Tag: ambikapathy

  • ಗುತ್ತಿಗೆದಾರ ಅಂಬಿಕಾಪತಿಯ ಸಾವಿನ ಬಗ್ಗೆ ಕೂಲಂಕುಷ ತನಿಖೆಯಾಗಬೇಕು: ಯತ್ನಾಳ್‌ ಆಗ್ರಹ

    ಗುತ್ತಿಗೆದಾರ ಅಂಬಿಕಾಪತಿಯ ಸಾವಿನ ಬಗ್ಗೆ ಕೂಲಂಕುಷ ತನಿಖೆಯಾಗಬೇಕು: ಯತ್ನಾಳ್‌ ಆಗ್ರಹ

    ಬೆಂಗಳೂರು: ಗುತ್ತಿಗೆದಾರ ಅಂಬಿಕಾಪತಿಯ (Ambikapathy) ಸಾವಿನ ಬಗ್ಗೆಯೂ ಕೂಲಂಕುಷವಾಗಿ ತನಿಖೆಯಾಗಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಆಗ್ರಹಿಸಿದ್ದಾರೆ.

    ಈ ಸಂಬಂಧ ಎಕ್ಸ್‌ನಲ್ಲಿ ಬರೆದ ಅವರು, ಆದಾಯ ತೆರಿಗೆ ಇಲಾಖೆಗೆ (Income Tax Department) ಪ್ರಕರಣದ ಕುರಿತು ಹೇಳಿಕೆ ನೀಡಿದ್ದ ಅಂಬಿಕಾಪತಿ ಯಾರ ಹೆಸರುಗಳನ್ನೂ ಹೇಳಿದ್ದಾರೋ, ಆ ಹಣ ಯಾರದ್ದು ಎಂದು ಹೇಳಿದ್ದರೋ ಎಂಬ ಅಂಶವು ತನಿಖೆಯಲ್ಲಿ ಬಯಲಾಗಬೇಕಿದೆ ಎಂದಿದ್ದಾರೆ.  ಇದನ್ನೂ : ಕಾಂಗ್ರೆಸ್ ಆರು ತಿಂಗಳಲ್ಲಿ ನೆಲ ಕಚ್ಚುವ ಪರಿಸ್ಥಿತಿ ತಲುಪಲಿದೆ: ಪ್ರಹ್ಲಾದ್ ಜೋಶಿ

    ಗುತ್ತಿಗೆದಾರ ಅಂಬಿಕಾಪತಿ ಸಾವು ಸಹಜವಲ್ಲವೆಂದಿರುವ ಕೆಂಪಣ್ಣನವರ (Kempanna) ಹೇಳಿಕೆಯನ್ನು ಸರ್ಕಾರ ಹಾಗೂ ಮಾಧ್ಯಮಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.

    ಅಂಬಿಕಾಪತಿ ಮನೆಯಲ್ಲಿ 40 ಕೋಟಿ ಹಣ ಆದಾಯ ತೆರಿಗೆ ದಾಳಿಯ ವೇಳೆ ಸಿಕ್ಕಿತ್ತು. ಈ ಹಣ ಸರ್ಕಾರ ಪ್ರಭಾವಿ ಮಂತ್ರಿ ಹಾಗು ಒಬ್ಬ ಪ್ರಭಾವಿ ರಾಜಕಾರಣಿಯ ಮಗನಿಗೆ ಸೇರಿದ್ದು ಎಂಬ ಸುದ್ದಿಯೂ ಇದೆ. ಇದಕ್ಕೆ ಸಾಕ್ಷಿಯಾಗಿ ಆ ಪ್ರಭಾವಿ ರಾಜಕಾರಣಿ ಮಗನ ಆಪ್ತ ಸಹಾಯಕನನ್ನು ಆದಾಯ ತೆರಿಗೆ ಇಲಾಖೆ ವಿಚಾರಣೆಗೆ ಒಳಪಡಿಸಿತ್ತು ಎಂದು ಬರೆದಿದ್ದಾರೆ.

    ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾಗಿದ್ದ ಅಂಬಿಕಾಪತಿ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ನವೆಂಬರ್‌ 27 ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಅಕ್ಟೋಬರ್‌ನಲ್ಲಿ ಅಂಬಿಕಾಪತಿ ನಿವಾಸಕ್ಕೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಐಟಿ ರೇಡ್ (IT Raid) ವೇಳೆ ಅಂಬಿಕಾಪತಿ ಮನೆಯಲ್ಲಿ ಬರೋಬ್ಬರಿ 44 ಕೊಟಿ ರೂ. ಪತ್ತೆಯಾಗಿತ್ತು.

     

  • ಅಂಬಿಕಾಪತಿ, ಸಂತೋಷ್‌ ಕೃಷ್ಣಪ್ಪ ರಾಜ್ಯದ ನಂ 1, ನಂ 2 ಅವರ ಬೇನಾಮಿಗಳು: ಸಿಟಿ ರವಿ

    ಅಂಬಿಕಾಪತಿ, ಸಂತೋಷ್‌ ಕೃಷ್ಣಪ್ಪ ರಾಜ್ಯದ ನಂ 1, ನಂ 2 ಅವರ ಬೇನಾಮಿಗಳು: ಸಿಟಿ ರವಿ

    ಬೆಂಗಳೂರು: ಅಂಬಿಕಾಪತಿ (Ambikapathy) ಮತ್ತು ಸಂತೋಷ್‌ ಕೃಷ್ಣಪ್ಪ (Santosh Krishnnappa) ಇಬ್ಬರೂ ಈ ರಾಜ್ಯದ ನಂಬರ್ 1 ಮತ್ತು ನಂಬರ್ 2 ಅವರ ಬೇನಾಮಿಗಳು ಎಂದು ಮಾಜಿ ಸಚಿವ ಸಿಟಿ ರವಿ (CT Ravi) ಹೇಳಿದ್ದಾರೆ.

    ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸದ್ಯಕ್ಕೆ ಇಬ್ಬರು ಬೇನಾಮಿಗಳು ಬಯಲಾಗಿದ್ದಾರೆ. ಸಿಎಂ, ಡಿಸಿಎಂ ಇಬ್ಬರೂ ತಮ್ಮ ಅಕ್ರಮ‌ ಚಟುವಟಿಕೆಗಳಿಗಾಗಿ ಎಲ್ಲ ಜಿಲ್ಲೆಗಳಲ್ಲೂ ಇನ್ನೂ ಹಲವು ಬೇನಾಮಿಗಳನ್ನು ಇಟ್ಟುಕೊಂಡಿದ್ದಾರೆ. ಸಿಬಿಐ (CBI) ತನಿಖೆಗೆ ವಹಿಸಿದರೆ ಎಲ್ಲ ಸತ್ಯ ಹೊರಗೆ ಬರಲಿದೆ ಎಂದು ಗಂಭೀರ ಆರೋಪ ಮಾಡಿದರು.   ಇದನ್ನೂ ಓದಿ: ಮಧ್ಯಪ್ರದೇಶ ಸಿಎಂ ವಿರುದ್ಧ ‘ರಾಮಾಯಣ’ ನಟನನ್ನು ಕಣಕ್ಕಿಳಿಸಿದ ಕಾಂಗ್ರೆಸ್‌

    ಪಂಚ ರಾಜ್ಯಗಳ ಚುನಾವಣೆಗೆ ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಮಾಡಿಕೊಂಡಿದೆ. ಪಂಚ ರಾಜ್ಯಗಳ ಚುನಾವಣೆಗೆ ಅವರ ಹೈಕಮಾಂಡ್ ನಂಬರ್ ಒನ್‌ಗೆ 1000 ಕೋಟಿ ರೂ., ನಂಬರ್ ಟೂಗೆ 2000 ಕೋಟಿ ರೂ. ಕೊಡಿ ಎಂದು ಕೇಳಿದ್ದಾರೆ. ಸಿಎಂ ಹುದ್ದೆಗೆ ಟವೆಲ್ ಹಾಕಿ ಕುಳಿತಿರುವವರು ಎರಡು ಸಾವಿರ ಕೋಟಿ ರೂ. ಸಂಗ್ರಹ ಮಾಡುವುದಾಗಿ ಹೇಳಿದ್ದಾರೆ ಎಂದರು.

    ಈಗ ಸಿಎಂ‌ ಆಗಿರುವವರು ಅದರಲ್ಲಿ ಅರ್ಧ ಕೊಡುವುದಾಗಿ ಹೇಳಿದ್ದಾರಂತೆ. ಈಗ ಪತ್ತೆ ಆಗಿರುವ ಹಣದಲ್ಲಿ ಇದರಲ್ಲಿ ನಂಬರ್ 1 ವ್ಯಕ್ತಿಯದ್ದು ಎಷ್ಟು? ನಂಬರ್ 2 ವ್ಯಕ್ತಿಯದ್ದು ಎಷ್ಟಿದೆ ಎನ್ನುವುದು ತನಿಖೆಯಿಂದ ತಿಳಿಯಬೇಕಿದೆ. ಯಾರಿಂದ ಎಷ್ಟೆಷ್ಟು ಹೋಗುತ್ತಿದೆ ಎನ್ನುವುದು ಸಿಬಿಐ ತನಿಖೆಗೆ ಕೊಟ್ಟರೆ ಸತ್ಯ ಗೊತ್ತಾಗುತ್ತದೆ ಸಿಟಿ ರವಿ ಹೇಳಿದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೋಟಿ ಕೋಟಿ ಹಣ ಎಣಿಸುತ್ತಾ ಇರೋ ಅಧಿಕಾರಿಗಳು- ಅಂಬಿಕಾಪತಿ ಮನೆಯ Exclusive ಫೋಟೋ

    ಕೋಟಿ ಕೋಟಿ ಹಣ ಎಣಿಸುತ್ತಾ ಇರೋ ಅಧಿಕಾರಿಗಳು- ಅಂಬಿಕಾಪತಿ ಮನೆಯ Exclusive ಫೋಟೋ

    ಬೆಂಗಳೂರು: ಬಿಬಿಎಂಪಿ ಗುತ್ತಿಗಾರರ (BBMP Contractor) ಸಂಘದ ಅಧ್ಯಕ್ಷ ಆರ್. ಅಂಬಿಕಾಪತಿ (R. Ambikapathy) ಮನೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಇಂದು (ಶನಿವಾರ) ಕೂಡ ಪರಿಶೀಲನೆ ಮುಂದುವರಿಸಿದ್ದಾರೆ.

    42 ಕೋಟಿ ಎಣಿಸುತ್ತಾ ಕುಳಿತಿರೋ ಐಟಿ ಅಧಿಕಾರಿಗಳ ಎಕ್ಸ್ ಕ್ಲೂಸೀವ್ ಫೋಟೋ ಇಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಫೋಟೋದಲ್ಲಿ ವಿಚಾರಣೆ ನಡೆಸಿದ ಬಳಿಕ ಐಟಿ ಅಧಿಕಾರಿಗಳು ಹಣ ಎಣಿಸುತ್ತಾ ಕುಳಿತ್ತಿರುವುದನ್ನು ಕಾಣಬಹುದಾಗಿದೆ.

    ಲಾಕರ್ ಒಡೆದಿದ್ದ ಐಟಿ: ನಿನ್ನೆಯಿಂದ ಅಧಿಕಾರಿಗಳು ಅಂಬಿಕಾಪತಿಯವರ ಮಾನ್ಯತಾ ಟೆಕ್ ಪಾರ್ಕ್ ನಿವಾಸದಲ್ಲಿ ತಲಾಶ್ ನಡೆಸುತ್ತಿದ್ದಾರೆ. ಅಂತೆಯೇ ಮನೆಯಲ್ಲಿಯೇ ಬೀಡು ಬಿಟ್ಟಿರೋ ಮೂವರು ಐಟಿ ಅಧಿಕಾರಿಗಳು (Income Tax Officers), ಕಾರ್ಪೆಂಟರ್ ಕರೆತಂದು ಲಾಕರ್ ಒಡೆದಿದ್ದರು. ಈ ವೇಳೆ ಲಾಕರ್ ನಲ್ಲಿ ಎರಡು ಸೂಟ್ ಕೇಸ್ ನಷ್ಟು ನಗದು ಹಣ, ಅಪಾರ ಮೌಲ್ಯದ ಚಿನ್ನಾಭರಣ, ಕಾಮಗಾರಿಗೆ ಸಂಬಂಧಪಟ್ಟ ದಾಖಲೆಗಳು ಹಾಗೂ ಪ್ರಾಪರ್ಟಿ ದಾಖಲೆಗಳು ಕೂಡ ಪತ್ತೆಯಾಗಿವೆ. ಇದನ್ನೂ ಓದಿ: ಒಕ್ಕಲಿಗ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ – ಪ್ರೊ. ಭಗವಾನ್ ಮನೆಗೆ ಮುತ್ತಿಗೆಗೆ ಯತ್ನ

    ನೋಟಿಸ್ ಸಾಧ್ಯತೆ: ಕೋಟಿ ಕೋಟಿ ಹಣ ಸೀಜ್ ಪ್ರಕರಣ ಸಂಬಂಧ ಸೋಮವಾರ ವಿಚಾರಣೆಗೆ ಹಾಜರಾಗಲು ಅಂಬಿಕಾಪತಿ ಕುಟುಂಬಕ್ಕೆ ನೊಟೀಸ್ ನೀಡುವ ಸಾಧ್ಯತೆ ಇದೆ. ಶುಕ್ರವಾರ ಅಪಾರ್ಟ್‍ಮೆಂಟ್ ನಲ್ಲಿ ಪತ್ತೆಯಾಗಿರುವ ಬರೋಬ್ಬರಿ 42 ಕೋಟಿ ಹಣವನ್ನು ಐಟಿ ಬ್ಯಾಂಕ್‍ಗೆ ಡಿಪಾಸಿಟ್ ಮಾಡಿದೆ. ದಾಳಿ ಮುಕ್ತಾಯದ ಬಳಿಕ ಸೋಮವಾರ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡುವ ಸಾಧ್ಯತೆಗಳಿವೆ. ಹಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳೊಂದಿಗೆ ಹಾಜರಾಗಲು ತಿಳಿಸುವ ಸಂಭವವಿದೆ.

    ಅಧಿಕಾರಿಗಳಿಗೆ ಚಾಲೆಂಜ್: ನಿನ್ನೆಯಿಂದ ಅಂಬಿಕಾಪತಿ ಮನೆಯಲ್ಲಿ ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ದಾಖಲೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಹಣದ ಬಗ್ಗೆ ಮಾಹಿತಿ ಕಲೆ ಹಾಕೋದು ಐಟಿ ಅಧಿಕಾರಿಗಳಿಗೆ ಸವಾಲಾಗಿದೆ. ಹಣದ ಬಗ್ಗೆ ಅಂಬಿಕಾಪತಿ ಯಾವುದೇ ಸ್ಪಷ್ಟವಾದ ಮಾಹಿತಿ ನೀಡದೇ ಇರೋದ್ರಿಂದ ಮೂಲ ಪತ್ತೆಯೇ ಚಾಲೆಂಜ್ ಆಗಿದೆ. ಹಣ ಎಲ್ಲಿಂದ ಬಂದಿದೆ? ಯಾರು ತಂದು ಕೊಟ್ರು ಎನ್ನುವ ಬಗ್ಗೆಯೂ ಪ್ರಶ್ನೆ ಎದ್ದಿದೆ. ಮನೆಯಲ್ಲಿ ಸಿಕ್ಕಿರುವ ಎಲ್ಲಾ ಚಿನ್ನಾಭರಣದ ಮೌಲ್ಯಮಾಪನ ಮಾಡಲಾಗುತ್ತಿದೆ. ಅಂಬಿಕಾಪತಿ ಸಂಬಂಧಿಯ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಪಿತೃಪಕ್ಷ: ಒಂದೆಡೆ ಐಟಿ ಅಧಿಕಾರಿಗಳಿಂದ ವಿಚಾರಣೆ ನಡೆಸುತ್ತಿದ್ದರೆ, ಇನ್ನೊಂದೆಡೆ ಅಂಬಿಕಾಪತಿ ಮನೆಯಲ್ಲಿ ಪಿತೃಪಕ್ಷ ಕಾರ್ಯ ನಡೆಸಲಾಗುತ್ತಿದೆ. ಹಬ್ಬಕ್ಕೆ ಮನೆಯ ಮುಂದೆ ತೋರಣ ಕಟ್ಟಿ ಪೂಜೆಗೆ ಕುಟುಂಬಸ್ಥರು ಸಿದ್ಧತೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಅದ್ದೂರಿ ಪೂಜೆ-ಪುನಸ್ಕಾರ ನಡೆಯುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • IT Raid In Bengaluru: 42 ಕೋಟಿ ಹಣ ಸಿಕ್ಕಿದ್ದು ಅಂಬಿಕಾಪತಿ ಮಗಳ ನಿವಾಸದಲ್ಲಿ!

    IT Raid In Bengaluru: 42 ಕೋಟಿ ಹಣ ಸಿಕ್ಕಿದ್ದು ಅಂಬಿಕಾಪತಿ ಮಗಳ ನಿವಾಸದಲ್ಲಿ!

    ಬೆಂಗಳೂರು: ಸಿಲಿಕಾನ್ ಸಿಟಿಯ ಇತಿಹಾಸದಲ್ಲಿಯೇ ಅತೀ ದೊಡ್ಡ ಐಟಿ (Income Tax) ದಾಳಿಯಾಗಿದ್ದು, ಅಧಿಕಾರಿಗಳಿಗೆ ಬರೋಬ್ಬರಿ 42 ಕೋಟಿ ರೂ. ಸಿಕ್ಕಿದೆ. ಈ ಹಣ ಸಿಕ್ಕಿದ್ದು ಬಿಬಿಎಂಪಿ (BBMP) ಗುತ್ತಿಗಾರರ ಸಂಘದ ಅಧ್ಯಕ್ಷ ಆರ್. ಅಂಬಿಕಾಪತಿ (R. Ambikapathy) ಮಗಳ ನಿವಾಸದಲ್ಲಿ.

    ಹೌದು. ಅಂಬಿಕಾಪತಿಗೆ ಇಬ್ಬರು ಹೆಣ್ಮಕ್ಕಳಿದ್ದಾರೆ. ಇದೀಗ ಓರ್ವ ಮಗಳು ದಿವ್ಯಾ (Divya) ಮನೆಯಲ್ಲಿ ಐಟಿ ಅಧಿಕಾರಿಗಳಿಗೆ ಕಂತೆ ಕಂತೆ ಹಣ ಸಿಕ್ಕಿದೆ ಎಂಬ ಮಾಹಿತಿ ಲಭಿಸಿದೆ. ಮಾನ್ಯತಾ ಟೆಕ್ ಪಾರ್ಕ್‍ನಲ್ಲಿರುವ ಮನೆ ಮೇಲೆ ಗುರುವಾರ ಮಧ್ಯರಾತ್ರಿಯೇ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾಲ್ವರು ಐಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

    ಅಂಬಿಕಾಪತಿ ಕಳೆದ ಜನವರಿಯಲ್ಲಿ ಕಾವಲ್ ಬೈಸಂದ್ರದ ಗಣೇಶ ಬ್ಲಾಕ್‍ನಲ್ಲಿರುವ (Ganesha Block) ಮನೆ ಖಾಲಿ ಮಾಡಿದ್ದರು. ಬಳಿಕ ಇತ್ತೀಚೆಗಷ್ಟೇ ಕುಟುಂಬ ಮಾನ್ಯತಾ ಪಾರ್ಕ್‍ಗೆ (Manyatha Park) ಶಿಫ್ಟ್ ಆಗಿತ್ತು. ಅಲ್ಲಿ ಅವರು ನಾಲ್ಕು ವರ್ಷದ ಹಿಂದೆ ದಾಳಿಯಾದ ಬಿಲ್ಡಿಂಗ್ ಖರೀದಿಸಿದ್ದರು. ಕೆಳಗಿರುವ ಮನೆಯನ್ನ ಬಾಡಿಗೆ ನೀಡಿ ಮೊದಲ ಅಂತಸ್ತಿನ ಮನೆಯಲ್ಲಿ ಕುಟುಂಬ ವಾಸವಿತ್ತು. ಜನವರಿಯಲ್ಲಿ ಮೇಲಿನ ಮನೆ ಖಾಲಿ ಮಾಡಿರುವ ಅಂಬಿಕಾಪತಿ ಖಾಲಿ ಮನೆಗೆ ಗಾಗ ಬಂದು ಹೋಗುತ್ತಿದ್ದರು.

    ಅಂಬಿಕಾಪತಿ ಹೊಸ ಮನೆಗೆ ಶಿಫ್ಟ್ ಆದರೂ ಹಳೆಯ ಮನೆಯಲ್ಲೇ ಎಲ್ಲಾ ವ್ಯವಹಾರ ನಡೆಸುತ್ತಿದ್ದರು. ಕಾವಲ್ ಬೈರಸಂದ್ರದ ಗಣೇಶ್ ಬ್ಲಾಕ್‍ನ ಹಳೆ ಮನೆಯಲ್ಲೇ ಆಗಾಗ ಮೀಟಿಂಗ್‍ಗಳು ನಡೆಯುತ್ತಿತ್ತು. ಈ ಮೂಲಕ ಹೊಸ ಮನೆಗೆ ಶಿಫ್ಟ್ ಆದ ಬಳಿಕವೂ ಕಛೇರಿ ರೀತಿಯಲ್ಲಿ ಹಳೆ ಮನೆ ಬಳಕೆ ಮಾಡುತ್ತಿದ್ದರು. ಇದೇ ಮನೆಯಲ್ಲಿ ಕೆಲ ಪತ್ರ ವ್ಯವಹಾರ, ಹಣ ಸಾಗಣೆ ಸೇರಿದಂತೆ ಕೆಲ ಅವ್ಯವಹಾರ ನಡೆದಿರೋ ಸಾಧ್ಯತೆ ಇದೆ. ಈ ಕಾರಣಕ್ಕಾಗಿಯೇ ಅಂಬಿಕಾಪತಿ ಆಗಾಗ ಹಳೆ ಮನೆಗೆ ಕೆಲ ಆಪ್ತರೊಂದಿಗೆ ಭೇಟಿ ನೀಡುತ್ತಿದ್ದರು. ಸದ್ಯ ಹಳೆ ಮನೆಯಲ್ಲೂ ಐಟಿ ಅಧಿಕಾರಿಗಳು ಪರಿಶೀಲನೆ ಮುಂದವರಿಸಿದ್ದಾರೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]