Tag: Amravati

  • ನಟಿ ನವನೀತ್ ಕೌರ್ ರಾಣಾಗೆ ಬಿಜೆಪಿಯಿಂದ ಟಿಕೆಟ್

    ನಟಿ ನವನೀತ್ ಕೌರ್ ರಾಣಾಗೆ ಬಿಜೆಪಿಯಿಂದ ಟಿಕೆಟ್

    ಲೋಕಸಭೆ ಅಖಾಡಕ್ಕೆ ಸಿನಿಮಾ ಕಲಾವಿದರಿಂದ ರಂಗೇರುತ್ತಿದೆ. ಈಗಾಗಲೇ ಕಂಗನಾ ರಣಾವತ್ ಸೇರಿದಂತೆ ಹಲವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಅದರಂತೆ ನಿನ್ನೆಯಷ್ಟೇ ತನ್ನ 7ನೇ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಅದರಲ್ಲಿ ಮಹಾರಾಷ್ಟ್ರ ಮೂಲದ ನಟಿ, ಕನ್ನಡದಲ್ಲೂ ದರ್ಶನ್ ಚಿತ್ರದಲ್ಲಿ ನಟಿಸಿರುವ ನವನೀತ್ ಕೌರ್ ರಾಣಾಗೆ ಟಿಕೆಟ್ ಘೋಷಣೆ ಮಾಡಿದೆ.

    ನವನೀತ್ ಕೌರ್ ಗೆ ಚುನಾವಣೆ ಹೊಸದೇನೂ ಅಲ್ಲ. ಈಗಾಗಲೇ ಅವರು ಸಂಸದೆಯಾಗಿ ಗುರುತಿಸಿಕೊಂಡಿದ್ದಾರೆ. ಅಮರಾತಿಯಲ್ಲಿ ಕಳೆದ ಬಾರಿ ಗೆದ್ದಿದ್ದಾರೆ. ಆದರೆ, ಇತ್ತಿಚೆಗಷ್ಟೇ ಅವರು ಬಿಜೆಪಿ ಸೇರಿಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿಯನ್ನು ಮತ್ತಷ್ಟು ಬಲ ಪಡಿಸಲು ತಾನು ಬಿಜೆಪಿ ಸೇರಿಕೊಂಡಿರುವುದಾಗಿ ಹೇಳಿದ್ದರು. ಬಿಜೆಪಿ ಸೇರಿದ ಬೆನ್ನಲ್ಲೇ ಅವರಿಗೂ ಟಕೆಟ್ ಘೋಷಣೆ ಆಗಿದೆ.

     

    2019ರ ಸಾರ್ವತ್ರೀಕ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ನಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಜಂಟಿ ಅಭ್ಯರ್ಥಿಯಾಗಿ ಅಮರಾವತಿಯಲ್ಲಿ ಸ್ಪರ್ಧೆ ಮಾಡಿದ್ದ ನವನೀತ್ ಕೌರ್ ಗೆಲುವು ಪಡೆದು ಸಂಸದರಾಗಿ ಆಯ್ಕೆಯಾಗಿದ್ದರು. ಲೋಕಸಭೆಗೆ ಆಯ್ಕೆಯಾದ ಬಳಿಕ ಸಂಸತ್‍ನಲ್ಲಿ ಹಲವು ವಿಚಾರಗಳ ಕುರಿತು ಧ್ವನಿ ಎತ್ತಿದ್ದರು. ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಿಂದಿ ಭಾಷೆಗಳ ಚಿತ್ರಗಳಲ್ಲಿ ನವನೀತ್ ಕೌರ್ ನಟಿಸಿದ್ದಾರೆ.

  • ಹಾರರ್ ಅಮರಾವತಿ: ಪ್ಯಾನ್ ಇಂಡಿಯಾಗೆ ಸಲ್ಲುವ ಸ್ಟೋರಿ

    ಹಾರರ್ ಅಮರಾವತಿ: ಪ್ಯಾನ್ ಇಂಡಿಯಾಗೆ ಸಲ್ಲುವ ಸ್ಟೋರಿ

    ದೆವ್ವಗಳೇ ಕನ್ನಡದಲ್ಲಿ ಸಕ್ಸಸ್‌ ಸೂತ್ರದಂತೆ ಬಳಕೆಯಾಗುತ್ತಿವೆ. ಇದರಲ್ಲಿ ಒಂದಷ್ಟು ನವೀನ ಪ್ರಯೋಗಗಗಳು ಆಗುತ್ತಿವೆಯಾದರೂ ಮತ್ತೆ ಕೆಲ ಚಿತ್ರಗಳು ನಿಜಕ್ಕೂ ಭೂತದರ್ಶನ ಮಾಡಿಸುವಂತಿರುತ್ತವೆ. ಸದ್ಯ ಕನ್ನಡದಲ್ಲಿ ಈವರೆಗೂ ಬಂದ ಎಲ್ಲಾ ಹಾರರ್‌ (Horror) ಸಿನಿಮಾಗಳನ್ನೂ ಮೀರಿಸುವ ಚಿತ್ರವೊಂದು ಸದ್ದಿಲ್ಲದೆ ತಯಾರಾಗುತ್ತಿದೆ. ಅದು ಅಮರಾವತಿ.

    ಬ್ರಾಡ್‌ ವೇ ಪಿಚ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ವಾಸು (Vasu) ಅವರ  ಸಾರಥ್ಯವಿದೆ. ಪ್ರಿಯಾ (Priya), ರಮ್ಯಾ ಮತ್ತು ಕೃಷ್ಣ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಮೊದಲ ಹಂತದ ಚಿತ್ರೀಕರಣ ಚಾಲನೆಯಲ್ಲಿದ್ದು, ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಇದನ್ನೂ ಓದಿ:‘ಬಾಹುಬಲಿ’ ಪ್ರಭಾಸ್‌ಗೆ ಸ್ಟಾರ್ ನಟ ಕಮಲ್ ಹಾಸನ್ ವಿಲನ್

    ಹೊಸ ರೀತಿಯಲ್ಲಿ ಸಿನಿಮಾ ತಯಾರಾಗುತ್ತಿರುವುದರಿಂದ ಅಮರಾವತಿ (Amravati) ಚಿತ್ರ ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತದಲ್ಲೇ ಸಂಚಲನ ಸೃಷ್ಠಿಸುತ್ತದೆ ಎನ್ನುವುದು ತಂಡದ ನಂಬಿಕೆ. ಆ ರೀತಿಯಲ್ಲಿ ಕಥಾವಸ್ತು ಮತ್ತು ಮೇಕಿಂಗ್‌ ಇರಲಿದೆಯಂತೆ.

  • ನೂಪೂರ್‌ಗೆ ಬೆಂಬಲ ನೀಡಿದ್ದಕ್ಕೆ ತಬ್ಲೀಘಿ ಜಮಾತ್‌ನ ಮೂಲಭೂತವಾದಿಗಳಿಂದ ಔಷಧ ವ್ಯಾಪಾರಿಯ ಹತ್ಯೆ: ಎನ್‌ಐಎ

    ನೂಪೂರ್‌ಗೆ ಬೆಂಬಲ ನೀಡಿದ್ದಕ್ಕೆ ತಬ್ಲೀಘಿ ಜಮಾತ್‌ನ ಮೂಲಭೂತವಾದಿಗಳಿಂದ ಔಷಧ ವ್ಯಾಪಾರಿಯ ಹತ್ಯೆ: ಎನ್‌ಐಎ

    ಮುಂಬೈ: ಔಷಧ ವ್ಯಾಪಾರಿ ಉಮೇಶ್‌ ಪ್ರಹ್ಲಾದ್‌ ರಾವ್ ಕೊಲ್ಹೆ ಅವರನ್ನು ಸುನ್ನಿ ಇಸ್ಲಾಮಿಕ್ ಸಂಘಟನೆಯಾದ ತಬ್ಲೀಘಿ ಜಮಾತ್‌ನ(Tablighi Jamaat) ಮೂಲಭೂತವಾದಿ ಇಸ್ಲಾಮಿಸ್ಟ್‌ಗಳು ಹತ್ಯೆ ಮಾಡಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳ(NIA) ಹೇಳಿದೆ.

    ಪೂರ್ವ ಮಹಾರಾಷ್ಟ್ರದ ಅಮರಾವತಿಯ(Amravati) ಔಷಧ ವ್ಯಾಪಾರಿ ಉಮೇಶ್‌ ಪ್ರಹ್ಲಾದರಾವ್ ಕೊಲ್ಹೆ(54) ಅವರ ಹತ್ಯೆಯ ತನಿಖೆ ನಡೆಸಿದ ಎನ್‌ಐಎ 11 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದೆ.

    ಬಿಜೆಪಿ ವಕ್ತಾರೆ ನೂಪೂರ್‌ ಶರ್ಮಾ ಅವರನ್ನು ಬೆಂಬಲಿಸಿ ಉಮೇಶ್‌ ಕೊಲ್ಹೆ ವಾಟ್ಸಪ್‌ನಲ್ಲಿ ಸ್ಟೇಟಸ್‌ ಹಾಕಿದ್ದರು. ಈ ಸ್ಟೇಟಸ್‌ ನೋಡಿ ನಮ್ಮ ಧರ್ಮಕ್ಕೆ ಅವಮಾನ ಮಾಡಿದ್ದಾರೆ ಎಂದು ತಿಳಿದು ಆರೋಪಿಗಳು ಹತ್ಯೆ ಮಾಡಿದ್ದಾರೆ ಎಂದು ಎನ್‌ಐಎ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.

    ಉಮೇಶ್ ಕೊಲ್ಹೆ ಜೂನ್ 21 ರಂದು ಕೆಲಸ ಮುಗಿಸಿ ಹಿಂತಿರುಗುತ್ತಿದ್ದಾಗ ಮೂವರು ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾಗಿದ್ದರು. ಇದನ್ನೂ ಓದಿ: ನನ್ನ ಪಾಲಿಗೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕಸ: ನಿರ್ದೇಶಕ ಸಯಿದ್ ಅಖ್ತರ್

    ಪ್ರವಾದಿಗೆ ಅವಮಾನ ಮಾಡಿದ್ದಕ್ಕೆ ಆರೋಪಿಗಳು ಪ್ರತೀಕಾರಕ್ಕೆ ತೀರಿಸಲು ಪುತ್ರನ ಎದುರುಗಡೆಯೇ ಬರ್ಬರವಾಗಿ ಹತ್ಯೆ ಮಾಡಿದ್ದರು. ಎಲ್ಲಾ ಆರೋಪಿಗಳು ತಬ್ಲೀಘಿ ಜಮಾತ್‌ ಸಂಘಟನೆಯ ಸದಸ್ಯರಾಗಿದ್ದರು. ಈ ಕೃತ್ಯದ ಮಾಸ್ಟರ್‌ ಮೈಂಡ್‌ ತಬ್ಲಿಘಿ ಜಮಾತ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದ ಎಂದು ಎನ್‌ಐಎ ಹೇಳಿದೆ.

    ಇದು ಸಾಮಾನ್ಯ ಕೊಲೆಯಲ್ಲ. ಧಾರ್ಮಿಕ ಮೂಲಭೂತವಾದವನ್ನು ಬೆಳೆಸಿಕೊಂಡ ಮುಸ್ಲಿಂ ಯುವಕರು ಜನರಿಗೆ ಭಯ ಮಾಡಿಸಲು ಎಸಗಿದ ಈ ಕ್ರಿಮಿನಲ್‌ ಪಿತೂರಿ ಭಯೋತ್ಪಾದನಾ ಕೃತ್ಯಕ್ಕೆ ಸಮವಾಗಿದೆ. ಈ ಕೃತ್ಯದ ಬಳಿಕ ಆರೋಪಿಗಳು ಸಂಭ್ರಮಿಸಿದ್ದರು ಎಂದು ಉಲ್ಲೇಖಿಸಿದೆ.

    ಸೌದಿ ಸರ್ಕಾರದಿಂದ ನಿಷೇಧ:
    ಸೌದಿ ಅರೇಬಿಯಾ ಸರ್ಕಾರ ಸುನ್ನಿ ಇಸ್ಲಾಮಿಕ್ ಸಂಘಟನೆಯಾಗಿರುವ ತಬ್ಲಿಘಿ ಜಮಾತ್ ಅನ್ನು ನಿಷೇಧಿಸಿದೆ. ಈ ಸಂಘಟನೆ ಭಯೋತ್ಪಾದನೆ ಚಟುವಟಿಕೆಗಳಿಗೆ ಹೆಬ್ಬಾಗಿಲು ಎಂದಿರುವ ಸರ್ಕಾರ ಈ ಸಂಘಟನೆಯಿಂದ ದೂರ ಇರುವಂತೆ ಪ್ರಜೆಗಳಿಗೆ 2021ರ ಡಿಸೆಂಬರ್‌ನಲ್ಲಿ ಸೂಚಿಸಿತ್ತು.

    ತಬ್ಲಿಘಿಗಳು ಯಾರು?
    ಬ್ರಿಟಿಷರ ಅವಧಿಯಲ್ಲಿ 1926 ರಲ್ಲಿ ಭಾರತದಲ್ಲಿ ಹುಟ್ಟಿಕೊಂಡ ತಬ್ಲಿಘಿ ಜಮಾತ್ ಸುನ್ನಿ ಇಸ್ಲಾಮಿಕ್ ಮಿಷನರಿ ಸಂಘಟನೆಯಾಗಿದೆ. ಮುಸ್ಲಿಂ ಸಂಪ್ರದಾಯ, ಆಚರಣೆ, ಉಡುಪುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಎಂದು ಪ್ರತಿಪಾದಿಸುತ್ತದೆ. ಜಗತ್ತಿನಾದ್ಯಂತ 35 ರಿಂದ 40 ಕೋಟಿ ಅನುಯಾಯಿಗಳು ಇದ್ದಾರೆ ಎಂದು ಅಂದಾಜಿಸಲಾಗಿದೆ. ರಾಜಕೀಯ ಚಟುವಟಿಕೆಯಿಂದ ದೂರ ಇದ್ದು ಧರ್ಮ ಪ್ರಚಾರ ಮಾತ್ರ ನಮ್ಮ ಕೆಲಸ ಎಂದು ಸಂಘಟನೆ ಹೇಳಿಕೊಳ್ಳುತ್ತದೆ.‌

    Live Tv
    [brid partner=56869869 player=32851 video=960834 autoplay=true]

  • ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡ ಕುಸಿದು ಐವರು ದಾರುಣ ಸಾವು

    ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡ ಕುಸಿದು ಐವರು ದಾರುಣ ಸಾವು

    ಮುಂಬೈ: ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವೊಂದು ಕುಸಿದುಬಿದ್ದ (Building Collapses) ಪರಿಣಾಮ ಐವರು ಸಾವನ್ನಪ್ಪಿದ್ದು, ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಮಹಾರಾಷ್ಟ್ರದ (Maharashtra) ಅಮರಾವತಿಯಲ್ಲಿ (Amravati) ನಡೆದಿದೆ.

    ಘಟನೆ ಅಮರಾವತಿಯ ಪ್ರಭಾತ್ ಟಾಕೀಸ್ ಚಿತ್ರಮಂದಿರದ ಬಳಿ ನಡೆದಿದೆ. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

    ಕಟ್ಟಡ ಕುಸಿದ ಬಳಿಕ ಅವಶೇಷಗಳಡಿಯಿಂದ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಕುರಿತು ತನಿಖೆ ನಡೆಸಿ, ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಪವನೀತ್ ಕೌರ್ ತಿಳಿಸಿದ್ದಾರೆ. ಇದನ್ನೂ ಓದಿ: ಗುಜರಾತ್‌ನಲ್ಲಿ ತೂಗು ಸೇತುವೆ ಕುಸಿತ – ಸಾವಿನ ಸಂಖ್ಯೆ 35ಕ್ಕೇರಿಕೆ, ನೂರಾರು ಮಂದಿ ನೀರುಪಾಲು

    ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸಂತ್ರಸ್ತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದ್ದು, ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

    ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವನ್ನು ಕೆಡವಲು ಅಮರಾವತಿ ಮುನ್ಸಿಪಲ್ ಕಾರ್ಪೊರೇಷನ್ (ಎಎಂಸಿ) ಜುಲೈನಲ್ಲಿಯೇ ನೋಟಿಸ್ ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: 50ಕ್ಕೂ ಹೆಚ್ಚು ಜನರನ್ನು ಹೊತ್ತು ಹಳ್ಳದಾಟುತ್ತಿದ್ದಾಗ ಸಿಲುಕಿದ ಲಾರಿ

    Live Tv
    [brid partner=56869869 player=32851 video=960834 autoplay=true]

  • ಉಮೇಶ್ ಕೊಲ್ಹೆ ಮನೆಯ ಮುಂದೆ ಹನುಮಾನ್ ಚಾಲೀಸಾ ಪಠಿಸಿದ ರಾಣಾ ದಂಪತಿ

    ಉಮೇಶ್ ಕೊಲ್ಹೆ ಮನೆಯ ಮುಂದೆ ಹನುಮಾನ್ ಚಾಲೀಸಾ ಪಠಿಸಿದ ರಾಣಾ ದಂಪತಿ

    ಮುಂಬೈ: ಉಮೇಶ್ ಕೊಲ್ಹೆಯ ಹತ್ಯೆಯನ್ನು ವಿರೋಧಿಸಿ ಅವರ ಅಮರಾವತಿ ನಿವಾಸದ ಮುಂದೆ ಸಂಸದೆ ನವನೀತ್ ರಾಣಾ ಹಾಗೂ ಶಾಸಕ ರವಿ ರಾಣಾ ಹನುಮಾನ್ ಚಾಲೀಸಾವನ್ನು ಪಠಿಸಿದರು.

    ಅಮಾನತುಗೊಂಡ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕೆ ಉಮೇಶ್ ಕೊಲ್ಹೆ ಅವರನ್ನು ಕೆಲ ದುಷ್ಕರ್ಮಿಗಳು ಜೂ. 21ರಂದು ಕೊಲೆ ಮಾಡಿದ್ದರು. ಇದನ್ನು ವಿರೋಧಿಸಿ ರಾಣಾ ದಂಪತಿ ಹನುಮಾನ್‌ ಚಾಲೀಸಾವನ್ನು ಪಠಿಸಿದ್ದಾರೆ.

    ಈ ಬಗ್ಗೆ ಅಮರಾವತಿಯ ಸಂಸದೆ ನವನೀತ್ ರಾಣಾ ಸುದ್ದಿಗಾರರೊಂದಿಗೆ ಮಾತನಾಡಿ, ಕೊಲ್ಹೆಯ ಹಂತಕರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು. ಇದರಿಂದ ದೇಶದಲ್ಲಿ ಇಂತಹ ಅಪರಾಧವನ್ನು ಪುನರಾವರ್ತಿಸಲು ಯಾರೂ ಧೈರ್ಯ ಮಾಡುವುದಿಲ್ಲ ಎಂದರು. ಇದನ್ನೂ ಓದಿ: ಪತಿ ಕುಡಿದು ಗಲಾಟೆ ಮಾಡುತ್ತಾನೆ ಅಂತಾ ಪ್ರಿಯಕರನಿಂದ ಕೊಲೆ ಮಾಡಿಸಿದ ಪತ್ನಿ

    ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನ ಮಾಡಿದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಬೆಂಬಲಿಸಿ ಮಾಡಲಾಗಿದ್ದ ಸಾಮಾಜಿಕ ಮಾಧ್ಯಮದ ಪೋಸ್ಟ್ ಒಂದನ್ನು ಉಮೇಶ್ ಕೊಲ್ಹೆ ಬೆಂಬಲಿಸಿದ್ದರು. ಈ ಹಿನ್ನೆಲೆ ಜೂನ್ 21 ರಂದು ರಾತ್ರಿ 10 ಗಂಟೆಯ ವೇಳೆ ಮೂವರು ದುಷ್ಕರ್ಮಿಗಳ ತಂಡ ಉಮೇಶ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದರು. ಹಲ್ಲೆ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಕೊಡಗು ಜಿಲ್ಲೆಗೆ ಇಂದಿನಿಂದ ಈ ವಾಹನಗಳಿಗಿಲ್ಲ ಪ್ರವೇಶ – ಜಿಲ್ಲಾಧಿಕಾರಿ ಆದೇಶ

    Live Tv
    [brid partner=56869869 player=32851 video=960834 autoplay=true]

  • ನೂಪುರ್ ಹೇಳಿಕೆಯಿಂದ ಕೋಮು ಉದ್ವಿಗ್ನತೆ ಸೃಷ್ಟಿಸಿದ್ದು ಕೇವಲ ವೋಟಿಗಾಗಿ – ಸಿನ್ಹಾ ಗುಡುಗು

    ನೂಪುರ್ ಹೇಳಿಕೆಯಿಂದ ಕೋಮು ಉದ್ವಿಗ್ನತೆ ಸೃಷ್ಟಿಸಿದ್ದು ಕೇವಲ ವೋಟಿಗಾಗಿ – ಸಿನ್ಹಾ ಗುಡುಗು

    ನವದೆಹಲಿ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾರ ವಿವಾದಾತ್ಮಕ ಹೇಳಿಕೆಯಿಂದಾಗಿ ಕೋಮು ಉದ್ವಿಗ್ನತೆ ಸೃಷ್ಟಿಯಾಗಿದೆ. ಇದರಿಂದಾಗಿ ಉದಯಪುರ, ಅಮರಾವತಿ ಹತ್ಯೆಯ ನಂತರ ಬಂದ ಹೇಳಿಕೆಗಳು ಕೋಮು ಉದ್ವಿಗ್ನತೆ ಸೃಷ್ಟಿಸಿ ಮತ ಪಡೆಯುವ ಉದ್ದೇಶ ಹೊಂದಿವೆ. ಈ ಎಲ್ಲ ಕೋಮು ಗಲಭೆಗಳು ಸೃಷ್ಟಿಸಿದ್ದೂ ಮತ ಪಡೆಯುವ ಉದ್ದೇಶದಿಂದಲೇ ಎಂದು ರಾಷ್ಟ್ರಪತಿ  ಸ್ಥಾನಕ್ಕೆ ಸ್ಪರ್ಧಿಸಿರುವ ಪ್ರತಿ ಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ವಾಗ್ದಾಳಿ ನಡೆಸಿದ್ದಾರೆ.

    ರಾಷ್ಟ್ರಪತಿ ಚುನಾವಣೆಗೂ ಮುನ್ನ ಯಶವಂತ್ ಸಿನ್ಹಾ ಗುಜರಾತ್‌ನ ವಿಧಾನಸೌಧಕ್ಕೆ ಭೇಟಿ ನೀಡಿ ಕಾಂಗ್ರೆಸ್ ಮತ್ತು ಇತರ ಪಕ್ಷದ ನಾಯಕರ ಜೊತೆ ಸಭೆ ನಡೆಸಿದರು. ಬಳಿಕ ಅಮಾನತುಗೊಂಡಿರುವ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಹೇಳಿಕೆ ವಿವಾದ, ಉದಯಪುರ ಹತ್ಯೆ ಹಾಗೂ ಅಮರಾವತಿ ವೈದ್ಯನ ಹತ್ಯೆಗಳ ಕುರಿತಾಗಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಇದನ್ನೂ ಓದಿ: `ಪವಿತ್ರ’ಪ್ರೇಮ ವಿಫಲ – ಯುವಕ ಕೈಕೊಟ್ಟನೆಂದು ಕಾಲೇಜಿನಲ್ಲೇ ವಿದ್ಯಾರ್ಥಿನಿ ನೇಣಿಗೆ ಶರಣು

    ದೇಶದಲ್ಲಿ ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಲು ಇದು ಯೋಜಿತ ಪಿತೂರಿಯಾಗಿದೆ. ಕೇವಲ ಮತಕ್ಕಾಗಿ ಕಾನೂನು ಸುವ್ಯವಸ್ಥೆ ಸೃಷ್ಟಿಸುವ ಷಡ್ಯಂತ್ರವಿದೆ. ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್‌ನಲ್ಲಿ ಮಾತನಾಡುತ್ತಾರೆ. ಇಂತಹ ದೊಡ್ಡ ಘಟನೆಗಳು ಉದಯಪುರ, ಅಮರಾವತಿಯಲ್ಲಿ ನಡೆದಿವೆ. ಈವರೆಗೂ ಕೇಂದ್ರ ಸರ್ಕಾರದಿಂದ ಒಂದೇ ಒಂದು ಹೇಳಿಕೆಯನ್ನೂ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವರು ಅಥವಾ ರಕ್ಷಣಾ ಸಚಿವರು ಇಲ್ಲಿವರೆಗೆ ಯಾರೂ ಏನನ್ನೂ ಕೇಳಿಲ್ಲ. ಗುಜರಾತ್‌ನಲ್ಲಿ ಯಾವಾಗಲೂ ಸೆಕ್ಷನ್ 144 ಅಂತಹ ಪರಿಸ್ಥಿತಿ ಏಕೆ ಇದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ಇಂದಿನ ಸ್ಥಿತಿ ಇರಲಿಲ್ಲ ಎಂದು ವಿಷಾದಿಸಿದರು. ಇದನ್ನೂ ಓದಿ: ಫಸ್ಟ್ ನೈಟ್ ಅನ್ನೋದೇ ಇಲ್ಲ ಎಂದು ಹೇಳಿ ಪತಿಯನ್ನೇ ಬೆಚ್ಚಿ ಬೀಳಿಸಿದ ನಟಿ ಆಲಿಯಾ ಭಟ್

    ಇದೇ ವೇಳೆ ರಾಷ್ಟ್ರಪತಿ ಚುನಾವಣೆ ಕುರಿತು ಮಾತನಾಡಿದ ಸಿನ್ಹಾ, ಅಧ್ಯಕ್ಷೀಯ ಚುನಾವಣೆ ಬಹಳ ಮುಖ್ಯ. ರಬ್ಬರ್ ಸ್ಟಾಂಪ್ ಅಧ್ಯಕ್ಷರು ಅಲ್ಲಿ ಕುಳಿತರೆ ಏನೂ ಬದಲಾಗುವುದಿಲ್ಲ. ಈ ಚುನಾವಣೆಯಲ್ಲಿ ನಾವು ಯಾವ ಜಾತಿಯಿಂದ ಬಂದವರು ಎಂಬುದು ಮುಖ್ಯವಲ್ಲ. ಯಾವ ಸಿದ್ಧಾಂತ ಪ್ರತಿನಿಧಿಸುತ್ತೇವೆ ಎಂಬುದು ಮುಖ್ಯ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಅಮರಾವತಿ ಕೊಲೆ ಪ್ರಕರಣ – 7 ಆರೋಪಿಗಳು ಎನ್‌ಐಎ ವಶಕ್ಕೆ

    ಅಮರಾವತಿ ಕೊಲೆ ಪ್ರಕರಣ – 7 ಆರೋಪಿಗಳು ಎನ್‌ಐಎ ವಶಕ್ಕೆ

    ಅಮರಾವತಿ: ಅಮರಾವತಿ ಮೂಲದ ರಸಾಯನಶಾಸ್ತ್ರಜ್ಞ ಉಮೇಶ್ ಕೊಲ್ಹೆ ಅವರ ಹತ್ಯೆ ನಡೆಸಿದ ಎಲ್ಲಾ 7 ಆರೋಪಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ವಶಕ್ಕೆ ತೆಗೆದುಕೊಂಡಿದೆ.

    ಅಮರಾವತಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಸೋಮವಾರ ಎಲ್ಲಾ ಆರೋಪಿಗಳನ್ನು ಎನ್‌ಐಎ ಕಸ್ಟಡಿಗೆ ತೆಗೆದುಕೊಂಡಿದೆ. ಆರೋಪಿಗಳನ್ನು ಜುಲೈ 8 ಅಥವಾ ಅದಕ್ಕೂ ಮೊದಲು ಎನ್‌ಐಎ ಮುಂಬೈ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದೂ ದೇವರ ಫೋಟೋವಿದ್ದ ಪೇಪರ್‌ನಲ್ಲಿ ಕೋಳಿ ಮಾಂಸ ಮಾರಾಟ – ವ್ಯಕ್ತಿ ಅರೆಸ್ಟ್

    ಮುದ್ದಸರ್ ಅಹ್ಮದ್(22), ಶಾರುಖ್ ಪಠಾಣ್(25), ಅಬ್ದುಲ್ ತೌಫಿಕ್(24), ಶೋಯೆಬ್ ಖಾನ್(22), ಅತೀಬ್ ರಶೀದ್ (22), ಯೂಸುಫ್ ಖಾನ್ (32) ಹಾಗೂ ಹತ್ಯೆಯ ಮಾಸ್ಟರ್ ಮೈಂಡ್ ಶೇಖ್ ಇರ್ಫಾನ್ ಶೇಖ್ ರಹೀಮ್ ಬಂಧಿತ ಆರೋಪಿಗಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಶಂಕಿತ ಶಮೀಮ್ ಅಹ್ಮದ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬ ಆಚರಣೆ- ಶಾಲಾ ವಿದ್ಯಾರ್ಥಿಗಳ ಗುಂಪಿನ ನಡುವೆ ಬಾಂಬ್ ದಾಳಿ

    ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನ ಮಾಡಿದ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಬೆಂಬಲಿಸಿ ಮಾಡಲಾಗಿದ್ದ ಸಾಮಾಜಿಕ ಮಾಧ್ಯಮದ ಪೋಸ್ಟ್ ಒಂದನ್ನು ಉಮೇಶ್ ಕೊಲ್ಹೆ ಬೆಂಬಲಿಸಿದ್ದರು. ಈ ಹಿನ್ನೆಲೆ ಜೂನ್ 21 ರಂದು ರಾತ್ರಿ 10 ಗಂಟೆಯ ವೇಳೆ ಮೂವರು ದುಷ್ಕರ್ಮಿಗಳ ತಂಡ ಉಮೇಶ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದರು. ಹಲ್ಲೆ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕನ್ಹಯ್ಯ ಕೊಲೆ ಹಸಿರಾಗಿರುವಾಗಲೇ ನೂಪುರ್‌ ಶರ್ಮಾ ಬೆಂಬಲಿಸಿದ್ದಕ್ಕೆ ಮತ್ತೊಂದು ಕೊಲೆ

    ಕನ್ಹಯ್ಯ ಕೊಲೆ ಹಸಿರಾಗಿರುವಾಗಲೇ ನೂಪುರ್‌ ಶರ್ಮಾ ಬೆಂಬಲಿಸಿದ್ದಕ್ಕೆ ಮತ್ತೊಂದು ಕೊಲೆ

    ಮುಂಬೈ: ಉದಯಪುರದಲ್ಲಿ ನಡೆದ ಟೈಲರ್ ಕನ್ಹಯ್ಯಾಲಾಲ್ ಹತ್ಯೆ ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿದೆ. ಈ ಬೆನ್ನಲ್ಲೇ ನೂಪುರ್‌ ಶರ್ಮಾ ಬೆಂಬಲಿಸಿದ್ದಕ್ಕೆ ಮತ್ತೊಬ್ಬ ವ್ಯಕ್ತಿಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಮಹಾರಾಷ್ಟ್ರದ ಅಮರಾವತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಮೆಡಿಕಲ್ ಶಾಪ್ ಮಾಲೀಕ ಉಮೇಶ್ ಕೊಲ್ಹೆ (54) ಕೊಲೆಯಾದ ವ್ಯಕ್ತಿ. ಈ ಘಟನೆ ಜೂನ್ 21ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈತನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಪ್ರಕರಣದಲ್ಲಿ ಇದುವರೆಗೆ ಐದು ಮಂದಿಯನ್ನು ಬಂಧಿಸಲಾಗಿದೆ.

    ಉಮೇಶ್ ಕೊಲ್ಹೆ ಸೋಷಿಯಲ್ ಮೀಡಿಯಾದಲ್ಲಿ ನೂಪುರ ಶರ್ಮಾ ಬೆಂಬಲಿಸಿ ಪೋಸ್ಟ್ ಮಾಡಿದ್ದ. ಇದರಿಂದಾಗಿ ಆತನ ಮೇಲೆ ಕೋಪಗೊಂಡ ದುಷ್ಕರ್ಮಿಗಳು ಉಮೇಶ್‍ನನ್ನು ಹತ್ಯೆ ಮಾಡಿದ್ದಾರೆ. ಇದನ್ನೂ ಓದಿ: 48 ವರ್ಷಗಳ ಹಿಂದೆ ಹೀಗಿತ್ತು ನನ್ನ ರೆಸ್ಯೂಮ್ – ಉದ್ಯೋಗಾಕಾಂಕ್ಷಿಗಳಿಗೆ ಆತ್ಮವಿಶ್ವಾಸ ತುಂಬಿದ ಬಿಲ್‌ಗೇಟ್ಸ್

    ಉಮೇಶ್ ಕೋಲ್ಹೆ ಅವರ ಪುತ್ರ ಸಂಕೇತ್ ನೀಡಿದ ದೂರು ಮೇರೆಗೆ ಅಮರಾವತಿಯ ಸಿಟಿ ಕೊತ್ವಾಲಿ ಠಾಣೆಯ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಮುದ್ದ್ಸಿರ್ ಅಹ್ಮದ್ (22), ಶಾರುಖ್ ಪಠಾಣ್ (25), ಅಬ್ದುಲ್ ತೌಫಿಕ್ (24), ಶೋಯೆಬ್ ಖಾನ್ (22), ಅತಿಬ್ ರಶೀದ್ (22) ಬಂಧಿತ ಆರೋಪಿಗಳಾಗಿದ್ದರೇ, ಹಮೀಮ್ ಅಹ್ಮದ್ ಫಿರೋಜ್ ಅಹ್ಮದ್ ತಲೆಮರೆಸಿಕೊಂಡಿದ್ದಾನೆ.

    ಉಮೇಶ್ ಕೋಲ್ಹೆ ಅವರು ಜೂನ್ 21 ರಂದು ರಾತ್ರಿ 10:30ರ ಸುಮಾರಿಗೆ ಮೆಡಿಕಲ್ ಸ್ಟೋರ್ ಅನ್ನು ಮುಚ್ಚಿ ಮನೆಗೆ ಹಿಂದಿರುಗುತ್ತಿದ್ದರು. ಈ ಸಂದರ್ಭದಲ್ಲಿ ಆತನ ಪತ್ನಿ ಮತ್ತು ಮಗನು ಇದ್ದರು. ಇದನ್ನೂ ಓದಿ: ಕನ್ಹಯ್ಯ ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆ ನೀಡಿ: ಉಮ್ಮತ್ ಚಿಂತಕರ ವೇದಿಕೆ ಮನವಿ

    ಮಹಿಳಾ ಕಾಲೇಜು ಪ್ರೌಢಶಾಲೆಯ ಗೇಟ್ ಬಳಿ ಬೈಕ್‍ನಲ್ಲಿ ಮೂವರು ದುಷ್ಕರ್ಮಿಗಳು ಉಮೇಶ್‍ನನ್ನು ಅಡ್ಡಗಟ್ಟಿದರು. ಅವರಲ್ಲಿ ಒಬ್ಬಾತ ಉಮೇಶ್ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಆಗ ಅಲ್ಲೇ ಇದ್ದ ಉಮೇಶ್‍ನ ಪತ್ನಿ ಮತ್ತು ಮಗ ಸಹಾಯಕ್ಕಾಗಿ ಕೂಗಲು ಪ್ರಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ತಕ್ಷಣ ಉಮೇಶ್‍ನ್ನು ಹೆಚ್ಚಿನ ಆಸ್ಪತ್ರೆಗೆ ಸಾಗಿಸಲಾದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

    POLICE JEEP

    ಘಟನೆಗೆ ಸಂಬಂಧಿಸಿದಂತೆ ಐವರು ಬಂಧಿತ ಆರೋಪಿಗಳು, ತಮಗೆ ಕಾರು ಮತ್ತು ಓಡಿಹೋಗಲು 10,000 ರೂ.ಗಳನ್ನು ಒದಗಿಸಿದ ಮತ್ತೊಬ್ಬ ಆರೋಪಿಯ ಸಹಾಯವನ್ನು ಕೋರಿರುವುದಾಗಿ ಬಹಿರಂಗಪಡಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    Live Tv

  • ಉದ್ಧವ್ ಠಾಕ್ರೆ ಎಂಟ್ರಿ – 14 ದಿನಗಳ ಕಸ್ಟಡಿಗೆ ಒಳಗಾದ ಸಂಸದೆ, ಶಾಸಕ ದಂಪತಿ

    ಉದ್ಧವ್ ಠಾಕ್ರೆ ಎಂಟ್ರಿ – 14 ದಿನಗಳ ಕಸ್ಟಡಿಗೆ ಒಳಗಾದ ಸಂಸದೆ, ಶಾಸಕ ದಂಪತಿ

    ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿಷಯದಲ್ಲಿ ಟೀಕೆ ಮತ್ತು ದ್ವೇಷ ಪ್ರಚೋದನ ಕೃತ್ಯಕ್ಕೆ ಸಂಬಂಧಿಸಿದಂತೆ ಸ್ವತಂತ್ರ ಸಂಸದೆ ನವನೀತ್ ರಾಣಾ ಮತ್ತು ಶಾಸಕ ಪತಿ ರವಿ ರಾಣಾ ಅವರನ್ನು 14 ದಿನಗಳ ಕಸ್ಟಡಿಗೆ ಕಳುಹಿಸಲಾಗಿದೆ.

    ಭಾನುವಾರ ಮುಂಬೈ ನ್ಯಾಯಾಲಯವು ನವನೀತ್ ರಾಣಾ ಮತ್ತು ರವಿ ರಾಣಾ ಅವರ ಬಂಧನಕ್ಕೆ ನಗರ ಪೊಲೀಸರ ಬೇಡಿಕೆಯನ್ನು ತಿರಸ್ಕರಿಸಿತು. ಈ ಹಿನ್ನೆಲೆ ದಂಪತಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ನವನೀತ್ ರಾಣಾ ಅವರನ್ನು ಬೈಕುಲ್ಲಾ ಮಹಿಳಾ ಜೈಲಿಗೆ ಕಳುಹಿಸಲಾಗುವುದು. ಅವರ ಪತಿಯನ್ನು ಆರ್ಥರ್ ರೋಡ್ ಜೈಲಿಗೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೋದಿಯನ್ನು ಭೇಟಿಯಾಗಿ ರುದ್ರಾಕ್ಷಿ ಮಾಲೆ ನೀಡಿದ ಅನುಪಮ್ ಖೇರ್

    ನಡೆದಿದ್ದೇನು?
    ‘ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಸೃಷ್ಟಿಸಿದ್ದಾರೆ’ ಎಂದು ಆರೋಪಿಸಿ ಮುಂಬೈ ಪೊಲೀಸರು ಶನಿವಾರ ಸಂಜೆ ಮಹಾರಾಷ್ಟ್ರದ ಅಮರಾವತಿಯ ಸಂಸದ ಬದ್ನೇರಾ ಶಾಸಕ ರವಿ ರಾಣಾ ಮತ್ತು ಅವರ ಪತ್ನಿ ನವನೀತ್ ರಾಣಾ ಅವರನ್ನು ಬಂಧಿಸಿದ್ದರು. ಇದಕ್ಕೆ ಕಾರಣ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸದ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸುವ ಯೋಜನೆಯನ್ನು ಈ ದಂಪತಿ ಹಾಕಿಕೊಂಡಿದ್ದರು. ಆದರೆ ಅವರನ್ನು ಬಂಧಿಸಿದ ಮೇಲೆ ಕಾರ್ಯಕ್ರಮವನ್ನು ರದ್ದುಗೊಳಿಸಿಲಾಯಿತು.

    Hanuman Chalisa row: Court sends Rana couple to 14-day judicial custody | Deccan Herald

    ಪ್ರಸ್ತುತ ದಂಪತಿ ವಿರುದ್ಧ ಸೆಕ್ಷನ್ 153(ಎ)(ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 353 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರಿಬ್ಬರನ್ನೂ ಭಾನುವಾರ ಬಾಂದ್ರಾದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರದೀಪ್ ಘರತ್ ತಿಳಿಸಿದ್ದಾರೆ.

    ಸರ್ಕಾರಿ ಯಂತ್ರಕ್ಕೆ ಸವಾಲು ಹಾಕಿದ ಮತ್ತು ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಟೀಕೆಗಳನ್ನು ಮಾಡಿದ್ದರಿಂದ ಅವರ ವಿರುದ್ಧ ಐಪಿಸಿ ಸೆಕ್ಷನ್ 124-ಎ(ದೇಶದ್ರೋಹ) ಅಡಿಯಲ್ಲಿ ಆರೋಪಗಳನ್ನು ಮಾಡಲಾಗಿದೆ ಎಂದು ಪ್ರಾಸಿಕ್ಯೂಟರ್ ಹೇಳಿದರು. ಇದನ್ನೂ ಓದಿ: ಯಾಕಣ್ಣ ನನ್ನೊಬ್ಬಳನ್ನೇ ಬಿಟ್ಟು ಹೋದೆ: ರಾಜ್‌ ನೆನೆದು ತಂಗಿ ಕಣ್ಣೀರು

  • ಕುರಿ ಕಡಿಯುವ ಬದಲು ವ್ಯಕ್ತಿಯ ತಲೆ ಕಡಿದ

    ಕುರಿ ಕಡಿಯುವ ಬದಲು ವ್ಯಕ್ತಿಯ ತಲೆ ಕಡಿದ

    ಅಮರಾವತಿ: ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಕುರಿ ಕಡಿಯುವ ಬದಲಾಗಿ ವ್ಯಕ್ತಿಯ ತಲೆಯನ್ನು ಕಡಿದಿರುವ ಘಟನೆ ನಡೆದಿದೆ.

    ಟಿ. ಸುರೇಶ್ ಮೃತ ನಾಗಿದ್ದಾನೆ. ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯ ಕೃತಕ್ಯಕ್ಕೆ ಈತ ಬಲಿಯಾಗಿದ್ದಾನೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ನಡೆದಿದೆ. ಇದನ್ನೂ ಓದಿ:  ಕೋವಿಡ್-19 ಪ್ರಕರಣ ಏರಿಕೆ – ಮದುವೆ ನೋಂದಣಿ ಸೇವೆ ಸ್ಥಗಿತ!

    ಚಿತ್ತೂರಿನಲ್ಲಿ ನಡೆದ ಹಬ್ಬವೊಂದರ ಹಿನ್ನೆಲೆಯಲ್ಲಿ ಕುರಿಗಳನ್ನು ಬಲಿ ಕೊಡಲಾಗುತ್ತಿತ್ತು. ಬಲಿ ಕೊಡಲು ಸುರೇಶ್ ಕುರಿ ಹಿಡಿದುಕೊಂಡಿದ್ದನು. ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ ಕುರಿಯನ್ನು ಕಡಿಯುವ ಬದಲು ಕುರಿ ಹಿಡಿದುಕೊಂಡಿದ್ದ ವ್ಯಕ್ತಿಯ ತಲೆಯನ್ನೇ ಕಡಿದಿದ್ದಾನೆ. ಇದನ್ನೂ ಓದಿ: ರಾಯಚೂರು ಕೋರ್ಟ್ ಮುಂದೆ ಜನಜಂಗುಳಿ

    ಸ್ಥಳದಲ್ಲೇ ಕುಸಿದು ಬಿದ್ದು ಸುರೇಶ್ ಮೃತ ಪಟ್ಟಿದ್ದಾನೆ. ಸ್ಥಳದಲ್ಲಿ ಸೇರಿದ್ದ ಜನರು ಬೆಚ್ಚಿಬಿದ್ದಿದ್ದಾರೆ. ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.