Tag: American Woman

  • FaceBook ಸ್ನೇಹಿತನ ಭೇಟಿಗಾಗಿ ಪಾಕ್‌ಗೆ ತೆರಳಿದ್ದ ಅಮೆರಿಕದ 21ರ ಯುವತಿ ಮೇಲೆ ಅತ್ಯಾಚಾರ

    FaceBook ಸ್ನೇಹಿತನ ಭೇಟಿಗಾಗಿ ಪಾಕ್‌ಗೆ ತೆರಳಿದ್ದ ಅಮೆರಿಕದ 21ರ ಯುವತಿ ಮೇಲೆ ಅತ್ಯಾಚಾರ

    ಇಸ್ಲಾಮಾಬಾದ್: ಫೇಸ್‌ಬುಕ್‌ನಲ್ಲಿ ಪರಿಚಯವಾದ ಸ್ನೇಹಿತನನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ತೆಳಿದ್ದ 21 ವರ್ಷದ ಅಮೆರಿಕದ ಯುವತಿಯ ಮೇಲೆ ಇಬ್ಬರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ `ಫೋರ್ಟ್ ಮನ್ರೋ’ ಗಿರಿಧಾಮದಲ್ಲಿರುವ ಹೋಟೆಲ್‌ನಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ವಾಣಿಜ್ಯ ಕ್ಷೇತ್ರದ ಉದ್ಯೋಗಿಗಳಿಗೆ ಗುಡ್‌ನ್ಯೂಸ್: ವರ್ಕ್ ಫ್ರಂ ಹೋಮ್ – ಹೊಸ ನಿಯಮ ಹೇಳೋದೇನು ಗಮನಿಸಿ

    STOP RAPE

    ತನ್ನದೇ ಫೇಸ್‌ಬುಕ್ ಪುಟವನ್ನು ನಡೆಸುತ್ತಿದ್ದ ಟಿಕ್‌ಟಾಕರ್ ಫೇಸ್‌ಬುಕ್‌ನಿಂದ ಪರಿಚಯವಾದ ಮುಜಾಮಿಲ್ ಸಿಪ್ರಾ ಮತ್ತು ಅಜಾನ್ ಖೋಸಾ ಅವರನ್ನು ಭೇಟಿ ಮಾಡಲು ತೆಳಿದ್ದರು ಎಂದು ಹೇಳಲಾಗಿದೆ. ಇದನ್ನೂ ಓದಿ: ನಾನು ಕಷ್ಟಕ್ಕೆ ಸ್ಪಂದಿಸಿ ಮನೆಯಲ್ಲಿ ಇಟ್ಕೋತೀನಿ ಅಂದಿದ್ದೆ – ಆದ್ರೆ ನವ್ಯಶ್ರೀ 50ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ರು: ಟಾಕಳೆ ಆರೋಪ

    ಈ ಕುರಿತು ಮಾಹಿತಿ ನೀಡಿರುವ ಖಾನ್ ಜಿಲ್ಲೆಯ ಪೊಲೀಸ್ ಆಯುಕ್ತ ಅನ್ವರ್ ಬಾರ್ಯಾರ್, ಅಮೆರಿಕದ ಯುವತಿ ಫೇಸ್‌ಬುಕ್‌ನಲ್ಲಿ ಪರಿಚಯವಾದ ಮುಜ್ಮಲ್ ಸಿಪ್ರಾ ಅವರ ಆಹ್ವಾನದ ಮೇರೆಗೆ ಕರಾಚಿಯಿಂದ ಫೋರ್ಟ್ ಮನ್ರೋಗೆ ಬಂದಿದ್ದಳು. ಲಾಹೋರ್‌ನಿಂದ 550 ಕಿಲೋಮೀಟರ್ ದೂರದಲ್ಲಿರುವ ಪಂಜಾಬ್‌ನ ರಾಜನ್‌ಪುರ ಜಿಲ್ಲೆಯಲ್ಲಿನ ಅವರ ಮನೆಗೆ ಭೇಟಿ ನೀಡಿದ್ದಳು. ಪಾಕಿಸ್ತಾನ ಪ್ರವಾಸದಲ್ಲಿದ್ದ ಯುವತಿ ಕಳೆದ 7 ತಿಂಗಳಿನಿಂದಲೂ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಳು ಎಂದು ಹೇಳಿದ್ದಾರೆ.

    STOP RAPE

    ಸಂತ್ರಸ್ತೆ ಫೋರ್ಟ್ ಮನ್ರೋ ಗಿರಿಧಾಮದಲ್ಲಿನ ಹೋಟೆಲ್‌ಗೆ ಭೇಟಿ ಮಾಡಿದಾಗ ಯುವತಿ ಅಲ್ಲಿಯೇ ಸಿಪ್ರಾ ಹಾಗೂ ಖೋಸಾರೊಂದಿಗೆ ಟಿಕ್‌ಟಾಕ್ ಮಾಡಿದ್ದಾರೆ. ಇದೇ ವೇಳೆ ಇಬ್ಬರೂ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಬ್ಲ್ಯಾಕ್‌ಮೇಲ್ ಮಾಡಲು ಕೃತ್ಯದ ವೀಡಿಯೋವನ್ನೂ ಮಾಡಿದ್ದಾರೆ. ಬಳಿಕ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ ಎಂದು ಹೇಳಿದ್ದಾರೆ.

    ಬಾರ್ಡರ್ ಮಿಲಿಟರಿ ಪೊಲೀಸರು ಸಿಪ್ರಾನನ್ನು ಬಂಧಿಸಿ, ಪಾಕಿಸ್ತಾನದ ದಂಡ ಸಂಹಿತೆ ಸೆಕ್ಷನ್ 376 ಹಾಗೂ 292B ಅಡಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಪಂಜಾಬ್ ಮುಖ್ಯಮಂತ್ರಿ ಹೆಚ್ಚಿನ ತನಿಖೆಗೆ ಆದೇಶಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]