Tag: Ambika

  • 80ರ ದಶಕದ ನಟ-ನಟಿಯರ ಪುನರ್ಮಿಲನ

    80ರ ದಶಕದ ನಟ-ನಟಿಯರ ಪುನರ್ಮಿಲನ

    ಚಿತ್ರರಂಗದಲ್ಲಿ ಇಂದಿಗೂ ಸದ್ದು ಮಾಡುತ್ತಿರುವ ಹಳೆಯ ದಶಕದ ನಟ ನಟಿಯರಿದ್ದಾರೆ. ಈಗಲೂ ಸಿನಿಮಾಗಳ ಸಂಚಲನ ಮೂಡಿಸುತ್ತಿದ್ದಾರೆ. 80ರ ದಶಕದ ನಾಯಕ- ನಾಯಕಿಯರು ಸದ್ಯ ಬ್ರೇಕಿಂಗ್ ಅಪ್‌ಡೇಟ್‌ವೊಂದನ್ನ ನೀಡಿದ್ದಾರೆ. 80ರ ದಶಕದಲ್ಲಿ ಮಿಂಚಿದ್ದ ಕಲಾವಿದರು ಮತ್ತೆ ರೀ ಯೂನಿಯನ್(Re Union) ಆಗುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡ್ತಿದ್ದಾರೆ.

    ಸಾಕಷ್ಟು ವರ್ಷಗಳಿಂದ ಬೆಳ್ಳಿಪರದೆಯಲ್ಲಿ ಸಂಚಲನ ಮೂಡಿಸಿದ್ದ 80ರ ದಶಕದ ತಾರೆಯರೆಲ್ಲರೂ ಮತ್ತೆ ಒಂದಾಗಿದ್ದಾರೆ. ಪ್ರತಿ ವರ್ಷ ಈ ರೀ ಯೂನಿಯನ್ ಪಾರ್ಟಿ ನಡೆಯುತ್ತಿತ್ತು. ಕಡೆಯದಾಗಿ 2019ರಲ್ಲಿ ಮೆಗಾಸ್ಟಾರ್ ಚಿರಂಜೀವಿ ಮನೆಯಲ್ಲಿ ಅದ್ದೂರಿಯಾಗಿ ನಡೆದಿತ್ತು. ಕೊರೋನಾ ನಿಮಿತ್ತ 2020 ಮತ್ತು 2021ರಲ್ಲಿ ರೀ ಯೂನಿಯನ್(80s Re Union) ಪಾರ್ಟಿಗೆ ಬ್ರೇಕ್ ಬಿದ್ದಿತ್ತು. ಈಗ ಕೊರೋನಾ ಭೀತಿ ದೂರವಾಗಿದ್ದು, ಮತ್ತೆ ಎಲ್ಲರೂ ಒಟ್ಟಾಗಿದ್ದಾರೆ. ಇದನ್ನೂ ಓದಿ:ಗುರೂಜಿಗೆ ಬಿಗ್ ಬಾಸ್ ಡಬಲ್ ಶಾಕ್: ಸೂಟ್ ಕೇಸ್ ರೆಡಿ ಮಾಡಿ ಎಂದ ನಟ ಸುದೀಪ್

    ಈಗಾಗಲೇ 11ನೇ ಬಾರಿಗೆ ಒಟ್ಟಾಗಿದ್ದಾರೆ. ಈ ಸಲ ಮುಂಬೈನಲ್ಲಿ(Mumbai) ಅದ್ದೂರಿ ಪುನರ್ಮಿಲನ ಪಾರ್ಟಿಯನ್ನ ಹಮ್ಮಿಕೊಳ್ಳಲಾಗಿತ್ತು. ಈ ಬಾರಿ ಮೆಗಾಸ್ಟಾರ್ ಚಿರಂಜೀವಿ, ಶರತ್ ಕುಮಾರ್, ಸೀನಿಯರ್ ನರೇಶ್, ಅನುಪಮ್ ಖೇರ್, ಭಾಗ್ಯರಾಜ್, ಅನಿಲ್ ಕಪೂರ್, ವೆಂಕಟೇಶ್, ರಾಧಿಕಾ ಶರತ್‌ಕುಮಾರ್, ಅಂಬಿಕಾ, ಸುಮಲತಾ, ರಾಧಾ, ಲಿಜಿ, ರೇವತಿ ಹೀಗೆ ಎಂಭತ್ತರ ದಶಕದಲ್ಲಿ ಮಿಂಚಿದ್ದ ಸ್ಟರ‍್ಸ್ ಒಟ್ಟಾಗಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    80ರ ಸ್ಯಾಂಡಲ್‌ವುಡ್, ಕಾಲಿವುಡ್,ಬಾಲಿವುಡ್, ಟಾಲಿವುಡ್, ಮಾಲಿವುಡ್ ಎಲ್ಲರೂ ಒಟ್ಟಾಗಿದ್ದಾರೆ. ಹಿಂದಿನಿಂದಲೂ ರೀ ಯೂನಿಯನ್ ಪಾರ್ಟಿ ನಡೆಯುತ್ತಲ್ಲೇ ಬಂದಿದೆ. ತಮ್ಮ ಬಿಡುವಿಲ್ಲದ ವೇಳಾಪಟ್ಟಿಯನ್ನ ಬದಿಗಿಟ್ಟು ಪಾರ್ಟಿಗೆ ಈ ಸ್ಟಾರ್‌ಗಳು ಅಟೆಂಡ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಿಸ್‍ಕಾಲ್ ಪ್ರೇಯಸಿಯಿಂದ ಪ್ರಿಯಕರನ ಬರ್ಬರ ಹತ್ಯೆ

    ಮಿಸ್‍ಕಾಲ್ ಪ್ರೇಯಸಿಯಿಂದ ಪ್ರಿಯಕರನ ಬರ್ಬರ ಹತ್ಯೆ

    ಕಲಬುರಗಿ: ಮಿಸ್‍ಕಾಲ್ ಪ್ರೇಯಸಿಯಿಂದ ಪ್ರಿಯಕರನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಕಲಬುರಗಿಯ ವಾಜಪೇಯಿ ಬಡಾವಣೆಯಲ್ಲಿ ನಡೆದಿದೆ.

    ದಯಾನಂದ್ ಕೊಲೆಯಾದವನಾಗಿದ್ದು, ಈತ ಮೇ 24ರಂದು ಆಳಂದ ತಾಲೂಕಿನ ಸುಕ್ರವಾಡಿ ಗ್ರಾಮದ ನಿವಾಸಿ. ಈತನನ್ನು ಪ್ರೇಯಸಿ ಅಂಬಿಕಾ ಆಂಡ್ ಗ್ಯಾಂಗ್ ನಿಂದ ಮೂರು ಲಕ್ಷಕ್ಕೆ ಸುಪಾರಿ ಪಡೆದು ಕೊಲೆ ಮಾಡಲಾಗಿದೆ.

    ದಯಾನಂದ್ ನನ್ನ ಬರ್ಬರವಾಗಿ ಕೊಲೆ ಮಾಡುವ ವೀಡಿಯೋವನ್ನು ಸ್ವತಃ ಅಂಬಿಕಾಳೇ ಮಾಡಿದ್ದಾಳೆ. ಅಲ್ಲದೆ ಕೊಲೆಯ ವೀಡಿಯೋವನ್ನು ತನ್ನ ಇನ್ನೊಬ್ಬ ಪ್ರಿಯಕರ ಮಿಲಿಟರಿಯಲ್ಲಿರುವ ಸುನೀಲ್ ಗೆ ಕಳುಹಿಸಿದ್ದಾಳೆ. ಇದನ್ನೂ ಓದಿ: ಕೂಡಲೇ ವಿಚಾರಣೆಗೆ ಹಾಜರಾಗಿ – ಬಂಗಾಳ ಪೊಲೀಸರಿಂದ ನೂಪುರ್‌ಗೆ ಕೊನೆಯ ಎಚ್ಚರಿಕೆ

    ಕೊಲೆಯ ಲೈವ್ ವೀಡಿಯೋ ಮಾಡಿ ತಾನು ಬಚಾವ್ ಆಗೋದಕ್ಕೆ ಪ್ಲ್ಯಾನ್ ಮಾಡಿದ್ದಳು. ಆದರೆ ಇದೀಗ ತಾನೇ ತೋಡಿದ್ದ ಅಂಬಿಕಾ ಖೆಡ್ಡಾಗೆ ತಾನೇ ಬಿದ್ದಿದ್ದಾಳೆ. ಘಟನೆ ಸಂಬಂಧ ವಿಶ್ವವಿದ್ಯಾಲಯ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸುಳ್ವಾಡಿ ವಿಷ ಪ್ರಸಾದ ಪ್ರಕರಣದ ಆರೋಪಿಗಳ ಪರ ಮಡಿಕೇರಿ ವಕೀಲ ವಕಾಲತ್ತು

    ಸುಳ್ವಾಡಿ ವಿಷ ಪ್ರಸಾದ ಪ್ರಕರಣದ ಆರೋಪಿಗಳ ಪರ ಮಡಿಕೇರಿ ವಕೀಲ ವಕಾಲತ್ತು

    – ಜಾಮೀನು, ಪ್ರಕರಣ ವಿಚಾರಣೆ ಜ.29ಕ್ಕೆ

    ಚಾಮರಾಜನಗರ: ಸುಳ್ವಾಡಿಯ ಮಾರಮ್ಮ ದೇವಿ ಪ್ರಸಾದಕ್ಕೆ ವಿಷಬೆರೆಸಿ 17 ಜನ ಅಮಾಯಕರನ್ನು ಬಲಿ ಪಡೆದ ಪ್ರಕರಣದ ಎ1 ಆರೋಪಿ ಇಮ್ಮಡಿ ಮಹದೇವಸ್ವಾಮಿ ಪರ ವಕಾಲತ್ತು ವಹಿಸಲು ಮಡಿಕೇರಿ ಮೂಲದ ವಕೀಲರು ಮುಂದಾಗಿದ್ದಾರೆ.

    ಮಡಿಕೇರಿ ಮೂಲದ ವಕೀಲ ಅಪ್ಪಣ್ಣ, ತಮ್ಮ ಕಿರಿಯ ವಕೀಲರಾದ ಸುದೇಶ್ ಹಾಗೂ ಲೋಹಿತ್ ಎಂಬವರ ಮೂಲಕ ಇಂದು ಇಮ್ಮಡಿ ಮಹದೇವಸ್ವಾಮಿ ಪರ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಚಾಮರಾಜನಗರ ಜಿಲ್ಲಾ ನ್ಯಾಯಲಯದಲ್ಲಿ ಜನವರಿ 29ಕ್ಕೆ ನಡೆಯುವ ವಿಚಾರಣೆ ಮುನ್ನವೇ ಜಾಮೀನು ನೀಡುವಂತೆ ಮನವಿ ಸಲ್ಲಿಸಿದ್ದರು. ಆದರೆ ಜಿಲ್ಲಾ ನ್ಯಾಯಾಧೀಶರ ಮುಂದೆ ಇಂದು ಮಧ್ಯಾಹ್ನ ಅರ್ಜಿ ಬರುತ್ತಿದ್ದಂತೆ, ಅದಕ್ಕೆ ತಕರಾರು ಅರ್ಜಿ ಸಲ್ಲಿಸಲು ಸರ್ಕಾರಿ ಅಭಿಯೋಜಕರು ಕಾಲಾವಕಾಶ ಕೇಳಿದ್ದಾರೆ. ಇದನ್ನು ಓದಿ: ವಿಷ ಪ್ರಸಾದ ಪ್ರಕರಣ- ದೇವಸ್ಥಾನದ ಆವರಣದಲ್ಲಿ ಭಕ್ತೆಯ ಗೋಳಾಟ

    ಸರ್ಕಾರಿ ಅಭಿಯೋಜಕರು ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಜನವರಿ 29ರಂದು ಪ್ರಕರಣದ ವಿಚಾರಣೆ ಜೊತೆಗೆ ಜಾಮೀನು ವಿಚಾರಣೆ ನಡೆಸಲಾಗುತ್ತದೆ ಎಂದು ನ್ಯಾಯಾಧೀಶರಾದ ಬಸವರಾಜು ತಿಳಿಸಿದ್ದಾರೆ. ಈ ಮಧ್ಯೆ ಆರೋಪಿಗಳ ಪರ ವಕಾಲತ್ತು ವಹಿಸಬಾರದೆಂಬ ತಮ್ಮ ನಿರ್ಣಯ ಬೆಂಬಲಿಸುವಂತೆ ಮಡಿಕೇರಿ ವಕೀಲರಿಗೆ ಮನವಿ ಸಲ್ಲಿಸಲು ಚಾಮರಾಜನಗರ ವಕೀಲರ ಸಂಘ ನಿರ್ಧರಿಸಿದೆ. ಇದನ್ನು ಓದಿ: ಅಂಬಿಕಾ ಮನೆ ಬಾಡಿಗೆಯಲ್ಲೂ ಮಧ್ಯಸ್ಥಿಕೆ ವಹಿಸಿದ್ದ ಇಮ್ಮಡಿ ಮಹದೇವ ಸ್ವಾಮೀಜಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಬಿಕಾ ಮನೆ ಬಾಡಿಗೆಯಲ್ಲೂ ಮಧ್ಯಸ್ಥಿಕೆ ವಹಿಸಿದ್ದ ಇಮ್ಮಡಿ ಮಹದೇವ ಸ್ವಾಮೀಜಿ

    ಅಂಬಿಕಾ ಮನೆ ಬಾಡಿಗೆಯಲ್ಲೂ ಮಧ್ಯಸ್ಥಿಕೆ ವಹಿಸಿದ್ದ ಇಮ್ಮಡಿ ಮಹದೇವ ಸ್ವಾಮೀಜಿ

    ಚಾಮರಾಜನಗರ: ಸುಳ್ವಾಡಿ ಗ್ರಾಮದ ಮಾರಮ್ಮ ದೇವಾಲಯ ವಿಷ ಪ್ರಸಾದ ಪ್ರಕರಣದ ಎ2 ಆರೋಪಿ ಅಂಬಿಕಾ ನಾಲ್ಕು ವರ್ಷದಿಂದ ಮನೆಯ ಬಾಡಿಗೆಯನ್ನ ಕಟ್ಟದ ಮನೆಯ ಮಾಲೀಕನಿಗೂ ವಂಚನೆ ಮಾಡಿದ್ದಾಳೆ.

    ಮಾರ್ಟಳ್ಳಿ ಗ್ರಾಮದಲ್ಲಿರುವ ಗೋವಿಂದ ಎಂಬವರ ಮನೆಯನ್ನ ಅಂಬಿಕಾ ಬಾಡಿಗೆ ಪಡೆದುಕೊಂಡಿದ್ದಳು. ಪ್ರಕರಣದ ಎ1 ಆರೋಪಿ ಇಮ್ಮಡಿ ಮಹದೇವ ಸ್ವಾಮೀಜಿಯ ಮಧ್ಯಸ್ಥಿಕೆಯಲ್ಲಿ ಬಾಡಿಗೆ ಪಡೆದಿದ್ದಳು. ಆದರೆ ಸುಮಾರು ನಾಲ್ಕು ವರ್ಷದಿಂದ ಮನೆ ಬಾಡಿಗೆ ಕೊಡದೆ ಮಾಲೀಕರಿಗೆ ವಂಚನೆ ಮಾಡಿದ್ದಾಳೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಮನೆ ಮಾಲೀಕ, ಮೊದಲಿಗೆ 1 ಲಕ್ಷ ಹಣ ಅಡ್ವಾನ್ಸ್ ನೀಡಿದ್ದಾಳೆ. ನಾವು ಪ್ರತಿ ತಿಂಗಳು 1 ಸಾವಿರ ಮನೆಯ ಬಾಡಿಗೆ ಕೇಳಿದೆ. ಆದರೆ ಅವರು 1 ಸಾವಿರ ಬಾಡಿಗೆ ನೀಡಲು ಸಾಧ್ಯವಿಲ್ಲ, 500 ರೂಪಾಯಿ ಕೊಡುತ್ತೇನೆ ಎಂದು ಇಮ್ಮಡಿ ಮಹದೇವ ಸ್ವಾಮೀಜಿ ಹೇಳಿದ್ದರು. ನಾನು 500 ರೂಪಾಯಿ ಆಗುವುದಿಲ್ಲ 1 ಸಾವಿರ ಬಾಡಿಗೆ ಕೊಡಬೇಕು ಎಂದಿದ್ದೆ. ಕೊನೆಗೆ ನನ್ನ ಷರತ್ತಿಗೆ ಒಪ್ಪಿ ಇಮ್ಮಡಿ ಮಹದೇವಸ್ವಾಮೀಜಿ ಮನೆ ಬಾಡಿಗೆ ಕೊಡಿಸಿದ್ದರು ಎಂದು ಹೇಳಿದ್ದಾರೆ.

    ಇದಾದ ಬಳಿಕ ನಾಲ್ಕು ವರ್ಷಗಳ ಕಾಲ ಅಂಬಿಕಾ ಮನೆಯ ಬಾಡಿಗೆ ನೀಡಲಿಲ್ಲ. ಇಮ್ಮಡಿ ಮಹದೇವಸ್ವಾಮೀಜಿಯ ಮೇಲೆ ಇದ್ದ ನಂಬಿಕೆಯಿಂದ ಮಾಲೀಕ ಗೋವಿಂದ ಅಂಬಿಕಾಳಿಂದ ಮನೆಯ ಬಾಡಿಗೆ ಕೇಳಲಿಲ್ಲ. ಇದನ್ನೇ ದುರುಪಯೋಗಪಡಿಸಿಕೊಂಡ ಅಂಬಿಕಾ ನಾಲ್ಕು ವರ್ಷ ಬಾಡಿಗೆ ನೀಡದೆ ಮಾಲೀಕನಿಗೆ ವಂಚನೆ ಮಾಡಿದ್ದಾಳೆ. ಇತ್ತ ಬಾಡಿಗೆಯೂ ಇಲ್ಲ, ಮನೆ ಖಾಲಿಯೂ ಇಲ್ಲ. ಈಗ ಮನೆ ಖಾಲಿ ಮಾಡಿಸಿಕೊಡುವಂತೆ ಪೊಲೀಸರ ಮೊರೆ ಹೋಗಲು ಮಾಲೀಕ ನಿರ್ಧರಿಸಿದ್ದಾರೆ.

    ಹಗಲಲ್ಲೇ ಈ ಮನೆಗೆ ಇಮ್ಮಡಿ ಮಹದೇವಸ್ವಾಮೀಜಿ ಹೋಗುತ್ತಿದ್ದನು. ಇದನ್ನು ಕಂಡು ಕಾಣದಂತೆ ಮನೆಯ ಮಾಲೀಕ ಗೋವಿಂದ ಇದ್ದರು. ಈಗ ತಮ್ಮ ಮನೆ ಅನೈತಿಕ ತಾಣವಾಗಿದ್ದಕ್ಕೆ ಬೇಸರ ವ್ಯಕ್ಯ ಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ಸುಳ್ವಾಡಿ ಕೇಸ್ – ಅಂಬಿಕಾ ಬಳಿಕ ಪೊಲೀಸರ ಮುಂದೆ ವಿಷಸ್ವಾಮಿ ನಾಟಕ!

    ಸುಳ್ವಾಡಿ ಕೇಸ್ – ಅಂಬಿಕಾ ಬಳಿಕ ಪೊಲೀಸರ ಮುಂದೆ ವಿಷಸ್ವಾಮಿ ನಾಟಕ!

    ಚಾಮರಾಜನಗರ: ಸುಳ್ವಾಡಿ ದೇವಾಲಯದ ವಿಷಪ್ರಸಾದ ಸೇವನೆ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪಂಚನಾಮೆ ಮಾಡಲು ಬಂದ ವೇಳೆ ಅಂಬಿಕಾ ಹೈಡ್ರಾಮಾ ಸೃಷ್ಟಿಸಿದ್ದು, ಇತ್ತ ರಾಮಪುರ ಪೊಲೀಸ್ ಠಾಣೆಯಲ್ಲಿರುವ ಇಮ್ಮಡಿ ಮಹದೇವಸ್ವಾಮಿ ಕೂಡ ನನಗೆ ಎದೆ ನೋವು ಎಂದು ನಾಟಕವಾಡಿ ಹೈಡ್ರಾಮ ಮಾಡಿದ್ದಾನೆ.

    ಇಂದು ಪ್ರಕರಣದ ಪ್ರಮುಖ ಆರೋಪಿಗಳಾದ ಅಂಬಿಕಾ, ಮಾದೇಶ್ ಹಾಗೂ ದೊಡ್ಡಯ್ಯ ಮೂವರನ್ನು ಕರೆದುಕೊಂಡು ಪೊಲೀಸರು ಸ್ಥಳ ಮಹಜರು ಮಾಡಲು ಹೋಗಿದ್ದರು. ಈ ವೇಳೆ ಅಂಬಿಕಾ ಪೊಲೀಸರ ಮೇಲೆ ಆರೋಪ ಮಾಡಿ ಡ್ರಾಮಾ ಮಾಡಿದ್ದಳು. ಇದರ ಬೆನ್ನಲ್ಲೇ ಪೊಲೀಸ್ ಕಸ್ಟಡಿಯಲ್ಲಿರುವ ಮಹದೇವಸ್ವಾಮಿ ಠಾಣೆಯಲ್ಲೇ ಅನಾರೋಗ್ಯದ ನಾಟಕ ಮಾಡಿದ್ದಾನೆ.

    ಆರೋಪಿಯ ಹೇಳಿಕೆ ಮೇರೆಗೆ ಪೊಲೀಸರು ಕೂಡಲೇ ವೈದ್ಯರನ್ನು ಕರೆಸಿ ತಪಾಸಣೆ ನಡೆಸಿದ್ದು, ವೈದ್ಯರು ತಪಾಸಣೆ ನಡೆಸಿದ ನಂತರ ಸ್ವಾಮೀಜಿಗೆ ಏನು ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ವೈದ್ಯರ ಹೇಳಿಕೆ ಪಡೆದಿರುವ ಪೊಲೀಸರು ವಿಚಾರಣೆಯನ್ನು ಮುಂದುವರಿಸಿದ್ದು, ನಿಮಗೆ ಅನಾರೋಗ್ಯದ ಸಮಸ್ಯೆ ಉಂಟಾದರೆ ಠಾಣೆಯ ಮುಂಭಾಗದಲ್ಲೇ ಅಂಬುಲೆನ್ಸ್ ಇದೆ. ನೀವು ವಿಚಾರಣೆಗೆ ಸಹಕಾರ ನೀಡಿ ಎಂದು ತಿಳಿಸಿದ್ದಾರೆ. ಇದನ್ನು ಓದಿ: ಪೊಲೀಸರೇ ನಮ್ಮ ಮನೆಯಲ್ಲಿ ವಿಷ ಇಟ್ಟಿದ್ದಾರೆ – ವಿಷಜಂತು ಅಂಬಿಕಾ ಹೈಡ್ರಾಮ

    ಮಠದಿಂದ ಗೇಟ್ ಪಾಸ್?
    6 ಶತಮಾನಗಳ ಇತಿಹಾಸ ಹೊಂದಿರುವ ಶ್ರೀ ಸಾಲೂರು ಮಠದ ಹಿರಿಯ ಸ್ವಾಮೀಜಿಗಳು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡುವ ಮೂಲಕ ಮಹದೇವಸ್ವಾಮಿಗೂ ನಮ್ಮ ಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

    ಡಿಸೆಂಬರ್ 14 ರಂದು ಸುಳ್ವಾಡಿ ಗ್ರಾಮದ ಕಿಚ್‍ಗುತ್ ಮಾರಮ್ಮ ದೇವಾಲಯದಲ್ಲಿ ವಿಷಪೂರಿತ ಪ್ರಸಾದ ತಿಂದು 15 ಮಂದಿ ಸಾವನ್ನಪಪಿದ್ದಾರೆ. ಇನ್ನು ಹಲವರು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದೇವಸ್ಥಾನಕ್ಕೆ ಶ್ರೀ ಇಮ್ಮಡಿ ಮಹದೇವ ಸ್ವಾಮೀಜಿಗಳು ತಮ್ಮ ವೈಯಕ್ತಿಕ ನೆಲೆಯಲ್ಲಿ ಟ್ರಸ್ಟ್‍ನ ಅಧ್ಯಕ್ಷರಾಗಿದ್ದರು. ಆದರೆ ಶ್ರೀ ಸಾಲೂರು ಮಠಕ್ಕೂ ಈ ಟ್ರಸ್ಟ್‍ಗೂ ಯಾವುದೇ ಸಂಬಂಧವಿಲ್ಲ. ಈಗಾಗಲೇ ಪೊಲೀಸರು ಇಮ್ಮಡಿ ಮಹದೇವ ಸ್ವಾಮಿ ಹಾಗೂ ಮೂವರನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಗೋಪುರ ವಿವಾದಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಟ್ರಸ್ಟಿನ ಕೆಲವರ ವಿರುದ್ಧ ತಮ್ಮ ಮೇಲುಗೈ ಸಾಧಿಸಲು ಪ್ರಸಾದಕ್ಕೆ ವಿಷ ಬೆರಿಸಿದ್ದರು ಎಂಬುದನ್ನ ಒಪ್ಪಿಕೊಂಡಿದ್ದಾರೆ. ಈ ದುರ್ಘಟನೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ಭಕ್ತಾಧಿಗಳಿಗೂ ಮಠವೂ ಎಲ್ಲ ನೆರವು ನೀಡಲಿದೆ. ದುರಂತದಲ್ಲಿ ಜೀವನೋಪಾಯವಿಲ್ಲದೆ ಅನಾಥರಾಗಿರುವವರಿಗೆ, ವೃದ್ಧರಿಗೆ ಮಠವು ಆಶ್ರಯ ನೀಡುತ್ತದೆ. ಅಲ್ಲದೆ ದುರಂತದಲ್ಲಿ ತೊಂದರೆಗೊಳಗಾದ ಎಲ್ಲಾ ಮಕ್ಕಳ ಶಿಕ್ಷಣದ ಉಸ್ತುವಾರಿಯನ್ನ ಶ್ರೀ ಮಠ ನೋಡಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೊಲೀಸರೇ ನಮ್ಮ ಮನೆಯಲ್ಲಿ ವಿಷ ಇಟ್ಟಿದ್ದಾರೆ – ವಿಷಜಂತು ಅಂಬಿಕಾ ಹೈಡ್ರಾಮ

    ಪೊಲೀಸರೇ ನಮ್ಮ ಮನೆಯಲ್ಲಿ ವಿಷ ಇಟ್ಟಿದ್ದಾರೆ – ವಿಷಜಂತು ಅಂಬಿಕಾ ಹೈಡ್ರಾಮ

    ಚಾಮರಾಜನಗರ: ಸುಳ್ವಾಡಿ ದೇವಾಲಯರ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಥಳ ಪರಿಶೀಲನೆ ಮಾಡಲು ಅಂಬಿಕಾ ಮನೆಗೆ ತೆರಳಿದ್ದರು. ಈ ವೇಳೆ ಆರೋಪಿ ಅಂಬಿಕಾ ಪೊಲೀಸರ ಮುಂದೆ ಹೈಡ್ರಾಮಾ ಮಾಡಿದ್ದಾಳೆ.

    ಪ್ರಮುಖ ಆರೋಪಿಗಳಾದ ಅಂಬಿಕಾ, ಮಾದೇಶ್ ಹಾಗೂ ದೊಡ್ಡಯ್ಯ ಮೂವರು ಆರೋಪಿಗಳೊಂದಿಗೆ ಪೊಲೀಸರು ಸ್ಥಳ ಮಹಜರು ಮಾಡಲು ಹೋಗಿದ್ದರು. ಅಲ್ಲಿವರೆಗೂ ಅಂಬಿಕಾ ಸುಮ್ಮನಿದ್ದಳು. ಆದರೆ ಮನೆಗೆ ಹೋಗಿ ಮಹಜರ್ ಮಾಡಿ ವಾಪಸ್ ಬರುವಾಗ ಹೊರಗಡೆ ಜಮಾಸಿದ್ದ ಜನರನ್ನು ನೋಡಿ ಈ ವೇಳೆ 2ನೇ ಆರೋಪಿ ಅಂಬಿಕಾ ಡ್ರಾಮ ಮಾಡಿದ್ದಾಳೆ.

    ಮನೆಯ ಬಳಿ ಪೊಲೀಸರನ್ನು ಕಂಡು ಅಂಬಿಕಾ ರೇಗಾಡಿದ್ದು, ಪೊಲೀಸರು ನಂಗೆ ಮೋಸ ಮಾಡಿದ್ದಾರೆ ಎಂದು ಕೂಗಾಡಿದ್ದಾಳೆ. ಆಗ ಪೊಲೀಸ್ ಮಹಿಳಾ ಪೇದೆ ಅಂಬಿಕಾಳಿಗೆ ಮೊಟಕಿದ್ದು, ಬಲವಂತವಾಗಿ ಆಕೆಯನ್ನು ಕರೆದುಕೊಂಡು ಬರುತ್ತಿದ್ದರು. ಪೊಲೀಸರು ನಮ್ಮ ಮನೆಯ ಬೀಗ ತೆಗೆದುಕೊಂಡು ಅವರೇ ನಮ್ಮ ಮನೆಯಲ್ಲಿ ವಿಷ ಇಟ್ಟಿದ್ದಾರೆ. ನಾನು ಪೊಲೀಸರನ್ನು ನಂಬಿದ್ದೆ. ಆದರೆ ಈಗ ಪೊಲೀಸ್ ಇಲಾಖೆ ಮೋಸ ಮಾಡಿದೆ. ನಾನು ಸಿಸಿಬಿಗೆ ಕೇಸ್ ಒಪ್ಪಿಸುತ್ತೇನೆ ಎಂದು ಅಂಬಿಕಾ ಕೂಗಾಡಿದ್ದಾಳೆ.

    ಅಂಬಿಕಾ ಮನೆಯನ್ನು ಮಹಜರ್ ಮಾಡುವಾಗ ಆಕೆಯ ಮನೆಯಲ್ಲಿ ವಿಷದ ಬಾಟೆಲ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ವಿಚಾರಣೆ ವೇಳೆ ಆರೋಪಿ ಅಂಬಿಕಾ, ನಾವೇ ವಿಷ ಹಾಕಿದ್ದು ಎಂದು ತಪ್ಪೊಪ್ಪಿಕೊಂಡಿದ್ದಳು. ಆದರೆ ಮನೆಗೆ ಹೋಗೋವರೆಗೂ ಸುಮ್ಮನಿದ್ದ ಅಂಬಿಕಾ ಜನರನ್ನು ನೋಡಿದ ತಕ್ಷಣ ಅವರ ಮುಂದೆ ಮತ್ತೆ ಒಳ್ಳೆಯವಳಾಗಲೂ ಪೊಲೀಸರ ಮೇಲೆಯೇ ರೇಗಾಡಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅವರೊಬ್ಬರ ಫೋನ್ ಕಾಲ್ ವಿಷ ಪ್ರಸಾದ ಪ್ರಕರಣದ ಸುಳಿವು ನೀಡಿತ್ತು!

    ಅವರೊಬ್ಬರ ಫೋನ್ ಕಾಲ್ ವಿಷ ಪ್ರಸಾದ ಪ್ರಕರಣದ ಸುಳಿವು ನೀಡಿತ್ತು!

    – ಕಾಲ್ ರೆಕಾರ್ಡ್ ನೀಡಿದ್ದ ಕೃಷಿ ಅಧಿಕಾರಿ
    – ಕೃಷಿ ಅಧಿಕಾರಿಯ ಜೊತೆ ರೇಗಾಡಿದ್ದ ಅಂಬಿಕಾ

    ಚಾಮರಾಜನಗರ: ಕೃಷಿ ಅಧಿಕಾರಿಯೊಬ್ಬರು ನೀಡಿದ ಫೋನ್ ಕಾಲ್ ಮಾಹಿತಿ ಸುಳ್ವಾಡಿ ಮಾರಮ್ಮ ದೇವಸ್ಥಾನದ ಪ್ರಕರಣವನ್ನು ಬಯಲು ಮಾಡಲು ಸಹಾಯವಾಗಿದೆ.

    ಕೃಷಿ ಅಧಿಕಾರಿ ಶಿವಣ್ಣ ಅವರು ಮೊಬೈಲ್ ಮೂಲಕ ಆರೋಪಿ ಅಂಬಿಕಾ ಜೊತೆಗೆ ಮಾತನಾಡಿದ್ದನ್ನು ರೆಕಾರ್ಡ್ ಮಾಡಿಕೊಂಡಿದ್ದರು. ದುರಂತ ಪ್ರಕರಣದ ತನಿಖೆ ಆರಂಭಿಸುತ್ತಿದ್ದಂತೆ ಪೊಲೀಸರಿಗೆ ಕಾಲ್ ರೆಕಾರ್ಡ್ ನೀಡಿದ ಪರಿಣಾಮ ಎಲ್ಲ ಆರೋಪಿಗಳ ಬಂಧನ ಕೆಲಸ ಸುಲಭವಾಗಿದೆ.

    ಸಂದೇಹ ಬಂದಿದ್ದು ಹೇಗೆ?
    ಸುಳ್ವಾಡಿ ದೇವಾಲಯದ ಪ್ರಸಾದ ಸೇವಿಸಿದವರ ದೇಹದಲ್ಲಿ ಮನೋಕ್ರೋಟೋಫೋಸ್ ಅಂಶ ವೈದ್ಯಕೀಯ ವರದಿಯಲ್ಲಿ ಪತ್ತೆಯಾಗಿದ್ದನ್ನು ಕಂಡು ಶಿವಣ್ಣ ಅವರಿಗೆ ಸ್ವಲ್ಪ ಅನುಮಾನ ಬಂದಿದೆ. 10 ದಿನಗಳ ಹಿಂದೆ ಅಂಬಿಕಾ ನನ್ನ ಬಳಿ ಗಿಡಗಳಿಗೆ ರೋಗ ಬಂದಿದೆ ಎಂದು ಹೇಳಿ ಈ ಕೀಟನಾಶಕವನ್ನು ತೆಗೆದುಕೊಂಡು ಹೋಗಿದ್ದಳು. ಈ ರಾಸಾಯನಿಕ ಪ್ರಸಾದದಲ್ಲಿ ಸೇರಿದ್ದು ಹೇಗೆ ಎಂದು ಶಿವಣ್ಣ ತಲೆಕೆಡಿಸಿಕೊಂಡಿದ್ದಾರೆ.

    ಅನುಮಾನ ಬಂದ ಹಿನ್ನೆಲೆಯಲ್ಲಿ ನಾನು ಕೊಟ್ಟ ಔಷಧಿಯೇ ಈ ಅನಾಹುಕ್ಕೆ ಕಾರಣವಾಯಿತೇ ಎಂದು ಶಿವಣ್ಣ ಅವರು ಫೋನ್ ಮಾಡಿ ಅಂಬಿಕಾಳನ್ನು ಕೇಳಿದ್ದಾರೆ. ಈ ವೇಳೆ ಸತ್ಯ ಒಪ್ಪಿಕೊಳ್ಳದ ಅಂಬಿಕಾ ನೀವು ಕೊಟ್ಟ ಔಷಧಿಯನ್ನು ಗಿಡಕ್ಕೆ ಬಳಸಿದ್ದೇನೆ. ನಾವೇನೂ ವಿಷ ಹಾಕುವವರು ಅಂತಾ ತಿಳಿದುಕೊಂಡಿದ್ದಾರಾ ಎಂದು ಪ್ರಶ್ನಿ ಅಂಬಿಕಾ ರೇಗಾಡಿದ್ದಾಳೆ. ಪ್ರಕರಣದ ಕುರಿತು ಬಾಯಿ ಬಿಡಿಸಲು ಮೊದಲೇ ಪ್ಲಾನ್ ಮಾಡಿಕೊಂಡಿದ್ದ ಶಿವಣ್ಣ ಆಕೆಯ ಜೊತೆಗೆ ಮಾತನಾಡಿದ್ದನ್ನು ಸಂಪೂರ್ಣವಾಗಿ ರೆಕಾರ್ಡ್ ಮಾಡಿಕೊಂಡಿದ್ದರು. ಬಳಿಕ ಇದನ್ನು ಪೊಲೀಸರಿಗೆ ನೀಡಿ ತನಿಖೆಗೆ ಸಹಾಯ ಮಾಡಿದ್ದಾರೆ.

    ಅಂಬಿಕಾಗೆ ವಿಷ ಪಡೆದಿದ್ದ ಹೇಗೆ?:
    ಮಾರಮ್ಮ ದೇವಸ್ಥಾನದ ಟ್ರಸ್ಟ್ ಹಾಗೂ ಸಾಲೂರು ಮಠದ ಮೇಲೆ ಹಿಡಿತ ಸಾಧಿಸುವ ಉದ್ದೇಶವನ್ನು ಇಮ್ಮಡಿ ಮಹದೇಸ್ವಾಮಿ ಹೊಂದಿದ್ದ. ಈ ನಿಟ್ಟಿನಲ್ಲಿ ತನ್ನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಅಂಬಿಕಾ ಸಹಾಯ ಕೂಡ ಪಡೆದಿದ್ದ. ಮಾರಮ್ಮ ದೇವಿ ಶಂಕುಸ್ಥಾಪನೆ ದಿನದಂದು ಪ್ರಸಾದಕ್ಕೆ ವಿಷ ಬೆರೆಸಲು ಪ್ಲಾನ್ ರೂಪಿಸಿದ್ದ ಅಂಬಿಕಾ, ಮನೆಯ ಗಿಡಗಳಿಗೆ ರೋಗ ಬಂದಿದೆ ಎಂದು ಕೃಷಿ ಅಧಿಕಾರಿ ಶಿವಣ್ಣ ಅವರ ಬಳಿ ಕ್ರಿಮಿನಾಶಕ ಕೊಡಿ ಎಂದು ಕೇಳಿದ್ದಳು. ಆಕೆಯ ಮಾತು ನಂಬಿದ್ದ ಅಧಿಕಾರಿ 500 ಮೀ ಲೀಟರ್ ನಂತೆ 2 ಬಾಟಲ್ ಮನೋಕ್ರೋಟೋಫೋಸ್ ಕೀಟನಾಶಕವನ್ನು ಕೊಟ್ಟಿದ್ದರು.

    ಅಂಬಿಕಾ ಖತರ್ನಾಕ್ ಪ್ಲಾನ್:
    ಪ್ರಸಾದ ಮುಗಿದಿದೆ ಎಂದು ಪತಿ ಮಾದೇಶ್ ಫೋನ್ ಮಾಡಿ ಹೇಳಿದ ಮೇಲೆ ಅಂಬಿಕಾ ದೇವಸ್ಥಾನಕ್ಕೆ ಹೋಗಿದ್ದಳು. ದೇವಸ್ಥಾನಕ್ಕೆ ಹೋದ ತಕ್ಷಣ ಕೆಲಸ ಸರಿಯಾಗಿ ಆಗಿದೆಯಾ ಅಂತ ಅಡುಗೆ ಮನೆ ಹೋಗಿ ಪರಿಶೀಲನೆ ಮಾಡಿದ್ದಳು. ತಾನು ಅಂದುಕೊಂಡಂತೆ ಕೆಲಸ ಮುಗಿದಿದೆ ಎನ್ನುವುದು ಖಚಿತ ಪಡೆಸಿಕೊಂಡು ದೇವರ ಬಳಿ ಹೋಗಿ ತೀರ್ಥವನ್ನು ಕೂಡ ಪಡೆದಿರಲಿಲ್ಲ. ಈ ವೇಳೆ ದೇವಾಲಯದಲ್ಲಿಯೇ ಅರ್ಚಕ ದೊಡ್ಡಯ್ಯನಿಗೆ ಎರಡು ಸಾವಿರ ರೂ. ನೀಡಿದ್ದಾಳೆ.

    https://www.youtube.com/watch?v=9QOHKI5h4z8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇನ್ಮುಂದೆ ಮಾರಮ್ಮ ದೇವಸ್ಥಾನದ ವಿಚಾರಕ್ಕೆ ತಲೆ ಹಾಕಲ್ಲ: ಕಣ್ಣೀರಿಟ್ಟ ಚಿನ್ನಪ್ಪಿ

    ಇನ್ಮುಂದೆ ಮಾರಮ್ಮ ದೇವಸ್ಥಾನದ ವಿಚಾರಕ್ಕೆ ತಲೆ ಹಾಕಲ್ಲ: ಕಣ್ಣೀರಿಟ್ಟ ಚಿನ್ನಪ್ಪಿ

    ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಿ ದೇವಸ್ಥಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಶದಲ್ಲಿದ್ದ ದೇವಸ್ಥಾನದ ಟ್ರಸ್ಟಿ ಚಿನ್ನಪ್ಪಿ ಐದು ದಿನದ ಬಳಿಕ ಗ್ರಾಮಕ್ಕೆ ಮರಳಿದ್ದಾರೆ. ಈ ವೇಳೆ ಕುಟುಂಬಸ್ಥರ ಜೊತೆ ಸೇರಿ ಕಣ್ಣೀರಿಟ್ಟು ಇನ್ನೂ ಮುಂದೆ ನಾನು ದೇವಸ್ಥಾನದ ವಿಚಾರಕ್ಕೆ ಹೋಗುವುದಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

    ಪ್ರಸಾದದಲ್ಲಿ ವಿಷ ಬೆರೆಸಿದ ಆರೋಪದಡಿ ಚಿನ್ನಪ್ಪಿಯನ್ನು ಪೊಲೀಸರು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ಇರಿಸಿ ವಿಚಾರಣೆ ನಡೆಸಿದ್ದರು. ಈಗ ಆರೋಪಿಗಳಾದ ಸಾಲೂರು ಮಠದ ಕಿರಿಯ ಸ್ವಾಮಿ ಮಹದೇವಸ್ವಾಮಿ, ಮಾರಮ್ಮ ದೇವಸ್ಥಾನದ ವ್ಯವಸ್ಥಾಪಕ ಮಾದೇಶ್, ಆತನ ಪತ್ನಿ ಅಂಬಿಕಾ ಹಾಗೂ ನಾಗರಕಲ್ಲಿನ ಅರ್ಚಕನಾಗಿದ್ದ ದೊಡ್ಡಯ್ಯ ತಪ್ಪು ಒಪ್ಪಿಕೊಂಡಿದ್ದಾರೆ. ಹೀಗಾಗಿ ಇಂದು ಚಿನ್ನಪ್ಪಿಯನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.

    ಕುಟುಂಬದ ಸದಸ್ಯರನ್ನು ಸೇರುತ್ತಿದ್ದಂತೆ ಚಿನ್ನಪ್ಪಿ ಕಣ್ಣೀರು ಸುರಿಸಲು ಆರಂಭಿಸಿದರು. ದೇವಸ್ಥಾನದ ವಿಚಾರಕ್ಕೆ ನಾನು ಹಾಗೂ ನೀವು ಯಾರೊಬ್ಬರೂ ತಲೆ ಹಾಕುವಂತಿಲ್ಲ ಎಂದು ಚಿನ್ನಪ್ಪಿ ಮನೆಯ ಸದಸ್ಯರಿಗೆ ಸೂಚಿಸಿದ್ದಾರೆ. ಈ ಮೂಲಕ ಸುಳ್ವಾಡಿ ಗ್ರಾಮದ ಮಾರಮ್ಮ ದೇವಾಲಯದ ಧರ್ಮಾಧಿಕಾರಿ ಸ್ಥಾನದಿಂದ ಚಿನ್ನಪ್ಪಿ ಹಿಂದೆ ಸರಿಯಲಿದ್ದಾರೆ.

    ಅಕ್ರಮ ಸಂಬಂಧ ಹೊಂದಿದ್ದ ಇಮ್ಮಡಿ ಮಹದೇಸ್ವಾಮಿ ಮತ್ತು ಅಂಬಿಕಾ ಇಬ್ಬರು ಸೇರಿಯೇ ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ. ಈ ಇಬ್ಬರು ಆರೋಪಿಗಳು ಕೊಳ್ಳೇಗಾಲ ತಾಲೂಕಿನ ಶಾಗ್ಯ ಗ್ರಾಮದವರಾಗಿದ್ದು, ಸಾಲೂರು ಮಠ ಹಾಗೂ ಮಾರಮ್ಮ ದೇವಸ್ಥಾನದ ಟ್ರಸ್ಟ್ ಹಾಗೂ ಸಾಲೂರು ಮಠದ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ.

    ದೇವಸ್ಥಾನ ಟ್ರಸ್ಟಿ ಚಿನ್ನಪ್ಪಿ ಹಾಗೂ ದೇವಸ್ಥಾನದ ಗೋಪುರ ನಿರ್ಮಾಣದಲ್ಲಿ ಭಾಗವಹಿಸಿದ್ದ ಸಾಲೂರು ಮಠದ ಹಿರಿಯ ಶ್ರೀ ಗುರುಸ್ವಾಮೀಜಿ ಹೆಸರು ಹಾಳು ಮಾಡುವ ಉದ್ದೇಶದಿಂದ ಪ್ರಸಾದದಲ್ಲಿ ವಿಷ ಬೆರೆಸಿದ್ದಾರೆ. ಈ ಕೃತ್ಯದಿಂದ ಟ್ರಸ್ಟಿಗಳು ಜೈಲು ಶಿಕ್ಷೆ ಗುರಿಯಾಗಲಿದ್ದು, ದೇವಸ್ಥಾನದ ಆಡಳಿತ ನಮ್ಮ ಕೈಸೇರುತ್ತದೆ ಎನ್ನುವುದು ಮಹದೇವಸ್ವಾಮಿ ಹಾಗೂ ಅಂಬಿಕಾ ಪ್ಲಾನ್ ಆಗಿತ್ತು. ಅಷ್ಟೇ ಅಲ್ಲದೆ ಪ್ರಕರಣದಲ್ಲಿ ಸಾಲೂರು ಮಠದ ಹಿರಿಯ ಸ್ವಾಮೀಜಿ ಕೂಡ ಜೈಲು ಸೇರುತ್ತಾರೆ. ಹೀಗಾಗಿ ಮಠ ಹಾಗೂ ದೇವಸ್ಥಾನದ ಆಡಳಿತ ನಮ್ಮ ಕೈಗೆ ಸೇರುತ್ತದೆ ಎನ್ನುವ ದುರಾಲೋಚನೆಯಿಂದ ಈ ಕೃತ್ಯ ಎಸಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ವಾಡಿ ದುರಂತ – ವಿಷರಾಕ್ಷಸಿಯ ಜೊತೆ ಸ್ವಾಮಿಗೆ ಇತ್ತು ಅಕ್ರಮ ಸಂಬಂಧ

    ಸುಳ್ವಾಡಿ ದುರಂತ – ವಿಷರಾಕ್ಷಸಿಯ ಜೊತೆ ಸ್ವಾಮಿಗೆ ಇತ್ತು ಅಕ್ರಮ ಸಂಬಂಧ

    – ಸಾಲೂರು ಮಠದ ಹಿರಿಯ ಸ್ವಾಮಿಯನ್ನು ಜೈಲಿಗಟ್ಟಲು ಪ್ಲಾನ್
    – ಕರ್ಪೂರ ಜಾಸ್ತಿಯಾಗಿದೆ ಪ್ರಸಾದ ತಿನ್ನಿ ಎಂದಿದ್ದ ಮಾದೇಶ

    ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಾಸ್ಥಾನ ವಿಷ ಪ್ರಸಾದ ಪ್ರಕರಣ ದಿನದಿನಕ್ಕೆ ತಿರುವು ಪಡೆದುಕೊಳ್ಳುತ್ತಿದ್ದು, ಸ್ವಾಮಿ ಹಾಗೂ ಆರೋಪಿ ಮಹಿಳೆಯ ನಡುವೆ ಅನೈತಿಕ ಸಂಬಂಧವಿತ್ತು ಎನ್ನುವುದು ವಿಚಾರಣೆ ವೇಳೆ ಬೆಳಕಿದೆ ಬಂದಿದೆ.

    ಇಮ್ಮಡಿ ಮಹದೇಸ್ವಾಮಿ ಮತ್ತು ಅಂಬಿಕಾ ಇಬ್ಬರು ಸೇರಿಯೇ ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ. ಈ ಇಬ್ಬರು ಆರೋಪಿಗಳು ಕೊಳ್ಳೇಗಾಲ ತಾಲೂಕಿನ ಶಾಗ್ಯ ಗ್ರಾಮದವರಾಗಿದ್ದು, ಮಾರಮ್ಮ ದೇವಸ್ಥಾನದ ಟ್ರಸ್ಟ್ ಹಾಗೂ ಸಾಲೂರು ಮಠದ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ.

    ಅಂಬಿಕಾ ಮಹದೇವಸ್ವಾಮಿಯನ್ನು ಭೇಟಿಯಾಗಲು ಆಗಾಗ ಪತಿ ಮಾದೇಶ ಜೊತೆಗೆ ಸಾಲೂರು ಮಠಕ್ಕೆ ಬರುತ್ತಿದ್ದಳು. ಹೀಗಾಗಿ ಒಂದೇ ಗ್ರಾಮದವರಾಗಿದ್ದ ಸ್ವಾಮೀಜಿ ಹಾಗೂ ಅಂಬಿಕಾ ನಡುವೆ ಅನೈತಿಕ ಸಂಬಂಧವಿತ್ತು. ಇತ್ತ ಮಹದೇವಸ್ವಾಮಿ ಮಾರಮ್ಮ ದೇವಸ್ಥಾನದ ಮೇಲೆ ಹಿಡಿತ ಸಾಧಿಸಲು ಅಂಬಿಕಾ ಸಹಾಯ ಪಡೆದಿದ್ದಾನೆ.

    ವಿಷ ಹಾಕಿದ್ದು ಯಾಕೆ?
    ದೇವಸ್ಥಾನ ಟ್ರಸ್ಟಿ ಚಿನ್ನಪ್ಪಿ ಹಾಗೂ ದೇವಸ್ಥಾನದ ಗೋಪುರ ನಿರ್ಮಾಣದಲ್ಲಿ ಭಾಗವಹಿಸಿದ್ದ ಸಾಲೂರು ಮಠದ ಹಿರಿಯ ಶ್ರೀ ಗುರುಸ್ವಾಮೀಜಿ ಹೆಸರು ಹಾಳು ಮಾಡುವ ಉದ್ದೇಶದಿಂದ ಪ್ರಸಾದದಲ್ಲಿ ವಿಷ ಬೆರೆಸಿದ್ದಾರೆ. ಈ ಕೃತ್ಯದಿಂದ ಟ್ರಸ್ಟಿಗಳು ಜೈಲು ಶಿಕ್ಷೆ ಗುರಿಯಾಗಲಿದ್ದು, ದೇವಸ್ಥಾನದ ಆಡಳಿತ ನಮ್ಮ ಕೈಸೇರುತ್ತದೆ ಎನ್ನುವುದು ಮಹದೇವಸ್ವಾಮಿ ಹಾಗೂ ಅಂಬಿಕಾ ಪ್ಲಾನ್ ಆಗಿತ್ತು. ಅಷ್ಟೇ ಅಲ್ಲದೆ ಪ್ರಕರಣದಲ್ಲಿ ಸಾಲೂರು ಮಠದ ಹಿರಿಯ ಸ್ವಾಮೀಜಿ ಕೂಡ ಜೈಲು ಸೇರುತ್ತಾರೆ. ಹೀಗಾಗಿ ಮಠ ಹಾಗೂ ದೇವಸ್ಥಾನದ ಆಡಳಿತ ನಮ್ಮ ಕೈಗೆ ಸೇರುತ್ತದೆ ಎನ್ನುವ ದುರಾಲೋಚನೆಯಿಂದ ಈ ಕೃತ್ಯ ಎಸಗಿದ್ದಾರೆ.

    ವಿಷ ಬೆರೆಸಿದ್ದು ಹೇಗೆ?:
    ಮಹದೇಸ್ವಾಮಿ ಜೊತೆಗೆ ಪ್ಲಾನ್ ರೂಪಿಸಿದ್ದ ಅಂಬಿಕಾ ಮನೆಯ ಗಿಡಗಳಿಗೆ ರೋಗ ಬಂದಿದೆ ಎಂದು ಕೃಷಿ ಅಧಿಕಾರಿಗೆ ಸುಳ್ಳು ಹೇಳಿದ್ದಳು. ಆಕೆಯ ಮಾತು ನಂಬಿದ್ದ ಅಧಿಕಾರಿ 500 ಮೀ ಲೀಟರ್ ನಂತೆ 2 ಬಾಟಲ್ ಮನೋಕ್ರೋಟೋಫೋಸ್ ಕೀಟನಾಶಕವನ್ನು ಕೊಟ್ಟಿದ್ದರು. ಈ ಕೀಟನಾಶಕವನ್ನು ಅಂಬಿಕಾ ನಾಗರಕಲ್ಲಿನ ಅರ್ಚಕನಾಗಿದ್ದ ದೊಡ್ಡಯ್ಯನಿಗೆ ನೀಡಿದ್ದಳು.

    ದೇವಸ್ಥಾನ ಗೋಪುರ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಪ್ರಸಾದ ತಯಾರಿಸುತ್ತಿದ್ದ ಅಡುಗೆಯವರ್ನು ಮಾದೇಶ ಬೇರೆ ಕಡೆಗೆ ಕಳುಹಿಸಿದ್ದ. ಈ ವೇಳೆ ಅಲ್ಲಿಗೆ ಬಂದಿದ್ದ ದೊಡ್ಡಯ್ಯ ತಂಬಡಿ ವಿಷ ಬೆರೆಸಿ ಪರಾರಿಯಾಗಿದ್ದಾನೆ. ಆದರೆ ಈ ಪ್ರಸಾದವನ್ನು ಭಕ್ತರಿಗೆ ಕೊಟ್ಟರೇ ಹೊರತು ದೇವಸ್ಥಾನದ ಟ್ರಸ್ಟ್ ನ ಪದಾಧಿಕಾರಿಗಳು ಸೇವಿಸಲಿಲ್ಲ. ಬದಲಾಗಿ ತಮ್ಮ ಮನೆಯಿಂದ ತಂದಿದ್ದ ಇಡ್ಲಿ ಹಾಗೂ ಪೊಂಗಲ್ ಅನ್ನು ಪೂಜೆಯ ಬಳಿಕ ಸೇವಿಸಿದ್ದಾರೆ.

    ಕರ್ಪೂರ ಜಾಸ್ತಿಯಾಗಿದೆ ಎಂದಿದ್ದ:
    ದೇವಸ್ಥಾನದ ಗೋಪುರ ಶಂಕುಸ್ಥಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ರಸಾದ ತಯಾರಿಸಲಾಗಿತ್ತು. ಈ ಪ್ರಸಾದದಿಂದ ವಾಸನೆ ಬರುತ್ತಿದೆ ಎಂದು ಕೆಲವರು ದೂರುತ್ತಿದ್ದಂತೆ, ಕರ್ಪೂರ ಜಾಸ್ತಿಯಾಗಿದೆ ತಿನ್ನಿ ಏನು ಆಗಲ್ಲ ಎಂದು ಆರೋಪಿ ಮಾದೇಶ ಭಕ್ತರಿಗೆ ಒತ್ತಾಯಿಸಿದ್ದ ವಿಚಾರ ಪ್ರಕಟವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv