Tag: Ambassador

  • ಪುಣ್ಯಕೋಟಿ ದತ್ತು ಯೋಜನೆಗೆ ಕಿಚ್ಚ ರಾಯಭಾರಿ: 31 ಗೋವು ದತ್ತು ಪಡೆದ ಸುದೀಪ್

    ಪುಣ್ಯಕೋಟಿ ದತ್ತು ಯೋಜನೆಗೆ ಕಿಚ್ಚ ರಾಯಭಾರಿ: 31 ಗೋವು ದತ್ತು ಪಡೆದ ಸುದೀಪ್

    ಗಾಗಲೇ ಸಾಕಷ್ಟು ಸಮಾಜಸೇವೆ ಮಾಡಿರುವ ಕಿಚ್ಚ ಸುದೀಪ್ ಅವರನ್ನು ಕರ್ನಾಟಕ ಸರಕಾರವು ‘ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿ’ಯನ್ನಾಗಿ ನೇಮಕ ಮಾಡಿದೆ. ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿ ನೇಮಕಾತಿ ಪತ್ರವನ್ನು ಇಲಾಖೆ ಸಚಿವ ಪ್ರಭು ಚೌಹಾಣ್, ಇಂದು ಬೆಂಗಳೂರಿನ ಸುದೀಪ್ ಅವರ ನಿವಾಸದಲ್ಲಿ ರಾಯಭಾರಿ‌ ನೇಮಕಾತಿ ಪತ್ರ ನೀಡಿ ಸನ್ಮಾನಿಸಿದರು.

    ನೇಮಕಾತಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಸುದೀಪ್, ಇದೇ ವೇಳೆ 31 ಗೋವುಗಳನ್ನು ದತ್ತು ಪಡೆವುದಾಗಿ ಅವರು ತಿಳಿಸಿದರು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಸರ್ಕಾರಿ ಗೋಶಾಲೆಗಳಿಂದ ಗೋವುಗಳನ್ನು ದತ್ತು ಪಡೆಯಲು‌ ನಿರ್ಧಾರ ಮಾಡಿರುವುದಾಗಿ ಸುದೀಪ್ ತಿಳಿಸಿದ್ದಾರೆ. ಪ್ರತಿ ಜಿಲ್ಲೆಗೆ ಒಂದರಂತೆ 31 ಗೋವುಗಳನ್ನು ಅವರು ದತ್ತು ಪಡೆಯಲಿದ್ದಾರೆ. ಇದನ್ನೂ ಓದಿ: ರತನ್ ಟಾಟಾ ಬಯೋಪಿಕ್‌ಗೆ ಸುಧಾ ಕೊಂಗರಾ ಆ್ಯಕ್ಷನ್ ಕಟ್

    ಸುದೀಪ್ ಅವರು ಸರಕಾರದ ಕಾರ್ಯಕ್ರಮಗಳಿಗೆ ರಾಯಭಾರಿ ಆಗುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಅವರು ಹಲವಾರು ಕಾರ್ಯಕ್ರಮಗಳ ಜೊತೆ ಕೈ ಜೋಡಿಸಿದ್ದಾರೆ. ಅಲ್ಲದೇ, ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿಯೂ ಅವರು ಸಹಕಾರಿ ಆಗಿದ್ದಾರೆ. ಈ ಸಲ ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿ ಆಗುವ ಮೂಲಕ ಪುಣ್ಯಕೋಟಿ ಉಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೆಸ್ಸಿ ಈಗ ಬೈಜೂಸ್‌ ಜಾಗತಿಕ ರಾಯಭಾರಿ

    ಮೆಸ್ಸಿ ಈಗ ಬೈಜೂಸ್‌ ಜಾಗತಿಕ ರಾಯಭಾರಿ

    ನವದೆಹಲಿ: ಎಜ್ಯುಟೆಕ್‌ ಪ್ರಮುಖ ಕಂಪನಿ ಬೈಜೂಸ್‌(BYJU’) ತನ್ನ ಜಾಗತಿಕ ರಾಯಭಾರಿಯಾಗಿ ಫುಟ್‌ಬಾಲ್‌(Football) ತಾರೆ ಲಿನೋನೆಲ್‌ ಮೆಸ್ಸಿ(Lionel Messi) ಅವರನ್ನು ನೇಮಕ ಮಾಡಿದೆ.

    ಅರ್ಜೆಂಟೀನಾ ಫುಟ್‌ಬಾಲ್ ತಂಡದ ನಾಯಕರಾಗಿರುವ ಮೆಸ್ಸಿ, ಸಮಾನ ಶಿಕ್ಷಣವನ್ನು ಉತ್ತೇಜಿಸಲು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಬೈಜೂಸ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ನಮ್ಮ ಜಾಗತಿಕ ರಾಯಭಾರಿಯಾಗಿರುವ ಲಿಯೋನೆಲ್ ಮೆಸ್ಸಿ ಅವರೊಂದಿಗೆ ಕೆಲಸ ಮಾಡಲು ನಾವು ಉತ್ಸುಕರಾಗಿದ್ದೇವೆ. ಅವರು ತಳಮಟ್ಟದಿಂದ ಬೆಳೆದು ಅತ್ಯಂತ ಯಶಸ್ವಿ ಕ್ರೀಡಾ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಈ ರೀತಿಯ ಅವಕಾಶವನ್ನು BYJU’s ಎಜ್ಯುಕೇಶನ್‌ ಫಾರ್‌ ಆಲ್‌(EFA) ಸೃಷ್ಟಿಸಲು ಬಯಸುತ್ತದೆ ಎಂದು ಬೈಜೂಸ್‌ ಸಹ-ಸಂಸ್ಥಾಪಕಿ ದಿವ್ಯಾ ಗೋಕುಲನಾಥ್ ಹೇಳಿದ್ದಾರೆ. ಇದನ್ನೂ ಓದಿ: ಬಾಗ್ಲಾ ಸೋತ ಬಳಿಕ ಕೊಹ್ಲಿ ವಿರುದ್ಧ ಫೇಕ್ ಫೀಲ್ಡಿಂಗ್ ಆರೋಪ

    ಫುಟ್‌ಬಾಲ್ ಪ್ರಪಂಚದಾದ್ಯಂತ ಸುಮಾರು 3.5 ಶತಕೋಟಿ ಅಭಿಮಾನಿಗಳನ್ನು ಹೊಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಲಿಯೋನೆಲ್ ಮೆಸ್ಸಿ ಸುಮಾರು 45 ಕೋಟಿ ರೂ. ಅಭಿಮಾನಿಗಳನ್ನು ಹೊಂದಿದ್ದಾರೆ. ಬೈಜೂಸ್‌ ಈ ತಿಂಗಳಿನಿಂದ ಕತಾರ್‌ನಲ್ಲಿ ಆರಂಭವಾಗಲಿರುವ ಫಿಫಾ ವಿಶ್ವಕಪ್‌ನ ಅಧಿಕೃತ ಪ್ರಯೋಜಕತ್ವವನ್ನು ಪಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ವಿಶ್ವಸಂಸ್ಥೆ ಮುಖ್ಯಸ್ಥರ ತಂತ್ರಜ್ಞಾನ ರಾಯಭಾರಿಯಾಗಿ ಭಾರತದ ಅಮನ್ ದೀಪ್ ನೇಮಕ

    ವಿಶ್ವಸಂಸ್ಥೆ ಮುಖ್ಯಸ್ಥರ ತಂತ್ರಜ್ಞಾನ ರಾಯಭಾರಿಯಾಗಿ ಭಾರತದ ಅಮನ್ ದೀಪ್ ನೇಮಕ

    ನ್ಯೂಯಾರ್ಕ್: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರೆಸ್ ಅವರ ತಂತ್ರಜ್ಞಾನ ರಾಯಭಾರಿಯಾಗಿ ಭಾರತೀಯ ರಾಜತಾಂತ್ರಿಕ ಅಧಿಕಾರಿ ಅಮನ್ ದೀಪ್ ಸಿಂಗ್ ಗಿಲ್ ಅವರನ್ನು ನೇಮಿಸಲಾಗಿದೆ.

    2016 ರಿಂದ 2018 ರವರೆಗೆ ಜಿನೀವಾದಲ್ಲಿ ನಡೆದ ನಿಶಸ್ತ್ರೀಕರಣದ ಸಮ್ಮೇಳನಕ್ಕೆ ಭಾರತೀಯ ರಾಯಭಾರಿ ಹಾಗೂ ಖಾಯಂ ಪ್ರತಿನಿಧಿಯಾಗಿದ್ದ ಗಿಲ್, ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್‌ನ ಅಂತಾರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮತ್ತು ಕೃತಕ ಬುದ್ಧಿಮತ್ತೆ ಸಂಶೋಧನಾ ಸಹಯೋಗದ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ. ಇದನ್ನೂ ಓದಿ: ಮುತ್ತಪ್ಪ ರೈ ಆಪ್ತ ಬಳಗದಲ್ಲಿ ಕೋಲ್ಡ್ ವಾರ್ – ನಟಿ ಅನುಷ್ಕಾ ಶೆಟ್ಟಿ ಸಹೋದರನ ಕೊಲೆಗೆ ಸ್ಕೆಚ್

    ಪಂಜಾಬ್ ವಿವಿಯಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಎಲೆಕ್ಟ್ರಿಕಲ್ ಕಮ್ಯುನಿಕೇಷನ್ ತಂತ್ರಜ್ಞಾನದಲ್ಲಿ ಪದವಿ ಪಡೆದಿರುವ ಗಿಲ್, ಲಂಡನ್‌ನ ಕಿಂಗ್ಸ್ ಕಾಲೇಜಿನಿಂದ ಪಿಹೆಚ್‌ಡಿ ಪದವಿ ಪಡೆದಿದ್ದಾರೆ. ಜಿನಿವಾ ವಿವಿಯಿಂದ ಫ್ರೆಂಚ್ ಇತಿಹಾಸ ಹಾಗೂ ಭಾಷೆಯಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ಇದನ್ನೂ ಓದಿ: ನೂಪುರ್ ಶರ್ಮಾಗೆ ಮುಂಬೈ ಪೊಲೀಸರಿಂದ ಸಮನ್ಸ್

    ಅಮನ್ ದೀಪ್ ಸಿಂಗ್ ಗಿಲ್ ಅವರು ಡಿಜಿಟಲ್ ತಂತ್ರಜ್ಞಾನದ ಚಿಂತನೆಯ ನಾಯಕನಾಗಿದ್ದು, ಡಿಜಿಟಲ್ ತಂತ್ರಜ್ಞಾನಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದಾರೆ. ಡಿಜಿಟಲ್ ರೂಪಾಂತರಗಳನ್ನು ಜವಾಬ್ದಾರಿಯುತವಾಗಿ ಹಾಗೂ ಅಭಿವೃದ್ಧಿಗೊಳಿಸುವ ಬಗ್ಗೆ ಒಳ್ಳೆಯ ತಿಳುವಳಿಕೆ ಹೊಂದಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

  • ಅಮೆರಿಕ ರಾಯಭಾರಿಯಾಗಿ ಬೈಡೆನ್‌ನಿಂದ ಮತ್ತೊಬ್ಬ ಭಾರತೀಯನ ನಾಮನಿರ್ದೇಶನ

    ಅಮೆರಿಕ ರಾಯಭಾರಿಯಾಗಿ ಬೈಡೆನ್‌ನಿಂದ ಮತ್ತೊಬ್ಬ ಭಾರತೀಯನ ನಾಮನಿರ್ದೇಶನ

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕಳೆದ ವಾರ ನೆದರ್‌ಲ್ಯಾಂಡ್‌ನ ಅಮೆರಿಕ ರಾಯಭಾರಿಯಾಗಿ ಭಾರತ ಮೂಲದ ಸಾಮಾಜಿಕ ಕಾರ್ಯಕರ್ತೆ ಶೇಫಾಲಿ ರಜ್ದಾನ್ ದುಗ್ಗಾಲ್‌ರ ನಾಮನಿರ್ದೇಶನ ಮಾಡಿದ್ದರು. ಇದೀಗ ಬೈಡೆನ್ ಉತ್ತರ ಆಫ್ರಿಕಾದ ಮೊರೊಕ್ಕೊ ದೇಶಕ್ಕೂ ಅಮೆರಿಕ ರಾಯಭಾರಿಯಾಗಿ ಭಾರತೀಯ ಮೂಲದ ವ್ಯಕ್ತಿಯೊಬ್ಬರನ್ನು ನಾಮನಿರ್ದೇಶನ ಮಾಡಿದ್ದಾರೆ.

    ಜೋ ಬೈಡೆನ್ ಕೇವಲ 1 ವಾರದಲ್ಲಿ ಇಬ್ಬರು ಭಾರತೀಯ ಮೂಲದ ವ್ಯಕ್ತಿಗಳನ್ನು ರಾಯಭಾರಿಯಾಗಿ ನಾಮನಿರ್ದೇಶನ ಮಾಡಿದ್ದಾರೆ. ಪುನೀತ್ ತಲ್ವಾರ್ ಅಮೆರಿಕ ರಾಯಭಾರಿಯಾಗಿ ನಾಮನಿರ್ದೇಶನಗೊಂಡ ಭಾರತೀಯ ಮೂಲದ 2ನೇ ವ್ಯಕ್ತಿಯಾಗಿದ್ದಾರೆ. ಇದನ್ನೂ ಓದಿ: ನೆದರ್‌ಲ್ಯಾಂಡ್‌ನ ಅಮೆರಿಕ ರಾಯಭಾರಿಯಾಗಿ ಭಾರತ ಮೂಲದ ಮಹಿಳೆ ನಾಮನಿರ್ದೇಶನ

    ಪುನೀತ್ ತಲ್ವಾರ್ ಯಾರು?
    ಪುನೀತ್ ತಲ್ವಾರ್ ವಿದೇಶಾಂಗ ಇಲಾಖೆ, ಶ್ವೇತಭವನ ಮತ್ತು ಸೆನೆಟ್‌ನಲ್ಲಿ ಹಿರಿಯ ರಾಷ್ಟ್ರೀಯ ಭದ್ರತೆ ಹಾಗೂ ವಿದೇಶಾಂಗ ನೀತಿಯಲ್ಲಿ ಸ್ಥಾನಗಳನ್ನು ಹೊಂದಿದ್ದಾರೆ. ಸದ್ಯ ತಲ್ವಾರ್ ಸ್ಟೇಟ್ ಡಿಪಾರ್ಟ್ಮೆಂಟ್‌ನಲ್ಲಿ ಹಿರಿಯ ಸಲಹೆಗಾರರಾಗಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

    ತಲ್ವಾರ್ ಈ ಹಿಂದೆ ರಾಜಕೀಯ-ಮಿಲಿಟರಿ ವ್ಯವಹಾರಗಳ ಸಹಾಯಕ ರಾಜ್ಯ ಕಾರ್ಯದರ್ಶಿಯಾಗಿ, ಅಧ್ಯಕ್ಷರ ವಿಶೇಷ ಸಹಾಯಕ, ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಹಿರಿಯ ನಿರ್ದೇಶಕ ಹಾಗೂ ವಿಶ್ವಸಂಸ್ಥೆಯ ಸೆನೆಟ್‌ನಲ್ಲಿ ವಿದೇಶಿ ಸಂಬಂಧಗಳ ಸಮಿತಿಯಲ್ಲಿ ಹಿರಿಯ ವೃತ್ತಿಪರ ಸಿಬ್ಬಂದಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಭಾರತೀಯ ಮೂಲದ ಗೆಳತಿ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗ್ಲೆನ್ ಮ್ಯಾಕ್ಸ್‌ವೆಲ್

    ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಬಿಎಸ್ ಪದವಿಯನ್ನು ಪಡೆದು, ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ವ್ಯವಹಾರ (ಇಂಟರ್‌ನ್ಯಾಷನಲ್ ಅಫರ‍್ಸ್)ಗಳಲ್ಲಿ ಎಂಎ ವ್ಯಾಸಂಗ ಮಾಡಿದ್ದಾರೆ.

    ಮಾರ್ಚ್ 11 ರಂದು ಬೈಡೆನ್ ಭಾರತೀಯ ಮೂಲದ ರಾಜಕೀಯ ಕಾರ್ಯಕರ್ತೆ ಶೆಫಾಲಿ ರಜ್ದಾನ್ ದುಗ್ಗಾಲ್ ಅವರನ್ನು ನೆದರ್‌ಲ್ಯಾಂಡ್‌ನ ಅಮೆರಿಕ ರಾಯಭಾರಿಯಾಗಿ ನಾಮನಿರ್ದೇಶನ ಮಾಡಿದ್ದರು. ಶೆಫಾಲಿ ಭಾರತದ ಕಾಶ್ಮೀರದಿಂದ ಅಮೆರಿಕಗೆ ತಮ್ಮ ಸಣ್ಣ ಪ್ರಾಯದಲ್ಲಿಯೇ ವಲಸೆ ಹೋಗಿದ್ದರು. ಶೆಫಾಲಿ ಸಿನ್ಸಿನಾಟಿ, ಚಿಕಾಗೋ, ನ್ಯೂಯಾರ್ಕ್ ಹಾಗೂ ಬೋಸ್ಟನ್ ನಗರಗಳಲ್ಲಿ ಬೆಳೆದಿದ್ದರು.

  • ನೆದರ್‌ಲ್ಯಾಂಡ್‌ನ ಅಮೆರಿಕ ರಾಯಭಾರಿಯಾಗಿ ಭಾರತ ಮೂಲದ ಮಹಿಳೆ ನಾಮನಿರ್ದೇಶನ

    ನೆದರ್‌ಲ್ಯಾಂಡ್‌ನ ಅಮೆರಿಕ ರಾಯಭಾರಿಯಾಗಿ ಭಾರತ ಮೂಲದ ಮಹಿಳೆ ನಾಮನಿರ್ದೇಶನ

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಶುಕ್ರವಾರ ನೆದರ್‌ಲ್ಯಾಂಡ್‌ನ ಅಮೆರಿಕ ರಾಯಭಾರಿಯಾಗಿ ಭಾರತ ಮೂಲದ ಸಾಮಾಜಿಕ ಕಾರ್ಯಕರ್ತೆ ಶೆಫಾಲಿ ರಜ್ದಾನ್ ದುಗ್ಗಾಲ್(Shefali Razdan Duggal) ಅವರನ್ನು ನಾಮನಿರ್ದೇಶನ ಮಾಡಿದ್ದಾರೆ.

    ಭಾರತದ ಕಾಶ್ಮೀರ ಮೂಲದ ಶೆಫಾಲಿ ತಮ್ಮ ಚಿಕ್ಕ ಪ್ರಾಯದಲ್ಲೇ ಅಮೆರಿಕಗೆ ಹೋಗಿ, ಅಲ್ಲಿ ಸಿನ್ಸಿನಾಟಿ, ಚಿಕಾಗೊ, ನ್ಯೂಯಾರ್ಕ್ ಹಾಗೂ ಬೋಸ್ಟನ್ ನಗರಗಳಲ್ಲಿ ಬೆಳೆದರು.

    ಶೆಫಾಲಿ ತಮ್ಮ 50ನೇ ವಸಂತದಲ್ಲಿದ್ದು, ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ. ಇವರು ಅನುಭವಿ ರಾಜಕೀಯ ಕಾರ್ಯಕರ್ತೆ, ಮಹಿಳಾ ಹಕ್ಕುಗಳ ವಕೀಲೆ ಹಾಗೂ ಮಾನವ ಹಕ್ಕುಗಳ ಪ್ರಚಾರಕಿ ಎಂದು ಶ್ವೇತಭವನ ಶುಕ್ರವಾರ ತಿಳಿಸಿದೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಸಿನಿಮಾ: ಕ್ಷಮೆ ಕೋರಿದ ಪ್ರಕಾಶ್ ಬೆಳವಾಡಿ

    ಸ್ಯಾನ್ ಫ್ರಾನ್ಸಿಸ್ಕೋ ಸಮಿತಿಯ ಸದಸ್ಯೆಯಾಗಿರುವ ದುಗ್ಗಾಲ್ ವಾಕ್ ಫಾರೆಸ್ಟ್ ವಿಶ್ವವಿದ್ಯಾಲಯದ ಲೀಡರ್‌ಶಿಪ್, ಕ್ಯಾರೆಕ್ಟರ್ ಕೌನ್ಸಿಲ್‌ನ ಸದಸ್ಯರೂ ಆಗಿದ್ದಾರೆ. ರಾಷ್ಟ್ರೀಯ ನಾಮನಿರ್ದೇಶಕರ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ ಮೇಯರ್‌ ಕಿಡ್ನಾಪ್ ಮಾಡಿದ ರಷ್ಯಾ ಸೇನೆ

    ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಎಮ್‌ಎ ಪೊಲಿಟಿಕಲ್ ಕಮ್ಯೂನಿಕೇಶನ್ (ರಾಜಕೀಯ ಸಂವಹನ) ಪದವೀಧರರಾಗಿರುವ ಶೆಫಾಲಿ, ಮಿಯಾಮಿ ವಿಶ್ವವಿದ್ಯಾಲಯದಲ್ಲಿ ಮಾಸ್ ಕಮ್ಯುನಿಕೇಶನ್ (ಸಮೂಹ ಸಂವಹನ) ವ್ಯಾಸಂಗವನ್ನೂ ಮಾಡಿದ್ದಾರೆ.

    ಶೆಫಾಲಿ 2008ರಲ್ಲಿ ಬರಾಕ್ ಒಬಾಮಾ ಅವರ ಅಧ್ಯಕ್ಷೀಯ ಪ್ರಚಾರದಲ್ಲಿ ಸಕ್ರಿಯರಾಗಿದ್ದರು. ಹಿಲರಿ ಕ್ಲಿಂಟನ್‌ರ ಅಧ್ಯಕ್ಷೀಯ ಪ್ರಚಾರದೊಂದಿಗೂ ಸಂಬಂಧ ಹೊಂದಿದ್ದರು. ಹೀಗೆ ರಾಜಕೀಯ ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿದ್ದ ಇವರನ್ನು ಉತ್ತರ ಕ್ಯಾಲಿಫೋರ್ನಿಯಾ ಸ್ಟೀರಿಂಗ್ ಸಮಿತಿ ಹಾಗೂ ವುಮೆನ್ ಫಾರ್ ಹಿಲರಿ ಸಮಿತಿಯ ಸದಸ್ಯರನ್ನಾಗಿ ಮಾಡಲಾಗಿತ್ತು.

  • ಅಫ್ಘಾನಿಸ್ತಾನ ವಿಚಾರದಲ್ಲಿ ರಷ್ಯಾ,ಭಾರತದ ನಿಲುವು ಒಂದೇ: ವರ್ಶಿನಿನ್

    ನವದೆಹಲಿ: ಅಫ್ಘಾನಿಸ್ತಾನದ ಪರಿಸ್ಥಿತಿಯಲ್ಲಿ ರಷ್ಯಾ ಹಾಗೂ ಭಾರತ ಒಂದೇ ರೀತಿಯಾಗಿ ಕೆಲಸ ಮಾಡುತ್ತಿದೆ ಎಂದು ರಷ್ಯಾದ ವಿಶ್ವಸಂಸ್ಥೆಯ ರಾಯಭಾರಿ ಸೆರ್ಗೆಯ್ ವಾಸಿಲಿವಿಚ್ ವರ್ಶಿನಿನ್ ಹೇಳಿದ್ದಾರೆ.

    ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಭಯ ದೇಶಗಳ ನಡುವಿನ ಸಹಕಾರದ ಕುರಿತು ನಡೆದ ಸಭೆಯಲ್ಲಿ ವರ್ಶಿನಿನ್ ಭಾಗವಹಿಸಿದ್ದರು.

    ಅಫ್ಘಾನಿಸ್ತಾನದ ಪರಿಸ್ಥಿತಿಯ ಕುರಿತು ರಷ್ಯಾ ಹಾಗೂ ಭಾರತ ಒಂದೇ ನಿಲುವನ್ನು ಹೊಂದಿದೆ. ಅಫ್ಘಾನಿಸ್ತಾನದ ಜನರಿಗೆ ಮಾನವೀಯ ನೆರವು ಕಳುಹಿಸಬೇಕು. ಅದನ್ನು ನವದೆಹಲಿ ಹಾಗೂ ಮಾಸ್ಕೋ ಎರಡೂ ಒದಗಿಸುತ್ತಿವೆ. ಸದ್ಯ ಅಫ್ಘಾನಿಸ್ತಾನದಲ್ಲಿರುವ ಆಡಳಿತ ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಲಿ ಎಂದು ನಾವು ಆಶಿಸುತ್ತೇವೆ ಎಂದರು. ಇದನ್ನೂ ಓದಿ: ಒಮಿಕ್ರಾನ್ ಉಪ ರೂಪಾಂತರಿ ಬಿಎ.2 – 57 ದೇಶಗಳಲ್ಲಿ ಪತ್ತೆ: WHO

    ಅಫ್ಘಾನಿಸ್ತಾನದ ಇಂದಿನ ಸ್ಥಿತಿಗೆ ಕಳೆದ 20 ವರ್ಷಗಳಿಂದ ಇದ್ದ ಅಮೆರಿಕಾ ಪಡೆ ಹಾಗೂ ಅವರ ಮಿತ್ರರಾಷ್ಟ್ರಗಳ ಉಪಸ್ಥಿತಿಯೇ ಕಾರಣ. ಕಳೆದ ವರ್ಷ ಅಗಸ್ಟ್‌ನಲ್ಲಿ ಅಮೆರಿಕಾ ತಮ್ಮ ಪಡೆಗಳನ್ನು ಹಿಂತೆಗೆದುಕೊಂಡ ಬಳಿಕ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳು ಸಾಧ್ಯವಾಯಿತು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಜಯಲಲಿಲಾ ಆಪ್ತೆ ಶಶಿಕಲಾಗೆ ಜೈಲಿನಲ್ಲಿ ರಾಜಾತಿಥ್ಯ – ಪೊಲೀಸರಿಗೆ ಸಂಕಷ್ಟ

    ಅಫ್ಘಾನಿಸ್ತಾನದ ಜನರಿಗೆ ಮಾನವೀಯ ನೆರವು ಒದಗಿಸಬೇಕು ಎಂಬುದು ಸ್ಪಷ್ಟವಾಗಿದೆ. ಈ ಕೆಲಸವನ್ನು ನಾವು ಮತ್ತು ಭಾರತ ಎರಡೂ ಮಾಡುತ್ತಿದ್ದೇವೆ. ಈ ಕಾರ್ಯ ಹೀಗೆಯೇ ಮುಂದುವರಿಯಬೇಕು ಎಂದು ವರ್ಶಿನಿನ್ ಹೇಳಿದರು.

  • ಊರ್ವಶಿ ರೌಟೇಲಾ ಜಲ ಸಂರಕ್ಷಣೆ ಅಭಿಯಾನದ ರಾಯಭಾರಿ

    ಊರ್ವಶಿ ರೌಟೇಲಾ ಜಲ ಸಂರಕ್ಷಣೆ ಅಭಿಯಾನದ ರಾಯಭಾರಿ

    ನವದೆಹಲಿ: ನಟಿ ಊರ್ವಶಿ ರೌಟೇಲಾರನ್ನು ಮಿಷನ್ ಪಾನಿ ಜಲಶಕ್ತಿ, ಜಲ ಸಂರಕ್ಷಣೆ ಅಭಿಯಾನದ ರಾಯಭಾರಿಯಾಗಿ ಅಯ್ಕೆ ಮಾಡಲಾಗಿದೆ.

    ಊರ್ವಶಿ ರೌಟೇಲಾ ಫೌಂಡೇಶನ್ ಮೂಲಕವಾಗಿ ನೀರಿನ ಬಿಕ್ಕಟ್ಟಿನ ವಿರುದ್ಧ ಹೋರಾಡಿದ್ದಾರೆ. ತಮ್ಮ ಪೋಷಕರೊಂದಿಗೆ ಸ್ಥಾಪಿಸಿದ್ದ ಸಂಸ್ಥೆ ಉತ್ತರಾಖಂಡ್, ಪೌರಿ, ಗರ್ವಲ್ ಮತ್ತು ಹರಿದ್ವಾರದ ನೂರಾರು ಸಮುದಾಯಗಳಿಗೆ ಶುದ್ಧ ಮತ್ತು ಸುರಕ್ಷಿತ ನೀರು ಪಡೆಯಲು ಸಹಾಯ ಮಾಡಿದೆ. ಈ ಎಲ್ಲವನ್ನು ಗಮನಿಸಿದ ಕೇಂದ್ರ ಸರ್ಕಾರ ಊರ್ವಶಿಯವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿದೆ. ಇದನ್ನೂ ಓದಿ:  ಮಗಳ ವಿಚಾರದಲ್ಲಿ ನಮ್ಮ ನಿರ್ಧಾರ, ಮನವಿ ಮೊದಲಿನಂತೆಯೇ ಇರಲಿದೆ: ಅನುಷ್ಕಾ ಶರ್ಮಾ

    ನನ್ನ ಜೀವನದಲ್ಲಿ ಈ ಎಲ್ಲಾ ವಿಶ್ವ ದರ್ಜೆಯ ಅವಕಾಶಗಳನ್ನು ಸ್ವೀಕರಿಸುತ್ತಿರುವುದಕ್ಕೆ ಕೃತಜ್ಞಳಾಗಿದ್ದೇನೆ. ಕೇಂದ್ರ ಸರ್ಕಾರ ನನಗೆ ಹೊಸ ಅವಕಾಶವನ್ನು ನೀಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖವತ್ ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಹಸೆಮಣೆ ಏರಲು ಸಿದ್ಧರಾದ ವಜ್ರಕಾಯ ಬೆಡಗಿ ಶುಭ್ರಾ ಅಯ್ಯಪ್ಪ

    ಮಿಸ್ ಯೂನಿವರ್ಸ್ 2021ರ ತೀರ್ಪುಗಾರರಿಂದ ಆರಂಭಗೊಂಡು ದಾದಾ ಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಜ್ಯೂರಿ ಆಗಿ ಕೆಲಸ ಮಾಡಿದ್ದಾರೆ. ಊರ್ವಶಿ ಅವರು  ‘ದಿ ಲೆಜೆಂಡ್’ ಮೂಲಕ ತಮಿಳಿಗೆ ಪಾದಾರ್ಪಣೆ ಮಾಡಲಿದ್ದಾರೆ. ಹಾಗೇ ಜಲಶಕ್ತಿ ಅಭಿಯಾನದ ರಾಯಭಾರಿಯಾಗಿ ಸಾಮಾಜಿಕ ಕೆಲಸದಲ್ಲಿ ತೊಡಗಿಕೊಳ್ಳಲಿದ್ದಾರೆ.

  • ಜುವೆಲ್ಸ್ ಆಫ್ ಇಂಡಿಯಾದ ಪ್ರಚಾರದ ರಾಯಭಾರಿಯಾಗಿ ಪ್ರಿಯಾಂಕಾ ಉಪೇಂದ್ರ

    ಜುವೆಲ್ಸ್ ಆಫ್ ಇಂಡಿಯಾದ ಪ್ರಚಾರದ ರಾಯಭಾರಿಯಾಗಿ ಪ್ರಿಯಾಂಕಾ ಉಪೇಂದ್ರ

    ಬೆಂಗಳೂರು: ಮಹಿಳೆಯರಿಗೆ ಚಿನ್ನದ ಅಭರಣಗಳೆಂದರೆ ಅಚ್ಚುಮೆಚ್ಚು. ಮದುವೆ, ಸಮಾರಂಭಗಳಲ್ಲಿ ಚಿನ್ನಕ್ಕೆ ಹೆಚ್ಚಿನ ಮಹತ್ವವನ್ನು ಮಹಿಳೆಯರು ನೀಡುತ್ತಾರೆ. ಜನಸಾಮಾನ್ಯರು ಮಾತ್ರವಲ್ಲದೇ ನಟಿ ಮಣಿಯರು ಚಿನ್ನದ ಆಭರಗಳನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ. ಇದೀಗ ಜುವೆಲ್ಸ್ ಆಫ್ ಇಂಡಿಯಾದ ಪ್ರಚಾರದ ರಾಯಭಾರಿಯಾಗಿ ಪ್ರಿಯಾಂಕಾ ಉಪೇಂದ್ರ ಆಯ್ಕೆ ಆಗಿದ್ದಾರೆ.

    ಬೆಂಗಳೂರಿನ ಅರಮನೆ ಮೈದಾನ ತ್ರಿಪುರ ವಾಸಿನಿಯಲ್ಲಿ ದೇಶದ ಅತಿಡೊಡ್ಡ, ಅತ್ಯುತ್ತಮ ಅಭರಣ ಪ್ರದರ್ಶನ ಮತ್ತು ಮಾರಟ ಮೇಳ ನಡೆಯುತ್ತಿದೆ. ಜ್ಯುವೆಲ್ಸ್ ಆಫ್ ಇಂಡಿಯಾದವರು ಇದೇ ತಿಂಗಳು 15ರಿಂದ 18ನೇ ತಾರೀಖಿನವರಗೆ ಆಯೋಜಿಸಿದ್ದಾರೆ. ಜುವೆಲ್ಸ್ ಆಫ್ ಇಂಡಿಯಾದ ಪ್ರಚಾರದ ರಾಯಭಾರಿಯಾಗಿರುವ ಖ್ಯಾತ ಚಲನಚಿತ್ರ ನಟಿ ಪ್ರಿಯಾಂಕ ಉಪೇಂದ್ರರವರು ಸುದ್ದಿಗೋಷ್ಠಿ ನಡೆಸಿದರು.

     

    View this post on Instagram

     

    A post shared by priyanka upendra (@priyanka_upendra)

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಿಳೆಯರಿಗೆ ಅಭರಣಗಳೆಂದರೆ ಅಚ್ಚುಮೆಚ್ಚು. ಭಾರತೀಯ ಪಾರಂಪಾರಿಕ ಶೈಲಿಯ ಮತ್ತು ದೆಹಲಿ, ಮುಂಬೈ, ಗುಜರಾತ್, ರಾಜಸ್ಥಾನ್ ವಿವಿಧ ರಾಜ್ಯದ ಅಭರಣ ಪ್ರದರ್ಶನ ಮತ್ತು ಮಾರಾಟ ನಾಲ್ಕು ದಿನಗಳ ಕಾಲ ನಡೆಯುತ್ತದೆ ಎಂದರು.

    ಜುವೆಲ್ಸ್ ಆಫ್ ಇಂಡಿಯಾ ಪ್ರಚಾರ ರಾಯಭಾರಿ ಎರಡು ಸಲ ಆಯ್ಕೆಯಾಗಿದ್ದೇನೆ. ಕಳೆದ 20 ತಿಂಗಳಿಂದ ಕೊರೊನಾ ಕಾಲದಿಂದ ಮಹಿಳೆಯರು ಅಭರಣ ಖರೀದಿಸಲು ಆಗಿಲ್ಲ. ದೀಪಾವಳಿ ಹಬ್ಬವು ಹತ್ತಿರ ಬರುತ್ತಿದೆ, ಅದ್ದರಿಂದ ಜುವೆಲ್ಸ್ ಆಫ್ ಇಂಡಿಯಾ ವತಿಯಿಂದ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ ಬನ್ನಿ ಆಗಮಿಸಿ ಎಂದು ಹೇಳಿದ್ದಾರೆ.

  • ಜಾಗತಿಕ ಪೌರತ್ವ ರಾಯಭಾರಿಯಾದ ರವಿಶಂಕರ್ ಗುರೂಜಿ

    ಜಾಗತಿಕ ಪೌರತ್ವ ರಾಯಭಾರಿಯಾದ ರವಿಶಂಕರ್ ಗುರೂಜಿ

    ವಾಷಿಂಗ್ಟನ್: ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರನ್ನು ಅಮೆರಿಕ ನಾರ್ತ್ ಈಸ್ಟರ್ನ್ ಯುನಿವರ್ಸಿಟಿ ಸೆಂಟರ್ ಫಾರ್ ಸ್ಪಿರಿಚುವಲ್ ಡಯಲಾಗ್ ಮತ್ತು ಸರ್ವಿಸ್ ಗುರೂಜಿ ಅವರನ್ನು ತನ್ನ ಸಂಸ್ಥೆಯ ಜಾಗತಿಕ ಪೌರತ್ವ ರಾಯಭಾರಿ ಎಂದು ಗುರುತಿಸಿದೆ.

    ಅಫ್ಗಾನಿಸ್ತಾನ, ಬ್ರೆಜಿಲ್, ಕ್ಯಾಮರೂನ್, ಕೊಲಂಬಿಯಾ, ಭಾರತ, ಇಂಡೊನೇಷ್ಯಾ, ಇರಾಕ್, ಇಸ್ರೇಲ್, ಕಿನ್ಯಾ, ಕೊಸೊವೊ, ಲೆಬನಾನ್, ಮಾರಿಷಸ್, ಮೊರಾಕೊ, ನೇಪಾಳ, ಪಾಕಿಸ್ತಾನ, ರಷ್ಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಅಮೆರಿಕದಲ್ಲಿ ಸಂಘರ್ಷ ಪರಿಹಾರಕ್ಕಾಗಿ ಅವರು ಕೆಲಸ ಮಾಡಿದ್ದಾರೆ ಎಂದು ವಿಶ್ವವಿದ್ಯಾಲಯ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಆಧ್ಯಾತ್ಮಿಕ ಸಲಹೆಗಾರ ಅಲೆಕ್ಸಾಂಡರ್ ಡೆಲಿವರಿ ಕರ್ನ್ ಹೇಳಿದ್ದಾರೆ.

    ರವಿಶಂಕರ್ ಗೂರುಜಿ ಅವರು ಶಾಂತಿ ಸ್ಥಾಪಿಸಲು ಹಾಗೂ ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ಗೌರವಿಸಲಾಗಿದೆ. ನಾವು ರವಿಶಂಕರ್ ಗುರೂಜಿ ಅವರಿಗೆ ಕೃತಜ್ಞರಾಗಿದ್ದೇವೆ. ಮಾನವೀಯ ಮೌಲ್ಯಗಳನ್ನು ಸಾಕಾರಗೊಳಿಸಿದ ಅತ್ಯುತ್ತಮ ವ್ಯಕ್ತಿಯ ಮೂಲಕ ನಾವು ಜಾಗತಿಕ ಪೌರತ್ವ ರಾಯಭಾರಿಯನ್ನು ಗುರುತಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ, ಎಂದು ಅಲೆಕ್ಸಾಂಡರ್ ಡೆಲಿವರಿ ಕರ್ನ್ ಹೇಳಿದ್ದಾರೆ.

  • ನನ್ನೂರಿನ ಅಭಿವೃದ್ಧಿಗೆ ನಾನು ಸದಾ ಸಿದ್ಧ: ಪುನೀತ್ ರಾಜ್‍ಕುಮಾರ್

    ನನ್ನೂರಿನ ಅಭಿವೃದ್ಧಿಗೆ ನಾನು ಸದಾ ಸಿದ್ಧ: ಪುನೀತ್ ರಾಜ್‍ಕುಮಾರ್

    ಚಾಮರಾಜನಗರ: ನಮ್ಮ ಚಾಮರಾಜನಗರದ ರಾಯಭಾರಿಯಾಗಲು ನಾನು ಹೆಮ್ಮೆಯಿಂದ ಒಪ್ಪಿಕೊಂಡಿದ್ದೇನೆ ಎಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಹೇಳಿದ್ದಾರೆ.

    ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಜಿಲ್ಲಾಡಳಿತ ಸಿದ್ಧಪಡಿಸಿರುವ ನಾಲ್ಕು ನಿಮಿಷದ ವಿಡಿಯೋವನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು. ಈ ವೇಳೆ ವಚ್ರ್ಯುವಲ್ ಮೂಲಕ ಕಾರ್ಯಕ್ರಮದಲ್ಲಿ ಮಾತನಾಡಿದ ಪುನೀತ್, ಚಾಮರಾಜನಗರದ ರಾಯಭಾರಿಯಾಗಲು ಹೆಮ್ಮೆಯಿಂದ ಒಪ್ಪಿಕೊಂಡಿದ್ದೇನೆ. ನನ್ನ ತಂದೆಯ ಊರಾದ ಚಾಮರಾಜನಗರದ ಅಭಿವೃದ್ಧಿಗೆ ಸದಾ ಸಿದ್ಧ. ನಮ್ಮ ರಾಜ್ಯ-ನಮ್ಮ ದೇಶ ಚೆನ್ನಾಗಿ ಬೆಳೆಯಬೇಕು ಎಂದು ಆಶಿಸಿದರು.

    ಚಾಮರಾಜನಗರದ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಉತ್ಸುಕನಾಗಿದ್ದೇನೆ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಕೈಜೋಡಿಸುತ್ತೇನೆ. ಜಿಲ್ಲೆಯ ಸೌಂದರ್ಯವನ್ನು ಹೊರಭಾಗದ ಜನರಿಗೆ ತಲುಪಿಸಿ ಒಮ್ಮೆಯಾದರೂ ಭೇಟಿಕೊಡಬೇಕು ಎಂದನಿಸುವಂತೆ ಮಾಡಬೇಕು. ಚಿತ್ರೀಕರಣ ಇಲ್ಲದಿದ್ದರೇ ನೇರವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೆ ಎಂದು ತಿಳಿಸಿ ಇದೇ ವೇಳೆ ದೀಪಾವಳಿ ಹಬ್ಬದ ಶುಭಾಶಯ ಕೋರಿದರು.