Tag: Ambulances

  • ಹಳಿ ತಪ್ಪಿದ ರೈಲು – ಉತ್ತರ ಪ್ರದೇಶದಲ್ಲಿ ಭೀಕರ ದುರಂತಕ್ಕೆ ನಾಲ್ವರು ದುರ್ಮರಣ

    ಹಳಿ ತಪ್ಪಿದ ರೈಲು – ಉತ್ತರ ಪ್ರದೇಶದಲ್ಲಿ ಭೀಕರ ದುರಂತಕ್ಕೆ ನಾಲ್ವರು ದುರ್ಮರಣ

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಗೋಂಡಾ ಜಿಲ್ಲೆಯಲ್ಲಿ ನಡೆದಿರುವ ಭೀಕರ ರೈಲು ದುರಂತವು ಒಡಿಶಾದ ಬಾಲಸೋರ್‌, ಪಶ್ಚಿಮ ಬಂಗಾಳದ ದಾರ್ಜಿಲಿಂಗ್‌ ನಲ್ಲಿ ನಡೆದ ಭೀಕರ ರೈಲು ಅಪಘಾತವನ್ನೇ ನೆನಪಿಸಿದೆ. ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್ ರೈಲಿನ (Chandigarh-Dibrugarh Express Train) ಹಲವು ಕೋಚ್‌ಗಳು ಹಳಿ ತಪ್ಪಿದ್ದರಿಂದ ರೈಲು ಅಪಘಾತಕ್ಕೀಡಾಗಿದ್ದು, ನಾಲ್ವರು ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಗೋಂಡಾದಲ್ಲಿ ನಡೆದಿದೆ.

    ಬುಧವಾರ ರಾತ್ರಿ 11.35ಕ್ಕೆ ಚಂಡೀಗಢ ನಿಲ್ದಾಣದಿಂದ (Chandigarh Railway Station) ಹೊರಟಿದ್ದ ರೈಲು (ರೈಲು ಸಂಖ್ಯೆ 15904) ಅಸ್ಸಾಂನ ದಿಬ್ರುಗಢಕ್ಕೆ ತೆರಳುತ್ತಿತ್ತು. ಮಾರ್ಗಮಧ್ಯೆ ಹಲವು ಕೋಚ್‌ಗಳು ಹಳಿ ತಪ್ಪಿದ ಪರಿಣಾಮ ದುರಂತರ ಸಂಭವಿಸಿದೆ. ಗೋಂಡಾ ಮತ್ತು ಜಿಲಾಹಿ ನಡುವಿನ ಪಿಕೌರಾ ಪ್ರದೇಶದಲ್ಲಿ ಅಪಘಾತ (Train Accident) ಸಂಭವಿಸಿದ್ದು, ನಾಲ್ವರು ಪ್ರಯಾಣಿಕರು ದುರ್ಮರಣಕ್ಕೀಡಾಗಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಐಇಡಿ ಸ್ಫೋಟಕ್ಕೆ ಇಬ್ಬರು ಯೋಧರು ಹುತಾತ್ಮ

    15 ಅಂಬುಲೆನ್ಸ್‌, 40 ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಹಾಜರ್‌:
    ಘಟನೆ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ದೌಡಾಯಿಸಿವೆ. ಅಲ್ಲದೇ 15 ಅಂಬುಲೆನ್ಸ್‌ಗಳೊಂದಿಗೆ 40 ಸದಸ್ಯರ ವೈದ್ಯಕೀಯ ತಂಡ ಸ್ಥಳಕ್ಕೆ ಬಂದಿದ್ದು, ಪ್ರಯಾಣಿಕರ ರಕ್ಷಣೆಗೆ ಮುಂದಾಗಿದ್ದಾರೆ. ಹೆಚ್ಚುವರಿ ಅಂಬುಲೆನ್ಸ್‌ಗಳನ್ನು ಸ್ಥಳಕ್ಕೆ ನಿಯೋಜನೆ ಮಾಡುವಂತೆ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಗ್ನಿವೀರರಿಗೆ 10% ಮೀಸಲಾತಿ – ಸ್ವಂತ ಉದ್ಯಮ ಆರಂಭಿಸುವವರಿಗೆ 5 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ: ಸಿಎಂ ಘೋಷಣೆ

    ಸ್ಥಳಕ್ಕೆ ಸಿಎಂ ಭೇಟಿ:
    ಘಟನೆ ಸಂಭವಿಸಿದ ಕೂಡಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಸ್ಥಳಕ್ಕಾಗಮಿಸಿದ್ದಾರೆ. ಜೊತೆಗೆ ಪರಿಹಾರ ಕ್ರಮಗಳನ್ನು ತ್ವರಿತಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಸಿಎಂ ಭೇಟಿ ಬೆನ್ನಲ್ಲೇ ರಾಜ್ಯ ವಿಪತ್ತು ನಿರ್ವಹಣಾ ಪಡೆ ಸ್ಥಳಕ್ಕಾಗಮಿಸಿ ಪರಿಹಾರ ಕಾರ್ಯ ಚುರುಕುಗೊಳಿಸುವಂತೆ ಸೂಚನೆ ನೀಡಿದೆ. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಭೂಕುಸಿತ ದುರಂತ – ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದ ಕೇಂದ್ರ ಸಚಿವ ಹೆಚ್‌ಡಿಕೆ

    ರೈಲು ಅಪಘಾತ ಸಂಭವಿಸಿದ ಕಾರಣ ಇದೇ ಮಾರ್ಗವಾಗಿ ತೆರಳಬೇಕಿದ್ದ 2 ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ, 11 ರೈಲುಗಳಿಗೆ ಮಾರ್ಗಬದಲಾವಣೆಗೆ ಸೂಚಿಸಲಾಗಿದೆ. ಜೊತೆಗೆ ಪ್ರಯಾಣಿಕರಿಗಾಗಿ ಸಹಾಯವಾಣಿ ಸಹ ಸ್ಥಾಪಿಸಲಾಗಿದೆ. ಇದನ್ನೂ ಓದಿ: ಪಕ್ಷದಲ್ಲಿರುವ ಅಲ್ಪಸಂಖ್ಯಾತ ವಿಭಾಗವನ್ನು ವಿಸರ್ಜಿಸಬೇಕು – ಬಿಜೆಪಿ ನಾಯಕ ಸುವೆಂದು ಅಧಿಕಾರಿ 

  • ನೇಪಾಳದ ಆಸ್ಪತ್ರೆ-ಶಾಲೆಗಳಿಗೆ ಅಂಬುಲೆನ್ಸ್, ಶಾಲಾ ವಾಹನ ಗಿಫ್ಟ್ ಕೊಟ್ಟ ಭಾರತ

    ನೇಪಾಳದ ಆಸ್ಪತ್ರೆ-ಶಾಲೆಗಳಿಗೆ ಅಂಬುಲೆನ್ಸ್, ಶಾಲಾ ವಾಹನ ಗಿಫ್ಟ್ ಕೊಟ್ಟ ಭಾರತ

    ಕಾಠ್ಮಂಡು: ನೇಪಾಳದ (Nepal) ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಭಾರತ (India)  84 ವಾಹನಗಳನ್ನು ಭಾನುವಾರ ಉಡಗೊರೆಯಾಗಿ ನೀಡಿದೆ.

    ನೇಪಾಳದ ಸಚಿವ ಅಶೋಕ್ ಕುಮಾರ್ ರೈ ಅವರ ಸಮ್ಮುಖದಲ್ಲಿ ಭಾರತೀಯ ರಾಯಭಾರಿ ನವೀನ್ ಶ್ರೀವಾಸ್ತವ್ 34 ಅಂಬುಲೆನ್ಸ್‌ಗಳು (Ambulances) ಮತ್ತು 50 ಶಾಲಾ ಬಸ್‍ಗಳನ್ನು (School Bus) ಸಂಸ್ಥೆಗಳ ಪ್ರತಿನಿಧಿಗಳಿಗೆ ಹಸ್ತಾಂತರಿಸಿದ್ದಾರೆ.

    ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಸುಧಾರಿಸಲು ಅನುಕೂಲವಾಗಲು ಈ ವಾಹನಗಳನ್ನು ನೀಡಲಾಗಿದೆ. ಈ ವಿಚಾರದಲ್ಲಿ ನೇಪಾಳ ಸರ್ಕಾರದ ಪ್ರಯತ್ನಗಳಿಗೆ ನೆರವಾಗುವುದು ನೇಪಾಳ-ಭಾರತ ಅಭಿವೃದ್ಧಿ ಪಾಲುದಾರಿಕೆ ಕಾರ್ಯಕ್ರಮದಲ್ಲಿ ಒಂದಾಗಿದೆ. ಅದರ ಅಡಿಯಲ್ಲಿ ವಾಹನಗಳನ್ನು ಉಡುಗೊರೆಯಾಗಿ ನೀಡುವುದು ಭಾರತ ಸರ್ಕಾರದ ದೀರ್ಘಕಾಲದ ಸಂಪ್ರದಾಯ ಎಂದು ಶ್ರೀವಾಸ್ತವ್ ಈ ವೇಳೆ ಹೇಳಿದ್ದಾರೆ. ಇದನ್ನೂ ಓದಿ: UPA ಮೈತ್ರಿ ಕೂಟದ ಮಹತ್ವದ ಸಭೆಗೆ ಬೆಂಗಳೂರಿನಲ್ಲಿ ಮುಹೂರ್ತ

    ಜನರ ಜೀವನ ಮಟ್ಟವನ್ನು ಉನ್ನತ ಮಟ್ಟಕ್ಕೆ ಏರಿಸುವುದು ಇದರ ಮೂಲ ಉದ್ದೇಶವಾಗಿದೆ. ಈ ಪ್ರಯತ್ನ ನೇಪಾಳದ ಅಭಿವೃದ್ಧಿ ದಾರಿಯಲ್ಲಿ ಸ್ಪಷ್ಟವಾದ ಪ್ರಗತಿಯನ್ನು ತರಲಿದೆ ಎಂದು ಸ್ಥಳೀಯ ಮೇಯರ್ ಹೇಳಿಕೊಂಡಿದ್ದಾರೆ.

    ಇದೇ ವೇಳೆ ನೇಪಾಳದಲ್ಲಿ ನಡೆಯುತ್ತಿರುವ ಭಾರತ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಶಿಕ್ಷಣ ಸಚಿವ ರೈ ಶ್ಲಾಘಿಸಿದರು. ಇಂತಹ ಯೋಜನೆಗಳಿಂದ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಉತ್ತಮವಾಗಿರಲು ಸಹಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    1994 ರಿಂದ ಇಲ್ಲಿಯವರೆಗೂ ಭಾರತ ನೇಪಾಳದಾದ್ಯಂತ ವಿವಿಧ ಆರೋಗ್ಯ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ 974 ಅಂಬುಲೆನ್ಸ್‌ಗಳು ಮತ್ತು 234 ಶಾಲಾ ಬಸ್‍ಗಳನ್ನು ಉಡುಗೊರೆಯಾಗಿ ನೀಡಿದೆ. ಇದನ್ನೂ ಓದಿ: ತತ್ವ-ಸಿದ್ಧಾಂತಗಳಿಗೆ ತಿಲಾಂಜಲಿ ಇಟ್ಟು ಅಧಿಕಾರಕ್ಕೆ ಬರಲು ವಿಪಕ್ಷಗಳ ಪ್ರಯತ್ನ: ಎನ್.ರವಿಕುಮಾರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೆಕ್ಸಿಕೋ ವಲಸಿಗರ ಕೇಂದ್ರದಲ್ಲಿ ಭೀಕರ ಅಗ್ನಿ ದುರಂತ – 39 ಮಂದಿ ಸಾವು

    ಮೆಕ್ಸಿಕೋ ವಲಸಿಗರ ಕೇಂದ್ರದಲ್ಲಿ ಭೀಕರ ಅಗ್ನಿ ದುರಂತ – 39 ಮಂದಿ ಸಾವು

    ವಾಷಿಂಗ್ಟನ್‌: ಉತ್ತರ ಮೆಕ್ಸಿಕೋದ (Northern Mexico) ಸಿಯುಡಾಡ್ ಜುವಾರೆಜ್‌ನಲ್ಲಿರುವ ಸರ್ಕಾರಿ ವಲಸಿಗರ ಕೇಂದ್ರದಲ್ಲಿ (Migration Facility Center) ಸೋಮವಾರ ರಾತ್ರಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ಘಟನೆಯಲ್ಲಿ 39 ಮಂದಿ ಸಾವನ್ನಪ್ಪಿದ್ದು, 29 ಮಂದಿ ಗಾಯಗೊಂಡಿದ್ದಾರೆ.

    ಮೆಕ್ಸಿಕೋ ಮತ್ತು ಅಮೆರಿಕ (USA) ಸಂಪರ್ಕಿಸುವ ಸ್ಟಾಂಟನ್-ಲೆಡ್ರೆ ಸೇತುವೆಯ ಬಳಿ ಇರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಮೈಗ್ರೇಷನ್ ಕಚೇರಿಯಲ್ಲಿ (INM) ರಾತ್ರಿ 10 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿದೆ. ಘಟನೆಗೂ ಮುನ್ನ ನಗರದಿಂದ 71 ವಲಸಿಗರನ್ನು ಕೇಂದ್ರಕ್ಕೆ ಕರೆತರಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದ ಶಾಲೆಯಲ್ಲಿ ಗುಂಡಿನ ದಾಳಿ – ಮೂವರು ಮಕ್ಕಳು ಸೇರಿ 6 ಜನ ಸಾವು

    ಸದ್ಯ ಘಟನೆಯ ದೃಶ್ಯಾವಳಿಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅಂಬುಲೆನ್ಸ್‌ ಹಾಗೂ ತುರ್ತು ಸೇವೆಗಳ ಸೌಲಭ್ಯ ಕಲ್ಪಿಸಲಾಗಿದ್ದು, ಗಾಯಗೊಂಡವರನ್ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ – 20 ಹಜ್ ಯಾತ್ರಾರ್ಥಿಗಳ ಸಾವು

    ಮೂಲಗಳ ಪ್ರಕಾರ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಮೈಗ್ರೇಷನ್ ಕಚೇರಿ ಸಿಬ್ಬಂದಿ ನಗರದಲ್ಲಿದ್ದ ವಲಸಿಗರನ್ನು ಕೇಂದ್ರಕ್ಕೆ ತರುವ ಕಾರ್ಯಾಚರಣೆ ಕೈಗೊಂಡಿದ್ದರು. ಈ ವಿಚಾರದಲ್ಲಿ ವಲಸಿಗರು ಮತ್ತು ಸಿಬ್ಬಂದಿ ನಡುವೆ ಉದ್ವಿಗ್ನತೆ ಉಂಟಾಗಿತ್ತು ಎಂದು ತಿಳಿದುಬಂದಿದೆ. ಘಟನೆಯ ನಂತರ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

  • ಸಮಸ್ಯೆಗಳ ಗೂಡಾದ 108 ಆಂಬುಲೆನ್ಸ್ ಸೇವೆ – ಡಕೋಟ ಎಕ್ಸ್‌ಪ್ರೆಸ್‌ ಸ್ಥಗಿತಕ್ಕೆ ಮುಂದಾದ ಆರೋಗ್ಯ ಇಲಾಖೆ

    ಸಮಸ್ಯೆಗಳ ಗೂಡಾದ 108 ಆಂಬುಲೆನ್ಸ್ ಸೇವೆ – ಡಕೋಟ ಎಕ್ಸ್‌ಪ್ರೆಸ್‌ ಸ್ಥಗಿತಕ್ಕೆ ಮುಂದಾದ ಆರೋಗ್ಯ ಇಲಾಖೆ

    ಬೆಂಗಳೂರು: 108 ಆಂಬುಲೆನ್ಸ್ (108 Ambulances) ಸೇವೆ ಸಮಸ್ಯೆಗಳ ಗೂಡಾಗಿದೆ. ಜೀವ ಉಳಿಸಬೇಕಿರೋ ಆಂಬುಲೆನ್ಸ್‌ಗಳು ಡಕೋಟ ಎಕ್ಸ್‌ಪ್ರೆಸ್‌ ಆಗ್ತಿವೆ. 340ಕ್ಕೂ ಹೆಚ್ಚು ಆಂಬುಲೆನ್ಸ್‌ಗಳು ಗುಜರಿಗೆ ತಲುಪಿದ್ದು. 340 ಆಂಬುಲೆನ್ಸ್‌ಗಳ ಸ್ಥಗಿತಕ್ಕೆ ಆರೋಗ್ಯ ಇಲಾಖೆ (Health Department) ಮುಂದಾಗಿದೆ.

    ಕಳೆದ ಎರಡ್ಮೂರು ತಿಂಗಳ ಹಿಂದೆ ಸಂಬಳ ವಿಚಾರಕ್ಕೆ ನೌಕರರು ಮುಷ್ಕರ ಮಾಡಿ 108 ಸೇವೆಯಲ್ಲಿ ಆಗುತ್ತಿರುವ ಅನ್ಯಾಯವನ್ನು ತೆರೆದಿಟ್ಟು ಸೇವೆ ಸ್ಥಗಿತಕ್ಕೆ ಮುಂದಾಗಿದ್ರು. ಈ ಘಟನೆ ಆದ ಬಳಿಕ ಈಗ ಮತ್ತೊಂದು ವಿಚಾರ ಬಯಲಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ. ರಾಜ್ಯದ 108 ಸೇವೆಯ ಆಂಬುಲೆನ್ಸ್‌ಗಳು ಗುಜರಿಗೆ ತಲುಪಿರೋ ವಿಚಾರ ಬಯಲಾಗಿದೆ. ಇಂಜಿನ್ ಸಮಸ್ಯೆ, ಬೋರ್ ಸಮಸ್ಯೆ ಮತ್ತು ಟೆಕ್ನಿಕಲ್ ಸಮಸ್ಯೆಯಿಂದ 340ಕ್ಕೂ ಹೆಚ್ಚು ಆಂಬುಲೆನ್ಸ್‌ಗಳನ್ನು ಸ್ಥಗಿತ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಬೆಂಗಳೂರಿನಲ್ಲಿ (Bengaluru) ಒಟ್ಟು 709 ಆಂಬುಲೆನ್ಸ್‌ಗಳಿದ್ದು, ಅದರಲ್ಲಿ 340 ಆಂಬುಲೆನ್ಸ್‌ಗಳು ಕೆಟ್ಟು ನಿಂತಿವೆ. ಕೆಲವೊಂದನ್ನು ರೆಡಿ ಮಾಡಿಸಿಕೊಂಡು ಓಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ATMನಿಂದ ಹಣ ಡ್ರಾ ಮಾಡಿ ಕೊಟ್ಟು ವೃದ್ಧನಿಗೆ ವಂಚಿಸಿದ ಸೆಕ್ಯೂರಿಟಿ ಗಾರ್ಡ್ – ದೋಚಿದ್ದು 2.50 ಲಕ್ಷ ರೂ.!

    ಶೀಘ್ರದಲ್ಲಿ 340 ಆಂಬುಲೆನ್ಸ್ ಸ್ಥಗಿತಗೊಳಿಸಿ ಹೊಸದಾಗಿ ಖರೀದಿ ಮಾಡೋ ಪ್ಲ್ಯಾನ್ ಮಾಡಿದ್ದಾರಂತೆ. ಸದ್ಯ ಜಿವಿಕೆ (GVK) ಆವರಣ ಸೇರಿದಂತೆ ಹಲವೆಡೆ ಕೆಟ್ಟು ನಿಂತ ಆಂಬುಲೆನ್ಸ್‌ಗಳನ್ನು ನಿಲ್ಲಿಸಲಾಗಿದೆ. 2008ರಿಂದಲೂ ಕೂಡ ಜಿವಿಕೆ ಸಂಸ್ಥೆ ಆಂಬುಲೆನ್ಸ್ ಸೇವೆ ನೀಡ್ತಾ ಇದೆ. ಆದರೆ ಜಿವಿಕೆ ಸಂಸ್ಥೆಯ ಕಾರ್ಯ ವೈಖರಿ ಬಗ್ಗೆ ಅಪಸ್ವರ ಎದ್ದಿದ್ದು, ಸಂಸ್ಥೆಯ ಕಾರ್ಯ ವೈಖರಿ ಚೆನ್ನಾಗಿಲ್ಲ ಅಂತಾ ಸ್ವತಃ ಆಂಬುಲೆನ್ಸ್ ನೌಕರರೇ ಹೇಳಿದ್ದಾರೆ. ಹೀಗಾಗಿ ಜಿವಿಕೆ ಟೆಂಡರ್ ಅವಧಿ ಮುಕ್ತಾಯ ಆಗಿರುವ ಹಿನ್ನೆಲೆ ಹೊಸದಾಗಿ ಟೆಂಡರ್ ಕರೆದ್ರು ಆಂಬುಲೆನ್ಸ್ ಸೇವೆ ನೀಡಲು ಯಾವ ಕಂಪನಿಗಳು ಮುಂದೆ ಬರದೇ ಇರೋದು ಬಹಿರಂಗ ಆಗಿದೆ. ಫೆಬ್ರವರಿ 6ಕ್ಕೆ ಟೆಂಡರ್ ಅವಧಿ ಮುಕ್ತಾಯ ಆಗ್ತಾ ಇದ್ದು. ಯಾವ ಕಂಪನಿಗಳು ಮುಂದೆ ಬರದೇ ಇದ್ರೆ ಸದನದ ಗಮನಕ್ಕೆ ತಂದು ಆಂಬುಲೆನ್ಸ್‌ಗಳಲ್ಲಿ ಇರುವ ಸಮಸ್ಯೆಯನ್ನು ಸರಿಪಡಿಸುತ್ತೇವೆ ಅಂತಿದ್ದಾರೆ ಇಲಾಖೆ ಅಧಿಕಾರಿಗಳು. ಇದನ್ನೂ ಓದಿ: ಕಿಲ್ಲರ್ BMTCಗೆ ಮತ್ತೊಂದು ಬಲಿ – ಮೂವರ ಸ್ಥಿತಿ ಗಂಭೀರ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಲುವೆಗೆ ಉರುಳಿದ ಬಸ್ – ಭೀಕರ ಅಪಘಾತಕ್ಕೆ 22 ಬಲಿ, 7 ಮಂದಿಗೆ ಗಾಯ

    ಕಾಲುವೆಗೆ ಉರುಳಿದ ಬಸ್ – ಭೀಕರ ಅಪಘಾತಕ್ಕೆ 22 ಬಲಿ, 7 ಮಂದಿಗೆ ಗಾಯ

    ಕೈರೋ: ಉತ್ತರ ಈಜಿಪ್ಟ್‌ನ (Egypt) ದಕಹ್ಲಿಯಾ ಪ್ರಾಂತ್ಯದಲ್ಲಿ ಪ್ರಯಾಣಿಸುತ್ತಿದ್ದ ಮಿನಿಬಸ್‌ವೊಂದು ಕಾಲುವೆಗೆ (Canal) ಉರುಳಿಬಿದ್ದ ಪರಿಣಾಮ 22 ಮಂದಿ ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ.

    ರಾಜಧಾನಿ ಕೈರೋದ ಈಶಾನ್ಯಕ್ಕೆ 100 ಕಿಮೀ ದೂರದಲ್ಲಿರುವ ದಕಾಹ್ಲಿಯಾ ಪ್ರಾಂತ್ಯದಲ್ಲಿ ಅಪಘಾತ (Egypt Bus Accident) ಸಂಭವಿಸಿದೆ. ಬಸ್‌ನಲ್ಲಿ ಸುಮಾರು 46 ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನಿಂದ ಸ್ಟೇರಿಂಗ್ ನಿಯಂತ್ರಣ ಕಳೆದುಕೊಂಡಿದ್ದು, ಕಾಲುವೆಗೆ ಉರುಳಿದೆ. ಅಪಘಾತದಲ್ಲಿ 3 ಮಕ್ಕಳು ಸೇರಿ 22 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯದ (Health Ministry) ಅಧಿಕಾರಿ ಡಾ.ಶೆರಿಫ್ ಮಕೀನ್ ತಿಳಿಸಿದ್ದಾರೆ. ಇದನ್ನೂ ಓದಿ: ವಿನಯ್ ಗುರೂಜಿ ವಿರುದ್ಧ ಅಪಪ್ರಚಾರ – ಪ್ರತಿಭಟನೆಗೆ ಸಜ್ಜಾದ ಭಕ್ತವೃಂದ

    ಘಟನಾ ಸ್ಥಳಕ್ಕೆ ಒಟ್ಟು 18 ಅಂಬುಲೆನ್ಸ್ಗಳನ್ನು ಕಳುಹಿಸಲಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಮೃತರು ಹಾಗೂ ಗಾಯಗೊಂಡ ಕುಟುಂಬಗಳಿಗೆ ಈಗಾಗಲೇ ಪರಿಹಾರ ಘೋಷಿಸಲಾಗಿದೆ. ಇದನ್ನೂ ಓದಿ: 150 ವರ್ಷಗಳ ಬಳಿಕ ಧಾರವಾಡಕ್ಕೆ ಭೇಟಿ ನೀಡಿದ ಕನ್ನಡ ನಿಘಂಟು ತಜ್ಞ ಕಿಟೆಲ್ ಕುಟುಂಬ

    10.3 ಕೋಟಿ ಜನಸಂಖ್ಯೆ ಹೊಂದಿರುವ ಈಜಿಪ್ಟ್ನಲ್ಲಿ ರಸ್ತೆ ಅಪಘಾತಗಳು ಸಹಜವಾಗಿದೆ. ಕಳಪೆ ರಸ್ತೆಗಳು ಹಾಗೂ ಟ್ರಾಫಿಕ್ ನಿಯಮ ಉಲ್ಲಂಘನೆಯಿಂದಾಗಿ ಅಪಘಾತಗಳು ಹೆಚ್ಚಾಗಿವೆ. ಪ್ರತಿ ವರ್ಷವೂ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿವೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ (Transport Safety Record) 2021ರಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ ಸುಮಾರು 7 ಸಾವಿರ ಜನರು ಸಾವನ್ನಪ್ಪಿದ್ದಾರೆ. ಕಳೆದ ಜುಲೈನಲ್ಲೂ ಭಾರೀ ರಸ್ತೆ ಅಪಘಾತ ಸಂಭವಿಸಿ 25 ಜನರು ಸ್ಥಳದಲ್ಲೇ ಮೃತಪಟ್ಟಿದ್ದರು. 35 ಮಂದಿ ಗಾಯಗೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]