Tag: Amravati

  • ಸಿಬಿಐ ಹಾದಿ ಸುಗಮ – ಚಂದ್ರಬಾಬು ನಾಯ್ಡು ಆದೇಶ ರದ್ದು ಪಡಿಸಿದ ಸಿಎಂ ಜಗನ್

    ಸಿಬಿಐ ಹಾದಿ ಸುಗಮ – ಚಂದ್ರಬಾಬು ನಾಯ್ಡು ಆದೇಶ ರದ್ದು ಪಡಿಸಿದ ಸಿಎಂ ಜಗನ್

    ಅಮರಾವತಿ: ಆಂಧ್ರ ಪ್ರದೇಶದ ಯಾವುದೇ ಹಗರಣವನ್ನು ಸಿಬಿಐ ತನಿಖೆ ಮಾಡುವಂತ್ತಿಲ್ಲ ಎಂದು ಮಾಜಿ ಸಿಎಂ ಚಂದ್ರಬಾಬು ನಾಯ್ಡು ವಿವಾದಿತ ಆದೇಶವನ್ನು ಸಿಎಂ ಜಗನ್ ಮೋಹನ್ ರೆಡ್ಡಿ ರದ್ದು ಮಾಡಿದ್ದಾರೆ.

    ಆಂಧ್ರ ಪ್ರದೇಶ ಸಿಎಂ ಆಗಿ ಮೇ 30 ರಂದು ಅಧಿಕಾರ ವಹಿಸಿಕೊಂಡ ಜಗನ್ ಮೋಹನ್ ರೆಡ್ಡಿ ಸರ್ಕಾರದ ಪರ ಹಲವು ಜನಪರ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೆ ಸಿಬಿಐಗೆ ರಾಜ್ಯದಲ್ಲಿ ತನಿಖೆ ನಡೆಸುವ ಹಾದಿಯನ್ನ ಸುಗಮಗೊಳಿಸಿದ್ದಾರೆ. ಸಿಎಂ ಕಾರ್ಯದರ್ಶಿ ಈ ಆದೇಶವನ್ನು ಪ್ರಕಟಿಸಿದ್ದಾರೆ.

    ಕಳೆದ ವರ್ಷ ಚಂದ್ರಬಾಬು ನಾಯ್ಡು ಅವರು ಕೇಂದ್ರ ಸರ್ಕಾರವೂ ರಾಜ್ಯಗಳಲ್ಲಿ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಒಪ್ಪಿಗೆಯ ಅನುಮತಿಯನ್ನು ಹಿಂತೆಗೆದುಕೊಂಡು ಆದೇಶ ನೀಡಿದ್ದರು. ಆ ಮೂಲಕ ಕೇಂದ್ರ ಸರ್ಕಾರ ರಾಜ್ಯದಲ್ಲಿ ನಡೆಸುತ್ತಿದ್ದ ತನಿಖೆಗಳಿಗೆ ಬ್ರೇಕ್ ಹಾಕಿದ್ದರು. ಇದನ್ನು ಓದಿ: ಆಂಧ್ರ ರೈತರ ಖಾತೆಗೆ ಬೀಳಲಿದೆ ವಾರ್ಷಿಕ 12,500 ರೂ.

    ದೆಹಲಿ ವಿಶೇಷ ಪೊಲೀಸ್ ಸಂಸ್ಥೆಯ ಕಾಯಿದೆ (1946) ಅಡಿಯಲ್ಲಿ ಬರುವ ಸೆಕ್ಷನ್ 6ರ ಅನುಸಾರ ರೂಪಿಸಲಾಗಿರುವ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಸಿಬಿಐ ಗೆ ನೀಡಿದ್ದ ಅಧಿಕಾರವನ್ನು ಅಂದು ಹಿಂಪಡೆಯಲಾಗಿದ್ದು, ಆಂಧ್ರ ಪ್ರದೇಶದಲ್ಲಿ ಸಿಬಿಐ ಅಧಿಕಾರಿಗಳು ಯಾವುದೇ ರೀತಿಯ ತನಿಖೆ, ದಾಳಿ ನಡೆಸಿದರೂ ಅದಕ್ಕೆ ರಾಜ್ಯ ಸರ್ಕಾರದ ಅನುಮತಿ ಪಡೆಯವುದು ಕಡ್ಡಾಯವಾಗಿತ್ತು. ಸದ್ಯ ಸಿಎಂ ಜಗನ್ ಆದೇಶವನ್ನು ರದ್ದು ಪಡಿಸಿರುವುದರಿಂದ ಸಿಬಿಐ ಆಂಧ್ರಪ್ರದೇಶದಲ್ಲಿ ತನಿಖೆ ನಡೆಸಬಹುದಾಗಿದೆ.

  • ಆಂಧ್ರ ಅಲ್ಲ, ಕನ್ನಡದ ಹುಡುಗಿಯನ್ನೇ ವರಿಸಲಿದ್ದಾರೆ ನಿಖಿಲ್

    ಆಂಧ್ರ ಅಲ್ಲ, ಕನ್ನಡದ ಹುಡುಗಿಯನ್ನೇ ವರಿಸಲಿದ್ದಾರೆ ನಿಖಿಲ್

    ಹೈದರಾಬಾದ್: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ತಮ್ಮ ಪುತ್ರ ಎಚ್.ಕೆ. ನಿಖಿಲ್ ಗೌಡರಿಗೆ ಹುಡುಗಿ ನೋಡಲು ದೆಹಲಿಯಿಂದ ನೇರವಾಗಿ ಅಮರಾವತಿಗೆ ಪ್ರಯಾಣ ಬೆಳೆಸಿದ್ದರು ಎಂಬ ಸುದ್ದಿಗೆ ಟ್ವಿಸ್ಟ್ ಸಿಕ್ಕಿದ್ದು, ನಿಖಿಲ್‍ಗೌಡ ಅವರ ಮದುವೆ ಅಪ್ಪಟ ಕನ್ನಡಿತಿಯೊಂದಿಗೆ ಮದುವೆಯಾಗಲಿದ್ದಾರೆ ಎಂಬ ಅಧಿಕೃತ ಮಾಹಿತಿ ಲಭಿಸಿದೆ.

    ನಿಖಿಲ್ ಅವರಿಗೆ ಹುಡುಗಿ ನೋಡುವುದಕ್ಕಾಗಿ ಸಿಎಂ ದಂಪತಿ ಆಂಧ್ರಕ್ಕೆ ತೆರಳಿದ್ದರು ಎಂಬ ಸುದ್ದಿಯ ಬೆನ್ನಲ್ಲೇ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿರುವ ನಿಖಿಲ್ ಅವರ ಮ್ಯಾನೇಜರ್, ಈ ಕುರಿತು ಶೀಘ್ರವೇ ಅಧಿಕೃತವಾಗಿ ಕುಟುಂಬ ಸದಸ್ಯರು ಮಾಹಿತಿ ನೀಡಲಿದ್ದಾರೆ. ಆದರೆ ನಿಖಿಲ್ ಅವರು ಆಂಧ್ರ ಹುಡುಗಿಯನ್ನು ಮದುವೆಯಾಗಲಿದ್ದಾರೆ ಎನ್ನುವುದು ಸುಳ್ಳು. ಅವರು ಕನ್ನಡ ಹುಡುಗಿಯನ್ನೇ ಮದುವೆಯಾಗಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ಮುಂದಿನ ನವೆಂಬರ್, ಡಿಸೆಂಬರ್ ವೇಳೆಗೆ ಅಧಿಕೃತವಾಗಿ ನಿಖಿಲ್ ರ ವಿವಾಹದ ಕುರಿತು ಕುಟುಂಬಸ್ಥರು ಮಾಹಿತಿ ನೀಡಲಿದ್ದು, ಯಾವುದೇ ಸಿನಿಮಾ, ರಾಜಕೀಯ ಹಿನ್ನೆಲೆ ಇಲ್ಲದ ಕನ್ನಡದ ದೊಡ್ಡ ಮನೆತನದ ಯುವತಿಯನ್ನು ಮದುವೆ ಆಗಲಿದ್ದಾರೆ. ಈ ಕುರಿತು ಎಲ್ಲಾ ಮಾತುಕತೆ ಪೂರ್ಣಗೊಂಡ ಬಳಿಕ ಮಾಹಿತಿ ಹೊರಬರಲಿದೆ ಎಂದು ತಿಳಿಸಿದ್ದಾರೆ.

    ಇದಕ್ಕೂ ಮುನ್ನ ಸಿಎಂ ಕುಮಾರಸ್ವಾಮಿ ಮಾತನಾಡಿ ನಾವು ನಿಖಿಲ್ ಮದುವೆ ಮಾತುಕತೆಗೆ ಇಲ್ಲಿಗೆ ಭೇಟಿ ನೀಡಿಲ್ಲ ಎಂದು ವಿಜಯವಾಡದಲ್ಲಿ ಸ್ಪಷ್ಟನೆ ನೀಡಿದ್ದರು. ಅಲ್ಲದೇ ಈ ಹಿಂದೆ ನಿಖಿಲ್ ಅವರು ಸಂದರ್ಶನದಲ್ಲಿ ಇನ್ನು ಮೂರು ವರ್ಷ ನಾನು ಮದುವೆಯಾಗುವುದಿಲ್ಲ ಎಂದು ಹೇಳಿದ್ದರು. ಪಬ್ಲಿಕ್ ಟಿವಿ ಇಂದು ಈ ವಿಚಾರಕ್ಕೆ ಕರೆ ಮಾಡಿ ಸ್ಪಷ್ಟನೆ ಕೇಳಿದಾಗ, ಮದುವೆ ಮಾತುಕತೆ ಏನು ಇಲ್ಲ, ನಮಗೆ ಸಮಯ ಕೊಡಿ ತಿಳಿದುಕೊಂಡು ಹೇಳುತ್ತೇನೆ ಎಂದು ನಿಖಿಲ್ ಉತ್ತರಿಸಿದ್ದರು.

    ಈ ವೇಳೆ ಆಂಧ್ರ ಪ್ರದೇಶದ ಖ್ಯಾತ ಉದ್ಯಮಿ ಬೋಡೆಪುಡಿ ಶಿವ ಕೋಟೇಶ್ವರ ರಾವ್ ಕೂಡ ಪ್ರತಿಕ್ರಿಯೆ ನೀಡಿದ್ದು, ಸಿಎಂ ಕುಮಾರಸ್ವಾಮಿ ಅವರು ನಾವು ಸ್ನೇಹಿತರಾಗಿದ್ದು, ಸಹಜವಾಗಿ ಇಂದು ಮನೆಗೆ ಭೇಟಿ ನೀಡಿದ್ದಾರೆ. ನಿಖಿಲ್‍ರೊಂದಿಗೆ ಮದುವೆಯ ಸುದ್ದಿ ಬಗ್ಗೆ ಈ ವೇಳೆ ಚರ್ಚೆ ನಡೆದಿಲ್ಲ. ಸ್ನೇಹಿತರಾದ ಕಾರಣಕ್ಕೆ ಮಾತ್ರ ಭೇಟಿ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ಇನ್ನು ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ಪ್ರತಿಕ್ರಿಯೆ ನೀಡಿ, ಇದು ಅವರ ವೈಯಕ್ತಿಕ ವಿಚಾರ, ಹುಡುಗಿ ಒಪ್ಪಿಗೆ ಆದರೆ ಮದುವೆ ಮಾಡೋಣ ಎಂದಿದ್ದಾರೆ. ಇಂದು ಸಿಎಂ ಕುಮಾರಸ್ವಾಮಿಯವರು ಅಮರಾವತಿಯ ದುರ್ಗಾ ದೇವಿ ದೇವಸ್ಥಾನಕ್ಕೆ ಇಂದು ಭೇಟಿ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=gRdK_wrERMI

  • ಆಂಧ್ರ ಮೂಲದ ಹುಡುಗಿ ಜೊತೆ ನಿಖಿಲ್ ಮದ್ವೆ – ಸಿಎಂ ಎಚ್‍ಡಿಕೆ ಸ್ಪಷ್ಟನೆ

    ಆಂಧ್ರ ಮೂಲದ ಹುಡುಗಿ ಜೊತೆ ನಿಖಿಲ್ ಮದ್ವೆ – ಸಿಎಂ ಎಚ್‍ಡಿಕೆ ಸ್ಪಷ್ಟನೆ

    ಹೈದರಾಬಾದ್: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ತಮ್ಮ ಪುತ್ರ ಎಚ್.ಕೆ. ನಿಖಿಲ್ ಗೌಡರಿಗೆ ಹುಡುಗಿ ನೋಡಲು ದೆಹಲಿಯಿಂದ ನೇರವಾಗಿ ಅಮರಾವತಿಗೆ ಪ್ರಯಾಣ ಬೆಳೆಸಿದ್ದರು ಎನ್ನಲಾಗಿತ್ತು. ಆದರೆ ಈ ಬಗ್ಗೆ ಸ್ವತಃ ಸಿಎಂ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.

    ಇಂದು ನಿಖಿಲ್ ಗೆ ಹುಡುಗಿ ನೋಡುವುದಕ್ಕಾಗಿ ಸಿಎಂ ದಂಪತಿ ಆಂಧ್ರಕ್ಕೆ ತೆರಳಿದ್ದರು. ಆಂಧ್ರ ಪ್ರದೇಶದ ಖ್ಯಾತ ಉದ್ಯಮಿಯೊಬ್ಬರ ನಿಖಿಲ್ ಮದುವೆ ಎಂದು ಮೂಲಗಳಿಂದ ತಿಳಿದು ಬಂದಿತ್ತು. ಈ ಬಗ್ಗೆ ಸಿಎಂ ಕುಮಾರಸ್ವಾಮಿ ಮಾತನಾಡಿ ನಾವು ನಿಖಿಲ್ ಮದುವೆ ಮಾತುಕತೆಗೆ ಬಂದಿಲ್ಲ ಎಂದು ವಿಜಯವಾಡದಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.

    ನಿಖಿಲ್ ಈ ಹಿಂದೆ ಸಂದರ್ಶನದಲ್ಲಿ ಇನ್ನು ಮೂರು ವರ್ಷ ನಾನು ಮದುವೆಯಾಗುವುದಿಲ್ಲ ಎಂದು ಹೇಳಿದ್ದರು. ಪಬ್ಲಿಕ್ ಟಿವಿ ಇಂದು ಈ ವಿಚಾರಕ್ಕೆ ಕರೆ ಮಾಡಿದಾಗ, ಮದುವೆ ಮಾತುಕತೆ ಏನು ಇಲ್ಲ, ನಮಗೆ ಸಮಯ ಕೊಡಿ ತಿಳಿದುಕೊಂಡು ಹೇಳುತ್ತೇನೆ ಎಂದು ನಿಖಿಲ್ ಉತ್ತರಿಸಿದ್ದಾರೆ.

    ಇದು ಅವರ ವೈಯಕ್ತಿಕ ವಿಚಾರ, ಹುಡುಗಿ ಒಪ್ಪಿಗೆ ಆದರೆ ಮದುವೆ ಮಾಡೋಣ ಎಂದು ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ. ಸಿಎಂ ಕುಮಾರಸ್ವಾಮಿಯವರು ಅಮರಾವತಿಯ ದುರ್ಗಾ ದೇವಿ ದೇವಸ್ಥಾನಕ್ಕೆ ಇಂದು ಭೇಟಿ ನೀಡಿದ್ದರು. ಸಾಧಾರಣವಾಗಿ ಎಚ್‍ಡಿಕೆ ಹರಕೆ ತೀರಿಸಲು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಆದರೆ ಇಂದು ಯಾವುದೇ ಹರಕೆಯನ್ನು ತೀರಿಸಲು ಭೇಟಿ ಕೊಟ್ಟಿಲ್ಲ. ಪುತ್ರನ ಮದುವೆ ವಿಚಾರ ಮಾತನಾಡಲು ಅಮರಾವತಿಗೆ ಹೋಗಿದ್ದು, ಇಂದು ಅನೌಪಚಾರಿಕ ಮಾತುಕತೆ ನಡೆಯಲಿದೆ. ಮುಹೂರ್ತ ನೋಡಿ ಎರಡೂ ಕುಟುಂಬಗಳು ಮತ್ತೊಮ್ಮೆ ಮಾತುಕತೆ ನಡೆಸಲಿವೆ. ಮುಂದಿನ ತಿಂಗಳು ದೇವೇಗೌಡರ ಕುಟುಂಬ ಸದಸ್ಯರೆಲ್ಲರೂ ತೆರಳಿ ಮಾತುಕತೆ ನಡೆಸಲಿದ್ದಾರೆ ಎನ್ನುವ ಸುದ್ದಿ ಈಗ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 18 ವರ್ಷ ತುಂಬುತ್ತಿದ್ದಂತೆ ತಂದೆಯಿಂದಲೇ ಮಗಳ ಕೊಲೆ!

    18 ವರ್ಷ ತುಂಬುತ್ತಿದ್ದಂತೆ ತಂದೆಯಿಂದಲೇ ಮಗಳ ಕೊಲೆ!

    ಅಮರಾವತಿ: ಮಗಳು ಅನ್ಯ ಯುವಕನೊಂದಿಗೆ ಸಂಬಂಧ ಹೊಂದಿದ್ದಾಳೆಂಬ ಸಂಶಯದಿಂದ ತಂದೆಯೇ ಮಗಳನ್ನು ಬರ್ಬರವಾಗಿ ಕೊಲೆಗೈದ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ.

    ಚಂದ್ರಲಪಡು ಎಂಬ ಹಳ್ಳಿಯ ನಿವಾಸಿಯಾದ ಚಂದ್ರಿಕಾ ಎಂಬವಳೇ ಕೊಲೆಯಾದ ದುರ್ದೈವಿ. ಚಂದ್ರಿಕಾ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಕಳೆದ ಶನಿವಾರವಷ್ಟೇ ಅವಳಗೆ 18 ವರ್ಷ ತುಂಬಿತ್ತು. ಆ ಖುಷಿಗೆ ಆವಳು ಸ್ನೇಹಿತರೊಂದಿಗೆ ಸೇರಿ ಕೇಕ್ ಕತ್ತರಿಸಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಮನೆಗೆ ಮರಳಿದ್ದಳು.

    ಮನೆಗೆ ಮರಳಿದ ಚಂದ್ರಿಕಾ, ಮೊಬೈಲ್ ನಲ್ಲಿ ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದಳು. ಇದನ್ನು ನೋಡಿದ ಆಕೆಯ ತಂದೆ ಕೊಟ್ಟಯ್ಯ ತನ್ನ ಮಗಳು ಅನ್ಯ ಯುವಕನೊಂದಿಗೆ ಸಂಬಂಧ ಹೊಂದಿದ್ದಾಳೆಂದು ಅನುಮಾನಗೊಂಡು ಕೊಡಲಿಯ ಕಟ್ಟಿಗೆ ಹಿಡಿಯಿಂದ ಚಂದ್ರಿಕಾಳ ತಲೆಗೆ ಬಲವಾಗಿ ಹೊಡೆದಿದ್ದಾನೆ. ತಕ್ಷಣ ಚಂದ್ರಿಕಾ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.

    ಈಗಾಗಲೇ ಆರೋಪಿ ಕೊಟ್ಟಯ್ಯನನ್ನು ಬಂಧಿಸಿರುವ ಪೊಲೀಸರು ಈ ಕುರಿತಂತೆ ವಿಚಾರಣೆ ನಡೆಸಿದ್ದಾರೆ. ಚಂದ್ರಿಕಾಗೆ ಮೊದಲೇ ಯುವಕನೊಂದಿಗೆ ಸಂಬಂಧವಿತ್ತು. ಈಗ 18 ವರ್ಷ ತುಂಬಿದ್ದ ಹಿನ್ನೆಲೆಯಲ್ಲಿ ಆಕೆ ಪೋಷಕರ ಅನುಮತಿಗಾಗಿ ಕಾಯುತ್ತಿದ್ದಳು. ಮಗಳು ಯುವಕನ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ತಿಳಿದು ಕೊಟ್ಟಯ್ಯ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ಕೊಟ್ಟಯ್ಯ ತನ್ನ ಮಗಳಿಂದ ಮನೆತನ ಮರ್ಯಾದೆ ಹಾಳಾಗುತ್ತದೆ ಎನ್ನುವ ಚಿಂತೆಯಲ್ಲಿದ್ದ. ಈ ಕಾರಣಕ್ಕಾಗಿ ಮಗಳಿಗೆ ಪಾಠ ಕಲಿಸಲು ಈ ಕೃತ್ಯ ಎಸಗಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

  • ತಿರುಪತಿ ತಿರುಮಲ ಬಂಗಾರದ ರಹಸ್ಯ ಬಯಲು – ಪ್ರಾಂಗಣದ ಕೆಳಗೆ ಇದೆ ನಿಧಿಯ ಕೋಣೆ!

    ತಿರುಪತಿ ತಿರುಮಲ ಬಂಗಾರದ ರಹಸ್ಯ ಬಯಲು – ಪ್ರಾಂಗಣದ ಕೆಳಗೆ ಇದೆ ನಿಧಿಯ ಕೋಣೆ!

    ಅಮರಾವತಿ: ಕಲಿಯುಗದ ವೈಕುಂಠ ತಿರುಪತಿ ದೇವಸ್ಥಾನದ ನೆಲಮಾಳಿಗೆಯಲ್ಲಿ ಅಪಾರ ಪ್ರಮಾಣದ ಸಂಪತ್ತಿರುವ ರಹಸ್ಯ ಕೋಣೆಯೊಂದಿದೆ ಎನ್ನಲಾಗುತ್ತಿದೆ.

    ಕೇರಳದ ಅನಂತ ಪದ್ಮನಾಭ ದೇವಾಲಯದ ನೆಲಮಾಳಿಗೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇತ್ತೀಚೆಗೆ ತಿರುಪತಿ ತಿರುಮಲದಲ್ಲಿಯ ನೆಲಮಾಳಿಗೆಯಲ್ಲಿ ಅದನ್ನೂ ಮೀರಿಸುವಷ್ಟು ಸಂಪತ್ತಿರುವ ಕೋಣೆಯಿಂದ ಎಂಬ ಮಾತುಗಳು ಕೇಳಿಬರುತ್ತಿದೆ.

    ಈಗ ಇಂಥದೊಂದು ರಹಸ್ಯ ಬೆಳಕಿಗೆ ಬರಲು ಕಾರಣವಾಗಿದ್ದು, ಟಿಟಿಡಿಯ ಮಾಜಿ ಪ್ರಧಾನ ಅರ್ಚಕ ಹಾಗೂ ಆಗಮ ಶಾಸ್ತ್ರಜ್ಞ ರಮಣ ದೀಕ್ಷತುಲು ಅವರ ಆರೋಪ. ದೇವಸ್ಥಾನದ ಸಿಬ್ಬಂದಿ ಪ್ರಸಾದ ತಯಾರಿಸುವ ಕೋಣೆಯನ್ನು ದೇವಸ್ಥಾನದ ಆಡಳಿತ ಮಂಡಳಿಯ ಅನುಮತಿಯಿಲ್ಲದೇ ದುರಸ್ತಿ ಮಾಡಿದ್ದಾರೆ. ಆದರೆ ಅಲ್ಲಿ ಭೂಮಿಯನ್ನು ಅಗೆದಿರುವ ಕುರುಹುಗಳು ಪತ್ತೆಯಾಗಿವೆ.

    ಇದನ್ನು ವಿಚಾರಿಸಿದಾಗ ಕೋಣೆಯಲ್ಲಿ ಕಲ್ಲಿನ ಹಾಸನ್ನು ಬದಲಿಸಬೇಕಿತ್ತು ಎಂದು ಸಿಬ್ಬಂದಿ ಹೇಳಿದ್ದಾರೆ. ಆದರೆ 5ರಿಂದ 6 ಕಲ್ಲುಗಳನ್ನು ಬದಲಾಯಿಸಲು ನೆಲ ಅಗೆಯುವ ಅವಶ್ಯಕತೆ ಏನಿತ್ತು? 25 ದಿನಗಳ ಕಾಲ ಆ ಕೋಣೆಯನ್ನು ದೇವಸ್ಥಾನದ ಆಡಳಿತ ಮಂಡಳಿ ಪೂರ್ವಾನುಮತಿಯಿಲ್ಲದೇ ಮುಚ್ಚಿದ್ದೇಕೆ? ಎಂಬುದು ರಮಣ ದೀಕ್ಷತುಲು ಅವರ ಪ್ರಶ್ನೆಯಾಗಿದೆ. ಈ ವಿಚಾರ ಇದೀಗ ರಹಸ್ಯ ಸಂಪತ್ತಿನ ಕುರಿತ ಚರ್ಚೆಗೆ ಎಡೆಮಾಡಿಕೊಟ್ಟಿದೆ.

    ಪುಸ್ತಕವೊಂದರಲ್ಲಿದೆ ಈ ಸಂಪತ್ತಿನ ಉಲ್ಲೇಖ:
    ಈ ರಹಸ್ಯ ಸಂಪತ್ತನ್ನು ಕುರಿತಂತೆ ಲೇಖಕರೊಬ್ಬರು 18ನೇ ಶತಮಾನದಲ್ಲಿಯೇ ಉಲ್ಲೇಖ ನೀಡಿದ್ದರು. ಲೇಖಕ ವಿ ಎನ್ ಶ್ರೀನಿವಾಸ್ ಎಂಬವರು ತಮ್ಮ ಸವಾಲ್-ಇ-ಜವಾಬ್ ಎಂಬ ಕೃತಿಯಲ್ಲಿ ತಿರುಪತಿ ತಿರುಮಲದ ರಹಸ್ಯ ಸಂಪತ್ತಿನ ಕುರಿತಂತೆ ಉಲ್ಲೇಖಿಸಿದ್ದಾರೆ.

    200 ಪುಟಗಳ ಇವರ ಕೃತಿಯ 13 ಮತ್ತು 14 ನೇ ಸಾಲುಗಳಲ್ಲಿ ಈ ಸಂಪತ್ತನ್ನು ಕುರಿತಂತೆ 6 ಸಾಲುಗಳಲ್ಲಿ ಹೇಳಲಾಗಿದೆ. ಪ್ರದಕ್ಷಿಣೆ ಪ್ರಾಂಗಣದ ಕೆಳಗೆ ರಹಸ್ಯ ಕೋಣೆಯೊಂದಿದೆ. ಅದರಲ್ಲಿ ಅಪಾರ ಪ್ರಮಾಣದ ಸಂಪತ್ತಿದೆ. ಭಕ್ತರು ಅದರ ಮೇಲೆಯೇ ನಡೆದಾಡುತ್ತಿದ್ದಾರೆ. ಈ ಕೋಣೆಗೆ ಸಾರ್ವಜನಿಕರ ಪ್ರವೇಶ ನಿಷಿದ್ಧ ಎಂದು ಉಲ್ಲೇಖಿಸಿದ್ದಾರೆ.

    ಹೀಗಾಗಿ ಆ ರಹಸ್ಯ ಕೋಣೆಯ ಕುರಿತು ಈಗ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿವೆ. ಆದರೆ ಈ ರಹಸ್ಯ ಕೋಣೆಯ ಇರುವಿಕೆ ಕುರಿತಂತೆ ಮಾಜಿ ಪ್ರಧಾನ ಅರ್ಚಕ ರಮಣ ದೀಕ್ಷಿತಲು ಪ್ರಶ್ನೆಗೆ ದೇವಸ್ಥಾನದ ಆಡಳಿತ ಮಂಡಳಿ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ.

  • ಶಿವನ ಪೂಜೆ ಮಾಡುತ್ತಾ ಲಿಂಗದ ಮೇಲೆಯೇ ಪ್ರಾಣಬಿಟ್ಟ ಅರ್ಚಕ!

    ಶಿವನ ಪೂಜೆ ಮಾಡುತ್ತಾ ಲಿಂಗದ ಮೇಲೆಯೇ ಪ್ರಾಣಬಿಟ್ಟ ಅರ್ಚಕ!

    ಅಮರಾವತಿ: ಶಿವಲಿಂಗದ ಪೂಜೆ ಮಾಡುತ್ತಲೆ ಶಿವನ ಮೆಲೆ ಬಿದ್ದು ಭಕ್ತನೊಬ್ಬ ಪ್ರಾಣಬಿಟ್ಟ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಸೋಮೇಶ್ವರ ಜನಾರ್ದನ ಸ್ವಾಮಿ ದೇವಾಲಯದಲ್ಲಿ ಪೂಜೆ ಮಾಡುತ್ತಲೇ ಪ್ರಧಾನ ಅರ್ಚಕ ವೆಂಕಟರಾಮಾರಾವ್ ಪ್ರಾಣಬಿಟ್ಟಿದ್ದಾರೆ. ಜೂನ್ 11 ರಂದು ಪೂಜಾರಿ ವೆಂಕಟರಾಮಾರಾವ್ ಪೂಜೆಗೆಂದು ದೇವಸ್ಥಾನಕ್ಕೆ ಹೋಗಿದ್ದರು. ತೀವೃ ಹೃದಯಾಘಾತ ಸಂಭವಿಸಿದ್ದರಿಂದ ಶಿವಲಿಂಗದ ಮೇಲೆಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

    ಪ್ರದಕ್ಷಿಣೆ ಹಾಕುವಾಗ ವೆಂಕಟರಾಮಾರಾವ್ ಮೊದಲ ಬಾರಿಗೆ ಕುಸಿದು ಬಿದ್ದಿದ್ದಾರೆ. ಪಕ್ಕದಲ್ಲಿದ್ದ ಅರ್ಚಕರೋರ್ವರು ಅವರಿಗೆ ಮೇಲೇಳಲು ಸಹಾಯ ಮಾಡಿದ್ದಾರೆ. ಎದ್ದುನಿಂತ ಕೂಡಲೇ ಅರ್ಚಕ ನೇರವಾಗಿ ಶಿವಲಿಂಗದ ಮೇಲೆಯೇ ಬಿದ್ದು ಪ್ರಾಣಬಿಟ್ಟಿದ್ದಾರೆ. ಈ ಎಲ್ಲಾ ದೃಶ್ಯ ದೇವಸ್ಥಾನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    https://youtu.be/kKbwTD6vXqA

    ಅರ್ಚಕ ವೆಂಕಟರಾಮಾರಾವ್ ಶಿವನ ಅಪ್ರತಿಮ ಭಕ್ತರಾಗಿದ್ದರು. ಶಿವ ಪೂಜೆ ಮಾಡುತ್ತಲೇ ಪೂಜಾರಿ ಶಿವನಲ್ಲಿ ಲೀನರಾದದ್ದು ಗ್ರಾಮಸ್ಥರಲ್ಲಿ ಅಚ್ಚರಿಯನ್ನು ಮೂಡಿಸಿದೆ.

  • 8 ಕೆಜಿ ಚಿನ್ನ, 4 ಕೋಟಿ ರೂ. ಮೌಲ್ಯದ ಹಣದಿಂದ ಲಕ್ಷ್ಮಿಗೆ ಅಲಂಕಾರ!

    8 ಕೆಜಿ ಚಿನ್ನ, 4 ಕೋಟಿ ರೂ. ಮೌಲ್ಯದ ಹಣದಿಂದ ಲಕ್ಷ್ಮಿಗೆ ಅಲಂಕಾರ!

    ಅಮರಾವತಿ: ನವರಾತ್ರಿ ಉತ್ಸವವೂ ಎಲ್ಲೆಡೆ ಅದ್ಧೂರಿಯಾಗಿ ನೆರವೇರುತ್ತಿದೆ. ಆದರೆ ಆಂಧ್ರಪ್ರದೇಶದ ಲಕ್ಷ್ಮೀ ದೇವಸ್ಥಾನ ಒಂದರಲ್ಲಿ ಹಣ ಮತ್ತು ಬಂಗಾರದಿಂದ ಶೃಂಗರಿಸಿ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

    ವಿಶಾಖಪಟ್ಟಣಂನ ಪ್ರಸಿದ್ಧ ಕನ್ನಿಕಾ ಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ಶ್ರೀ ಮಹಾಲಕ್ಷ್ಮೀ ಅವತಾರಂ ದೇವಿಗೆ 4 ಕೋಟಿ ರೂ. ಮೌಲ್ಯದ ನೋಟು ಮತ್ತು 8 ಕೆಜಿ ಚಿನ್ನದಿಂದ ಅಲಂಕರಿಸಲಾಗಿದೆ.

    9 ದಿನದ ಉತ್ಸವ ಸಮಯದಲ್ಲಿ ದೇವತೆಯನ್ನು ಪ್ರತೀ ವರ್ಷವು ವಿವಿಧ ರೀತಿಯಲ್ಲಿ ಅಲಂಕರಿಸಲಾಗುತ್ತಿದ್ದು, ಎಂಟನೇ ದಿನದಂದು ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಈ ಬಾರಿ ನೋಟು ಮತ್ತು ಚಿನ್ನದಿಂದ ಅಲಂಕರಿಸಿ ಲಕ್ಷ್ಮಿಯನ್ನು ಪೂಜಿಸಲಾಗಿದೆ.

    ಹೊಸದಾಗಿ ಪರಿಚಯಿಸಲಾದ 2000 ರೂ. ನೋಟುಗಳು, ನಿಷೇಧಗೊಂಡಿರುವ 500 ರೂ. 1 ಸಾವಿರ ರೂ. ಮುಖಬೆಲೆಯ ನೋಟುಗಳು ಸೇರಿದಂತೆ ಚಲಾವಣೆಯಲ್ಲಿರುವ ಎಲ್ಲ ಕರೆನ್ಸಿ ನೋಟುಗಳನ್ನು ಬಳಸಿ ಲಕ್ಷ್ಮಿ ಕುಳಿತುಕೊಂಡಿದ್ದ ಮಂಟಪವನ್ನು ಶೃಂಗರಿಸಲಾಗಿದೆ.

    ಭಕ್ತರು ತಮ್ಮ ಸಂಕಷ್ಟ ನಿವಾರಣೆಗಾಗಿ ದೇಣಿಗೆ ರೂಪದಲ್ಲಿ ನೀಡಿರುವ ನೋಟುಗಳನ್ನು ಇಲ್ಲಿ ಬಳಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.