Tag: Ambikapur

  • ಮದ್ವೆಯಿಂದ ಹಿಂದಿರುಗುತ್ತಿದ್ದ ವ್ಯಾನ್ ಪಲ್ಟಿ – ವರನ ತಂದೆ ಸೇರಿದಂತೆ ನಾಲ್ವರ ಸಾವು

    ಮದ್ವೆಯಿಂದ ಹಿಂದಿರುಗುತ್ತಿದ್ದ ವ್ಯಾನ್ ಪಲ್ಟಿ – ವರನ ತಂದೆ ಸೇರಿದಂತೆ ನಾಲ್ವರ ಸಾವು

    – ಐದು ಜನ ಗಂಭೀರ, ಮದುವೆ ಮನೆಯಲ್ಲಿ ಸಾವಿನ ಛಾಯೆ

    ರಾಯ್ಪುರ: ಮದುವೆ ಮನೆಯಿಂದ ಹಿಂದಿರುಗುತ್ತಿದ್ದ ಪಿಕಪ್ ವ್ಯಾನ್ ಪಲ್ಟಿಯಾದ ಪರಿಣಾಮ ವರನ ತಂದೆ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಸೋಮವಾರ ರಾತ್ರಿ ಅಂಬಿಕಾಪುರದಲ್ಲಿ ನಡೆದಿದೆ.

    ಸುರ್ಗುಜಾದಲ್ಲಿ ಮದುವೆ ಮುಗಿಸಿಕೊಂಡು ವರನ ಕುಟುಂಬಸ್ಥರು ಸೋಮವಾರ ಹಿಂದಿರುಗುತ್ತಿದ್ದರು. ಅಂಬಿಕಾಪುರದ ರಸ್ತೆಯಲ್ಲಿ ವಾಹನದಲ್ಲಿ 15 ರಿಂದ 20 ಜನ ಪ್ರಯಾಣಿಸುತ್ತಿದ್ದರು. ರಾತ್ರಿ ಸುಮಾರು 8.30ಕ್ಕೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿದ್ದರೆ, ಇನ್ನಿಬ್ಬರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಾಮಗಾರಿ ನಡೆತಯುತ್ತಿದ್ದರಿಂದ ಅಪಘಾತ ಸಂಭವಿಸಿದ್ದು, ವಾಹನ ಪಲ್ಟಿಯಾಗುತ್ತಿದ್ದಂತೆ ಚಾಲಕ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಸೇತುವೆ ಮೇಲೆ ಪಲ್ಟಿಯಾದ ಮದ್ವೆ ದಿಬ್ಬಣ ಹೊತ್ತ ಟ್ರ್ಯಾಕ್ಟರ್ – ವರ ಸೇರಿ 6 ಜನ ಸಾವು

    5ಕ್ಕೂ ಹೆಚ್ಚು ಜನರಿಗೆ ಗಂಭೀರವಾಗಿ ಗಾಯಗೊಂಡಿದ್ದು, ಎಲ್ಲರನ್ನು ಅಂಬಿಕಾಪುರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಗಾಯಾಗಳುಗಳಿಗೆ ಧೋರಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವರನ ತಂದೆ, ಸೋದರಿ, 12 ವರ್ಷದ ಮಗು, ಓರ್ವ ಸಂಬಂಧಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮದುವೆಯಾಗಿ ಮರುದಿನಕ್ಕೆ ವರ ಅಪಘಾತದಲ್ಲಿ ಸಾವು, ವಧು ಸ್ಥಿತಿ ಚಿಂತಾಜನಕ

  • 8 ದಿನ ಉಪವಾಸ ವ್ರತ ಆಚರಿಸಿ 9ನೇ ದಿನ ಪತ್ನಿ ಕೊಂದು ನರಬಲಿ ನೀಡಿದ!

    8 ದಿನ ಉಪವಾಸ ವ್ರತ ಆಚರಿಸಿ 9ನೇ ದಿನ ಪತ್ನಿ ಕೊಂದು ನರಬಲಿ ನೀಡಿದ!

    – ಕ್ಷಣ ಕ್ಷಣಕ್ಕೂ ಹೇಳಿಕೆ ಬದಲಾಯಿಸ್ತಿರೋ ಆರೋಪಿ
    – ನವರಾತ್ರಿಗೆ ನರಬಲಿ ಕೊಟ್ಟಿರುವ ಶಂಕೆ

    ರಾಯ್ಪುರ: ನವರಾತ್ರಿ ಪ್ರಯುಕ್ತ ಎಂಟು ದಿನ ಕಟ್ಟುನಿಟ್ಟಿನ ಉಪವಾಸ ವ್ರತ ಆಚರಿಸಿ, 9ನೇ ದಿನ ಪತಿಯೇ ಪತ್ನಿಯನ್ನ ಕೊಂದಿರುವ ಘಟನೆ ಅಂಬಿಕಾಪುರ ಜಿಲ್ಲೆಯ ಸರಗಾಂವ್ ಗ್ರಾಮದಲ್ಲಿ ನಡೆದಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮೂಢನಂಬಿಕೆಗೆ ಒಳಗಾಗಿದ್ದ ವ್ಯಕ್ತಿ ಪತ್ನಿಯನ್ನ ದೇವರಿಗೆ ಬಲಿ ನೀಡಿರುವ ಬಗ್ಗೆ ತಿಳಿದು ಬಂದಿದೆ.

    ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತ ಗ್ರಾಮದಲ್ಲಿ ಮಾಟಮಂತ್ರದ ಕೆಲಸ ಮಾಡಿಕೊಂಡಿದ್ದನು. ದೇವರ ಕೋಣೆಯಲ್ಲಿಯೇ ಮಹಿಳೆ ಶವ ಪತ್ತೆಯಾಗಿದ್ದು, ನರಬಲಿ ನೀಡುವದಕ್ಕಾಗಿ ಆತ ಮಾಡಿಕೊಂಡಿರುವ ಸಿದ್ಧತೆಗಳು ಕೊಲೆಯ ಮಾಹಿತಿ ನೀಡುತ್ತಿವೆ. ಆರೋಪಿ ಒನಕೆಯಿಂದ ಹೊಡೆದು ಪತ್ನಿಯನ್ನ ಕೊಂದಿದ್ದಾನೆ. ಬಂಧಿತ ಕ್ಷಣ ಕ್ಷಣಕ್ಕೊಮ್ಮೆ ತನ್ನ ಹೇಳಿಕೆ ಬದಲಾಯಿಸುವ ಮೂಲಕ ಬಚಾವ್ ಆಗಲು ಪ್ರಯತ್ನಿಸುತ್ತಿದ್ದಾನೆ. ಇದನ್ನೂ ಓದಿ: ಹೈ ಟೆಕ್ ವೇಶ್ಯಾವಾಟಿಕೆ- ಓರ್ವ ಸಿನಿಮಾ ನಟಿ ಅರೆಸ್ಟ್, ಮೂವರು ಧಾರಾವಾಹಿ ನಟಿಯರ ರಕ್ಷಣೆ

    ಶುಕ್ರವಾರ ರಾತ್ರಿ ಆರೋಪಿ ಮನೆಗೆ ಅತಿಥಿಗಳು ಬಂದಿದ್ದರು. ಊಟದ ಬಳಿಕ ಎಲ್ಲರೂ ಹಿಂದಿರುಗಿದ್ದರು. ಶುಕ್ರವಾರ ರಾತ್ರಿ ಕೊಲೆ ನಡೆದಿದ್ದು, ಬೆಳಗ್ಗೆ ಸೊಸೆಯನ್ನ ಕರೆದ ಆರೋಪಿ ಪತ್ನಿಯ ಶವ ದೇವರ ಕೋಣೆಯಲ್ಲಿ ಬಿದ್ದಿರೋದನ್ನ ಹೇಳಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅತ್ತೆಯ ಶವ ನೋಡಿದ ಮಹಿಳೆ ಭಯದಿಂದ ಸ್ಥಳೀಯರು ಮತ್ತು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಆರಂಭದಲ್ಲಿಯೇ ಮಹಿಳೆಯ ಪತಿ ಮೇಲೆ ಅನುಮಾನ ವ್ಯಕ್ತವಾಗಿದ್ದರಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಪತ್ನಿ ಕೊಲೆ ಆರೋಪದಲ್ಲಿ ಪತಿಗೆ ಜೈಲು ಶಿಕ್ಷೆ – 7 ವರ್ಷಗಳ ನಂತ್ರ ಹೆಂಡ್ತಿ ಪತ್ತೆ

    ಮನೆಯ ಆವರಣದಲ್ಲಿ ರಕ್ತ ಕಂಡಾಗ ಸ್ಥಳೀಯರಿಗೆ ಮೇಕೆಯನ್ನ ಬಲಿ ನೀಡಿದ್ದಾಗಿ ಸುಳ್ಳು ಹೇಳಿದ್ದಾನೆ. ತದನಂತರ ಮನೆಗೆ ಬಂದ ಕಳ್ಳರು ಪತ್ನಿಯನ್ನ ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಸದಾ ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಪತ್ನಿಯ ಚಾರಿತ್ರ್ಯದ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದನು. ಹೀಗಾಗಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಟಿಐ ಅನೂಪ್ ಎಕ್ಕಾ ಹೇಳಿದ್ದಾರೆ. ಇದನ್ನೂ ಓದಿ: ಪತ್ನಿ ಕೊಲೆಗೆ ಸುಪಾರಿ ಕೊಟ್ಟ ಹೆಡ್ ಕಾನ್ ಸ್ಟೇಬಲ್ – ಕೊಲ್ಲಲು ಬಂದವನ ಮನಕರಗಿ ಪೊಲೀಸ್ರಿಗೆ ಶರಣು