Tag: Amrutavarshini

  • ನಟ ಶರತ್ ಬಾಬು ಆರೋಗ್ಯ ಮತ್ತಷ್ಟು ಗಂಭೀರ: ಹಿರಿಯ ವೈದ್ಯರಿಂದ ಚಿಕಿತ್ಸೆ

    ನಟ ಶರತ್ ಬಾಬು ಆರೋಗ್ಯ ಮತ್ತಷ್ಟು ಗಂಭೀರ: ಹಿರಿಯ ವೈದ್ಯರಿಂದ ಚಿಕಿತ್ಸೆ

    ನ್ನಡದ ಅಮೃತವರ್ಷಿಣಿ (Amrutavarshini) ಸೇರಿದಂತೆ ದಕ್ಷಿಣದ ನಾನಾ ಭಾಷೆಗಳ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟ ಶರತ್ ಬಾಬು (Sharat Babu) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಅವರ ಕಿಡ್ನಿ, ಲಿವರ್, ಲಂಗ್ಸ್ ಸೇರಿದಂತೆ ಮತ್ತಿತರ ಅಂಗಾಂಗ ತೊಂದರೆಯಿಂದ ಅವರು ಬಳಲುತ್ತಿದ್ದಾರಂತೆ. ನುರಿತ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆಯಂತೆ.

    ಸದ್ಯ ವೆಂಟಿಲೇಟರ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯದ ಪರಿಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಈ ಹಿಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿದ್ದರು. ದಿಢೀರ್ ಅಂತ ಮತ್ತೆ ಆರೋಗ್ಯದಲ್ಲಿ ಏರುಪೇರಾದ ಕಾರಣದಿಂದಾಗಿ ಅವರನ್ನು ಹೈದರಾಬಾದ್ (Hyderabad) ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.  ಇದನ್ನೂ ಓದಿ:ಎಲೋನ್ ಮಸ್ಕ್ ಬಗ್ಗೆ ಸಿಟ್ಟಾದ ಬಿಗ್ ಬಿ: ಹಣ ಕಳೆದುಕೊಂಡ ಬಗ್ಗೆ ಅಮಿತಾಭ್ ಕಿಡಿಕಿಡಿ

    ಹೈದರಾಬಾದ್ ನ ಎಐಜಿ ಆಸ್ಪತ್ರೆಗೆ ಶಿಫ್ಟ್ ಮಾಡಿದ ನಂತರ ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು, ಅಲ್ಲದೇ ಚಿಕಿತ್ಸೆಗೆ ಅವರು ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದರು. ಸಾಮಾನ್ಯ ವಾರ್ಡ್ ಗೆ ಸ್ಥಳಾಂತರ ಮಾಡುವ ಕುರಿತು ವೈದ್ಯರು ನಿರ್ಧಾರ ತಗೆದುಕೊಂಡಿದ್ದಾರೆ ಎನ್ನುವ ಮಾಹಿತಿಯೂ ಇತ್ತು. ಆದರೆ, ಮತ್ತೆ ದಿಢೀರ್ ಅಂತ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆಯಂತೆ.

    ನಾಲ್ಕು ದಶಕಗಳ ಕಾಲ ಚಿತ್ರೋದ್ಯಮದಲ್ಲಿ ಕಲಾವಿದರಾಗಿ ಗುರುತಿಸಿಕೊಂಡಿರುವ ಶರತ್ ಬಾಬು, ಹುಟ್ಟಿದ್ದು ಆಂಧ್ರಪ್ರದೇಶದಲ್ಲಿ. ಆದರೂ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಅವರು ನಟಿಸಿದ್ದಾರೆ. ಕನ್ನಡದಲ್ಲಿ ಅವರು ಅಮೃತವರ್ಷಿಣಿ ಶರತ್ ಬಾಬು ಎಂದೇ ಫೇಮಸ್ ಆಗಿದ್ದಾರೆ. ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಅವರದ್ದು

  • ಅಮೃತವರ್ಷಿಣಿ ನಟ ಶರತ್ ಬಾಬು ಆರೋಗ್ಯದಲ್ಲಿ ಮತ್ತೆ ಏರುಪೇರು

    ಅಮೃತವರ್ಷಿಣಿ ನಟ ಶರತ್ ಬಾಬು ಆರೋಗ್ಯದಲ್ಲಿ ಮತ್ತೆ ಏರುಪೇರು

    ನ್ನಡದ ಹಿಟ್ ಸಿನಿಮಾ ಅಮೃತವರ್ಷಿಣಿ (Amrutavarshini) ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟ ಶರತ್ ಬಾಬು (Sharat Babu) ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿದ್ದರು. ದಿಢೀರ್ ಅಂತ ಮತ್ತೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಹೈದರಾಬಾದ್ (Hyderabad) ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎನ್ನುವ ಮಾಹಿತಿ ಇದೆ.

    ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಮತ್ತಷ್ಟು ಹದಗೆಟ್ಟ ಪರಿಣಾಮ ಹೈದರಾಬಾದ್ ನ ಎಐಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೇ ಸಾಮಾನ್ಯ ವಾರ್ಡ್ ಗೆ ಸ್ಥಳಾಂತರ ಮಾಡುವ ಕುರಿತು ವೈದ್ಯರು ನಿರ್ಧಾರ ತಗೆದುಕೊಂಡಿದ್ದಾರೆ ಎನ್ನುವ ಮಾತೂ ಇದೆ. ಇದನ್ನೂ ಓದಿ:ನಯನತಾರಾ ಬಗ್ಗೆ ಕನ್ನಡದ ‘ಗೂಳಿ’ ನಟಿ ಶಾಕಿಂಗ್ ಹೇಳಿಕೆ

    ನಾಲ್ಕು ದಶಕಗಳ ಕಾಲ ಚಿತ್ರೋದ್ಯಮದಲ್ಲಿ ಕಲಾವಿದರಾಗಿ ಗುರುತಿಸಿಕೊಂಡಿರುವ ಶರತ್ ಬಾಬು, ಹುಟ್ಟಿದ್ದು ಆಂಧ್ರಪ್ರದೇಶದಲ್ಲಿ. ಆದರೂ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಅವರು ನಟಿಸಿದ್ದಾರೆ. ಕನ್ನಡದಲ್ಲಿ ಅವರು ಅಮೃತವರ್ಷಿಣಿ ಶರತ್ ಬಾಬು ಎಂದೇ ಫೇಮಸ್ ಆಗಿದ್ದಾರೆ. ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಅವರದ್ದು.

  • ಅಖಿಲಾ ಪಜಿಮಣ್ಣು ಜೇನ್ದನಿಯಲ್ಲಿ ಬೆಳದಿಂಗಳಂಥ ಕವರ್ ಸಾಂಗ್!

    ಅಖಿಲಾ ಪಜಿಮಣ್ಣು ಜೇನ್ದನಿಯಲ್ಲಿ ಬೆಳದಿಂಗಳಂಥ ಕವರ್ ಸಾಂಗ್!

    – ಮತ್ತೆ ಮತ್ತೆ ಕೇಳಿದರೂ ಮುಸುಕಾಗದ ಪುಳಕ!

    ಬೆಂಗಳೂರು: ಕನ್ನಡದ ಮ್ಯೂಸಿಕ್ ರಿಯಾಲಿಟಿ ಶೋಗಳಿಂದ ಒಂದಷ್ಟು ಗಟ್ಟಿ ಪ್ರತಿಭೆಗಳು ಬೆಳಕು ಕಂಡಿವೆ. ಅಂಥವರೆಲ್ಲ ಸಿನಿಮಾ ಸೇರಿದಂತೆ ನಾನಾ ಸ್ವರೂಪದಲ್ಲಿ ಸಂಗೀತ ಪ್ರೇಮಿಗಳನ್ನು ತಾಕುತ್ತಾ, ಮುದ ನೀಡುತ್ತಾ ಮುಂದುವರಿಯುತ್ತಿದ್ದಾರೆ. ಈ ರೀತಿಯ ಪ್ರತಿಭಾವಂತ ಗಾಯಕಿಯರ ಸಾಲಿಗೆ ಇತ್ತೀಚಿನ ಸೇರ್ಪಡೆ ದಕ್ಷಿಣ ಕನ್ನಡ ಮೂಲದ ಹುಡುಗಿ ಅಖಿಲಾ ಪಜಿಮಣ್ಣು.

    ‘ಕನ್ನಡ ಕೋಗಿಲೆ’ ರಿಯಾಲಿಟಿ ಶೋ ಮೂಲಕ ಪ್ರವರ್ಧಮಾನಕ್ಕೆ ಬಂದ ಅಖಿಲಾ ಇತ್ತೀಚಿನ ದಿನಗಳಲ್ಲಿ ಕನ್ನಡದ ಅಚ್ಚಳಿಯದ ಹಾಡುಗಳ ಕವರ್ ಸಾಂಗ್ ಮೂಲಕ ಸುದ್ದಿಯಲ್ಲಿದ್ದಾರೆ. ಇದೀಗ ಕನ್ನಡ ಸಿನಿಮಾ ಪ್ರೇಮಿಗಳು ಎಂದೂ ಮರೆಯದ ‘ಅಮೃತವರ್ಷಿಣಿ’ ಚಿತ್ರದ ಚೆಂದದ ಹಾಡೊಂದು ಅಖಿಲಾ ಜೇನ್ದನಿಗೆ ಅದ್ದಿಕೊಂಡು ಹೊಸ ಸ್ವರೂಪದಲ್ಲಿ ಕೇಳುಗರನ್ನು ತಲುಪಿಕೊಂಡಿದೆ.

    ರಿಯಾಲಿಟಿ ಶೋಗಳಲ್ಲಿ ವೆರೈಟಿ ಸಾಂಗುಗಳನ್ನು ಹಾಡೋ ಮೂಲಕ ಸಂಗೀತಾಸಕ್ತರನ್ನು ಸಮ್ಮೊಹನಗೊಳಿಸಿದ್ದರು ಅಖಿಲಾ ಪಜಿಮಣ್ಣು. ಇತ್ತೀಚೆಗಷ್ಟೇ ಅವರು ಹಾಡಿರೋ `ಸಂಗಾತಿ ನಿನ್ನ ಸಂಪ್ರೀತಿಯಿಂದ…’ ಕವರ್ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಿಟ್ಟಿತ್ತು. ಈಗ ಅಮೃತವರ್ಷಿಣಿ ಚಿತ್ರದ `ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ’ ಕವರ್ ಸಾಂಗ್ ಬಿಡುಗಡೆಯಾಗಿದೆ. ಅಖಿಲಾ ಸ್ವರದಲ್ಲಿ ಮೂಡಿ ಬಂದಿರುವ ಈ ಹಾಡು ಯಥಾಪ್ರಕಾರ ಮತ್ತೆ ಮತ್ತೆ ಕೇಳಿ ಪುಳಕಗೊಳ್ಳುವಂತಿದೆ.

    ಅಖಿಲಾ ಅವರ ಅಫಿಶಿಯಲ್ ಯೂಟ್ಯೂಬ್ ಚಾನಲ್‍ನಲ್ಲಿಯೇ ಈ ಕವರ್ ಸಾಂಗ್ ಬಿಡುಗಡೆಯಾಗಿದೆ. ಅದು ಬಿಡುಗಡೆಯಾಗಿ ಎರಡ್ಮೂರು ಘಂಟೆಗಳು ಕಳೆಯೋದರೊಳಗಾಗಿಯೇ ಸಾವಿರಗಟ್ಟಲೆ ವೀವ್ಸ್ ಪಡೆಯೋ ಮೂಲಕ ವೈರಲ್ ಆಗುವ ಮುನ್ಸೂಚನೆಯನ್ನೂ ನೀಡುತ್ತಿದೆ. ಕಮೆಂಟುಗಳ ಮೂಲಕ ಅಖಿಲಾಭಿಮಾನಿಗಳೆಲ್ಲ ವ್ಯಾಪಕವಾಗಿ ಈ ಕವರ್ ಸಾಂಗ್ ಅನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಅಷ್ಟಕ್ಕೂ ಈ ಕವರ್ ಸಾಂಗ್ ಕೇಳಿದ ಯಾರೇ ಆದರೂ ಒಂದರೆಕ್ಷಣ ಕಣ್ಮುಚ್ಚಿ ಕಾಣದ ಲೋಕದಲ್ಲಿ ತೇಲಾಡುವಷ್ಟು ಚೆಂದಗಿದೆ.

    ಅಮೃತವರ್ಷಿಣಿ ಮ್ಯೂಸಿಕಲ್ ಹಿಟ್ ಚಿತ್ರ. ಇದರ ಮೂಲಕವೇ ಕೆ ಕಲ್ಯಾಣ್ ಎಂಬ ಪ್ರತಿಭಾವಂತ ಸಾಹಿತಿ ಕನ್ನಡಕ್ಕಾಗಮಿಸಿದ್ದರು. ಅವರು ಬರೆದ ಈ ಸುಂದರ ಬೆಳದಿಂಗಳ ಹಾಡನ್ನು ಎಸ್.ಪಿ ಬಾಲಸುಬ್ರಹ್ಮಣ್ಯಂ ಮತ್ತು ಕೆ.ಎಸ್ ಚಿತ್ರಾ ಹಾಡಿದ್ದರು. ಆ ಬಳಿಕ ಯಾವ್ಯಾವ ಥರದ ಹಾಡುಗಳು ಬಂದರೂ ಈ ಹಾಡುಗಳನ್ನು ಮಂಕಾಗಿಸಲು ಸಾಧ್ಯವಾಗಿಲ್ಲ. ಇಂಥಾ ಹಾಡುಗಳ ಕವರ್ ವರ್ಷನ್ ಮಾಡೋದೆಂದರೆ ಅದೇನು ಸಲೀಸಿನ ಸಂಗತಿಯಲ್ಲ. ಎಸ್‍ಪಿಬಿ ಮತ್ತು ಚಿತ್ರಾ ಎಂಬ ಮೇರು ಗಾಯಕ ಗಾಯಕಿಯರಿಗೆ ಗೌರವ ಸಲ್ಲಿಸುವಂತೆ ರೂಪಿಸುವ ಘನವಾದ ಜವಾಬ್ದಾರಿ ಇರುತ್ತದೆ.

    ಅಖಿಲಾ ಪಜಿಮಣ್ಣು ಈ ಹಾಡನ್ನು ಮತ್ತಷ್ಟು ಹೊಳಪುಗಟ್ಟಿಸುವಂತೆ ಕವರ್ ವರ್ಷನ್ನಿಗೆ ಧ್ವನಿಯಾಗಿದ್ದಾರೆ. ಇನ್ನುಳಿದಂತೆ ದೃಶ್ಯವಾಗಿಯೂ ಈ ಕವರ್ ಸಾಂಗ್ ಅನ್ನು ಅಕ್ಷಯ್ ನಾಯಕ್ ಅವರ ಕ್ಯಾಮೆರಾ ವರ್ಕ್ ಕಳೆಗಟ್ಟಿಸಿದೆ. ಬೇರೆ ಭಾಷೆಗಳಿಗೆ ಹೋಲಿಸಿದರೆ ಈ ಕವರ್ ಸಾಂಗ್‍ಗಳ ಸಂಖ್ಯೆ ಕನ್ನಡದಲ್ಲಿ ತುಸು ಕಡಿಮೆಯಿತ್ತು. ಅಖಿಲಾ ಪಜಿಮಣ್ಣು ಅದಕ್ಕೊಂದು ಹೊಸ ಓಘ ನೀಡುವಂಥಾ ಕವರ್ ಸಾಂಗ್‍ಗಳನ್ನು ಸೃಷ್ಟಿಸುತ್ತಿದ್ದಾರೆ. ಯಾವ ಥರದ ಹಾಡುಗಳಿಗಾದರೂ ಒಗ್ಗಿಕೊಳ್ಳುವಂಥಾ, ಯಾವ ಹಾಡನ್ನಾದರೂ ಮತ್ತೆ ಮತ್ತೆ ಕೇಳಬೇಕೆಂಬ ಆಸೆ ಮೂಡಿಸುವಂತೆ ಹಾಡುವ ಕಲೆ ಹೊಂದಿರೋ ಯುವ ಗಾಯಕಿ ಅಖಿಲಾ. ಈ ಕವರ್ ಸಾಂಗ್ ಕೂಡಾ ಹೆಚ್ಚು ವೀಕ್ಷಣೆ ಪಡೆಯುವ ಸಾಧ್ಯತೆಯಿದೆ.