Tag: ambuja movie

  • 20 ಕೆಜಿ ಭಾರದ ಲಂಬಾಣಿ ಉಡುಗೆ ತೊಟ್ಟ ಶುಭಾ ಪೂಂಜಾ

    20 ಕೆಜಿ ಭಾರದ ಲಂಬಾಣಿ ಉಡುಗೆ ತೊಟ್ಟ ಶುಭಾ ಪೂಂಜಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶೂಭಾ ಪೂಂಜಾ ವಿಶೇಷವಾದ ಗೆಟಪ್‍ನಲ್ಲಿ ತೆರೆ ಮೇಲೆ ಬರಲು ಸಿದ್ಧರಾಗಿದ್ದಾರೆ. ಇದೀಗ ಅವರು ತೊಟ್ಟಿರುವ ಲಂಬಾಣಿ ಉಡುಗೆಯ ಮೂಲಕವಾಗಿ ಸಖತ್ ಸುದ್ದಿಯಲ್ಲಿದ್ದಾರೆ.

    ಬಿಗ್‍ಬಾಸ್ ನಂತರ ಸಿನಿಮಾ ಕೆಲಸಗಳಿಗೆ ಮರಳಿರುವ ನಟಿ ಶುಭಾ ಪೂಂಜಾ ‘ಅಂಬುಜ’ ಸಿನಿಮಾ ಮೂಲಕವಾಗಿ ಮತ್ತೆ ಬಿಗ್ ಸ್ಕ್ರೀನ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಥೇಟ್ ಲಂಬಾಣಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರದ ಕಾಸ್ಟ್ಯೂಮ್ ಕೂಡ ಅತ್ಯಂತ ವಿಶೇಷವಾಗಿದೆ. ಶ್ರೀನಿ ಹನುಮಂತರಾಜು ನಿರ್ದೇಶನ ಮಾಡುತ್ತಿರುವ ಈ ಮಹಿಳಾ ಪ್ರಧಾನ ಚಿತ್ರದಲ್ಲಿ ಶುಭಾ ಎರಡು ಶೇಡ್‍ನ ಪಾತ್ರದಲ್ಲಿದ್ದಾರೆ. ಅವರನ್ನು ಲಂಬಾಣಿ ಹುಡುಗಿಯಾಗಿ ಮತ್ತು ಪತ್ರಕರ್ತೆಯಾಗಿ ಈ ಸಿನಿಮಾದಲ್ಲಿ ನೋಡಬಹುದಾಗಿದೆ. ಇದನ್ನೂ ಓದಿ:  ಪ್ರಜ್ವಲ್ ರೇವಣ್ಣ Vs ಪ್ರೀತಂ ಗೌಡ – ಫೋಟೋ ಪಾಲಿಟಿಕ್ಸ್ ಜಟಾಪಟಿ ತಾರಕಕ್ಕೆ

    ಶುಭಾ ಪೂಂಜಾ ಅವರು ಲಂಬಾಣಿಗಳ ಸಾಂಪ್ರದಾಯಿಕ ಉಡುಗೆಯಲ್ಲಿದ್ದಾರೆ. ಕುಸುರಿ ಕಲೆಗೆ ಹೆಸರಾದ ಲಂಬಾಣಿಗಳು ತಮ್ಮ ತಾಂಡಾದಲ್ಲಿ ಸತತ ನಾಲ್ಕು ತಿಂಗಳ ಕಾಲ ಈ ವಿಶೇಷ ಉಡುಪನ್ನು ಸಿದ್ಧಪಡಿಸಿದ್ದಾರೆ. ಗದಗ ಜಿಲ್ಲೆಯ ಲಂಬಾಣಿಗಳು ಈ ಉಡುಪನ್ನು ತಯಾರಿಸಿದ್ದಾರೆ. ಇದರ ತೂಕ 20 ಕೆ.ಜಿ ಇದೆ. ಆಭರಣಗಳು, ಕುಸುರಿ ಕೆಲಸ ಇತ್ಯಾದಿಗಳನ್ನು ಬಹಳ ವಿಶೇಷವಾಗಿ ಮಾಡಲಾಗಿದೆ. ಇದು ಸಿನಿಮಾದ ಹೈಲೆಟ್ ಆಗಿದೆ ಎಂದು ನಿರ್ದೆಶಕ ಶ್ರೀನಿ ಹೇಳಿದ್ದಾರೆ.

     

    View this post on Instagram

     

    A post shared by shubha Poonja . (@shubhapoonja)

    ಈ ಸಿನಿಮಾ ನೈಜ ಘಟನೆಯಾಧಾರಿತ ಕಥಾಹಂದರವನ್ನು ಹೊಂದಿದೆ. ಚಿತ್ರಕ್ಕೆ ಕಾಶೀನಾಥ್ ಮಡಿವಾಳರ್ ಅವರು ಕಥೆ ಬರೆಯುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮುರುಳಿಧರ್ ಕ್ಯಾಮೆರಾ ಹಾಗೂ ಸಂಗೀತವನ್ನು ಪ್ರಸ್ನ್ ಕುಮಾರ್ ಸಂಯೋಜನೆ ಮಾಡಲಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ರಿಯಾಲಿಟಿ ಶೋನ ನಟರಾದ ಗೋವಿಂದೇ ಗೌಡ, ಪ್ರಿಯಾಂಕಾ ಕಾಮತ್ ಮತ್ತಿತರರು ಈ ಸಿನಿಮಾದಲ್ಲಿ ನಟಿಸಿದ್ದಾರೆ.