Tag: AmitShah

  • ಕಾಶ್ಮೀರದ ಗಡಿಯಲ್ಲಿ ಪುನರ್ ನಿರ್ಮಾಣಗೊಂಡ ಶಾರದಾ ಮಂದಿರ ಅಮಿತ್ ಶಾರಿಂದ ಲೋಕಾರ್ಪಣೆ

    ಕಾಶ್ಮೀರದ ಗಡಿಯಲ್ಲಿ ಪುನರ್ ನಿರ್ಮಾಣಗೊಂಡ ಶಾರದಾ ಮಂದಿರ ಅಮಿತ್ ಶಾರಿಂದ ಲೋಕಾರ್ಪಣೆ

    ನವದೆಹಲಿ: ಜಮ್ಮು-ಕಾಶ್ಮೀರ (Jammu Kashmir) ದ ಕುಪ್ವಾರ ಜಿಲ್ಲೆಯಲ್ಲಿ ಪುನರ್ ನಿರ್ಮಾಣಗೊಂಡ ಶಾರದಾ ಮಂದಿರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ (AmitShah) ಅವರು ವರ್ಚುವಲ್ ಕಾರ್ಯಕ್ರಮದ ಮೂಲಕ ಲೋಕಾರ್ಪಣೆಗೊಳಿಸಿದರು. 1948ರಲ್ಲಿ ಪಾಕಿಸ್ತಾನಿ ಮೂಲಭೂತವಾದಿಗಳ ಆಕ್ರಮಣದಿಂದ ಸಂಪೂರ್ಣ ಹಾನಿಗೊಳಗಾಗಿದ್ದ ಶಾರದಾ ಮಂದಿರವನ್ನು ಆರ್ಟಿಕಲ್ 370 ರದ್ದತಿ ನಂತರ ಪುನರ್ ನಿರ್ಮಾಣಗೊಳಿಸಿ ಯುಗಾದಿಯ ಶುಭ ದಿನದಂದು ಲೋಕಾರ್ಪಣೆಗೊಳಿಸಿದ್ದು, ಅತ್ಯಂತ ಮಹತ್ವ ಪಡೆದುಕೊಂಡಿದೆ. ಕರ್ನಾಟಕದ ಬಿಡದಿಯ ಗ್ರಾನೈಟ್ ಬಳಕೆಯಿಂದ ನಿರ್ಮಿತವಾಗಿರುವ ಮಂದಿರದಲ್ಲಿ, ಶೃಂಗೇರಿ ಶಾರದ ಮಠದಿಂದ (Sringeri Sharada Mutt) ಪಂಚಲೋಹದ ಶಾರದಾ ಮೂರ್ತಿ ಪ್ರತಿಷ್ಠಾಪನೆಗೊಂಡಿದ್ದು ಗಮನಾರ್ಹ. ಜನವರಿ 24 ರಿಂದ ದೇಶಾದ್ಯಂತ ಸಂಚರಿಸಿ ತೀತ್ವಾಲ್ ತಲುಪಿರುವ ಮೂರ್ತಿಯು ಇಂದು ಸ್ಥಾಪನೆಗೊಂಡಿದೆ.

    ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ, ಇಂದು ಪುನರ್ನಿರ್ಮಾಣಗೊಂಡಿರುವ ಶಾರದಾ ಮಂದಿರದ ಲೋಕಾರ್ಪಣೆ ಕಾರ್ಯಕ್ರಮವು ಅತ್ಯಂತ ಮಹತ್ವದ್ದಾಗಿದೆ. ಒಂದು ಕಾಲದಲ್ಲಿ ಉತ್ಕೃಷ್ಟ ಜ್ಞಾನದ ಕೇಂದ್ರವೆಂದು ಪರಿಗಣಿಸಲಾಗುತ್ತಿದ್ದ ಶಾರದಾ ಪೀಠಕ್ಕೆ ಭರತ ಖಂಡದ ಸಮಸ್ತ ಭಾಗಗಳಿಂದ ಜ್ಞಾನಾರ್ಜನೆಗಾಗಿ ಪಂಡಿತರು ಆಗಮಿಸುತ್ತಿದ್ದುದರಿಂದ ಮಹಾಶಕ್ತಿ ಪೀಠವೆಂದು ಕೂಡ ಕರೆಯಲ್ಪಡುತ್ತದೆ. ಆದಿ ಶಂಕರರು ಇಲ್ಲಿ ತಾಯಿ ಶಾರದೆ ಕುರಿತಾಗಿ ಅನೇಕ ಸ್ತುತಿಗಳನ್ನು ರಚಿಸಿದ್ದು ಕೂಡ ಉಲ್ಲೇಖನೀಯ. ಆರ್ಟಿಕಲ್ 370 ರದ್ದತಿ ನಂತರ ಇಡೀ ಕಾಶ್ಮೀರ ಪ್ರಗತಿ ಪಥದಲ್ಲಿ ಸಾಗುತ್ತಿದ್ದು, ಸನಾತನ, ಸಾಂಸ್ಕೃತಿಕ ಪುನರುತ್ಥಾನ ಕೂಡ ಇಲ್ಲಿ ನಡೆಯುತ್ತಿರುವುದು ಹೊಸ ಅಧ್ಯಾಯವೊಂದಕ್ಕೆ ಸಾಕ್ಷಿಯಾಗುತ್ತಿರುವುದು ಗಮನಾರ್ಹ. ಶಾರದಾ ಮಂದಿರಕ್ಕೆ ಆದಿ ಶಂಕರರ ಕಾಲದಲ್ಲಿದ್ದ ಭವ್ಯತೆಯನ್ನು ಮತ್ತೊಮ್ಮೆ ಪುನರ್ ಸ್ಥಾಪಿಸುವ ಕಾರ್ಯ ಅತ್ಯಂತ ಮಹತ್ವದ್ದಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಖರ್ಗೆ ತವರು ಜಿಲ್ಲೆಯಲ್ಲಿ ಆಪರೇಷನ್ ಹಸ್ತ- ಹಾಲಿ ಬಿಜೆಪಿ ಶಾಸಕರಿಗೆ ಗಾಳ

    ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ (Tejaswi Surya), ಜಮ್ಮು-ಕಾಶ್ಮೀರದ ಕಿಶನ್ ಗಂಗಾ ನದಿಯ ದಡದಲ್ಲಿ ಇಂದು ಶಾರದಾ ಮಂದಿರವು ಲೋಕಾರ್ಪಣೆಗೊಂಡಿದ್ದು, ದಕ್ಷಿಣ ಭಾರತದ ನಮ್ಮ ಶೃಂಗೇರಿ ಶಂಕರಾಚಾರ್ಯರ ಆಶೀರ್ವಾದವಿದೆ. 1 ಸಾವಿರ ವರ್ಷದ ಹಿಂದೆ ಸನಾತನ ಪರಂಪರೆಯ ಪುನರುತ್ಥಾನದ ಉದ್ದೇಶದಿಂದ ದೇಶದ ನಾಲ್ಕೂ ಭಾಗಗಳಲ್ಲಿ ಶಾರದಾ ಪೀಠ ಸ್ಥಾಪನೆ ಮಾಡಿ ಏಕ್ ಭಾರತ್, ಶ್ರೇಷ್ಠ ಭಾರತ್ ಪರಿಕಲ್ಪನೆಗೆ ಬುನಾದಿ ಹಾಕಿದ್ದು, ಇಂದು ಕರ್ನಾಟಕದ ತುಂಗಾ ತೀರದಿಂದ ಕಾಶ್ಮೀರದ ಕಿಶನ್ ಗಂಗಾ ನದಿ ದಡದ ವರೆಗೆ ಮತ್ತೊಮ್ಮೆ ತಾಯಿ ಶಾರದಾಂಬೆಯ ಪುನರುಜ್ಜೀವನ, ಪುನರುತ್ಥಾನ ಕಾರ್ಯ ಶ್ಲಾಘನೀಯ. ಪ್ರಧಾನಿ ನರೇಂದ್ರ ಮೋದಿ (Narendra Modi) & ಗೃಹ ಸಚಿವ ಅಮಿತ್ ಶಾ ರವರ ದಿಟ್ಟ ನಿರ್ಧಾರದಿಂದ ಕಾಶ್ಮೀರದಲ್ಲಿ ವಿಧಿ 370 ರದ್ದುಗೊಂಡ ನಂತರ ಅಲ್ಲಿ ಶಾಂತಿ ಸ್ಥಾಪನೆಯಾಗಿದ್ದು, ದೇಶವಾಸಿಗಳಲ್ಲಿ ಸಂಪೂರ್ಣ ಸುರಕ್ಷತೆಯ ಭಾವ ಮೂಡಿದೆ. ಇಂತಹ ಶ್ಲಾಘನೀಯ, ಪುನರುತ್ಥಾನ ಕಾರ್ಯಗಳಿಗೆ ಇಂದು ಮತ್ತೆ ಬಲ ಬಂದಿದ್ದು, ಇದರಿಂದ ಪ್ರವಾಸೋದ್ಯಮ, ತೀರ್ಥಯಾತ್ರೆಯ ಕಾರಣಗಳಿಗಾಗಿ ಹೆಚ್ಚಿನ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವುದು ಗಮನಾರ್ಹ. ಈ ಅಭಿನಂದನಾರ್ಹ ಕಾರ್ಯಕ್ಕೆ ನಾನು ಸಮಸ್ತ ಕನ್ನಡಿಗರ ಪರವಾಗಿ ನರೇಂದ್ರ ಮೋದಿ, ಅಮಿತ್ ಶಾಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದರು.

    ಈ ವೇಳೆ ನಾನ್ ಕನಾ ಸಾಹಿಬ್ ಭೇಟಿಗೆ ಕರ್ತಾರ್ಪುರ ಕಾರಿಡಾರ್ ಆರಂಭಿಸಿದಂತೆ, ಗಡಿಯಾಚೆಗಿನ ಶಾರದಾ ಪೀಠಕ್ಕೆ ಕೂಡ ವಾರ್ಷಿಕ ತೀರ್ಥಯಾತ್ರೆ ಆಯೋಜನೆ ಕುರಿತು ಪರಿಶೀಲನೆ ನಡೆಸುವುದಾಗಿ ಸಚಿವ ಅಮಿತ್ ಶಾ ತಿಳಿಸಿದ್ದು ಗಮನಾರ್ಹ. ಈ ಕಾರ್ಯಕ್ರಮದಲ್ಲಿ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ರವೀಂದ್ರ ರೈನಾ (ಅಧ್ಯಕ್ಷರು, ಜಮ್ಮು ಕಾಶ್ಮೀರ ಬಿಜೆಪಿ ಘಟಕ) ಮತ್ತು Sಚಿve Shಚಿಡಿಚಿಜಚಿ ಕಮಿಟಿ ಸದಸ್ಯರು ಭಾಗವಹಿಸಿದ್ದರು.

  • ಅಮಿತ್ ಶಾ ಬರುತ್ತಿರುವುದೇ ಇಲ್ಲಿನ ‘ಸಂಪತ್ತು’ ಕೊಂಡೊಯ್ಯುವುದಕ್ಕಾ- ಬಿಜೆಪಿ ಪ್ರಶ್ನಿಸಿದ ಕಾಂಗ್ರೆಸ್

    ಅಮಿತ್ ಶಾ ಬರುತ್ತಿರುವುದೇ ಇಲ್ಲಿನ ‘ಸಂಪತ್ತು’ ಕೊಂಡೊಯ್ಯುವುದಕ್ಕಾ- ಬಿಜೆಪಿ ಪ್ರಶ್ನಿಸಿದ ಕಾಂಗ್ರೆಸ್

    ಬೆಂಗಳೂರು: ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಪುತ್ರ ಪ್ರಶಾಂತ್ ಮಾಡಾಳ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ ಮಾಡಿ ಸುಮಾರು 8 ಕೋಟಿ ಸೀಜ್ ಮಾಡಿದೆ. ಲೋಕಾಯುಕ್ತ (Lokayukta) ದಾಳಿ ಮಾಡುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್ ಬಿಜೆಪಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದೆ.

    ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ನಾಯಕರು ರಾಜ್ಯಕ್ಕೆ ಪದೇ ಪದೇ ಭೇಟಿ ನೀಡುತ್ತಿರುವುದರ ಹಿಂದಿನ ಉದ್ದೇಶವೇನು ಎಂಬುದಾಗಿ ಪ್ರಶ್ನಿಸಿದೆ. ಇದನ್ನೂ ಓದಿ: ಬಿಜೆಪಿ 40 ಪರ್ಸೆಂಟ್ ಕೊಚ್ಚೆಯಲ್ಲಿ ಉರುಳಾಡುತ್ತಿದೆ, ಕರ್ನಾಟಕ `ಕಮಿಷನ್ ರಾಜ್ಯ’ವಾಗಿದೆ- HDK

    ಟ್ವೀಟ್‍ನಲ್ಲೇನಿದೆ..?: ರಿಸರ್ವ್ ಬ್ಯಾಂಕಿನಲ್ಲಿರುವುದಕ್ಕಿಂತ ಹೆಚ್ಚು ಹಣ ಬಿಜೆಪಿಗರ ಮನೆಯಲ್ಲಿದೆ!. ಒಬ್ಬ ಶಾಸಕರದ್ದೇ ಈ ಪರಿ ಲೂಟಿ ಇರುವಾಗ ಮಂತ್ರಿಗಳ ಲೂಟಿ ಇನ್ನೆಷ್ಟು?. ಇಂದು ಅಮಿತ್ ಶಾ (Amitshah) ಬರುತ್ತಿರುವುದಕ್ಕೂ, ಈ ನಿಧಿ ಸಂಗ್ರಹಕ್ಕೂ ಸಂಬಂಧವಿದೆಯೇ?. ಅಮಿತ್ ಶಾ ಬರುತ್ತಿರುವುದೇ ಇಲ್ಲಿನ ‘ಸಂಪತ್ತು’ ಕೊಂಡೊಯ್ಯುವುದಕ್ಕಾ ಎಂದು ಬಿಜೆಪಿಯನ್ನು ಕಾಂಗ್ರೆಸ್ ಪ್ರಶ್ನಿಸಿದೆ.

    ಶಾಸಕರ ಮನೆಯಲ್ಲಿ ಸಿಕ್ಕ ಹಣದ ರಹಸ್ಯವೇನು ಬಿಜೆಪಿ?. ಈ ಹಣ #PayCM ಗೆ ತಲುಪಿಸುವುದಕ್ಕಾ ಅಥವಾ #PayCM ಗೆ ತಲುಪಿಸುವುದಕ್ಕಾ?. ಪದೇ ಪದೇ ಕರ್ನಾಟಕಕ್ಕೆ ಬರುತ್ತಿರುವ ಮೋದಿ-ಶಾ ಜೋಡಿಗೆ ಕರ್ನಾಟಕ ಎಟಿಎಂ ಆಗಿದೆಯೇ?. ಸಂಪತ್ತಿನ ಕ್ರೋಡೀಕರಣಕ್ಕಾಗಿಯೇ 40% ಕಮಿಷನ್ ಬಗ್ಗೆ ಮೋದಿ, ಶಾ ಮಾತಾಡುತ್ತಿಲ್ಲವೇ? ಎಂದಿದೆ. ಇದನ್ನೂ ಓದಿ: ಭ್ರಷ್ಟಾಚಾರಕ್ಕೆ ದಾಖಲೆಯಲ್ಲವೇ?- ಸಿಎಂಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಚಾಟಿ

    “ನಾ ಖಾವುಂಗಾ, ನಾ ಖಾನೆದುಂಗಾ” ಎನ್ನುವ ನರೇಂದ್ರ ಮೋದಿ (Narendra Modi) ಅವರೇ, ಇಲ್ಲಿರುವುದು ಡಬಲ್ ಇಂಜಿನ್ ಸರ್ಕಾರವಲ್ಲ, ಡಬಲ್ ಲೂಟಿಯ ಸರ್ಕಾರ. ನಿಮ್ಮವರ ಲೂಟಿ ಸಾಧನೆಯನ್ನು ಕಣ್ತುಂಬಿಕೊಳ್ಳಲೆಂದೇ ಕರ್ನಾಟಕಕ್ಕೆ ತಿಂಗಳಿಗೆ ಮೂರು ಬಾರಿ ಬರುತ್ತಿರುವಿರಾ? “ಶಬಾಷ್” ಎಂದು ಬಿಜೆಪಿ ಭ್ರಷ್ಟರ ಬೆನ್ನು ತಟ್ಟಿ ಹೋಗುವಿರಾ? ಕಮಿಷನ್ ಲೂಟಿಯ ಹಣ ಇಡಲು ಮನೆಗಳು ಸಾಲದೆ ಬಿಜೆಪಿಗರು ದೊಡ್ಡ ದೊಡ್ಡ ಗೋಡೌನ್‍ಗಳನ್ನೇ ಕಟ್ಟಿಸಿರುವಂತಿದೆ ಎಂದು ಕಾಂಗ್ರೆಸ್ ಹೇಳಿದೆ.

    ಒಬ್ಬೊಬ್ಬರಲ್ಲೂ ಲಾರಿಯಲ್ಲಿ ಲೋಡ್ ಮಾಡುವಷ್ಟು ಭ್ರಷ್ಟ ಹಣ ತುಂಬಿ ತುಳುಕುತ್ತಿದೆ. ಹೀಗಿದ್ದರೂ ಬಿಜೆಪಿಗರತ್ತ ಸುಳಿಯದ ಐಟಿ, ಇಡಿ, ಸಿಬಿಐಗಳು ಬಾಳೆಹಣ್ಣಿನ ಸಿಪ್ಪೆ ತೆಗೆಯುತ್ತಿವೆಯೇ ಅಮಿತ್ ಶಾ ಅವರೇ? ಭ್ರಷ್ಟಾಚಾರವೇ ಬಿಜೆಪಿಯ ಭರವಸೆ! ನಾವು ಹಿಂದೆಯೂ ಹೇಳಿದ್ದೇವೆ ಮುಂದೆಯೂ ಹೇಳುತ್ತೇವೆ. ಬಿಜೆಪಿ ನೀಡುವ ಭರವಸೆ 40% ಕಮಿಷನ್, ಅಕ್ರಮ, ಹಗರಣ, ಭ್ರಷ್ಟಾಚಾರ ಮಾತ್ರ ಎಂದು ತಿಳಿಸಿದೆ. ಇದನ್ನೂ ಓದಿ: ಲೋಕಾಯುಕ್ತ ಭರ್ಜರಿ ಬೇಟೆ- 8.12 ಕೋಟಿ ಹಣ ಸೀಜ್

    ಕರ್ನಾಟಕವನ್ನು ಲೂಟಿ ಹೊಡೆದು ಕೇಂದ್ರದ ನಾಯಕರಿಗೆ ಕಪ್ಪ ಕಾಣಿಕೆ ನೀಡುವುದಷ್ಟೇ ಇವರ ಭರವಸೆ. ಲೋಕಾಯುಕ್ತ ಸ್ವತಂತ್ರ ಸಂಸ್ಥೆ ಈ ಪ್ರಕರಣವನ್ನು ಲೋಕಾಯುಕ್ತ ನೋಡಿಕೊಳ್ಳುತ್ತದೆ ಎಂದಿರುವ ಬೊಮ್ಮಾಯಿ (Basavaraj Bommai) ಅವರೇ, ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ನಿಮ್ಮ ಕೊಡುಗೆ, ಬದ್ಧತೆ ಏನು? ಈ ಹಿಂದೆಯೇ ಕಮಿಷನ್ ವಿಚಾರವನ್ನು ತನಿಖೆಗೆ ವಹಿಸದೆ ಬಂಡ ಸಮರ್ಥನೆಗೆ ಇಳಿದಿದ್ದೇಕೆ?. ಆರೋಪ ಮಾಡಿದವರ ಮೇಲೆಯೇ ಮುಗಿಬಿದ್ದಿದೇಕೆ ಎಂದು ಕಾಂಗ್ರೆಸ್ ಸರಣಿ ಪ್ರಶ್ನೆಗಳನ್ನು ಬಿಜೆಪಿ ಮುಂದಿಟ್ಟಿದೆ.

  • ಬಿಜೆಪಿ 40 ಪರ್ಸೆಂಟ್ ಕೊಚ್ಚೆಯಲ್ಲಿ ಉರುಳಾಡುತ್ತಿದೆ, ಕರ್ನಾಟಕ `ಕಮಿಷನ್ ರಾಜ್ಯ’ವಾಗಿದೆ- HDK

    ಬಿಜೆಪಿ 40 ಪರ್ಸೆಂಟ್ ಕೊಚ್ಚೆಯಲ್ಲಿ ಉರುಳಾಡುತ್ತಿದೆ, ಕರ್ನಾಟಕ `ಕಮಿಷನ್ ರಾಜ್ಯ’ವಾಗಿದೆ- HDK

    ಬೆಂಗಳೂರು: ಡಬಲ್ ಎಂಜಿನ್ ಬಿಜೆಪಿ (BJP) ಸರ್ಕಾರ 40 ಪರ್ಸೆಂಟ್ ಕೊಚ್ಚೆಯಲ್ಲಿ ಉರುಳಾಡುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ತಾಜಾ ಉದಾಹರಣೆ ಬೇಕಾ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy), ಅಮಿತ್ ಶಾ (Amit Shah) ಅವರಿಗೆ ಕುಟುಕಿದ್ದಾರೆ.

    ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Maadal Virupakshappa) ಅವರ ಪುತ್ರನ ಮನೆಯಲ್ಲಿ 7.62 ಕೋಟಿ ರೂ. ನಗದು ಪತ್ತೆಯಾದ ವಿಚಾರಕ್ಕೆ ಸಿಡಿಮಿಡಿಗೊಂಡ ಹೆಚ್‌ಡಿಕೆ ಸರಣಿ ಟ್ವೀಟ್ ಮೂಲಕ ಟೀಕಿಸಿದ್ದಾರೆ. ಇದನ್ನೂ ಓದಿ: 40 ಲಕ್ಷ ಲಂಚ ಪ್ರಕರಣ – ಕೆಎಸ್‌ಡಿಎಲ್‌ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ರಾಜೀನಾಮೆ

    ಹೆಚ್‌ಡಿಕೆ ಟ್ವೀಟ್‌ನಲ್ಲಿ ಏನಿದೆ?
    ರಾಜ್ಯಕ್ಕೆ ಮತ್ತೆ ಹಾರಿ ಬಂದ ಅಮಿತ್ ಶಾ ಅವರಿಗೆ ಹಾರ್ದಿಕ ಸ್ವಾಗತ.. ಸುಸ್ವಾಗತ. ನಿಮ್ಮ ಡಬಲ್ ಎಂಜಿನ್ ಬಿಜೆಪಿ ಸರ್ಕಾರ ಭರ್ತಿ 40 ಪರ್ಸೆಂಟ್ ಕಮಿಷನ್ ಉಡಾಯಿಸುತ್ತಿದೆ ಎನ್ನುವುದಕ್ಕೆ ನಿಮ್ಮ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರನ ಕಂತೆ ಕಂತೆಗಳ ಪುರಾಣವೇ ದೊಡ್ಡ ಪುರಾವೆ.

    ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹಾಗೂ ಸರ್ ಎಂ.ವಿಶ್ವೇಶ್ವರಯ್ಯನವರ ಕನಸಿನ ಕೂಸಾದ ಸಾಬೂನು ಕಾರ್ಖಾನೆಯನ್ನು ಸ್ವಚ್ಚಗೊಳಿಸುವುದು ಎಂದರೆ ಇದೇನಾ? ನಿಮ್ಮ `ಸ್ವಚ್ಚ ಭಾರತ್’ ಪರಿಕಲ್ಪನೆಯೇ ಅದ್ಭುತ!! ವಾರೆವ್ಹಾ.. ಅಮಿತ್ ಶಾ ಅವರೇ!! ಇದನ್ನೂ ಓದಿ: ಲೋಕಾಯುಕ್ತ ದಾಳಿ ವೇಳೆ ಬಿಜೆಪಿ ಶಾಸಕನ ಪುತ್ರನ ಮನೆಯಲ್ಲಿ ಸಿಕ್ಕಿದ್ದು ಬರೋಬ್ಬರಿ 6 ಕೋಟಿ!

    ಅಮಿತ್ ಶಾ ಅವರೇ ಈಗ ಹೇಳಿ.. ಕರ್ನಾಟಕ ಯಾರ ಎಟಿಎಂ? ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ಮಾಡುತ್ತೇವೆ ಎಂದು ನೀವು ಹೇಳಿದ್ದು ಈ ಅರ್ಥದಲ್ಲಿಯಾ? ಭ್ರಷ್ಟಾಚಾರ ಮುಕ್ತ ಮಾಡುವುದು ಎಂದರೆ ಅಪ್ಪನ ಪರವಾಗಿ ಪುತ್ರರತ್ನ ಕಂತೆ-ಕಂತೆ ಕಟ್ಟುಗಳನ್ನು ಸ್ವಂತ ಎಟಿಎಂಗೆ ಇಳಿಸುವುದಾ? ಸಾಬೂನು ಕಾರ್ಖಾನೆಯನ್ನು ಸಖತ್ತಾಗಿ ಸಾರಿಸಿ ಗುಂಡಾಂತರ ಮಾಡುವುದಾ?

    ನಿಮ್ಮ ಡಬಲ್ ಎಂಜಿನ್ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕೊಚ್ಚೆಯಲ್ಲಿ ಉರುಳಾಡುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ತಾಜಾ ಉದಾಹರಣೆ ಬೇಕಾ? ಕನ್ನಡಿಗರ ಹೆಮ್ಮೆಯ ಪ್ರತೀಕ ಸಾಬೂನು ಕಾರ್ಖಾನೆಯನ್ನು 40 ಪರ್ಸೆಂಟ್ ಕಮಿಷನ್ ಸೋಪಿನಿಂದ ಭರ್ಜರಿಯಾಗಿ ತೊಳೆಯುತ್ತಿರುವ ಬಿಜೆಪಿ ಪಕ್ಷದ ಶಾಸಕರ ಬೆನ್ನು ತಟ್ಟುವಿರೋ ಅಥವಾ ಪಕ್ಷದಿಂದ ಹೊರಗಟ್ಟುವಿರೋ?

    ಶಾಸಕರ ಪುತ್ರರತ್ನ ಪಸಂದಾಗಿರಿಸಿದ್ದ ಕಂತೆಗಳು ಯಾರ ಹುಂಡಿಗೆ? ಶಾಸಕರ ಮನೆಯಲ್ಲೇ 6 ಕೋಟಿ ಸಿಕ್ಕರೆ, ಇನ್ನು 40 ಪರ್ಸೆಂಟ್ ಚರಂಡಿಯಲ್ಲಿ ತೆವಳುತಿರುವ ಸಚಿವರ ಮನೆಗಳಲ್ಲಿ ಇನ್ನೆಷ್ಟು ಸಿಗಬಹುದು? ರಾಮರಾಜ್ಯ ಮಾಡುತ್ತೇವೆಂದು ಹೇಳಿ ಕರ್ನಾಟಕವನ್ನು `ಕಮಿಷನ್ ರಾಜ್ಯ’ ಮಾಡಿದ್ದೀರಿ. ಹೌದಲ್ಲವೇ ಅಮಿತ್ ಶಾ ಅವರೇ?

    ಮೈಸೂರಿನಲ್ಲಿ ನಿನ್ನೆ ನಾನು ಹೇಳಿದ್ದೆ. ಈ ರೀತಿ ಪರ್ಸೆಂಟ್ ವ್ಯವಹಾರ ಮುಂದುವರಿದರೆ ಮುಂದೆ 10 ಪರಪ್ಪನ ಅಗ್ರಹಾರ ಜೈಲುಗಳಾನ್ನಾದರೂ ಕಟ್ಟಿಸಬೇಕಾಗುತ್ತದೆ ಎಂದು. ಕಳೆದ ಮೂರೂವರೆ ವರ್ಷದಿಂದ ಕಮಿಷನ್ ಕೊಚ್ಚೆಯಲ್ಲಿ ಉರುಳಾಡಿದ್ದ ಬಿಜೆಪಿ ಸರ್ಕಾರ, ಈಗ ನೋಟಿನ ಕಂತೆಗಳೊಂದಿಗೆ ಆ ಅಸಹ್ಯದ ಪರಾಕಾಷ್ಠೆಯನ್ನು ದರ್ಶನ ಮಾಡಿಸಿದೆ.

    ಕಾಂಗ್ರೆಸ್ (Congress) 20 ಪರ್ಸೆಂಟ್, ಬಿಜೆಪಿ 40 ಪರ್ಸೆಂಟ್. ಕರ್ನಾಟಕವನ್ನು `ಕಮಿಷನ್ ರಾಜ್ಯ’ ಮಾಡಿದ ಪಾಪ ಈ ರಾಷ್ಟ್ರೀಯ ಪಕ್ಷಗಳದ್ದು, ಇಂಥ ಪಾಪದ ದುಡ್ಡಿನಿಂದಲೇ ಚುನಾವಣೆ ನಡೆಸುವ ಕಮಿಷನ್’ಗೇಡಿ ಪಕ್ಷಗಳ ಅಸಲಿ ಮುಖವನ್ನು ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದರೆ ಕರ್ನಾಟಕಕ್ಕೆ `ಕಮಿಷನ್ ರಾಜ್ಯ’ ಎಂಬ ಹಣೆಪಟ್ಟಿ ಶಾಶ್ವತವಾಗುವ ಅಪಾಯವಿದೆ.

    ಇಂಥ ಪ್ರಕರಣಗಳೆಲ್ಲ ಕೊನೆಗೆ ಏನಾದವು ಎನ್ನುವುದು ಜನರಿಗೆ ಚೆನ್ನಾಗಿ ಗೊತ್ತು. ಸಾಂವಿಧಾನಿಕ ಸಂಸ್ಥೆಗಳನ್ನು ಹೇಗೆಲ್ಲಾ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅವು ತನಿಖೆ ನಡೆಸುತ್ತಿರುವ ಪ್ರಕರಣಗಳು ಯಾವ ರೀತಿ ಹಳ್ಳ ಹಿಡಿದು ಹೋಗಿವೆ ಎನ್ನುವುದು ಈಗಾಗಲೇ ಜಗಜ್ಜಾಹೀರಾಗಿರುವ ಸತ್ಯ.

    ಜನತಾ ನ್ಯಾಯಾಲಯದಲ್ಲೇ ಇಂಥ ನಿರ್ಲಜ್ಜ ಪ್ರಕರಣಗಳಿಗೆ ಮುಕ್ತಿ ಕಾಣಿಸಬೇಕು. ಜನರದ್ದೇ ಅಂತಿಮ ತೀರ್ಪು ಹಾಗೂ ಜನರೇ ಪ್ರಜಾಪ್ರಭುತ್ವ ಉಳಿಸಬೇಕು ಎನ್ನುವುದು ನನ್ನ ಅಭಿಪ್ರಾಯ. 2023ಕ್ಕೆ ಆರೂವರೆ ಕೋಟಿ ಕನ್ನಡಿಗರು ನೀಡುವ ಜನಾದೇಶ ಈ ದಿಕ್ಕಿನಲ್ಲೇ ಇರುತ್ತದೆ ಎಂಬ ವಿಶ್ವಾಸ ನನ್ನದು ಎಂದು ಹೇಳಿದ್ದಾರೆ.

  • ಕರುನಾಡಿಗೆ ಮತ್ತೆ ಚುನಾವಣಾ ಚಾಣಕ್ಯ ಎಂಟ್ರಿ- ಲಿಂಗಾಯತ ಮತ ಸೆಳೆಯಲು ರಣತಂತ್ರ

    ಕರುನಾಡಿಗೆ ಮತ್ತೆ ಚುನಾವಣಾ ಚಾಣಕ್ಯ ಎಂಟ್ರಿ- ಲಿಂಗಾಯತ ಮತ ಸೆಳೆಯಲು ರಣತಂತ್ರ

    ಬೀದರ್: ಕರುನಾಡಿಗೆ ಮತ್ತೊಮ್ಮೆ ಚುನಾವಣಾ ಚಾಣಕ್ಯನ ಎಂಟ್ರಿಯಾಗಿದೆ. ಲಿಂಗಾಯತರ ಕಾಶಿ ಬೀದರ್ (Bidar) ಜಿಲ್ಲೆಯಲ್ಲಿ ವಿಜಯ ಸಂಕಲ್ಪ ರಥಯಾತ್ರೆಗೆ ಚಾಲನೆ ನೀಡುವ ಮೂಲಕ ಕಲ್ಯಾಣ ಕರ್ನಾಟಕದಲ್ಲಿ ಲಿಂಗಾಯತರ ಓಲೈಕೆಗೆ ಇಳಿದಿದ್ದಾರೆ.

    ಬೆಳಗ್ಗೆ 10 ಗಂಟೆಗೆ ಬೀದರ್‍ನ ಗುರುದ್ವಾರಕ್ಕೆ ಹಾಗೂ 11ಕ್ಕೆ ಐತಿಹಾಸಿಕ ನರಸಿಂಹ ಝರ್ನಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ 12:20ಕ್ಕೆ ರಸ್ತೆ ಮೂಲಕ ಅನುಭವ ಮಂಟಪಕ್ಕೆ ಭೇಟಿ ನೀಡಲಿದ್ದಾರೆ. ನಂತರ ಬಸವಣ್ಣ (Basavanna) ಆಶೀರ್ವಾದ ಪಡೆದು ಅನುಭವ ಮಂಟಪದಲ್ಲೇ ಹಲವು ಸ್ವಾಮೀಜಿಗಳ ಜೊತೆ ಶಾ (AmitShah) ಸಂವಾದ ಮಾಡಲಿದ್ದಾರೆ. ಅದಾದ ಬಳಿಕ 12:30ಕ್ಕೆ ಅನುಭವ ಮಂಟಪದಲ್ಲಿ ವಿಜಯ ಸಂಕಲ್ಪ ರಥಯಾತ್ರೆಗೆ ಚಾಲನೆ ನೀಡಿ ಬಹಿರಂಗ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಸವಕಲ್ಯಾಣ ಪಟ್ಟಣದ ಸಂಪೂರ್ಣವಾಗಿ ಕೇಸರಿ ಮಯವಾಗಿದೆ. ಇದನ್ನೂ ಓದಿ: 40 ಲಕ್ಷ ಲಂಚ ಅಲ್ಲ ಸಿಕ್ಕಿದ್ದು 1.62 ಕೋಟಿ – ಬಿಜೆಪಿ ಶಾಸಕನ ಪುತ್ರನ ಜೊತೆ ಐವರು ಅರೆಸ್ಟ್

    ಇನ್ನು ಅಮಿತ್ ಶಾ ಬೀದರ್ ಬಳಿಕ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ರಣಕಹಳೆ ಮೊಳಗಿಸಲಿದ್ದಾರೆ. ದೇವನಹಳ್ಳಿಯಲ್ಲಿ ಏರ್ಪಡಿಸಲಾಗಿರುವ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ಟಾರ್ಗೆಟ್ ಬೆಂಗಳೂರು ಗ್ರಾಮಾಂತರಗೆ ಮುನ್ನುಡಿ ಬರೆಯಲಿದ್ದಾರೆ. ಬೆಂಗಳೂರು ಗ್ರಾಮಾಂತರ ವ್ಯಾಪ್ತಿಗೆ ಬರುವ 4 ಕ್ಷೇತ್ರಗಳಲ್ಲಿ ಬಿಜೆಪಿ ಬೇರೂರಿಸಲು ತಂತ್ರಗಾರಿಕೆ ರೂಪಿಸಿದ್ದಾರೆ.

    ಬೆಂಗಳೂರು ಗ್ರಾಮಾಂತರದಲ್ಲಿ ಕಮಲ ಅರಳಿಸೋಕೆ ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡೋದು, 4 ಕ್ಷೇತ್ರದಲ್ಲಿ ಕನಿಷ್ಠ 2 ಕ್ಷೇತ್ರ ಗೆಲ್ಲೋಕೆ ಪ್ಲ್ಯಾನ್ ಮಾಡೋದು. ಮನೆ ಮನೆಗೂ ಅಭಿವೃದ್ಧಿ ಕೆಲಸ ತಲುಪಿಸೋದು. ಹಿಂದುತ್ವ, ರಾಷ್ಟ್ರೀಯತೆ, ಅಭಿವೃದ್ಧಿ ಕಾರ್ಯ, ಡಬಲ್ ಎಂಜಿನ್ ಸರ್ಕಾರದ ಹೆಸರಿನಲ್ಲಿ ಪಕ್ಷ ಸಂಘಟನೆ ಹಾಗೂ ಮೋದಿ ವರ್ಚಸ್ಸು ಬಳಸಿಕೊಂಡು ಮತದಾರರ ಸೆಳೆಯುವ ತಂತ್ರಗಾರಿಕೆ ರೂಪಿಸಿದ್ದಾರೆ ಎನ್ನಲಾಗಿದೆ.

  • 2 ಪಕ್ಷಗಳಿಂದ ರಾಜ್ಯದಲ್ಲಿ ಭ್ರಷ್ಟಾಚಾರ ನಡೀತಿದೆ: ಸಂಡೂರಿನಲ್ಲಿ ಚಾಣಕ್ಯ ಕಿಡಿ

    2 ಪಕ್ಷಗಳಿಂದ ರಾಜ್ಯದಲ್ಲಿ ಭ್ರಷ್ಟಾಚಾರ ನಡೀತಿದೆ: ಸಂಡೂರಿನಲ್ಲಿ ಚಾಣಕ್ಯ ಕಿಡಿ

    ಬಳ್ಳಾರಿ: ಚುನಾವಣಾ ರಾಜ್ಯ ಕರ್ನಾಟಕಕ್ಕೆ ಕೇಂದ್ರ ನಾಯಕರು ಪದೇ ಪದೇ ಭೇಟಿ ನೀಡುತ್ತಿದ್ದು, ರಾಜ್ಯದಲ್ಲಿ ಬಿಜೆಪಿ (BJP) ಗೆಲುವಿಗೆ ಶ್ರಮಿಸುತ್ತಿದ್ದಾರೆ. ಅದರಂತೆ ಇಂದು ಮತ್ತೊಮ್ಮೆ ಕೇಂದ್ರ ಗೃಹಸಚಿವ ಅಮಿತ್ ಶಾ (AmitShah) ರಾಜ್ಯಕ್ಕೆ ಕಾಲಿಟ್ಟಿದ್ದು, ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಚುನಾವಣಾ ರಣತಂತ್ರಗಾರಿಕೆ ರೂಪಿಸಿದ್ದಾರೆ.

    ಹುಬ್ಬಳ್ಳಿ (Hubballi) ಮೂಲಕ ಬಳ್ಳಾರಿಗೆ ಮಧ್ಯಾಹ್ನದ ವೇಳೆಗೆ ಆಗಮಿಸಿದ ಅಮಿತ್ ಶಾ, ಸಂಡೂರಿನಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾದರು. ವಿಜಯ ಸಂಕಲ್ಪ ಸಮಾವೇಶದಲ್ಲಿ ನೆರೆದಿದ್ದ ಲಕ್ಷಾಂತರ ಕಾರ್ಯಕರ್ತರನ್ನು ಉದ್ದೇಶಿಸಿ ಅಮಿತ್ ಶಾ ಭಾಷಣ ಮಾಡಿದ್ರು. ರಾಜ್ಯದಲ್ಲಿ ಸಂಪೂರ್ಣ ಬಹುಮತದ ಸರ್ಕಾರ ರಚನೆ ಆಗಲಿದೆ. ನನ್ನ ಜೊತೆ ಕೈ ಜೋಡಿಸಿ, ಸಂಪೂರ್ಣ ಪ್ರಮಾಣದ ಸರ್ಕಾರ ಕೊಡಿ. 2018ರ ಚುನಾವಣೆಯಲ್ಲಿ ಬಿಎಸ್‍ವೈ ನೇತೃತ್ವದಲ್ಲಿ ಚುನಾವಣೆಗೆ ಹೋಗಿದ್ವಿ. ಆದರೆ ಸ್ವಲ್ಪದರಲ್ಲಿ ನಮಗೆ ಸರ್ಕಾರ ರಚನೆ ಮಾಡಲು ಆಗಲಿಲ್ಲ. ಈ ವೇಳೆ ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚಿಸಿದವು. ಕಾಂಗ್ರೆಸ್ (Congress) ಒಂದು ತುಕುಡೆ ತುಕಡೆ ಗ್ಯಾಂಗ್. 2 ಪಕ್ಷಗಳಿಂದ ರಾಜ್ಯದಲ್ಲಿ ಭ್ರಷ್ಟಾಚಾರ ನಡೀತಿದೆ ಎಂದು ವಿಪಕ್ಷಗಳ ವಿರುದ್ಧ ಕಿಡಿಕಾರಿದ್ರು. ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ದಿಢೀರ್ ಬೆಳಗಾವಿ ಪ್ರವಾಸ ಫಿಕ್ಸ್ ಆಗಿದ್ದೇಕೆ?

    ಅಮಿತ್ ಶಾ ಸಮಾವೇಶ ಮುಗಿಸಿ ಕರ್ನಾಟಕ ಸೇವಾ ಸಂಘದಲ್ಲಿ ಕೋರ್ ಕಮಿಟಿ ಸಭೆ ನಡೆಸಿದರು. ಬಳ್ಳಾರಿ ವಿಭಾಗದ ನಾಲ್ಕು ಜಿಲ್ಲೆಯ 60 ಪ್ರಮುಖರು, ಟಿಕೆಟ್ ಆಕಾಂಕ್ಷಿಗಳ ಜೊತೆ ಸಭೆ ನಡೆಸಿದರು. ಚುನಾವಣೆಯಲ್ಲಿ ಗೆಲುವಿನ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಸಂಡೂರು ಹೆಲಿಪ್ಯಾಡ್‍ಗೆ ಆಗಮಿಸಿದ ಅಮಿತ್ ಶಾ ಬೆಂಗಳೂರಿನತ್ತ ಪ್ರಯಾಣಿಸಿದ್ರು. ಬೆಂಗಳೂರಿನಲ್ಲಿ ಒಟ್ಟು 4 ಕಾರ್ಯಕ್ರಮಗಳಲ್ಲಿ ಅಮಿತ್ ಶಾ ಭಾಗಿ ಆಗಲಿದ್ದಾರೆ. ಖ್ಯಾತ ವಕೀಲರು, ಶಿಕ್ಷಣ ತಜ್ಞರು, ವೈದ್ಯರು, ನಗರದ ವಿವಿಧ ವಲಯದ ತಜ್ಞರೊಂದಿಗೆ ಸಂವಾದ ನಡೆಸಲಿರುವ ಶಾ ಬಳಿಕ ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ ಜಿಲ್ಲೆಗಳ ಜನಪ್ರತಿನಿಧಿಗಳ ಜೊತೆ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ. ನಂತರ ಹಿರಿಯ ಬಿಜೆಪಿ ನಾಯಕರ ಜೊತೆ ಡಿನ್ನರ್ ಮೀಟಿಂಗ್ ನಡೆಸಲಿದ್ದಾರೆ.

    ಬೆಂಗಳೂರನ್ನು ಟಾರ್ಗೆಟ್ ಮಾಡಿಕೊಂಡಿರುವ ಬಿಜೆಪಿ, ಬೆಂಗಳೂರಲ್ಲಿ ತಮ್ಮ ನಂಬರ್ ಹೆಚ್ಚಿಸಿಕೊಳ್ಳಲು ಕಸರತ್ತು ನಡಿಸ್ತಿದೆ. ಇಂದು ರಾತ್ರಿ ಬೆಂಗಳೂರು ಬಿಜೆಪಿ ಶಾಸಕರು, ಸಂಸದರು, ಪರಿಷತ್ ಸದಸ್ಯರೊಂದಿಗೆ ಚರ್ಚೆ ಮಾಡಲಿದ್ದು.. 28 ಕ್ಷೇತ್ರಗಳ ಶಾಸಕ ಕಾರ್ಯವೈಖರಿ ಜೊತೆಗೆ ಪಿಚ್ ರಿಪೋರ್ಟ್ ಪಡೆಯಲಿದ್ದಾರೆ. ಬೆಂಗಳೂರಿನಲ್ಲಿ ಶತಾಯಗತಾಯ ಟಾರ್ಗೆಟ್ 20 ರೀಚ್ ಆಗಲು ರಣತಂತ್ರ ರೂಪಿಸಲಿದ್ದಾರೆ.

    ಒಟ್ಟಾರೆ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಜಯಭೇರಿ ಬಾರಿಸಲು ಕೇಂದ್ರದ ನಾಯಕರು ಇನ್ನಿಲ್ಲದ ರಣತಂತ್ರ ನಡೆಸ್ತಿದ್ದು ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದು ಚುನಾವಣಾ ಫಲಿತಾಂಶದಲ್ಲಿ ಹೊರಬೀಳಲಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅತ್ಯಂತ ಕೆಳಮಟ್ಟದ ಕೆಲಸ ಮಾಡಿ ಕ್ಷಮೆ ಕೇಳೋದರಲ್ಲಿ ಅರ್ಥವಿಲ್ಲ- ಅಶ್ವಥ್ ವಿರುದ್ಧ ಸಿದ್ದರಾಮಯ್ಯ ಕಿಡಿ

    ಅತ್ಯಂತ ಕೆಳಮಟ್ಟದ ಕೆಲಸ ಮಾಡಿ ಕ್ಷಮೆ ಕೇಳೋದರಲ್ಲಿ ಅರ್ಥವಿಲ್ಲ- ಅಶ್ವಥ್ ವಿರುದ್ಧ ಸಿದ್ದರಾಮಯ್ಯ ಕಿಡಿ

    ಹುಬ್ಬಳ್ಳಿ: ಅತ್ಯಂತ ಕೆಳಮಟ್ಟದ ಕೆಲಸ ಮಾಡಿ ಸಚಿವ ಅಶ್ವಥ್ ನಾರಾಯಣ್ ಕ್ಷಮೆ ಕೇಳೋದರಲ್ಲಿ ಅರ್ಥವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕಿಡಿಕಾರಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಿಜೆಪಿ, ಆರ್ ಎಸ್ ಎಸ್ (RSS) ಮತ್ತು ಅಶ್ವಥ್ ನಾರಾಯಣ್ (Ashwath Narayan) ವಿರುದ್ಧ ಗುಡುಗಿದ ಅವರು, ಅಶ್ವಥ್ ನಾರಾಯಣ್ ಅವರದ್ದು ಆರ್‍ಎಸ್‍ಎಸ್ ಸಂಸ್ಕೃತಿ. ಕಡಿ ಹಿಡಿ ಹೊಡಿ, ಬಡಿ ಕೊಲೆ ಮಾಡುವ ಸಂಸ್ಕೃತಿ. ಗೋಡ್ಸೆ ಮೂಲಕ ಮಹಾತ್ಮ ಗಾಂಧಿಯವರನ್ನು ಕೊಲ್ಲಿಸಿದರು. ರಾಜ್ಯದಲ್ಲಿ ಅಭಿವೃದ್ಧಿ ವಿಚಾರಗಳು ಚರ್ಚೆಯಾಗಬೇಕು. ಬಿಜೆಪಿ ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಈ ಬಾರಿ ಟಿಪ್ಪು (Tippu Sultan) ಮತ್ತು ಸಾವರ್ಕರ್ ಅಂತ ಬರೆದು ಚುನಾವಣೆ ಮಾಡಲಿ. ಇದಕ್ಕೆ ಜನ ತೀರ್ಮಾನ ಮಾಡಲಿ ಎಂದರು.

    ಒಬ್ಬ ರಾಜ್ಯ ಸರ್ಕಾರದ ಸಚಿವರಾಗಿ ರಾಜ್ಯದ ಜನರಿಗೆ ಭದ್ರತೆ ನೀಡಬೇಕು. ಟಿಪ್ಪು ಸುಲ್ತಾನ್ ಮುಗಿಸಿದ ರೀತಿಯಲ್ಲಿ ಸಿದ್ದರಾಮಯ್ಯ ಮುಗಿಸಿ ಅಂದ್ರೆ ಏನು ಅರ್ಥ..?. ಇದು ಅಪರಾಧ ಇದು ಪ್ರಚೋದನೆ. ಹೀಗಾಗಿ ಪೊಲೀಸರು ಸುಮೋಟೋ ಕೇಸ್ ದಾಖಲಿಸಕೊಳ್ಳಬೆಕು. ಇದಕ್ಕೆ ಪ್ರಧಾನಿ ಏನು ಹೇಳುತ್ತಾರೆ ನೋಡೋಣ. ಅಮಿತ್ ಶಾ ಹೇಳಲಿ ಇದು ಸರಿನಾ ತಪ್ಪಾ ಅಂತ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಕುರಿತ ಹೇಳಿಕೆಗೆ ಅಶ್ವಥ್ ನಾರಾಯಣ್ ವಿಷಾದ

    ನರಹಂತಕ ಅನ್ನೋದು ಬೇರೆ, ಮುಗಿಸು ಅನ್ನೋದು ಬೇರೆ. ಅದಕ್ಕೂ ಇದಕ್ಕೂ ವ್ಯತ್ಯಾಸವಿದೆ. ಅಶ್ವಥ್ ನಾರಾಯಣ್ ಅವರು ಅತ್ಯಂತ ಕೆಳಮಟ್ಟದ ಕೆಲಸ ಮಾಡಿ ಕ್ಷಮೆ ಕೇಳೋದರಲ್ಲಿ ಅರ್ಥವಿಲ್ಲ. ಅದಕ್ಕೆ ಹೇಳಿದೆ ನೀವೇ ಕೋವಿ ಹಿಡಿದು ಬಂದು ಕೊಲೆ ಮಾಡಿ ಅಂತಾ. ಇಂತಹ ಮನಸ್ಥಿತಿಯಿಂದ ಪ್ರಜಾಪ್ರಭುತ್ವ ಉಳಿಯೋದಿಲ್ಲ. ಈ ಚುನಾವಣೆಯಲ್ಲಿ ಸೋಲುತ್ತೆವೆ ಎಂಬ ಭಯದಿಂದ ಹೀಗೆ ಮಾಡಬೇಕು. ರಾಜ್ಯಪಾಲರು ಅಶ್ವಥ್ ನಾರಾಯಣ್ ವಜಾ ಮಾಡಬೇಕು ಎಂದು ಇದೇ ವೇಳೆ ಸಿದ್ದರಾಮಯ್ಯ ಆಗ್ರಹಿಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕುಂದಾನಗರಿಯಲ್ಲಿ ಬಿಜೆಪಿ ಚಾಣಕ್ಯ- ಪಕ್ಷದಲ್ಲಿನ ಒಳಜಗಳ ಶಮನ ಮಾಡ್ತಾರಾ ಅಮಿತ್ ಶಾ?

    ಕುಂದಾನಗರಿಯಲ್ಲಿ ಬಿಜೆಪಿ ಚಾಣಕ್ಯ- ಪಕ್ಷದಲ್ಲಿನ ಒಳಜಗಳ ಶಮನ ಮಾಡ್ತಾರಾ ಅಮಿತ್ ಶಾ?

    ಬೆಳಗಾವಿ: ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ (BJP) ಜನ ಸಂಕಲ್ಪಯಾತ್ರೆಗೆ ಲಕ್ಷಾಂತರ ಜನ ಚುನಾವಣಾ ತಂತ್ರಗಾರಿಕೆಯ ಚಾಣಾಕ್ಯ ಅಮಿತ್ ಶಾ (AmitShah) ಬೆಳಗಾವಿಗೆ ಆಗಮಿಸಿದ್ದಾರೆ.

    ಗಡಿ ಜಿಲ್ಲೆ ಬೆಳಗಾವಿಯ ಬಿಜೆಪಿ ರಾಜಕಾರಣದಲ್ಲಿ ಜಾರಕಿಹೊಳಿ ಬಣ ಹಾಗೂ ಸವದಿ ಬಣಗಳಾಗಿದ್ದು, ಇದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಈ ಭಿನ್ನತೆಯನ್ನು ಶಮನಗೊಳಿಸಿ ಒಟ್ಟಾಗಿ ಒಂದಾಗಿ ಚುನಾವಣೆ ಎದುರಿಸಬೇಕು ಎಂಬುದು ಬಿಜೆಪಿಯ ಗುರಿ. ಸಿಡಿ ಪ್ರಕರಣದಿಂದ ಪಕ್ಷ ಸಂಘಟನೆಯಿಂದ ದೂರ ಉಳಿದಿದ್ದ ರಮೇಶ್ ಜಾರಕಿಹೊಳಿ (Ramesh Jarakiholi) ಅವರನ್ನು ಹೇಗೆ ಸಮಾಧಾನ ಪಡಿಸುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ಸೋಲಿಸಲು ರಮೇಶ್ ಜಾರಕಿಹೊಳಿ `ನಯಾ ಫೇಸ್’ ಗೇಮ್- BJP ಹೈಕಮಾಂಡ್ ನಡೆ ಏನು?

    ಇಂದು ಬೆಳಗಾವಿಗೆ ಭೇಟಿ ನೀಡಲಿರುವ ಅಮಿತ್ ಶಾ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅಮಿತ್ ಶಾಗೆ ಬಿಎಸ್‍ವೈ, ಸಿಎಂ ಬೊಮ್ಮಾಯಿ ಸಾಥ್ ನೀಡಲಿದ್ದಾರೆ. ಇತ್ತ ಕಿತ್ತೂರು ಮತಕ್ಷೇತ್ರದಲ್ಲಿ ಕಾಂಗ್ರೆಸ್ ಗಟ್ಟಿಗೊಳಿಸಲು ಡಿಕೆಶಿ ಹಾಗೂ ಸತೀಶ್ ಜಾರಕಿಹೊಳಿ (Satish Jarakiholi) ಗೇಮ್ ಪ್ಲಾನ್ ರೂಪಿಸಿದ್ದು, ಪಕ್ಷದ ಕ್ಷೇತ್ರ ಬೆಳಗಾವಿ ಗ್ರಾಮೀಣ, ಖಾನಾಪೂರ ಹಾಗೂ ಬೈಲಹೊಂಗಲದಲ್ಲಿಯೂ ಕಾಂಗ್ರೆಸ್ ಶಾಸಕರಿರುವುದರಿಂದ ಕಿತ್ತೂರು ಮತಕ್ಷೇತ್ರದಲ್ಲಿ ಅಮಿತ್ ಶಾ ಬಹಿರಂಗ ಸಭೆ ಆಯೋಜಿಸಿದ್ದಾರೆ.

    ಚುನಾವಣಾ ರಣತಂತ್ರ ರೂಪಿಸಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲಿಸುವ ಉದ್ದೇಶವಾಗಿದೆ. ಎಂ ಕೆ ಹುಬ್ಬಳ್ಳಿಯಲ್ಲಿ ಲಕ್ಷಾಂತರ ಜನ ಸೇರುವ ನಿರೀಕ್ಷೆಯಿದ್ದು ಬಂದೊಬಸ್ತ್ ಸವಾಲಾಗಿದೆ. ಒಂದೆಡೆ ಪಾರ್ಟಿಯಲ್ಲಿ ಒಳಜಗಳ ಇನ್ನೊಂದೆಡೆ ವಿರೋಧ ಪಕ್ಷಗಳ ತಂತ್ರಕ್ಕೆ ಮರುತಂತ್ರ ರೂಪಿಸುವ ಗುರುತರ ಜವಾಬ್ದಾರಿ ಬಿಜೆಪಿ ಚಾಣಕ್ಯ ಶಾ ಮೇಲಿದೆ. ಅಮಿತ್ ಶಾ ಜೊತೆ ರಾಜ್ಯದ ಘಟಾನುಘಟಿ ನಾಯಕರು ವೇದಿಕೆ ಹಂಚಿಕೊಳ್ಳಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಜ್ಯ ಸರ್ಕಾರಕ್ಕೆ ಅಭಿನಂದನೆ ತಿಳಿಸಿದ ಎಸ್.ಎಂ ಕೃಷ್ಣ

    ರಾಜ್ಯ ಸರ್ಕಾರಕ್ಕೆ ಅಭಿನಂದನೆ ತಿಳಿಸಿದ ಎಸ್.ಎಂ ಕೃಷ್ಣ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜನವರಿ 27, 28ಕ್ಕೆ ಧಾರವಾಡ, ಬೆಳಗಾವಿಗೆ ಅಮಿತ್ ಶಾ ಭೇಟಿ

    ಜನವರಿ 27, 28ಕ್ಕೆ ಧಾರವಾಡ, ಬೆಳಗಾವಿಗೆ ಅಮಿತ್ ಶಾ ಭೇಟಿ

    ಬೆಳಗಾವಿ: ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ (BJP) ಗೆ ಶಕ್ತಿ ತುಂಬಲು ಬೆಳಗಾವಿಗೆ ಚುನಾವಣಾ ಚಾಣಕ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ (AmitShah) ಆಗಮಿಸುತ್ತಿದ್ದಾರೆ. ಕಿತ್ತೂರು ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi), ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ಬಂದಿದ್ದಾಯ್ತು, ಈಗ ಅಮಿತ್ ಶಾ ಸರದಿ ಬಂದಿದ್ದು ಜ.27 ಹಾಗೂ 28ರಂದು ಎರಡು ದಿನ ಅಮಿತ್ ಶಾ ಧಾರವಾಡ, ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

    ಜ.27ರಂದು ರಾತ್ರಿ ಹುಬ್ಬಳ್ಳಿಗೆ ಆಗಮಿಸುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜ.28ರ ಬೆಳಗ್ಗೆ 10 ಗಂಟೆಗೆ ಕುಂದಗೋಳಗೆ ತೆರಳಲಿದ್ದು, ಕುಂದಗೋಳದಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗಿಯಾಗುತ್ತಾರೆ. ಬಳಿಕ ಕೆಎಲ್‍ಇ (KLE) ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಧಾರವಾಡಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಜ್ಞಾನ ಕೇಂದ್ರದ ಉದ್ಘಾಟನೆ ಮಾಡ್ತಾರೆ. ನಂತರ ಮಧ್ಯಾಹ್ನ 3.45ಕ್ಕೆ ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿಗೆ ಆಗಮಿಸಲಿದ್ದು ಬೆಳಗಾವಿಯಲ್ಲಿ ಸರಣಿ ಸಭೆ ನಡೆಸಲಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕ್ಷೇತ್ರ ಘೋಷಣೆ ಬೆನ್ನಲ್ಲೇ ಹೆಚ್ಚಿದ ಕಿರಿಕ್ – ದಲಿತರ ಬಳಿಕ ಅಲ್ಪಸಂಖ್ಯಾತರಿಂದ ವಾರ್

    ಜನವರಿ 28ರಂದು ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬೃಹತ್ ಸಮಾವೇಶ ನಡೆಸಲಿದ್ದು ಕಿತ್ತೂರು ವಿಧಾನಸಭಾ ಕ್ಷೇತ್ರದ ಎಂ.ಕೆ.ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ. ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳ ಟಾರ್ಗೆಟ್ ಮಾಡಿ ಬಿಜೆಪಿ ಶಾಸಕ ಇರುವ ಕ್ಷೇತ್ರ ಕೇಂದ್ರವಾಗಿಸಿ ಬೃಹತ್ ಸಮಾವೇಶ ಮಾಡಲಾಗುತ್ತಿದೆ. ಬೈಲಹೊಂಗಲ, ಖಾನಾಪುರ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದ್ದು, ಬೆಳಗಾವಿ ಗ್ರಾಮೀಣದಲ್ಲಿ- ಲಕ್ಷ್ಮಿ ಹೆಬ್ಬಾಳ್ಕರ್, ಬೈಲಹೊಂಗಲದಲ್ಲಿ – ಮಹಾಂತೇಶ ಕೌಜಲಗಿ, ಖಾನಾಪುರದಲ್ಲಿ – ಅಂಜಲಿ ನಿಂಬಾಳ್ಕರ್ ಹಾಲಿ ಕೈ ಶಾಸಕರಿದ್ದಾರೆ. ಮೂರು ಕ್ಷೇತ್ರಗಳ ಸಮೀಪದಲ್ಲಿರುವ ಎಂ.ಕೆ ಹುಬ್ಬಳ್ಳಿಯಲ್ಲಿ ಅಮಿತ್ ಶಾ ಬೃಹತ್ ಸಮಾವೇಶ ಹಮ್ಮಿಕೊಂಡು ಕಾಂಗ್ರೆಸ್ ಗೆ ಠಕ್ಕರ್ ಕೊಡಲು ಮುಂದಾಗಿದ್ದಾರೆ.

    ಜ.28 ರಂದು ಬೆಳಗಾವಿಯಲ್ಲಿ ಸರಣಿ ಸಭೆ ನಡೆಸಲಿದ್ದು, ಜ.28ರ ಸಂಜೆ 6.30ರಿಂದ ರಾತ್ರಿ 10 ಗಂಟೆಯವರೆಗೆ ಸರಣಿ ಸಭೆಗಳನ್ನು ಆಯೋಜನೆ ಮಾಡಿದ್ದಾರೆ. ಜ.28ರ ಸಂಜೆ 6.30ರಿಂದ 7.30ರವರೆಗೆ ಸಂಘ ಪರಿವಾರದ ಹಿರಿಯರ ಜೊತೆ ಸಭೆ, ಬಳಿಕ ಸಂಜೆ 7.30 ರಿಂದ 8.30ರವರೆಗೆ ಪಕ್ಷದ ಬೆಳಗಾವಿ ಮಹಾನಗರ, ಬೆಳಗಾವಿ ಗ್ರಾಮಾಂತರ, ಚಿಕ್ಕೋಡಿ ಸಂಘಟನಾತ್ಮಕ ಜಿಲ್ಲೆಗಳ ಪದಾಧಿಕಾರಿಗಳ ಸಭೆ,ರಾತ್ರಿ 8.30ರಿಂದ 10ಗಂಟೆಯವರೆಗೆ ಬೆಳಗಾವಿ ಜಿಲ್ಲೆಯ ಹಿರಿಯ ಬಿಜೆಪಿ ನಾಯಕರ ಜೊತೆ ಸಭೆ, ಜ.28ರ ರಾತ್ರಿ 10.30ಕ್ಕೆ ಬೆಳಗಾವಿಯಿಂದ ದೆಹಲಿಗೆ ವಾಪಸ್ ಆಗಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k