Tag: America citizen

  • ಬೇಗ ಸಾವು ಬರುತ್ತೆಂದು ನೇಣಿಗೆ ಶರಣಾಗ್ತೇನೆ: ಅಮೆರಿಕ ಪ್ರಜೆ ಆತ್ಮಹತ್ಯೆ

    ಬೇಗ ಸಾವು ಬರುತ್ತೆಂದು ನೇಣಿಗೆ ಶರಣಾಗ್ತೇನೆ: ಅಮೆರಿಕ ಪ್ರಜೆ ಆತ್ಮಹತ್ಯೆ

    ಬೆಂಗಳೂರು: ಅಮೆರಿಕದ ಪ್ರಜೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಆವಲಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಸ್ಕಾಟ್ ಟೌಲ್ ಬೀ(45) ನೇಣಿಗೆ ಶರಣಾದ ವ್ಯಕ್ತಿ. ಸ್ಕಾಟ್ ಟೌಲ್ ಬೀ ಅಮೆರಿಕದ ಪ್ರಜೆ ಆಗಿದ್ದು, ಬೆಂಗಳೂರಿನ ಇಂದಿರಾನಗರದಲ್ಲಿ ನೆಲೆಸಿದ್ದನು. ಇದೇ ತಿಂಗಳ 10ರಂದು ಟೌಲ್ ಬೀ ಕಾಣೆಯಾಗಿದ್ದನು. ಈ ವೇಳೆ ಆತನ ಸ್ನೇಹಿತ ಗಣೇಶ್ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

    ಸ್ನೇಹಿತ ಗಣೇಶ್ ಯೂಟ್ಯೂಬ್ ವಿಡಿಯೋವನ್ನು ಆಧರಿಸಿ ಮೃತನ ಲೋಕೇಶನ್ ಪತ್ತೆ ಹಚ್ಚಿದ್ದಾರೆ. ಬೆಂಗಳೂರು ಹೊರವಲಯದ ಆವಲಹಳ್ಳಿ ಕೆರೆಯ ನಿರ್ಜನ ಪ್ರದೇಶದ ಮರದಲ್ಲಿ ಟೌಲ್ ಬೀ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ ಆಗಿದೆ.

    “ಬೇಗ ಸಾವು ಬರುತ್ತೆ ಎಂದು ನೇಣಿಗೆ ಶರಣಾಗುತ್ತೇನೆ” ಎಂದು ಟೌಲ್ ಬೀ ಒಂದು ಕಲ್ಲಿನ ಮೇಲೆ ತನ್ನ ಹೆಲ್ಮೆಟ್ ಇಟ್ಟು ಅದರ ಮೇಲೆ ಕ್ಯಾಮೆರಾ ಇಟ್ಟು ಅದರಲ್ಲಿ ಹೇಳಿಕೊಂಡಿದ್ದಾನೆ. ಬಳಿಕ ಆ ವಿಡಿಯೋವನ್ನು ಯೂಟ್ಯೂಬ್‍ನಲ್ಲಿ ಅಪ್ಲೋಡ್ ಮಾಡಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಟೌಲ್ ಬೀ ಆತ್ಮಹತ್ಯೆ ಮಾಡಿಕೊಳ್ಳುವಾಗ ವಿಡಿಯೋ ಮಾಡಿ ಮೃತಪಟ್ಟಿದ್ದಾನೆ. ಆವಲಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv