ಬೆಂಗಳೂರು: ಕನ್ನಡ ಚಲನಚಿತ್ರದ ನಟರೊಬ್ಬರು ಮಹಿಳೆಯನ್ನು ನಾಯಿ, ನರಿ, ಕ್ರಿಮಿ, ಕೀಟ ಎನ್ನುತ್ತಾರೆ ಎಂದು ಆ ದಿನಗಳು ಖ್ಯಾತಿಯ ನಟ ಚೇತನ್ ಅವರು ಟ್ವೀಟ್ ಮಾಡಿದ್ದಾರೆ.
ಚೇತನ್ ಅವರು ಮಾಡಿರುವ ಟ್ವೀಟ್ ಬಹಳ ವೈರಲ್ ಆಗುತ್ತಿದ್ದು, ಚೇತನ್ ಅವರು ಯಾರಿಗೇ ಈ ಮಾತನ್ನು ಹೇಳಿದ್ದಾರೆ ಎಂದು ಸಖತ್ ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇರುವ ನಟ ಚೇತನ್ ಇತ್ತೀಚೆಗಷ್ಟೇ ಸುಳ್ಳು ಸುದ್ದಿ ಹಬ್ಬಿಸಬೇಡಿ ಸುದೀಪ್ ಎಂದು ಕಿಚ್ಚ ಸುದೀಪ್ ಅವರ ಕುರಿತು ಟ್ವೀಟ್ ಮಾಡಿದ್ದರು.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಚೇತನ್, ಕನ್ನಡ ಚಲನಚಿತ್ರ ನಟರೊಬ್ಬರು ಮಹಿಳೆಯನ್ನು ಪದೇ ಪದೇ ನಾಯಿ, ನರಿ, ಕ್ರಿಮಿ ಕೀಟ ಎಂದು ಅನುಮೋದಿಸುತ್ತಾರೆ. ನಂತರ ಅವರು ಹಾಡೊಂದರಲ್ಲಿ ನಟಿಸುವಾಗ ಅಲ್ಲಿ ಪ್ರಣಯದ ಹೆಸರಿನಲ್ಲಿ ನಾಯಕಿಯ ಕೂದಲನ್ನು ಎಳೆಯುತ್ತಾರೆ. ನಾಯಕಿಯನ್ನು ಕರೆಂಟ್ ಶಾಕ್ ಮತ್ತು ತುಂಡು ತುಂಡಾಗಿ ಕತ್ತರಿಸುವ ಬೆದರಿಕೆ ಹಾಕುತ್ತಾರೆ. ಅಲ್ಲದೆ ಮಹಿಳೆಯರ ಮೇಲೆ ಹಲ್ಲೆ ಮಾಡುತ್ತಾರೆ. ಒಪ್ಪಿಗೆ ಇಲ್ಲದಿದ್ದರೂ ಒತ್ತಾಯಿಸುವುದು ಕಿರುಕುಳ ಎಂದು ಬರೆದುಕೊಂಡಿದ್ದಾರೆ.
ನಿನ್ನೆ ಅವರು ಧಾರ್ಮಿಕತೆಯನ್ನು ವೈಭವೀಕರಿಸುವ ಮುಖೇನ ಅಂಬೇಡ್ಕರ್ ಜಯಂತಿ ಶುಭಾಶಯಗಳನ್ನು ಬರೆಯುತ್ತಾರೆ. ಕಾಯಿಲೆ, ಅಜ್ಞಾನ ಮತ್ತು ವಿಪರ್ಯಾಸ ಎಂದು ಚೇತನ್ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಬರೆದು ಟ್ವೀಟ್ ಮಾಡಿದ್ದಾರೆ. ಇಗ ಚೇತನ್ ಅವರ ಟ್ವೀಟ್ ಭಾರೀ ಚರ್ಚೆಯಾಗುತ್ತಿದ್ದು, ಈ ಟ್ವೀಟ್‍ಗಳನ್ನು ಚೇತನ್ ನಟ ಧ್ರುವ ಸರ್ಜಾ ವಿರುದ್ಧವೇ ಮಾಡಿರಬಹುದಾ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ಈ ಅನುಮಾನ ಮೂಡಲು ಕಾರಣ, 2018ರಲ್ಲಿ ನಟಿ ಶೃತಿ ಹರಿಹರನ್ ನಟ ಅರ್ಜುನ್ ಸರ್ಜಾ ಅವರ ಮೇಲೆ ಮೀಟೂ ಆರೋಪ ಮಾಡಿದ್ದರು. ಈ ಸಮಯದಲ್ಲಿ ಮಾವನ ಬೆನ್ನಿಗೆ ನಿಂತಿದ್ದ ಧ್ರುವ ಮಾಧ್ಯಮಗಳ ಮುಂದೇ ನಾಯಿ, ನರಿ, ಕ್ರಿಮಿ ಕೀಟಗಳು ಹೇಳಿದ್ದನ್ನೆಲ್ಲ ನಾನು ಕೇಳುವುದಿಲ್ಲ ಎಂದು ಶ್ರುತಿ ವಿರುದ್ಧ ಮತ್ತು ಆಕೆಯ ಬೆಂಬಲಕ್ಕೆ ನಿಂತಿದ್ದ ಚೇತನ್ ವಿರುದ್ಧ ಕಿಡಿಕಾರಿದ್ದರು.
ಜೊತೆಗೆ ಇತ್ತೀಚೆಗೆ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಹಾಡೊಂದು ರಿಲೀಸ್ ಆಗಿದ್ದು, ಈ ಹಾಡಿನಲ್ಲಿ ಧ್ರುವ ನಟಿಯಗೆ ಬೆದರಿಕೆ ಹಾಕುವುದು ಮತ್ತು ಎಳೆದಾಡುವ ದೃಶ್ಯಗಳು ಇವೆ ಹಾಗೂ ನಿನ್ನೆ ನಡೆದ ಅಂಬೇಡ್ಕರ್ ಜಯಂತಿಗೆ ನಟ ಧ್ರುವ ಕೂಡ ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ. ಈ ಮೂರು ವಿಷಯಗಳನ್ನು ಆಧಾರವಾಗಿ ಇಟ್ಟುಕೊಂಡು ಚೇತನ್ ಈ ರೀತಿ ಟ್ವೀಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
https://twitter.com/chetan_club/status/1250271598373769218
ಈಗ ಚೇತನ್ ಅವರ ಟ್ವೀಟ್‍ಗೆ ಪರ ಮತ್ತು ವಿರೋಧವಾಗಿ ಚರ್ಚೆ ನಡೆಯುತ್ತಿದ್ದು, ಕೆಲವರು ಈ ಮಾತನನ್ನು ಇವರು ಡಾಲಿ ಧನಂಜಯ್ ಅವರಿಗೆ ಹೇಳಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಧ್ರುವಗೆ ಹೇಳಿದ್ದಾರೆ ಎಂದು ಹೇಳಿದ್ದಾರೆ. ಈ ರೀತಿ ಟ್ವೀಟ್ ಮಾಡುವುದು ಸರಿಯಲ್ಲ ಸಿನಿಮಾದ ಪಾತ್ರವೇ ಬೇರೆ ಹಾಗೇ ನಿಜ ಜೀವನವೇ ಬೇರೆ ಎಂದು ಕೆಲವರು ಕಮೆಂಟ್ ಮಾಡಿ ಚೇತನ್ ವಿರುದ್ಧ ಕಿಡಿಕಾರಿದ್ದಾರೆ.