Tag: american model

  • ಇನ್‌ಸ್ಟಾಗ್ರಾಮ್‌ನಲ್ಲಿ 30 ಕೋಟಿ ಫಾಲೋವರ್ಸ್‌ ಹೊಂದಿದ ವಿಶ್ವದ ಮೊದಲ ಮಹಿಳೆ ಇವರೇ!

    ಇನ್‌ಸ್ಟಾಗ್ರಾಮ್‌ನಲ್ಲಿ 30 ಕೋಟಿ ಫಾಲೋವರ್ಸ್‌ ಹೊಂದಿದ ವಿಶ್ವದ ಮೊದಲ ಮಹಿಳೆ ಇವರೇ!

    ಲಾಸ್‌ ಏಂಜಲೀಸ್: ಅಮೆರಿಕದ ಮಾಡೆಲ್‌, ಮಹಿಳಾ ಉದ್ಯಮಿ ಕೈಲಿ ಜೆನ್ನರ್‌, ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್‌ ಹೊಂದುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

    ಇನ್‌ಸ್ಟಾಗ್ರಾಮ್‌ನಲ್ಲಿ 30 ಕೋಟಿ (300 ಮಿಲಿಯನ್) ಫಾಲೋವರ್ಸ್‌ ಹೊಂದಿದ್ದಾರೆ. ಆ ಮೂಲಕ ಇನ್‌ಸ್ಟಾದಲ್ಲಿ ಹೆಚ್ಚು ಫಾಲೋವರ್ಸ್‌ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ತಮ್ಮ ಹೊಸ ದಾಖಲೆಯ ಮೂಲಕ ಫೇಮಸ್‌ ಪಾಪ್‌ ಸಿಂಗರ್‌ ಅರಿಯಾನಾ ಗ್ರಾಂಡೆ ಅವರನ್ನು ಹಿಂದಿಕ್ಕಿದ್ದಾರೆ. ಇದನ್ನೂ ಓದಿ: ಪತಿಗೆ ತಾನು ಇಟ್ಟಿರೋ ಹೆಸರನ್ನು ಮೊದಲ ಬಾರಿ ರಿವೀಲ್ ಮಾಡಿದ ರಾಧಿಕಾ

    24 ವರ್ಷ ವಯಸ್ಸಿನ ಕೈಲಿ ಜೆನ್ನರ್‌, ಹೆಚ್ಚು ಫಾಲೋವರ್ಸ್‌ ಹೊಂದಿದವರ ಪಟ್ಟಿಯಲ್ಲಿ ಈ ಎರಡನೇ ಸ್ಥಾನದಲ್ಲಿದ್ದಾರೆ. ಇನ್‌ಸ್ಟಾದಲ್ಲಿ 388 ಫಾಲೋವರ್ಸ್‌ ಹೊಂದಿರುವ ಖ್ಯಾತ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮೊದಲ ಸ್ಥಾನದಲ್ಲಿದ್ದಾರೆ.

    ಜೆನ್ನರ್‌ ಕೆಲವು ತಿಂಗಳುಗಳಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಕಡಿಮೆ ಪ್ರೊಫೈಲ್‌ ಹೊಂದಿದ್ದರೂ 30 ಕೋಟಿ ಫಾಲೋವರ್ಸ್‌ ಹೊಂದುವಲ್ಲಿ ಯಶಸ್ವಿಯಾಗಿದ್ದಾರೆ.

    ರ‍್ಯಾಪರ್‌ ಟ್ರಾವಿಸ್‌ ಸ್ಕಾಟ್‌ ಅವರನ್ನು ವಿವಾಹವಾಗಿರುವ ಕೈಲಿ ಜೆನ್ನರ್‌, ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ರಿಯಾಲಿಟಿ ಶೋ ತಾರೆಯಾಗಿರುವ ಇವರು, ನವೆಂಬರ್‌ನಲ್ಲಿ ಆಸ್ಟ್ರೋವರ್ಲ್ಡ್‌ ದುರಂತದ ನಂತರ ಸಾಮಾಜಿಕ ಮಾಧ್ಯಮದಿಂದ ದೂರ ಉಳಿದಿದ್ದರು. ಆಸ್ಟ್ರೋವರ್ಲ್ಡ್‌ ಸಮಾರಂಭದಲ್ಲಿ ಈಕೆಯ ಪತಿ ಪ್ರದರ್ಶನ ನೀಡುತ್ತಿದ್ದಾಗ ಪ್ರೇಕ್ಷಕರ ಗುಂಪಿನಲ್ಲಿ ನೂಕು ನುಗ್ಗಲು ಉಂಟಾಯಿತು. ಇದರಿಂದ 10 ಮಂದಿ ಸಾವನ್ನಪ್ಪಿದ್ದರು. ಹತ್ತಾರು ಮಂದಿ ಗಾಯಗೊಂಡಿದ್ದರು. ಇದನ್ನೂ ಓದಿ: ಸಖತ್ ಸದ್ದು ಮಾಡುತ್ತಿದೆ ಜಡ್ಡುವಿನ ಪುಷ್ಟ ಲುಕ್

    ಇದಾದ ಬಳಿಕ ಜೆನ್ನರ್ ಮತ್ತೆ ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡರು. 2021ರಲ್ಲಿ ಕ್ರಿಸ್‌ಮಸ್‌ನಲ್ಲಿ ತನ್ನ ತಾಯಿ ಕ್ರಿಸ್‌ ಜೆನ್ನರ್‌ ಅವರ ಫೋಟೋವನ್ನು ಪೋಸ್ಟ್‌ ಮಾಡಿದ್ದರು. ಇದಾದ ಬಳಿಕ ತಾವು ಗರ್ಭಿಣಿಯಾಗಿರುವ ಸಂಬಂಧದ ಫೋಟೋಗಳನ್ನು ಹಂಚಿಕೊಂಡಿದ್ದರು.