Tag: amitabh bacchan

  • ಕಾಲಿಗೆ ನಮಸ್ಕರಿಸಲು ಬಂದ ತಲೈವಾಗೆ ಅಮಿತಾಭ್ ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತಾ?

    ಕಾಲಿಗೆ ನಮಸ್ಕರಿಸಲು ಬಂದ ತಲೈವಾಗೆ ಅಮಿತಾಭ್ ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತಾ?

    ವಿಶ್ವದ ಶ್ರೀಮಂತರಲ್ಲಿ ಒಬ್ಬರಾಗಿರುವ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ (Anant Ambani) ಮದುವೆ ಜು.12ರಂದು ಅದ್ಧೂರಿಯಾಗಿ ನಡೆದಿದೆ. ಇನ್ನೂ ಈ ಸಂಭ್ರಮದಲ್ಲಿ ಭಾಗಿಯಾಗಿದ್ದ ಅಮಿತಾಭ್ ಬಚ್ಚನ್‌ರನ್ನು (Amitabh Bachchan) ನೋಡಿ ಕಾಲಿಗೆ ನಮಸ್ಕರಿಸಲು ತಲೈವಾ ಬಂದಿದ್ದು, ಈ ವೇಳೆ ಬಿಗ್‌ ಬಿ ಪ್ರತಿಕ್ರಿಯಿಸಿದ ರೀತಿ ಕಂಡು ಫ್ಯಾನ್ಸ್‌ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:AR Wedding: ಕುಟುಂಬದ ಜೊತೆ ನಿಲ್ಲದೆ ಮಗಳೊಂದಿಗೆ ಪೋಸ್ ಕೊಟ್ಟ ಐಶ್ವರ್ಯಾ ರೈ

    ರಜನಿಕಾಂತ್ (Rajanikanth) ಸೂಪರ್ ಸ್ಟಾರ್ ಆಗಿದ್ರೂ ತಮಗಿಂತ ಹಿರಿಯರಿಗೆ ಅದೆಷ್ಟು ಗೌರವ ಕೊಡ್ತಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಅಂಬಾನಿ ಮದುವೆಯಲ್ಲಿ ಸೀನಿಯರ್ ಸ್ಟಾರ್ ನಟ ಬಿಗ್ ಬಿ ನೋಡ್ತಿದ್ದಂತೆ ತಲೈವಾ ಕಾಲಿಗೆ ನಮಸ್ಕರಿಸಲು ಮುಂದಾಗಿದ್ದಾರೆ. ಆಗ ಬಿಗ್ ಬಿ ತಡೆದಿದ್ದಾರೆ. ಇಬ್ಬರೂ ಪರಸ್ಪರ ತಬ್ಬಿಕೊಂಡಿದ್ದಾರೆ. ಈ ವಿಡಿಯೋ ಮೂಲಕ ಇಬ್ಬರೂ ಪರಸ್ಪರ ಅದೆಷ್ಟು ಗೌರವ ಕೊಡ್ತಾರೆ ಎಂದು ತಿಳಿದು ಬಂದಿದೆ.

     

    View this post on Instagram

     

    A post shared by Pallav Paliwal (@pallav_paliwal)

    ಅನಂತ್ ಮತ್ತು ರಾಧಿಕಾ ಮದುವೆಯಲ್ಲಿ (Anant-Radhika Wedding) ಬಿಗ್ ಬಿ ಫ್ಯಾಮಿಲಿ, ರಜನಿಕಾಂತ್ ಕುಟುಂಬ, ಯಶ್ ದಂಪತಿ, ರಶ್ಮಿಕಾ ಮಂದಣ್ಣ, ರಣ್‌ವೀರ್ ಸಿಂಗ್, ದೀಪಿಕಾ ಪಡುಕೋಣೆ, ಶಾರುಖ್ ಖಾನ್, ಜಾನ್ವಿ ಕಪೂರ್, ಸಲ್ಮಾನ್ ಖಾನ್, ಕಿಯಾರಾ ಅಡ್ವಾಣಿ ದಂಪತಿ ಸೇರಿದಂತೆ ಅನೇಕರು ಭಾಗಿಯಾಗಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ಮದುವೆಗೆ ಬಂದಿದ್ದ ಸ್ಟಾರ್ಸ್‌ಗೆ 2 ಕೋಟಿ ಮೌಲ್ಯದ ವಾಚ್ ಗಿಫ್ಟ್ ಮಾಡಿದ ಅಂಬಾನಿ

    ಅಂದಹಾಗೆ, ಜೈ ಭೀಮ್ ನಿರ್ದೇಶಕನ ‘ವೆಟ್ಟೈಯನ್’ ಸಿನಿಮಾದಲ್ಲಿ ಅಮಿತಾಭ್ ಮತ್ತು ತಲೈವಾ ಜೊತೆಯಾಗಿ ನಟಿಸಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.

  • ಗರ್ಭಿಣಿ ದೀಪಿಕಾ ಸ್ಟೇಜ್‌ನಿಂದ ಕೆಳಗಿಳಿಯಲು ಸಹಾಯ ಮಾಡಿದ ಪ್ರಭಾಸ್‌ಗೆ ಕಾಲೆಳೆದ ಬಿಗ್ ಬಿ

    ಗರ್ಭಿಣಿ ದೀಪಿಕಾ ಸ್ಟೇಜ್‌ನಿಂದ ಕೆಳಗಿಳಿಯಲು ಸಹಾಯ ಮಾಡಿದ ಪ್ರಭಾಸ್‌ಗೆ ಕಾಲೆಳೆದ ಬಿಗ್ ಬಿ

    ಹುನಿರೀಕ್ಷಿತ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ರಿಲೀಸ್‌ಗೆ ರೆಡಿ ಈ ಸಿನಿಮಾ ಪ್ರಚಾರ ಕಾರ್ಯದಲ್ಲಿ ದೀಪಿಕಾ ಪಡುಕೋಣೆ (Deepika Padukone) ಭಾಗಿಯಾಗಿ ಚಿತ್ರತಂಡಕ್ಕೆ ಸಾಥ್ ನೀಡುತ್ತಿದ್ದಾರೆ. ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಗರ್ಭಿಣಿ ದೀಪಿಕಾ ವೇದಿಕೆಯಿಂದ ಇಳಿಯಲು ಪ್ರಭಾಸ್ ಸಹಾಯ ಮಾಡಿದ್ದಾರೆ. ಅದಕ್ಕೆ, ಅಮಿತಾಭ್ ಬಚ್ಚನ್ ಕಾಲೆಳೆದಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ತುಂಬು ಗರ್ಭಿಣಿಯಾಗಿರುವ ದೀಪಿಕಾ ಪಡುಕೋಣೆ ಮುಂಬೈನಲ್ಲಿ ನಡೆದ ‘ಕಲ್ಕಿ’ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಸಿನಿಮಾ ಕುರಿತು ಈವೆಂಟ್‌ನಲ್ಲಿ ಮಾತಾಡಿ, ಬರುತ್ತಿದ್ದಂತೆ ದೀಪಿಕಾ ವೇದಿಕೆಯಿಂದ ಇಳಿಯಲು ಮುಂದಾದಾಗ, ಪ್ರಭಾಸ್ ಮತ್ತು ಅಮಿತಾಭ್ ಇಬ್ಬರೂ ನಟಿಯ ಸಹಾಯಕ್ಕೆ ಧಾವಿಸಿದರು. ಪ್ರಭಾಸ್ (Prabhas) ಅವರು ದೀಪಿಕಾ ಅವರ ಕೈ ಹಿಡಿದು ಆರಾಮವಾಗಿ ವೇದಿಕೆಯಿಂದ ಕೆಳಗೆ ಇಳಿಯಲು ಸಹಾಯ ಮಾಡಿದರು. ಬಿಗ್ ಬಿ ಅವರು ಪ್ರಭಾಸ್ ಹಿಂದೆ ನಿಂತು ತಮಾಷೆ ಕೂಡ ಮಾಡಿದ್ದಾರೆ. ಇದನ್ನೂ ಓದಿ:ತೆಲುಗು ನಟ ಚಿರಂಜೀವಿ ಮಾಜಿ ಅಳಿಯ ಶಿರೀಶ್ ನಿಧನ

    ಈ ಕಾರ್ಯಕ್ರಮದಲ್ಲಿ ಡಾರ್ಲಿಂಗ್ ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮತ್ತು ದೀಪಿಕಾ ಪಡುಕೋಣೆ, ರಾಣಾ ದಗ್ಗುಬಾಟಿ ಸೇರಿದಂತೆ ಹಲವರು ಭಾಗಿಯಾಗಿದ್ದರು. ‘ಕಲ್ಕಿ’ ಪ್ರೀ ರಿಲೀಸ್ ಈವೆಂಟ್‌ಗಾಗಿ 10 ಕೋಟಿ ರೂ. ಖರ್ಚಾಗಿದೆ ಎನ್ನಲಾಗಿದೆ. ದೀಪಿಕಾ ಅವರು ವೇದಿಕೆಯಲ್ಲಿ ಸಿನಿಮಾ ಕುರಿತಾಗಿ ಕೂಡ ಮಾತನಾಡಿದ್ದಾರೆ.

    ಅಂದಹಾಗೆ, ‘ಕಲ್ಕಿ 2898 ಎಡಿ’ ಸಿನಿಮಾ ಇದೇ ಜೂನ್ 27ಕ್ಕೆ ರಿಲೀಸ್ ಆಗಲಿದೆ. ಬಹುಭಾಷೆಗಳಲ್ಲಿ ಸಿನಿಮಾ ತೆರೆ ಕಾಣಲಿದೆ. ಮೊದಲ ಬಾರಿಗೆ ದೀಪಿಕಾ, ಈ ಚಿತ್ರಕ್ಕಾಗಿ ತಮ್ಮ ಮಾತೃಭಾಷೆ ಕನ್ನಡದಲ್ಲಿ ಡಬ್ ಮಾಡಿರೋದು ವಿಶೇಷ.

  • ನನ್ನ ಗುರು ಅಮಿತಾಭ್ ಜೊತೆ ಮತ್ತೆ ಕೆಲಸ ಮಾಡ್ತಿದ್ದೇನೆ- ತಲೈವಾ

    ನನ್ನ ಗುರು ಅಮಿತಾಭ್ ಜೊತೆ ಮತ್ತೆ ಕೆಲಸ ಮಾಡ್ತಿದ್ದೇನೆ- ತಲೈವಾ

    ಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ‘ಜೈಲರ್’ (Jailer) ಸಕ್ಸಸ್ ನಂತರ ಸಾಲು ಸಾಲು ಸಿನಿಮಾಗಳನ್ನ ಮಾಡ್ತಿದ್ದಾರೆ. ತಲೈವಾ 170ನೇ ಚಿತ್ರದಲ್ಲಿ ರಜನಿಕಾಂತ್‌ಗೆ ಬಿಗ್ ಬಿ ಜೊತೆಯಾಗುತ್ತಿದ್ದಾರೆ. 33 ವರ್ಷಗಳ ಬಳಿಕ ಮತ್ತೆ ಈ ಜೋಡಿ ಒಂದಾಗ್ತಿರೋದು ವಿಶೇಷ. ಈ ಬಗ್ಗೆ ಸ್ಪೆಷಲ್ ಪೋಸ್ಟ್‌ವೊಂದನ್ನ ತಲೈವಾ ಹಂಚಿಕೊಂಡಿದ್ದಾರೆ.

    ಟಿ.ಜಿ ಜ್ಞಾನವೇಲ್ ನಿರ್ದೇಶನದ, ಲೈಕಾ ಪ್ರೋಡಕ್ಷನ್ಸ್ ನಿರ್ಮಾಣ ಮಾಡುತ್ತಿರುವ ‘ತಲೈವರ್ 170’ ಚಿತ್ರದಲ್ಲಿ 33 ವರ್ಷಗಳ ನಂತರ ನಾನು ನನ್ನ ಗುರು ಶ್ರೀ ಅಮಿತಾಭ್ ಬಚ್ಚನ್ ಅವರೊಂದಿಗೆ ಮತ್ತೆ ಕೆಲಸ ಮಾಡುತ್ತಿದ್ದೇನೆ. ನನ್ನ ಹೃದಯವು ಸಂತೋಷದಿಂದ ಬಡಿದುಕೊಳ್ಳುತ್ತಿದೆ ಎಂದು ರಜನಿಕಾಂತ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:ನಾನು ಧರಿಸಿದ್ದು ಕೃತಕ ಹುಲಿ ಉಗುರು: ನಟ ನಿಖಿಲ್ ಕುಮಾರ್ ಸ್ವಾಮಿ ಸ್ಪಷ್ಟನೆ

    ರಜನಿಕಾಂತ್ ಅವರು ತಮಿಳು, ಕನ್ನಡ ಹಿಂದಿಯಲ್ಲೂ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ಬಿಗ್ ಬಿ ಅವರೊಂದಿಗೆ ಅಂದಾ ಕಾನೂನ್, ಗಿರಫ್ತಾರ್- ಹಮ್ ಸಿನಿಮಾಗಳಲ್ಲಿ ನಟಿಸಿದ್ದರು. ಈ ಸಿನಿಮಾಗಳು ದೊಡ್ಡ ಹಿಟ್ ಆಗಿದ್ದವು. ಅಂದಾ ಕಾನೂನ್ ಸಿನಿಮಾದಲ್ಲಿ ರಜನಿಕಾಂತ್ ಹೀರೋ ಆಗಿದ್ದರೆ, ಅಮಿತಾಭ್ ಅತಿಥಿ ಪಾತ್ರ ಮಾಡಿದ್ದರು. ಹಮ್ ಚಿತ್ರದಲ್ಲಿ ಇಬ್ಬರು ಜೊತೆಗೆ ಕಾಣಿಸಿಕೊಂಡಿದ್ದರು. ಆ ಸಿನಿಮಾ ಕೂಡ ಸೂಪರ್ ಹಿಟ್ ಎನಿಸಿಕೊಂಡಿತ್ತು.

    ರಜನಿ 170ನೇ ಸಿನಿಮಾದಲ್ಲಿ ತಲೈವಾ-ಅಮಿತಾಭ್ ಒಟ್ಟಿಗೆ ನಟಿಸುತ್ತಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. 33 ವರ್ಷಗಳ ನಂತರ ಮತ್ತೆ ಬಿಗ್‌ ಬಿ- ರಜನಿ ಒಂದಾಗಿರೋದ್ರಿಂದ ಸಿನಿಮಾ ಬಗೆಗಿನ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 32 ವರ್ಷಗಳ ನಂತರ ಮತ್ತೆ ಒಂದಾದ ತಲೈವಾ- ಬಿಗ್‌ ಬಿ

    32 ವರ್ಷಗಳ ನಂತರ ಮತ್ತೆ ಒಂದಾದ ತಲೈವಾ- ಬಿಗ್‌ ಬಿ

    ಚಿತ್ರರಂಗದ ದಂತಕಥೆ ಎಂದರೆ ಒಬ್ಬರು ರಜನಿಕಾಂತ್(Rajanikanth), ಮತ್ತೊಬ್ಬರು ಅಮಿತಾಭ್ ಬಚ್ಚನ್. ಈ ಜೋಡಿ ಒಟ್ಟಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು.ಬಳಿಕ ತಲೈವಾ- ಬಿಗ್ ಬಿ ಜೋಡಿ ತೆರೆಯ ಮೇಲೆ ಕಾಣಿಸಿಕೊಳ್ಳಲೇಯಿಲ್ಲ. ಈ ಸ್ಟಾರ್ ಕಿಲಾಡಿ ಜೋಡಿ, ತಮ್ಮ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಲೈವಾ-ಬಿಗ್ ಬಿ (Bigg B) ಇಬ್ಬರು ಒಟ್ಟಾಗಿ ಕಾಣಿಸಿಕೊಳ್ಳಲು ಕೌಂಟ್‌ಡೌನ್ ಶುರುವಾಗಿದೆ.

    ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ(Lyca Productions) ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಇಂಡಿಯನ್, ಖೈದಿ ನಂಬರ್ 150, 2.0, ದರ್ಬಾರ್ ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ, ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಮತ್ತೆ ಕೈ ಜೋಡಿಸಿದೆ. ರಜನಿಯ 170ನೇ ಚಿತ್ರಕ್ಕೆ ಹಣ ಸುರಿಯುತ್ತಿದೆ. ವಿಶೇಷ ಅಂದರೆ ರಜನಿ ಜೊತೆ ಬಾಲಿವುಡ್ ದಂತಕಥೆ ಅಮಿತಾಭ್ ಬಚ್ಚನ್ (Amitabh Bacchan) ಕೂಡ ನಟಿಸುತ್ತಿದ್ದಾರೆ.

    ರಜನಿಕಾಂತ್- ಅಮಿತಾಭ್ ಬಚ್ಚನ್ ಭಾರತೀಯ ಚಿತ್ರರಂಗದ ಘಟಾನುಘಟಿ ನಾಯಕರು. ಈ ಇಬ್ಬರು ತಾರೆಯರು ಅಂದಾ ಕಾನೂನ್, ಗೆರಾಫ್ತಾರ್ ಮತ್ತು ಹಮ್ ಸಿನಿಮಾಗಳಲ್ಲಿ ನಟಿಸಿದ್ದರು. ಈ ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದ್ದವು. ರಜನಿ- ಅಮಿತಾಭ್ ಬಚ್ಚನ್ ಅಭಿನಯಕ್ಕೂ ಮೆಚ್ಚುಗೆಯ ಮಹಾಪೂರ ಹರಿದು ಬಂದಿತ್ತು. ಈ ಸಿನಿಮಾಗಳ ಯಶಸ್ಸಿನ ನಂತರ ಇದೀಗ 32 ವರ್ಷದ ಬಳಿಕ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ಲೈಕಾ ಪ್ರೊಡಕ್ಷನ್ ಹಣ ಹಾಕುತ್ತಿದೆ.ಬಹಳ ಅದ್ಧೂರಿಯಾಗಿ ಮೂಡಿ ಬರಲಿರುವ ಈ ಪ್ರಾಜೆಕ್ಟ್ ಮುಂದಿನ ತಿಂಗಳ ಅಂತ್ಯಕ್ಕೆ ಟೇಕಾಫ್ ಆಗಲಿದೆ. ಇದನ್ನೂ ಓದಿ:ಕರಿಹೈದ ಕೊರಗಜ್ಜ: ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ಬದುಕಿನ ಹಾದಿ

    ರಜನಿ-ಅಮಿತಾಭ್ ಬಚ್ಚನ್ ನಟಿಸಲಿರುವ, ಲೈಕಾ ನಿರ್ಮಾಣ ಮಾಡುತ್ತಿರುವ ಈ ಸಿನಿಮಾವನ್ನು ‘ಜೈ ಭೀಮ್’ ಖ್ಯಾತಿಯ ಟಿಜೆ ಜ್ಞಾನವೇಲ್ ನಿರ್ದೇಶಿಸಲಿದ್ದಾರೆ. ಜೈ ಭೀಮ್ ಮೂಲಕ ಇಂಡಿಯನ್ ಸಿನಿಲೋಕದಲ್ಲಿ ಸಂಚಲನ ಸೃಷ್ಟಿಸಿದ್ದ ಜ್ಞಾನವೇಲ್ ರಜನಿ- ಅಮಿತಾಭ್ ಬಚ್ಚನ್ ನಂತಹ ಸೂಪರ್ ಸ್ಟಾರ್ಸ್ ಗೆ ಸಿನಿಮಾ ಆಕ್ಷನ್ ಕಟ್ ಹೇಳುತ್ತಿದ್ದು, ಈ ಪ್ರಾಜೆಕ್ಟ್ ಮೇಲೆ ನಿರೀಕ್ಷೆ ಹೆಚ್ಚಿದೆ.

  • ಪತ್ನಿಗೆ ಸಿನಿಮಾ ಮಾಡಲು ಬಿಡಿ ಎಂದ ಅಭಿಮಾನಿಗೆ ಅಭಿಷೇಕ್ ಬಚ್ಚನ್ ಏನಂದ್ರು ಗೊತ್ತಾ?

    ಪತ್ನಿಗೆ ಸಿನಿಮಾ ಮಾಡಲು ಬಿಡಿ ಎಂದ ಅಭಿಮಾನಿಗೆ ಅಭಿಷೇಕ್ ಬಚ್ಚನ್ ಏನಂದ್ರು ಗೊತ್ತಾ?

    ಬಾಲಿವುಡ್ (Bollywood) ರಂಗದ ಸ್ಟಾರ್ ಜೋಡಿಗಳಲ್ಲಿ ಒಂದಾಗಿರುವ ಐಶ್ವರ್ಯಾ ರೈ- ಅಭಿಷೇಕ್ ಬಚ್ಚನ್‌ಗೆ (Abhishek bachchan) ಅಪಾರ ಅಭಿಮಾನಿಗಳ ಬಳಗವಿದೆ. ಇಬ್ಬರೂ ಸಿನಿಮಾ ರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಸದ್ಯ ಐಶ್ವರ್ಯಾ ರೈ ಅವರು ಮಣಿರತ್ನಂ (Maniratnam) ಸಿನಿಮಾ ಮೂಲಕ ನಟಿ ಸದ್ದು ಮಾಡ್ತಿದ್ದಾರೆ. ಐಶ್ ನಟನೆ ನೋಡಿ ಫ್ಯಾನ್ಸ್, ಪತಿ ಅಭಿಷೇಕ್ ಬಚ್ಚನ್ ಮನವಿವೊಂದನ್ನ ಮಾಡಿದ್ದಾರೆ.

    ಸಿನಿಮಾ ಸೆಟ್‌ವೊಂದರಲ್ಲಿ ಐಶ್-ಅಭಿಷೇಕ್ ನಡುವೆ ಪ್ರೇಮಾಂಕುರವಾಗಿ 2017ರಲ್ಲಿ ಹಸೆಮಣೆ ಏರಿದ್ದರು. ಆರಾಧ್ಯ ಎಂಬ ಮುದ್ದಾದ ಮಗಳಿದ್ದಾರೆ. ಸ್ಟಾರ್ ನಟಿಯಾಗಿದ್ದಾಗಲೇ ಹಸೆಮಣೆ ಏರಿದ್ದ ನಟಿ ಐಶ್ವರ್ಯಾ ಮೇಲೆ ಇಂದಿಗೂ ಅಭಿಮಾನಿಗಳಿಗೆ ಕ್ರೇಜ್ ಇದೆ. ಅವರ ಹೆಚ್ಚೆಚ್ಚು ಸಿನಿಮಾಗಳನ್ನ ನೋಡಲು ಎದುರು ನೋಡ್ತಿದ್ದಾರೆ. ಸದ್ಯ ‘ಪೊನ್ನಿಯನ್ ಸೆಲ್ವನ್ 2’ ಸಿನಿಮಾ ವಿಷ್ಯವಾಗಿ ಐಶ್ ಸದ್ದು ಮಾಡ್ತಿದ್ದಾರೆ. ಇದನ್ನೂ ಓದಿ:ರಶ್ಮಿಕಾಳನ್ನ ನೋಡಲು ಒಬ್ಬಳೇ ಓಡೋಡಿ ಬಂದ ತಂಗಿ ಶಿಮನ್ ಮಂದಣ್ಣ

    ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಯೊಬ್ಬ ಅಭಿಷೇಕ್‌ಗೆ ಪ್ರಶ್ನೆಯೊಂದನ್ನ ಕೇಳಿದ್ದಾರೆ. ಐಶ್ವರ್ಯಾ ರೈ ಅವರಿಗೆ ಹೆಚ್ಚು ಸಿನಿಮಾಗಳನ್ನ ಮಾಡಲು ಬಿಡಿ, ನೀವು ಆರಾಧ್ಯಳನ್ನ ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಅದಕ್ಕೆ ನಟ ಕೂಡ ರಿಯಾಕ್ಟ್ ಮಾಡಿದ್ದಾರೆ.

    ಐಶ್ವರ್ಯಾಗೆ ಹೆಚ್ಚು ಸಿನಿಮಾಗಳನ್ನ ಮಾಡಲು ಬಿಡಬೇಕಾ ಸರ್? ಯಾವುದಕ್ಕೂ ಅವರು ನನ್ನ ಅನುಮತಿ ಪಡೆಯುವ ಅಗತ್ಯವಿಲ್ಲ. ಅದರಲ್ಲೂ ಅವರು ಇಷ್ಟ ಪಡುವ ವಿಚಾರದಲ್ಲಿ ನನ್ನ ಅನುಮತಿ ಬೇಕಿಲ್ಲ ಎಂದು ನೇರವಾಗಿ ಅಭಿಷೇಕ್ ಬಚ್ಚನ್ ಹೇಳಿದ್ದಾರೆ. ಈ ಮೂಲಕ ಅವರ ಇಷ್ಟ, ಅವರ ಆಯ್ಕೆ ಎಂದು ನಟ ತಿಳಿಸಿದ್ದಾರೆ.

    ಅಭಿಷೇಕ್ ಬಚ್ಚನ್ ಅವರು ಪತ್ನಿ ಐಶ್ವರ್ಯಾ ಬೆಂಬಲಿಸುವ ರೀತಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಗುರು, ಧೂಮ್ 2, ರಾವಣ್, ಕುಚ್ ನಾ ಕಹೋ, ಸಿನಿಮಾಗಳನ್ನ ಒಟ್ಟಾಗಿ ನಟಿಸಿರುವ ಈ ಜೋಡಿ ಮತ್ತೆ ತೆರೆಯ ಮೇಲೆ ಒಟ್ಟಾಗಿ ಬರಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

  • ಬಿಗ್ ಬಿ ಮೊಮ್ಮಗನ ಜೊತೆ ಶಾರುಖ್ ಖಾನ್ ಪುತ್ರಿ ಡೇಟಿಂಗ್

    ಬಿಗ್ ಬಿ ಮೊಮ್ಮಗನ ಜೊತೆ ಶಾರುಖ್ ಖಾನ್ ಪುತ್ರಿ ಡೇಟಿಂಗ್

    ಬಾಲಿವುಡ್ (Bollywood)  ಅಂಗಳದ ಬಿಗ್ ಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ಮೊಮ್ಮಗ ಅಗಸ್ತ್ಯ ನಂದಾ (Agastya Nanda) ಜೊತೆ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ (Suhana Khan) ಡೇಟಿಂಗ್ ಮಾಡ್ತಿದ್ದಾರೆ. ಕಳೆದ ಕೆಲ ಸಮಯದಿಂದ ಈ ಸುದ್ದಿ, ಅನೇಕರ ಚರ್ಚೆಗೆ ಗ್ರಾಸವಾಗಿದೆ.

    ಶಾರುಖ್ ಖಾನ್ (Sharukh Khan) ಅವರ ಪುತ್ರಿ ಸುಹಾನಾ ಜೊತೆ ಅಮಿತಾಭ್ ಅವರ ಮೊಮ್ಮಗ ಅಗಸ್ತ್ಯಗೆ ಲವ್ ಆಗಿದೆಯಂತೆ. ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಬಿಟೌನ್ ಅಂಗಳದಲ್ಲಿ ಭಾರಿ ಸುದ್ದಿ ಮಾಡ್ತಿದೆ.

    ಇತ್ತೀಚೆಗಷ್ಟೇ ರಣ್‌ಬೀರ್ ಕಪೂರ್ ಅವರ ನ್ಯೂ ಇಯರ್ ಪಾರ್ಟಿಯಲ್ಲಿ ಅಗಸ್ತ್ಯ ನಂದಾ ಸುಹಾನಾ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ವೇಳೆ ಸುಹಾನಾರನ್ನು ತನ್ನ ಇಡೀ ಕುಟುಂಬಕ್ಕೆ ಅಗಸ್ತ್ಯ ಪರಿಚಯಿಸಿದ್ದರು. ಇದನ್ನೂ ಓದಿ: ಅನಾರೋಗ್ಯದ ನಂತರ ಫಸ್ಟ್ ಟೈಮ್ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಸಮಂತಾ

    ಇನ್ನೂ `ದಿ ಆರ್ಚೀಸ್’ ಚಿತ್ರದ ಸೆಟ್‌ನಲ್ಲಿ ಸಿನಿಮಾ ಜರ್ನಿ ಜೊತೆ ಲವ್ ಶುರುವಾಗಿದೆ. ಚಿತ್ರೀಕರಣದ ವೇಳೆ ಅಗಸ್ತ್ಯ ಮತ್ತು ಸುಹಾನಾ ನಡುವೆ ಪ್ರೇಮಾಂಕುರವಾಗಿದೆ. ಮಗನ ಪ್ರೀತಿಗೆ ಅಮಿತಾಭ್ ಮಗಳು ಶ್ವೇತಾ ಬಚ್ಚನ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಶ್ಮಿಕಾ- ಅಮಿತಾಭ್ ಬಚ್ಚನ್ ನಟನೆಯ ʻಗುಡ್ ಬೈ’ ಫಸ್ಟ್ ಲುಕ್ ರಿವೀಲ್

    ರಶ್ಮಿಕಾ- ಅಮಿತಾಭ್ ಬಚ್ಚನ್ ನಟನೆಯ ʻಗುಡ್ ಬೈ’ ಫಸ್ಟ್ ಲುಕ್ ರಿವೀಲ್

    `ಕಿರಿಕ್ ಪಾರ್ಟಿ’ ಬ್ಯೂಟಿ ರಶ್ಮಿಕಾ ಮಂದಣ್ಣ ಸದ್ಯ ದಕ್ಷಿಣದ ಸಿನಿಮಾಗಳ ಜತೆ ಬಾಲಿವುಡ್‌ನಲ್ಲೂ ಮಿಂಚ್ತಿದ್ದಾರೆ. ಇದೀಗ ರಶ್ಮಿಕಾ ಮತ್ತು ಬಿಗ್‌ಬಿ ನಟನೆಯ ʻಗುಡ್ ಬೈʼ ಚಿತ್ರದ ಫಸ್ಟ್ ಲುಕ್ ಮೂಲಕ  ರಶ್ಮಿಕಾ ಸೌಂಡ್ ಮಾಡ್ತಿದ್ದಾರೆ.

    ಲಕ್ಕಿ ನಟಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್‌ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಬಿಗ್ ಬಿ ಜೊತೆಗಿನ ʻಗುಡ್ ಬೈʼ ಚಿತ್ರದ ಮೂಲಕ ಗಮನ ಸೆಲೆಯುತ್ತಿದ್ದಾರೆ. ಸದ್ಯ ಈ ಚಿತ್ರದ ಫಸ್ಟ್ ಲುಕ್ ಜೊತೆ ರಿಲೀಸ್ ಡೇಟ್ ಕೂಡ ಚಿತ್ರದ ಅನೌನ್ಸ್ ಮಾಡಿದ್ದಾರೆ. ಇದನ್ನೂ ಓದಿ:ಹಳೆ ಗರ್ಲ್ ಫ್ರೆಂಡ್‍ಗಾಗಿ ಹಂಬಲಿಸುತ್ತಿರುವ ಜಶ್ವಂತ್..!

    ವಿಕಾಸ್ ನಿರ್ದೇಶನದ ಗುಡ್ ಬೈ ಚಿತ್ರದ ಫಸ್ಟ್ ಲುಕ್ ಇದೀಗ ಪ್ರೇಕ್ಷಕರ ಗಮನ ಸೆಲೆಯುತ್ತಿದೆ. ಇನ್ನು ಚಿತ್ರ ಅಕ್ಟೋಬರ್ 7ಕ್ಕೆ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅಮಿತಾಭ್ ಮಗಳ ಪಾತ್ರದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಇವರಿಬ್ಬರ ಈ ಕಾಂಬಿನೇಷನ್ ಚಿತ್ರ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

    ಸೌತ್ ಸಿನಿಮಾಗಳಲ್ಲಿ ಮೋಡಿ ಮಾಡಿರುವ ರಶ್ಮಿಕಾ, ಇದೀಗ ಬಾಲಿವುಡ್ ಅಂಗಳದಲ್ಲೂ ಗೆಲ್ಲುತ್ತಾರಾ ಹಿಂದಿ ಸಿನಿಪ್ರೇಕ್ಷಕ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್‌ಬಿ ಮೊಮ್ಮಗಳ ಜೊತೆ `ಗಲ್ಲಿಬಾಯ್’ ನಟನ ಡೇಟಿಂಗ್ ಸ್ಟೋರಿ

    ಬಿಗ್‌ಬಿ ಮೊಮ್ಮಗಳ ಜೊತೆ `ಗಲ್ಲಿಬಾಯ್’ ನಟನ ಡೇಟಿಂಗ್ ಸ್ಟೋರಿ

    ಬಿಟೌನ್‌ನಲ್ಲಿ ಹೊಸ ಲವ್‌ಸ್ಟೋರಿಯೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸಿನಿಮಾರಂಗದಲ್ಲಿ ಲವ್, ಡೇಟಿಂಗ್, ಬ್ರೇಕಪ್ ಎಲ್ಲವೂ ಇಲ್ಲಿ ಕಾಮನ್ ಆಗಿಬಿಟ್ಟಿದೆ. ಈಗ ಅಮಿತಾಬ್ ಬಚ್ಚನ್ ಮೊಮ್ಮಗಳ ಪ್ರೀತಿ ವಿಚಾರ ಬಿಟೌನ್ ಅಡ್ಡಾದಲ್ಲಿ ಸದ್ದು ಮಾಡುತ್ತಿದೆ. `ಗಲ್ಲಿಬಾಯ್’ ಖ್ಯಾತಿಯ ನಟ ಸಿದ್ಧಾಂತ್ ಚತುರ್ವೇದಿ ಜೊತೆ ಬಿಗ್‌ಬಿ ಮೊಮ್ಮಗಳು ನವ್ಯಾ ನವೇಲಿ ನಂದ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಹೊಸ ವಿಚಾರ ಬಾಲಿವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿದೆ.

    ಇತ್ತೀಚಿಗಷ್ಟೇ ರಿಲೀಸ್ ಆಗಿದ್ದ ಸಿದ್ಧಾಂತ್ ನಟನೆಯ ದೀಪಿಕಾ ಪಡುಕೋಣೆ ನಟನೆಯ `ಗೆಹರಿಯಾನ್’ ಸಿನಿಮಾದಲ್ಲಿ ನಟಿಸಿದ್ದರು. ಚಿತ್ರದಲ್ಲಿ ದೀಪಿಕಾ ಜತೆ ಲಿಪ್‌ಲಾಕ್ ಮಾಡಿ ಸಖತ್ ಸುದ್ದಿಯಾಗಿದ್ದರು. `ಗೆಹರಿಯಾನ್’ ಚಿತ್ರ ಅನೇಕರ ಆಕ್ರೋಶಕ್ಕೆ ಕಾರಣವಾಗಿತ್ತು.

    ನಟ ಸಿದ್ಧಾಂತ್ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ಈ ನಡುವೆ ಬಿಗ್‌ಬಿ ಮೊಮ್ಮಗಳು ನವ್ಯಾ ನವೇಲಿ ನಂದಾ ಜೊತೆ ಪ್ರೀತಿ ವಿಚಾರ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಸಿದ್ಧಾಂತ್ ಇತ್ತೀಚಿಗೆ ಸಿದ್ಧಾಂತ್ ಶೇರ್ ಮಾಡಿರುವ ಫೋಟೋ ನವ್ಯಾ ಜೊತೆಗಿನ ಪ್ರೀತಿ ವಿಚಾರಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಿದೆ. ನಟ ಶೇರ್ ಮಾಡಿರುವ ಫೋಟೋದಲ್ಲಿ ನವ್ಯಾಗೆ ಲಿಂಕ್ ಇದೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

    ವ್ಯಾನಿಟಿ ವ್ಯಾನ್‌ನಲ್ಲಿ ಕುಳಿತಿರುವ ಸಿದ್ಧಾಂತ್‌ಗೆ ವ್ಯಕ್ತಿಯೊಬ್ಬರು ಕತ್ತಿಗೆ ಚೈನ್ ಹಾಕಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿ ಸಿದ್ಧಾಂತ್, ಹರ್ ನೂಡಲ್ಸ್ ಎಂದು ಬರೆದುಕೊಂಡಿದ್ದಾರೆ. ಅದೇ ಸಮಯದಲ್ಲಿ ನವ್ಯಾ ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವುದು ಅನುಮಾನ ಮೂಡಿಸಿದೆ. ನೂಡಲ್ಸ್ ಅಡಿಬರಹದೊಂದಿಗೆ ನವ್ಯಾ ಕೂಡ ಫೋಟೋ ಶೇರ್ ಮಾಡಿದ್ದಾರೆ. ಸಿದ್ಧಾಂತ್ ಪೋಸ್ಟ್ಗೆ ಅಭಿಮಾನಿಗಳು, ನೀವು ನವ್ಯಾ ಬಗ್ಗೆ ಹೇಳುತ್ತಿದ್ದೀರಾ? ಎಂದೆಲ್ಲ ಕಾಮೆಂಟ್ ಫ್ಯಾನ್ಸ್ ಮಾಡುತ್ತಿದ್ದಾರೆ. ಒಟ್ನಲ್ಲಿ ಇವರಿಬ್ಬರ ಪೋಸ್ಟ್ ಗಮನಿಸಿ, ಇವರ ನಡುವೆ ಪ್ರೀತಿ ಇದೆ ಅಂತಾ ನೆಟ್ಟಿಗರು ಊಹಿಸುತ್ತಿದ್ದಾರೆ. ಅಷ್ಟಕ್ಕೂ ಸುದ್ದಿ ನಿಜನಾ ಅಂತಾ ಕಾದು ನೋಡಬೇಕಿದೆ.

  • ಬಿಗ್ ಬಿ ಮುಂದೆ ಕರೋಡ್ ಪತಿ ಸೀಟಲ್ಲಿ ಕುಳಿತ ಉಡುಪಿಯ ರವಿ ಕಟಪಾಡಿ!

    ಬಿಗ್ ಬಿ ಮುಂದೆ ಕರೋಡ್ ಪತಿ ಸೀಟಲ್ಲಿ ಕುಳಿತ ಉಡುಪಿಯ ರವಿ ಕಟಪಾಡಿ!

    – ವೇಷ ಧರಿಸಿ ಅನಾರೋಗ್ಯಕ್ಕೀಡಾದ ಮಕ್ಕಳಿಗೆ ದಾನ

    ಉಡುಪಿ: ಪಬ್ಲಿಕ್ ಹೀರೋ, ಸಮಾಜಸೇವಕ ಉಡುಪಿಯ ರವಿ ಕಟಪಾಡಿ ಅವರು ಹಿಂದಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಪ್ರಸಿದ್ಧ ಕರೋಡ್ ಪತಿ ರಿಯಾಲಿಟಿ ಶೋದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

    ಅರವಿ ಕಟಪಾಡಿ ಅವರು ಉಡುಪಿ ಶ್ರೀಕೃಷ್ಣ ಮಠದ ಅಷ್ಟಮಿ ಸಂದರ್ಭ ಪ್ರತಿವರ್ಷ ವಿಭಿನ್ನ ವೇಷಗಳನ್ನು ಧರಿಸಿ ಬಂದ ಹಣವನ್ನು ಅನಾರೋಗ್ಯ ಪೀಡಿತ ಮಕ್ಕಳಿಗಾಗಿ ದಾನ ನೀಡುತ್ತಾ ಬಂದಿದ್ದಾರೆ. ಈ ಮೂಲಕ ಕಳೆದ ಒಂದು ದಶಕದಿಂದ ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬಡತನದ ಜೀವನ ನಡೆಸುವ ರವಿ ಕಟಪಾಡಿ, ಸಿಮೆಂಟ್ ಸೆಂಟ್ರಿಂಗ್ ಕೆಲಸ ಮಾಡುತ್ತಾರೆ. ಪ್ರತಿವರ್ಷ ವೇಷ ಧರಿಸಿ ಸಂಗ್ರಹವಾದ ಲಕ್ಷಾಂತರ ರೂಪಾಯಿ ದೇಣಿಗೆಯನ್ನು ಏಳೆಂಟು ಮಕ್ಕಳಿಗೆ ನೀಡುತ್ತಾ ಬಂದಿದ್ದಾರೆ.

    ಇದೀಗ ರವಿ ಕಟಪಾಡಿಯವರ ವಿಭಿನ್ನ ಸೇವೆಯನ್ನು ಪರಿಗಣಿಸಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕಾರ್ಯಕ್ರಮದ ಕರ್ಮವೀರ್ ವಿಭಾಗದಲ್ಲಿ ಈ ಬಾರಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಜನವರಿ 15 ರಂದು ಈ ಕಾರ್ಯಕ್ರಮ ಪ್ರಸಾರವಾಗಲಿದೆ. ರವಿ ಮತ್ತು ಅನುಪಮ್ ಕೇರ್ ಎಷ್ಟು ಗೆದ್ದಿದ್ದಾರೆ ಅಂತ ನಾಳೆ ಗೊತ್ತಾಗಲಿದೆ, ಅಲ್ಲಿವರೆಗೆ ಆ ವಿಚಾರ ನಿಯಮದಂತೆ ಗೌಪ್ಯವಾಗಿರಲಿದೆ.

    ಹಿಂದಿ ನಟ ಅನುಪಮ್ ಖೇರ್ ಮತ್ತು ರವಿ ಕಟಪಾಡಿ ಜೋಡಿಯಾಗಿ ಕರೋಡ್ ಪತಿಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಖಾಸಗಿ ವಾಹಿನಿಯಿಂದ ರವಿಗೆ ಆಫರ್ ಬಂದಾಗ ನನಗೆ ಹಿಂದಿ ಭಾಷೆ ಬರುವುದಿಲ್ಲ. ಪ್ರಶ್ನೆ ಎಲ್ಲಾ ಅರ್ಥ ಆಗಲಿಕ್ಕಿಲ್ಲ. ಭಾಷೆಯ ಸಮಸ್ಯೆಯಾಗುತ್ತದೆ. ನನಗೆ ನರ್ವಸ್ ಆಗುತ್ತದೆ ಎಂದು ಹಿಂಜರಿದಿದ್ದರು. ರವಿಯ ಗೆಳೆಯರು ಮನವೊಲಿಸಿದ ನಂತರ ಸ್ಪರ್ಧಿಸಲು ಒಪ್ಪಿದ್ದು ಮುಂಬೈಗೆ ರವಿ ತೆರಳಿದ್ದಾರೆ.

    ಈವರೆಗೆ 52 ಲಕ್ಷ ರೂಪಾಯಿ ದಾನ ಮಾಡಿದ್ದಾರೆ. ಸನ್ಮಾನ ಮಾಡಿ, ಮನೆ ಕಟ್ಟಲು ಮಂಗಳೂರಿನ ಬರ್ಕೆ ಫ್ರೆಂಡ್ಸ್ ಎರಡು ಲಕ್ಷ ರುಪಾಯಿ ಕೊಟ್ಟಿದ್ದರು. ಅನಾರೋಗ್ಯ ಅಂತ ಬಂದಿದ್ದ ಒಂದು ಕುಟುಂಬಕ್ಕೆ ಆ ಹಣವನ್ನು ಕೂಡ ರವಿ ದಾನ ಮಾಡಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರವಿ ಕಟಪಾಡಿ, ನಾನು, ತಾಯಿ 45 ವರ್ಷ ಹಿಂದಿನ ಮನೆಯಲ್ಲಿ ಇದ್ದೇವೆ. ಸಮಾಜದಲ್ಲಿ ಸಂಕಷ್ಟದಲ್ಲಿರುವವರ ಕಷ್ಟ ನೋಡಿದರೆ ನಮ್ಮದೇನು ದೊಡ್ಡ ವಿಷಯವಲ್ಲ ಅಂತ ಹೇಳಿದ್ರು. ಅಮಿತಾಭ್ ಬಚ್ಚನ್ ಮುಂದೆ ಕುಳಿತುಕೊಳ್ಳುವ ಅವಕಾಶ ಸಿಕ್ಕಿದ್ದು ಒಂದು ಭಾಗ್ಯ ಅಂತ ಹೇಳಿದರು.