Tag: Amethi

  • ‘Sher’ Will Roar | ನಿಮಿಷಕ್ಕೆ 700 ಬುಲೆಟ್‌ ಹಾರಿಸಬಲ್ಲ `AK-203′ ರೈಫಲ್‌ ಸೇನೆಗೆ!

    ‘Sher’ Will Roar | ನಿಮಿಷಕ್ಕೆ 700 ಬುಲೆಟ್‌ ಹಾರಿಸಬಲ್ಲ `AK-203′ ರೈಫಲ್‌ ಸೇನೆಗೆ!

    ಲಕ್ನೋ: ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ ರಕ್ಷಣಾ ವಲಯಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಅದರ ಹಾದಿಯಾಗಿ ಒಂದಿಲ್ಲೊಂದು ಅಸ್ತ್ರಗಳು ಭಾರತೀ ಸೇನಾ (Indian Army) ಬತ್ತಳಿಕೆ ಸೇರಿಕೊಳ್ಳುತ್ತಿವೆ. ಎರಡುವಾರಗಳ ಹಿಂದೆಯಷ್ಟೇ ಮೋದಿ ಸರ್ಕಾರ 1 ಲಕ್ಷ ಕೋಟಿ ಮೊತ್ತದ ರಕ್ಷಣಾ ಯೋಜನೆಗಳಿಗೆ ಅನುಮತಿ ನೀಡಿತ್ತು. ಇದೀಗ ಸ್ವದೇಶಿ ನಿರ್ಮಿತ ಅತ್ಯಾಧುನಿಕ ಎಕೆ-203 ರೈಫಲ್‌ (AK-203 Assault Rifles) ಅನ್ನು ಭಾರತೀಯ ಸೇನೆಗೆ ಪೂರೈಸಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

    ಹೌದು, ಭಾರತ-ರಷ್ಯಾ ಸಹಯೋಗದ ‘ಇಂಡೋ-ರಷ್ಯನ್‌ ರೈಫಲ್ಸ್‌ ಪ್ರೈವೇಟ್‌ ಲಿಮಿಟೆಡ್‌’ (IRRPL) ಉತ್ತರ ಪ್ರದೇಶದ ಅಮೇಠಿ ಜಿಲ್ಲೆಯ ಕೊರ್ವಾದ ಘಟಕದಲ್ಲಿ 48,000 ಎಕೆ – 203 ರೈಫಲ್‌ಗಳನ್ನು ಉತ್ಪಾದಿಸಿ, ಸೇನೆಗೆ ಪೂರೈಸಿದೆ. ಹೊಸ ಕಂತಿನಲ್ಲಿ 7,000 ರೈಫಲ್‌ಗಳು ಪೂರೈಕೆಯಾಗಲಿವೆ. ಇದನ್ನೂ ಓದಿ: 80,000 ನಗ್ನ ಫೋಟೋಸ್‌, ಸೆಕ್ಸ್‌ ಮಾಡಿ ಬೌದ್ಧ ಬಿಕ್ಕುಗಳ ಟ್ರ್ಯಾಪ್‌ – 100 ಕೋಟಿ ಸುಲಿಗೆ ಮಾಡಿದ್ದ ಹನಿ ಲೇಡಿ ಅರೆಸ್ಟ್‌

    ಮುಂದಿನ 2-3 ವಾರಗಳಲ್ಲಿ ಶೇ. 50ರಷ್ಟು ದೇಶೀಯ ನಿರ್ಮಿತ ಸುಮಾರು 7,000 ಸಾವಿರ AK-203 ರೈಫಲ್‌ಗಳು, ಈ ವರ್ಷಾಂತ್ಯದ ವೇಳೇ 75,000 ಹಾಗೂ 2026ರ ವೇಳೆಗೆ ಸರಿಸುಮಾರು 1 ಲಕ್ಷ ರೈಫಲ್‌ಗಳು ಸೇನೆಗೆ ಪೂರೈಕೆಯಾಗಲಿವೆ. ನಂತರದಲ್ಲಿ ಅರೆಸೇನಾ ಪಡೆಗಳು ಹಾಗೂ ಪೊಲೀಸರಿಗೂ ಲಭ್ಯವಾಗಲಿದ್ದು, ಶೀಘ್ರದಲ್ಲೇ ಶೇ. 100ರಷ್ಟು ಸ್ವದೇಶಿ ನಿರ್ಮಿತ ರೈಫಲ್‌ಗಳ ಉತ್ಪಾದನೆ ಶುರುವಾಗಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ನನಗೂ ನನ್ನ ಪತ್ನಿಗೂ ಏನಾದ್ರು ಆದ್ರೆ ಅದಕ್ಕೆ ಪಾಕ್‌ ಸೇನಾ ಮುಖ್ಯಸ್ಥನೇ ಕಾರಣ: ಇಮ್ರಾನ್‌ ಖಾನ್‌ ಹೇಳಿಕೆ

    ಸದ್ಯ 50% ರಷ್ಟು ಸ್ವದೇಶಿ ರೈಫಲ್‌ಗಳನ್ನ ಉತ್ಪಾದಿಸಲಾಗುತ್ತಿದ್ದು, 100% ರಷ್ಟು ರೈಫಲ್‌ಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ರಕ್ಷಣಾ ಸಚಿವಾಲಯ ಮತ್ತು IRRPL ನಡುವೆ 10 ವರ್ಷಗಳಿಗೆ ಒಪ್ಪಂದವಾಗಿದ್ದು, ಈ ಅವಧಿಯೊಳಗೆ 6,01,427 ಎಕೆ-203 ಅಸಾಲ್ಟ್ ರೈಫಲ್‌ಗಳಿಗೆ ಆರ್ಡರ್‌ ನೀಡಲಾಗಿದೆ. 2025ರ ನಂತರ ವಾರ್ಷಿಕ 70 ಸಾವಿರ ರೈಫಲ್‌ ಉತ್ಪಾದಿಸುವ ನಿರೀಕ್ಷೆಯಿದ್ದು, 2030ರ ಹೊತ್ತಿಗೆ 6 ಲಕ್ಷ ರೈಫಲ್‌ ಪೂರೈಕೆ ಆಗಲಿದೆ ಎಂದು ಐಆರ್‌ಆರ್‌ಪಿಎಲ್‌ನ ಸಿಎಂಡಿ ಮೇಜರ್ ಜನರಲ್ ಎಸ್‌ಕೆ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ರಾಹುಲ್‌ನ ಜೈಲಿಗಟ್ಟುತ್ತೀನಿ, ದೇಶದ ಅನೇಕ ಜೈಲುಗಳು ಗಾಂಧಿ ಕುಟುಂಬಕ್ಕೆ ಕಾಯ್ತಿವೆ: ಅಸ್ಸಾಂ ಸಿಎಂ

    ʻಶೇರ್‌ʼ ವಿಶೇಷತೆ ಏನು?
    * 3.8 ಕೆ.ಜಿ ತೂಕ ಹೊಂದಿದ್ದು, ಕಾರ್ಯಾಚರಣೆ ಸುಲಭ
    * ಹಳೆಯ ರೈಫಲ್‌ಗಳಿಗೆ ಹೋಲಿಸಿದ್ರೆ ಹೆಚ್ಚಿನ ನಿಖರತೆ
    * ಪ್ರತಿ ನಿಮಿಷಕ್ಕೆ 700 ಸುತ್ತು ಗುಂಡು ಹಾರಿಸಬಲ್ಲ ತಾಕತ್ತು
    * 800 ಮೀಟರ್‌ ರೇಂಜ್‌ ಸಾಮರ್ಥ್ಯ ಹೊಂದಿದೆ.

  • ಅಮೇಥಿಯಲ್ಲಿ ಸ್ಮೃತಿ ಇರಾನಿಗೆ ಸೋಲು- ಗಾಂಧಿ ಕುಟುಂಬದ ಆಪ್ತನಿಗೆ ಗೆಲುವು

    ಅಮೇಥಿಯಲ್ಲಿ ಸ್ಮೃತಿ ಇರಾನಿಗೆ ಸೋಲು- ಗಾಂಧಿ ಕುಟುಂಬದ ಆಪ್ತನಿಗೆ ಗೆಲುವು

    ಲಕ್ನೋ: ಅಮೇಥಿ ಲೋಕಸಭಾ ಕ್ಷೇತ್ರದಿಂದ (Amethi Loksabha constituency) ಎರಡು ಬಾರಿ ಸಂಸದೆಯಾಗಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಈ ಬಾರಿ ಸೋಲನುಭವಿಸಿದ್ದಾರೆ.

    ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಅವರು  1,10,684 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಕಿಶೋರಿ ಲಾಲ್‌ ಅವರಿಗೆ 3,76,983 ಮತಗಳು ಬಿದ್ದರೆ, ಸ್ಮೃತಿ ಇರಾನಿಯವರಿಗೆ 2,66,299 ಮತಗಳು ಬಿದ್ದಿವೆ. ಇದು ಇನ್ನೂ ಬದಲಾಗಬಹುದು.

    ಉತ್ತರ ಪ್ರದೇಶದ 80 ಸಂಸದೀಯ ಕ್ಷೇತ್ರಗಳಲ್ಲಿ ಒಂದಾದ ಅಮೇಥಿ ಲೋಕಸಭಾ ಕ್ಷೇತ್ರವು ಐತಿಹಾಸಿಕವಾಗಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಬಿಜೆಪಿಯ ಕೇಂದ್ರ ಸಚಿವೆ ಸ್ಮೃತಿ ಇರಾನಿ 2019 ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದರು. ನೆಹರೂ-ಗಾಂಧಿ ಭದ್ರಕೋಟೆಯಾದ ಅಮೇಥಿಯಿಂದ ಆಗಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು 50 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದರು.

    ಸ್ಮೃತಿ ಇರಾನಿ ಅವರು ಗುಜರಾತ್‌ನಿಂದ 2011 ರಲ್ಲಿ ಮೊದಲ ಬಾರಿಗೆ ರಾಜ್ಯಸಭೆಗೆ ಪ್ರವೇಶಿಸಿದ್ದರು. ನಂತರ ಆಗಸ್ಟ್ 2017 ರಲ್ಲಿ ಮರು ಆಯ್ಕೆಯಾದರು. ಪ್ರಸ್ತುತ ಅವರು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಜವಳಿ ಖಾತೆ ಸಚಿವರಾಗಿದ್ದಾರೆ. ಮೇ 2014 ಮತ್ತು ಜುಲೈ 2016 ರ ನಡುವೆ ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಜುಲೈ 2017 ರಿಂದ ಮೇ 2018 ರವರೆಗೆ ಅವರು ಮಾಹಿತಿ ಮತ್ತು ಪ್ರಸಾರ ಸಚಿವಾಲಯವನ್ನು ನಿರ್ವಹಿಸಿದರು.

    ಅಮೇಥಿ ಕ್ಷೇತ್ರವು ಐದು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಕ್ಷೇತ್ರದಲ್ಲಿ ಮೇ 20 ರಂದು ಆರನೇ ಹಂತದಲ್ಲಿ ಅಮೇಥಿ ಸ್ಥಾನಕ್ಕೆ ಮತದಾನ ನಡೆಯಿತು. ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ವಿಚಾರದಲ್ಲಿ ಅಮೇಥಿ ಮತ್ತು ರಾಯ್ ಬರೇಲಿಯನ್ನು ಸಮಾನವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದ್ದರು.

  • ಮೋದಿಯಂಥ ವ್ಯಕ್ತಿಯೊಂದಿಗೆ ಚರ್ಚಿಸಲು ರಾಹುಲ್‌ ಗಾಂಧಿ ಪ್ರಧಾನಿ ಅಭ್ಯರ್ಥಿಯೇ? – ಸ್ಮೃತಿ ಇರಾನಿ ವ್ಯಂಗ್ಯ

    ಮೋದಿಯಂಥ ವ್ಯಕ್ತಿಯೊಂದಿಗೆ ಚರ್ಚಿಸಲು ರಾಹುಲ್‌ ಗಾಂಧಿ ಪ್ರಧಾನಿ ಅಭ್ಯರ್ಥಿಯೇ? – ಸ್ಮೃತಿ ಇರಾನಿ ವ್ಯಂಗ್ಯ

    ಲಕ್ನೋ: ರಾಹುಲ್ ಗಾಂಧಿ (Rahul Gandhi) ಅವರು ʻಇಂಡಿಯಾʼ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾ? ಪ್ರಧಾನಿ ಮೋದಿಯಂತಹ ವ್ಯಕ್ತಿಯೊಂದಿಗೆ ಚರ್ಚೆ ಮಾಡಲು ಸಾಧ್ಯವೇ? ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ವ್ಯಂಗ್ಯವಾಡಿದ್ದಾರೆ.

    ಲೋಕಸಭಾ ಚುನಾವಣೆಗೆ Lok Sabha Election) ಸಂಬಂಧಿಸಿದಂತೆ ಪ್ರಮುಖ ವಿಷಯಗಳ ಕುರಿತು ಪ್ರಧಾನಿ ಮೋದಿ (PM Modi) ಅವರೊಂದಿಗೆ ಸಾರ್ವಜನಿಕ ಚರ್ಚೆಗೆ ಆಹ್ವಾನ ಸ್ವೀಕರಿಸಿದ ನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಲೇವಡಿ ಮಾಡಿದ್ದಾರೆ.

    ಬಿಜೆಪಿಯ ಓರ್ವ ಸಾಮಾನ್ಯ ಕಾರ್ಯಕರ್ತನ ವಿರುದ್ಧ ಸ್ಪರ್ಧಿಸಲು ಧೈರ್ಯವಿಲ್ಲದವರು ಬಡಾಯಿ ಕೊಚ್ಚಿಕೊಳ್ಳುವುದನ್ನು ಬಿಡಬೇಕು. ಮೋದಿ ಅವರೊಂದಿಗೆ ಕುಳಿತು ಚರ್ಚಿಸುವುದಕ್ಕೂ ಒಂದು ಘನತೆ ಇರಬೇಕು. ರಾಹುಲ್‌ ಗಾಂಧಿ ಅವರೇನು ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯೇ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ‘ಲೋಕ’ ಚುನಾವಣೆಯಲ್ಲಿ ಎಎಪಿ ಗೆದ್ದರೆ ವಿದ್ಯುತ್‌, ಆರೋಗ್ಯ ಸೇವೆ ಉಚಿತ – 10 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್‌

    ಪ್ರಧಾನಿ ಮೋದಿ ಚರ್ಚೆ ಕುರಿತು ರಾಗಾ ಹೇಳಿದ್ದೇನು?
    ಲೋಕಸಭಾ ಚುನಾವಣಾ ವಿಷಯಗಳ ಕುರಿತು ಬಹಿರಂಗ ಚರ್ಚೆಗೆ ನಾನು ಸಿದ್ಧ, ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದು, ನಿವೃತ್ತ ನ್ಯಾಯಮೂರ್ತಿಗಳು, ಪತ್ರಕರ್ತರು ನೀಡಿದ ಆಹ್ವಾನ ಸ್ವೀಕರಿಸಿದ್ದಾರೆ. ನಿವೃತ್ತ ನ್ಯಾ.ಮದನ್‌ ಲೋಕೂರ್‌, ನಿವೃತ್ತ ನ್ಯಾ.ಅಭಿಜಿತ್‌ ಪಿ.ಶಾ, ಹಿರಿಯ ಪತ್ರಕರ್ತ ಎನ್‌.ರಾಮ್‌ ಅವರ ಆಹ್ವಾನಕ್ಕೆ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪ್ರತಿಕ್ರಿಯೆ ನೀಡಿರುವ ರಾಹುಲ್‌ ಗಾಂಧಿ, ‘‘ನಿಮ್ಮ ಆಹ್ವಾನದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸಮಾಲೋಚಿಸಿರುವೆ. ಇಂಥ ವೇದಿಕೆಗಳಲ್ಲಿ ಚರ್ಚೆಗೆ ಅವರು ಒಪ್ಪಿದ್ದಾರೆ. ಚರ್ಚೆಯಲ್ಲಿ ಪಾಲ್ಗೊಳ್ಳಲು ನಾವು ಸಿದ್ಧವಾಗಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚೆಯಲ್ಲಿ ಭಾಗವಹಿಸಬೇಕೆಂದು ದೇಶದ ಜನ ನಿರೀಕ್ಷಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಇಂತಹ ಚರ್ಚೆಗಳಿಂದ ದೇಶದ ರಾಜಕೀಯ ನಾಯಕರ ದೃಷ್ಟಿಕೋನದ ಬಗ್ಗೆ ಜನತೆ ಅರ್ಥ ಮಾಡಿಕೊಳ್ಳಲು ನೆರವಾಗಲಿದೆ. ರಾಜಕೀಯ ಪಕ್ಷಗಳ ಆರೋಪ ಪ್ರತ್ಯಾರೋಪಗಳ ನೈಜತೆ ತಿಳಿಯಲು ಸಹಕಾರಿಯಾಗಲಿದೆ. ಚುನಾವಣಾ ಪ್ರಚಾರದಲ್ಲಿ ರಾಜಕೀಯ ನಾಯಕರ ನೀತಿ ನಿಲುವುಗಳ ಬಗ್ಗೆ ಜನರಿಗೆ ಅರ್ಥ ಮಾಡಿಕೊಳ್ಳಲು ಚರ್ಚೆಗಳು ಸಹಕಾರಿಯಾಗಲಿವೆ, ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಪಾಸಣೆ – ಚುನಾವಣಾಧಿಕಾರಿಗಳ ವಿರುದ್ಧ `ಕೈ’ ಕಿಡಿ!

    ಖರ್ಗೆ ವಿರುದ್ಧವೂ ವಾಗ್ದಾಳಿ:
    ಕಾಂಗ್ರೆಸ್‌ ಜನರ ಸಂಪತ್ತು ಮರುಹಂಚಿಕೆ ಬಗ್ಗೆ ಮಾತನಾಡುತ್ತಿದೆ. ಈ ನಿರ್ಧಾರದ ಮೂಲಕ ನಾಗರಿಕರ ಅರ್ಧದಷ್ಟು ಆಸ್ತಿಯನ್ನು ಕಸಿದುಕೊಳ್ಳಲಿದೆ ಎಂಬುದನ್ನು ತೋರಿಸಿದೆ. ರಾಮ ಮಂದಿರದ ನಿರ್ಧಾರವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಕಾಂಗ್ರೆಸ್ ಮಾತನಾಡುತ್ತದೆ. ಈ ಎಲ್ಲಾ ಸಮಸ್ಯೆಗಳು ರಾಷ್ಟ್ರೀಯ ಸಮಸ್ಯೆಗಳು. ಇದರ ಬಗ್ಗೆ ಪ್ರಧಾನಿ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕರಿಗೂ ಪ್ರಶ್ನೆ ಮಾಡುವ ಹಕ್ಕಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • ಹೆದರಬೇಡಿ, ಹೆದರಿ ಓಡಿಹೋಗ್ಬೇಡಿ – ರಾಹುಲ್ ಗಾಂಧಿ ವ್ಯಂಗ್ಯ ಮಾಡಿದ ಮೋದಿ

    ಹೆದರಬೇಡಿ, ಹೆದರಿ ಓಡಿಹೋಗ್ಬೇಡಿ – ರಾಹುಲ್ ಗಾಂಧಿ ವ್ಯಂಗ್ಯ ಮಾಡಿದ ಮೋದಿ

    ನವದೆಹಲಿ: ಕೇರಳದ ವಯನಾಡಿನಲ್ಲಿ ಚುನಾವಣೆ ಬಳಿಕ ರಾಹುಲ್ ಗಾಂಧಿ (Rahul Gandhi) ಬೇರೇಡೆ ಮುಖ ಮಾಡಲಿದ್ದಾರೆ ಎಂದು ನಾನು ಮೊದಲೇ ಹೇಳಿದ್ದೆ. ಈಗ ಅಮೇಥಿಯಲ್ಲೂ ಸೋಲಿನ ಭಯ ಕಂಡಿರುವ ಅವರು ರಾಯ್‌ಬರೇಲಿಯಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ವ್ಯಂಗ್ಯ ಮಾಡಿದ್ದಾರೆ.

    ಪಶ್ಚಿಮ ಬಂಗಾಳದ ಬರ್ಧಮಾನ್-ದುರ್ಗಾಪುರದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ವಯನಾಡಿನಲ್ಲಿ ಸೋಲಿನ ಬಗ್ಗೆ ತಿಳಿದಿರುವ ರಾಹುಲ್ ಗಾಂಧಿ ಮತ್ತೊಂದು ಕ್ಷೇತ್ರಕ್ಕೆ‌ ಹೋಗಿದ್ದಾರೆ. ಅಮೇಥಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಅವರ ಬೆಂಬಲಿಗರು ಹೇಳಿದ್ದರು. ಆದರೆ ಅವರು ಆಯ್ಕೆ ಮಾಡಿಕೊಂಡಿರುವುದು ಯಾವ ಕ್ಷೇತ್ರ? ರಾಯ್‌ಬರೇಲಿ (Raebareli), ಅಮೇಥಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡೊಕೆ ರಾಹುಲ್‌ಗೆ ಭಯ ಹೀಗಿದ್ದರೂ ಸಹ ರಾಹುಲ್ ಗಾಂಧಿ ಹೇಳೋದು ಹೆದರಬೇಡಿ ಅಂತಾ, ನಾನು ರಾಹುಲ್ ಗಾಂಧಿಗೆ ಹೇಳುತ್ತೇನೆ ಹೆದರಬೇಡಿ, ಓಡಿ ಹೋಗಬೇಡಿ ಎಂದು ಕುಟುಕಿದ್ದಾರೆ.

    ಗಾಂಧಿ ಕುಟುಂಬದ ನಡೆಯಿಂದ ಚುನಾವಣಾ ಫಲಿತಾಂಶ ಸ್ಪಷ್ಟವಾಗಿದೆ, ಯಾವುದೇ ಸಮೀಕ್ಷೆ ನಡೆಸುವ ಅಗತ್ಯ ಇಲ್ಲ. ಕಾಂಗ್ರೆಸ್‌ ಮೊದಲೇ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸಿದೆ, ಕಳೆದ ಬಾರಿಯಷ್ಟೂ ಸ್ಥಾನಗಳು ಈ ಬಾರಿ ʻಕೈʼಗೆ ಸಿಗಲ್ಲ ಎಂದಿದ್ದಾರೆ. ಇದನ್ನೂ ಓದಿ: ನೇಹಾ ಹತ್ಯೆ ನಿಜವಾಗಿಯೂ ಲವ್‌ ಜಿಹಾದ್‌ ಕೇಸ್‌, ನಾವು ಬಣ್ಣ ಕಟ್ಟಿಲ್ಲ: ಅಮಿತ್‌ ಶಾ

    ಸಂವಿಧಾನವನ್ನು ಬದಲಾಯಿಸಿ ದಲಿತ ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಕೋಟಾಗಳನ್ನು ಕಸಿದುಕೊಂಡು ‘ಜಿಹಾದಿ’ ವೋಟ್ ಬ್ಯಾಂಕ್‌ಗೆ ಮೀಸಲಾತಿ ನೀಡಲು ಕಾಂಗ್ರೆಸ್ ಬಯಸಿದೆ. ಅವರಿಗೆ (ವಿರೋಧ ಪಕ್ಷಗಳಿಗೆ) ಅಭಿವೃದ್ಧಿಯನ್ನು ತರಲು ಸಾಧ್ಯವಿಲ್ಲ. ಅವರು ಮತಕ್ಕಾಗಿ ಸಮಾಜವನ್ನು ವಿಭಜಿಸುವುದು ಹೇಗೆಂಬುದು ತಿಳಿದಿರುವುದಾಗಿ ವಾಗ್ದಾಳಿ ನಡೆಸಿದ್ದಾರೆ.

    ತೃಣಮೂಲ ಶಾಸಕ ಹುಮಾಯೂನ್ ಕಬೀರ್ ಅವರನ್ನು ಉಲ್ಲೇಖಿಸಿದ ಪ್ರಧಾನಿ, ಟಿಎಂಸಿ ಶಾಸಕರೊಬ್ಬರು ಬಹಿರಂಗ ಬೆದರಿಕೆ ಹಾಕಿದರು. ಅವರು ಕೇವಲ ಎರಡು ಗಂಟೆಗಳಲ್ಲಿ ಭಾಗೀರಥಿಯಲ್ಲಿ ಹಿಂದೂಗಳನ್ನು ಮುಳುಗಿಸುತ್ತಾರೆ ಎಂದು ಹೇಳಿದರು. ಇದು ಏನು ಭಾಷೆ? ಇದು ಯಾವ ರಾಜಕೀಯ ಸಂಸ್ಕೃತಿ? ಬಂಗಾಳದಲ್ಲಿ ಹಿಂದೂಗಳಿಗೆ ಏನಾಗುತ್ತಿದೆ? ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಹಿಂದೂಗಳನ್ನು 2ನೇ ಪ್ರಜೆಯನ್ನಾಗಿ ಮಾಡಿದೆ ಎಂದು ತೋರುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ತಿಂಡಿ ಮಾಡಲ್ಲ ಎಂದಿದ್ದಕ್ಕೆ ಹಲ್ಲೆಗೈದು ಅತ್ತೆ ಕೊಲೆ – ಕುಸಿದು ಸತ್ತರೆಂದು ಕಥೆ ಕಟ್ಟಿದ್ದ ಸೊಸೆ ಅರೆಸ್ಟ್‌

    ಎಡಪಕ್ಷಗಳು, ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅಭಿವೃದ್ಧಿಯ ದೃಷ್ಟಿ ಇಲ್ಲ, ಎಡಪಕ್ಷಗಳು ತ್ರಿಪುರಾವನ್ನು ಸಂಪೂರ್ಣವಾಗಿ ನಾಶಪಡಿಸಿದರು ಅವರು 35 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಕಳೆದ 5 ವರ್ಷಗಳಲ್ಲಿ ಬಿಜೆಪಿ ತ್ರಿಪುರವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ನಿಮ್ಮ ಕನಸುಗಳನ್ನು ನನಸಾಗಿಸುವುದು ನನ್ನ ಕನಸು, ನಿಮ್ಮೆಲ್ಲರಿಗೂ ಮತ್ತು ದೇಶಕ್ಕೂ ಸೇವೆ ಸಲ್ಲಿಸಲು ನನಗೆ ಆಶೀರ್ವಾದಿಸಬೇಕು. ನನ್ನ ಬಳಿ ಏನೂ ಇಲ್ಲ ನೀವೆಲ್ಲರೂ ಕುಟುಂಬದವರು, ನಿಮ್ಮಗಾಗಿ ನಿಮ್ಮ ಮಕ್ಕಳಿಗಾಗಿ ಮಾತ್ರ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

  • ರಾಯ್‌ಬರೇಲಿಯಿಂದ ರಾಹುಲ್‌, ಅಮೇಠಿಯಿಂದ ಕಿಶೋರಿ ಲಾಲ್‌ ಶರ್ಮಾ ಕಣಕ್ಕೆ

    ರಾಯ್‌ಬರೇಲಿಯಿಂದ ರಾಹುಲ್‌, ಅಮೇಠಿಯಿಂದ ಕಿಶೋರಿ ಲಾಲ್‌ ಶರ್ಮಾ ಕಣಕ್ಕೆ

    ಲಕ್ನೋ: ಲೋಕಸಭಾ ಚುನಾವಣೆಯಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ರಾಯ್‌ ಬರೇಲಿ ಹಾಗೂ ಅಮೇಥಿ ಕ್ಷೇತ್ರಕ್ಕೆ ಕೊನೆಗೂ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ನೇಮಕ ಮಾಡಿದೆ.

    ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರು (Rahul Gandhi) ರಾಯ್‌ ಬರೇಲಿಯಿಂದ (Raebareli) ಸ್ಪರ್ಧೆ ಮಾಡಿದರೆ, ಕಿಶೋರಿ ಲಾಲ್ ಶರ್ಮಾ (Kishori Lal Sharma) ಅಮೇಥಿಯಿಂದ ಕಣಕ್ಕಿಳಿಸುವುದಾಗಿ ಘೋಷಣೆ ಮಾಡಿದೆ.

    ಐದನೇ ಹಂತದ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ಹೀಗಾಗಿ ಇದೀಗ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ರಾಹುಲ್ ಗಾಂಧಿ ಅವರು 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರನ್ನು ಸೋಲಿಸಿದ ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ವಿರುದ್ಧ ರಾಯ್ ಬರೇಲಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಇದನ್ನೂ ಓದಿ: ಮೋದಿ ಆಡಳಿತದಲ್ಲಿ ಮಹಿಳೆಯರಿಗೆ ರಕ್ಷಣೆ, ನೆಮ್ಮದಿ ಸಿಕ್ಕಿದೆ: ಅಣ್ಣಾಮಲೈ

    ಗಾಂಧಿ ಕುಟುಂಬದ ಭದ್ರಕೋಟೆಯಾಗಿದ್ದ ಎರಡು ಕ್ಷೇತ್ರಗಳಿಗೆ ಮೇ 20ರಂದು ಮತದಾನ ನಡೆಯಲಿದೆ. ಈ ವರ್ಷದ ಆರಂಭದಲ್ಲಿ ಸೋನಿಯಾ ಗಾಂಧಿ ಅವರು ರಾಜ್ಯಸಭೆಯ ಸದಸ್ಯರಾದ ನಂತರ ರಾಯ್ ಬರೇಲಿ ಸ್ಥಾನವನ್ನು ತೆರವು ಮಾಡಲಾಗಿತ್ತು. ರಾಹುಲ್‌ ಗಾಂಧಿ ಈಗಾಗಲೇ ಕೇರಳದ ವಯನಾಡಿನಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

  • ರಾಯ್‌ಬರೇಲಿ, ಅಮೇಠಿಗೆ ಕಾಂಗ್ರೆಸ್‌ ಅಭ್ಯರ್ಥಿ ಯಾರು?

    ರಾಯ್‌ಬರೇಲಿ, ಅಮೇಠಿಗೆ ಕಾಂಗ್ರೆಸ್‌ ಅಭ್ಯರ್ಥಿ ಯಾರು?

    ನವದೆಹಲಿ: ಐದನೇ ಹಂತದ ಲೋಕಸಭೆ ಚುನಾವಣೆಗೆ (Lok Sabha Election) ನಾಮಪತ್ರ ಸಲ್ಲಿಸಲು ಶುಕ್ರವಾರ ಮಾತ್ರ ಅವಕಾಶವಿದೆ. ಆದರೂ ರಾಯ್‌ಬರೇಲಿ (Raebareli) ಮತ್ತು ಅಮೇಥಿ (Amethi) ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಕಾಂಗ್ರೆಸ್ (Congress) ಇನ್ನೂ ಅಂತಿಮಗೊಳಿಸಿಲ್ಲ.

    ರಾಹುಲ್ ಗಾಂಧಿ (Rahul Gandhi) ಅಮೇಠಿ, ರಾಯ್‌ಬರೇಲಿ ಪೈಕಿ ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಅಥವಾ ಕಣಕ್ಕೆ ಇಳಿಯಲ್ವೋ ಎಂದು ಕುತೂಹಲ ಮನೆ ಮಾಡಿದೆ. ಅದೇ ರೀತಿ ಪ್ರಿಯಾಂಕಾ ವಾದ್ರಾ (Priyanka Vadra) ಸ್ಪರ್ಧೆ ಮಾಡ್ತಾರೋ ಇಲ್ವೋ ಎಂಬ ವಿಚಾರ ಕೂಡ ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ಪ್ರಜ್ವಲ್‌ ಕೇಸ್‌ – ಜಡ್ಜ್‌ ಮುಂದೆ ಸಂತ್ರಸ್ತೆಯಿಂದ ಹೇಳಿಕೆ: ಏನಿದು ಸಿಆರ್​ಪಿಸಿ ಸೆಕ್ಷನ್ 164? ಹೇಳಿಕೆಗೆ ಯಾಕಿಷ್ಟು ಮಹತ್ವ?

    ಸದ್ಯದ ಮಾಹಿತಿ ಪ್ರಕಾರ ರಾಹುಲ್ ರಾಯ್‌ಬರೇಲಿಯಿಂದ ರಾಬರ್ಟ್ ವಾದ್ರಾ (Robert Vadra) ಅಮೇಠಿಯಿಂದ ಕಣಕ್ಕೆ ಇಳಿಯುವ ಇಳಿಯುವ ಲೆಕ್ಕಾಚಾರಗಳು ಕೇಳಿಬರುತ್ತಿದೆ. ರಾಹುಲ್ ಅಮೇಠಿಯಿಂದ ಸ್ಪರ್ಧೆ ಮಾಡಲಿ, ನಮ್ಮ ಬೆಂಬಲವಿದೆ ಎಂದು ಅಖಿಲೇಶ್ ಯಾದವ್‌ ಹೇಳಿದ್ದಾರೆ ಎನ್ನಲಾಗಿದೆ.

    ಮೋದಿ ಬಂದಲ್ಲಿ ಹೋದಲ್ಲಿ ಕಾಂಗ್ರೆಸ್ ಪರಿವಾರವಾದಿ ಪಕ್ಷ ಎಂದು ಟೀಕಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಿಯಾಂಕಾ ವಾದ್ರಾರನ್ನು ಕಣಕ್ಕೆ ಇಳಿಸಲು ರಾಹುಲ್ ಗಾಂಧಿ ಹಿಂದೇಟು ಹಾಕ್ತಿದ್ದಾರೆ ಎಂಬ ಸುದ್ದಿಯೂ ಹಬ್ಬಿದೆ.

     

  • ಅಮೇಥಿ, ರಾಯ್‌ಬರೇಲಿ ಹೈವೋಲ್ಟೇಜ್‌ ಕ್ಷೇತ್ರಗಳಿಗೆ ಇಂದು ಅಭ್ಯರ್ಥಿಗಳ ಘೋಷಣೆ ಸಾಧ್ಯತೆ!

    ಅಮೇಥಿ, ರಾಯ್‌ಬರೇಲಿ ಹೈವೋಲ್ಟೇಜ್‌ ಕ್ಷೇತ್ರಗಳಿಗೆ ಇಂದು ಅಭ್ಯರ್ಥಿಗಳ ಘೋಷಣೆ ಸಾಧ್ಯತೆ!

    – ಅಮೇಥಿಯಿಂದ ರಾಹುಲ್ ಗಾಂಧಿ ಸ್ಪರ್ಧೆ ಬಹುತೇಕ ಖಚಿತ
    – ಕಾಂಗ್ರೆಸ್‌ ಭದ್ರಕೋಟೆಯಾಗಿಯೇ ಉಳಿಯುತ್ತಾ ರಾಯ್‌ ಬರೇಲಿ?

    ನವದೆಹಲಿ: ಉತ್ತರ ಪ್ರದೇಶದ ಎರಡು ಹೈವೊಲ್ಟೇಜ್ ಕ್ಷೇತ್ರಗಳಾದ ಅಮೇಥಿ ಮತ್ತು ರಾಯ್‌ಬರೇಲಿಯಿಂದ (Amethi, Raebareli) ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಸ್ಪರ್ಧಿಸುವುದು ಬಹುತೇಕ ಖಚಿತ ಎಂದು ಕಾಂಗ್ರೆಸ್‌ ಪಕ್ಷದ ಮೂಲಗಳು ತಿಳಿಸಿವೆ. ನಾಮಪತ್ರ ಸಲ್ಲಿಕೆಗೆ ಇನ್ನು ಒಂದು ದಿನ ಮಾತ್ರ ಬಾಕಿ ಇರುವುದರಿಂದ ಇಂದೇ ಈ ಎರಡೂ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹೈಕಮಾಂಡ್‌ ಅಂತಿಮಗೊಳಿಸಲಿದೆ ಎಂದು ತಿಳಿದುಬಂದಿದೆ.

    ಸೋನಿಯಾ ಗಾಂಧಿ (Sonia Gandhi) ರಾಜ್ಯಸಭೆಗೆ ಆಯ್ಕೆಯಾಗಿದ್ದು, ವಯನಾಡ್ ನಿಂದ ರಾಹುಲ್ ಗಾಂಧಿ (Rahul Gandhi) ಸ್ಪರ್ಧಿಸಿರುವ ಹಿನ್ನೆಲೆ ಅಮೇಥಿಯಿಂದ ಕಾಂಗ್ರೆಸ್ ಅಭ್ಯರ್ಥಿ ಯಾರು? ಎನ್ನುವ ಚರ್ಚೆಗಳು ಹುಟ್ಟುಕೊಂಡಿದ್ದವು. ಅಲ್ಲದೇ ಕಾಂಗ್ರೆಸ್ ಕೂಡಾ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸದೇ ಕುತೂಹಲ ಹೆಚ್ಚಿಸಿತ್ತು. ಈ ಹಿಂದೆ ಅಮೇಥಿಯಿಂದ ರಾಹುಲ್‌ ಗಾಂಧಿ ಹೆಸರು ಕೇಳಿಬಂದಿದ್ದರೂ, ಬಳಿಕ ಅವರು ಸ್ಪರ್ಧಿಸುವುದಿಲ್ಲ ಎಂಬ ಮಾತುಗಳು ಪಕ್ಷದಲ್ಲಿ ಕೇಳಿಬಂದಿತ್ತು. ಇದೀಗ ರಾಗಾ ಅವರೇ ಸೂಕ್ತ ಎಂದು ಪಕ್ಷ ನಿರ್ಧರಿಸಿದೆ, ಇಂದು ಅಧಿಕೃತವಾಗಿ ಹೆಸರು ಘೋಷಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

    2019ರ ಚುನಾವಣೆಯಲ್ಲಿಯೂ ರಾಹುಲ್‌ ಗಾಂಧಿ ಅಮೇಥಿಯಿಂದ ಸ್ಪರ್ಧಿಸಿದ್ದರು. ಆದ್ರೆ ಬಿಜೆಪಿಯ ಸ್ಮೃತಿ ಇರಾನಿ ಅವರ ವಿರುದ್ಧ ಸೋಲು ಎದುರಿಸಬೇಕಾಯಿತು. ಈ ಬಾರಿಯೂ ಬಿಜೆಪಿಯಿಂದ ಅಮೇಥಿ ಕ್ಷೇತ್ರದಲ್ಲಿ ಸ್ಮೃತಿ ಇರಾನಿ ಪ್ರಬಲ ಅಭ್ಯರ್ಥಿಯಾಗಿದ್ದಾರೆ.

    ಕಾಂಗ್ರೆಸ್‌ ಭದ್ರಕೋಟೆಯಾಗಿಯೇ ಉಳಿಯುತ್ತಾ ರಾಯ್‌ಬರೇಲಿ?
    1960 ರಿಂದ ರಾಯ್‌ಬರೇಲಿ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಫಿರೋಜ್ ಗಾಂಧಿ, ಇಂದಿರಾ ಗಾಂಧಿ ಕೂಡಾ ಇಲ್ಲಿಂದ ಸ್ಪರ್ಧಿಸಿದ್ದರು. 1952 ಮತ್ತಯ 1957 ರಲ್ಲಿ ರಾಯ್‌ಬರೇಲಿ ಕ್ಷೇತ್ರದಿಂದ ಫಿರೋಜ್‌ ಗಾಂಧಿ ಎರಡು ಬಾರಿ ಗೆದ್ದಿದ್ದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಮೊಮ್ಮಗ ಅರುಣ್ ನೆಹರು ಅವರು 1980ರ ಉಪಚುನಾವಣೆ ಮತ್ತು 1984ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ನೆಹರೂ ಸಹೋದರಿ ಶೀಲಾ ಕೌಲ್ 1989 ಮತ್ತು 1991 ರಲ್ಲಿ ಗೆಲುವು ಸಾಧಿಸಿದರು.

    ಅಲ್ಲದೇ 2006 ರಿಂದ ಸೋನಿಯಾ ಗಾಂಧಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು‌. ಸೋನಿಯಾ ಗಾಂಧಿ ರಾಜ್ಯಸಭೆ ಆಯ್ಕೆ ಬಳಿಕ ಪ್ರಿಯಾಂಕಾ ಗಾಂಧಿ ಪ್ರಬಲ ಸ್ಪರ್ಧಿಯಾಗಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಈ ನಡುವೆ ಅಭ್ಯರ್ಥಿಯ ಘೋಷಣೆ ವಿಳಂಭವಾದರೂ ಪಕ್ಷಕ್ಕೆ ಆತಂಕ ಇಲ್ಲ ಎಂದು ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.

  • ರಾಯ್‌ಬರೇಲಿಯಿಂದ ಸ್ಪರ್ಧಿಸಲ್ಲ ಪ್ರಿಯಾಂಕಾ – ಇನ್ನೂ ಅಭ್ಯರ್ಥಿ ಘೋಷಣೆ ಮಾಡದ ಕಾಂಗ್ರೆಸ್‌

    ರಾಯ್‌ಬರೇಲಿಯಿಂದ ಸ್ಪರ್ಧಿಸಲ್ಲ ಪ್ರಿಯಾಂಕಾ – ಇನ್ನೂ ಅಭ್ಯರ್ಥಿ ಘೋಷಣೆ ಮಾಡದ ಕಾಂಗ್ರೆಸ್‌

    ನವದೆಹಲಿ: ಐದನೇ ಹಂತದ ಲೋಕಸಭೆ ಚುನಾವಣೆ (Lok Sabha Election) ಸಂಬಂಧ ನಾಮಪತ್ರ ಸಲ್ಲಿಸಲು ಇನ್ನು ಮೂರು ದಿನ ಉಳಿದಿದೆ. ಆದರೂ ಅಮೇಠಿ, ರಾಯ್‌ಬರೇಲಿಯಲ್ಲಿ ಯಾರನ್ನು ಕಣಕ್ಕೆ ಇಳಿಸಬೇಕು ಎಂಬುದನ್ನು ಫೈನಲ್ ಮಾಡಲಾಗದೇ ಕಾಂಗ್ರೆಸ್ ಹೈಕಮಾಂಡ್ (Congress High Command) ಒದ್ದಾಡುತ್ತಿದೆ.

    ದೆಹಲಿಯಲ್ಲಿ ಸಭೆ ನಡೆದು ಎಂಬತ್ತು ಗಂಟೆ ಕಳೆದರೂ ಈವರೆಗೂ ಯಾವುದೇ ಪ್ರಕಟಣೆ ಹೊರಬಿದ್ದಿಲ್ಲ. ಮೂಲಗಳ ಪ್ರಕಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮೇ ಮೂರರವರೆಗೂ ಅಮೇಠಿ (Amethi) ವಿಚಾರದಲ್ಲಿ ಸಸ್ಪೆನ್ಸ್ ಮುಂದುವರೆಯುತ್ತದೆ. ಇದನ್ನೂ ಓದಿ: ರಾಯ್‌ಬರೇಲಿಗೆ ನೂಪೂರ್‌ ಶರ್ಮಾ ಬಿಜೆಪಿ ಅಭ್ಯರ್ಥಿ?

    ರಾಯ್‌ಬರೇಲಿ (Raibareli) ಅಭ್ಯರ್ಥಿ ವಿಚಾರದಲ್ಲಿ ಅನಿಶ್ಚಿತತೆ ಮುಂದುವರೆದಿದೆ. ಸದ್ಯದ ಮಾಹಿತಿ ಪ್ರಕಾರ, ರಾಯ್‌ಬರೇಲಿಯಿಂದ ಸ್ಪರ್ಧೆಗೆ ಪ್ರಿಯಾಂಕಾ ವಾದ್ರಾ (Priyanka Vadra) ಆಸಕ್ತಿ ತೋರಿಸಿಲ್ಲ. ಚುನಾವಣೆಗೆ ಸ್ಪರ್ಧೆ ಮಾಡಿದರೆ ದೇಶದ ಎಲ್ಲೆಡೆ ಪ್ರಚಾರ ಮಾಡಲು ಆಗುವುದಿಲ್ಲ ಎಂಬ ಕಾರಣವನ್ನು ನೀಡುವ ಮೂಲಕ ಕಣಕ್ಕಿಳಿಯಲು ಪ್ರಿಯಾಂಕಾ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

    ಅಮೇಠಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ರಾಯ್‌ಬರೇಲಿ ಕ್ಷೇತ್ರದ ಅಭ್ಯರ್ಥಿಯನ್ನು ಬಿಜೆಪಿ ಸಹ ಇಲ್ಲಿಯವರೆಗೆ ಪ್ರಕಟಿಸಿಲ್ಲ. ಹೀಗಾಗಿ ಎರಡು ಕ್ಷೇತ್ರಗಳು ಈಗ ಭಾರೀ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿ ರಾಕೇಶ್‌ ಸಿದ್ದರಾಮಯ್ಯ ವಿಚಾರ ಕೆದಕಿದ ಹೆಚ್‌ಡಿಕೆ

    ರಾಯ್‌ಬರೇಲಿ ಕೈ ಕೋಟೆ:
    ರಾಯ್‌ಬರೇಲಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಮೂರು ಬಾರಿ ಸ್ಪರ್ಧಿಸಿ ಗೆದ್ದಿದ್ದರು. 1999 ರಿಂದ ಸೋನಿಯಾ ಗಾಂಧಿ ಲೋಕಸಭೆ ಚುನಾವಣೆಯನ್ನು ಗೆಲ್ಲುತ್ತಾ ಬಂದಿದ್ದಾರೆ. 1999 ರಲ್ಲಿ ಉತ್ತರ ಪ್ರದೇಶದ ಅಮೇಠಿ ಮತ್ತು ಕರ್ನಾಟಕದ ಬಳ್ಳಾರಿಯಿಂದ ಸ್ಪರ್ಧಿಸಿ ಗೆದ್ದಿದ್ದ ಅವರು 2004ರ ಚುನಾವಣೆಯಿಂದ 2019ರ ಚುನಾವಣೆಯವರೆಗೂ ಉತ್ತರ ಪ್ರದೇಶದ ರಾಯ್‌ಬರೇಲಿಯಿಂದ ಸತತವಾಗಿ ಆಯ್ಕೆ ಆಗುತ್ತಿದ್ದಾರೆ. ಈ ಬಾರಿ ಸೋನಿಯಾ ಗಾಂಧಿ ರಾಜ್ಯಸಭೆ ಮೂಲಕ ಸಂತಸ್‌ ಪ್ರವೇಶಿಸಿದ್ದಾರೆ.

  • ನಾನು ಸಕ್ರಿಯ ರಾಜಕಾರಣಕ್ಕೆ ಬರಬೇಕೆಂಬುದು ದೇಶದ ಕರೆಯಾಗಿದೆ: ರಾಬರ್ಟ್ ವಾದ್ರಾ

    ನಾನು ಸಕ್ರಿಯ ರಾಜಕಾರಣಕ್ಕೆ ಬರಬೇಕೆಂಬುದು ದೇಶದ ಕರೆಯಾಗಿದೆ: ರಾಬರ್ಟ್ ವಾದ್ರಾ

    ನವದೆಹಲಿ: ಅಮೇಥಿಯ (Amethi) ಜನರು ನನ್ನ ಸ್ಪರ್ಧೆ ಬಯಸಿದ್ದಾರೆ ಎಂದು ಹೇಳಿದ್ದ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪತಿ, ಕೈಗಾರಿಕೋದ್ಯಮಿ ರಾಬರ್ಟ್ ವಾದ್ರಾ (Robert Vadra) ಈಗ ನಾನು ಸಕ್ರಿಯ ರಾಜಕಾರಣಕ್ಕೆ (Politics) ಬರಬೇಕೆಂಬುದು ದೇಶದ ಕರೆಯಾಗಿದೆ ಎಂದು ಹೇಳಿದ್ದಾರೆ.

    ಋಷಿಕೇಶ್ ತ್ರಿವೇಣಿ ಘಾಟ್‌ನಲ್ಲಿ ಗಂಗಾ ಆರತಿಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ಧರ್ಮದ ಹೆಸರಿನಲ್ಲಿ ಮಾಡುತ್ತಿರುವ ರಾಜಕೀಯ ತಪ್ಪು, ಧರ್ಮ ಮತ್ತು ರಾಜಕೀಯವನ್ನು ಪ್ರತ್ಯೇಕವಾಗಿ ಇಡಬೇಕು. ಬಿಜೆಪಿ (BJP) ಆಡಳಿತದಲ್ಲಿ ಸಾಮಾನ್ಯ ನಾಗರಿಕರ ನೈಜ ಸಮಸ್ಯೆಗಳ ಬಗ್ಗೆ ಮಾತನಾಡಿಲ್ಲ. ಜನರಲ್ಲಿ ಭಯವನ್ನು ಹರಡುವುದು ಬಿಜೆಪಿಯ ಆಡಳಿತದ ವಿಧಾನವಾಗಿದೆ. ಬಿಜೆಪಿ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿ ನಂತರ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಮೊದಲ ಹಂತದ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ವರದಿ ಬಂದಿದೆ: ಸಿದ್ದರಾಮಯ್ಯ

    ಅಮೇಥಿಯಿಂದ ಚುನಾವಣೆಗೆ (Lok Sabha Election) ಸ್ಪರ್ಧಿಸುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಬರ್ಟ್ ವಾದ್ರಾ, ನಾನು ಸಕ್ರಿಯ ರಾಜಕಾರಣಕ್ಕೆ ಬರಬೇಕು ಎಂಬುದು ಇಡೀ ದೇಶದ ಕರೆಯಾಗಿದೆ. ನಾನು ಯಾವಾಗಲೂ ದೇಶದ ಜನರಿಗಾಗಿ ಹೋರಾಡುತ್ತೇನೆ. ನಾನು ಜನರ ನಡುವೆ ಬದುಕುತ್ತೇನೆ. ಸಮಾಜಕ್ಕಾಗಿ ದುಡಿಯುತ್ತೇನೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಅಧಿನಾಯಕಿಯಿಂದ್ಲೇ ಏನೂ ಮಾಡೋಕೆ ಆಗಲಿಲ್ಲ- ತಂಗಡಗಿಗೆ ರೆಡ್ಡಿ ಟಾಂಗ್

  • ಸುಣ್ಣ ಬಣ್ಣ ಬಳಿದು ಮನೆ ಸ್ವಚ್ಛ – ಈ ಬಾರಿಯೂ ಅಮೇಠಿಯಿಂದ ರಾಹುಲ್‌ ಸ್ಪರ್ಧೆ?

    ಸುಣ್ಣ ಬಣ್ಣ ಬಳಿದು ಮನೆ ಸ್ವಚ್ಛ – ಈ ಬಾರಿಯೂ ಅಮೇಠಿಯಿಂದ ರಾಹುಲ್‌ ಸ್ಪರ್ಧೆ?

    ಲಕ್ನೋ: ರಾಹುಲ್‌ ಗಾಂಧಿ (Rahul Gandhi) ಬಾರಿಯೂ ಉತ್ತರ ಪ್ರದೇಶದ ಅಮೇಠಿ ಕ್ಷೇತ್ರದಿಂದ (Amethi Lok Sabha constituency) ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.

    ರಾಹುಲ್‌ ಗಾಂಧಿಯ ಚುನಾವಣಾ ರಾಜಕಾರಣಕ್ಕೆ ಜನ್ಮ ನೀಡಿದ್ದ ಉತ್ತರ ಪ್ರದೇಶ ಅಮೇಠಿ ಕ್ಷೇತ್ರದಲ್ಲಿ ಅವರ ಮನೆಯನ್ನು ನವೀಕರಣ (House Renovation) ಮಾಡುತ್ತಿರುವುದರಿಂದ ಈಗ ಈ ಪ್ರಶ್ನೆ ಎದ್ದಿದೆ.

    ಅಮೇಠಿ ನಗರದ ಗೌರಿಗಂಜ್‌ ನಗರದಲ್ಲಿರುವ ರಾಹುಲ್‌ ಅವರ ನಿವಾಸವನ್ನು ಸುಣ್ಣಬಣ್ಣ ಬಳಿದು ಸ್ವಚ್ಛಗೊಳಿಸಿ ಉದ್ಯಾನವನ್ನು ಅಂದಗೊಳಿಸುವ ಕಾರ್ಯ ನಡೆಯುತ್ತಿದೆ. ಅಷ್ಟೇ ಅಲ್ಲದೇ ಚುನಾವಾಣಾ ಪ್ರಚಾರದ ಭಿತ್ತಿಪತ್ರಗಳನ್ನೂ ತಂದಿರಿಸಲಾಗಿದೆ. ಈ ಕೆಲಸಗಳನ್ನು ನೋಡಿ ಮತ್ತೆ ರಾಹುಲ್‌ ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದು ಎನ್ನಲಾಗುತ್ತಿದೆ. ಇದನ್ನೂ ಓದಿ: ಹಲವು ಸಮಸ್ಯೆಗಳ ನಡುವೆ ಯಶಸ್ವಿಯಾಗಿ 3ನೇ ಲೋಕಸಭಾ ಚುನಾವಣೆ ನಡೆಸಿದ ಭಾರತ!

    ಕಳೆದ ವಾರ ಗಾಜಿಯಾಬಾದ್‌ನಲ್ಲಿ ಪತ್ರಕರ್ತರೊಬ್ಬರು ನೀವು ಅಮೇಠಿಯಿಂದ ಸ್ಪರ್ಧೆ ಮಾಡುತ್ತೀರಾ ಎಂದು ಪ್ರಶ್ನಿಸಿದ್ದರು. ಇದಕ್ಕೆ ರಾಹುಲ್‌ ಗಾಂಧಿ, ಇದು ಬಿಜೆಪಿಯ ಪ್ರಶ್ನೆ. ತುಂಬಾ ಒಳ್ಳೆಯದು. ನಮ್ಮ ಪಕ್ಷದಲ್ಲಿ ಎಲ್ಲಾ ಅಭ್ಯರ್ಥಿಗಳ ಆಯ್ಕೆ ನಿರ್ಧಾರಗಳನ್ನು ಕಾಂಗ್ರೆಸ್ ಚುನಾವಣಾ ಸಮಿತಿಯು ತೆಗೆದುಕೊಳ್ಳುತ್ತದೆ. ನಾನು ಪಕ್ಷದ ಸೈನಿಕನಾಗಿದ್ದು ಸಮಿತಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಉತ್ತರಿಸಿದ್ದರು. ಇದನ್ನೂ ಓದಿ: ಕೇವಲ 5 ದಿನದ ಚುನಾವಣೆ; ಕಾಂಗ್ರೆಸ್‌ ಕುಸಿದರೂ ಗೆದ್ದ ಇಂದಿರಾ

    ರಾಹುಲ್‌ ಈಗಾಗಲೇ ಕೇರಳದ ವಯನಾಡಿನಿಂದ (Wayanad) ನಾಮಪತ್ರ ಸಲ್ಲಿಸಿದ್ದಾರೆ. ಏ.26 ರಂದು ಚುನಾವಣೆ ನಡೆಯಲಿದೆ.

    2004ರ ಬಳಿಕ ರಾಹುಲ್ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದರು. 2019 ಲೋಕಸಭಾ ಚುನಾವಣೆಯಲ್ಲಿ ರಾಹುಲ್ 55 ಸಾವಿರ ಮತಗಳ ಅಂತರದಲ್ಲಿ ಸೋಲುಂಡಿದ್ದರು. ಬಿಜೆಪಿಯ ಸ್ಮೃತಿ ಇರಾನಿ (Smriti Irani) 4,68,514 ಮತಗಳನ್ನು ಪಡೆದಿದ್ದರೆ ರಾಹುಲ್‌ 4,13,394 ಮತಗಳನ್ನು ಪಡೆದಿದ್ದರು. ರಾಹುಲ್‍ರ ಈ ಸೋಲು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗ ಉಂಟು ಮಾಡಿತ್ತು.

    2024ರ ಚುನಾವಣೆಯಲ್ಲೂ ಬಿಜೆಪಿಯಿಂದ ಸ್ಮೃತಿ ಇರಾನಿ ಕಣಕ್ಕೆ ಇಳಿದಿದ್ದಾರೆ. ಉತ್ತರ ಪ್ರದೇಶದಲ್ಲಿ ಎಸ್‌ಪಿ ಜೊತೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದೆ.