Tag: Amogha Varsha

  • ಕೇಕ್‌ ಕತ್ತರಿಸಿ ಸಕ್ಸಸ್ ಆಚರಿಸಿದ ‌ʻಗಂಧದ ಗುಡಿʼ ಟೀಮ್

    ಕೇಕ್‌ ಕತ್ತರಿಸಿ ಸಕ್ಸಸ್ ಆಚರಿಸಿದ ‌ʻಗಂಧದ ಗುಡಿʼ ಟೀಮ್

    ಪುನೀತ್ ರಾಜ್‌ಕುಮಾರ್(Puneeth Rajkumar) ನಟನೆಯ `ಗಂಧದ ಗುಡಿ’ (Gandadagudi) ಸಿನಿಮಾ ಅಕ್ಟೋಬರ್ 28ಕ್ಕೆ ತೆರೆಗೆ ಅಪ್ಪಳಿಸಿತ್ತು. ಪುನೀತ್ ಅವರಾಗಿಯೇ ಕಾಣಿಸಿಕೊಂಡಿದ್ದ ಈ ಚಿತ್ರಕ್ಕೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಚಿತ್ರತಂಡ ಜೊತೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಕ್ಸಸ್ ಸಂಭ್ರಮ ಆಚರಿಸಿದ್ದಾರೆ.

    ಅಮೋಘ ವರ್ಷ (Amogha Varsha) ನಿರ್ದೇಶನದ `ಗಂಧದ ಗುಡಿ’ ವನ್ಯಜೀವಿ ಸಂಕುಲದ ಕಾಡು ಮೇಡಿನ ಚಿತ್ರಣವನ್ನ ತೆರೆಯ ಮೇಲೆ ತೋರಿಸಲಾಗಿತ್ತು. ಅಪ್ಪು ನೈಜ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದರು. ಅಪ್ಪು ಸಹಜ ನಟನೆ ಜೊತೆ ಸೊಗಸಾದ ಹಸಿರಿನ ಕಥೆಗೆ ಚಿತ್ರಮಂದಿರದಲ್ಲಿ ಸಕ್ಸಸ್‌ಫುಲ್ ಪ್ರದರ್ಶನ ಕಂಡಿತ್ತು. ಇದನ್ನೂ ಓದಿ:`ಜೈಲರ್’ ಚಿತ್ರದ ಸೆಟ್‌ನಲ್ಲಿ ಶಿವಣ್ಣನನ್ನು ಭೇಟಿಯಾದ ಶಿವಕಾರ್ತಿಕೇಯನ್

    ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಚಿತ್ರತಂಡದ ಜೊತೆಗೆ `ಗಂಧದ ಗುಡಿ’ ಸಕ್ಸಸ್ ಸೆಲೆಬ್ರೇಷನ್ ಮಾಡಿದ್ದಾರೆ. ಕ್ವಿನ್ಸ್ ರೋಡ್‌ನಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ತಂಡ ಕೇಕ್ ಕಟ್ ಮಾಡಿ ಖುಷಿಪಟ್ಟಿದೆ. ನಿರ್ದೇಶಕ ಸಂತೋಷ್ ಆನಂದ್‌ರಾಮ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಪುತ್ರ ಯುವರಾಜ್‌ಕುಮಾರ್ ಸಾಥ್ ಕೊಟ್ಟಿದ್ದಾರೆ. ಸಕ್ಸಸ್ ಸೆಲೆಬ್ರೇಷನ್‌ಗೆ ಸಂಬAಧಿಸಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    Live Tv
    [brid partner=56869869 player=32851 video=960834 autoplay=true]

  • ಗಂಧದ ಗುಡಿ ಚಿತ್ರಕ್ಕೆ ‘ಜರ್ನಿ ಟು ರಿಮೆಂಬರ್’ ಅಂತ ಹೆಸರಿಟ್ಟು, ಅದನ್ನು ಬಿಟ್ಟಿದ್ದೇಕೆ?

    ಗಂಧದ ಗುಡಿ ಚಿತ್ರಕ್ಕೆ ‘ಜರ್ನಿ ಟು ರಿಮೆಂಬರ್’ ಅಂತ ಹೆಸರಿಟ್ಟು, ಅದನ್ನು ಬಿಟ್ಟಿದ್ದೇಕೆ?

    ಪುನೀತ್ ರಾಜ್ ಕುಮಾರ್ ಕನಸಿನ ಪ್ರಾಜೆಕ್ಟ್ ಗಂಧದ ಗುಡಿಯ (Gandhad Gudi) ‘ಜರ್ನಿ ಆಫ್ ಗಂಧದಗುಡಿ’ ವಿಡಿಯೋ ಬಿಡುಗಡೆ ಆಗಿದೆ. ಈ ಪ್ರಾಜೆಕ್ಟ್ ಹಿಂದಿನ ಕಥೆಯನ್ನು ನಿರ್ದೇಶಕ  ಅಮೋಘ ವರ್ಷ ಹಾಗೂ ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಸವಿವರವಾಗಿ ಹಂಚಿಕೊಂಡಿದ್ದಾರೆ. ಗಂಧದ ಗುಡಿ ಶುರುವಾಗಿದ್ದು ಹೇಗೆ? ಅದನ್ನು ಮೊದಲು ಯಾವ ಹೆಸರಿನಿಂದ ಪ್ರಾರಂಭಿಸಲಾಯಿತು. ನಂತರ ಏನೆಲ್ಲ ಬದಲಾವಣೆಗಳು ಆದವು ಎನ್ನುವ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

    ನಿರ್ದೇಶಕ ಅಮೋಘ ವರ್ಷ ಪ್ರಕೃತಿಯ ಸೌಂದರ್ಯ, ಕಾಡು ಮೇಡುಗಳ ಅಚ್ಚರಿಗಳನ್ನು ಚಿತ್ರೀಕರಿಸಿ ಪುನೀತ್ (Puneeth Rajkumar) ಅವರ ಮುಂದಿಟ್ಟಾಗ ಸ್ವತಃ ಅಪ್ಪು ಅವರೇ ಅದನ್ನು ಬೆರಗಿನಿಂದ ನೋಡಿದರಂತೆ. ಅಲ್ಲದೇ, ತಮ್ಮ ಆಸೆಗಳನ್ನೂ ಅಮೋಘ ಜೊತೆ ಹಂಚಿಕೊಂಡಿದ್ದರಂತೆ. ಈ ಕನಸಿಗೆ ಅವರು ಇಟ್ಟಿದ್ದ ಹೆಸರು ‘ಜರ್ನಿ ಟು ರಿಮೆಂಬರ್’. ಇದೇ ಹೆಸರಿನಲ್ಲೇ ಮೊದಲು ಪ್ರಾಜೆಕ್ಟ್ ಶುರು ಮಾಡಿದ್ದರಂತೆ. ಆನಂತರ ಇದಕ್ಕೆ ಗಂಧದ ಗುಡಿ ಅಂತ ಹೆಸರಿಟ್ಟಿದ್ದಾರೆ. ಇದನ್ನೂ ಓದಿ:ತುಳುವಿನಲ್ಲೂ ರಿಲೀಸ್ ಆಗಲಿದೆ `ಕಾಂತಾರ’: ರಿಲೀಸ್ ಡೇಟ್ ಫಿಕ್ಸ್

    ಕಾಡಿನಲ್ಲಿ ಜೀವಂತ ಆನೆ ಮತ್ತು ಹುಲಿಯನ್ನು ಒಮ್ಮೆಯಾದರೂ ನೋಡಬೇಕು ಎನ್ನುವುದು ಪುನೀತ್ ಅವರ ಆಸೆಯಾಗಿತ್ತಂತೆ. ಆನೆ ಸಿಗಬಹುದು. ಆದರೆ, ಹುಲಿಯನ್ನು ನೋಡುವುದು ತೀರಾ ಕಷ್ಟ ಮತ್ತು ವಿರಳ. ಆದರೆ, ಪುನೀತ್ ಅವರಿಗೆ ಮೊದಲ ದಿನವೇ ಹುಲಿಯನ್ನು ನೋಡುವಂತಹ ಬಂಪರ್ ಅವಕಾಶ ಸಿಕ್ಕಿತ್ತಂತೆ. ಈ ಕುರಿತು ಅಮೋಘ ಮಾತನಾಡುತ್ತಾ, ‘ಹುಲಿಯನ್ನು ನೋಡಲು ಹತ್ತಾರು ದಿನಗಳ ಕಾದಿದ್ದಿದೆ. ಎಷ್ಟೋ ಜನರಿಗೆ ಮೂರ್ನಾಲ್ಕು ವರ್ಷ ಕಾದರೂ ಸಿಗುವುದಿಲ್ಲ. ಆದರೆ, ಅಪ್ಪು ಅವರಿಗೆ ಮೊದಲ ದಿನವೇ ಹುಲಿ ಕಂಡಿತ್ತು. ಅವರ ಸಂಭ್ರಮಿಸಿದ್ದು ಇನ್ನೂ ಕಣ್ಮುಂದಿದೆ’ ಎಂದಿದ್ದಾರೆ.

    ಪುನೀತ್ ಅವರು ತಾವು ಕಾಡಿಗೆ ಹೋಗುತ್ತೇನೆ ಎಂದು ಹೇಳಿದಾಗ ಪತ್ನಿ ಅಶ್ವಿನಿ (Ashwini) ಅವರಿಗೆ ಸಖತ್ ಭಯವಾಗಿತ್ತಂತೆ. ಇದೆಲ್ಲ ನಿಮಗೆ ಬೇಕಾ ಅಂತಾನೂ ಕೇಳಿದ್ದರಂತೆ. ಆದರೆ, ಪುನೀತ್ ಅವರ ಉತ್ಸಾಹಕ್ಕೆ ಸುಮ್ಮನಾಗಿದ್ದರಂತೆ. ಹಾಗಂತ ಸುಮ್ಮನಿರುವುದಕ್ಕೂ ಆಗುತ್ತಿರಲಿಲ್ಲ. ಪ್ರತಿ ದಿನವೂ ಕಾಲ್ ಮಾಡಿ ಮಾತನಾಡುತ್ತಿದ್ದರು. ಅಲ್ಲಿಯ ಅನುಭವಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು ಎಂದು ಸ್ವತಃ ಅಶ್ವಿನಿ ಅವರೇ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೆಂಪೇಗೌಡ ಪ್ರತಿಮೆ ಅನಾವರಣ : ವಿಶೇಷ ವಿಡಿಯೋಗೆ ರಾಕಿಂಗ್ ಸ್ಟಾರ್ ಯಶ್ ಧ್ವನಿ

    ಕೆಂಪೇಗೌಡ ಪ್ರತಿಮೆ ಅನಾವರಣ : ವಿಶೇಷ ವಿಡಿಯೋಗೆ ರಾಕಿಂಗ್ ಸ್ಟಾರ್ ಯಶ್ ಧ್ವನಿ

    ವೆಂಬರ್ 11 ರಂದು ನಾಡಪ್ರಭು ಕೆಂಪೇಗೌಡ ಬೃಹತ್ ಪ್ರತಿಮೆಯನ್ನು ಅನಾವರಣ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ವಿಶೇಷ ವಿಡಿಯೋವೊಂದನ್ನು ಪ್ರದರ್ಶನ ಮಾಡಲಾಗುತ್ತಿದೆ. ಕೆಂಪೇಗೌಡರ ಜೀವನ ಸಾಧನೆಯನ್ನು ಈ ವಿಶೇಷ ವಿಡಿಯೋದ ಮೂಲಕ ತೋರಿಸಲಾಗುತ್ತಿದ್ದು, ಇದಕ್ಕೆ ಯಶ್ (Yash) ಅವರು ಹಿನ್ನೆಲೆ ಧ್ವನಿಯನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಎರಡು ದಿನಗಳ ಹಿಂದೆಯಷ್ಟೇ ‘ಗಂಧದ ಗುಡಿ’ ಡಾಕ್ಯುಡ್ರಾಮಾದ ನಿರ್ದೇಶಕ ಅಮೋಘ ವರ್ಷ (Amogha Varsha) ಮತ್ತು ಯಶ್ ಡಬ್ಬಿಂಗ್ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದರು. ಡಬ್ಬಿಂಗ್ ಸ್ಟುಡಿಯೋದಲ್ಲಿ ಇಬ್ಬರು ಇದ್ದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಲವು ಚರ್ಚೆಗೆ ಕಾರಣವಾಗಿತ್ತು. ಗಂಧದ ಗುಡಿ ಪ್ರಾಜೆಕ್ಟ್ ನಲ್ಲಿ ಯಶ್ ಏನಾದರೂ ಇನ್ವಾಲ್ ಆಗಿದ್ದಾರಾ ಎನ್ನುವ ಮಾತು ಕೇಳಿ ಬಂದಿತ್ತು. ಅಲ್ಲದೇ, ಈ ಜೋಡಿ ಮತ್ತೇನಾದ್ರೂ ಕೆಲಸ ಮಾಡುತ್ತಿರಬಹುದಾ ಎಂದು ಪ್ರಶ್ನೆ ಎದ್ದಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಇದನ್ನೂ  ಓದಿ:ನಟನೆಯತ್ತ ʻಕಾಂತಾರʼ ಹೀರೋ ರಿಷಬ್ ಪತ್ನಿ ಪ್ರಗತಿ ಶೆಟ್ಟಿ

    ನಾಡಪ್ರಭು ಕೆಂಪೇಗೌಡ (Kampegowda) ಬೃಹತ್ ಪ್ರತಿಮೆಯ ಅನಾವರಣದ ಉಸ್ತುವಾರಿಯನ್ನು ಸಚಿವ ಅಶ್ವತ್ಥ್ ನಾರಾಯಣ್ ಅವರು ವಹಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಯಶ್ ಅವರು ಹಿನ್ನೆಲೆ ಧ್ವನಿ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಪೆಷಲ್ ವಿಡಿಯೋವನ್ನು ಮಾಡಲು ಅಮೋಘವರ್ಷ ಅವರು ಜವಾಬ್ದಾರಿ ತಗೆದುಕೊಂಡಿದ್ದು, ಆ ಸಾಕ್ಷ್ಯ ಚಿತ್ರಕ್ಕೆ ಯಶ್ ಧ್ವನಿ ನೀಡಿದ್ದಾರೆ ಎನ್ನುವುದು ಫೋಟೋ ಹಿಂದಿರುವ ಕಥೆಯಂತೆ.

    Live Tv
    [brid partner=56869869 player=32851 video=960834 autoplay=true]

  • ‘ಗಂಧದ ಗುಡಿ’ ಚಿತ್ರದಲ್ಲಿ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ಇದ್ದಾರೆ

    ‘ಗಂಧದ ಗುಡಿ’ ಚಿತ್ರದಲ್ಲಿ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ಇದ್ದಾರೆ

    ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿರುವ ಪುನೀತ್ ರಾಜ್ ಕುಮಾರ್ ಕನಸಿನ ಗಂಧದ ಗುಡಿ (Gandhad Gudi) ಚಿತ್ರದಲ್ಲಿ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth) ಕೂಡ ಇದ್ದಾರೆ. ಚಿತ್ರ ಶುರುವಾಗುವುದು ಅಶ್ವಿನಿ ಅವರ ಮಾತಿನ ಮೂಲಕ. ಅವರು ಅಪ್ಪುವನ್ನು ಬಣ್ಣಿಸುವ ರೀತಿಯೇ ಸೊಗಸು. ಒಂದಷ್ಟು ಅಚ್ಚರಿ, ಒಂದಷ್ಟು ಭಾವುಕತೆ ಮತ್ತಷ್ಟು ಚಿತ್ರ ನೋಡುವ ಕುತೂಹಲವನ್ನು ಅಶ್ವಿನಿ ಹುಟ್ಟು ಹಾಕುತ್ತಾರೆ. ಆನಂತರ ಪುನೀತ್ ಹೊಸ ಲೋಕಕ್ಕೆ ನೋಡುಗರನ್ನು ಕರೆದುಕೊಂಡು ಹೋಗುತ್ತಾರೆ.

    ಪುನೀತ್ ರಾಜ್ ಕುಮಾರ್ (Puneeth Rajkumar) ನಟನೆಯ ಗಂಧದ ಗುಡಿ ಡಾಕ್ಯುಡ್ರಾಮಾ ಚಿತ್ರ ಇಂದು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಈ ಚಿತ್ರದ ವಿಶೇಷ ಅಂದರೆ, ಅಪ್ಪು ಅಪ್ಪು ಆಗಿಯೇ ಕಾಣಿಸಿಕೊಂಡಿದ್ದಾರೆ. ಯಾವುದೇ ಮೇಕಪ್ ಇಲ್ಲದೇ, ಡೈಲಾಗ್ ಹೊಡೆಯದೇ ಸರಳವಾಗಿ ಹಾಗೂ ಸಹಜವಾಗಿದ್ದಾರೆ. ಹಾಗಾಗಿ ಪುನೀತ್ ಮತ್ತಷ್ಟು ಹತ್ತಿರವಾಗುತ್ತಾರೆ. ಈ ಚಿತ್ರದಲ್ಲಿ ಪುನೀತ್ ಕಾಡಿನ ಮಧ್ಯೆ ಹೋದಾಗ, ವಿಷ ಸರ್ಪಗಳನ್ನು ಕಾಣುತ್ತಾರೆ. ಹುಲಿ, ಚಿರತೆಗಳನ್ನು ನೋಡುತ್ತಾರೆ. ಈ ಸಂದರ್ಭದಲ್ಲಿ ಅವರು ಮಾತೊಂದನ್ನು ಆಡುತ್ತಾರೆ. ಆ ಮಾತು ನೋಡುಗನನ್ನು ಭಾವುಕನಾಗಿಸುತ್ತದೆ. ಇದನ್ನೂ ಓದಿ: ಗಂಧದಗುಡಿ ಸಿನಿಮಾ ಅಲ್ಲವೇ ಅಲ್ಲ, ಅದೊಂದು ಅನುಭೂತಿ

    ಕಾಡಿನೊಳಗೆ ವಿಷದ ಹಾವು ಕಾಣುತ್ತಾ, ನಿರ್ದೇಶಕ ಅಮೋಘ ವರ್ಷ (Amogha Varsha) ಜೊತೆ ತಮಾಷೆಯಾಗಿ ಮಾತನಾಡಿದರೂ ಅದೀಗ ಪ್ರೇಕ್ಷಕರನ್ನು ಕಣ್ಣೀರು ಹಾಕಿಸುತ್ತದೆ. ಹಾವು ನೋಡುತ್ತಾ, ‘ಹೆಂಡ್ತಿ ಮಕ್ಕಳನ್ನು ಮನೇಲಿ ಬಿಟ್ಟು ಬಂದಿದ್ದೀನಿ. ಸೇಫ್ ಆಗಿ ಮನೆ ಸೇರ್ತೀನಿ ತಾನೆ?’ ಎಂದು ಪ್ರಶ್ನೆ ಮಾಡುತ್ತಾರೆ. ಅಂದು ಸೇಫ್ ಆಗಿಯೇ ಮನೆಗೆ ಬಂದ ಪುನೀತ್ ರಾಜ್ ಕುಮಾರ್, ಆ ನಂತರ ಆಸ್ಪತ್ರೆಗೆ ಹೋದವರು ಮತ್ತೆ ಸೇಫ್ ಆಗಿ ಬರಲಿಲ್ಲ ಎನ್ನುವುದು ನೋವಿನ ಸಂಗತಿ. ಈ ಮಾತು ಕೇಳುತ್ತಿದ್ದಂತೆಯೇ ಕಣ್ಣೀರು ಬರುವುದು ಸತ್ಯ.

    ಗಂಧದ ಗುಡಿ ಡಾಕ್ಯುಡ್ರಾಮಾ ಸಿನಿಮಾ ಇಂದು ಬಿಡುಗಡೆ ಆಗಿ, ಬೆಳಗ್ಗೆಯೇ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸ್ಪೆಷಲ್ ಶೋ ಆಯೋಜನೆಗೊಂಡಿದ್ದವು. ಮೊದಲ ಪ್ರದರ್ಶನದಲ್ಲೇ ನೆಚ್ಚಿನ ನಟನ ಚಿತ್ರವನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಭಾವುಕರಾದರು. ಅಭಿಮಾನಿಗಳ ಜೊತೆಯೇ ಡಾ.ರಾಜ್ ಕುಟುಂಬ ಕೂಡ ಸಿನಿಮಾ ವೀಕ್ಷಿಸಿದೆ.

    ಇಂದು ಬೆಳಗ್ಗೆ ಹತ್ತು ಗಂಟೆಯೊಳಗೆ ಬೆಂಗಳೂರಿನಲ್ಲೇ 50ಕ್ಕೂ ಹೆಚ್ಚು ಪ್ರದರ್ಶನಗಳನ್ನು ಆಯೋಜನೆ ಮಾಡಿದ್ದು, ಬೆಳಗಿನ ಜಾವವೇ 50 ಬಾರಿ ಈ ಸಿನಿಮಾ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ ಎಂದು ವಿತರಕ ಕಾರ್ತಿಕ್ ಗೌಡ ಮಾಹಿತಿ ಹಂಚಿಕೊಂಡಿದ್ದಾರೆ. ಇದೊಂದು ನೂತನ ದಾಖಲೆ ಎಂದೂ ಅವರು ತಿಳಿಸಿದ್ದಾರೆ. ಬೆಳಗಿನ ಜಾವ 6 ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ‘ಹೆಂಡ್ತಿ ಮಕ್ಳನ್ನು ಬಿಟ್ ಬಂದಿದ್ದೀನಿ, ಸೇಫ್ ಆಗಿ ಮನೆಗೆ ಹೋಗ್ತೀನಾ?’: ಗಂಧದ ಗುಡಿಯಲ್ಲಿ ಕಣ್ಣೀರು ತರಿಸುತ್ತೆ ಅಪ್ಪು ಡೈಲಾಗ್

    ‘ಹೆಂಡ್ತಿ ಮಕ್ಳನ್ನು ಬಿಟ್ ಬಂದಿದ್ದೀನಿ, ಸೇಫ್ ಆಗಿ ಮನೆಗೆ ಹೋಗ್ತೀನಾ?’: ಗಂಧದ ಗುಡಿಯಲ್ಲಿ ಕಣ್ಣೀರು ತರಿಸುತ್ತೆ ಅಪ್ಪು ಡೈಲಾಗ್

    ಪುನೀತ್ ರಾಜ್ ಕುಮಾರ್ ನಟನೆಯ ಗಂಧದ ಗುಡಿ (Gandhad Gudi) ಡಾಕ್ಯುಡ್ರಾಮಾ ಚಿತ್ರ ಇಂದು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಈ ಚಿತ್ರದ ವಿಶೇಷ ಅಂದರೆ, ಅಪ್ಪು (Appu) ಅಪ್ಪು ಆಗಿಯೇ ಕಾಣಿಸಿಕೊಂಡಿದ್ದಾರೆ. ಯಾವುದೇ ಮೇಕಪ್ ಇಲ್ಲದೇ, ಡೈಲಾಗ್ ಹೊಡೆಯದೇ ಸರಳವಾಗಿ ಹಾಗೂ ಸಹಜವಾಗಿದ್ದಾರೆ. ಹಾಗಾಗಿ ಪುನೀತ್ ಮತ್ತಷ್ಟು ಹತ್ತಿರವಾಗುತ್ತಾರೆ. ಈ ಚಿತ್ರದಲ್ಲಿ ಪುನೀತ್ ಕಾಡಿನ ಮಧ್ಯೆ ಹೋದಾಗ, ವಿಷ ಸರ್ಪಗಳನ್ನು ಕಾಣುತ್ತಾರೆ. ಹುಲಿ, ಚಿರತೆಗಳನ್ನು ನೋಡುತ್ತಾರೆ. ಈ ಸಂದರ್ಭದಲ್ಲಿ ಅವರು ಮಾತೊಂದನ್ನು ಆಡುತ್ತಾರೆ. ಆ ಮಾತು ನೋಡುಗನನ್ನು ಭಾವುಕನಾಗಿಸುತ್ತದೆ.

    ಕಾಡಿನೊಳಗೆ ವಿಷದ ಹಾವು ಕಾಣುತ್ತಾ, ನಿರ್ದೇಶಕ ಅಮೋಘ ವರ್ಷ (Amogha Varsha) ಜೊತೆ ತಮಾಷೆಯಾಗಿ ಮಾತನಾಡಿದರೂ ಅದೀಗ ಪ್ರೇಕ್ಷಕರನ್ನು ಕಣ್ಣೀರು ಹಾಕಿಸುತ್ತದೆ. ಹಾವು ನೋಡುತ್ತಾ, ‘ಹೆಂಡ್ತಿ ಮಕ್ಕಳನ್ನು ಮನೇಲಿ ಬಿಟ್ಟು ಬಂದಿದ್ದೀನಿ. ಸೇಫ್ ಆಗಿ ಮನೆ ಸೇರ್ತೀನಿ ತಾನೆ?’ ಎಂದು ಪ್ರಶ್ನೆ ಮಾಡುತ್ತಾರೆ. ಅಂದು ಸೇಫ್ ಆಗಿಯೇ ಮನೆಗೆ ಬಂದ ಪುನೀತ್ ರಾಜ್ ಕುಮಾರ್, ಆ ನಂತರ ಆಸ್ಪತ್ರೆಗೆ ಹೋದವರು ಮತ್ತೆ ಸೇಫ್ ಆಗಿ ಬರಲಿಲ್ಲ ಎನ್ನುವುದು ನೋವಿನ ಸಂಗತಿ. ಈ ಮಾತು ಕೇಳುತ್ತಿದ್ದಂತೆಯೇ ಕಣ್ಣೀರು ಬರುವುದು ಸತ್ಯ. ಇದನ್ನೂ ಓದಿ: ಗಂಧದಗುಡಿ ಸಿನಿಮಾ ಅಲ್ಲವೇ ಅಲ್ಲ, ಅದೊಂದು ಅನುಭೂತಿ

    ಡಾಕ್ಯುಮೆಂಟರಿ ಮಾದರಿಯ ಈ ಚಿತ್ರ ನಿಜಕ್ಕೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಪುನೀತ್ ರಾಜ್‍ಕುಮಾರ್ (Puneeth Rajkumar) ಗಂಧದ ಗುಡಿ ಹೆಸರಿನಲ್ಲಿ ಡಾಕ್ಯುಮೆಂಟರಿ ಮಾಡಿದ್ದಾರೆ ಅಂದಾಗ, ಕುತೂಹಲಕ್ಕಿಂತ ಅನುಮಾನಿಸಿದವರೆ ಹೆಚ್ಚು. ಓಟಿಟಿ ಮೂಲಕ ಜಗತ್ತಿನ ಸಿನಿಮಾಗಳು ನಮ್ಮುಂದಿರುವಾಗ, ಡಿಸ್ಕವರಿ ಚಾನೆಲ್ ಗಳು ನಮ್ಮ ಬೆರಳ ತುದಿಯಲ್ಲೇ ನಲಿಯುತ್ತಿರುವಾಗ, ಅದಕ್ಕಿಂತ ಅಪ್ಪು ಇನ್ನೇನು ಮಾಡುವುದಕ್ಕೆ ಸಾಧ್ಯ? ಅಂತ ಅನಿಸಿದ್ದೂ ಇದೆ. ಪುನೀತ್ ಡ್ಯಾನ್ಸ್, ಪುನೀತ್ ಡೈಲಾಗ್, ಪುನೀತ್ ನಟನೆ, ಪುನೀತ್ ನಗುವನ್ನು ಬೆಳ್ಳಿ ಪರದೆಯಲ್ಲಿ ನೋಡಿ, ಕಣ್ತುಂಬಿಕೊಂಡಿರುವ ಅಭಿಮಾನಿಗಳು, ಇದ್ಯಾವುದೂ ಇಲ್ಲದ ಕಾಡು ಮೇಡುಗಳನ್ನು ನೋಡುವುದಕ್ಕೆ ಇಷ್ಟ ಪಡುತ್ತಾರಾ ಅಂತ ಚರ್ಚೆ ಮಾಡಿದ್ದೂ ಇದೆ. ಆದರೆ, ಅದೆಲ್ಲದರ ಆಚೆ ಗಂಧದ ಗುಡಿ ಹೊಸ ಅನುಭವವನ್ನು ನೀಡುತ್ತದೆ.

    ಸಿನಿಮಾ ಕೊಡುವ ಥ್ರಿಲ್ ಗಿಂತ ಅಪ್ಪು ಇಲ್ಲಿ ಹೊಸ ಅನುಭೂತಿಯನ್ನು ಕಟ್ಟಿ ಕೊಡ ಯತಿ ಡೆತ್ ಕಟ್ಟಿ ಕೊಡುತ್ತಾರೆ. ಅವರು ಬೆಟ್ಟ ಹತ್ತಿದರೇ ನಾವೇ ಬೆಟ್ಟ ಹತ್ತಿದಷ್ಟು ಖುಷಿ, ಅವರು ಕಾಡಲ್ಲಿ ನಡೆದು ಹೊರಟರೇ ಅವರನ್ನು ನಾವೇ ಹಿಂಬಾಲಿಸುವಂತಹ ಅನುಭವ, ನಡು ನಡುವೆ ಅಪ್ಪು ಮಾತು, ತಮಾಷೆ, ಭಯ ಎಲ್ಲವೂ ಇಷ್ಟ ಇಷ್ಟ.

    ಆನೆ, ಹುಲಿ, ಕರಡಿ, ಚಿರತೆ, ಕಪ್ಪೆ, ಹಾವು, ಚೇಳು, ಜಿಂಕೆ, ಪಾತರಗಿತ್ತಿ, ಮೀನು, ಮೊಸಳೆ ಅಬ್ಬಬ್ಬಾ ಎಷ್ಟೊಂದು ಪಾತ್ರಗಳು? ಅವಕ್ಕೆ ನಟನೆ ಕಲಿಸಿದವರಾರು, ಹಾಡು ಹೇಳಿಕೊಟ್ಟವರು ಯಾರು? ಅವು ಏಕೆ ಹಾಗೆ ಜೀವಿಸುತ್ತವೆ? ಇವೆಲ್ಲ ಪ್ರಶ್ನೆಗಳು ಪುನೀತ್ ಉತ್ತರ ಕೊಡುತ್ತಾ, ಕೊಡಿಸುತ್ತಾ ಸಾಗುತ್ತಾರೆ. ಇದೇ ಗಂಧದ ಗುಡಿಯ ಬ್ಯುಟಿ.

    ಕರ್ನಾಟಕ ಸಂಸ್ಕೃತಿಗಳ ತವರು. ಕಾಡು ಮೇಡುಗಳ ನಾಡು, ಆರಾಧನೆಗಳ ಬೀಡು. ಎಲ್ಲವನ್ನೂ 96 ನಿಮಿಷಗಳಲ್ಲಿ ಹಿಡಿದಿಟ್ಟು ನಮ್ಮನ್ನು ಹೊಸ ಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ನಿರ್ದೇಶಕ ಅಮೋಘ ವರ್ಷ, ಕ್ಯಾಮರಾ ಟೀಮ್, ಹಿನ್ನೆಲೆ ಸಂಗೀತ ಈ ಗಂಧದ ಗುಡಿಯ ಘಮವನ್ನು ಮತ್ತಷ್ಟು ಹೆಚ್ಚಿಸಿದೆ.

    Live Tv
    [brid partner=56869869 player=32851 video=960834 autoplay=true]

  • `ಗಂಧದಗುಡಿ’ ಪ್ರೀ ರಿಲೀಸ್ ಇವೆಂಟ್‌ಗೆ ಭರ್ಜರಿ ತಯಾರಿ

    `ಗಂಧದಗುಡಿ’ ಪ್ರೀ ರಿಲೀಸ್ ಇವೆಂಟ್‌ಗೆ ಭರ್ಜರಿ ತಯಾರಿ

    ಪುನೀತ್ ರಾಜ್‌ಕುಮಾರ್(Puneeth Rajkumar) ನಟಿಸಿರುವ ಕೊನೆಯ ಸಿನಿಮಾ `ಗಂಧದ ಗುಡಿ’ ಟ್ರೈಲರ್ ರಿಲೀಸ್ ಆಗಿದೆ. ಟ್ರೇಲರ್ ನೋಡಿರುವ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ಬೆನ್ನಲ್ಲೇ ಅಪ್ಪು ಫ್ಯಾನ್ಸ್‌ಗೆ ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದ್ದಾರೆ. ʻಗಂಧದಗುಡಿʼ ಚಿತ್ರದ ಪ್ರೀ ರಿಲೀಸ್ ಇವೆಂಟ್ ಭರ್ಜರಿ ತಯಾರಿ ನಡೆಯುತ್ತಿದೆ.

    `ಗಂಧದಗುಡಿ'(Gandagudi) ಟ್ರೈಲರ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ರೈಲರ್‌ನಲ್ಲಿ ಹಸಿರಿನ ಸೊಬಗಿನ ನಡುವೆ ಅಪ್ಪುನ ನೋಡಿ ಫ್ಯಾನ್ಸ್ ಕಣ್ತುಂಬಿಕೊಂಡಿದ್ದಾರೆ. ಇನ್ನೂ ಇದೇ ಅಕ್ಟೋಬರ್ 21ರಂದು ಗಂಧದಗುಡಿ ಚಿತ್ರದ ಪ್ರೀ ರಿಲೀಸ್ ಇವೆಂಟ್ ಮಾಡಲು ತೆರೆಮರೆಯಲ್ಲಿ ಈಗಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ. ಪ್ಯಾಲೇಸ್ ಗ್ರೌಂಡ್‌ನಲ್ಲಿ ಅಪ್ಪು ಕುಟುಂಬದ ಜೊತೆ ಅಭಿಮಾನಿಗಳು, ಚಿತ್ರರಂಗದ ಸ್ನೇಹಿತರ ಸಮ್ಮುಖದಲ್ಲಿ ಈ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಲಿದೆ. ಪರಭಾಷೆಯ ಸ್ಟಾರ್‌ಗಳಿಗೂ ಇವೆಂಟ್‌ಗೆ ಆಹ್ವಾನ ಇರಲಿದೆ. ಇದನ್ನೂ ಓದಿ:ಅಪ್ಪು ಮಗನೇ ಟ್ರೈಲರ್ ರಿಲೀಸ್‍ಗೆ ನೀನೇ ನನ್ನ ಕರೆದೊಯ್ಯುತ್ತಿರುವೆ- ರಾಘಣ್ಣ ಭಾವುಕ

    ಅಪ್ಪು ಕೊನೆಯ ಚಿತ್ರವನ್ನು ಫ್ಯಾನ್ಸ್‌ಗೆ ಅರ್ಪಣೆ ಮಾಡಲು ಪಿಆರ್‌ಕೆ ನಿರ್ಮಾಣ ಸಂಸ್ಥೆ ಪ್ಲ್ಯಾನ್‌ ಮಾಡಿದೆ. ಇನ್ನೂ ಗಂಧದ ಗುಡಿ ಚಿತ್ರದ ಪ್ರೀ ರಿಲೀಸ್ ಇವೆಂಟ್‌ನ ಆಹ್ವಾನ ಪತ್ರಿಕೆಯನ್ನ ಕೂಡ ವಿಶೇಷವಾಗಿ ಮಾಡಲಾಗಿದೆ. ಗಂಧದ ತುಂಡಿನಿಂದ ಪುನೀತ್ ರಾಜ್‌ಕುಮಾರ್ ಅಂತಾ ಪುನೀತ್ ಸ್ಟ್ಯಾಚು ಮಾಡಲಾಗಿದೆ. ಈ ಮೂಲಕ ಚಿತ್ರವನ್ನ ಅರ್ಪಣೆ ಮಾಡಲು ಪ್ರೀ ರಿಲೀಸ್ ತಯಾರಿ ನಡೆಯುತ್ತಿದೆ.

    ಇದೇ ಅಕ್ಟೋಬರ್ 28ಕ್ಕೆ ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಯಲ್ಲಿ ಗಂಧದಗುಡಿ ಚಿತ್ರವನ್ನ ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು.

    Live Tv
    [brid partner=56869869 player=32851 video=960834 autoplay=true]

  • ಗಂಧದ ಗುಡಿಯಲ್ಲಿ ಚಂದದ ನೋಟ: ನೀವು ಇರಬೇಕಿತ್ತು ಎಂದು ಕಣ್ಣೀರಾಕಿದ ಫ್ಯಾನ್ಸ್

    ಗಂಧದ ಗುಡಿಯಲ್ಲಿ ಚಂದದ ನೋಟ: ನೀವು ಇರಬೇಕಿತ್ತು ಎಂದು ಕಣ್ಣೀರಾಕಿದ ಫ್ಯಾನ್ಸ್

    ಪುನೀತ್ ರಾಜ್‍ಕುಮಾರ್ (Puneeth Rajkumar) ಕನಸಿನ ಪ್ರಾಜೆಕ್ಟ್ ಗಂಧದ ಗುಡಿ(Gandagudi) ಟ್ರೇಲರ್ ಇಂದು ಬಿಡುಗಡೆ ಆಗಿದೆ. ಅಪ್ಪು ಈ ಡಾಕ್ಯುಮೆಂಟರಿ ಮಾದರಿಯ ಸಿನಿಮಾದ ಬಗ್ಗೆ ಅಷ್ಟೊಂದು ಕನಸು ಯಾಕೆ ಕಂಡಿದ್ದರು ಎನ್ನುವುದಕ್ಕೆ ಟ್ರೈಲರ್ ನಲ್ಲಿ ತೋರಿಸಿದ ಒಂದೊಂದು ಫ್ರೇಮೂ ಸಾಕ್ಷಿಯಾಗಿವೆ. ಟ್ರೈಲರ್ ನೋಡಿದ ತಕ್ಷಣ ಮೂಡುವ ಒಂದೇ ಭಾವ, ಪುನೀತ್ ರಾಜ್‍ಕುಮಾರ್ ನೀವು ಇರಬೇಕಿತ್ತು. ಈ ಗಂಧದ ಗುಡಿಯಲ್ಲಿ ಇನ್ನಷ್ಟು ಕಾಲ ಬಾಳಬೇಕಿತ್ತು.

    ಗಂಧದ ಗುಡಿಯಲ್ಲಿ ಏನಿಲ್ಲ, ಎಲ್ಲವೂ ಇದೆ. ಬೆಟ್ಟ, ಗುಡ್ಡ, ನದಿ, ಹಳ್ಳ, ಕೊಳ್ಳ, ಅರಣ್ಯ, ಕಾಡು ಪ್ರಾಣಿಗಳು, ಕಾಡಂಚಿನ ಜನರು, ದೇವರು, ದೈವ ಎಲ್ಲವನ್ನೂ ಒಂದೇ ಉಸಿರಿಗೆ ಹಿಡಿದಿಟ್ಟಿದ್ದಾರೆ ಪುನೀತ್ ರಾಜ್‍ಕುಮಾರ್. ರಾತ್ರಿ ಅವರು ಕಾಡಿನೊಳಗೆ ನುಗ್ಗಿದಾಗ ನಾವೇ ಭಯಪಡುವಷ್ಟು ಸುಂದರವಾಗಿ ಸೆರೆ ಹಿಡಿದಿದ್ದಾರೆ ಆ ರಾತ್ರಿಯನ್ನು. ಸಮುದ್ರದಾಳಕ್ಕೆ ಅಪ್ಪು ಜಿಗಿದಾಗ ಇಲ್ಲಿ ನಾವೇ ಒದ್ದೆಯಾಗುವಂತೆ ಸಿನಿಮಾಟೋಗ್ರಫಿ ಇದೆ. ಎಲ್ಲವೂ ಚಂದ, ಚಂದ. ಇದನ್ನೂ ಓದಿ:ಮಹಿಳಾ ಸ್ಪರ್ಧಿಗಳ ವಿಚಾರದಲ್ಲಿ ರಾಕೇಶ್ ಅಡಿಗಗೆ ಸೆಡ್ಡು ಹೊಡೆದ ರೂಪೇಶ್ ಶೆಟ್ಟಿ ಕಾಲೆಳೆದ ಸುದೀಪ್

    ʻಗಂಧದ ಗುಡಿʼ ಟ್ರೈಲರ್‌ನ(Gandagudi Trailer) ಮತ್ತೊಂದು ಸೊಗಸು ಅಂದರೆ, ಅಪ್ಪು ಹಾಗೂ ಅವರ ಅಪ್ಪಾಜಿ ಬಾಳಿ ಬದುಕಿದ ಮನೆಯನ್ನು ತೋರಿಸಿದ್ದಾರೆ. ಸ್ವತಃ ಆ ಮನೆಯ ಬಗ್ಗೆ ಪುನೀತ್ ರಾಜ್‍ಕುಮಾರ್ ಅವರೇ ವಿವರಿಸುತ್ತಾರೆ. ಮನೆಯನ್ನು ಕಣ್ತುಂಬಿಕೊಳ್ಳುವ ಹೊತ್ತಲ್ಲಿ ಡಾ.ರಾಜ್ ಕುಮಾರ್ ಪ್ರವೇಶ. ಥ್ರಿಲ್ ಅನಿಸುವಷ್ಟು ಮಜಾ ಕೊಡುತ್ತದೆ ಟ್ರೇಲರ್.

    ಇಂದು ಬೆಂಗಳೂರಿನ ನರ್ತಕಿ(Narthaki Theatre) ಚಿತ್ರಮಂದಿರದಲ್ಲಿ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಗಾಗಿ ಟ್ರೇಲರ್ ಪ್ರದರ್ಶನ ಏರ್ಪಡಿಸಲಾಗಿತ್ತು. ʻಗಂಧದ ಗುಡಿʼಯ ಅಂದವನ್ನು ಕಣ್ತುಂಬಿಕೊಂಡ ಕಂಗಳಲ್ಲಿ ಅಪ್ಪು ಇಲ್ಲ ಅನ್ನುವ ಕಂಬನಿ ಸುರಿಯುತ್ತಿತ್ತು. ರಾಘವೇಂದ್ರ ರಾಜ್‍ಕುಮಾರ್ (Raghavendra Rajkumar) ಸೇರಿದಂತೆ ಅಲ್ಲಿದ್ದವರ ಅಷ್ಟೂ ಕಣ್ಣುಗಳು ಒದ್ದೆ ಆಗಿದ್ದವು. ಟ್ರೇಲರೇ ಇಷ್ಟೊಂದು ಭಾವುಕತೆ ಸೃಷ್ಟಿ ಮಾಡಿದೆ. ಇದೇ ತಿಂಗಳು ಕೊನೆಯಲ್ಲಿ ಪೂರ್ತಿ ಚಿತ್ರವೇ ಬಿಡುಗಡೆ ಆಗುತ್ತಿದೆ. ಹೃದಯ ಒಡೆಯುವ ಕಾಲವದು.

    Live Tv
    [brid partner=56869869 player=32851 video=960834 autoplay=true]

  • Exclusive-ಪುನೀತ್ ನಟನೆಯ ‘ಗಂಧದ ಗುಡಿ’ ಡಾಕ್ಯುಮೆಂಟರಿ ಅಲ್ಲ,  ಸಿನಿಮಾ : ನಿರ್ದೇಶಕ ಅಮೋಘ ವರ್ಷ

    Exclusive-ಪುನೀತ್ ನಟನೆಯ ‘ಗಂಧದ ಗುಡಿ’ ಡಾಕ್ಯುಮೆಂಟರಿ ಅಲ್ಲ, ಸಿನಿಮಾ : ನಿರ್ದೇಶಕ ಅಮೋಘ ವರ್ಷ

    ವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಗಂಧದ ಗುಡಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ನಿನ್ನೆಯಷ್ಟೇ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸಿನಿಮಾದ ನಿರ್ದೇಶಕ ಅಮೋಘ ವರ್ಷ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ಈ ಸಿನಿಮಾದ ಹತ್ತು ಹಲವು ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.

    ಗಂಧದ ಗುಡಿ ಚಿತ್ರವನ್ನು ರಾಜ್ಯೋತ್ಸವದ ವಾರವೇ ರಿಲೀಸ್ ಮಾಡಬೇಕು ಎಂದೇ ಅಕ್ಟೋಬರ್ 28 ದಿನಾಂಕವನ್ನು ಆಯ್ಕೆ ಮಾಡಿಕೊಂಡಿರುವ ಅವರು ಅಂದು ಪುನೀತ್ ಅವರ ಮೊದಲ ವರ್ಷದ ಪುಣ್ಯಾರಾಧನೆ ಎನ್ನುವುದನ್ನೂ ನೆನಪಿಸಿದರು. ಮತ್ತೆ ಗಂಧದ ಗುಡಿಯನ್ನು ನೆನಪಿಸಿಕೊಳ್ಳುತ್ತಾ, “ಇದು ಡಾಕ್ಯುಮೆಂಟರಿ ಅಂತ ಜನ ಈಗಲೂ ಅನ್ಕೊಂಡಿದಾರೆ. ಇದು ಯಾವುದೇ ಕಾರಣಕ್ಕೂ ಡಾಕ್ಯುಮೆಂಟರಿ ಅಲ್ಲ. ಗಂಧದ ಗುಡಿ ಇದು ಫೀಚರ್ ಫಿಲ್ಮ್. ಒಂದು ಸಿನಿಮಾ.  ಒಂದು ಸಿನಿಮಾಕ್ಕೆ ಬೇಕಾಗುವ ಡ್ಯುರೇಷನ್ ಎಷ್ಟಿರಬೇಕೋ ಅಷ್ಟೇ ಡ್ಯುರೇಷನ್ ನಲ್ಲಿ ಈ ಸಿನಿಮಾ ರಿಲೀಸ್ ಆಗುತ್ತೆ” ಎನ್ನುತ್ತಾರೆ. ಇದನ್ನೂ ಓದಿ : ‘ಮದುವೆನೂ ಇಲ್ಲ, ರಿಂಗೂ ಇಲ್ಲ’ ಲಲಿತ್ ಮೋದಿಗೆ ತಿವಿದ ಸುಶ್ಮಿತಾ ಸೇನ್

    ಈ ಸಿನಿಮಾವನ್ನು ಪ್ಯಾನ್ ವರ್ಲ್ಡ್ ರಿಲೀಸ್ ಮಾಡುವ ತಯಾರಿ ನಡೆಯುತ್ತಿದೆಯಂತೆ.  ಎಷ್ಟು ಭಾಷೆ , ಅಥವಾ ಸಬ್ ಟೈಟಲ್ ಇಡಬೇಕಾ ಅದೆಲ್ಲ ಇನ್ನೂ ಚರ್ಚೆ ಹಂತದಲ್ಲಿದ್ದು,  ಅಪ್ಪು ಅಭಿಮಾನಿಗಳಿಗೆ ಇದು ಕೊನೆಯ ಚಿತ್ರವಾಗಲಿದೆ. “ನಾಡು, ನುಡಿ, ವನ್ಯಜೀವಿಗಳ ಬಗ್ಗೆ ಅಪ್ಪು ಅವ್ರಿಗಿದ್ದ ಅಪಾರ ಪ್ರೀತಿ ಕಾಳಜಿ ಈ  ಚಿತ್ರದಲ್ಲಿ ಕಾಣುತ್ತದೆ. ವಿಶೇಷ ಅಂದ್ರೆ ಚಿತ್ರದಲ್ಲಿ ಹಾಡುಗಳೂ ಇರ್ತವೆ. ಎಷ್ಟಿರುತ್ತೆ ಹೇಗಿರುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ” ಎನ್ನುತ್ತಾರೆ ಅಮೋಘ.

    ಅಕ್ಟೋಬರ್ 29 ಕ್ಕೆ ಅಪ್ಪು ಅಗಲಿ ಒಂದು ವರ್ಷ ಆಗುತ್ತೆ. ಅಕ್ಟೋಬರ್ 28 ಕ್ಕೆ ಗಂಧದ ಗುಡಿ ಚಿತ್ರ ಬರ್ತಿರೋದು ಅಭಿಮಾನಿಗಳಿಗೆ ಭಾವುಕ ಸುದ್ದಿ ಹೌದು. ಆದರೆ ಅಪ್ಪು ಎಲ್ಲೂ ಹೋಗಿಲ್ಲ. ನಮ್ಮ ಜೊತೆ ಒಂದಲ್ಲ ಒಂದು ವಿಧದಲ್ಲಿ ಇದ್ದಾರೆ. ಸಿನಿಮಾಕ್ಕಾಗಿ ಬೇಕು ಅಂತ ಡಬ್ ಮಾಡ್ಸಿಲ್ಲ ಇದಕ್ಕೆ ನಾವು, ಅಪ್ಪು ಧ್ವನಿಯಲ್ಲೇ ಪೂರ್ತಿ ಸಿನಿಮಾ ಇರುತ್ತದೆ. ಅಪ್ಪು ಧ್ವನಿ ಶೂಟಿಂಗ್ ವೇಳೆಯೇ ರೆಕಾರ್ಡ್ ಆಗಿದೆ ಎನ್ನುವುದು ಅಮೋಘ ವರ್ಷ ಮಾತು.

    Live Tv
    [brid partner=56869869 player=32851 video=960834 autoplay=true]