Tag: ambedakar

  • ಅಂಬೇಡ್ಕರ್ ದೇವರು ಇದ್ದಂತೆ: ಸಿಎಂ

    ಅಂಬೇಡ್ಕರ್ ದೇವರು ಇದ್ದಂತೆ: ಸಿಎಂ

    ಬೆಂಗಳೂರು: ಅಂಬೇಡ್ಕರ್ ಜನನ ಭಗವಂತನ ಇಚ್ಛೆ ಆಗಿತ್ತು. ಅಂಬೇಡ್ಕರ್ ಜೀವನ, ಪ್ರಾಮಾಣಿಕವಾಗಿ ಓದಿದವರಿಗೆ ಅವರ ಇತಿಹಾಸ ಗೊತ್ತಿರುತ್ತದೆ. ಅಂಬೇಡ್ಕರ್ ದೇವರು ಇದ್ದ ಹಾಗೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಇಂದು ಅಖಿಲ ಭಾರತೀಯ ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡಗಳ ರೈಲ್ವೆ ನೌಕರರ ಸಂಘದಿಂದ ಅಂಬೇಡ್ಕರ್ ಜಯಂತಿ ಆಚರಣೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿಯ ಆವರಣದಲ್ಲಿ ನಡೆಯಿತು. ಈ ವೇಳೆ ಸಿಎಂ ಅವರು ನೂತನವಾಗಿ ನಿರ್ಮಾಣವಾಗಿರುವ ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಸಿಎಂ, ಅಂಬೇಡ್ಕರ್ ತಮ್ಮ ಜೀವನದ ಎಲ್ಲಾ ಪ್ರಕ್ರಿಯೆಗಳನ್ನ ಅವರು ದಾಖಲಿಸಿದ್ದಾರೆ. ನ್ಯಾಯ, ನೀತಿ, ತುಳಿತಕ್ಕೆ ಒಳಗಾದವರಿಗೆ ಸನ್ಮಾನ ಇವು ಅಂಬೇಡ್ಕರ್ ಹಾದಿ. ಅಂಬೇಡ್ಕರ್ ಅಪ್ಪಟ ದೇಶ ಪ್ರೇಮಿ. ಬ್ರಿಟಿಷರ ವಿರುದ್ಧ ದಿಟ್ಟತನದಿಂದ ಮಾತಾಡಿದ್ದರು.

    ಅಂಬೇಡ್ಕರ್ ಅಂದ್ರೆ ಒಂದು ದಂತಕಥೆ. ಅಂಬೇಡ್ಕರ್ ಯುಗ ಪುರುಷ. ಒಂದು ಯುಗಕ್ಕೆ ಒಬ್ಬರೇ ಯುಗ ಪುರುಷ. ಸಾಮಾಜಿಕ ಕಟ್ಟ ಕಡೆಯ ಸಮಾಜ, ಶಿಕ್ಷಣ ಇಲ್ಲದ ಸಮಾಜದಲ್ಲಿ ಅಂಬೇಡ್ಕರ್ ಹುಟ್ಟಿದ್ದರು. ಅನೇಕ ಅಪಮಾನ, ಅಸ್ಪೃಶ್ಯತೆ ಸಹಿಸಿಕೊಂಡಿದ್ದಾರೆ. ಅಂಬೇಡ್ಕರ್ ಅ ಸಮಾಜದಲ್ಲಿ ಹುಟ್ಟಿದ್ದಕ್ಕೆ ಆ ಸಮಾಜ ಬೆಳವಣಿಗೆ ಆಗಿದೆ. ಸ್ವಾವಲಂಬನೆ ಸಮಾಜ ಕಟ್ಟಲು ಅಂಬೇಡ್ಕರ್ ತಮ್ಮ ಇಡೀ ಜೀವನ ಮುಡುಪಿಟ್ಟರು ಎಂದರು. ಇದನ್ನೂ ಓದಿ: ಹಿಂದುತ್ವ ಸಿದ್ಧಾಂತವು ಸಂ‌ಸ್ಕೃತಿಯೇ ಹೊರತು ಅವ್ಯವಸ್ಥೆಯಲ್ಲ: ಶಿವಸೇನೆ

    ಅಂಬೇಡ್ಕರ್‍ಗೆ ದೂರ ದೃಷ್ಟಿ ಇತ್ತು. ಜಗತ್ತಿನ ಅತ್ಯಂತ ಶ್ರೇಷ್ಠ ಸಂವಿಧಾನ ಅದು ಭಾರತದ ಸಂವಿಧಾನ. ಬೇರೆ ಅನೇಕ ದೇಶಗಳ ಸಂವಿಧಾನ ಯಶಸ್ವಿಯಾಗಿಲ್ಲ. ನಮ್ಮ ದೇಶದ ಸಂವಿಧಾನ ಕೇವಲ ಅಧಿಕಾರ ಇರೋರಿಗೆ ಅಧಿಕಾರ ಕೊಟ್ಟಿಲ್ಲ. ಪ್ರತಿ ಪ್ರಜೆಗೂ ನಮ್ಮ ಸಂವಿಧಾನ ಅಧಿಕಾರ ಕೊಟ್ಟಿದೆ. ಆರ್‍ಬಿಐ ರೂಪುರೇಷೆ ಮಾಡಿದವರು ಅಂಬೇಡ್ಕರ್. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಬದಲಾವಣೆ ಮಾಡಿದವರು ಅಂಬೇಡ್ಕರ್ ಎಂದು ಸಿಎಂ ಹೇಳಿದರು.

    ಕಾರ್ಯಕ್ರಮದಲ್ಲಿ ಸಂಸದ ಪಿಸಿ ಮೋಹನ್, ಶಾಸಕ ದಿನೇಶ್ ಗುಂಡೂರಾವ್, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ಅಸೋಸಿಯೇಷನ್ ಅಧ್ಯಕ್ಷ ಬೀರ್ ವಾ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು. ಇದನ್ನೂ ಓದಿ: ಪೋಸ್ಟ್‌ಮ್ಯಾನ್‍ನಿಂದಲೇ ಬಡ ಜನರ ಲಕ್ಷ, ಲಕ್ಷ ಹಣ ಗುಳುಂ