Tag: ambidant

  • ತನಿಖಾಧಿಕಾರಿ ವಿರುದ್ಧವೇ ಯುದ್ಧಕ್ಕೆ ಇಳಿದ ಆಂಬಿಡೆಂಟ್ ಕಂಪನಿ

    ತನಿಖಾಧಿಕಾರಿ ವಿರುದ್ಧವೇ ಯುದ್ಧಕ್ಕೆ ಇಳಿದ ಆಂಬಿಡೆಂಟ್ ಕಂಪನಿ

    ಬೆಂಗಳೂರು: ಕಳೆದ ಒಂದು ವಾರದ ಹಿಂದೆ ಆಂಬಿಡೆಂಟ್ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಇದೇ ಪ್ರಕರಣದಲ್ಲಿ ಸಿಲುಕಿಕೊಂಡು ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಜಾಮೀನು ಪಡೆದು ಹೊರ ಬಂದರು. ಜೈಲಿನಿಂದ ಹೊರಬಂದ ಜನಾರ್ದನ ರೆಡ್ಡಿ ತಮ್ಮ ಬಂಧನದ ಹಿಂದೆ ರಾಜ್ಯ ಸರ್ಕಾರದ ಕೈವಾಡವಿದೆ ಎಂದು ನೇರವಾಗಿಯೇ ಆರೋಪಿಸಿದ್ದರು. ಪ್ರಕರಣದ ತನಿಖೆ ನಡೆಯುತ್ತಿದ್ದು, ಆಂಬಿಡೆಂಟ್ ಕ್ಲಬ್ ತನ್ನ ಫೇಸ್‍ಬುಕ್ ಖಾತೆಯಲ್ಲಿ ತನಿಖಾಧಿಕಾರಿಯಾಗಿದ್ದ ವೆಂಕಟೇಶ್ ಪ್ರಸನ್ನ ವಿರುದ್ಧವೇ ಯುದ್ಧಕ್ಕೆ ಇಳಿದಂತೆ ಕಾಣುತ್ತಿದೆ.

    ಈಗ ತನಿಖಾಧಿಕಾರಿ ವಿರುದ್ಧವೇ ಮಹಾದೋಖಾ ಕಂಪನಿ ಗಂಭೀರ ಆರೋಪಗಳನ್ನು ಮಾಡುತ್ತಿದ್ದು, ವೆಂಕಟೇಶ್ ಪ್ರಸನ್ನ ಅವರಿಂದ ತೊಂದರೆ ಆಗಿದ್ದರೆ ಧ್ವನಿ ಎತ್ತಿ ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿಕೊಂಡಿದೆ.

    ಸಿಸಿಬಿಯಿಂದ ವೆಂಕಟೇಶ್ ಪ್ರಸನ್ನ ಅವರು ವರ್ಗಾವಣೆ ಆಗುತ್ತಿದ್ದಂತೆ ಆಂಬಿಡೆಂಟ್ ಈ ರೀತಿ ಪೋಸ್ಟ್ ಮಾಡಿಕೊಂಡಿದೆ. ತಮ್ಮ ಪೋಸ್ಟ್ ನ್ನು ಎಲ್ಲ ಮಾಧ್ಯಮಗಳಿಗೆ ಮತ್ತು ಬೆಂಗಳೂರು ಸಿಟಿ ಪೊಲೀಸ್ ಪೇಜ್ ಗೆ ಟ್ಯಾಗ್ ಮಾಡಿದೆ.

    ಆಂಬಿಡೆಂಟ್ ಕ್ಲಬ್ ತನ್ನ ಖಾತೆಯಲ್ಲಿ ಆಡಿಯೋ ಕ್ಲಿಪ್ ಅಪ್ಲೋಡ್ ಮಾಡಿಕೊಂಡಿದೆ. ಆ ಆಡಿಯೋ ಕ್ಲಿಪ್ ಕೆಳಗಿನಂತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv