Tag: Amrita Pandey

  • ನಟಿ ಅಮೃತಾ ಆತ್ಮಹತ್ಯೆ: ‘ದೋಣಿ’ ಕಥೆಯ ಹಿಂದಿದೆ ಅನುಮಾನ

    ನಟಿ ಅಮೃತಾ ಆತ್ಮಹತ್ಯೆ: ‘ದೋಣಿ’ ಕಥೆಯ ಹಿಂದಿದೆ ಅನುಮಾನ

    ಡೀ ಕುಟುಂಬ ಮದುವೆಯ ಸಡಗರದಲ್ಲಿ ಸಂಭ್ರಮಿಸುತ್ತಿದ್ದರೆ, ಆ ಕುಟುಂಬಕ್ಕೆ ನೇಣು ಹಾಕಿಕೊಂಡು ಶಾಕ್ ನೀಡಿದ್ದರು ಖ್ಯಾತ ಭೋಜಪುರಿ ನಟಿ ಅಮೃತಾ ಪಾಂಡೆ (Amrita Pandey). ಮುಂಬೈನಲ್ಲಿ ವಾಸವಿದ್ದ ಅಮೃತಾ, ಮನೆಯಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾಗಲ್ಪುರಕ್ಕೆ ಬಂದಿದ್ದರು. ಈ ಸಮಯದಲ್ಲಿ ಅವರು ಅಪಾರ್ಟ್‍ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದರು.

    ಸಾವಿಗೆ ಇಂಥದ್ದೇ ಕಾರಣ ಎಂದು ತಿಳಿದು ಬಂದಿಲ್ಲ. ಆದರೆ, ಸಾವಿಗೂ ಮುನ್ನ ಅವರು ವಾಟ್ಸಪ್ ಸ್ಟೇಟಸ್ ಹಾಕಿದ್ದು, ಅದು ಅನುಮಾನ ಮೂಡಿಸುವಂತಿತ್ತು. ಸ್ಟೇಟಸ್ ಹಾಕಿ ಒಂದು ಗಂಟೆ ನಂತರ ಅಮೃತಾ ಶವವಾಗಿ ಪತ್ತೆಯಾಗಿದ್ದರು. ಈ ವಾಟ್ಸ್ ಅಪ್ ಸ್ಟೇಟಸ್ ನಲ್ಲಿ ದೋಣಿಯ ಕುರಿತಾದ ಬರಹವಿತ್ತು.

     

    ವಾಟ್ಸಪ್ ಸ್ಟೇಟಸ್ ನಲ್ಲಿ ಅವರು ಅವನ ಜೀವನ 2 ದೋಣಿಯಲ್ಲಿ (Boat) ನಡೆಯುತ್ತಿದೆ. ನಾನು ನನ್ನ ದೋಣೆಯನ್ನು ಮುಳುಗಿಸಿಕೊಳ್ಳುವ ಮೂಲಕ, ಅವನಿಗೆ ದೋಣಿಗೆ ಸುಗಮ ದಾರಿ ಮಾಡಿಕೊಡುವೆ ಎಂದು ಬರೆದುಕೊಂಡಿದ್ದರು. ಈ ದೋಣಿಯ ಅರ್ಥ ಅವರ ಪತಿ ಎಂದು ಹೇಳಲಾಗುತ್ತಿದೆ. ನಟಿಯ ಪತಿಗೆ ಮತ್ತೊಂದು ಸಂಬಂಧವಿತ್ತಾ? ಇದೇ ಕಾರಣಕ್ಕೆ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಸುತ್ತ ತನಿಖೆ ನಡೆಯುತ್ತಿದೆ.

  • ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಖ್ಯಾತ ನಟಿ ಅಮೃತಾ

    ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಖ್ಯಾತ ನಟಿ ಅಮೃತಾ

    ಡೀ ಕುಟುಂಬ ಮದುವೆಯ ಸಡಗರದಲ್ಲಿ ಸಂಭ್ರಮಿಸುತ್ತಿದ್ದರೆ, ಆ ಕುಟುಂಬಕ್ಕೆ ನೇಣು ಹಾಕಿಕೊಂಡು ಶಾಕ್ ನೀಡಿದ್ದಾರೆ ಖ್ಯಾತ ಭೋಜಪುರಿ ನಟಿ ಅಮೃತಾ ಪಾಂಡೆ (Amrita Pandey). ಮುಂಬೈನಲ್ಲಿ ವಾಸವಿದ್ದ ಅಮೃತಾ, ಮನೆಯಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾಗಲ್ಪುರಕ್ಕೆ ಬಂದಿದ್ದ ಇವರು ಅಪಾರ್ಟ್‍ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ.

    ಸಾವಿಗೂ ಮುನ್ನ ಅವರು ವಾಟ್ಸಪ್ ಸ್ಟೇಟಸ್ ಹಾಕಿದ್ದು, ಅದು ಅನುಮಾನ ಮೂಡಿಸುವಂತಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸ್ಟೇಟಸ್ ಹಾಕಿ ಒಂದು ಗಂಟೆ ನಂತರ ಅಮೃತಾ ಶವವಾಗಿ ಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ಅಮೃತಾಗೆ ಲವ್ ಬ್ರೇಕ್ ಅಪ್ ಆಗಿದ್ದೆ ಸಾವಿಗೆ ಕಾರಣ ಎನ್ನಲಾಗುತ್ತಿದೆ.

     

    ವಾಟ್ಸಪ್ ಸ್ಟೇಟಸ್ ನಲ್ಲಿ ಅವರು ಅವನ ಜೀವನ 2 ದೋಣಿಯಲ್ಲಿ ನಡೆಯುತ್ತಿದೆ. ನನ್ನ ಜೀವನವನ್ನು ಕೊನೆಗೊಳಿಸುವ ಮೂಲಕ, ಅವನಿಗೆ ಸುಗಮ ದಾರಿ ಮಾಡಿಕೊಡುವೆ ಎಂದು ಬರೆದುಕೊಂಡಿದ್ದಾರೆ. ಪೊಲೀಸರು (Police) ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.