Tag: Amir Khan Muttaqi

  • ಮಹಿಳಾ ಪತ್ರಕರ್ತರನ್ನು ಹೊರಗಿಟ್ಟಿಲ್ಲ: ಅಫ್ಘಾನ್ ಸಚಿವ ಮುತ್ತಕಿ ಸ್ಪಷ್ಟನೆ

    ಮಹಿಳಾ ಪತ್ರಕರ್ತರನ್ನು ಹೊರಗಿಟ್ಟಿಲ್ಲ: ಅಫ್ಘಾನ್ ಸಚಿವ ಮುತ್ತಕಿ ಸ್ಪಷ್ಟನೆ

    ನವದೆಹಲಿ: ದೆಹಲಿಯಲ್ಲಿ ಅಫ್ಘಾನ್ (Afghanistan) ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ (Amir Khan Muttaqi) ಅವರ ಪತ್ರಿಕಾಗೋಷ್ಠಿಯಿಂದ ಮಹಿಳಾ ಪತ್ರಕರ್ತರನ್ನು ಹೊರಗಿಟ್ಟ ವಿವಾದದ ಬಗ್ಗೆ ತಾಲಿಬಾನ್ (Taliban) ಸ್ಪಷ್ಟನೆ ನೀಡಿದೆ. ಪತ್ರಿಕಾಗೋಷ್ಠಿಗೆ ಯಾವುದೇ ಮಹಿಳಾ ಪತ್ರಕರ್ತರನ್ನು (Woman Journalists) ತಡೆಯಲಿಲ್ಲ ಎಂದು ತಾಲಿಬಾನ್ ತಿಳಿಸಿದೆ.

    ಇದು ‘ತಾಂತ್ರಿಕ ಸಮಸ್ಯೆ’ ಹೊರತು ಉದ್ದೇಶಪೂರ್ವಕವಲ್ಲ. ಪತ್ರಿಕಾಗೋಷ್ಠಿಗೆ ಸಂಬಂಧಿಸಿದಂತೆ ಇದು ಅಲ್ಪಾವಧಿಯ ಸೂಚನೆಯಾಗಿತ್ತು. ಇನ್ನು ಪತ್ರಕರ್ತರ ಸಣ್ಣ ಪಟ್ಟಿಯನ್ನು ನಿರ್ಧರಿಸಲಾಗಿತ್ತು. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರಿಗೆ ಆಹ್ವಾನ ನೀಡಲು ಸಾಧ್ಯವಾಗಿರಲಿಲ್ಲ ಎಂದು ಅಮೀರ್ ಖಾನ್ ಮುತ್ತಕಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬಂಗಾಳದ ಬರ್ಧಮಾನ್ ರೈಲು ನಿಲ್ದಾಣದಲ್ಲಿ ಕಾಲ್ತುಳಿತ – ಹಲವರಿಗೆ ಗಾಯ

    ಮುತ್ತಕಿ ಸ್ವತಃ ಮಹಿಳಾ ಪತ್ರಕರ್ತರನ್ನು ನಿಯಮಿತವಾಗಿ ಭೇಟಿಯಾಗುತ್ತಾರೆ ಮತ್ತು ಅವರ ಪ್ರಶ್ನೆಗಳಿಗೆ ಉತ್ತರಿಸಲು ಯಾವಾಗಲೂ ಸಿದ್ಧರಿರುತ್ತಾರೆ. ಹೀಗಿರುವಾಗ ಭಾರತದಲ್ಲಿ ಮಹಿಳೆಯ ಪ್ರಶ್ನೆಗೆ ಅವರು ಏಕೆ ಆಕ್ಷೇಪಿಸುತ್ತಾರೆ? ಅಂತ ತಾಲಿಬಾನ್ ರಾಜಕೀಯ ಮುಖ್ಯಸ್ಥ ಸುಹೇಲ್ ಶಾಹಿ ಹೇಳಿದ್ದಾರೆ. ಇದನ್ನೂ ಓದಿ: ತಾಲಿಬಾನ್ ಸಚಿವನ ಸುದ್ದಿಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗೆ ನಿಷೇಧ – ನಮ್ಮ ಪಾತ್ರ ಇಲ್ಲ ಅಂತ ಕೇಂದ್ರ ಸ್ಪಷ್ಟನೆ

    ಮಹಿಳಾ ಪತ್ರಕರ್ತರನ್ನು ಹೊರಗಿಟ್ಟಿರವುದು ಭಾರತೀಯ ಮಹಿಳೆಗೆ ಮಾಡಿದ ಅವಮಾನ. ಪ್ರಧಾನಿ ನರೇಂದ್ರ ಮೋದಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸಿದ್ದವು. ಇದನ್ನೂ ಓದಿ: ಭಾರತ-ಅಫ್ಘಾನಿಸ್ತಾನ ಜಂಟಿ ಹೇಳಿಕೆ ಸರಿಯಲ್ಲ; ಅಫ್ಘಾನ್‌ ರಾಯಭಾರಿಗೆ ಪಾಕಿಸ್ತಾನ ಸಮನ್ಸ್‌

  • ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಿ: ಭಾರತ ನೆಲದಿಂದ ಪಾಕ್‌ಗೆ ತಾಲಿಬಾನ್‌ ಸಚಿವ ಸಲಹೆ

    ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಿ: ಭಾರತ ನೆಲದಿಂದ ಪಾಕ್‌ಗೆ ತಾಲಿಬಾನ್‌ ಸಚಿವ ಸಲಹೆ

    – ಉಗ್ರರ ಗುಂಪುಗಳನ್ನು ಅಫ್ಘಾನಿಸ್ತಾನ ನಿರ್ನಾಮ ಮಾಡಿದೆ ಎಂದ ಮುತ್ತಕಿ

    ನವದೆಹಲಿ: ಭಯೋತ್ಪಾದಕ ಗುಂಪುಗಳನ್ನು ಅಫ್ಘಾನಿಸ್ತಾನ ನಿರ್ನಾಮ ಮಾಡಿದೆ. ಪಾಕಿಸ್ತಾನ ಕೂಡ ಅದೇ ಶಾಂತಿಯ ಮಾರ್ಗವನ್ನು ಅನುಸರಿಸಬೇಕು ಎಂದು ಭಾರತದ ನೆಲದಿಂದ ಪಾಕ್‌ಗೆ ತಾಲಿಬಾನ್‌ (Taliban) ಸಲಹೆ ನೀಡಿದೆ.

    ಅಫ್ಘಾನಿಸ್ತಾನದ ತಾಲಿಬಾನ್‌ ವಿದೇಶಾಂಗ ಸಚಿವ ಅಮೀರ್‌ ಖಾನ್‌ ಮುತ್ತಕಿ ಅವರು ಶುಕ್ರವಾರ ಭಾರತಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ, ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ನಂತಹ ಭಯೋತ್ಪಾದಕ ಗುಂಪುಗಳು ಅಫ್ಘಾನ್ ನೆಲದಿಂದ ದೀರ್ಘಕಾಲದಿಂದ ಕಾರ್ಯನಿರ್ವಹಿಸುತ್ತಿವೆ. ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ ತಾಲಿಬಾನ್ ಎಲ್ಲಾ ಭಯೋತ್ಪಾದಕರನ್ನು ನಿರ್ನಾಮ ಮಾಡಿದೆ ಎಂದು ಮುತ್ತಕಿ ತಿಳಿಸಿದ್ದಾರೆ. ಇದನ್ನೂ ಓದಿ: ಕಾಬೂಲ್ ರಾಯಭಾರ ಕಚೇರಿ 4 ವರ್ಷದ ಬಳಿಕ ಪುನಾರಂಭಕ್ಕೆ ಭಾರತ ನಿರ್ಧಾರ – ಎಸ್.ಜೈಶಂಕರ್ ಘೋಷಣೆ

    ಭಯೋತ್ಪಾದಕರಲ್ಲಿ ಒಬ್ಬರೂ ಅಫ್ಘಾನಿಸ್ತಾನದಲ್ಲಿಲ್ಲ. ಅಫ್ಘಾನಿಸ್ತಾನದಲ್ಲಿ ಒಂದು ಇಂಚು ಭೂಮಿಯೂ ಅವರ ನಿಯಂತ್ರಣದಲ್ಲಿಲ್ಲ. ನಾವು (2021 ರಲ್ಲಿ) ಕಾರ್ಯಾಚರಣೆ ನಡೆಸಿದ ಅಫ್ಘಾನಿಸ್ತಾನವು ಬದಲಾಗಿದೆ ಎಂದು ಪಾಕಿಸ್ತಾನಿ ಭಯೋತ್ಪಾದಕ ಗುಂಪುಗಳು ಈ ಹಿಂದೆ ಅಫ್ಘಾನ್ ಮಣ್ಣನ್ನು ಕಾರ್ಯಾಚರಣೆಗೆ ಬಳಸುತ್ತಿದ್ದ ಬಗ್ಗೆ ಕೇಳಿದ ಪ್ರಶ್ನೆಗೆ ಮುತ್ತಕಿ ಪ್ರತಿಕ್ರಿಯಿಸಿದ್ದಾರೆ.

    ಗಡಿಯಾಚೆಗಿನ ಭಯೋತ್ಪಾದನೆಯ ಬಲಿಪಶುವಾಗಿರುವ ಭಾರತೀಯ ನೆಲದಿಂದ ಅವರು ಪಾಕಿಸ್ತಾನಕ್ಕೆ ಮುತ್ತಕಿ ಒಂದು ಸಂದೇಶವನ್ನು ನೀಡಿದ್ದಾರೆ. ‘ಶಾಂತಿಗಾಗಿ ಅಫ್ಘಾನಿಸ್ತಾನ ಮಾಡಿದಂತೆ ಇತರ ದೇಶಗಳು ಸಹ ಅಂತಹ ಭಯೋತ್ಪಾದಕ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳಲಿ’ ಎಂದು ಕರೆ ನೀಡಿದ್ದಾರೆ.

    ಭಾರತಕ್ಕೆ ಮುತ್ತಕಿ ಅವರ ಭೇಟಿಯು ಉಭಯ ದೇಶಗಳ ರಾಜತಾಂತ್ರಿಕ ಸಂಬಂಧಗಳನ್ನು ಪುನಸ್ಥಾಪಿಸಲು ಸಹಕಾರಿಯಾಗಿದೆ. ಭಾರತವು ಕಾಬೂಲ್‌ನಲ್ಲಿರುವ ತನ್ನ ತಾಂತ್ರಿಕ ಮಿಷನ್‌ ಅನ್ನು ರಾಯಭಾರ ಕಚೇರಿಯಾಗಿ ಮೇಲ್ದರ್ಜೆಗೇರಿಸಲಿದೆ ಎಂದು ಮುತ್ತಕಿ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಜೈಶಂಕರ್‌ ತಿಳಿಸಿದ್ದಾರೆ.

  • ಕಾಬೂಲ್ ರಾಯಭಾರ ಕಚೇರಿ 4 ವರ್ಷದ ಬಳಿಕ ಪುನಾರಂಭಕ್ಕೆ ಭಾರತ ನಿರ್ಧಾರ – ಎಸ್.ಜೈಶಂಕರ್ ಘೋಷಣೆ

    ಕಾಬೂಲ್ ರಾಯಭಾರ ಕಚೇರಿ 4 ವರ್ಷದ ಬಳಿಕ ಪುನಾರಂಭಕ್ಕೆ ಭಾರತ ನಿರ್ಧಾರ – ಎಸ್.ಜೈಶಂಕರ್ ಘೋಷಣೆ

    ನವದೆಹಲಿ: ಕಾಬೂಲ್ (Kabul) ರಾಯಭಾರ ಕಚೇರಿಯನ್ನು 4 ವರ್ಷಗಳ ಬಳಿಕ ಪುನಾರಂಭಿಸಲು ಭಾರತ ನಿರ್ಧರಿಸಿದೆ. ವಿದೇಶಾಂಗ ಸಚಿವ ಜೈಶಂಕರ್ (S.Jaishankar) ಮತ್ತು ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ (Amir Khan Muttaqi) ನಿಯೋಗದ ಸಭೆಯ ಬಳಿಕ ಭಾರತ ಈ ಬಗ್ಗೆ ಘೋಷಣೆ ಮಾಡಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಜೈಶಂಕರ್, ಕಾಬೂಲ್‌ನಲ್ಲಿರುವ ಭಾರತದ ತಾಂತ್ರಿಕ ಮಿಷನ್‌ನ್ನು ಭಾರತದ ರಾಯಭಾರ ಕಚೇರಿಯ ಸ್ಥಾನಮಾನಕ್ಕೆ ಉನ್ನತೀಕರಿಸಲಾಗಿದೆ. ಈ ನಿರ್ಧಾರ ಅಫ್ಘಾನಿಸ್ತಾನದೊಂದಿಗೆ ಭಾರತದ ಸಂಬಂಧವನ್ನು ಗಟ್ಟಿಗೊಳಿಸುವ ನಮ್ಮ ಉದ್ದೇಶವನ್ನು ಎತ್ತಿ ತೋರಿಸುತ್ತದೆ. ಅಲ್ಲದೇ ಇದು ಅಫ್ಘಾನ್ ಜನರು ಮತ್ತು ಅವರ ಭವಿಷ್ಯದ ಬಗ್ಗೆ ಭಾರತದ ಬದ್ಧತೆಯಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಬೂಲ್‌ ಮೇಲೆ ಪಾಕ್‌ ಏರ್‌ಸ್ಟ್ರೈಕ್‌ – ಇಸ್ಲಾಮಾಬಾದ್‌, ರಾವಲ್ಪಿಂಡಿಯಲ್ಲಿ ಇಂಟರ್‌ನೆಟ್‌ ಬಂದ್‌

    ಭಾರತವು ಅಫ್ಘಾನಿಸ್ತಾನದ ಮೂಲಸೌಕರ್ಯ ಉಪಕ್ರಮಗಳಿಗೆ ಬೆಂಬಲವನ್ನು ನೀಡುತ್ತಿದೆ. ಇದರ ಜೊತೆ ಈಗಾಗಲೇ ನಡೆಯುತ್ತಿರುವ ಇತರ ಯೋಜನೆಗಳನ್ನು ಪೂರ್ಣಗೊಳಿಸುವ ಕ್ರಮಗಳನ್ನು ನಾವು ಚರ್ಚಿಸಬಹುದು. ಇದರ ಜೊತೆ ಭಾರತವು ಆರು ಹೊಸ ಅಭಿವೃದ್ಧಿ ಯೋಜನೆಗಳನ್ನು ಸಹ ಪ್ರಾರಂಭಿಸಲಿದೆ. ಅವುಗಳ ವಿವರಗಳನ್ನು ಮಾತುಕತೆಯ ನಂತರ ಅಂತಿಮಗೊಳಿಸಲಾಗುವುದು.

    ಎರಡೂ ರಾಷ್ಟ್ರಗಳು ಗಡಿಯಾಚೆಗಿನ ಭಯೋತ್ಪಾದನೆಯ ಬೆದರಿಕೆ ಎದುರಿಸುತ್ತಿದೆ. ಭಯೋತ್ಪಾದನೆಯನ್ನು ಎದುರಿಸಲು ನಾವು ಪ್ರಯತ್ನ ಮುಂದುವರಿಸಬೇಕು ಎಂದು ಅವರು ಹೇಳಿದರು. ಇದೇ ವೇಳೆ ಪಹಲ್ಗಾಮ್‌ ದಾಳಿಯ ನಡುವೆ ಎರಡು ದೇಶಗಳ ನಡುವಿನ ಸಂಬಂಧ ಹಾಗೂ ಮುಂದುವರಿದಿದ್ದ ವ್ಯಾಪಾರದ ವಿಚಾರ ಚರ್ಚೆಯಾಯಿತು.

    ಭಾರತವು ಅಫ್ಘಾನ್ ಆಸ್ಪತ್ರೆಗಳಿಗೆ MRI ಮತ್ತು CT ಸ್ಕ್ಯಾನ್ ಯಂತ್ರಗಳನ್ನು ಒದಗಿಸಲಿದೆ. ರೋಗನಿರೋಧಕ ಮತ್ತು ಕ್ಯಾನ್ಸರ್ ಔಷಧಿಗಳಿಗೆ ಲಸಿಕೆಗಳನ್ನು ಒದಗಿಸಲಿದೆ. 20 ಆಂಬ್ಯುಲೆನ್ಸ್ ದೇಣಿಗೆಯ ಭಾಗವಾಗಿ ಐದು ಆಂಬ್ಯುಲೆನ್ಸ್‌ಗಳನ್ನು ಅಫ್ಘಾನ್ ನಿಯೋಗಕ್ಕೆ ಇದೇ ವೇಳೆ ಅವರು ಹಸ್ತಾಂತರಿಸಿದರು.

    ಇತ್ತೀಚಿಗೆ ಅಫ್ಘಾನ್‌ನಲ್ಲಿ ಭೂಕಂಪ ಸಂಭವಿಸಿದ್ದಾಗ ಭಾರತವು ಕೆಲವೇ ಗಂಟೆಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ತಲುಪಿಸಿತ್ತು. ಭೂಕಂಪ ಪೀಡಿತ ಪ್ರದೇಶಗಳಲ್ಲಿ ಮನೆಗಳನ್ನು ಪುನರ್ನಿರ್ಮಿಸಲು ಸಹಾಯವನ್ನು ನೀಡಿತ್ತು. ನೆರವು ಇನ್ನೂ ಮುಂದುವರೆದಿದೆ. ಇನ್ನೂ ಕಾಬೂಲ್ ಮತ್ತು ನವದೆಹಲಿ ನಡುವೆ ಹೆಚ್ಚುವರಿ ವಿಮಾನಗಳ ಹಾರಾಟವನ್ನು ಚರ್ಚಿಸಿ, ವ್ಯಾಪಾರ ಮತ್ತು ವಾಣಿಜ್ಯವನ್ನು ಹೆಚ್ಚಿಸುವಲ್ಲಿ ಆಸಕ್ತಿ ಇದೆ ಎಂದು ಜೈಶಂಕರ್ ಹೇಳಿದರು.

    ವಿದ್ಯಾರ್ಥಿವೇತನ ಕಾರ್ಯಕ್ರಮಗಳು ಮತ್ತು ತರಬೇತಿಯನ್ನು ಉಲ್ಲೇಖಿಸಿ ಆಫ್ಘನ್ ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಭಾರತದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಏಪ್ರಿಲ್ 2025 ರಲ್ಲಿ ಹೊಸದಾಗಿ ಪರಿಚಯಿಸಲಾದ ವೀಸಾ ಮಾಡ್ಯೂಲ್ ವೈದ್ಯಕೀಯ, ವ್ಯವಹಾರ ಮತ್ತು ವಿದ್ಯಾರ್ಥಿ ಉದ್ದೇಶಗಳಿಗಾಗಿ ನೀಡಲಾಗುವ ವೀಸಾಗಳಲ್ಲಿ ಗಮನಾರ್ಹವಾಗಿ ಹೆಚ್ಚಳವಾಗಿದೆ. ಇದೇ ವೇಳೆ ಅಫ್ಘಾನ್‌ ಕ್ರಿಕೆಟ್‌ ತಂಡಕ್ಕೆ ತನ್ನ ಬೆಂಬಲ ನೀಡಲಿದೆ ಎಂದು ಇದೇ ವೇಳೆ ಅವರು ಹೇಳಿದರು. ಇದನ್ನೂ ಓದಿ: ಭಯೋತ್ಪಾದಕ ಗುಂಪು ಜೆಇಎಂ ಮಹಿಳಾ ವಿಭಾಗ ಆರಂಭ – ‘ಆಪರೇಷನ್‌ ಸಿಂಧೂರ’ದಲ್ಲಿ ಗಂಡನ ಕಳೆದುಕೊಂಡ ಮಹಿಳೆಗೆ ಚುಕ್ಕಾಣಿ

  • ಭಾರತಕ್ಕೆ ಆಗಮಿಸಿದ ತಾಲಿಬಾನ್‌ ವಿದೇಶಾಂಗ ಸಚಿವ

    ಭಾರತಕ್ಕೆ ಆಗಮಿಸಿದ ತಾಲಿಬಾನ್‌ ವಿದೇಶಾಂಗ ಸಚಿವ

    – ಅಫ್ಘಾನ್‌ನಲ್ಲಿ ತಾಲಿಬಾನ್‌ ಅಧಿಕಾರಕ್ಕೆ ಏರಿದ ಬಳಿಕ ಮೊದಲ ಭೇಟಿ

    ನವದೆಹಲಿ: ತಾಲಿಬಾನ್‌ ಸರ್ಕಾರದ ಅಫ್ಘಾನ್‌ ವಿದೇಶಾಂಗ ಸಚಿವ ಅಮೀರ್‌ ಖಾನ್‌ ಮುತ್ತಕಿ (Amir Khan Muttaqi)  ದೆಹಲಿಗೆ ಆಗಮಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ (Afghanistan) ತಾಲಿಬಾನ್‌ ಅಧಿಕಾರ ವಹಿಸಿಕೊಂಡ ನಂತರ ಅಲ್ಲಿನ ಸಚಿವರೊಬ್ಬರ ಮೊದಲ ಭಾರತ ಭೇಟಿ ಇದಾಗಿದೆ.

    ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮುತಾಕಿ ಅವರಿಗೆ ಅಂತರರಾಷ್ಟ್ರೀಯ ಪ್ರಯಾಣ ನಿರ್ಬಂಧಗಳಿಂದ ತಾತ್ಕಾಲಿಕ ವಿನಾಯಿತಿ ನೀಡಿದ್ದರಿಂದ ಮುತ್ತಕಿ ಭಾರತಕ್ಕೆ ಬಂದಿದ್ದಾರೆ. ಭದ್ರತಾ ಮಂಡಳಿ ಅ.9 ಮತ್ತು 16 ರ ನಡುವೆ ಭಾರತಕ್ಕೆ (India) ಭೇಟಿ ನೀಡಲು ಅವಕಾಶ ನೀಡಿದೆ.

    2021ರ ಆಗಸ್ಟ್‌ನಲ್ಲಿ ತಾಲಿಬಾನ್ (Taliban) ಅಧಿಕಾರ ವಶಪಡಿಸಿಕೊಂಡ ನಂತರ ಮೊದಲ ಉನ್ನತ ಮಟ್ಟದ ಸಭೆ ನಡೆಯಲಿರುವ ಕಾರಣ ಭಾರತ-ಅಫ್ಘಾನ್‌ ಸಂಬಂಧದ ಹೊಸ ಅಧ್ಯಾಯ ತೆರೆಯಲಿದೆ.

    ಜೂನ್‌ 2022 ರಲ್ಲಿ ಹಿರಿಯ ರಾಜತಾಂತ್ರಿಕ ಜೆಪಿ ಸಿಂಗ್ ನೇತೃತ್ವದ ತಂಡ ಕಾಬೂಲ್‌ನಲ್ಲಿ ಅಮೀರ್‌ ಖಾನ್‌ ಮುತ್ತಕಿ ಅವರನ್ನು ಭೇಟಿಯಾಗಿದ್ದರು. ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಇದು ಭಾರತದ ಮೊದಲ ಭೇಟಿಯಾಗಿತ್ತು. ಇದನ್ನೂ ಓದಿ:  ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಘರ್ಷಣೆ; 11 ಪಾಕಿಸ್ತಾನಿ ಸೈನಿಕರು, ಟಿಟಿಪಿಯ 19 ಉಗ್ರರು ಸಾವು

    ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಹಿರಿಯ ಐಎಫ್‌ಎಸ್ ಅಧಿಕಾರಿ ಜೆ.ಪಿ. ಸಿಂಗ್ ಸೇರಿದಂತೆ ಭಾರತೀಯ ಅಧಿಕಾರಿಗಳು ಮುತ್ತಕಿ ಮತ್ತು ಇತರ ತಾಲಿಬಾನ್ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆಗಾಗ ದುಬೈನಂತಹ ತಟಸ್ಥ ಸ್ಥಳಗಳಲ್ಲಿ ಭೇಟಿಯಾಗುತ್ತಿದ್ದರು.

    ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ದುಬೈನಲ್ಲಿ ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರನ್ನು ಭೇಟಿಯಾಗಿದ್ದರು. ಭಾರತವು ಅಫ್ಘಾನಿಸ್ತಾನಕ್ಕೆ ನೀಡುತ್ತಿರುವ ಮಾನವೀಯ ನೆರವು, ವಿಶೇಷವಾಗಿ ಆರೋಗ್ಯ ವಲಯವನ್ನು ಬಲಪಡಿಸುವುದು ಮತ್ತು ನಿರಾಶ್ರಿತರ ಪುನರ್ವಸತಿಯನ್ನು ಬೆಂಬಲಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

    ಕೋವಿಡ್‌ ಸಮಯದಲ್ಲಿ ಭಾರತ ಉಚಿತವಾಗಿ ಲಸಿಕೆಯನ್ನು ನೀಡಿತ್ತು. ಈಗಲೂ ಭಾರತ ಅಫ್ಘಾನಿಸ್ತಾನಕ್ಕೆ ಆಹಾರ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ.

    ಭಾರತವು ಪಾಕಿಸ್ತಾನದ ವಿರುದ್ಧ ಯಶಸ್ವಿಯಾಗಿ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನಂತರ ಮೇ 15 ರಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮುತ್ತಕಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದರು. ಇದು 2021 ರ ನಂತರದ ಮೊದಲ ಸಚಿವ ಮಟ್ಟದ ಸಂಪರ್ಕವಾಗಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ತಾಲಿಬಾನ್ ಖಂಡಿಸಿದ್ದಕ್ಕಾಗಿ ಜೈಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಭಾರತ ಮತ್ತು ಅಫ್ಘಾನ್ ಜನರೊಂದಿಗಿನ ಸಾಂಪ್ರದಾಯಿಕ ಸ್ನೇಹವನ್ನು ಪುನರುಚ್ಚರಿಸಿದರು.

     

  • ಅ.9 ರಂದು ಭಾರತಕ್ಕೆ ತಾಲಿಬಾನ್‌ ಸರ್ಕಾರದ ಅಫ್ಘಾನ್‌ ವಿದೇಶಾಂಗ ಸಚಿವ ಭೇಟಿ

    ಅ.9 ರಂದು ಭಾರತಕ್ಕೆ ತಾಲಿಬಾನ್‌ ಸರ್ಕಾರದ ಅಫ್ಘಾನ್‌ ವಿದೇಶಾಂಗ ಸಚಿವ ಭೇಟಿ

    ಕಾಬೂಲ್: ತಾಲಿಬಾನ್‌ ಸರ್ಕಾರದ ಅಫ್ಘಾನ್‌ ವಿದೇಶಾಂಗ ಸಚಿವ ಅಮೀರ್‌ ಖಾನ್‌ ಮುತ್ತಕಿ ಅವರು ಇದೇ ಅ.9 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ.

    2021ರ ಆಗಸ್ಟ್‌ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರ ವಶಪಡಿಸಿಕೊಂಡ ನಂತರ ಭಾರತಕ್ಕೆ ಮೊದಲ ಉನ್ನತ ಮಟ್ಟದ ಭೇಟಿಯಾಗಲಿದೆ. ಇದು ಭಾರತ-ತಾಲಿಬಾನ್ ಸಂಬಂಧದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ.

    ಮುತಾಕಿ ಅವರಿಗೆ ಅಂತರರಾಷ್ಟ್ರೀಯ ಪ್ರಯಾಣ ನಿರ್ಬಂಧಗಳಿಂದ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ದೃಢಪಡಿಸಿದೆ. ಇದರಿಂದಾಗಿ ಅವರು ಅ.9 ಮತ್ತು 16 ರ ನಡುವೆ ಭಾರತಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ.

    ಭಾರತೀಯ ರಾಜತಾಂತ್ರಿಕ ವಲಯಗಳು ತಿಂಗಳುಗಳಿಂದ ಈ ಕ್ಷಣಕ್ಕಾಗಿ ತಯಾರಿ ನಡೆಸುತ್ತಿವೆ. ಜನವರಿಯಿಂದ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಹಿರಿಯ ಐಎಫ್‌ಎಸ್ ಅಧಿಕಾರಿ ಜೆ.ಪಿ. ಸಿಂಗ್ ಸೇರಿದಂತೆ ಭಾರತೀಯ ಅಧಿಕಾರಿಗಳು ಮುತ್ತಕಿ ಮತ್ತು ಇತರ ತಾಲಿಬಾನ್ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆಗಾಗ್ಗೆ ದುಬೈನಂತಹ ತಟಸ್ಥ ಸ್ಥಳಗಳಲ್ಲಿ ಭೇಟಿಯಾಗುತ್ತಾರೆ.

    ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ದುಬೈನಲ್ಲಿ ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರನ್ನು ಭೇಟಿಯಾಗಿದ್ದರು. ಭಾರತವು ಅಫ್ಘಾನಿಸ್ತಾನಕ್ಕೆ ನೀಡುತ್ತಿರುವ ಮಾನವೀಯ ನೆರವು, ವಿಶೇಷವಾಗಿ ಆರೋಗ್ಯ ವಲಯವನ್ನು ಬಲಪಡಿಸುವುದು ಮತ್ತು ನಿರಾಶ್ರಿತರ ಪುನರ್ವಸತಿಯನ್ನು ಬೆಂಬಲಿಸುವ ಬಗ್ಗೆ ಚರ್ಚೆ ನಡೆಸಲಾಯಿತು.

    ಭಾರತವು ಪಾಕಿಸ್ತಾನದ ವಿರುದ್ಧ ಯಶಸ್ವಿಯಾಗಿ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನಂತರ ಮೇ 15 ರಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮುತ್ತಕಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದರು. ಇದು 2021 ರ ನಂತರದ ಮೊದಲ ಸಚಿವ ಮಟ್ಟದ ಸಂಪರ್ಕವಾಗಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ತಾಲಿಬಾನ್ ಖಂಡಿಸಿದ್ದಕ್ಕಾಗಿ ಜೈಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಭಾರತ ಮತ್ತು ಅಫ್ಘಾನ್ ಜನರೊಂದಿಗಿನ ಸಾಂಪ್ರದಾಯಿಕ ಸ್ನೇಹವನ್ನು ಪುನರುಚ್ಚರಿಸಿದರು.