Tag: Amrapali

  • ಅಮ್ರಪಾಲಿ ವಿರುದ್ಧ ಸುಪ್ರೀಂ ಕದತಟ್ಟಿದ ಧೋನಿ

    ಅಮ್ರಪಾಲಿ ವಿರುದ್ಧ ಸುಪ್ರೀಂ ಕದತಟ್ಟಿದ ಧೋನಿ

    ನವದೆಹಲಿ: ಕಂಪೆನಿಯ ರಾಯಭಾರಿಯಾಗಿ ಬಳಕೆ ಮಾಡಿಕೊಂಡು ಮಾರುಕಟ್ಟೆಯನ್ನು ವಿಸ್ತರಿಸಿದ್ದ ಅಮ್ರಪಾಲಿ ಕಂಪೆನಿ ನೀಡಬೇಕಿದ್ದ 40 ಕೋಟಿ ರೂ. ಹಣಕ್ಕಾಗಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

    2009 ರಲ್ಲಿ ಅಮ್ರಪಾಲಿ ರಿಯಲ್ ಎಸ್ಟೇಟ್ ಕಂಪೆನಿಯ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಆಗಿದ್ದ ಧೋನಿ 2016 ರವರೆಗೂ ಕೂಡ ತಮ್ಮ ಒಪ್ಪಂದಗಳನ್ನು ಸಂಸ್ಥೆಯೊಂದಿಗೆ ಮುಂದುವರೆದಿದ್ದರು.

    ಅಮ್ರಪಾಲಿ ಸಂಸ್ಥೆ ಸದ್ಯ 46 ಸಾವಿರ ಗ್ರಾಹಕರಿಗೆ ವಂಚನೆ ಮಾಡಿದ ಆರೋಪ ಎದುರಿಸುತ್ತಿದೆ. ಈ ನಡುವೆಯೇ ಧೋನಿ ಕೂಡ ಅರ್ಜಿ ಸಲ್ಲಿಕೆ ಮಾಡಿದ್ದಾರೆ. 2016 ರಲ್ಲಿಯೇ ಕಂಪೆನಿಯ ಮೇಲೆ ವಂಚನೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಧೋನಿ ಒಪ್ಪಂದವನ್ನು ರದ್ದು ಪಡಿಸಿದ್ದರು. ಇದಕ್ಕೂ 2007 ರಲ್ಲಿ ಧೋನಿ ಪತ್ನಿ ಸಾಕ್ಷಿ ಅವರು ಕೂಡ ಸಂಸ್ಥೆಯ ಆಡಳಿತ ನಿದೇಶಕರಾಗಿದ್ದರು.

    2007 ರಲ್ಲಿ ಅಮ್ರಪಾಲಿ ನೊಯ್ಡಾದಲ್ಲಿ ವಸತಿ ಸಮುಚ್ಚಯ ನಿರ್ಮಾಣಕ್ಕೆ ಮುಂದಾಗಿ ಹಣ ಹೂಡಿಕೆ ಮಾಡಲು ತಿಳಿಸಿತ್ತು. ಈ ವೇಳೆ ಹಲವಾರು ಮಂದಿ ಹಣ ನೀಡಿ ಖಚಿತ ರಿಟರ್ನ್ ನಂಬಿಕೆಯ ಆಧಾರದಡಿ ಹಣ ಹೂಡಿಕೆ ಮಾಡಿದ್ದರು. ಆದರೆ ಜನರಿಗೆ ಮಾತು ಕೊಟ್ಟಂತೆ ರಿಟನ್ರ್ಸ್ ಹಣ ನೀಡದೇ ಯೋಜನೆಯನ್ನು ಪೂರ್ಣಗೊಳಿಸಿರಲಿಲ್ಲ. ಇದರಿಂದ ಹಣ ನೀಡಿದ್ದ ಜನ ಕೋರ್ಟಿನಲ್ಲಿ ದೂರು ದಾಖಳಿಸಿದ್ದರು.

    ಸಂಸ್ಥೆಯ ವಿರುದ್ಧ ಸದ್ಯ 46 ಸಾವಿರ ಮಂದಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿರುವ ಕೋರ್ಟ್ ಸಂಸ್ಥೆಯ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲೇ ಧೋನಿ ಸದ್ಯ ದೂರು ಅರ್ಜಿ ಸಲ್ಲಿಸಿದ್ದಾರೆ.

    2011 ರಲ್ಲಿ ಅಮ್ರಪಾಲಿ ಸಂಸ್ಥೆ ಟೀಂ ಇಂಡಿಯಾ ಕ್ರಿಕೆಟ್ ಆಟಗಾರಿಗೆ ವಿಲ್ಲಾಗಳನ್ನು ಉಡುಗೊರೆ ನೀಡುವುದಾಗಿ ಘೋಷಣೆ ಮಾಡಿತ್ತು. ಈ ವೇಳೆಯೇ ಧೋನಿ ಅವರಿಗೆ 1 ಕೋಟಿ ರೂ. ಮೌಲ್ಯದ ವಿಲ್ಲಾವನ್ನು ನೀಡಿತ್ತು. ಉಳಿದ ಆಟಗಾರರ ವಿಲ್ಲಾಗಳ ಮೊತ್ತ ತಲಾ 55 ಲಕ್ಷ ರೂ. ಆಗಿತ್ತು.