Tag: america former president

  • ನಾನು ಮತ್ತೆ ಅಧ್ಯಕ್ಷನಾಗಿದ್ದರೆ ರಷ್ಯಾ-ಉಕ್ರೇನ್‌ ಯುದ್ಧ ನಡೆಯುತ್ತಿರಲಿಲ್ಲ: ಟ್ರಂಪ್‌

    ನಾನು ಮತ್ತೆ ಅಧ್ಯಕ್ಷನಾಗಿದ್ದರೆ ರಷ್ಯಾ-ಉಕ್ರೇನ್‌ ಯುದ್ಧ ನಡೆಯುತ್ತಿರಲಿಲ್ಲ: ಟ್ರಂಪ್‌

    ವಾಷಿಂಗ್ಟನ್‌: ನಾನು ಮತ್ತೆ ಅಮೆರಿಕ ಅಧ್ಯಕ್ಷನಾಗಿದ್ದರೆ ರಷ್ಯಾ-ಉಕ್ರೇನ್‌ ಯುದ್ಧ ಸಂಭವಿಸುತ್ತಿರಲಿಲ್ಲ ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತಿಕ್ರಿಯಿಸಿದ್ದಾರೆ.

    ರಷ್ಯಾ-ಉಕ್ರೇನ್ ಯುದ್ಧದ ಬೆಳವಣಿಗೆಗಳನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಸಂತೋಷದಿಂದ ವೀಕ್ಷಿಸುತ್ತಿದ್ದಾರೆ. ತೈವಾನ್ ಅನ್ನು ಮುಂದೆ ಚೀನಾ ಆಕ್ರಮಿಸಲಿದೆ. ಪ್ರಸ್ತುತ ಉಕ್ರೇನ್‌ಗೆ ತಲೆದೋರಿರುವ ಸಂಕಷ್ಟ ಮುಂದೆ ತೈವಾನ್‌ಗೆ ಎದುರಾಗಲಿದೆ. ಯುನೈಟೆಡ್ ಸ್ಟೇಟ್ಸ್ ಎಷ್ಟು ಮೂರ್ಖ ಎಂಬುದನ್ನು ಚೀನಾ ಗಮನಿಸುತ್ತಿದೆ. ಖಂಡಿತವಾಗಿಯೂ ಚೀನಾ ಆಕ್ರಮಣಕ್ಕೆ ಸಜ್ಜಾಗಿದೆ ಎಂದು ಟ್ರಂಪ್‌ ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾದ ಯುದ್ಧನೌಕೆಗಳು ಕ್ರೈಮಿಯಾವನ್ನು ಬಿಟ್ಟು ಒಡೆಸ್ಸಾದತ್ತ ಹೋಗುತ್ತಿವೆ: ಅಮೇರಿಕ

    ರಷ್ಯಾ-ಉಕ್ರೇನ್‌ ವಿಚಾರವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ತಳೆದಿರುವ ಧೋರಣೆ ವಿರುದ್ಧ ಹರಿಹಾಯ್ದಿರುವ ಟ್ರಂಪ್‌, ಅಧ್ಯಕ್ಷ ಕ್ಸಿ ಉನ್ನತ ಮಟ್ಟದ ಬುದ್ಧಿವಂತಿಕೆಯನ್ನು ಹೊಂದಿರುವ ವ್ಯಕ್ತಿ. ಅಫ್ಘಾನಿಸ್ತಾನದಲ್ಲಿ ಏನಾಯಿತು ಎಂದು ಅವರು ನೋಡಿದ್ದಾರೆ. ನಾವು ಅಫ್ಘಾನಿಸ್ತಾನವನ್ನು ತೊರೆದ ಮಾರ್ಗವನ್ನು ಅವರು ಗಮನಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಅಮೆರಿಕ ಸೇನಾ ಪಡೆ ವಾಪಸ್‌ ಬರುವಾಗ, ಎಷ್ಟೋ ಮಂದಿ ಅಮೆರಿಕ ನಾಗರಿಕರು ಅಲ್ಲಿಯೇ ಸಿಲುಕಿದ್ದಾರೆ. ಈಗಲೂ ಹೊರಬರಲು ಅವರು ಪ್ರಯತ್ನಿಸುತ್ತಿದ್ದಾರೆ. ಇದೆಲ್ಲವನ್ನೂ ಕ್ಸಿ ಜಿನ್‌ಪಿಂಗ್‌ ಗಮನಿಸಿದ್ದಾರೆ. ತನಗೆ ಅನಿಸಿದ್ದನ್ನು ಮಾಡಲು ಇದು ಅವರಿಗೆ ಅವಕಾಶ ಸಿಕ್ಕಂತಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಂದು ವಾರದೊಳಗೆ 1 ಮಿಲಿಯನ್ ಜನ ಉಕ್ರೇನ್‍ನಿಂದ ಪಲಾಯನ: ವಿಶ್ವಸಂಸ್ಥೆ

    ಯುದ್ಧದಲ್ಲಿ ಅನೇಕ ಜನರು ಸಾಯುತ್ತಿದ್ದಾರೆ. ಆದರೆ ನಾವು (ಅಮೆರಿಕ) ಇದನ್ನು ಅನುಮತಿಸುತ್ತಿದ್ದೇವೆ. ನಾನು ಮತ್ತೆ ಅಧ್ಯಕ್ಷನಾಗಿದ್ದರೆ ಇದು ಎಂದಿಗೂ ಸಂಭವಿಸುತ್ತಿರಲಿಲ್ಲ. ಇದು ಎಂದಿಗೂ ಸಂಭವಿಸಬಾರದು. ಪುಟಿನ್ ಈ ರೀತಿ ಮಾಡುತ್ತಿರಲಿಲ್ಲ ಎಂದು ಟ್ರಂಪ್‌ ಮಾತನಾಡಿದ್ದಾರೆ.