Tag: Ambi Ning Vayassaytho

  • ಜೂನಿಯರ್ ಅಂಬಿಯಾಗಲು 10 ಕೆ.ಜಿ ತೂಕ ಇಳಿಸಿಕೊಂಡ ಸುದೀಪ್!

    ಜೂನಿಯರ್ ಅಂಬಿಯಾಗಲು 10 ಕೆ.ಜಿ ತೂಕ ಇಳಿಸಿಕೊಂಡ ಸುದೀಪ್!

    ಬೆಂಗಳೂರು: ಕಿಚ್ಚ ಸುದೀಪ್ ಪಾತ್ರಕ್ಕೆ ತಕ್ಕಂತೆ ತಮ್ಮ ದೇಹದ ತೂಕವನ್ನು ಹಾಗೂ ಹೇರ್ ಸ್ಟೈಲ್ ಬದಲಿಸುತ್ತಿರುತ್ತಾರೆ. ಆದರೆ ಈಗ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರಕ್ಕಾಗಿ ಕಿಚ್ಚ ಸುದೀಪ್ ಬರೋಬ್ಬರಿ 10 ಕೆ.ಜಿ ಇಳಿಸಿಕೊಂಡಿದ್ದಾರೆ.

    ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ಶ್ರುತಿ ಹರಿಹರನ್ ಹಾಗೂ ಸುದೀಪ್ ಲೀಡ್ ರೋಲ್‍ನಲ್ಲಿ ಕಾಣಿಸಿಕೊಳ್ತಿದ್ದಾರೆ. ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಸುದೀಪ್ ಹಾಗೂ ಶ್ರುತಿ ರೆಟ್ರೋ ಲುಕ್‍ನಲ್ಲಿ ಮಿಂಚಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

    ಲಂಗ-ಬ್ಲೌಸ್ ಹಾಕಿಕೊಂಡು ಎರಡು ಜಡೆ ಬಿಟ್ಟುಕೊಂಡು ಪಕ್ಕಾ ಹಳ್ಳಿ ಹುಡುಗಿಯಾಗಿ ಶ್ರುತಿ ಮಿಂಚಿದರೆ, ಸುದೀಪ್ ತುಂಬಾನೇ ಸಿಂಪಲ್ ಆಗಿ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಕಿಚ್ಚನ ರಿಯಲ್ ಕ್ಯಾರೆಕ್ಟರ್ ಏನು ಎಂಬುದನ್ನು ಎಲ್ಲರಿಗೂ ಗೊತ್ತು ಮಾಡಿರುವ ಶ್ರುತಿ, ಸುದೀಪ್ ಅಭಿಮಾನಿಗಳಿಂದ ಭಲೇ ಹುಡುಗಿ ಎಂದೆನಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೇವಲ 15 ನಿಮಿಷದ ಪಾತ್ರಕ್ಕಾಗಿ 30 ಕೆ.ಜಿ. ತೂಕ ಇಳಿಸಿದ ಧೃವ ಸರ್ಜಾ

    ಈ ಚಿತ್ರದಲ್ಲಿ ಜೂ. ಅಂಬರೀಶ್ ಪಾತ್ರದಲ್ಲಿ ಸುದೀಪ್ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಸುದೀಪ್ ಅವರಿಗೆ ಜೋಡಿಯಾಗಿ ಶೃತಿ ಹರಿಹರನ್ ಕಾಣಿಸಿಕೊಳ್ಳುತ್ತಿದ್ದಾರೆ. ಜಾಕ್ ಮಂಜು ನಿರ್ಮಾಣದಲ್ಲಿ ಗುರುದತ್ತ್ ಗಾನಿಗ ಕಲ್ಪನೆಯಲ್ಲಿ ಚಿತ್ರ ಮೂಡಿಬರುತ್ತಿದ್ದು, ಚಿತ್ರದ ಶೂಟಿಂಗ್ ಪ್ರಗತಿಯಲ್ಲಿದೆ.

  • ಕಿಚ್ಚನ ಬಗ್ಗೆ ಟ್ವೀಟ್ ಮಾಡಿದ ನಟಿ ಶೃತಿ ಹರಿಹರನ್- ಸುದೀಪ್ ಪ್ರತಿಕ್ರಿಯಿಸಿದ್ದು ಹೀಗೆ!

    ಕಿಚ್ಚನ ಬಗ್ಗೆ ಟ್ವೀಟ್ ಮಾಡಿದ ನಟಿ ಶೃತಿ ಹರಿಹರನ್- ಸುದೀಪ್ ಪ್ರತಿಕ್ರಿಯಿಸಿದ್ದು ಹೀಗೆ!

    ಬೆಂಗಳೂರು: ಶೃತಿ ಹರಿಹರನ್ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಜೊತೆ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರಿಕರಣದಲ್ಲಿ ಭಾಗಿಯಾಗಿರುವ ಶೃತಿ ಸುದೀಪ್ ಜೊತೆ ನಟಿಸುತ್ತಿರುವುದರ ಬಗ್ಗೆ ತಮ್ಮ ಸಂತಸವನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ.

    ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದಲ್ಲಿ ಜೂ. ಅಂಬರೀಶ್ ಪಾತ್ರದಲ್ಲಿ ಸುದೀಪ್ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಸುದೀಪ್ ಅವರಿಗೆ ಜೋಡಿಯಾಗಿ ಶೃತಿ ಹರಿಹರನ್ ಕಾಣಿಸಿಕೊಳ್ಳುತ್ತಿದ್ದಾರೆ.

    ನಿಮ್ಮ ಜೊತೆ ಕೆಲಸ ಮಾಡುವುದು ತುಂಬಾ ಖುಷಿ ಕೊಡುತ್ತದೆ. ನಿಮ್ಮಿಂದ ಕಲಿಯಲು ಸಾಕಷ್ಟು ಇದೆ. ನಿಮಗೆ ಸಂಗೀತ, ಆಹಾರ ಹಾಗೂ ಸಿನಿಮಾ ಮೇಲೆ ತುಂಬಾ ಕಾಳಜಿ ಇದೆ. ನಿಮ್ಮಲ್ಲಿರುವ ಮಗುವಿನ ಸ್ವಭಾವ ಆಗಾಗ ಹೊರಬರುವುದು ನನಗೆ ಇಷ್ಟವಾಗುತ್ತದೆ. ಚಿತ್ರೀಕರಣದ ವೇಳೆ ನಿಮ್ಮ ಜೊತೆ ಕಾಲ ಕಳೆಯೋಕೆ ಕಾಯುತ್ತಿದ್ದೇನೆ ಎಂದು ಶೃತಿ ಹರಿಹರನ್ ಟ್ವೀಟ್ ಮಾಡಿದ್ದಾರೆ.

    ಶೃತಿ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್, “ನನ್ನಲ್ಲಿ ಮಗುವಿದೆಯಾ! ಶ್. ನೀನು ನನ್ನ ಸಿರಿಯಸ್ ಇಮೇಜ್ ಹಾಳು ಮಾಡುತ್ತಿರುವೆ ಎಂದು ತಮಾಷೆ ಮಾಡಿದ್ದಾರೆ. ನಿನ್ನ ಜೊತೆ ಕೆಲಸ ಮಾಡುತ್ತಿರುವುದು ನನಗೆ ಖುಷಿಯಾಗುತ್ತಿದೆ. ನಿಮ್ಮ ಮುಂದೆ ಜೀವನದಲ್ಲಿ ಮಾಡುವ ಎಲ್ಲ ಕೆಲಸಗಳಿಗೆ ನಾನು ಶುಭಕೋರುತ್ತೇನೆ. ಚಿಯರ್ಸ್ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.