ದಳು ಅನ್ಸುತ್ತೆ. ಇವತ್ತು ಅವಳು ಮಾಡಿದ ಕೆಲಸ ತಲೆ ಎತ್ತದಂತೆ ಮಾಡಿದೆ. ತಲೆ ಎತ್ತೋದು ಇರ್ಲಿ, ಇಡೀ ಸಮಾಜವೇ ಇವಳಿಂದ ತಲೆ ತಗ್ಗಿಸುವಂತೆ ಮಾಡಿದೆ.
ಕೃಪಾ ಸಾಗರ್ ನಿರ್ದೇಶನದ ‘ಸಾರ್ವಜನಿಕರಲ್ಲಿ ವಿನಂತಿ’ ಚಿತ್ರ ಟೀಸರ್ ಮೂಲಕವೇ ಸಂಚಲನ ಸೃಷ್ಟಿಸಿತ್ತು. ಈ ಕಾರಣದಿಂದಲೇ ಎಲ್ಲ ವರ್ಗದ ಪ್ರೇಕ್ಷಕರೂ ಈ ಸಿನಿಮಾದ ಮೇಲೆ ಕುತೂಹಲದ ಕಣ್ಣಿಟ್ಟಿರುವ ಈ ಹೊತ್ತಿನಲ್ಲಿ, ಥೇಟರಿಗೆ ಆಗಮಿಸಲು ದಿನಗಳಷ್ಟೇ ಬಾಕಿ ಇರುವಾಗ ಟ್ರೈಲರ್ ಲಾಂಚ್ ಮಾಡಲಾಗಿದೆ.
ಮದನ್ ರಾಜ್ ಮತ್ತು ಅಮೃತಾ ನಾಯಕ ನಾಯಕಿಯರಾಗಿ ನಟಿಸಿರೋ ಈ ಚಿತ್ರ ಕ್ರೈಂ ಥ್ರಿಲ್ಲರ್ ಜಾನರಿನ ಪ್ರಯೋಗಾತ್ಮಕ ಚಿತ್ರ ಎಂಬುದು ಈ ಹಿಂದೆಯೇ ಬಯಲಾಗಿತ್ತು. ಆದರೆ ಅದರ ನಿಜವಾದ ರೂಪುರೇಷೆ ಏನಿರಬಹುದೆಂಬುದರ ಅಂದಾಜು ಈ ಟ್ರೈಲರ್ ಮೂಲಕ ಅನಾವರಣಗೊಂಡಿದೆ. ಚಿತ್ರ ವಿಚಿತ್ರ ಅಪರಾಧ ಪ್ರಕರಣಗಳು, ವಿಕ್ಷಿಪ್ತ ಆಸಾಮಿಗಳು, ಒಂದು ಕೊಲೆ ಮತ್ತು ಪ್ರೀತಿ… ಇಷ್ಟನ್ನಿಟ್ಟುಕೊಂಡು ನಿರ್ದೇಶಕರು ಕಮಾಲ್ ಸೃಷ್ಟಿಸಲು ಹೊರಟಿರೋ ಸ್ಪಷ್ಟ ಸೂಚನೆಯನ್ನು ಈ ಟ್ರೈಲರ್ ರವಾನಿಸಿದೆ.
ಸಾಮಾನ್ಯವಾಗಿ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಪ್ರಕಟಣೆಗಳನ್ನು ಹೊರಡಿಸುವಾಗ ಪೊಲೀಸ್ ಇಲಾಖೆ ಹೆಚ್ಚಿನದಾಗಿ ಸಾರ್ವಜನಿಕರಲ್ಲಿ ವಿನಂತಿ ಎಂಬ ಸ್ಲೋಗನ್ ಬಳಸುತ್ತಾ ಬಂದಿದೆ. ಈ ಚಿತ್ರವನ್ನು ಪೊಲೀಸರಿಗೇ ಅರ್ಪಿಸಿ ಚಿತ್ರತಂಡ ಗಮನ ಸೆಳೆದಿತ್ತು. ಇದೀಗ ಹೊರ ಬಂದಿರೋ ಟ್ರೈಲರ್ ಒಟ್ಟಾರೆ ಚಿತ್ರದಲ್ಲಿ ಪೊಲೀಸರದ್ದೆಷ್ಟು ಮಹತ್ವದ ಪಾತ್ರವಿದೆ ಎಂಬುದರ ಸೂಚನೆಯನ್ನೂ ನೀಡಿದೆ.
ಒಟ್ಟಾರೆಯಾಗಿ ಈ ಹಿಂದೆ ಬಿಡುಗಡೆಯಾದ ಟೀಸರ್ ಮೂಲಕ ಸಾರ್ವಜನಿಕರಲ್ಲಿ ವಿನಂತಿಯತ್ತ ಕುತೂಹಲ ಕಾವೇರಿತ್ತು. ಈಗ ಲಾಂಚ್ ಆಗಿರುವ ಟ್ರೈಲರ್ ಅದನ್ನು ಮತ್ತಷ್ಟು ಕಾವೇರುವಂತೆ ಮಾಡಿ ಬಿಟ್ಟಿದೆ. ಪ್ರಯೋಗಾತ್ಮಕವಾದ ಪಕ್ಕಾ ಕಮರ್ಶಿಯಲ್ ಜಾಡಿನ ಈ ಚಿತ್ರ ಇದೇ 21ನೇ ತಾರೀಕಿನಂದು ಬಿಡುಗಡೆಯಾಗುತ್ತಿದೆ.