Tag: Amruth Apartments

  • ಅಮೇಜಾನ್ ಪ್ರೈಮ್‌ಗೆ ಕಾಲಿಟ್ಟ ಫ್ಯಾಮಿಲಿ, ಸಸ್ಪೆನ್ಸ್ ಥ್ರಿಲ್ಲರ್ ‘ಅಮೃತ ಅಪಾರ್ಟ್‌ಮೆಂಟ್ಸ್‌’..!

    ಅಮೇಜಾನ್ ಪ್ರೈಮ್‌ಗೆ ಕಾಲಿಟ್ಟ ಫ್ಯಾಮಿಲಿ, ಸಸ್ಪೆನ್ಸ್ ಥ್ರಿಲ್ಲರ್ ‘ಅಮೃತ ಅಪಾರ್ಟ್‌ಮೆಂಟ್ಸ್‌’..!

    ಟಿಟಿ ಪ್ಲ್ಯಾಟ್ ಫಾರ್ಮ್‌ಗಳು ಈಗ ಸಿನಿ ಪ್ರೇಕ್ಷಕರ ಸಿನಿಮಾ ದಾಹವನ್ನು ತಣಿಸುವಲ್ಲಿ ನಂಬರ್ ಒನ್ ಸ್ಥಾನದಲ್ಲಿವೆ. ಎಲ್ಲಾ ಭಾಷೆಯ ಸಿನಿಮಾಗಳು ಒಂದೇ ವೇದಿಕೆಯಲ್ಲಿ ಸಿಗುತ್ತಿದ್ದು, ಕನ್ನಡದ‌ ಜೊತೆಗೆ ಬೇರೆ ಭಾಷೆ ಸಿನಿಮಾಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ. ಕನ್ನಡದ‌ ಸಾಲು ಸಾಲು ಸಿನಿಮಾಗಳು ಡೈರೆಕ್ಟ್‌ ಆಗಿ ಈಗ ಒಟಿಟಿಯತ್ತ ಮುಖ ಮಾಡಿವೆ. ಅದರಲ್ಲೂ ಕೊರೊನ ಕಾಲಿಟ್ಟ ಮೇಲಂತೂ ಹಲವರು ನೇರ ಒಟಿಟಿಯತ್ತಲೇ ಮುಖ ಮಾಡಿದ್ದಾರೆ. ಕೆಲವರು ಚಿತ್ರಮಂದಿರದಲ್ಲಿ ರಿಲೀಸ್ ಮಾಡಿ ನಂತರ ಒಟಿಟಿಯಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

    ಈಗಾಗಲೇ ರಾಬರ್ಟ್, ಯುವರತ್ನ, ರಾಂಧವ ಸೇರಿದಂತೆ ಹಲವು ಸಿನಿಮಾಗಳು ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದ್ದು, ಇದೀಗ ಆ ಸಾಲಿಗೆ ಫ್ಯಾಮಿಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ಅಮೃತ ಅಪಾರ್ಟ್‌ಮೆಂಟ್ಸ್‌’ ಸೇರಿದೆ. ಸಿನಿಮಾ ನೋಡಲು ಈ ಲಿಂಕ್‌ ಕ್ಲಿಕ್‌ ಮಾಡಿ:   Amruth Apartments

    ಹೌದು, ಗುರುರಾಜ ಕುಲಕರ್ಣಿ ನಿರ್ದೇಶನ ಹಾಗೂ‌ ನಿರ್ಮಾಣದಲ್ಲಿ ನವೆಂಬರ್ 26ರಂದು ಚಿತ್ರಮಂದಿರದಲ್ಲಿ ಅಮೃತ ಅಪಾರ್ಟ್‌ಮೆಂಟ್ಸ್‌ ಸಿನಿಮಾ ತೆರೆಕಂಡಿತ್ತು. ಪ್ರೇಕ್ಷಕರಿಂದ ಮೆಚ್ಚುಗೆಗೂ ಪಾತ್ರವಾಗಿತ್ತು. ಇದೀಗ ಚಿತ್ರತಂಡ ಅಮೇಜಾನ್ ಪ್ರೈಮ್‌ನಲ್ಲಿ ಚಿತ್ರ ಬಿಡುಗಡೆ ಮಾಡಿದೆ. ಸಿನಿಮಾ ನೋಡದವರು ಅಮೇಜಾನ್ ಪ್ರೈಮ್‌ನಲ್ಲಿ ಈ ಸಿನಿಮಾವನ್ನು ಕಣ್ತುಂಬಿ ಕೊಳ್ಳಬಹುದಾಗಿದೆ.

    ಕೆಜಿಎಫ್, ಯುವರತ್ನ, ಕೋಟಿಗೊಬ್ಬ 3 ಸಿನಿಮಾಗಳಲ್ಲಿ ‌ಖಳನಟನಾಗಿ ಮಿಂಚಿರುವ ತಾರಕ್ ಪೊನ್ನಪ್ಪ ಮೊದಲ ಬಾರಿಗೆ ವಿಲನ್ ರೋಲ್ ಬಿಟ್ಟು ನಾಯಕ ನಟನಾಗಿ‌ ನಟಿಸಿರುವ ಅಮೃತ ಅಪಾರ್ಟ್‌ಮೆಂಟ್ಸ್‌ ಫ್ಯಾಮಿಲಿ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಒಳಗೊಂಡಿದೆ. ತಾರಕ್ ಪೊನ್ನಪ್ಪ ಜೋಡಿಯಾಗಿ ಊವರ್ಶಿ ಗೋವರ್ಧನ್ ನಟಿಸಿದ್ದು, ಮಾನಸ ಜೋಶಿ, ಬಾಲಾಜಿ ಮನೋಹರ್, ಸೀತಾ ಕೋಟೆ, ಸಂಪತ್ ಕುಮಾರ್ ಹಲವರನ್ನೊಳಗೊಂಡ ಕಲಾವಿದರ ಬಳಗ‌ ಚಿತ್ರದಲ್ಲಿದೆ.

    ಆಕ್ಸಿಡೆಂಟ್‌, ಲಾಸ್ಟ್ ಬಸ್ ಸಿನಿಮಾ ನಿರ್ಮಾಣ ಮಾಡಿ ಅನುಭವವಿರುವ ಗುರುರಾಜ ಕುಲಕರ್ಣಿ ಮೊದಲ ಬಾರಿಗೆ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿ ಸ್ವತಃ ನಿರ್ಮಾಣ ಮಾಡಿರುವ‌ ಸಿನಿಮಾ ಇದು. ಬಹು ಸಂಸ್ಕೃತಿಯ, ಬಹು ಭಾಷಿಗರ ತವರಾದ ಸಿಲಿಕಾನ್ ಸಿಟಿಯಲ್ಲಿ ನಿತ್ಯ ಜೀವನದಲ್ಲಿ ಘಟಿಸಬಹುದಾದ‌ ಕಾಲ್ಪನಿಕ ಕಥೆಯ ಹಂದರ ಸಿನಿಮಾದಲ್ಲಿದೆ. ಅರ್ಜುನ್ ಅಜಿತ್ ಛಾಯಾಗ್ರಹಣ, ಎಸ್.ಡಿ ಅರವಿಂದ್ ಸಂಗೀತ‌ ನಿರ್ದೇಶನ ಅಮೃತ ಅಪಾರ್ಟ್‌ಮೆಂಟ್ಸ್‌ ಚಿತ್ರಕ್ಕಿದೆ.

  • ‘ಅಮೃತ ಅಪಾರ್ಟ್‌ಮೆಂಟ್ಸ್’ನಲ್ಲಿ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗಿಳಿದ ಖಳನಟ ತಾರಕ್ ಪೊನ್ನಪ್ಪ

    ‘ಅಮೃತ ಅಪಾರ್ಟ್‌ಮೆಂಟ್ಸ್’ನಲ್ಲಿ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗಿಳಿದ ಖಳನಟ ತಾರಕ್ ಪೊನ್ನಪ್ಪ

    ಸ್ಯಾಂಡಲ್‌ವುಡ್‌ನಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಸಾಲು ಸಾಲು ಸಿನಿಮಾಗಳಲ್ಲಿ ಭರವಸೆ ಹುಟ್ಟಿಸಿರುವ ಸಿನಿಮಾಗಳಲ್ಲೊಂದು ಅಮೃತ ಅಪಾರ್ಟ್‌ಮೆಂಟ್ಸ್ ಸಿನಿಮಾ. ಗುರುರಾಜ ಕುಲಕರ್ಣಿ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಈ ಸಿನಿಮಾ ನವೆಂಬರ್ 26ಕ್ಕೆ ರಾಜ್ಯಾದ್ಯಂತ ತೆರೆ ಕಾಣಲು ರೆಡಿಯಾಗಿದೆ. ಸಾಕಷ್ಟು ಭರವಸೆ ಹುಟ್ಟು ಹಾಕಿರುವ ಈ ಸಿನಿಮಾ ಮೂಲಕ ಖ್ಯಾತ ಖಳನಟ ತಾರಕ್ ಪೊನ್ನಪ್ಪ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

    ಕೆಜಿಎಫ್, ಯುವರತ್ನ ಸಿನಿಮಾ ನೋಡಿದವರಿಗೆ ಕಿರುತೆರೆ ಅಭಿಮಾನಿಗಳಿಗೆ ತಾರಕ್ ಪೊನ್ನಪ್ಪ ಚಿರಪರಿಚಿತ. ತೆರೆ ಮೇಲೆ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದ ಪ್ರತಿಭಾವಂತ ನಟ ನಾಯಕ ನಟನಾಗಿ ತೆರೆ ಮೇಲೆ ಮಿಂಚಲು ಸಕಲ ಸಜ್ಜಾಗಿದ್ದಾರೆ. ಖಳನಟನಾಗಿ ಎಷ್ಟೇ ಸಿನಿಮಾದಲ್ಲಿ ಅಭಿನಯಿಸಿದ್ರು, ಅನುಭವವಿದ್ರೂ ನಾಯಕ ನಟನಾಗಿ ಇದೊಂದು ಅಗ್ನಿ ಪರೀಕ್ಷೆ ಎಂದು ಸಖತ್ ಎಕ್ಸೈಟ್ ಆಗಿದ್ದಾರೆ ಮಡಿಕೇರಿಯ ಕುವರ. ಇದನ್ನೂ ಓದಿ: ತಾಯಿಯಾಗ್ತಿದ್ದಾರಾ ಪ್ರಿಯಾಂಕಾ ಚೋಪ್ರಾ?

    ಫ್ಯಾಮಿಲಿ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ ಸಿನಿಮಾದಲ್ಲಿ ಮುದ್ದಾದ ಪ್ರೀತಿ ಕಥೆಯಿದೆ. ಅದರ ನಾಯಕ ಇವರೇ. ಗುರುರಾಜ ಕುಲಕರ್ಣಿ ಮಾಡಿಕೊಂಡ ಕಥೆ ಬಹಳ ಇಷ್ಟವಾಯ್ತು. ನಟನೆ ಅಂದ್ರೆ ಪ್ರತಿ ಪಾತ್ರದಲ್ಲೂ ಸವಾಲನ್ನು ಸ್ವೀಕರಿಸೋದು, ತೆರೆ ಮೇಲೆ ಚೆಂದವಾಗಿ ಕಟ್ಟಿಕೊಡೋದು. ಅದಕ್ಕೊಂದು ಅವಕಾಶ ಮಾಡಿಕೊಟ್ಟಂತಿತ್ತು ಈ ಸಿನಿಮಾ ಕಥೆ. ರಫ್ ಅಂಡ್ ಟಫ್ ಪಾತ್ರ ಮಾಡುತ್ತಿದ್ದವನಿಗೆ ಸಾಫ್ಟ್ ರೋಲ್ ಮಾಡೋದು ಕೊಂಚ ಕಷ್ಟ ಆದ್ರೆ ನಿರ್ದೇಶಕರ ಸಹಕಾರದಿಂದ ಅದೆಲ್ಲ ಬಹಳ ಸುಲಭವಾಯ್ತು. ಖಂಡಿತ ಈ ಸಿನಿಮಾದಲ್ಲಿ ನನ್ನನ್ನು ಜನ ಇಷ್ಟ ಪಡುತ್ತಾರೆ ಎಂಬ ಭರವಸೆ ಇದೆ ಎನ್ನುತ್ತಾರೆ ತಾರಕ್ ಪೊನ್ನಪ್ಪ.

    ಆಕ್ಸಿಡೆಂಟ್, ಲಾಸ್ಟ್ ಬಸ್ ಸಿನಿಮಾಗಳಿಗೆ ನಿರ್ಮಾಪಕರಾಗಿದ್ದ ಗುರುರಾಜ ಕುಲಕರ್ಣಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೊದಲ ಸಿನಿಮಾ. ಇದೇ ಮೊದಲ ಬಾರಿಗೆ ಚಿತ್ರಕ್ಕೆ ಕಥೆ ಬರೆದು ಆಕ್ಷನ್ ಕಟ್ ಹೇಳ್ತಿರುವ ಇವರು ನಿರ್ಮಾಣದ ಜವಾಬ್ದಾರಿಯನ್ನು  ನಿಭಾಯಿಸಿದ್ದಾರೆ. ನಿರ್ಮಾಪಕನಾಗಿದ್ದವರು ನಿರ್ದೇಶಕನಾಗಿ ತಮ್ಮನ್ನು ಸವಾಲಿಗೆ ಒಡ್ಡಿಕೊಂಡಿರುವ ಇವರಿಗೆ ತಾವು ಮಾಡಿಕೊಂಡ ಕಥೆ ಮೇಲೆ ಅಪಾರ ಭರವಸೆ ಇದೆ. ಇದನ್ನೂ ಓದಿ: ಇಳಕಲ್ ಸೀರೆಯುಟ್ಟು ಹಾಟ್ ಪೋಸ್ ಕೊಟ್ಟ ರಾಗಿಣಿ

    ಚಿತ್ರದಲ್ಲಿ ನಾಯಕಿಯಾಗಿ ಊರ್ವಶಿ ಗೋವರ್ಧನ್ ನಟಿಸಿದ್ದು, ರಂಗಭೂಮಿ ಕಲಾವಿದೆಯಾಗಿರುವ ಇವರಿಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾ. ಖ್ಯಾತ ಪೋಷಕ ನಟ ಬಾಲಾಜಿ ಮನೋಹರ್ ಈ ಚಿತ್ರದಲ್ಲಿ ಆಟೋ ಡ್ರೈವರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪಕ್ಕಾ ಅಂಬರೀಶ್ ಅಭಿಮಾನಿಯಾಗಿ, ಬೆಂಗಳೂರಿನ ಆಟೋ ಡ್ರೈವರ್ ಹಾವಭಾವವನ್ನು ಮೈಗೂಡಿಸಿಕೊಂಡು ಚಿತ್ರದಲ್ಲಿ ಮಿಂಚಿದ್ದಾರೆ. ರಂಗಭೂಮಿ ಕಲಾವಿದೆ, ನೃತ್ಯಗಾರ್ತಿ ಮಾನಸ ಜೋಶಿ ಈ ಸಿನಿಮಾದಲ್ಲಿ ಎಸಿಪಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಎಸಿಪಿ ರತ್ನಪ್ರಭಾ ಪಾತ್ರದಲ್ಲಿ ಖಡಕ್ ಆಫೀಸರ್ ಆಗಿ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ಉಳಿದಂತೆ ಸಂಪತ್ ಮೈತ್ರೇಯ, ಸೀತಾ ಕೋಟೆ, ಮಾಲತೇಶ್, ಸಿತಾರಾ, ಜಗದೀಶ್ ಬಾಲಾ, ರಾಜು ನೀನಾಸಂ, ಅರುಣ್ ಮೂರ್ತಿ, ಶಂಕರ್ ಶೆಟ್ಟಿ ರಂಗಸ್ವಾಮಿ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ. ಅರ್ಜುನ್ ಅಜಿತ್ ಛಾಯಾಗ್ರಹಣ, ಕೆಂಪರಾಜ್ ಅರಸ್ ಸಂಕಲನ ಮತ್ತು ಎಸ್ ಡಿ ಅರವಿಂದ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಜಿ9 ಕಮ್ಯುನಿಕೇಶನ್ ಮೀಡಿಯಾ ಅಂಡ್ ಎಂಟಟೈನ್ಮೆಂಟ್ ಬ್ಯಾನರ್ ನಡಿ ನಿರ್ಮಾಣವಾದ ಈ ಚಿತ್ರ ನವೆಂಬರ್ 26ಕ್ಕೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

  • ‘ಅಮೃತ ಅಪಾರ್ಟ್‌ಮೆಂಟ್ಸ್’ನಲ್ಲೊಂದು ಮರ್ಡರ್ ಮಿಸ್ಟ್ರಿ ಕಥೆ ಹೇಳ ಹೊರಟ ಗುರುರಾಜ್ ಕುಲಕರ್ಣಿ

    ‘ಅಮೃತ ಅಪಾರ್ಟ್‌ಮೆಂಟ್ಸ್’ನಲ್ಲೊಂದು ಮರ್ಡರ್ ಮಿಸ್ಟ್ರಿ ಕಥೆ ಹೇಳ ಹೊರಟ ಗುರುರಾಜ್ ಕುಲಕರ್ಣಿ

    ನಿರ್ದೇಶಕ ನಿರ್ಮಾಪಕನಾಗುತ್ತಾನೆ, ಆದ್ರೆ ನಿರ್ಮಾಪಕ ನಿರ್ದೇಶಕನಾಗೋದು ಬೆರಳೆಣಿಕೆಯವರಷ್ಟೇ. ಆ ಬೆರಳೆಣಿಕೆಯವರ ಸಾಲಿಗೆ ಸೇರುವವರು ಆಕ್ಸಿಡೆಂಟ್ ಹಾಗೂ ಲಾಸ್ಟ್ ಬಸ್ ಸಿನಿಮಾ ನಿರ್ಮಾಪಕ ಗುರುರಾಜ ಕುಲಕರ್ಣಿ. ನಿರ್ಮಾಪಕನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಗುರುರಾಜ ಕುಲಕರ್ಣಿ ನಿರ್ದೇಶಕನಾಗಿ ಬಡ್ತಿ ಪಡೆದಿದ್ದಾರೆ. ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಅಮೃತ ಅಪಾರ್ಟ್‌ಮೆಂಟ್ಸ್‌’ ಸಿನಿಮಾ ನವೆಂಬರ್ 26ಕ್ಕೆ ಬಿಡುಗಡೆಯಾಗಲು ಸಜ್ಜಾಗಿದೆ.

    ಅಮೃತ ಅಪಾರ್ಟ್‌ಮೆಂಟ್ಸ್‌ ಫ್ಯಾಮಿಲಿ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಒಳಗೊಂಡ ಸಿನಿಮಾ. ಚಿತ್ರದ ಹಾಡು ಟೀಸರ್, ಟ್ರೇಲರ್ ನೋಡಿದವರಿಗೆ ಸಿನಿಮಾ ಮೇಲೆ ಒಂದು ನಿರೀಕ್ಷೆ ಈಗಾಗಲೇ ಚಿಗುರಿದೆ. ಭರವಸೆ ಮೂಡಿಸುವಂತ ಕಟೆಂಟ್ ಇದೆ ಎಂಬ ಅರಿವೂ ಆಗಿದೆ. ಆದ್ರಿಂದ ಸಿನಿಮಾವನ್ನೊಮ್ಮೆ ನೋಡಬೇಕು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಆಂಧ್ರಪ್ರದೇಶದಲ್ಲಿ ಪ್ರವಾಹಪೀಡಿತ ಜನರ ನೆರವಿಗೆ ನಿಂತ ಸೋನು ಸೂದ್‌

    ಗುರುರಾಜ ಕುಲಕರ್ಣಿ ಈ ಚಿತ್ರದ ಸೂತ್ರಧಾರಿ. ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಷ್ಟಕ್ಕೆ ನಿಂತಿಲ್ಲ ನಿರ್ಮಾಣದ ನೊಗವನ್ನು ಇವರೇ ಹೊತ್ತಿದ್ದಾರೆ. ಒಂದು ರೀತಿ ಒನ್ ಮ್ಯಾನ್ ಆರ್ಮಿಯಾಗಿ ಸಿನಿಮಾವನ್ನು ನಿಭಾಯಿಸಿದ್ದಾರೆ. ಫ್ಯಾಮಿಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು ಸಾಲು ಸಾಲು ಬಂದಿವೆ. ಇದರಲ್ಲೇನು ವಿಶೇಷ ಅಂದ್ರೆ ವಿಶೇಷತೆ ಹಲವು ಅನ್ನುತ್ತೆ ಚಿತ್ರತಂಡ. ಇಲ್ಲಿ ಪ್ರತಿಯೊಬ್ಬ ಬೆಂಗಳೂರಿಗನ ಕಥೆಯಿದೆ, ಬೆಂಗಳೂರಿನಲ್ಲಿ ಚಿಗುರೊಡೆಯೋ ಪ್ರೀತಿಕಥೆಯಿದೆ, ಭಾವನೆಗಳಿವೆ, ರಿಯಾಲಿಸ್ಟಿಕ್ ಜೀವನಕ್ಕೆ ಹತ್ತಿರವಾದ ಹಲವು ಸಂಗತಿಗಳಿವೆ ಎನ್ನುವುದು ಚಿತ್ರತಂಡದ ಉತ್ತರ.

    ಬೆಂಗಳೂರು ಬಹು ಭಾಷೆಯ, ಬಹು ಸಂಸ್ಕೃತಿಯ ಆಗರ ಇಂತಹದ್ದೊಂದು ಊರಲ್ಲಿ ಸಾಮಾನ್ಯವಾಗಿ ಘಟಿಸುವ ಘಟನೆಯನ್ನು ಸಿನಿಮ್ಯಾಟಿಕ್ ಟಚ್ ಕೊಟ್ಟು ಪ್ರೇಕ್ಷಕರನ್ನು ರಂಜಿಸಲಿದ್ದಾರೆ ನಿರ್ದೇಶಕರು. ಬದುಕು ಕಟ್ಟಿಕೊಳ್ಳಲು ಬೇರೆ ಬೇರೆ ಜಿಲ್ಲೆಗಳಿಂದ, ರಾಜ್ಯಗಳಿಂದ, ದೇಶಗಳಿಂದ ಜನರು ಇಲ್ಲಿಗೆ ಬರ್ತಾನೆ ಇರ್ತಾರೆ. ಹೀಗೆ ಬೇರೆ ಪ್ರದೇಶದ, ಬೇರೆ ಸಂಸ್ಕೃತಿಯ ನಾಯಕ ನಾಯಕಿ ನಡುವೆ ಚಿಗುರೊಡೆಯೋ ಪ್ರೀತಿ ಕಥೆಯೇ ಅಮೃತ ಅಪಾರ್ಟ್ ಮೆಂಟ್ಸ್. ಈ ಪ್ರೀತಿ ಮುಂದೆ ಯಾವೆಲ್ಲ ತಿರುವು ಪಡೆಯುತ್ತೆ, ಇಬ್ಬರೂ ಒಂದಾಗಿ ಇರ್ತಾರ ಎನ್ನುವುದೇ ಅಮೃತ್ ಅಪಾರ್ಟ್‌ಮೆಂಟ್ಸ್‌ ಒನ್ ಲೈನ್ ಕಹಾನಿ. ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ

    ಕೆಜಿಎಫ್, ಯುವರತ್ನ ಸಿನಿಮಾಗಳ ಮೂಲಕ ಮುನ್ನೆಲೆಗೆ ಬಂದಿರುವ, ವಿಲನ್ ಪಾತ್ರಗಳಲ್ಲಿ ಮಿಂಚಿರುವ ತಾರಕ್ ಪೊನ್ನಪ್ಪ ಈ ಚಿತ್ರದಲ್ಲಿ ನಾಯಕ ನಟನಾಗಿ ಕಾಣಸಿಗಲಿದ್ದಾರೆ. ಇವರಿಗೆ ನಾಯಕಿಯಾಗಿ ಊರ್ವಶಿ ಗೋವರ್ಧನ್ ಬಣ್ಣ ಹಚ್ಚಿದ್ದಾರೆ. ಚಿತ್ರದ ಕಥೆಗೆ ತಕ್ಕಂತೆ ಸಿನಿಮಾದಲ್ಲಿನ ಪೋಷಕ ಪಾತ್ರಗಳು ಕೂಡ ಅಷ್ಟೇ ಎಫೆಕ್ಟಿವ್ ಆಗಿದ್ದು, ಪ್ರತಿಭಾವಂತ ನಟ ಬಾಲಾಜಿ ಮನೋಹರ್, ಸಂಪತ್ ಮೈತ್ರೇಯ, ಮಾನಸ ಜೋಶಿ, ಸೀತಾ ಕೋಟೆ, ಪ್ರಧಾನ ಪಾತ್ರಗಳಲ್ಲಿ ಮಿಂಚಿದ್ದಾರೆ. ಉಳಿದಂತೆ ಸಿತಾರಾ, ಮಾಲತೇಶ, ರಾಜ ನೀನಾಸಂ, ಜಗದೀಶ್ ಜಾಲಾ, ರಂಗಸ್ವಾಮಿ ಒಳಗೊಂಡ ರಂಗಭೂಮಿ ಕಲಾವಿದರ ದಂಡು ಚಿತ್ರದಲ್ಲಿದೆ.

    ಖ್ಯಾತ ಸಂಕಲನಕಾರ ಬಿ.ಎಸ್.ಕೆಂಪರಾಜು ಸಂಕಲನ ಚಿತ್ರಕ್ಕಿದ್ದು, ಅರ್ಜುನ್ ಅಜಿತ್ ಕ್ಯಾಮೆರಾ ವರ್ಕ್, ಎಸ್.ಡಿ ಅರವಿಂದ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಜಿ-9 ಕಮ್ಯನಿಕೇಶನ್ ಮೀಡಿಯಾ ಅಂಡ್ ಎಂಟಟೈನ್ಮೆಂಟ್ ಬ್ಯಾನರ್‌ನಡಿ ಸಿನಿಮಾ ನಿರ್ಮಾಣವಾಗಿದ್ದು, ನವೆಂಬರ್ 26ಕ್ಕೆ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

  • ‘ಅಮೃತಾ ಅಪಾರ್ಟ್‍ಮೆಂಟ್ಸ್’ ರೋಚಕ ಟೀಸರ್ ರಿಲೀಸ್

    ‘ಅಮೃತಾ ಅಪಾರ್ಟ್‍ಮೆಂಟ್ಸ್’ ರೋಚಕ ಟೀಸರ್ ರಿಲೀಸ್

    – ಥ್ರಿಲ್ಲರ್, ಸಸ್ಪೆನ್ಸ್ ಚಿತ್ರ ಅಮೃತಾ ಅಪಾಟ್ಮೆಂಟ್ಸ್

    ಬೆಂಗಳೂರು: ಹೆಸರೇ ಹೇಳುವಂತೆ ‘ಅಮೃತಾ ಅಪಾರ್ಟ್‍ಮೆಂಟ್ಸ್’ ಅಪಾರ್ಟ್‍ಮೆಂಟ್ಸ್ ಅನ್ನು ಕೇಂದ್ರೀಕರಿಸಿ ತಯಾರಾದ ಫ್ಯಾಮಿಲಿ ಥ್ರಿಲ್ಲರ್ ಚಿತ್ರ. ಸಿನಿಮಾ ಬಗ್ಗೆ ಭಾರೀ ಚರ್ಚೆ ನಡೆಯುತ್ತಿರುವಾಗಲೇ, ‘ಅಮೃತಾ ಅಪಾರ್ಟ್‍ಮೆಂಟ್ಸ್’ನ ಎದೆ ಝಲ್ ಎನಿಸುವ ಆಕರ್ಷಕ ಟೀಸರ್ ಹಾಗೂ ಪೋಸ್ಟರ್ ರಿಲೀಸ್ ಆಗಿದೆ.

    ಮೈಸೂರಿನ ಹುಡುಗ, ಉತ್ತರ ಭಾರತದ ಹುಡುಗಿ ಪಾತ್ರಧಾರಿ ಪ್ರೇಮಿಗಳು ಅಪಾರ್ಟ್‍ಮೆಂಟ್‍ಗೆ ಬಂದಾಗ ಮುಂದೆ ಊಹಿಸಲಾಗದ ಘಟನೆ ನಡೆಯುತ್ತೆ. ಅದುವೇ ಕಥೆಯ ಮೂಲವಾಗಿ ವಿಚಿತ್ರಗಳು ನಡೆಯುತ್ತೆ. ವಿಶೇಷ ಕಥೆಯನ್ನು ರಚಿಸಿ, ನಿರ್ದೇಶಿಸಿ ಚಿತ್ರಕ್ಕೆ ಬಂಡವಾಳವನ್ನೂ ಹಾಕಿರುವುದು ಈ ಹಿಂದೆ ಮೂರು ಚಿತ್ರಗಳನ್ನ ನಿರ್ಮಾಣ ಮಾಡಿರುವ ಅನುಭವಿರುವ ಗುರುರಾಜ ಕುಲಕರ್ಣಿ.

    ‘ಅಮೃತಾ ಅಪಾರ್ಟ್‍ಮೆಂಟ್ಸ್’ ಚಿತ್ರದಲ್ಲಿ ಉತ್ತಮ ಕಲಾವಿದರ ದಂಡಿದ್ದು ತಾರಕ್ ಪೊನ್ನಪ್ಪ, ಊರ್ವಶಿ ಗೋವರ್ಧನ್, ಮಾನಸ ಜೋಶಿ ಮುಂತಾದವರು ಅಭಿನಯಿಸಿದ್ದಾರೆ. ಎಸ್.ಡಿ.ಅರವಿಂದ್ ಸಂಗೀತವಿದೆ. ಸುನಿಲ್ ಆರ್.ಡಿ ಹಾಗೂ ನರಸಿಂಹ ಕುಲಕರ್ಣಿ ಸಹ ನಿರ್ಮಾಣ ಮಾಡಿದ್ದಾರೆ. ಈಗಾಗ್ಲೇ ರಿಲೀಸ್ ಆದ ಟೀಸರ್ ಚಿತ್ರದ ಮೇಲಿನ ಕುತೂಹಲ ಹೆಚ್ಚಿಸಿದೆ.