Tag: amit malviya

  • ಆಪ್‌ ಗೆದ್ದರೂ ದೆಹಲಿ ಮೇಯರ್‌ ಹುದ್ದೆ ಬಿಜೆಪಿಗೆ ಸಿಗುತ್ತಾ?

    ಆಪ್‌ ಗೆದ್ದರೂ ದೆಹಲಿ ಮೇಯರ್‌ ಹುದ್ದೆ ಬಿಜೆಪಿಗೆ ಸಿಗುತ್ತಾ?

    ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ(MCD Election Results) ಆಮ್ ಆದ್ಮಿ ಪಕ್ಷ ಬಹುಮತ ಪಡೆದಿದ್ದರೂ ಮೇಯರ್(Mayor) ಸ್ಥಾನ ಬಿಜೆಪಿಗೆ ಸಿಗುತ್ತಾ ಎಂಬ ಪ್ರಶ್ನೆ ಎದ್ದಿದೆ.

    ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ(BJP’s IT department head Amit Malviya) ಅವರ ಹೇಳಿಕೆಯಿಂದ ಈ ಪ್ರಶ್ನೆ ಎದ್ದಿದೆ. ಚಂಡೀಗಢದಲ್ಲಿ ಬಿಜೆಪಿ ಬಹುಮತ ಪಡೆಯದಿದ್ದರೂ ಕೂಡಾ ಮೇಯರ್ ಬಿಜೆಪಿಯವರಾಗಿದ್ದಾರೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.  ಇದನ್ನೂ ಓದಿ: ಗುಜರಾತ್‌ನಲ್ಲಿ ಬಿಜೆಪಿಗೆ ಭಾರೀ ಮುನ್ನಡೆ

    ದೆಹಲಿ ಮೇಯರ್ ಚುನಾವಣೆಗೆ ಪಾಲಿಕೆಯ 250 ಸದಸ್ಯರ ಜೊತೆಗೆ ದೆಹಲಿ ವ್ಯಾಪ್ತಿಯ ಲೋಕಸಭೆ, ರಾಜ್ಯಸಭಾ ಸದಸ್ಯರು, ವಿಧಾನಸಭೆಯಿಂದ ಸ್ಪೀಕರ್ ಮೂಲಕ ಪಾಲಿಕೆಗೆ ನಾಮನಿರ್ದೇಶನವಾಗುವ ಸದಸ್ಯರು (ಒಟ್ಟು ಸದಸ್ಯರ ಪೈಕಿ ಶೇ.20ರಷ್ಟು), ವಿವಿಧ ಮುನ್ಸಿಪಲ್ ಸಮಿತಿ ಸದಸ್ಯರು, ಲೆಫ್ಟಿನೆಂಟ್ ಗವರ್ನರ್‌ ನಾಮನಿರ್ದೇಶನ ಮಾಡುವ 10 ಸದಸ್ಯರು ಕೂಡಾ ಮತದಾನದ ಹಕ್ಕು ಹೊಂದಿರುತ್ತಾರೆ. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಬಿಜೆಪಿ, ಕಾಂಗ್ರೆಸ್‌ ಮಧ್ಯೆ ನೆಕ್‌ ಟು ನೆಕ್‌ ಸ್ಪರ್ಧೆ

    ಇಷ್ಟೇ ಅಲ್ಲದೇ ಯಾವುದೇ ಪಕ್ಷದ ಸದಸ್ಯರು ಬೇರೆ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದರೂ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ. ಹೀಗಾಗಿ ಮೇಯರ್ ಕುರಿತ ಬಿಜೆಪಿ ನಾಯಕರ ಹೇಳಿಕೆ ಕುತೂಹಲ ಕೆರಳಿಸಿದೆ.

    ಹೊಸದಾಗಿ ಗೆದ್ದಿರುವ ಆಮ್ ಅದ್ಮಿ ಪಕ್ಷದ ಕೌನ್ಸಿಲರ್‌ಗಳನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಗಂಭೀರ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಮೇಯರ್‌ ಚುನಾವಣೆ  ಕುತೂಹಲ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • BJPಯಿಂದ ಟಿಪ್ಪು ಪರಂಪರೆ ಅಳಿಸಲು ಸಾಧ್ಯವೇ ಇಲ್ಲ: ಓವೈಸಿ

    BJPಯಿಂದ ಟಿಪ್ಪು ಪರಂಪರೆ ಅಳಿಸಲು ಸಾಧ್ಯವೇ ಇಲ್ಲ: ಓವೈಸಿ

    ನವದೆಹಲಿ: ಬಿಜೆಪಿಯಿಂದ (BJP) ಟಿಪ್ಪು ಪರಂಪರೆಯನ್ನು ಅಳಿಸಲು ಸಾಧ್ಯವೇ ಇಲ್ಲ ಎಂದು ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಎಚ್ಚರಿಸಿದ್ದಾರೆ.

    ಬೆಂಗಳೂರು – ಮೈಸೂರು ಸಂಪರ್ಕ ಕಲ್ಪಿಸುವ ರೈಲಿಗೆ ಟಿಪ್ಪು ಎಕ್ಸ್‌ಪ್ರೆಸ್‌ (Tippu Express) ಹೆಸರಿಗೆ ಬದಲಾಗಿ ಒಡೆಯರ್ ಎಕ್ಸ್‌ಪ್ರೆಸ್‌ (Wodeyar Express) ಎಂದು ಮರುನಾಮಕರಣ ಮಾಡಿರುವ ವಿಚಾರಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪವನ್ ಕುಮಾರ್-ಫಾಸಿಲ್ ಕಾಂಬಿನೇಷನ್‌ನ ‘ಧೂಮ್ʼ ಚಿತ್ರದ ಅದ್ಧೂರಿ ಮುಹೂರ್ತ

    ಈ ಕುರಿತು ಟ್ವೀಟ್ ಮಾಡಿರುವ ಓವೈಸಿ, ಬ್ರಿಟಿಷರ ವಿರುದ್ಧ ಟಿಪ್ಪು ಮಾಡಿದ್ದ ಮೂರು ಯುದ್ಧಗಳು (War) ಬಿಜೆಪಿಯನ್ನು ಕೆರಳಿಸಿದೆ. ಅವರು ಬೇಕಿದ್ದರೆ ಇನ್ನೊಂದು ರೈಲಿಗೆ ಒಡೆಯರ್ ಹೆಸರಿಡಬಹುದಿತ್ತು. ಏನೇ ಮಾಡಿದರೂ ಟಿಪ್ಪು ಪರಂಪರೆಯನ್ನು (Tippu Legancy) ಅಳಿಸಲು ಬಿಜೆಪಿಯಿಂದ ಸಾಧ್ಯವಿಲ್ಲ. ಟಿಪ್ಪು ಬದುಕಿದ್ದಾಗ ಬ್ರಿಟಿಷರನ್ನು ಹೆದರಿಸಿದ್ದರು. ಈಗ ಬ್ರಿಟಿಷ್ ಗುಲಾಮರನ್ನು ಎದುರಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಸ್ವಚ್ಛ ನಗರ ಪಟ್ಟಿಯಲ್ಲಿ ಬೆಂಗಳೂರು ಲಾಸ್ಟ್ – ಷರತ್ತಿನೊಂದಿಗೆ ನೂತನ ಕಸದ ಟೆಂಡರ್‌ಗೆ BBMP ಸಿದ್ಧತೆ

    ಓವೈಸಿ ಟೀಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಐಟಿ ವಿಭಾಗದ ಉಸ್ತುವಾರಿ ಅಮಿತ್ ಮಾಳವಿಯಾ (Amit Malviya), ಟಿಪ್ಪು ಪರಂಪರೆ ಅಳಿಸುವುದು ಬಿಜೆಪಿ ಉದ್ದೇಶವಲ್ಲ. ಟಿಪ್ಪು ಒಬ್ಬ ಅನಾಗರಿಕ, ಕೂರ್ಗ್‌ನಲ್ಲಿ ಕೊಡವರಿಗೆ, ಮಂಗಳೂರಿನಲ್ಲಿ ಸಿರಿಯನ್ ಕ್ರಿಶ್ಚಿಯನ್ನರಿಗೆ, ಕ್ಯಾಥೋಲಿಕರಿಗೆ, ಕೊಂಕಣಿಗಳಿಗೆ, ಮಲಬಾರ್‌ನ ನಾಯರ್‌ಗಳಿಗೆ ಅನೇಕ ರೀತಿಯಲ್ಲಿ ಕಷ್ಟ ಕೊಟ್ಟಿದ್ದಾನೆ. ಟಿಪ್ಪುವಿನ ನಿಜವಾದ ಪರಂಪರೆಯ ಬಗ್ಗೆ ಜನರಿಗೆ ತಿಳಿಸಲು ನಾವು ಬಯಸುತ್ತೇವೆ ಎಂದು ಉತ್ತರಿಸಿದ್ದಾರೆ.

    1980ರಲ್ಲಿ ಮೈಸೂರು -ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಸೂಪರ್ ಫಾಸ್ಟ್ ರೈಲು ಎಂದು ಪರಿಚಯಿಸಲಾದ ಟಿಪ್ಪು ಎಕ್ಸ್‌ಪ್ರೆಸ್‌ಗೆ ಈಚೆಗಷ್ಟೇ ಒಡೆಯರ್ ಎಕ್ಸ್‌ಪ್ರೆಸ್‌ ಎಂದು ಮರುನಾಮಕರಣ ಮಾಡಲಾಯಿತು. ಈ ಕುರಿತು ಮೈಸೂರು – ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಅವರು ಕಳೆದ ಜುಲೈ ತಿಂಗಳಿನಲ್ಲೇ ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದರು.

    Live Tv
    [brid partner=56869869 player=32851 video=960834 autoplay=true]

  • ನೈಟ್‌ಕ್ಲಬ್ ಪಾರ್ಟಿಯಲ್ಲಿ ರಾಹುಲ್ – ವೀಡಿಯೋ ಫುಲ್ ವೈರಲ್

    ನೈಟ್‌ಕ್ಲಬ್ ಪಾರ್ಟಿಯಲ್ಲಿ ರಾಹುಲ್ – ವೀಡಿಯೋ ಫುಲ್ ವೈರಲ್

    ಕಠ್ಮಂಡು: ಇಲ್ಲಿನ ಕಠ್ಮಂಡುವಿನ ವರ್ಲ್ಡ್‌ಕ್ಲಾಸ್‌ ನೈಟ್‌ಕ್ಲಬ್ ಪಾರ್ಟಿಯೊಂದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಣಿಸಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿದ್ದಾರೆ.

    ಪ್ರಮುಖ ರಾಜಕೀಯ ವಿದ್ಯಮಾನಗಳ ನಡುವೆ ಸದಾ ಬ್ಯುಸಿ ಶೆಡ್ಯೂಲ್‌ನಲ್ಲಿರುವ ರಾಹುಲ್‌ಗಾಂಧಿ ಈ ನಡುವೆಯೂ ಪಾರ್ಟಿಮೂಡ್‌ನಲ್ಲಿ ಕಾಣಿಸಿಕೊಂಡಿದ್ದು ಟೀಕೆಗೆ ಗುರಿಯಾಗಿದ್ದಾರೆ. ಪಾರ್ಟಿಯಲ್ಲಿ ಸ್ನೇಹಿತರೊಟ್ಟಿಗೆ ಎಂಜಾಯ್ ಮಾಡುತ್ತಿರುವ ವೀಡಿಯೋ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

    ಈ ವಿಡಿಯೋವನ್ನು ಬಿಜೆಪಿ ನಾಯಕ ಕಪಿಲ್ ಮಿಶ್ರಾ, `ಯಾರು? ಅವರು ಯಾರು?’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಬಿಜೆಪಿಯ ಸಾಮಾಜಿಕ ಜಾಲತಾಣ ಮುಖ್ಯಸ್ಥ ಅಮಿತ್ ಮಾಳವಿಯಾ ಕೂಡ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

    ರಾಹುಲ್ ಗಾಂಧಿ ಮುಂಬೈ ಮೇಲೆ ದಾಳಿ ನಡೆದಾಗಲೂ ನೈಟ್‌ಕ್ಲಬ್‌ನಲ್ಲಿದ್ದರು. ಅವರ ಪಕ್ಷ ಸ್ಫೋಟಗೊಳ್ಳುತ್ತಿರುವ ಸಮಯದಲ್ಲೂ ನೈಟ್‌ಕ್ಲಬ್‌ನಲ್ಲಿದ್ದಾರೆ ಎಂದು ಕಾಲೆಳೆದಿದ್ದಾರೆ. ಪತ್ರಕರ್ತೆಯ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲು ರಾಹುಲ್‌ ಗಾಂಧಿ ನೇಪಾಳಕ್ಕೆ ಆಗಮಿಸಿದ್ದರು.

  • ಅಂದು ಸೈನಿಕರನ್ನು ಪ್ರಶ್ನಿಸಿದ್ರು, ಈಗ ಲಸಿಕೆಯನ್ನೂ ಪ್ರಶ್ನಿಸುತ್ತಿದ್ದಾರೆ – ಬಿಜೆಪಿ ಟೀಕೆ

    ಅಂದು ಸೈನಿಕರನ್ನು ಪ್ರಶ್ನಿಸಿದ್ರು, ಈಗ ಲಸಿಕೆಯನ್ನೂ ಪ್ರಶ್ನಿಸುತ್ತಿದ್ದಾರೆ – ಬಿಜೆಪಿ ಟೀಕೆ

    ನವದೆಹಲಿ: ಅಂದು ಭಾರತದ ಸೈನಿಕರನ್ನು ಪ್ರಶ್ನಿಸಿದ್ದರು. ಇಂದು ಭಾರತದಲ್ಲಿ ತಯಾರಾದ ಲಸಿಕೆಯ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದು ಬಿಜೆಪಿ ಕಾಂಗ್ರೆಸ್‌ ನಾಯಕರನ್ನು ಟೀಕಿಸಿದೆ.

    ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿದ ಕೊವಾಕ್ಸಿನ್ ಲಸಿಕೆಗೆ ಡಿಸಿಜಿಐ ಅನುಮತಿ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಇದನ್ನು ಟೀಕಿಸಿತ್ತು. ಇದೀಗ ಕಾಂಗ್ರೆಸ್‍ನ ಟೀಕೆ ಮಾಡುವ ಮೂಲಕ ಜನರನ್ನು ಭಯಭೀತಗೊಳಿಸಲು ಮುಂದಾಗುತ್ತಿದೆ ಎನ್ನುವ ಮೂಲಕ ಬಿಜೆಪಿ ಮುಖಂಡರು ಈ ಟೀಕೆಗೆ ತಿರುಗೇಟು ನೀಡಿದ್ದಾರೆ.

    ಲಸಿಕೆಗೆ ಒಪ್ಪಿಗೆ ಸಿಕ್ಕ ಕೂಡಲೇ ಕಾಂಗ್ರೆಸ್ ನಾಯಕರು ಕಳವಳ ವ್ಯಕ್ತಪಡಿಸಿದ್ದರು. ತಿರುವಂತಪುರಂದ ಸಂಸದ, ಮಾಜಿ ಕೇಂದ್ರ ಮಂತ್ರಿ ಶಶಿ ತರೂರ್ ಅವರು ಕೊವಾಕ್ಸಿನ್ ಇನ್ನೂ 6ನೇ ಹಂತದ ಲಸಿಕೆ ಪ್ರಯೋಗ ಪೂರ್ಣಗೊಳಿಸಿಲ್ಲ . ಅವಧಿಗೂ ಮುನ್ನ ಅನುಮತಿ ನೀಡಿರುವುದು ಅಪಾಯಕಾರಿ ಎಂದು ಹೇಳಿದ್ದದ್ದರು.

    ಆನಂದ್‌ ಶರ್ಮಾ ಅವರು,  ಕಡ್ಡಾಯವಾಗಿ ನಿಯಮಗಳು ಮತ್ತು ದತ್ತಾಂಶಗಳನ್ನು ಪರಿಶೀಲನೆಮಾಡಿ ಹೇಗೆ ವಿತರಣೆಗೆ ಅವಕಾಶ ಕೊಡಲಾಗಿದೆ ಎಂದು ವಿವರಿಸುವಂತೆ ಸರ್ಕಾರವನ್ನು ಪ್ರಶ್ನಿಸಿದ್ದರು.

    ಕಾಂಗ್ರೆಸ್ ನಾಯಕರ ಆರೋಪಕ್ಕೆ ನಾಗರೀಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರತಿಕ್ರಿಯಿಸಿ, ಈ ಮೊದಲು ಅವರು ನಮ್ಮ ಸೈನಿಕರ ಶೌರ್ಯವನ್ನು ಪ್ರಶ್ನಿಸಿದರು. ಈಗ ಸ್ವದೇಶಿಯವಾಗಿ ತಯಾರಿಸಿದ 2 ಲಸಿಕೆಗೆ ಡಿಜಿಸಿಐ ಅನುಮೋದನೆ ನೀಡಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

    ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯಾ ಪ್ರತಿಕ್ರಿಯಿಸಿ, ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಡುತ್ತಿರುವ ಟೀಕೆ ಭಯವನ್ನುಂಟು ಮಾಡಿರುವುದು ಇದು ಮೊದಲ ಬಾರಿ ಅಲ್ಲ. ಈ ಹಿಂದೆ ಪೋಲಿಯೋ ಲಸಿಕೆ ನೀಡುವಾಗ ಪ್ರಶ್ನೆ ಮಾಡಿದ್ದರು. ಪೋಲಿಯೋದಂತೆ ಸಾಮಾನ್ಯ ರೋಗವಲ್ಲ ಇದೂ ಮಾರಕ ರೋಗ. ಈ ರೋಗ ಬಂದು ಹೆಚ್ಚಿನ ಜನ ಸಾಯಲಿ ಎಂಬುದು ಪ್ರತಿಪಕ್ಷಗಳ ಬಯಕೆ ಇದ್ದಂತಿದೆ ಎಂದು ಕಾಂಗ್ರೆಸ್‍ನ ಟೀಕೆಗೆ ತಿರುಗೇಟು ನೀಡಿದರು.

     

  • ನಾಳೆಯೊಳಗೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥನನ್ನು ತೆಗೆದುಹಾಕಿ- ಮಾಳವೀಯ ವಿರುದ್ಧ ಸ್ವಾಮಿ ಕಿಡಿ

    ನಾಳೆಯೊಳಗೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥನನ್ನು ತೆಗೆದುಹಾಕಿ- ಮಾಳವೀಯ ವಿರುದ್ಧ ಸ್ವಾಮಿ ಕಿಡಿ

    ನವದೆಹಲಿ: ಪಕ್ಷದ ಐಟಿ ಸೆಲ್ ವಿರುದ್ಧ ಕಿಡಿಕಾರಿದ್ದ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ, ನಾಳೆಯೊಳಗೆ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರನ್ನು ತೆಗೆದು ಹಾಕಬೇಕು ಎಂದು ಪಕ್ಷದ ನಾಯಕರಿಗೆ ಕೊನೆಯ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

    ಟ್ವೀಟ್ ಮಾಡಿ ತಮ್ಮ ಸಂದೇಶವನ್ನು ತಿಳಿಸಿರುವ ಸುಬ್ರಮಣಿಯನ್ ಸ್ವಾಮಿ, ನಾಳೆಯೊಳಗೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಮಾಳವೀಯರನ್ನು ತೆಗೆಯಬೇಕು. ಇದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಬಳಿ ಮಾಡಿಕೊಳ್ಳುವ ನನ್ನ ಐದು ಗ್ರಾಮಗಳ ರಾಜಿ ಮಾಡಿಕೊಳ್ಳುವ ಪ್ರಸ್ತಾಪವಾಗಿದೆ. ಒಂದು ವೇಳೆ ಮಾಳವೀಯ ಅವರನ್ನು ತೆಗೆಯದಿದ್ದರೆ ಪಕ್ಷ ನನ್ನನ್ನು ಸಮರ್ಥಿಸಿಕೊಳ್ಳುವುದಿಲ್ಲ ಎಂದು ತಿಳಿಯಬೇಕಾಗುತ್ತದೆ. ಪಕ್ಷದಲ್ಲಿ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ಯಾವುದೇ ವೇದಿಕೆ ಇಲ್ಲದಿದ್ದರೆ, ನಾನು ನನ್ನನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

    ಈ ಹಿಂದೆಯೂ ಹಲವು ಬಾರಿ ಬಿಜೆಪಿ ಐಟಿ ಸೇಲ್ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಅವರು ಭಾರೀ ಅಸಮಾಧಾನ ಹೊರಹಾಕಿದ್ದರು. ಬಿಜೆಪಿ ಐಟಿ ಸೆಲ್‍ನ ಕೆಲವರು ನನ್ನ ವಿರುದ್ಧ ವೈಯುಕ್ತಿಕ ದಾಳಿ ನಡೆಸುವುದಕ್ಕಾಗಿಯೇ ನಕಲಿ ಟ್ವಿಟ್ಟರ್ ಖಾತೆಗಳನ್ನು ತೆರೆದಿದ್ದಾರೆ. ಆದರೆ ಐಟಿ ಸೆಲ್‍ನ ಹೊಲಸು ಅಭಿಯಾನಕ್ಕೆ ಬಿಜೆಪಿಯನ್ನು ಹೊಣೆಯಾಗಿಸಬಾರದು. ನನ್ನ ವಿರುದ್ಧದ ದಾಳಿಗೆ ನನ್ನ ಹಿಂಬಾಲಕರು ಕೂಡ ವೈಯಕ್ತಿಕ ದಾಳಿ ಆರಂಭಿಸಿದ್ದಾರೆ. ಇದಕ್ಕೆ ನನ್ನನ್ನು ಹೊಣೆಯಾಗಿಸಬಾರದು ಎಂದು ಹೇಳಿದ್ದರು.

    ಸುಬ್ರಮಣಿಯಣ್ ಸ್ವಾಮಿ ಅವರ ಟ್ವೀಟ್ ಬೆನ್ನಲ್ಲೇ ಹಲವು ಅಭಿಮಾನಿಗಳು ಮಾಳವೀಯ ವಿರುದ್ಧ ಟ್ವೀಟ್ ಮಾಡಿದ್ದರು. ಆದರೆ ತಮ್ಮ ಮೇಲಿನ ವೈಯುಕ್ತಿಕ ದಾಳಿ ಮಾಡುವವರಿಗೆ ಪ್ರತಿಕ್ರಿಯೆ ನೀಡುತ್ತಾ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ ಎಂದು ಅವರು ತಮ್ಮ ಅಭಿಮಾನಿಗಳಿಗೆ ಸಲಹೆ ನೀಡಿದ್ದರು.

    ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ ಆರೋಪ ಮಾಡಿದ್ದ ಸುಬ್ರಮಣಿಯನ್ ಸ್ವಾಮಿ ಅವರು, ನನ್ನನ್ನು ಟ್ರೋಲ್ ಮಾಡುವಲ್ಲಿ ಬಿಜೆಪಿ ಐಟಿ ನಿರತವಾಗಿದೆ ಎಂದಿದ್ದರು. ಸ್ವಾಮಿ ಮಾತ್ರವಲ್ಲದೇ ಹಲವು ಬಿಜೆಪಿ ನಾಯಕರು, ಅಮಿತ್ ಮಾಳವೀಯ ಐಟಿ ವಿಭಾಗವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

    ಮೊದಲಿನಿಂದಲೂ ನೇರವಾಗಿಯೇ ಹೇಳಿಕೆ ನೀಡುತ್ತಾ ಬಂದಿರುವ ಬಿಜೆಪಿಯ ಹಿರಿಯ ನಾಯಕರಾಗಿರುವ ಸುಬ್ರಮಣಿಯನ್ ಸ್ವಾಮಿ ಹಲವು ಬಾರಿ ಕೇಂದ್ರದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಪಕ್ಷವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸುತ್ತಿದ್ದರೂ ನೇರವಾಗಿಯೇ ಕೇಂದ್ರವನ್ನು ಟೀಕಿಸುತ್ತಿರುವುದು ಬಿಜೆಪಿ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು. ಈ ಕಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸುಬ್ರಮಣಿಯನ್ ಸ್ವಾಮಿ ಪರ ಈಹ ಪಕ್ಷದಿಂದಲೇ ಟೀಕೆ ಜಾಸ್ತಿಯಾಗುತ್ತಿದೆ.

    ಸುಬ್ರಮಣಿಯನ್ ಸ್ವಾಮಿ ಅವರು 2016 ರಿಂದ ರಾಜ್ಯಸಭಾ ಸದಸ್ಯರಾಗಿ ನಾಮ ನಿರ್ದೆಶನಗೊಂಡಿದ್ದಾರೆ.

  • ವಿವಾದಕ್ಕೆ ಕಾರಣವಾಯ್ತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಮಾಳವೀಯ ಟ್ವೀಟ್

    ವಿವಾದಕ್ಕೆ ಕಾರಣವಾಯ್ತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಮಾಳವೀಯ ಟ್ವೀಟ್

    ನವದೆಹಲಿ: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಚುನಾವಣೆಯ ದಿನಾಂಕನ್ನು ಆಯೋಗ ಪ್ರಕಟಿಸುವ ಮೊದಲೇ ಟ್ವೀಟ್ ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

    ಮಾಳವೀಯ ಮೇ 12 ರಂದು ಚುನಾವಣೆ ನಡೆದರೆ, ಮೇ 18 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಇಂದು ಬೆಳಗ್ಗೆ 11 ಗಂಟೆ 8 ನಿಮಿಷಕ್ಕೆ ಟ್ವೀಟ್ ಮಾಡಿದ್ದರು. ಚುನಾವಣಾ ಆಯೋಗ ಅಧಿಕೃತವಾಗಿ ಪ್ರಕಟಿಸುವ ಮೊದಲೇ ಮಾಳವೀಯ ದಿನಾಂಕವನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈಗ ಭಾರೀ ಚರ್ಚೆಯಾಗುತ್ತಿದೆ.

    ಮಾಳವೀಯ ಟ್ವೀಟ್ ವಿಚಾರವನ್ನು ಮುಂದಿಟ್ಟುಕೊಂಡು ಸುದ್ದಿಗೋಷ್ಠಿಯಲ್ಲಿ ಚುನಾವಣಾ ಆಯುಕ್ತ ರಾವತ್ ಅವರನ್ನು ವರದಿಗಾರರು ಪ್ರಶ್ನೆ ಮಾಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿರುವುದಾಗಿ ತಿಳಿಸಿದ ರಾವತ್ ಮಾಹಿತಿ ಸೋರಿಕೆ ಎಲ್ಲಿ ಆಗಿದೆ ಎನ್ನುವುದನ್ನು ಪತ್ತೆ ಹಚ್ಚುತ್ತೇವೆ ಎಂದು ತಿಳಿಸಿದರು.

    ವಿವಾದ ಜೋರಾಗುತ್ತಿದ್ದಂತೆ ಮಾಳವೀಯ ಈ ಹಿಂದೆ ಮಾಡಿದ್ದ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಕರ್ನಾಟಕ ಚುನಾವಣೆ ಮೇ 12 ರಂದು ಒಂದೇ ಹಂತದಲ್ಲಿ ನಡೆದರೆ ಮೇ 15ರಂದು ಫಲಿತಾಂಶ ಪ್ರಕಟವಾಗಲಿದೆ.  ಇದನ್ನೂ ಓದಿ: ಮೇ 12ರಂದು ಕರ್ನಾಟಕ ಚುನಾವಣೆ- ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ