Tag: amoolya gowda

  • ನಟ ಅಭಿಷೇಕ್ – ಮಹೇಶ್ ಕಾಂಬಿನೇಷನ್ ಚಿತ್ರದಲ್ಲಿ ನಟಿ ಅಮೂಲ್ಯ

    ನಟ ಅಭಿಷೇಕ್ – ಮಹೇಶ್ ಕಾಂಬಿನೇಷನ್ ಚಿತ್ರದಲ್ಲಿ ನಟಿ ಅಮೂಲ್ಯ

    ಸುಂದರಿ, ಅಗ್ನಿಸಾಕ್ಷಿ, ನನ್ನರಸಿ ರಾಧೆ, ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಮೋಡಿ ಮಾಡಿರುವ ಚೆಲುವೆ ಅಮೂಲ್ಯ ಗೌಡ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯಾಗಿ ಮಿಂಚಲು ರೆಡಿಯಾಗಿದ್ದಾರೆ. `ಕುರುಡು ಕಾಂಚಣ’ (Kurudu Kanchana) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಬಗ್ಗೆ ಇತ್ತೀಚಿಗೆ ಅಪ್‌ಡೇಟ್ ನೀಡಿದ್ದರು. ಇದೀಗ ಮತ್ತೊಂದು ಚಿತ್ರಕ್ಕೆ ಅಮೂಲ್ಯ ಆಯ್ಕೆಯಾಗಿದ್ದಾರೆ.

    2016ರಲ್ಲಿ `ಸುಂದರಿ’ ಧಾರಾವಾಹಿ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ನಟಿ ಅಮೂಲ್ಯ ಬಳಿಕ ಶಮಂತ್ ಗೌಡ ಜೊತೆ `ಮರೆಯಲಾರೆ’ ಎಂಬ ಬ್ರೇಕಪ್ ಸಾಂಗ್‌ನಲ್ಲಿ ನಟಿಸಿದ್ದರು. ಸಾಕಷ್ಟು ಜಾಹಿರಾತಿನಲ್ಲಿ ಮಾಡೆಲ್ ಆಗಿ ಕಾಣಿಕೊಂಡಿದ್ದಾರೆ. ಇದೀಗ ಸಿನಿಮಾದತ್ತ ಮುಖ ಮಾಡಿದ್ದಾರೆ.

    ಅಭಿಷೇಕ್ ಅಂಬರೀಶ್ ಮತ್ತು ʻಮದಗಜʼ ನಿರ್ದೇಶಕ ಮಹೇಶ್ ಕುಮಾರ್ ಕಾಂಬಿನೇಷನ್‌ನಲ್ಲಿ ಮೂಡಿ ಬರಲಿರುವ ಚಿತ್ರದಲ್ಲಿ ನಟಿ ಅಮೂಲ್ಯ ಗೌಡ (Amoolya Gowda) ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕೃತ ಅಪ್‌ಡೇಟ್‌ ಸಿಗುವವರೆಗೂ ಕಾದುನೋಡಬೇಕಿದೆ.

  • ʻಒಲವ ಘಮವುʼ ಆಲ್ಬಂ ಸಾಂಗ್‌ಗೆ ಧ್ರುವ ಸರ್ಜಾ ಮೆಚ್ಚುಗೆ

    ʻಒಲವ ಘಮವುʼ ಆಲ್ಬಂ ಸಾಂಗ್‌ಗೆ ಧ್ರುವ ಸರ್ಜಾ ಮೆಚ್ಚುಗೆ

    ಕಿರುತೆರೆ ನಟಿ ಅಮೂಲ್ಯ ಗೌಡ (Amoolya Gowda) ಇದೀಗ ಸ್ಯಾಂಡಲ್‌ವುಡ್ (Sandalwood) ಪಾದಾರ್ಪಣೆ ಮಾಡಿದ್ದಾರೆ. `ಕುರುಡು ಕಾಂಚಾಣ’ (Kurudu Kanchana) ಸಿನಿಮಾ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡ್ತಿದ್ದಾರೆ. ಈ ಬೆನ್ನಲ್ಲೇ `ಒಲವ ಘಮವು’ ಎಂಬ ಆಲ್ಬಂ ಸಾಂಗ್ ಮೂಲಕ ನಟಿ ಸದ್ದು ಮಾಡ್ತಿದ್ದಾರೆ. ಅಮೂಲ್ಯ ತಂಡದ ಹೊಸ ಹೆಜ್ಜೆಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್ ನೀಡಿದ್ದಾರೆ.

    ಟಿವಿಪರದೆಯಲ್ಲಿ ಮಿಂಚ್ತಿದ್ದ ನಟಿ ಅಮೂಲ್ಯ ಗೌಡ ಅವರು ಈಗ ಆಲ್ಬಂ ಸಾಂಗ್‌ನಿಂದ ಗಮನ ಸೆಳೆಯುತ್ತಿದ್ದಾರೆ. ʻಒಲವ ಘಮವುʼ ಎಂಬ ಬ್ಯೂಟಿಫುಲ್ ಟ್ರ್ಯಾಕ್ ಅನ್ನ `ಮಾರ್ಟಿನ್’ ಹೀರೋ ಧ್ರುವ ಸರ್ಜಾ (Dhruva Sarja) ರಿಲೀಸ್ ಮಾಡುವ ಮೂಲಕ ತಂಡಕ್ಕೆ ಶುಭಹಾರೈಸಿದ್ದಾರೆ. ಸಾಂಗ್ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಹೊಸಬರಿಗೆ ಸದಾ ಸಾಥ್ ನೀಡುವ ಧ್ರುವ ಇದೀಗ ಅಮೂಲ್ಯ ಆ್ಯಂಡ್ ಟೀಂ ಪ್ರಯತ್ನಕ್ಕೆ ಶ್ಲಾಘಿಸಿದ್ದಾರೆ. ಇದನ್ನೂ ಓದಿ:  ಕ್ರಿಕೆಟರ್ ಶುಭಮನ್ ಗಿಲ್ ಬಗ್ಗೆ ಕೇಳಿದ್ದಕ್ಕೆ ನಾಚಿ ನೀರಾದ ರಶ್ಮಿಕಾ ಮಂದಣ್ಣ

     

    View this post on Instagram

     

    A post shared by Amoolya Gowda???? (@amoolya_gowda)

    ಈ ಸುಂದರ ಹಾಡಿನ ಮೂಲಕ ಮುದ್ದಾದ ಪ್ರೇಮ ಕಥೆಯನ್ನ ತೋರಿಸಲಾಗಿದೆ. ಮುಖ್ಯ ಭೂಮಿಕೆಯಲ್ಲಿ ನಟಿ ಅಮೂಲ್ಯ ಮತ್ತು ಆನಂದ್ ಜೀವತುಂಬಿದ್ದಾರೆ. ಮೀರಾ ಚಂದ್ರ ಅವರು ಈ ಹಾಡಿಗೆ ಧ್ವನಿಯಾಗಿದ್ದಾರೆ. ಕಿರಣ್ ಕೃಷ್ಣಮೂರ್ತಿ ಅವರು ಸಂಗೀತ ನೀಡಿದ್ದು, ಸಾಯಿ ಸರ್ವೇಶ್ ಸಾಹಿತ್ಯ ಬರೆದಿದ್ದಾರೆ.

    `ಒಲವ ಘಮವು’ ಸಾಂಗ್ ರಿಲೀಸ್ ಆಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲೂ ಸಾಂಗ್ ಸದ್ದು ಮಾಡುತ್ತಿದೆ.

  • ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಕಿರುತೆರೆ ಸುಂದರಿ ಅಮೂಲ್ಯ ಗೌಡ

    ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಕಿರುತೆರೆ ಸುಂದರಿ ಅಮೂಲ್ಯ ಗೌಡ

    ಸುಂದರಿ’ (Sundari) ಸೀರಿಯಲ್ ‌ಮೂಲಕ‌ ಕಿರುತೆರೆಗೆ ಲಗ್ಗೆಯಿಟ್ಟ ಚೆಲುವೆ ಅಮೂಲ್ಯ ಗೌಡ (Amoolya Gowda) ಇದೀಗ ಸ್ಯಾಂಡಲ್‌ವುಡ್‌ನಲ್ಲಿ (Sandalwood) ನಾಯಕಿಯಾಗಿ ಮಿಂಚಲು ರೆಡಿಯಾಗಿದ್ದಾರೆ. ‘ಕುರುಡು ಕಾಂಚಣ’ (Kurudu Kanchana) ಸಿನಿಮಾ‌ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

    2016 ‘ಸುಂದರಿ’ ಧಾರಾವಾಹಿ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ನಟಿ ಅಮೂಲ್ಯ ಅವರು ಅಪರಂಜಿ, ಅಗ್ನಿಸಾಕ್ಷಿ, ನನ್ನರಸಿ ರಾಧೆ ಸೀರಿಯಲ್ ಗಳ ಮೂಲಕ ನಟಿ ಗಮನ ಸೆಳೆದರು. 2016ರ `Princess Karnataka’ ವಿನ್ನರ್ ಕೂಡ ಆಗಿದ್ದಾರೆ. 2020ರಲ್ಲಿ ಶಮಂತ್ ಗೌಡ (Shamanth Gowda) ಜೊತೆ ‘ಮರೆಯಲಾರೆ’ (Mareyalaare) ಎಂಬ ಬ್ರೇಕಪ್ ಸಾಂಗ್ ನಲ್ಲಿ ನಟಿಸಿದ್ದರು. ಸಾಕಷ್ಟು ಜಾಹಿರಾತಿನಲ್ಲಿ ಮಾಡೆಲ್ ಆಗಿ ಕಾಣಿಕೊಂಡಿದ್ದಾರೆ.

    ‘ಒನ್ ವೇ’ ಚಿತ್ರದ‌ ನಟ ಕಿರಣ್‌ ರಾಜ್‌ಗೆ ‘ಕುರುಡು ಕಾಂಚಾಣ’ (Kurudu Kanchana) ಎಂಬ ಚಿತ್ರದಲ್ಲಿ ನಾಯಕಿಯಾಗಿ ಅಮೂಲ್ಯ ನಟಿಸಿದ್ದಾರೆ. ಜೆನ್ನಿ ಎನ್ನುವ ಪಾತ್ರಕ್ಕೆ ಅಮೂಲ್ಯ (Amoolya Gowda) ಜೀವತುಂಬಿದ್ದಾರೆ. ನಟನೆಗೆ ಒತ್ತಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್.ಪ್ರದೀಪ್ ವರ್ಮಾ ಈ‌ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಕನ್ನಡ, ತೆಲುಗು, ತಮಿಳು, ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿ ‌ಬರಲಿದೆ. ಇದನ್ನೂ ಓದಿ: Exclusive: ʻಯುವ’ ಚಿತ್ರಕ್ಕೆ ಸಪ್ತಮಿ ಗೌಡ ಸೆಲೆಕ್ಟ್ ಆಗಿದ್ದು ಹೇಗೆ?

    ‘ಕುರುಡು ಕಾಂಚಾಣ’ ಎಂಬ ಭಿನ್ನ ಕಥೆಯಲ್ಲಿ ನಟಿಸಿರುವ ಅಮೂಲ್ಯ, ಹೊಸ ಬಗೆಯ ಕಥೆಗಳನ್ನ ಕೇಳುತ್ತಿದ್ದಾರೆ. ಸದ್ಯದಲ್ಲಿಯೇ ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಈಗಾಗಲೇ ಸಾಕಷ್ಟು ಕಥೆಗಳನ್ನ ಬರೆದಿಟ್ಟುಕೊಂಡಿರುವ ಅಮೂಲ್ಯ, ಮುಂದಿನ ದಿನಗಳಲ್ಲಿ ನಿರ್ದೇಶಕಿಯಾಗಿ ಕೂಡ ಬರಲಿದ್ದಾರೆ. ಅದಕ್ಕಾಗಿ ತೆರೆಮರೆಯಲ್ಲಿ ಸಕಲ ತಯಾರಿಯನ್ನ ನಡೆಸುತ್ತಿದ್ದಾರೆ.

    ಕಿರುತೆರೆಯಲ್ಲಿ ಅಭಿಮಾನಿಗಳ ಗಮನ‌ ಸೆಳೆದಿರುವ ನಟಿ ಅಮೂಲ್ಯ, ಬೆಳ್ಳಿತೆರೆಯಲ್ಲಿ ಕೂಡ ಬೆಳಗಲಿ ಎಂಬುದೇ ಅಭಿಮಾನಿಗಳ ‌ಆಶಯ.