Tag: American Diamond

  • 5000 ಅಮೆರಿಕನ್‌ ಡೈಮಂಡ್‌, ಬೆಳ್ಳಿಯಲ್ಲಿ ಅರಳಿದ ʼಅಯೋಧ್ಯೆ ರಾಮಮಂದಿರʼ ನೆಕ್ಲೆಸ್‌

    5000 ಅಮೆರಿಕನ್‌ ಡೈಮಂಡ್‌, ಬೆಳ್ಳಿಯಲ್ಲಿ ಅರಳಿದ ʼಅಯೋಧ್ಯೆ ರಾಮಮಂದಿರʼ ನೆಕ್ಲೆಸ್‌

    – ಮಾರಾಟ ಮಾಡಲ್ಲ, ರಾಮಮಂದಿರಕ್ಕೆ ಗಿಫ್ಟ್‌ ಕೊಡ್ತೀವಿ ಎಂದ ವಜ್ರದ ವ್ಯಾಪಾರಿ

    ಗಾಂಧೀನಗರ: ಅಯೋಧ್ಯೆ ರಾಮಮಂದಿರ ಉದ್ಘಾಟನೆ ದಿನ ಹತ್ತಿರ ಬರುತ್ತಿದೆ. ರಾಮಮಂದಿರ ಉದ್ಘಾಟನೆಗೆ ಗಣ್ಯರು, ಸೆಲೆಬ್ರಿಟಿಗಳು, ಸುಂದರ ಕೆತ್ತನೆಯ ವಿಗ್ರಹಗಳು ಸುದ್ದಿಯಾಗುತ್ತಿವೆ. ಈ ಹೊತ್ತಿನಲ್ಲೇ ರಾಮಮಂದಿರ ಮಾದರಿಯಲ್ಲೇ ನೆಕ್ಲೆಸ್‌ ತಯಾರಿಸಿರುವುದು ಗಮನ ಸೆಳೆದಿದೆ.

    ಗುಜರಾತ್‌ನ ಸೂರತ್‌ನ ವಜ್ರದ ವ್ಯಾಪಾರಿಯೊಬ್ಬರು 5000 ಅಮೆರಿಕನ್ ವಜ್ರಗಳು ಮತ್ತು 2 ಕೆಜಿ ಬೆಳ್ಳಿಯನ್ನು ಬಳಸಿ ರಾಮಮಂದಿರ ಮಾದರಿಯ ನೆಕ್ಲೇಸ್ ಮಾಡಿದ್ದಾರೆ. ಜೊತೆಗೆ ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮಂತ ಮತ್ತು ಮಾಯಾ ಜಿಂಕೆ ಮೂರ್ತಿಗಳನ್ನೂ ಕೆತ್ತನೆ ಮಾಡಿಸಿದ್ದಾರೆ. 40 ಕುಶಲಕರ್ಮಿಗಳು 35 ದಿನಗಳಲ್ಲಿ ಇದನ್ನು ವಿನ್ಯಾಸಗೊಳಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ರಿಷಬ್ ಶೆಟ್ಟಿಗೆ ಆಹ್ವಾನ

    ಈ ಬಗ್ಗೆ ಮಾತನಾಡಿರುವ ರಸೇಶ್ ಜ್ಯುವೆಲ್ಸ್‌ನ ನಿರ್ದೇಶಕ ಕೌಶಿಕ್ ಕಾಕಡಿಯಾ, 2 ಕೆಜಿ ಬೆಳ್ಳಿ ಬಳಸಿ ನೆಕ್ಲೆಸ್‌ ಮತ್ತು ಮೂರ್ತಿಗಳನ್ನು ಮಾಡಲಾಗಿದೆ. ಜೊತೆಗೆ 5000 ಕ್ಕೂ ಹೆಚ್ಚು ಅಮೆರಿಕನ್ ವಜ್ರಗಳನ್ನು ಬಳಸಲಾಗಿದೆ ಎಂದು ತಿಳಿಸಿದ್ದಾರೆ.

    ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದಿಂದ ಸ್ಫೂರ್ತಿ ಪಡೆದು ನೆಕ್ಲೆಸ್‌ ವಿನ್ಯಾಸಗೊಳಿಸಿದ್ದೇವೆ. ಇದು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ರೂಪಿಸಿಲ್ಲ. ರಾಮಮಂದಿರಕ್ಕೆ ಏನಾದರೂ ಉಡುಗೊರೆ ಕೊಡಬೇಕು ಎಂಬ ಉದ್ದೇಶದಿಂದ ಮಾಡಿದ್ದೇವೆ. ರಾಮಾಯಣದ ಪ್ರಮುಖ ಪಾತ್ರಗಳನ್ನು ನೆಕ್ಲೆಸ್‌ನ ದಾರದ ಮಾದರಿಯಲ್ಲಿ ಕೆತ್ತಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಮುಸ್ಲಿಂ ಶಿಲ್ಪಿಗಳಿಂದ ರೂಪುಗೊಳ್ಳುತ್ತಿದೆ ರಾಮನ ವಿಗ್ರಹ

    2024 ಜನವರಿ 22 ರಂದು ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯಲ್ಲಿರುವ (Ayodhya) ರಾಮಮಂದಿರ (Sri Ram Mandir) ಉದ್ಘಾಟನೆಗೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಈಗಾಗಲೇ ಅಧಿಕೃತ ಆಹ್ವಾನ ನೀಡಿದೆ.

    ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಅಮಿತಾಬ್‌ ಬಚ್ಚನ್‌, ಅಕ್ಷಯ್‌ ಕುಮಾರ್‌ ಸೇರಿದಂತೆ ಅನೇಕ ನಟ-ನಟಿಯರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಕರ್ನಾಟಕದಲ್ಲಿ ಕಾಂತಾರಾ ಹೀರೋ ರಿಷಬ್‌ ಶೆಟ್ಟಿಯೂ ಪಾಲ್ಗೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ: ನನ್ನಿಂದಲೇ ರಾಮಮಂದಿರ ನಿರ್ಮಾಣ ಸಾಧ್ಯವಾಗಿದೆ: ಮೋದಿ