Tag: Amithab Bachchan

  • ‘ಕಲ್ಕಿ’ಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ- ಅಮಿತಾಭ್, ಪ್ರಭಾಸ್‌ಗೆ ಲೀಗಲ್ ನೋಟಿಸ್

    ‘ಕಲ್ಕಿ’ಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ- ಅಮಿತಾಭ್, ಪ್ರಭಾಸ್‌ಗೆ ಲೀಗಲ್ ನೋಟಿಸ್

    ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಸಕ್ಸಸ್ ಕಂಡಿದೆ. ಈ ಬೆನ್ನಲ್ಲೇ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ. ಈ ಚಿತ್ರದಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಚಿತ್ರದ ನಿರ್ಮಾಪಕರಿಗೆ, ನಟರಾದ ಅಮಿತಾಭ್ (Amitabh Bachchan), ಪ್ರಭಾಸ್‌ಗೆ (Prabhas) ಕಲ್ಕಿಧಾಮ ಪೀಠಾಧೀಶ್ವರ ಆಚಾರ್ಯ ಪ್ರಮೋದ್ ಕೃಷ್ಣಂ ಲೀಗಲ್ ನೋಟಿಸ್ ನೀಡಿದ್ದಾರೆ. ಇದನ್ನೂ ಓದಿ:ದರ್ಶನ್ ನೋಡಲು ದಿನಕರ್ ತೂಗುದೀಪ್ ಜೊತೆ ಜೈಲಿಗೆ ಬಂದ ವಿಜಯಲಕ್ಷ್ಮಿ

    ನಿಮ್ಮ ಚಲನಚಿತ್ರವು ಭಗವಾನ್ ಕಲ್ಕಿಯ ಪರಿಕಲ್ಪನೆಯನ್ನು ಬದಲಾಯಿಸಿರುವಂತೆ ಇದೆ. ಹಿಂದೂ ಪುರಾಣ ಗ್ರಂಥಗಳಲ್ಲಿ ಬರೆದ ಮತ್ತು ವಿವರಿಸಿದ ಕಾರಣಗಳಿಗಾಗಿ, ಭಗವಾನ್ ಕಲ್ಕಿಯ ಕಥೆಯ ಚಿತ್ರಣ ಮತ್ತು ಚಿತ್ರಣವು ಸಂಪೂರ್ಣವಾಗಿ ತಪ್ಪಾಗಿದೆ. ಹಾಗಾಗಿ ಈ ಪವಿತ್ರ ಗ್ರಂಥಗಳಿಗೆ ಅಗೌರವವಾಗಿದೆ. ಕಲ್ಕಿಯ ಕಥೆಯನ್ನು ಸಂಪೂರ್ಣವಾಗಿ ತಪ್ಪಾಗಿ ನಿರೂಪಿಸಲಾಗಿದೆ. ಇದು ಪವಿತ್ರ ಗ್ರಂಥಗಳಿಗೆ ಅಪಮಾನ ಮಾಡಿದಂತಾಗುತ್ತದೆ ಎಂದು ಆರೋಪಿಸಿ ಚಿತ್ರತಂಡಕ್ಕೆ ಆಚಾರ್ಯ ಪ್ರಮೋದ್ ಕೃಷ್ಣಂ ಪರವಾಗಿ ಸುಪ್ರೀಂ ಕೋರ್ಟ್ ವಕೀಲ ಉಜ್ಜವಲ್ ಆನಂದ್ ಶರ್ಮಾ ಅವರು ನೋಟಿಸ್ ನೀಡಿದ್ದಾರೆ.

    ಕಲ್ಕಿ ಅವತಾರವು ವಿಷ್ಣುವಿನ ಕೊನೆಯ ಅವತಾರವಾಗಿದೆ. ಪ್ರಧಾನಿ ಮೋದಿ ಅವರು ಫೆಬ್ರವರಿ 19ರಂದು ಯುಪಿಯ ಸಂಭಾಲ್‌ನಲ್ಲಿ ಶ್ರೀ ಕಲ್ಕಿ ಧಾಮ್ ದೇವಾಲಯದ ಉದ್ಘಾಟನೆ ಮಾಡಿದರು. ಅಲ್ಲಿ ಭಗವಾನ್ ಕಲ್ಕಿ ಜನಿಸಲಿದ್ದಾರೆ. ಇಡೀ ಜಗತ್ತು ಅವನಿಗಾಗಿ ಕಾಯುತ್ತಿದೆ. ಆದರೆ ಈ ಚಿತ್ರವು ಜನರಿಗೆ ತಪ್ಪು ಸಂದೇಶವನ್ನು ನೀಡುತ್ತಿದೆ ಎಂದು ಎಂದು ಮಾಜಿ ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಹೇಳಿಕೆ ನೀಡಿದ್ದಾರೆ.

    ಅಂದಹಾಗೆ, ‘ಕಲ್ಕಿ 2898 ಎಡಿ’ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಅಮಿತಾಬ್, ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಸೇರಿದಂತೆ ಅನೇಕರು ನಟಿಸಿದ್ದಾರೆ. 2ಡಿ ಜೊತೆಗೆ 3ಡಿಯಲ್ಲೂ ಸಿನಿಮಾ ವೀಕ್ಷಿಸಲು ಲಭ್ಯವಿದೆ.

  • ಈ ನಟನ ಜೊತೆ ಆನ್‌ಸ್ಕ್ರೀನ್ ರೊಮ್ಯಾನ್ಸ್ ಮಾಡಲು ಇಷ್ಟ: ಖುಷ್ಬೂ ಸುಂದರ್

    ಈ ನಟನ ಜೊತೆ ಆನ್‌ಸ್ಕ್ರೀನ್ ರೊಮ್ಯಾನ್ಸ್ ಮಾಡಲು ಇಷ್ಟ: ಖುಷ್ಬೂ ಸುಂದರ್

    ಟಿ ಖುಷ್ಬೂ (Kushboo Sundar) ಅವರು ಸಿನಿಮಾ (Film)- ರಾಜಕೀಯ (Politics) ಎರಡು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿರುವ ಖುಷ್ಬೂ ಸಂದರ್ಶನವೊಂದರಲ್ಲಿ ನೆಚ್ಚಿನ ನಟನ ಬಗ್ಗೆ ಅಚ್ಚರಿಯ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ‘ಬ್ರಹ್ಮಕಮಲ’ ಚಿತ್ರ

    ಕನ್ನಡದ ರಣಧೀರ, ಅಂಜದ ಗಂಡು, ಯುಗಪುರುಷ, ಸೇರಿದಂತೆ ಪರಭಾಷೆಗಳಲ್ಲೂ ನಟಿಸಿರುವ ಖುಷ್ಬೂ ಸುಂದರ್, ಬಿಗ್ ಮೇಲಿನ ಕ್ರೇಜ್ ಬಗ್ಗೆ ಮಾತನಾಡಿದ್ದಾರೆ. ತನ್ನ ಬೆಡ್‌ರೂಮ್‌ನಲ್ಲಿ ಬಿಗ್ ಬಿ ಫೋಟೋ ಅಂಟಿಸಿರೋದನ್ನ ನಟಿ ಖುಷ್ಬೂ ರಿವೀಲ್ ಮಾಡಿದ್ದಾರೆ.

    ‘ಸ್ಟಾಲಿನ್’ ಎಂಬ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಸಹೋದರಿಯ ಪಾತ್ರದಲ್ಲಿ ಖುಷ್ಬೂ ನಟಿಸಿದ್ದರು. ಬಾಲಯ್ಯ ಜೊತೆ ನಟಿಸುವ ಅವಕಾಶ ಒಲಿದು ಬರಲಿಲ್ಲ ಎಂಬ ಕೊರಗಿದೆ. ಈ ವಿಚಾರವನ್ನು ಸ್ವತಃ ಖುಷ್ಬೂ ಸಂದರ್ಶನದಲ್ಲಿ ಹೇಳಿದ್ದಾರೆ. ಇವರ ಜೊತೆ ನಟಿಸೋಕೆ ಇವತ್ತಿಗೂ ಇಷ್ಟಪಡ್ತೀನಿ. ಅಂತಹ ಅವಕಾಶಕ್ಕಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ. ನಟ ಅಮಿತಾಬ್ ಬಚ್ಚನ್ ಅಂದ್ರೆ ಬಹಳ ಇಷ್ಟ. ಅವರ ದೊಡ್ಡ ಅಭಿಮಾನಿ ನಾನು ಎಂದು ನಟಿ ವಿವರಿಸಿದ್ದಾರೆ.

    ಅಮಿತಾಬ್ ಬಚ್ಚನ್ (Amitabh Bachchan) ಫೋಟೊಗಳನ್ನು ಇವತ್ತಿಗೂ ನನ್ನ ಬೆಡ್ ರೂಮ್‌ನಲ್ಲಿ ಅಂಟಿಸಿಕೊಂಡಿದ್ದೇನೆ. ಅವರೊಟ್ಟಿಗೆ ಬಾಲನಟಿಯಾಗಿ ನಟಿಸಿದ್ದೇನೆ. ಆದರೆ ಹೀರೊಯಿನ್ ಆಗಿ ನಟಿಸೋ ಅವಕಾಶ ಸಿಗಲಿಲ್ಲ. ಅವರ ಜೊತೆ ರೊಮ್ಯಾನ್ಸ್ ಮಾಡೋ ಆಸೆ ಇದೆ.‌ ಸಾಕಷ್ಟು ವರ್ಷಗಳ ಹಿಂದೆ  ‘ಚೀನಿ ಕಮ್’ ಚಿತ್ರದಲ್ಲಿ ಅಮಿತಾಬ್ ಜೊತೆ ಟಬು ನಟಿಸಿದ್ದರು. ಈ ವಿಚಾರ ಗೊತ್ತಾಗಿ ಆಕೆಗೆ ಫೋನ್ ಮಾಡಿ ಬೈದಿದ್ದೆ, ಅವರೊಟ್ಟಿಗೆ ಹೇಗೆ ನಟಿಸಿದೆ ಎಂದು ಸರಿಯಾಗಿ ಕ್ಲಾಸ್ ತಗೊಂಡೆ ಎಂದು ನಗುತ್ತಾ ಮಾತನಾಡಿದ್ದಾರೆ. ಈ ಮೂಲಕ ಬಿಗ್ ಬಿ ನನ್ನ ನೆಚ್ಚಿನ ನಟ ಎಂದು ಖುಷ್ಬೂ ಮಾತನಾಡಿದ್ದಾರೆ.

  • ಹೈಕೋರ್ಟ್ ಮೆಟ್ಟಿಲೇರಿದ ಬಿಗ್ ಬಿ ಮೊಮ್ಮಗಳು- ಅಷ್ಟಕ್ಕೂ ಆಗಿದ್ದೇನು?

    ಹೈಕೋರ್ಟ್ ಮೆಟ್ಟಿಲೇರಿದ ಬಿಗ್ ಬಿ ಮೊಮ್ಮಗಳು- ಅಷ್ಟಕ್ಕೂ ಆಗಿದ್ದೇನು?

    ಬಾಲಿವುಡ್ (Bollywood) ಅಂಗಳದ ಹಿರಿಯ ನಟ ಅಮಿತಾಭ್ ಬಚ್ಚನ್ (Amitabh Bachchan) ಮೊಮ್ಮಗಳು ಹೈಕೋರ್ಟ್ ಮೆಟ್ಟಿಲೇರಿದ್ದಾಳೆ. ತನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ವಿಚಾರಕ್ಕೆ ನೊಂದು ಆರಾಧ್ಯ ಕೋರ್ಟ್ ಮೆಟ್ಟಿಲೇರುವ ಘಟನೆ ಇದೀಗ ಬೆಳಕಿಗೆ ಬಂದಿದೆ.

    ನಟ ಅಭಿಷೇಕ್- ಐಶ್ವರ್ಯ ರೈ ಪುತ್ರಿ ಆರಾಧ್ಯಗೆ (Aradhya) ಈಗಿನ್ನೂ 11 ವರ್ಷ. ಬಚ್ಚನ್ ಕುಟುಂಬದ ಕುಡಿ ಎನ್ನುವ ಕಾರಣಕ್ಕೆ ಹೆಚ್ಚು ಹೈಲೈಟ್ ಆಗುತ್ತಿದ್ದಾರೆ. ಆರಾಧ್ಯ ಹೆಸರಲ್ಲಿ ಅನೇಕ ಫ್ಯಾನ್‌ಪೇಜ್‌ಗಳು ಸಿದ್ಧಗೊಂಡಿವೆ. ಇದರ ಜೊತೆ ಕೆಲವು ಯೂಟ್ಯೂಬ್ ಚಾನೆಲ್‌ಗಳು ವೀವ್ಸ್ ಗಿಟ್ಟಿಸಿಕೊಳ್ಳಲು ಆರಾಧ್ಯ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದವು. ಅವುಗಳ ವಿರುದ್ಧ ಆರಾಧ್ಯ ಈಗ ಕ್ರಮಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ:ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ‘ಬ್ರಹ್ಮಕಮಲ’ ಚಿತ್ರ

    ದೆಹಲಿ ಹೈಕೋರ್ಟ್‌ನಲ್ಲಿ ತಮ್ಮ ಬಗ್ಗೆ ಈ ರೀತಿ ಸುದ್ದಿ ಪ್ರಕಟ ಆಗದಂತೆ ತಡೆ ನೀಡಬೇಕು ಎಂದು ಆರಾಧ್ಯ ಮನವಿ ಮಾಡಿದ್ದಾಳೆ. ಈ ಪ್ರಕರಣದ ವಿಚಾರಣೆ ಇಂದು (ಏಪ್ರಿಲ್ 20) ನಡೆಯಲಿದೆ. ಸೆಲೆಬ್ರಿಟಿಗಳ ಬಗ್ಗೆ ಅನೇಕ ವದಂತಿಗಳ ಬಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ, ಅವರ ಮಕ್ಕಳ ಬಗ್ಗೆ ಈ ರೀತಿ ಸುಳ್ಳು ಸುದ್ದಿ ಹುಟ್ಟಿಕೊಂಡಾಗ ಅದನ್ನು ಒಪ್ಪಿಕೊಳ್ಳೋಕೆ ಬಚ್ಚನ್ ಕುಟುಂಬಕ್ಕೆ ಹಾಗೂ ಆರಾಧ್ಯಗೆ ಸಾಧ್ಯವಾಗಿಲ್ಲ. ಇಲ್ಲಸಲ್ಲದ ಸುಳ್ಳು ಸುದ್ದಿ ಬಿತ್ತರಿಸುವ ಖಾಸಗಿ ಯೂಟ್ಯೂಬರ್‌ಗಳಿಗೆ ಇದು ಎಚ್ಚರಿಕೆಯ ಗಂಟೆಯಾಗಿದೆ. ಇದರಿಂದ ನೊಂದು ಆರಾಧ್ಯ ಕೋರ್ಟ್ ಮೆಟ್ಟಿಲೇರಿದ್ದಾಳೆ.

  • ಸಿನಿಮಾಗೆ `ಗುಡ್‌ ಬೈ’ ಹೇಳಲಿದ್ದಾರೆ ರಶ್ಮಿಕಾ ಮಂದಣ್ಣ: ಅಸಲಿ ಕಾರಣವೇನು?

    ಸಿನಿಮಾಗೆ `ಗುಡ್‌ ಬೈ’ ಹೇಳಲಿದ್ದಾರೆ ರಶ್ಮಿಕಾ ಮಂದಣ್ಣ: ಅಸಲಿ ಕಾರಣವೇನು?

    ನ್ನಡದ `ಕಿರಿಕ್ ಪಾರ್ಟಿ’ ಮೂಲಕ ಸಿನಿಪಯಣ ಶುರು ಮಾಡಿದ್ದ ನಟಿ ರಶ್ಮಿಕಾ ಮಂದಣ್ಣ ಈಗ ಪಂಚಭಾಷಾ ನಾಯಕಿಯಾಗಿ ಮಿಂಚ್ತಿದ್ದಾರೆ. ಸದ್ಯ ಅಕ್ಟೋಬರ್‌ನಲ್ಲಿ `ಗುಡ್‌ಬೈ’ ಹೇಳಲು ರಶ್ಮಿಕಾ ಮಂದಣ್ಣ ಸಜ್ಜಾಗಿದ್ದಾರೆ.

    `ಪುಷ್ಪ’ ಬ್ಯೂಟಿ ರಶ್ಮಿಕಾ ಸದ್ಯ ಬಾಲಿವುಡ್‌ನ ಮೊದಲ ಚಿತ್ರದ ರಿಲೀಸ್‌ಗೆ ಇದೀಗ ಮುಹೂರ್ತ ಫಿಕ್ಸ್ ಆಗಿದ್ದು, ಅಕ್ಟೋಬರ್‌ನಲ್ಲಿ `ಗುಡ್ ಬೈ’ ಹೇಳಲಿದ್ದಾರೆ. ಬಿಟೌನ್‌ನ ಲೆಜೆಂಡ್ ಜತೆ ರಶ್ಮಿಕಾ ನಟಿಸಿರುವ ಗುಡ್ ಬೈ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ತಮ್ಮ ಬಾಲಿವುಡ್ ಮೊದಲ ಸಿನಿಮಾ ಬಗ್ಗೆ ಅಪ್‌ಡೇಟ್ ನೀಡಿ, ರಿಲೀಸ್ ಡೇಟ್ ಕುರಿತು ರಶ್ಮಿಕಾ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಆಗಸ್ಟ್ 6 ರಿಂದ ಓಟಿಟಿಯಲ್ಲಿ ಕನ್ನಡದ ಬಿಗ್ ಬಾಸ್: ಪ್ರೊಮೋ ರಿಲೀಸ್

    ಅಮಿತಾಭ್ ಬಚ್ಚನ್ ಜತೆ ರಶ್ಮಿಕಾ ಮೊದಲ ಬಾರಿಗೆ ತೆರೆಹಂಚಿಕೊಂಡಿದ್ದು, ಈ ಚಿತ್ರದ ಬಗ್ಗೆ ನಿರೀಕ್ಷೆ ಜಾಸ್ತಿಯಿದೆ. ಅಕ್ಟೋಬರ್ 7ರಂದು ಬೆಳ್ಳಿಪರದೆಯಲ್ಲಿ ರಾರಾಜಿಸಲು ರೆಡಿಯಾಗಿದ್ದಾರೆ. ಈ ಮೂಲಕ ಗುಡ್ ನ್ಯೂಸ್ ಜತೆ `ಗುಡ್ ಬೈ’ ಅಪ್‌ಡೇಟ್ ನೀಡಿದ್ದಾರೆ. ಬಾಲಿವುಡ್‌ನ ರಶ್ಮಿಕಾ ಮೊದಲ ಸಿನಿಮಾ ಯಾವ ರೀತಿ ಕಮಾಲ್ ಮಾಡಬಹುದು ಅಂತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • `ವಿಕ್ರಾಂತ್ ರೋಣ’ ಕನ್ನಡ ಟ್ರೈಲರ್ ಶೇರ್ ಮಾಡಿ, ಚಿತ್ರ ನೋಡಿ ಎಂದ ಬಿಗ್‌ಬಿ

    `ವಿಕ್ರಾಂತ್ ರೋಣ’ ಕನ್ನಡ ಟ್ರೈಲರ್ ಶೇರ್ ಮಾಡಿ, ಚಿತ್ರ ನೋಡಿ ಎಂದ ಬಿಗ್‌ಬಿ

    ಸಿನಿ ದುನಿಯಾದಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ `ವಿಕ್ರಾಂತ್ ರೋಣ’ ದರ್ಶನಕ್ಕೆ ದಿನಗಣನೆ ಶುರುವಾಗಿದೆ. ಕಿಚ್ಚನ ಚಿತ್ರದ ಟ್ರೈಲರ್ ಝಲಕ್ ನೋಡಿ ಬಿಗ್ ಸ್ಟಾರ್ಸ್ ಕೂಡ ಭೇಷ್ ಅಂತಿದ್ದಾರೆ. ಈಗ ಬಿಟೌನ್ ಬಿಗ್ ಸ್ಟಾರ್ ಅಮಿತಾಭ್ ಬಚ್ಚನ್ ವಿಕ್ರಾಂತ್ ರೋಣ ಚಿತ್ರದ ಕನ್ನಡ ಟ್ರೈಲರ್ ಶೇರ್ ಮಾಡಿ ಶುಭ ಹಾರೈಸಿದ್ದಾರೆ.

    ಕಿಚ್ಚ ಸುದೀಪ್ ನಟನೆಯ ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಚಿತ್ರ ಫೀವರ್ ಜೋರಾಗಿದೆ. ಬಹುಭಾಷೆಗಳಲ್ಲಿ ಸಿನಿಮಾ 3ಡಿ ರೂಪದಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಸುದೀಪ್‌ನ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ. ಈಗಾಗಲೇ ರಾ ರಾ ರಕ್ಕಮ್ಮ, ಚಿತ್ರದ ಟ್ರೈಲರ್ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿ, ದಾಖಲೆ ಬರೆದಿದೆ. ಹೀಗಿರುವಾಗ ಈ ಚಿತ್ರಕ್ಕೆ ಬಿಗ್‌ಬಿ ಕೂಡ ಟ್ರೈಲರ್ ಶೇರ್ ಮಾಡಿ, ಸಿನಿಮಾ ನೋಡಿ ಅಂತಾ ಟ್ವೀಟ್ ಮೂಲಕ ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ. ಇದನ್ನೂ ಓದಿ:ಆಲಿಯಾ ಭಟ್ ಪ್ರೆಗ್ನೆಂಟ್: ಇಷ್ಟು ಬೇಗ ಮಗುನಾ ಅಂದ ಅಭಿಮಾನಿಗಳು

    ಕನ್ನಡ ಸ್ಟಾರ್ ಸುದೀಪ್,ಪ್ಯಾನ್ ಇಂಡಿಯಾ ಸಿನಿಮಾ `ವಿಕ್ರಾಂತ್ ರೋಣ’ 3ಡಿ ರೂಪದಲ್ಲಿ ಐದು ಭಾಷೆಗಳಲ್ಲಿ ಜುಲೈ 28ಕ್ಕೆ ತೆರೆಗೆ ಬರಲಿದೆ ಅಂತಾ ಟ್ವೀಟ್ ಮೂಲಕ ಚಿತ್ರತಂಡ ಬೆಂಬಲ ಸೂಚಿಸಿದ್ದಾರೆ. ಇನ್ನು ಪರಭಾಷೆಗಳಲ್ಲೂ ಉತ್ತಮ ಸ್ನೇಹಿತರನ್ನು ಹೊಂದಿರುವ ಸುದೀಪ್ ಸಿನಿಮಾಗಾಗಿ ಇತರ ಚಿತ್ರರಂಗದ ಸ್ನೇಹಿತರು ಕೂಡ ಬೆಂಬಲಿಸಿ, ಶುಭಹಾರೈಸುತ್ತಿದ್ದಾರೆ. ಒಟ್ನಲ್ಲಿ ವಿಕ್ರಾಂತ್ ರೋಣ ಚಿತ್ರವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ.

    Live Tv

  • ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಬಾಲಿವುಡ್‌ಗೆ ಎಂಟ್ರಿ: ಶುಭ ಹಾರೈಸಿದ ಬಿಗ್ ಬಿ

    ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಬಾಲಿವುಡ್‌ಗೆ ಎಂಟ್ರಿ: ಶುಭ ಹಾರೈಸಿದ ಬಿಗ್ ಬಿ

    ಬಿಟೌನ್ ಅಡ್ಡಾದಲ್ಲಿ `ದಿ ಆರ್ಚೀಸ್’ ಸಿನಿಮಾದ ಫಸ್ಟ್ ಲುಕ್ ವೈರಲ್ ಆಗುತ್ತಿದೆ. ಈ ಚಿತ್ರದ ಮೂಲಕ ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಚಿತ್ರರಂಗಕ್ಕೆ ಪಾದಾರ್ಪಾಣೆ ಮಾಡಿತ್ತಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಫಸ್ಟ್ ಲುಕ್ ಶೇರ್ ಮಾಡಿ, ಮೊಮ್ಮಗನಿಗೆ ಶುಭ ಹಾರೈಸಿದ್ದಾರೆ.

     

    View this post on Instagram

     

    A post shared by @_agastya_nanda

    ಬಾಲಿವುಡ್ ದಂತಕಥೆ ಅಮಿತಾಭ್ ಬಚ್ಚನ್ ಕುಟುಂಬದ ಕುಡಿ ಅಗಸ್ತ್ಯ ನಂದಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಡ್ತಿದ್ದಾರೆ. `ದಿ ಆರ್ಚೀಸ್’ ಟಿನೇಜ್ ಹುಡುಗ ಹುಡುಗಿಯರ ಕಾಮಿಕ್ ಕಥೆಯಲ್ಲಿ ಅಮಿತಾಭ್ ಮೊಮ್ಮಗ ಅಗಸ್ತ್ಯ, ಶ್ರೀದೇವಿ ಪುತ್ರಿ ಬೋನಿ ಕಪೂರ್, ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಈ ಚಿತ್ರದ ಮೂಲಕ ಪರಿಚಿತರಾಗುತ್ತಿದ್ದಾರೆ. ಈ ಚಿತ್ರಕ್ಕೆ ರೀಮಾ ಕಾಗ್ತಿ ಮತ್ತು ಝೋಯಾ ಅಖ್ತರ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.

    `ದಿ ಆರ್ಚೀಸ್’ ಚಿತ್ರದ ಫಸ್ಟ್ ಲುಕ್ ನೋಡಿ ಬಿಗ್ ಬಿ ಮೆಚ್ಚುಗೆ ಸೂಚಿಸಿದ್ದಾರೆ. ಮಗಳು ಶ್ವೇತಾ ಬಚ್ಚನ್‌ ನಂದಾ ಮಗ ಅಗಸ್ತ್ಯನಿಗೆ  ಶುಭಹಾರೈಸಿದ್ದಾರೆ. ಮತ್ತೊಬ್ಬ ಮಗನ ಉದಯ, ನನ್ನ ಮೊಮ್ಮಗ ಅಗಸ್ತ್ಯ ನಿನಗೆ ನನ್ನ ಆರ್ಶೀವಾದಗಳು. ಲವ್ ಯೂ ಎಂದು ಮೊಮ್ಮಗನಿಗೆ ಅಮಿತಾಭ್ ಬಚ್ಚನ್ ಟ್ವೀಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: `ಕರಿಯ’ ಚಿತ್ರ ನಿರ್ಮಾಪಕ ಆನೇಕಲ್ ಬಾಲರಾಜ್ ನಿಧನ

    ಇನ್ನು `ದಿ ಆರ್ಚೀಸ್’ ಚಿತ್ರದ ಫಸ್ಟ್ ಲುಕ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರದ ಮೂಲಕ ಬಾಲಿವುಡ್ ಸ್ಟಾರ್ ಕಿಡ್ಸ್ ಚಿತ್ರರಂಗಕ್ಕೆ ಕಾಲಿಡ್ತಿದ್ದಾರೆ. ಇನ್ನು 2023ರಲ್ಲಿ ಒಟಿಟಿ ಸಿನಿಮಾ ತೆರೆ ಕಾಣಲಿದೆ.

  • ದುಬಾರಿ ಬೆಲೆಗೆ ಮನೆಯನ್ನು ಮಾರಾಟ ಮಾಡಿದ ಬಿಗ್ ಬಿ

    ದುಬಾರಿ ಬೆಲೆಗೆ ಮನೆಯನ್ನು ಮಾರಾಟ ಮಾಡಿದ ಬಿಗ್ ಬಿ

    ಮುಂಬೈ: ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ಮುಂಬೈನಲ್ಲಿ ಅನೇಕ ಬೆಲೆಬಾಳುವ ಆಸ್ತಿಗಳನ್ನು ಹೊಂದಿದ್ದಾರೆ. ಆದರೆ ಇತ್ತೀಚೆಗೆ ಅವರು ಗುಲ್ಮೊಹರ್ ಪಾರ್ಕ್‍ನಲ್ಲಿರುವ ತಮ್ಮ ದಕ್ಷಿಣ ದೆಹಲಿಯಲ್ಲಿರುವ ‘ಸೋಪಾನ್’ ಹೆಸರಿನ ಮನೆಯನ್ನು 23 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ.

    ನೆಜೋನ್ ಗ್ರೂಪ್ ಆಫ್ ಕಂಪನಿಗಳ (ಸಿಇಒ) ಅವ್ನಿ ಬೇಡರ್ ಅವರಿಗೆ ಬಚ್ಚನ್ ಮನೆಯನ್ನು ಮಾರಾಟ ಮಾಡಿದ್ದಾರೆ. ಇದನ್ನೂ ಓದಿ: ಅಜ್ಮೀರ್ ದರ್ಗಾಕ್ಕೆ ಚಾದರ ಕಳಿಸಿಕೊಟ್ಟ ಪ್ರಧಾನಿ ಮೋದಿ

    ಬಚ್ಚನ್ ಅವರು ಈ ಮನೆಯುನ್ನು ಕಟ್ಟಿಸಿ ತುಂಬಾ ವರ್ಷಗಳಾಗಿದ್ದು, ಇದು ಹಳೆಯ ನಿರ್ಮಾಣವಾಗಿದೆ. ಆದ್ದರಿಂದ ನಾವು ಸೋಪಾನ್ ಮನೆಯನ್ನು ಕೆಡವುತ್ತೇವೆ. ನಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಆ ಮನೆಯನ್ನು ಹೊಸದಾಗಿ ನಿರ್ಮಿಸುತ್ತೇವೆ. ನಾವು ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದು, ನಾನು ಹೆಚ್ಚುವರಿ ಆಸ್ತಿಗಾಗಿ ದೆಹಲಿಯಲ್ಲಿ ಒಂದು ಮನೆಯನ್ನು ಹುಡುಕುತ್ತಿದ್ದೆ. ಆಗ ಅಮಿತಾಬ್ ಅವರ ಮನೆ ಮಾರಾಟಕ್ಕಿರುವುದು ತಿಳಿದುಬಂದಿದ್ದು, ತಕ್ಷಣ ಆ ಮನೆಯನ್ನು ಖರೀದಿಸಿದ್ದೇವೆ ಎಂದು ಅವ್ನಿ ಅವರು ಮಾಧ್ಯಮದ ಮೂಲಕ ತಿಳಿಸಿದರು.

    ಈ ಹಿಂದೆ ಸೋಪಾನ್ ಮನೆಯಲ್ಲಿ ಅಮಿತಾಭ್ ಬಚ್ಚನ್ ಅವರ ತಂದೆ ಪ್ರಸಿದ್ಧ ಕವಿ ಹರಿವಂಶ್ ರಾಯ್ ಬಚ್ಚನ್ ಮತ್ತು ಅವರ ತಾಯಿ ದಿವಂಗತ ತೇಜಿ ಬಚ್ಚನ್‍ರವರು ವಾಸಿಸುತ್ತಿದ್ದರು. ಇದನ್ನೂ ಓದಿ: ಶಕ್ತಿಧಾಮದ ಮಕ್ಕಳ ಜೊತೆ ಪ್ರವಾಸಕ್ಕೆ ಬಂದ ನಟ ಶಿವಣ್ಣ

    ಈ ಮನೆಯು 418.5 ಚದರ ಮೀಟರ್ ಜಾಗದಲ್ಲಿದ್ದು, ಡಿಸೆಂಬರ್ 7 ರಂದು ಇದರ ನೊಂದಣಿಯನ್ನು ಪೂರ್ಣಗೊಳಿಸಲಾಗಿತ್ತು. ಹರಿವಂಶ್ ರಾಯ್ ಬಚ್ಚನ್ ಅವರು ಈ ಮನೆಯಲ್ಲಿ ವಾಸವಾಗಿದ್ದಾಗ ಕವಿಗೋಷ್ಠಿಯನ್ನು ಆಯೋಜಿಸಿದ್ದರು. ಬಚ್ಚನ್‍ರವರ ಅನೇಕ ನೆನಪುಗಳನ್ನು ಮನೆ ಹೊಂದಿದೆ. ಅಲ್ಲದೆ, ಎರಡು ಅಂತಸ್ತಿನ ಸೋಪಾನ್ ಅನ್ನು ತಾಯಿ ತೇಜಿ ಬಚ್ಚನ್ ಹೆಸರಿನಲ್ಲಿ ನೋಂದಾಯಿಸಲಾಗಿತ್ತು. ಈ ಬಗ್ಗೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  • ಮಾವನ ಹುಟ್ಟುಹಬ್ಬಕ್ಕೆ ಸರ್‍ಪ್ರೈಸ್ ಗಿಫ್ಟ್ ಕೊಟ್ಟ ಸೊಸೆ ಐಶ್ವರ್ಯ ರೈ!

    ಮಾವನ ಹುಟ್ಟುಹಬ್ಬಕ್ಕೆ ಸರ್‍ಪ್ರೈಸ್ ಗಿಫ್ಟ್ ಕೊಟ್ಟ ಸೊಸೆ ಐಶ್ವರ್ಯ ರೈ!

    ಮುಂಬೈ: ಅಮಿತಾಬ್ ಬಚ್ಚನ್ ಈ ಬಾರಿ ತಮ್ಮ 75ನೇ ಹುಟ್ಟುಹಬ್ಬವನ್ನು ಮಾಲ್ಡೀವ್ಸ್ ನಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಅಮಿತಾಬ್, ಜಯಾ ಬಚ್ಚನ್, ಶ್ವೇತಾ, ಐಶ್ವರ್ಯ, ಆರಾಧ್ಯ, ಅಭಿಷೇಕ್ ಮಂಗಳವಾರ ಬೆಳಗ್ಗೆ ಮಾಲ್ಡೀವ್ಸ್ ಗೆ ತೆರಳಿದ್ದು ಅಲ್ಲಿ ಸಂತೋಷದ ಕ್ಷಣಗಳನ್ನು ಕಳೆಯಲಿದ್ದಾರೆ.

    ಕುಟುಂಬದ ಎಲ್ಲ ಸದಸ್ಯರು ಸೇರಿ ಅವರ ಹುಟ್ಟುಹಬ್ಬವನ್ನು ಬೀಚಿನಲ್ಲಿ ಆಚರಿಸಲು ನಿರ್ಧರಿಸಿದ್ದಾರೆ. ಬಿಗ್-ಬಿ ಮಾಲ್ಡೀವ್ಸ್ ನಲ್ಲಿ ತಮ್ಮ ಮೊಮ್ಮಕ್ಕಳ ಜೊತೆ ನೀರಿನಲ್ಲಿ ಆಟನಾಡಿ ನಂತರ ತಮ್ಮ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ.

    ಮಾಲ್ಡೀವ್ಸ್ ಗೆ ಫ್ಯಾಮಿಲಿ ರಜೆಯಲ್ಲಿ ಹೋಗಿ ಬರಲು ಅಭಿಷೇಕ್ ಮತ್ತು ಶ್ವೇತ  ಇಬ್ಬರೂ ತಂದೆಯ ಮನವೊಲಿಸಿದ್ದಾರೆ. ಮಾಲ್ಡೀವ್ಸ್ ಬೀಚ್‍ನಲ್ಲಿ ದೊಡ್ಡ ಕೇಕ್ ಕತ್ತರಿಸಿ ಅದ್ಧೂರಿಯಾಗಿ ಆಚರಿಸಲು ಐಶ್ವರ್ಯ, ಅಭಿಷೇಕ್ ಮತ್ತು ಶ್ವೇತ ಪ್ಲಾನ್ ನಡೆಸಿದ್ದಾರೆ.

    ನಾಲ್ಕು ದಿನಗಳ ಕಾಲ ಬಚ್ಚನ್ ಫ್ಯಾಮಿಲಿ ಮಾಲ್ಡೀವ್ಸ್ ನಲ್ಲಿ ತಂಗಲಿದ್ದು, ಜೆಟ್ ಸ್ಕಿಟಿಂಗ್, ಸೇಲಿಂಗ್‍ ನಂತಹ ಹಲವು ನೀರಿನ ಗೇಮ್ ಆಡಲಿದ್ದಾರೆ. ಯಾಚ್ ಪಾರ್ಟಿಯನ್ನು ಕೂಡ ಆಯೋಜಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

  • ಈ ಬಾರಿ ಹುಟ್ಟುಹಬ್ಬ, ದೀಪಾವಳಿ ಆಚರಿಸುತ್ತಿಲ್ಲ ಬಿಗ್-ಬಿ!

    ಈ ಬಾರಿ ಹುಟ್ಟುಹಬ್ಬ, ದೀಪಾವಳಿ ಆಚರಿಸುತ್ತಿಲ್ಲ ಬಿಗ್-ಬಿ!

    ಮುಂಬೈ: ಅಕ್ಟೋಬರ್ 11 ರಂದು ಅಮಿತಾಬ್ ಬಚ್ಚನ್ 75 ವರ್ಷಕ್ಕೆ ಕಾಲಿಡುತ್ತಿದ್ದಾರೆ. ಆದರೆ ಈ ಬಾರಿ ಬಿಗ್-ಬಿ ತಮ್ಮ ಹುಟ್ಟು ಹಬ್ಬ ಮತ್ತು ದೀಪಾವಳಿ ಆಚರಿಸಲ್ಲ ಎಂದು ಟ್ಟಿಟ್ಟರ್ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ಹೌದು. ಅಮಿತಾಬ್ ಈ ಬಾರಿ ತಮ್ಮ ಹುಟ್ಟುಹಬ್ಬ ಹಾಗೂ ದೀಪಾವಳಿ ಆಚರಿಸುತ್ತಿಲ್ಲ. ಐಶ್ವರ್ಯ ರೈ ಅವರ ತಂದೆ ಸಾವನ್ನಪ್ಪಿದ ಕಾರಣ ಅವರು ತಮ್ಮ ಹುಟ್ಟುಹಬ್ಬ ಆಚರಿಸಲ್ಲ ಎಂದು ತಿಳಿಸಿದ್ದಾರೆ. ಈ ಬಾರಿ ಹುಟ್ಟುಹಬ್ಬದ ದಿನದಂದು ಊರಲ್ಲಿ ಇರುವುದಿಲ್ಲ ಎಂದು ಬಿಗ್-ಬಿ ತಮ್ಮ ಅಭಿಮಾನಿಗಳಿಗೆ ಟ್ವಿಟ್ಟರ್‍ನಲ್ಲಿ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

    ತುಂಬಾ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಐಶ್ ಅವರ ತಂದೆ ಮಾರ್ಚ್ ತಿಂಗಳಲ್ಲಿ ನಿಧನರಾಗಿದ್ದರು.