Tag: AmitShah

  • ಬಿಎಸ್‍ವೈ ಮೂಲಕ ಅಮಿತ್ ಶಾಗೆ ಷರತ್ತು ರವಾನಿಸಿದ ರೆಬೆಲ್ಸ್

    ಬಿಎಸ್‍ವೈ ಮೂಲಕ ಅಮಿತ್ ಶಾಗೆ ಷರತ್ತು ರವಾನಿಸಿದ ರೆಬೆಲ್ಸ್

    – ಅನರ್ಹರಿಗೆ ಬಿಎಸ್‍ವೈ ಅಭಯ

    ಬೆಂಗಳೂರು/ನವದೆಹಲಿ: ಉಪಚುನಾವಣೆ ಮುಹೂರ್ತ ಬೆನ್ನಲ್ಲೇ ರೆಬೆಲ್ಸ್ ಆಟ ಶುರು ಮಾಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮೂಲಕ ಅನರ್ಹರು ಗೃಹ ಸಚಿವ ಅಮಿತ್ ಶಾಗೆ ಷರತ್ತು ರವಾನಿಸಿದ್ದಾರೆ.

    ಪ್ರವಾಹ ಪರಿಹಾರ ಹಿನ್ನೆಲೆಯಲ್ಲಿ ದೆಹಲಿಯ ಕೃಷ್ಣ ಮೆನನ್ ಮಾರ್ಗ್ ನಲ್ಲಿರುವ ಅಮಿತ್ ಶಾ ನಿವಾಸದಲ್ಲಿ ಭೇಟಿಯಾದ ಸಿಎಂ, ರೆಬೆಲ್ಸ್ ಗಳ 5 ಷರತ್ತುಗಳನ್ನು ಬಿಎಸ್‍ವೈ ಮುಂದಿಟ್ಟಿದ್ದಾರೆ. ಅನರ್ಹರ ಷರತ್ತು ನೋಡಿ ಅಮಿತ್ ಶಾ ಅವರು ಯಾವುದೇ ಭರವಸೆ ನೀಡದೇ ಪರಿಶೀಲಿಸೋದಾಗಿ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ರೆಬೆಲ್ಸ್ ಷರತ್ತೇನು..?
    ಉಪಚುನಾವಣೆಗೆ ತಗಲುವ ಖರ್ಚನ್ನು ಬಿಜೆಪಿಯೇ ನೋಡಿಕೊಳ್ಳಬೇಕು. ಸುಪ್ರೀಂಕೋರ್ಟಿನಲ್ಲಿ ತೀರ್ಪು ವಿಳಂಬವಾದ್ರೆ ಪತ್ನಿ, ಮಕ್ಕಳು, ಸಂಬಂಧಿಗಳಿಗೆ ಟಿಕೆಟ್ ಕೊಡಬೇಕು. ಬೆಂಗಳೂರಲ್ಲಿ ಮೋದಿ, ಬೆಳಗಾವಿಯಲ್ಲಿ ಅಮಿತ್ ಶಾ ಚುನಾವಣಾ ರ‍್ಯಾಲಿ ನಡೆಸಬೇಕು. 15 ಕ್ಷೇತ್ರಗಳ ಚುನಾವಣೆಗೆ ಬಿಜೆಪಿ ಸಚಿವರು, ಶಾಸಕರನ್ನ ಉಸ್ತುವಾರಿಯಾಗಿ ನೇಮಿಸಬೇಕು. ಹಾಗೂ ಸಚಿವ ಸ್ಥಾನಗಳನ್ನ ಖಾಲಿಯಾಗಿಯೇ ಇಡಬೇಕು, ಉಪಚುನಾವಣೆ ಬಳಿಕವೂ ಕೊಟ್ಟ ಮಾತು ನೆರವೇರಿಸಬೇಕು ಎಂದು ಅನರ್ಹ ಶಾಸಕರು ಷರತ್ತು ವಿಧಿಸಿದ್ದಾರೆ.

    ಆದರೆ ಅಮಿತ್ ಶಾ ಭೇಟಿ ಬಳಿಕ ಯಡಿಯೂರಪ್ಪ ಮಾತನಾಡಿ, ಅನರ್ಹ ಶಾಸಕರ ಬಗ್ಗೆ ಚರ್ಚೆ ಮಾಡಿಲ್ಲ. ಇದೂವರೆಗೂ ಮೊದಲ ಕಂತಿನ ಹಣ ಬಿಡುಗಡೆ ಆಗಿಲ್ಲ. ಪರಿಹಾರ ಕಾರ್ಯ ಆರಂಭಿಸಲು ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದೆ. 2000 ಕೋಟಿ ಹಣಕ್ಕೆ ಮನವಿ ಮಾಡಿದೆ. ಅವರೇ ಬಂದು ಖುದ್ದು ಪರಿಸ್ಥಿತಿ ನೋಡಿದ್ದಾರೆ. ಪರಿಶೀಲನೆ ನಡೆಸಿ ಎರಡು-ಮೂರು ದಿನದಲ್ಲಿ ಬಿಡುಗಡೆ ಆಗಲಿದೆ. ಪ್ರವಾಹ ಸ್ಥಳಗಳಿಗೆ ಹಣ ಬಿಡುಗಡೆಗೆ ಚುನಾವಣಾ ನೀತಿ ಸಂಹಿತಿ ಅಡ್ಡಿಯಾಗಲ್ಲ. ಪ್ರಧಾನಿ ಬಂದ ಬಳಿಕ ಚರ್ಚೆ ಮಾಡಿ ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದರು.

    ನಾಳೆ ನಿಮ್ಮ ಪರ ತೀರ್ಪು ಬರಲಿದೆ ಚಿಂತೆ ಮಾಡಬೇಡಿ. ಸ್ಪೀಕರ್ ನ್ಯಾಚುರಲ್ ಜಸ್ಟೀಸ್ ಫಾಲೋ ಮಾಡಿಲ್ಲ. ಕಳೆದ ವಾರ ನ್ಯಾಯಮೂರ್ತಿ ವಿಚಾರಣೆಯಿಂದ ಹಿಂದೆ ಸರಿದರು. ಇಲ್ಲದಿದ್ದರೆ ಕಳೆದ ವಾರವೇ ವಿವಾದ ಇತ್ಯರ್ಥ ಆಗುತ್ತಿತ್ತು. ನಾಳೆ ಸುಪ್ರೀಂ ಕೋರ್ಟಿನಲ್ಲಿ ರಿಲೀಫ್ ಸಿಗುತ್ತದೆ. ಚುನಾವಣಾ ಘೋಷಣೆ ಆಗಿರೊದರಿಂದ ಸುಪ್ರೀಂಕೋರ್ಟ್ ಒಂದು ನಿರ್ಧಾರಕ್ಕೆ ಬರಲಿದೆ. ಅನರ್ಹರ ಶಾಸಕರು ಆತಂಕಪಡಬೇಕಾದ ಅಗತ್ಯ ಇಲ್ಲ ಎಂದು ಅಮಿತ್ ಶಾ, ಯಡಿಯೂರಪ್ಪ ಸಭೆ ವೇಳೆ ಉಪಸ್ಥಿತರಿದ್ದ ರಮೇಶ್ ಜಾರಕಿಹೊಳಿ ಪಿಎ ಭರತ್‍ಗೆ ಹೇಳಿದ್ದಾರೆ ಎನ್ನಲಾಗಿದೆ.

    ಶಾ ಭೇಟಿ ವೇಳೆ ಸಿಎಂಗೆ ಅಶ್ವಥ್ ನಾರಾಯಣ್ ಹಾಗೂ ಲಕ್ಷ್ಮಣ್ ಸವದಿ ಸಾಥ್ ನೀಡಿದ್ದಾರೆ.

  • ರಾಹುಲ್ ಗಾಂಧಿಯನ್ನು ಪಾಕ್ ಹೊಗಳುತ್ತಿದ್ದು, ಕಾಂಗ್ರೆಸ್ಸಿಗೆ ನಾಚಿಕೆಯಾಗ್ಬೇಕು- ಅಮಿತ್ ಶಾ

    ರಾಹುಲ್ ಗಾಂಧಿಯನ್ನು ಪಾಕ್ ಹೊಗಳುತ್ತಿದ್ದು, ಕಾಂಗ್ರೆಸ್ಸಿಗೆ ನಾಚಿಕೆಯಾಗ್ಬೇಕು- ಅಮಿತ್ ಶಾ

    ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ತಿದ್ದುಪಡಿ ಸಂಬಂಧ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

    ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಅವರು, ಕೈ ನಾಯಕ ರಾಹುಲ್ ಗಾಂಧಿ ಹೇಳಿಕೆಯನ್ನೇ ಪಾಕಿಸ್ತಾನ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಇದರಿಂದ ಕಾಂಗ್ರೆಸ್ಸಿನವರಿಗೆ ನಾಚಿಕೆಯಾಗಬೇಕು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಜನ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಆದರೆ ಗಾಂಧಿ ಕುಟುಂಬ ಮಾತ್ರ ವಿರೋಧಿಸುತ್ತಿದೆ. ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಮಾಡಿರುವುದನ್ನು ಕಾಂಗ್ರೆಸ್ ವಿರೋಧಿಸಿದೆ. ಈ ಬಗ್ಗೆ ರಾಹುಲ್ ಗಾಂಧಿಯವರು ಯಾವುದೇ ಹೇಳಿಕೆಯನ್ನು ಕೊಟ್ಟರೂ ಪಾಕಿಸ್ತಾನ ಸ್ವಾಗತಿಸುತ್ತದೆ. ಪಾಕಿಸ್ತಾನ ವಿಶ್ವಸಂಸ್ಥೆಗೆ ನೀಡಿದ ದೂರಿನಲ್ಲಿ ರಾಹುಲ್ ಹೇಳಿಕೆಯನ್ನು ಸೇರಿಸಿಕೊಂಡಿದೆ. ಭಾರತದ ವಿರುದ್ಧ ಇಂತಹ ಹೇಳಿಕೆಗಳನ್ನು ಕೊಡುವ ಕಾಂಗ್ರೆಸ್ ನಾಯಕರಿಗೆ ನಾಚಿಕೆಯಾಗಬೇಕು ಎಂದು ಗರಂ ಆಗಿದ್ದಾರೆ.

    ಜಮ್ಮು ಕಾಶ್ಮೀರದಲ್ಲಿ 35ಎ ಹಾಗೂ 370ನೇ ವಿಧಿ ರದ್ದುಪಡಿಸಿದ ನಂತರ ಪರಿಸ್ಥಿತಿ ಬಿಗಡಾಯಿಸಿದ್ದು, ಅಲ್ಲಿ `ಜನ ಸಾಯುತ್ತಿದ್ದಾರೆ’ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಇದೇ ಹೇಳಿಕೆಯನ್ನಿಟ್ಟುಕೊಂಡು ಪಾಕಿಸ್ತಾನ ವಿಶ್ವಸಂಸ್ಥೆಗೆ ದೂರು ನೀಡಿತ್ತು. ಆದರೆ ವಿಶ್ವಸಂಸ್ಥೆಗೆ ನೀಡಿದ ದೂರಿನಲ್ಲಿ ತನ್ನ ಹೇಳಿಕೆಯನ್ನು ಪ್ರಸ್ತಾಪ ಮಾಡಿದ್ದಕ್ಕೆ ರಾಹುಲ್ ಗಾಂಧಿ ಪಾಕಿಸ್ತಾನದ ವಿರುದ್ಧ ಸರಣಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.

  • 1 ವಾರದವರೆಗೆ ಸುಮ್ನಿರಿ, ಯಾವುದೇ ಹೇಳಿಕೆ ನೀಡದಿರಿ – ರಾಜ್ಯ ನಾಯಕರಿಗೆ ಶಾ ಸೂಚನೆ

    1 ವಾರದವರೆಗೆ ಸುಮ್ನಿರಿ, ಯಾವುದೇ ಹೇಳಿಕೆ ನೀಡದಿರಿ – ರಾಜ್ಯ ನಾಯಕರಿಗೆ ಶಾ ಸೂಚನೆ

    ಬೆಂಗಳೂರು: ಸಿಎಂ ಅಮೆರಿಕಕ್ಕೆ ತೆರಳುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಭಾರೀ ಬೆಳವಣಿಗೆಗಳು ನಡೆದಿದ್ದು, ಕೇಂದ್ರ ಬಜೆಟ್ ಮರುದಿನವೇ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ 13 ಮಂದಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮಧ್ಯೆ ನಾವು ಆಪರೇಷನ್ ಕಮಲ ಮಾಡಿಲ್ಲ ಎಂದು ಹೇಳುತ್ತಿರುವ ಬಿಜೆಪಿ ನಾಯಕರಿಗೆ ಗೃಹ ಸಚಿವ ಅಮಿತ್ ಶಾ ಅವರು ಖಡಕ್ ಸೂಚನೆ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

    ಸೂಚನೆಯೇನು?
    ರಾಜ್ಯ ರಾಜಕೀಯ ಬೆಳವಣಿಗೆಗಳನ್ನು ದೂರದಲ್ಲೇ ನಿಂತು ಎಲ್ಲವನ್ನೂ ಗಮನಿಸಿಕೊಳ್ಳಿ. ಈ ಕುರಿತು ಯಾವ ಶಾಸಕರಿಗೂ ಕರೆ ಮಾಡಲು ಹೋಗಬೇಡಿ. ಒಂದು ವಾರದವರೆಗೂ ಸುಮ್ಮನಿದ್ದು ಮೈತ್ರಿ ಪಕ್ಷಗಳ ವಿದ್ಯಮಾನಗಳನ್ನು ಗಮನಿಸುತ್ತಿರಿ. ನಂತರ ವಿಧಾನಸಭೆ ಅಧಿವೇಶನದಲ್ಲಿ ಗದ್ದಲ ಎಬ್ಬಿಸಿ ಎಂದು ತಿಳಿಸಿದ್ದಾರೆ.

    ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡು ಸಂಕಷ್ಟದಲ್ಲಿದೆ. ಹೀಗಾಗಿ ಈ ಮಧ್ಯೆ ರಾಜಭವನಕ್ಕೂ ಭೇಟಿ ಕೊಡಬೇಡಿ. ಎಲ್ಲವನ್ನೂ ನಾವೇ ನಿಭಾಯಿಸುತ್ತೇವೆ. ಯಾವಾಗ ನಿಮ್ಮ ಅಗತ್ಯವಿದೆ ಎಂದು ತಿಳಿಸುತ್ತೇವೆ. ಯಾವ ನಾಯಕರೂ, ಶಾಸಕರೂ ಆಪರೇಷನ್ ಕಮಲದ ಬಗ್ಗೆ ಮಾತನಾಡಬಾರದು. ಪಕ್ಷದ ಎಲ್ಲ ಶಾಸಕರ ಮೇಲೆ ಕಣ್ಣಿಡಿ. ಶಾಸಕರನ್ನು ಬೆಂಗಳೂರಿಗೆ ಕರೆಸಿ ಸಭೆ ನಡೆಸಿ ತಾಕೀತು ಮಾಡಿ ಎಂದು ಹೇಳುವ ಮೂಲಕ ರಿವರ್ಸ್ ಆಪರೇಷನ್ ಗೆ ಅಮಿತ್ ಶಾ ಸುಳಿವು ಕೊಟ್ಟಿದ್ದಾರೆ ಎನ್ನಲಾಗಿದೆ.

    ಸೂಚನೆಯ ಬೆನ್ನಲ್ಲೇ ನಾಳೆ ಬಿಜೆಪಿಯ ಎಲ್ಲಾ ಶಾಸಕರನ್ನು ಬೆಂಗಳೂರಿಗೆ ಬರುವಂತೆ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ರಿವರ್ಸ್ ಆಪರೇಷನ್ ಭೀತಿಯೂ ಬಿಜೆಪಿಯನ್ನು ಕಾಡುತ್ತಿದ್ದು, ಎಲ್ಲಾ ಶಾಸಕರನ್ನು ಒಂದೇ ಕಡೆ ಇರಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಇತ್ತ ಜೆಡಿಎಸ್ ಕೂಡ ಇಂದು ಅಳಿದುಳಿದ ಶಾಸಕರ ಸಭೆ ನಡೆಸಿ, ಯಾರೂ ಬಿಜೆಪಿಯ ಆಪರೇಷನ್‍ಗೆ ಬಲಿಯಾಗಬಾರದು ಎಂದು ಸೂಚನೆ ನೀಡಲಿದೆ.

    ಒಟ್ಟಿನಲ್ಲಿ ಸದ್ಯದ ಬೆಳವಣಿಗೆಯಲ್ಲಿ ತಮ್ಮದೇನು ಪಾತ್ರ ಇಲ್ಲ ಎನ್ನುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮುಂದೆ ಎಲ್ಲಾ ಒಳ್ಳೇದಾಗಲಿಸ ಎಂದು ಮನೆ ದೇವರ ಮೊರೆ ಹೋಗುತ್ತಿದ್ದಾರೆ. ಬೆಳಗ್ಗೆ ತುಮಕೂರು, ಹಾಸನ ಜಿಲ್ಲೆಯಲ್ಲಿ ಬರ ಅಧ್ಯಯನ ಪ್ರವಾಸ ಮಾಡಿ, ನಂತರ ಬಾಗೂರು, ನವಿಲೆ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಹೇಮಾವತಿ ನಾಲೆ ವೀಕ್ಷಣೆ ಮಾಡಿ, ಆ ಬಳಿಕ ಯಡಿಯೂರು ಸಿದ್ಧಲಿಂಗೇಶ್ವರನ ದರ್ಶನ ಮಾಡಲಿದ್ದಾರೆ. ಸಂಜೆ ಸಿದ್ಧಗಂಗಾ ಮಠಕ್ಕೂ ಭೇಟಿ ನೀಡಲಿದ್ದಾರೆ.

  • ಗೃಹ ಸಚಿವರಾಗಿ ಅಮಿತ್ ಶಾ ಆಯ್ಕೆ- ಪ್ರಿಯಾಂಕ್ ಖರ್ಗೆ ವ್ಯಂಗ್ಯ

    ಗೃಹ ಸಚಿವರಾಗಿ ಅಮಿತ್ ಶಾ ಆಯ್ಕೆ- ಪ್ರಿಯಾಂಕ್ ಖರ್ಗೆ ವ್ಯಂಗ್ಯ

    ಕಲಬುರಗಿ: ಕೇಂದ್ರ ಗೃಹ ಸಚಿವರಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ನೇಮಕ ಮಾಡಲಾಗಿದ್ದು, ಇದಕ್ಕೆ ಸಮಾಜ ಕಲ್ಯಾಣ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಕೇಂದ್ರ ಗೃಹ ಇಲಾಖೆಯ ಹೆಸರನ್ನು ಕ್ಲೀನ್ ಚಿಟ್ ನೀಡೋ ಇಲಾಖೆ ಎಂದು ಮರುನಾಮಕರಣ ಮಾಡಿದರೆ ಒಳ್ಳೆಯದು ಎಂದು ಬರೆದುಕೊಂಡಿದ್ದಾರೆ.

    ನಾವು ಈಗ ಹೊಸ ಕೇಂದ್ರ ಗೃಹ ಸಚಿವರನ್ನು ಹೊಂದಿದ್ದೇವೆ. ನನಗನಿಸುತ್ತೆ ಕೇಂದ್ರ ಗೃಹ ಇಲಾಖೆ ಮರುನಾಮಕರಣ ಮಾಡಿದ್ರೆ ಒಳ್ಳೆಯದು. ‘ಕ್ಲೀನ್ ಚಿಟ್ ನೀಡೋ ಇಲಾಖೆ ಅಂತಾ ಮರುನಾಮಕರಣ ಮಾಡಿದ್ರೆ ಒಳ್ಳೆಯದು ಎಂದು ಹೇಳುವ ಮೂಲಕ ಶಾ ಅವರ ಕಾಲೆಳೆದಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಕೇಂದ್ರದಲ್ಲಿ ಎನ್‍ಡಿಎ ಮತ್ತೆ ಅಧಿಕಾರದ ಗದ್ದುಗೆ ಏರಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ 24 ಮಂದಿ ಸಂಪುಟ ದರ್ಜೆ ಸಚಿವರು, 9 ಮಂದಿ ಸ್ವತಂತ್ರ ಖಾತೆ ಸಚಿವರಾಗಿ ಹಾಗೂ 24 ಜನರು ರಾಜ್ಯ ಸಚಿವರಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದ್ದರು. ಎಲ್ಲ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಅಮಿತ್ ಶಾ ಅವರಿಗೆ ಗೃಹ ಇಲಾಖೆಯ ಜವಾಬ್ದಾರಿ ವಹಿಸುವ ಮೂಲಕ ಸಂಪುಟಕ್ಕೆ ಸೇರ್ಪಡೆ ಮಾಡಿದ್ದಾರೆ.

  • ಸಂಪುಟ ರಚನೆಗೆ ಎನ್‍ಡಿಎ ಸರ್ಕಸ್ – ಅಮಿತ್ ಶಾ ಸೇರ್ಪಡೆ ಬಹುತೇಕ ಖಚಿತ

    ಸಂಪುಟ ರಚನೆಗೆ ಎನ್‍ಡಿಎ ಸರ್ಕಸ್ – ಅಮಿತ್ ಶಾ ಸೇರ್ಪಡೆ ಬಹುತೇಕ ಖಚಿತ

    ನವದೆಹಲಿ: ಎನ್‍ಡಿಎ ಸರ್ಕಾರ ಎರಡನೇ ಅವಧಿಗೆ ದೆಹಲಿಯ ಚುಕ್ಕಾಣಿ ಹಿಡಿದ ಬೆನ್ನಲ್ಲೇ ಯಾರೆಲ್ಲ ಮೋದಿ ಸಂಪುಟ ಸೇರುತ್ತಾರೆ ಎಂಬ ಕುತೂಹಲ ಇಮ್ಮಡಿಗೊಂಡಿದೆ.

    ಮೋದಿ ಆಪ್ತ ಅಮಿತ್ ಶಾ ಸಂಪುಟ ಸೇರ್ಪಡೆ ಸಾಧ್ಯತೆ ದಟ್ಟವಾಗುತ್ತಿರುವಂತೆಯೇ ಅವರಿಗೆ ಗೃಹ ಖಾತೆ ಸಿಗುವ ಸುಳಿವು ಸಿಕ್ಕಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು, ಅವರ ಕುಟುಂಬದ ಭದ್ರಕೋಟೆ ಎಂದೇ ಪರಿಗಣಿಸಲಾಗಿದ್ದ ಅಮೇಠಿಯಲ್ಲಿ ಸೋಲಿಸಿರುವ ಸ್ಮøತಿ ಇರಾನಿ ಅವರಿಗೆ ದೊಡ್ಡ ಹೊಣೆಗಾರಿಕೆ ಉಡುಗೊರೆ ಸಿಗುವ ನಿರೀಕ್ಷೆ ಇದೆ.

    ಅನಾರೋಗ್ಯದಿಂದ ಬಳಲುತ್ತಿರುವ ಅರುಣ್ ಜೇಟ್ಲಿ ಹಾಗೂ ಸುಷ್ಮಾ ಸ್ವರಾಜ್‍ಗೆ ಕೊಕ್ ನೀಡುವುದು ಖಚಿತವಾಗಿರುವುದು ಅಮಿತ್ ಶಾ ಸಂಪುಟ ಸೇರ್ಪಡೆ ವದಂತಿಗಳಿಗೆ ಬಲ ತುಂಬಿದೆ. ಇತ್ತ ಬಿಜೆಪಿ ಬಲವರ್ಧನೆಗೆ ಅಭೂತಪೂರ್ವ ಕೊಡುಗೆ ನೀಡಿದ ಕಾರಣಕ್ಕಾಗಿ ಕರ್ನಾಟಕದ ನಾಲ್ವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ.

    ಇಂದು ಸಂಜೆ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ನೂತನ ಸಂಸದರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

    https://www.youtube.com/watch?v=GAofgO5Sti8

  • ಇಂದು ಎನ್‍ಡಿಎ ಒಕ್ಕೂಟಕ್ಕೆ ಅಮಿತ್ ಶಾ ಡಿನ್ನರ್- ಬಿಜೆಪಿ ಓಟಕ್ಕೆ ಬ್ರೇಕ್ ಹಾಕಲು ವಿಪಕ್ಷ ಸರ್ಕಸ್

    ಇಂದು ಎನ್‍ಡಿಎ ಒಕ್ಕೂಟಕ್ಕೆ ಅಮಿತ್ ಶಾ ಡಿನ್ನರ್- ಬಿಜೆಪಿ ಓಟಕ್ಕೆ ಬ್ರೇಕ್ ಹಾಕಲು ವಿಪಕ್ಷ ಸರ್ಕಸ್

    – ಬೆಂಗಳೂರಲ್ಲಿ ಜೆಡಿಎಸ್ ಮೀಟಿಂಗ್

    ನವದೆಹಲಿ/ಬೆಂಗಳೂರು: ಲೋಕ ಸಮರದ ಅಸಲಿ ರಿಸಲ್ಟ್ ಗೆ ಇನ್ನೊಂದೇ ದಿನ ಬಾಕಿ ಇದೆ. ಅದಕ್ಕೂ ಮುಂಚೆ ಚುನಾವಣೊತ್ತರ ಸಮೀಕ್ಷೆಗಳು ದೆಹಲಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿವೆ.

    ಮತ್ತೊಮ್ಮೆ ಮೋದಿ ಸರ್ಕಾರ್ ಎಂದು ಎಕ್ಸಿಟ್ ಪೋಲ್ ಹೇಳುತ್ತಿದ್ದು ಇದು ಬಿಜೆಪಿ ವಲಯದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ಆದರೂ ಈ ಬಾರಿ ಮೋದಿ ಏಕಾಂಗಿಯಾಗಿ ಸರ್ಕಾರ ರಚನೆ ಕಷ್ಟ ಸಾಧ್ಯ ಎನ್ನಲಾಗಿದೆ. ಹೀಗಾಗಿ ಎನ್‍ಡಿಎ ಒಕ್ಕೂಟದ ಮಹತ್ವ ಅರಿತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಇಂದು ಸಂಜೆ ಮಿತ್ರ ಪಕ್ಷಗಳ ನಾಯಕರನ್ನು ಭೋಜನ ಕೂಟಕ್ಕೆ ಆಹ್ವಾನಿಸಿದ್ದಾರೆ.

    ಈ ವೇಳೆ ಕೇಂದ್ರ ಸಚಿವರು ಉಪಸ್ಥಿತರಿರಲಿದ್ದು, ಫಲಿತಾಂಶದ ಬಳಿಕ ತ್ವರಿತಗತಿಯಲ್ಲಿ ಸರ್ಕಾರ ರಚನೆಗೆ ಕಾರ್ಯತಂತ್ರಗಳನ್ನು ಹೆಣೆಯಲಾಗುತ್ತದೆ ಎನ್ನಲಾಗಿದೆ.

    ಇತ್ತ ವಿರೋಧ ಪಕ್ಷಗಳು ಬಿಜೆಪಿ ಓಟಕ್ಕೆ ಬ್ರೇಕ್ ಹಾಕಲು ಯತ್ನಿಸುತ್ತಿವೆ. ಕಾಂಗ್ರೆಸ್, ಎಸ್‍ಪಿ, ಬಿಎಸ್‍ಪಿ, ಟಿಡಿಪಿ, ಡಿಎಂಕೆ ಸೇರಿದಂತೆ 21 ವಿಪಕ್ಷಗಳ ನಾಯಕರು ಇಂದು ಮಧ್ಯಾಹ್ನ ಮೂರು ಗಂಟೆಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಭೇಟಿ ನೀಡಲಿದ್ದಾರೆ. ಪ್ರತಿ ಬಾರಿ ಸೋಲಿನ ಭೀತಿ ವೇಳೆ ಬರುವ ಸಹಜ ಪ್ರಶ್ನೆಯಂತೆ ಈಗಲೂ ಇವಿಎಂ ಯಂತ್ರದ ವಿಶ್ವಾರ್ಹತೆ ಬಗ್ಗೆ ಧ್ವನಿ ಎದ್ದಿದ್ದು, ಇದಕ್ಕಾಗಿ ಈ ಬಾರಿ ಪ್ರತಿ ಕ್ಷೇತ್ರದಲ್ಲಿ ಇವಿಎಂ ಜೊತೆಗೆ ಐದು ವಿವಿಪ್ಯಾಟ್ ಮತ ಎಣಿಕೆಗೆ ಆದ್ಯತೆ ನೀಡಬೇಕು ಎಂದು ವಿಪಕ್ಷಗಳು ಮನವಿ ಮಾಡಲಿದೆ ಎಂಬುದಾಗಿ ತಿಳೀದುಬಂದಿದೆ.

    ಜೆಡಿಎಸ್ ಮೀಟಿಂಗ್:
    ಎಕ್ಸಿಟ್ ಪೋಲ್ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ಬಿರುಸಾಗಿವೆ. ಮೈತ್ರಿ ಸರ್ಕಾರಕ್ಕೆ ಏನಾದರೂ ಕಂಟಕ ಬರಬಹುದು ಅನ್ನೋ ರಾಜಕೀಯ ಚರ್ಚೆ ಹಿನ್ನೆಲೆಯಲ್ಲಿ ಜೆಡಿಎಸ್ ಇವತ್ತು ಬೆಂಗಳೂರಿನ ಖಾಸಗಿ ಹೊಟೇಲ್‍ನಲ್ಲಿ ಸಭೆ ಕರೆದಿದೆ.

    ವರಿಷ್ಠ ದೇವೇಗೌಡರ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ಸಚಿವರು, ಶಾಸಕರು, ಪರಿಷತ್ ಸದಸ್ಯರು, ಪಕ್ಷದ ಮುಖಂಡರು ಭಾಗಿಯಾಗುವಂತೆ ಸೂಚನೆ ನೀಡಲಾಗಿದೆ. ರಾಜ್ಯಾಧ್ಯಕ್ಷ ವಿಶ್ವನಾಥ್, ಎಂಎಲ್‍ಸಿ ಹೊರಟ್ಟಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನೀಡಿರೋ ಹೇಳಿಕೆಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ದಟ್ಟವಾಗಿದೆ.

  • ನೀವೆಲ್ಲಾ ಇದ್ದು ಏನ್ ಮಾಡ್ತಿದ್ದೀರಾ..?- ರಾಜ್ಯ ಬಿಜೆಪಿಗರ ವಿರುದ್ಧ ಅಮಿತ್ ಶಾ ಗರಂ

    ನೀವೆಲ್ಲಾ ಇದ್ದು ಏನ್ ಮಾಡ್ತಿದ್ದೀರಾ..?- ರಾಜ್ಯ ಬಿಜೆಪಿಗರ ವಿರುದ್ಧ ಅಮಿತ್ ಶಾ ಗರಂ

    ಬೆಂಗಳೂರು: ರಾಜ್ಯ ಬಿಜೆಪಿ ಮೇಲೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗರಂ ಆಗಿದ್ದಾರೆ. ಗುರುವಾರ ಸಂಜೆ 4.30ರ ಸುಮಾರಿಗೆ ಸಾಮಾಜಿಕ ಜಾಲತಾಣದ ತಂಡದ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯದಿಂದ ಭಾಗಿಯಾಗಿದ್ದ ಕೆ ಎಸ್ ಈಶ್ವರಪ್ಪ, ಸಿಟಿ ರವಿ, ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಶಾ ಹೇಳಿದ್ದು ಏನು?
    ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿ ತಯಾರಿ ಸರಿಯಾದ ದಿಕ್ಕಿನತ್ತ ಸಾಗದ್ದಕ್ಕೆ ಶಾ ಗರಂ ಆದ್ರು. ಈ ವೇಳೆ ಅರುಣ್ ಕುಮಾರ್ ಅವರು ಒಂದು ಲಕ್ಷ ಬೈಕ್ ರ‍್ಯಾಲಿಗೆ ತಯಾರಿ ಮಾಡಿದ್ದೇವೆ ಅಂದ್ರು. ಅರುಣ್ ಕುಮಾರ್ ಮಾತಿನಿಂದ ಸಿಟ್ಟಾದ ಅಮಿತ್ ಶಾ, ಕರ್ನಾಟಕದಲ್ಲಿ ಕೇವಲ ಒಂದು ಲಕ್ಷ ಜನರ ಬೈಕ್ ರ‍್ಯಾಲಿನಾ ಎಂದು ಪ್ರಶ್ನೆ ಮಾಡಿದ್ರು.

    ನೀವೆಲ್ಲಾ ಏನ್ ಮಾಡ್ತಾ ಇದ್ದೀರಿ. ಸೀರಿಯಸ್ ನೆಸ್ ಇಲ್ಲವೇನು ನಿಮಗೆ ಎಂದು ಕಿಡಿಕಾರಿದ್ರು. ಬಳಿಕ ನಾನು ಮತ್ತೆ ವಿಡಿಯೋ ಸಂಭಾಷಣೆ ನಡೆಸುತ್ತೇನೆ. ಅಲ್ಲಿ ತನಕ ಅಂಗಡಿ ಬಾಗಿಲು ಮುಚ್ಚಬೇಡಿ ಎಂದು ವಿಡಂಭನಾತ್ಮಕವಾಗಿ ರಾಜ್ಯ ನಾಯಕರನ್ನು ಕುಟುಕಿದ್ರು. ಅಲ್ಲಿಯವರೆಗೆ ಹಾಗೆ ಕುಳಿತಿರಿ ಎಂದು ಹೇಳಿ ಸುಮಾರು ಮುಕ್ಕಾಲು ಗಂಟೆ ರಾಜ್ಯ ನಾಯಕರನ್ನು ಕೂರಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಬೇರೆಲ್ಲಾ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಚುನಾವಣೆಗೆ ನಿಮ್ಮ ತಯಾರಿ ಏನೂ ಇಲ್ಲ ಎಂದು ಅರುಣ್ ಕುಮಾರ್ ಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವೇಳೆ ಈಶ್ವರಪ್ಪ, ಸಿ.ಟಿ.ರವಿ ಸುಮ್ಮನೆ ಕುಳಿತಿದ್ದರು. ಇವರನ್ನ ನೋಡಿದ ಅಮಿತ್ ಶಾ, ಓಹೋ ಈಶ್ವರಪ್ಪ ಇದ್ದಾರ ಎಂದು ಉದ್ಗಾರ ಮಾಡಿದರು ಎಂದು ಮೂಲಗಳು ಮಾಹಿತಿ ನೀಡಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜ.9ರಂದು ರಾಜ್ಯಕ್ಕೆ ಮೋದಿ, ಅಮಿತ್ ಶಾ ಆಗಮನ

    ಜ.9ರಂದು ರಾಜ್ಯಕ್ಕೆ ಮೋದಿ, ಅಮಿತ್ ಶಾ ಆಗಮನ

    ಬೆಂಗಳೂರು: ಹೊಸ ವರ್ಷದ ಎರಡನೇ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಆಗಮಿಸಲಿದ್ದಾರೆ. ಜನವರಿ 9 ರಂದು ಮೋದಿ ಮತ್ತು ಶಾ ತುಮಕೂರಿಗೆ ಆಗಮಿಸಲಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಒಂದೇ ದಿನದಲ್ಲಿ ಕೋಲಾರ, ತುಮಕೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹೀಗೆ 5 ಲೋಕಸಭೆ ಕ್ಷೇತ್ರಗಳ ಪ್ರಮುಖರ ಜೊತೆ ವಿಶೇಷ ಸಭೆ ನಡೆಸಲಿದ್ದಾರೆ. ಈ 5 ಲೋಕಸಭೆ ಕ್ಷೇತ್ರಗಳ ಬೂತ್ ಪ್ರಮುಖರು, ಶಕ್ತಿ ಕೇಂದ್ರ ಪ್ರಮುಖರು ವಿಶೇಷ ಸಭೆಯಲ್ಲಿ ಭಾಗಿಯಾಗಲಿದ್ದಾರೆ. 20 ರಿಂದ 30 ಸಾವಿರ ಪ್ರಮುಖ ಕಾರ್ಯಕರ್ತರ ಜೊತೆ ವಿಶೇಷ ಸಭೆ ನಡೆಯಲಿದೆ ಎನ್ನಲಾಗಿದೆ.

    ವಿಶೇಷ ಸಭೆ ಮೂಲಕ ರಾಜ್ಯದ ಲೋಕಸಭೆ ಚುನಾವಣೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ತುಮಕೂರಿನ ಮಹತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ವಿಶೇಷ ಸಭೆ ನಡೆಯಲಿದ್ದು, ಸಭೆಗೂ ಮುನ್ನ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅವರವರೇ ಬಡಿದಾಡಿಕೊಳ್ತಿದ್ದಾರೆ- ಸರ್ಕಾರದ ಜಂಜಾಟಕ್ಕೂ ನಮ್ಗೂ ಸಂಬಂಧವಿಲ್ಲ: ಬಿಎಸ್‍ವೈ

    ಅವರವರೇ ಬಡಿದಾಡಿಕೊಳ್ತಿದ್ದಾರೆ- ಸರ್ಕಾರದ ಜಂಜಾಟಕ್ಕೂ ನಮ್ಗೂ ಸಂಬಂಧವಿಲ್ಲ: ಬಿಎಸ್‍ವೈ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದ್ಕಡೆ, ಸಿಎಂ ಕುಮಾರಸ್ವಾಮಿ ಮತ್ತೊಂದು ಕಡೆ, ಅವರೇ ಬಡಿದಾಡಿಕೊಂಡು ಸಾಯ್ತಿದ್ದಾರೆ. ನಮಗೂ ಇದಕ್ಕೂ ಸಂಬಂಧ ಇಲ್ಲ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮತ್ತೆ ಬಸವರಾಜ್ ಬೊಮ್ಮಾಯಿ ಅವರನ್ನು ಅಮಿತ್ ಶಾ ಅವರನ್ನು ಭೇಟಿಯಾಗಲು ಹೋಗಿದ್ದೆವು. ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಇದೇ ತಿಂಗಳ 29ರಂದು ರಾಜ್ಯ ಕಾರ್ಯಕಾರಣಿ ಸಭೆ ಕರೆಯಲಿದ್ದೇವೆ. ಹೀಗಾಗಿ ಅದಕ್ಕಾಗಿ ಪೂರ್ವಭಾವಿ ಸಿದ್ಧತೆ ಹಾಗೂ ಇತರ ಕೆಲವೊಂದಷ್ಟು ವಿಚಾರಗಳ ಕುರಿತು ಚರ್ಚಿಸಿದ್ದೇವೆ. ಮಾತ್ರವಲ್ಲದೇ ಸಾಧ್ಯವಾದ್ರೆ ಕಾರ್ಯಕ್ರಮಕ್ಕೆ ತಾವೇ ಬರಬೇಕು ಎಂದು ಮನವಿ ಮಾಡಿಕೊಂಡಿದ್ದೇವೆ ಅಂತ ಹೇಳಿದ್ರು.

    ಒಂದು ವೇಳೆ ಅವರು ಬರದೇ ಇದ್ರು ಯಾರದ್ರು ಪ್ರಮುಖರನ್ನು ಕಳುಹಿಸಿಕೊಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ರಾಜಕೀಯ ಜಂಜಾಟಕ್ಕೂ ನಮಗೂ ಸಂಬಂಧವಿಲ್ಲ. ಇನ್ನು ಮಾಧ್ಯಮದಲ್ಲಿ ಬರುತ್ತಿರುವ ವಿಚಾರಗಳಿಗೆ ಕವಡೆ ಕಾಸಿನಷ್ಟೂ ಕಿಮ್ಮತ್ತಿಲ್ಲ. ಅವರವರೇ ಪರಸ್ಪರ ಬಡಿದಾಡಿಕೊಳ್ಳುತ್ತಿದ್ದಾರೆ. ಅದು ಅವರಿಗೆ ಬಿಟ್ಟ ವಿಚಾರ. ಅಧಿವೇಶನ ಕರೆಯಲು 15 ದಿವಸ ಸಮಯ ಕೊಡಬೇಕು. ಕಳೆದ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವಂತಹ ಸಂಪ್ರದಾಯ ಅದಾಗಿದೆ ಅಂದ್ರು.

    ಯಾವುದೇ ಸ್ಪಷ್ಟತೆ ಇಲ್ಲದಿರುವಂತಹ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಸಿದ್ದರಾಮಯ್ಯ ಅವರು ಒಂದು ಹೇಳಿಕೆ ಕೊಟ್ಟಿದ್ದಾರೆ. ಇತ್ತ ಕುಮಾರಸ್ವಾಮಿ ಅವರು ಒಂದು ಹೇಳಿಕೆ ಕೊಡುತ್ತಿದ್ದಾರೆ. ಹೀಗಾಗಿ ಇವರಿಬ್ಬರ ಗೊಂದಲದ ರಾಜಕೀಯದ ಮಧ್ಯೆ ನಾವು ಮಧ್ಯಪ್ರವೇಶಿಸಲು ಇಷ್ಟಪಡಲ್ಲ. ನಮ್ಮ ಬಿಜೆಪಿ ನಾಯಕರುಗಳಿಗೆ ವಿನಂತಿ ಮಾಡಿಕೊಂಡಿದ್ದೇನೆ. ಇಂತಹ ಸಂದರ್ಭದಲ್ಲಿ ಯಾವುದೇ ಮಾತನಾಡದೇ ಮೌನವಾಗಿದ್ದುಕೊಂಡು ರಾಜಕೀಯ ಬೆಳವಣಿಗೆಗಳನ್ನು ಗಮನಿಸುವಂತೆ ಹೇಳಿದ್ದೇನೆ. ಪ್ರತಿಪಕ್ಷವಾಗಿ ನಮ್ಮ ಕೆಲಸವನ್ನು ಗೌರವಯುತವಾಗಿ ಮಾಡೋಣ ಅಂತ ಹೇಳಿರುವುದಾಗಿ ಬಿಎಸ್‍ವೈ ತಿಳಿಸಿದ್ದಾರೆ.

    ಪ್ರಧಾನಿ ಹಾಗೂ ರಾಷ್ಟ್ರೀಯ ಅಧ್ಯಕ್ಷರ ಅಪೇಕ್ಷೆಯಂತೆ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಉದ್ದೇಶದಿಂದ ಈಗಿಂದ್ಲೇ ಸಿದ್ಧತೆಗಳನ್ನು ಮಾಡುತ್ತೇವೆ ಅಂದ್ರು.

    https://www.youtube.com/watch?v=tqPsB0VO3ek

  • ಮೋದಿ ಭಾಷಣವನ್ನೇ ಟಾರ್ಗೆಟ್ ಮಾಡಿದ್ರು ಸಿಎಂ- ಬಿಎಸ್‍ವೈ ರೋಡ್, ದೇವೇಗೌಡ ಸರ್ಕಲ್ ಅಂತ ಲೇವಡಿ

    ಮೋದಿ ಭಾಷಣವನ್ನೇ ಟಾರ್ಗೆಟ್ ಮಾಡಿದ್ರು ಸಿಎಂ- ಬಿಎಸ್‍ವೈ ರೋಡ್, ದೇವೇಗೌಡ ಸರ್ಕಲ್ ಅಂತ ಲೇವಡಿ

    ಬೆಂಗಳೂರು: ಸಾಮಾಜಿಕ ಜಾಲತಾಣ ಟ್ವಿಟ್ಟರ್‍ನಲ್ಲಿ ಪ್ರಧಾನಿ ಮೋದಿ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ಏಟು-ತಿರುಗೇಟು ತೀವ್ರಗೊಂಡಿದ್ದು, ಮೋದಿ ಭಾಷಣವನ್ನೇ ಟಾರ್ಗೆಟ್ ಮಾಡಿ ಸಿಎಂ ಲೇವಡಿ ಮಾಡಿದ್ದಾರೆ.

    ಕರ್ನಾಟಕ ಅಸೆಂಬ್ಲಿಗೆ ಮಾರ್ಗ ಯಾವುದು ಅಂತ ಮೋದಿ ಕೇಳ್ತಾರೆ. ನೇರವಾಗಿ ಬಿಎಸ್‍ವೈ ರೋಡ್‍ನಲ್ಲಿ ಹೋಗಿ. ವರುಣಾದಲ್ಲಿ ಯಡಿಯೂರಪ್ಪರನ್ನು ಮಾರ್ಗ ಮಧ್ಯೆ ಇಳಿಸಿ. ದೇವೇಗೌಡ ಸರ್ಕಲ್‍ನಲ್ಲಿ ಬಲಕ್ಕೆ ತಿರುಗಿ. ಮತ್ತೆ ಯೂ ಟರ್ನ್ ಮಾಡಿ ದೇವೇಗೌಡರನ್ನು ಅಲ್ಲೇ ಇಳಿಸಿ. ಕಾರ್ಯಪ್ಪ ಸರ್ಕಲ್‍ನಲ್ಲಿ ರೆಸ್ಟ್ ತಗೊಳ್ಳಿ, ಅಲ್ಲಲ್ಲ ತಿಮ್ಮಯ್ಯ ಸರ್ಕಲ್‍ನಲ್ಲಿ. ಅಲ್ಲಿ ಮತ್ತೆ ಯೂ ಟರ್ನ್ ಮಾಡಿ ಅಂತ ಚಾಣಾಕ್ಯ ಅಮಿತ್ ಶಾ ಮೋದಿಗೆ ಹೇಳ್ತಾರೆ. ಇದನ್ನೂ ಓದಿ: ಪ್ರಧಾನಿಯ 15 ನಿಮಿಷದ ಸವಾಲಿಗೆ ಸಿಎಂ ಕೊಟ್ರು 5 ನಿಮಿಷದ ಚಾಲೆಂಜ್!

    ಅದಕ್ಕೆ ಮೋದಿ ಕರ್ನಾಟಕದಲ್ಲಿ ಇಷ್ಟೊಂದು ಗೊಂದಲನಾ ಅಂತ ಚಾಣಾಕ್ಯಗೆ ಮರುಪ್ರಶ್ನೆ ಹಾಕ್ತಾರೆ. ಮೋದಿ-ಶಾ ನಡುವಿನ ಸಂವಾದ ಅನ್ನೋ ರೀತಿಯಲ್ಲಿ ಮೋದಿ ಭಾಷಣಕ್ಕೆ ತಿರುಗೇಟು ನೀಡಿದ್ದಾರೆ. ಇತ್ತ ದೇವೇಗೌಡರು ಒಳ್ಳೆಯ ನಾಯಕ ಅಂತ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೊಗಳಿದ್ದಾರೆ. ಇದನ್ನೂ ಓದಿ: ಕ್ರೈಂ ಸಿಟಿ ಅನ್ನೋ ಮೂಲಕ ಬೆಂಗ್ಳೂರಿಗರಿಗೆ ಅವಮಾನ- ಮೋದಿಗೆ ಸಿಎಂ ಟ್ವೀಟ್