ಸದ್ಯ ಮರಿ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಮತ್ತೊಂದು ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ಮುಂಗಾರು ಮಳೆ ಖ್ಯಾತಿಯ ಕೃಷ್ಣ ಅವರು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರಕ್ಕೆ ಕಾಳಿ ಎಂದು ಹೆಸರಿಡಲಾಗಿದೆ. ಈ ಚಿತ್ರದ ಫಸ್ಟ್ ಲುಕ್ ನಾಳೆ ಬೆಳಗ್ಗೆ 11.22ಕ್ಕೆ ರಿಲೀಸ್ ಆಗಲಿದೆ. ಇದನ್ನೂ ಓದಿ : ಶಾರುಖ್ ಖಾನ್ ಮನೆ ‘ಮನ್ನತ್’ ನೇಮ್ ಪ್ಲೇಟ್ ನಾಪತ್ತೆ: ಇದರ ಹಿಂದಿದೆ ಭಾರೀ ರಹಸ್ಯ
ನಾಳೆ ಮಂಡ್ಯದ ಗಂಡು ಅಂಬರೀಶ್ ಅವರ ಹುಟ್ಟು ಹಬ್ಬ. ಈ ಹುಟ್ಟು ಹಬ್ಬಕ್ಕಾಗಿ ಕೃಷ್ಣ ಅವರು ತಮ್ಮ ಹೊಸ ಸಿನಿಮಾದ ನಾಯಕನ ಫಸ್ಟ್ ಲುಕ್ ರೆಡಿ ಮಾಡಿಸಿದ್ದು, ಅಂಬರೀಶ್ ಅವರ ಪ್ರೀತಿಗಾಗಿ ಅದನ್ನು ರಿಲೀಸ್ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅಭಿಷೇಕ್ ವಿಶೇಷ ಪಾತ್ರವನ್ನು ನಿರ್ವಹಿಸಲಿದ್ದಾರಂತೆ. ಆ ಪಾತ್ರದ ಲುಕ್ ಹೇಗಿರಲಿದೆ ಎನ್ನುವುದು ನಾಳೆ ರಿವಿಲ್ ಆಗಲಿದೆ. ಇದನ್ನೂ ಓದಿ : ನಯನತಾರಾ ಮದುವೆ ದಿನಾಂಕ ಬದಲು, ರೆಸಾರ್ಟ್ ನಲ್ಲಿ ಸಪ್ತಪದಿ ತುಳಿಯಲಿದೆ ಜೋಡಿ
ಕಾವೇರಿ ನದಿ ನೀರಿನ ಹೋರಾಟದ ಹಿನ್ನೆಲೆಯಾಗಿಟ್ಟುಕೊಂಡು ಈ ಕಥೆಯನ್ನು ಬರೆದಿದ್ದಾರಂತೆ ಕೃಷ್ಣ. ಈ ಹೋರಾಟದ ದಿನಗಳಲ್ಲಿ ನಡೆದ ನೈಜ ಘಟನೆಯನ್ನೇ ಸಿನಿಮಾ ಮಾಡುತ್ತಿದ್ದಾರೆ. ಇದೊಂದು ಲವ್ ಸ್ಟೋರಿ ಆಗಿದ್ದು, ಕಾವೇರಿ ಹೋರಾಟದ ಸಂದರ್ಭದಲ್ಲಿ ಈ ಪ್ರೇಮಿಗಳಿಗೆ ಆದ ತೊಂದರೆಯನ್ನು ಚಿತ್ರವಾಗಿ ಕಟ್ಟಿಕೊಡಲಿದ್ದಾರಂತೆ. ಇದನ್ನೂ ಓದಿ : ರಜನಿಕಾಂತ್ ನನ್ನ ವೈರಿಯಲ್ಲ ಎಂದ ಕಮಲ್ ಹಾಸನ್
ಸದ್ಯ ಸೂರಿ ನಿರ್ದೇಶನದ ಬ್ಯಾಡ್ ಮಾನರ್ಸ್ ಸಿನಿಮಾದ ಕೊನೆಯ ಹಂತದ ಶೂಟಿಂಗ್ ನಲ್ಲಿದ್ದಾರಂತೆ ಅಭಿಷೇಕ್. ಈ ಸಿನಿಮಾ ಮುಗಿಯುತ್ತಿದ್ದಂತೆಯೇ ಕಾಳಿ ಚಿತ್ರದ ಚಿತ್ರೀಕರಣದಲ್ಲಿ ಅವರು ಪಾಲ್ಗೊಳ್ಳಲಿದ್ದಾರಂತೆ.
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಈ ಹಿಂದೆ ನಟ, ಕೇಂದ್ರ ಸಚಿವರಾಗಿದ್ದಅಂಬರೀಶ್ ಅವರು ರಾಜೀನಾಮೆ ನೀಡಿದ್ದರು. ಈಗ ಕಾವೇರಿ ನದಿ ವಿವಾದದ ಹಿನ್ನೆಲೆಯಾಗಿಟ್ಟುಕೊಂಡು, ಅದಕ್ಕೊಂದು ಲವ್ ಸ್ಟೋರಿ ಬೆಸೆದು ಸಿನಿಮಾ ಮಾಡುತ್ತಿದ್ದಾರೆ ಮುಂಗಾರು ಮಳೆ ಖ್ಯಾತಿಯ ಕೃಷ್ಣ. ಈ ಸಿನಿಮಾಗೆ ಅಂಬರೀಶ್ ಪುತ್ರ ಅಭಿಷೇಕ್ ನಾಯಕ ಎನ್ನುವುದು ವಿಶೇಷ. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ಶ್ವಾನ ನಿಧನ
ಸದ್ಯ ಅಭಿಷೇಕ್ ಬ್ಯಾಡ್ ಮ್ಯಾನರ್ಸ್ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಜ್ಯೂನಿಯರ್ ರೆಬೆಲ್ ಸ್ಟಾರ್ ಹೊಸ ಬಗೆಯ ಪಾತ್ರ ಮಾಡುತ್ತಿದ್ದಾರಂತೆ. ಇದೊಂದು ಪಕ್ಕಾ ಸಾಹಸಮಯ ಸಿನಿಮಾವಂತೆ. ಹಾಗಾಗಿ ಯಂಗ್ ರೆಬಲ್, ತಯಾರಿ ಮಾಡಿಕೊಂಡೇ ಈ ಸಿನಿಮಾದಲ್ಲಿ ನಟಿಸಿದ್ದಾರಂತೆ. ಈಗಾಗಲೇ ಬಹುತೇಕ ಶೂಟಿಂಗ್ ಕೂಡ ಮುಗಿದಿದೆ ಎನ್ನುತ್ತಿದೆ ಚಿತ್ರತಂಡ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ
ಈ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದ್ದರಿಂದ ಇನ್ನೂ ಕೆಲವೇ ದಿನಗಳಲ್ಲಿ ಕೃಷ್ಣ ನಿರ್ದೇಶನದ ಹೊಸ ಸಿನಿಮಾದಲ್ಲಿ ಅಭಿಷೇಕ್ ನಟಿಸಲಿದ್ದಾರೆ. ಈ ಚಿತ್ರಕ್ಕೆ ಕಾಳಿ ಎಂದು ಹೆಸರಿಡಲಾಗಿದೆ. ಕಾವೇರಿ ವಿವಾದದ ಹಿನ್ನೆಲೆಯ ಕಥೆಯು ಸಿನಿಮಾದಲ್ಲಿದ್ದರೂ, ಪ್ರಧಾನ ಕಥೆಯಾಗಿ ಬರುವುದು ಲವ್ ಸ್ಟೋರಿ ಎಂದಿದ್ದಾರೆ ನಿರ್ದೇಶಕರು. ಪೈಲ್ವಾನ್ ಸಿನಿಮಾದ ನಂತರ ಕೃಷ್ಣ ಈ ಕಥೆಯನ್ನು ಎತ್ತಿಕೊಂಡಿದ್ದು, ಅಂದುಕೊಂಡಂತೆ ಆಗಿದ್ದರೆ, ಇವರು ಪುನೀತ್ ರಾಜ್ ಕುಮಾರ್ ಅವರಿಗೆ ಸಿನಿಮಾ ಮಾಡಬೇಕಿತ್ತು. ಒಂದು ಹಂತದ ಮಾತುಕತೆ ಕೂಡ ಮಾಡಿದ್ದರು. ಅಷ್ಟರಲ್ಲಿ ಪುನೀತ್ ಅಗಲಿದರು. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ
ಪುನೀತ್ ಅವರಿಗಾಗಿ ಮಾಡಿದ್ದ ಕಥೆಯಾ? ಅಥವಾ ಹೊಸದಾಗಿ ಬರೆದ ಸ್ಟೋರಿನಾ ಎನ್ನುವ ಕುರಿತು ಯಾವುದೇ ಮಾಹಿತಿಯನ್ನೂ ಹಂಚಿಕೊಂಡಿಲ್ಲ ನಿರ್ದೇಶಕರು. ಆದರೆ, ಇದೊಂದು ವಿಭಿನ್ನವಾದ ಕಥೆ ಎನ್ನುವ ಮಾಹಿತಿ ಅವರ ವಲಯದಿಂದ ಕೇಳಿ ಬಂದಿದೆ. ಈಗಾಗಲೇ ಅಭಿಷೇಕ್ ಸಿನಿಮಾವನ್ನು ಒಪ್ಪಿಕೊಂಡಿದ್ದರಿಂದ ಇತರ ಕಲಾವಿದರ ಆಯ್ಕೆಯ ಪ್ರಕ್ರಿಯೆ ಶುರು ಮಾಡಿದ್ದಾರಂತೆ ಕೃಷ್ಣ.
ಬೆಂಗಳೂರು: ಇವತ್ತಿನಿಂದ ಆಪರೇಷನ್ ಹಳೆ ಮೈಸೂರು ಚಾಪ್ಟರ್ 1 ಶುರುವಾಗಿದೆ. ಅಂಬಿ ಪುತ್ರ ಅಭಿಷೇಕ್‍ಗೆ ಬಿಜೆಪಿ ಗಾಳ ಹಾಕಿದ್ದು, ಮತ್ತೆ ಅಂಬಿ ಫ್ಯಾಮಿಲಿ ಮಂಡ್ಯ ಅಖಾಡಕ್ಕೆ ಇಳಿದರೆ ರಣಕಣ ಗ್ಯಾರಂಟಿ. ಹಾಗಾದರೆ ಸುಮಲತಾ ನಡೆ ಏನು? ಪುತ್ರನನ್ನ ರಾಜಕೀಯಕ್ಕೆ ಎಂಟ್ರಿ ಕೊಡಿಸ್ತಾರಾ ಎಂಬ ಕುತೂಹಲ ಇದೆ.
ಮಂಡ್ಯದಲ್ಲಿ ಯುವ ನಾಯಕತ್ವ ಬರುತ್ತೆ ಎಂದು ಸಿಎಂ ಸುಳಿವು ಕೊಟ್ಟ ಬೆನ್ನಲ್ಲೇ ಸಕ್ಕರೆ ನಗರಿಯಲ್ಲೀಗ ಅಂಬಿ ನೆನಪು. ಅಂಬರೀಷ್ ಚುನಾವಣೆ ಅಖಾಡದಲ್ಲಿ ಇರ್ತಾರೆ ಅಂದರೆ ಅದರ ಖದರ್ ಬೇರೆಯೇ ಇರುತ್ತಿತ್ತು. ಅಂಬಿ ಮಂಡ್ಯದ ಗಂಡಾಗಿ ರಾಜಕೀಯದಲ್ಲಿ ಹಲವು ಏಳುಬೀಳುಗಳನ್ನು ಸಹ ಕಂಡಿದ್ದರು. ಇದೀಗ ಅಂಬರೀಷ್ ಫ್ಯಾಮಿಲಿಯನ್ನೇ ಬಿಜೆಪಿ ಕರೆತರಲು ನಾನಾ ರೀತಿಯ ತಂತ್ರಗಾರಿಕೆ ಶುರುವಾಗಿದೆ. ಅಭಿಷೇಕ್ ಕೂಡ ರಾಜಕೀಯಕ್ಕೆ ಎಂಟ್ರಿ ಮಾಡಿಸಲು ಬಿಜೆಪಿಯಿಂದ ಮಹಾ ಪ್ಲ್ಯಾನ್ ನಡೆದಿದೆ. ಮಂಡ್ಯದಲ್ಲಿ ಯುವ ನಾಯಕತ್ವ ಬರಲಿದೆ ಎಂದು ಸಿಎಂ ಹೇಳಿರುವುದರ ಹಿಂದೆ ಅಂಬರೀಷ್ ಅವರ ಮಗ ರಾಜಕೀಯ ಎಂಟ್ರಿ ಇದೆಯಾ ಎಂಬ ಕುತೂಹಲ ಮನೆ ಮಾಡಿದೆ. ಇದನ್ನೂ ಓದಿ: ಬಿಜೆಪಿಯಲ್ಲಿ ಸಿಎಂ ಸಚಿವ ಸ್ಥಾನ ಲಾಭಿಗೆ ಅವಕಾಶವಿಲ್ಲ, ಯತ್ನಾಳ್ ಹೇಳಿಕೆ ತಪ್ಪು: ರೇಣುಕಚಾರ್ಯ
ಅಂದಹಾಗೆ ತಂದೆಯ ಜಾಗಕ್ಕೆ ಪುತ್ರನಿಗೆ ಪಟ್ಟಾಭಿಷೇಕ ಮಾಡಲು ಬಿಜೆಪಿ ಪ್ಲ್ಯಾನ್ ಮಾಡಿದ್ದರೂ ಬಿಜೆಪಿಯ ಆ ಆಪರೇಷನ್‍ಗೆ ಅಂಬಿ ಫ್ಯಾಮಿಲಿ ಒಪ್ಪಿಬಿಡುವುದು ಅಷ್ಟು ಸುಲಭವೂ ಅಲ್ಲ. ಮದುವೆ ವೇಳೆ ಸಿಎಂ ಜೊತೆ ಕುಳಿತು ಮಾತನಾಡುತ್ತಿರುವ ಫೋಟೋ ವೈರಲ್ ಆಗಿದ್ದಾಗ ಬಿಜೆಪಿ ಆಹ್ವಾನವನ್ನು ಕೊಟ್ಟಿರೋದನ್ನ ಸುಮಲತಾ ಒಪ್ಪಿಕೊಂಡಿದ್ದರು. ಆದರೆ ಕ್ಷೇತ್ರದ ಕಾರ್ಯಕರ್ತರು, ಜನರ ಅಭಿಪ್ರಾಯ ಪಡೆದು ತೀರ್ಮಾನ ಎಂದಿದ್ದರು. ಇದನ್ನೂ ಓದಿ:ಸಾಹುಕಾರ ಪಾಪರ್ ಆಗ್ತಿದ್ದಾರೆ: ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ವಾಗ್ದಾಳಿ
ಈ ನಡುವೆ ಮದ್ದೂರಿನಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಪ್ರಶ್ನೆಗೆ ಕಳೆದ 2021 ಸೆಪ್ಟಂಬರ್‍ನಲ್ಲಿ ಮಾತನಾಡಿದ್ದ ಅಭಿಷೇಕ್ ಅಂಬರೀಷ್ ಅಭಿಮಾನಿಗಳ ಜೊತೆಯಲ್ಲಿ ಇರಬೇಕು ಎಂಬ ಆಸೆ ಇರುತ್ತೆ. ಇಲ್ಲಿ ತನಕ ಅಭಿಮಾನಿಗಳು ನಮ್ಮನ್ನ ಬೆಳೆಸಿದ್ದಾರೆ, ಮುಂದೆಯೂ ಬೆಳೆಸ್ತಾರೆ. ಮುಂದೇನಾಗುತ್ತೋ ನೋಡೋಣ ದೇವರ ಇಚ್ಛೆ ಎಂದು ಹೇಳುವ ಮೂಲಕ ಕುತೂಹಲ ಹುಟ್ಟು ಹಾಕಿದ್ದಾರೆ.
ಒಟ್ಟಿನಲ್ಲಿ ಅಂಬಿ ಅಡ್ಡಾದಿಂದಲೇ ಆಪರೇಷನ್ ಓಲ್ಡ್ ಮೈಸೂರು ಶುರುವಾಗಿದ್ದು, ಇವತ್ತು ಮಂಡ್ಯದಿಂದ ಬಿಜೆಪಿಗೆ ಹಲವರು ಸೇರ್ಪಡೆಯಾಗಿದ್ದು, ಮುಂದೆ ಎರಡನೇ ಹಂತದಲ್ಲಿ ಅಭಿಷೇಕ್ ರಾಜಕೀಯ ಎಂಟ್ರಿಯ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ.
ನಿರ್ಮುಕ್ತ ಸಿನಿಮಾದ ಮೂಲಕ ರೆಬಲ್ ಸ್ಟಾರ್ ಅಂಬರೀಶ್ ಅವರ ಸಹೋದರಿಯ ಪುತ್ರ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ರಮ್ಯ ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಮೂಲಕ ಅಭಿಷೇಕ್ ಸ್ಯಾಂಡಲ್ ವುಡ್ ಎಂಟ್ರಿ ಕೊಟ್ಟಿದ್ದಾರೆ. ಅಂಬರೀಶ್ ಪುತ್ರನ ಹೆಸರು ಮತ್ತು ಸಹೋದರಿಯ ಮಗನ ಹೆಸರು ಅಭಿಷೇಕ್ ಎಂದೇ ಇರುವುದು ವಿಶೇಷ. ಇದನ್ನೂ ಓದಿ : ಇನ್‌ಸ್ಟಾಗ್ರಾಮ್ ಪ್ರಭಾವಿ ಪಟ್ಟಿಯಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ – ದಕ್ಷಿಣದ ಸ್ಟಾರ್‌ಗಳಿಗೂ ಇಲ್ಲ ಪಟ್ಟ
ನಿರ್ದೇಶಕರೆ, ಈ ಸಿನಿಮಾ ಕಥೆ, ಚಿತ್ರಕಥೆ ಬರೆದಿದ್ದು, ರೂಪಸ್ವಾಮಿ ಅವರೊಡಗೂಡಿ ನಿರ್ಮಾಣವನ್ನು ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಹಾಗೂ ಹಾಡೊಂದರ ಬಿಡುಗಡೆ ಸಮಾರಂಭ ನೆರವೇರಿತು. ಸಂಸದೆ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್ ಹಾಗೂ ರಾಕ್ ಲೈನ್ ವೆಂಕಟೇಶ್ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು. ಇದನ್ನೂ ಓದಿ : ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್‌ಗೆ ಭಯಂಕರ ಬೇಡಿಕೆ ಇಟ್ಟ ಫ್ಯಾನ್ಸ್
ಈ ಚಿತ್ರದ ನಾಯಕನ ಹೆಸರು ಕೂಡ ಅಭಿಷೇಕ್. ಇವರು ರೆಬಲ್ ಸ್ಟಾರ್ ಅಂಬರೀಶ್ ಅವರ ತಂಗಿ ರಂಜನಿ ಅವರ ಪುತ್ರ. ನವ್ಯ ಪೂಜಾರಿ ಈ ಚಿತ್ರದ ನಾಯಕಿ. ಇದು ನಮ್ಮ ಕುಟುಂಬದ ಸಮಾರಂಭ. ಏನು ಮಾತನಾಡಬೇಕೊ ತಿಳಿಯುತ್ತಿಲ್ಲ. ಅಂಬರೀಶ್ ಅವರ ತಾತಾ ಚೌಡಯ್ಯ ಅವರು. ಸಂಗೀತ ಕ್ಷೇತ್ರದಲ್ಲಿ ಅವರದೇ ಹೆಸರು. ನಂತರ ಅಂಬರೀಶ್ ಸಿನಿಮಾದಲ್ಲಿ ಹೆಸರು ಮಾಡಿದರು. ಆನಂತರ ನಮ್ಮ ಅಭಿಷೇಕ್. ಈಗ ಈ ಅಭಿಷೇಕ್. ಸಂತೋಷವಾಗುತ್ತಿದೆ ಎಲ್ಲರನ್ನು ನೋಡಿ. ಅಭಿಷೇಕ್ ಸಿ.ಕೆ ಸಹ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಲಿ ಎಂದರು ಸುಮಲತಾ ಅಂಬರೀಶ್. ಇದನ್ನೂ ಓದಿ : ಹಿಂದಿ ಬದಲು ಸಂಸ್ಕೃತ ರಾಷ್ಟ್ರ ಭಾಷೆಯಾಗಲಿ: ಕಂಗನಾ ರಣಾವತ್
ಟೀಸರ್ ನೋಡಿದೆ. ಚೆನ್ನಾಗಿದೆ. ಅಭಿಷೇಕ್ ಸಿ.ಕೆ ನನ್ನ ಬ್ರದರ್. ಅವರಿಗೆ ಶುಭವಾಗಲಿ ಎಂದು ಅಭಿಷೇಕ್ ಅಂಬರೀಶ್ ಹಾರೈಸಿದರು. ಚಿತ್ರತಂಡಕ್ಕೆ ಶುಭಕೋರಿದ ರಾಕ್ ಲೈನ್ ವೆಂಕಟೇಶ್, ಅಂಬರೀಶ್ ಅವರನ್ನು ನೆನೆದು ಭಾವುಕರಾದರು. ಇದೊಂದು ಮೆಡಿಕಲ್ ಕಾಲೇಜ್ ನಲ್ಲಿ ನಡೆಯುವ ಕಥೆ. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿದೆ. ನಾನು ನಿರ್ದೇಶನ ಮಾಡಲು ಸಹಕಾರ ನೀಡಿದವರು ನನ್ನ ಪತಿ ಶ್ರೀನಿವಾಸ್. ಬಂದಿರುವ ಗಣ್ಯರಿಗೆ , ಇಡೀ ತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕಿ ರಮ್ಯ ಶ್ರೀನಿವಾಸ್. ಹಾಡು ಬರೆದಿರುವ ಸ್ವಾಮಿ ಹಾಗೂ ಸಂಗೀತ ನೀಡಿರುವ ಸಾಮ್ರಾಟ್ “ನಿರ್ಮುಕ್ತ” ಚಿತ್ರದ ಬಗ್ಗೆ ಮಾತನಾಡಿದರು.
ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳಿಗೂ ಸ್ಯಾಂಡಲ್ ವುಡ್ ಗೂ ಗುರು ಶಿಷ್ಯರ ನಂಟಿದೆ. ಹಾಗಾಗಿ ಕನ್ನಡ ಸಿನಿಮಾ ರಂಗದಲ್ಲಿ ಅವರ ಕುರಿತಾಗಿ ಡಾಕ್ಯುಮೆಂಟರಿ, ವೆಬ್ ಸೀರಿಸ್ ಮತ್ತು ಸಿನಿಮಾಗಳ ರೂಪದಲ್ಲಿಯೂ ಶಿವಕುಮಾರ ಸ್ವಾಮೀಜಿ ದರ್ಶನ ಭಾಗ್ಯ ನೀಡಿದ್ದಾರೆ.
ಅಲ್ಲದೇ, ಸಿನಿಮಾ ಸಂಬಂಧಿ ಅನೇಕ ಕಾರ್ಯಕ್ರಮಗಳಿಗೆ ಶ್ರೀಗಳು ಆಗಮಿಸಿದ ಆಶೀರ್ವಾದ ಮಾಡಿದ್ದಾರೆ. ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಡಾ. ಅಂಬರೀಶ್, ಶಿವರಾಜ್ ಕುಮಾರ್, ಜಗ್ಗೇಶ್, ಯಶ್, ಸುದೀಪ್, ರಶ್ಮಿಕಾ ಮಂದಣ್ಣ, ಅರ್ಜುನ್ ಸರ್ಜಾ, ಉಪೇಂದ್ರ ಸೇರಿದಂತೆ ಸಾಕಷ್ಟು ಕಲಾವಿದರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಕೂಡ ಪಡೆದಿದ್ದಾರೆ. ಇದನ್ನೂ ಓದಿ: ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ
ಶ್ರೀಗಳೇ ನಟಿಸಿರುವ ಸಿನಿಮಾ
ಓಂಕಾರ್ ನಿರ್ದೇಶನದಲ್ಲಿ ಮೂಡಿ ಬಂದ ಜ್ಞಾನ ಜ್ಯೋತಿ ಸಿದ್ಧಗಂಗಾ ಸಿನಿಮಾದಲ್ಲಿ ಸ್ವತಃ ಶಿವಕುಮಾರ ಸ್ವಾಮೀಜಿ ಕೂಡ ನಟಿಸಿದ್ದಾರೆ. ಇದು ಶಿವಕುಮಾರ ಸ್ವಾಮಿಗಳ ಜೀವನ ಚರಿತ್ರೆಯನ್ನು ಆಧರಿಸಿದ ಸಿನಿಮಾವಾಗಿದ್ದು, ಸಿದ್ಧಗಂಗಾ ಮಠದ ಇತಿಹಾಸವನ್ನೇ ಹೇಳುವಂತಹ ಚಿತ್ರ ಇದಾಗಿದೆ. ವಿಷ್ಣುವರ್ಧನ್, ಭಾರತಿ ವಿಷ್ಣುವರ್ಧನ್, ರಾಷ್ಟ್ರ ಕವಿ ಜಿ.ಎಸ್. ಶಿವರುದ್ರಪ್ಪ, ಶ್ರೀಧರ್ ಸೇರಿದಂತೆ ಅನೇಕ ಹಿರಿಯ ಕಲಾವಿದರು ನಟಿಸಿದ ಸಿನಿಮಾ ಇದಾಗಿದೆ. ಸಿನಿಮಾದ ಮತ್ತೊಂದು ವಿಶೇಷ ಅಂದರೆ, ಮಠದಲ್ಲಿ ಓದುತ್ತಿದ್ದ ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಹಾಡೊಂದರಲ್ಲಿ ತೋರಿಸಿದ್ದಾರೆ ನಿರ್ದೇಶಕರು.
ಶ್ರೀಗಳ ಕುರಿತು ವೆಬ್ ಸಿರೀಸ್
ಸಿದ್ಧಗಂಗಾ ಶ್ರೀಗಳ ಕುರಿತಾಗಿ ಹಂಸಲೇಖ ವೆಬ್ ಸೀರಿಸ್ ವೊಂದನ್ನು ತಯಾರಿಸಲು ರೆಡಿ ಮಾಡಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ, ಸಂಸ್ಕೃತ ಸೇರಿದಂತೆ ಹತ್ತು ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಈ ವೆಬ್ ಸೀರಿಸ್ ನಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಶ್ರೀಗಳ ಪಾತ್ರ ಮಾಡಬೇಕು ಎನ್ನುವುದು ಹಂಸಲೇಖಾ ಆಸೆ. ಹಾಗಾಗಿ ಅಮಿತಾಭ್ ಅವರಿಗೆ ಈ ವಿಷಯವನ್ನು ಮುಟ್ಟಿಸಿದ್ದಾರೆ. ಇನ್ನಷ್ಟೇ ಇದರ ಶೂಟಿಂಗ್ ಆರಂಭವಾಗಬೇಕಿದೆ. ಇದನ್ನೂ ಓದಿ: ಬಾಲ್ಯ ವಿವಾಹ ಮಾಡಿ ತಾಳಿ ಬಿಚ್ಚಿಸಿ ಪರೀಕ್ಷೆಗೆ ಕಳುಹಿಸಿದ್ರು
ನಿಡಸಾಲೆ ಪುಟ್ಟಸ್ವಾಮಯ್ಯ ತಯಾರಿಸಿದ ಸಿದ್ದಗಂಗಾ
ಕನ್ನಡದ ಹೆಸರಾಂತ ಪ್ರಕಾಶಕ, ಲೇಖಕ ಹಾಗೂ ನಟ ನಿಡಸಾಲೆ ಪುಟ್ಟಸ್ವಾಮಯ್ಯ ನಿರ್ಮಾಣದಲ್ಲಿ ‘ಸಿದ್ದಗಂಗಾ’ ಹೆಸರಿನಲ್ಲಿ ಸಿನಿಮಾ ಮೂಡಿ ಬಂದಿದೆ. ಸಿದ್ಧಗಂಗಾ ಚಿತ್ರವು ಸಿದ್ದ ಮತ್ತು ಗಂಗಾರ ಬದುಕಿನ ಕಥೆಯಾಗಿದ್ದರೂ, ಸಿದ್ದಗಂಗಾ ಮಠದ ಇತಿಹಾಸವನ್ನೂ ಈ ಚಿತ್ರ ಹೇಳುತ್ತದೆ. ಈ ಸಿನಿಮಾದ ಆಡಿಯೋವನ್ನು ಸ್ವತಃ ಸಿದ್ಧಗಂಗಾ ಶ್ರೀಗಳೇ ಮಾಡಿದ್ದು ವಿಶೆಷ. ಜಿ ಮೂರ್ತಿ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ ನೈಜ ಬದುಕಿನ ಕಥಾಹಂದರ ಹೊಂದಿತ್ತು.
ಕಾಯಕ ಯೋಗಿ ಸಿನಿಮಾ
ನಿರ್ದೇಶಕ ಪುರುಷೋತ್ತಮ್ ಅವರು ‘ಕಾಯಕಯೋಗಿ’ ಶೀರ್ಷಿಕೆಯೊಂದಿಗೆ ಶ್ರೀಗಳ ಕುರಿತಾಗಿ ಸಿನಿಮಾ ಮಾಡಿದ್ದರು. ಈ ಚಿತ್ರಕ್ಕೆ ಸ್ವತಃ ಶ್ರೀಗಳೇ ಚಾಲನೆ ನೀಡಿದ್ದರು. ಭಕ್ತಿ ಪ್ರದಾನ ಸಿನಿಮಾಗಳಿಗೆ ಹೆಸರಾಗಿದ್ದ ಪುರುಷೋತ್ತಮ್, ಸಿದ್ಧಗಂಗಾ ಮಠದ ಚರಿತ್ರೆಯನ್ನು ಈ ಸಿನಿಮಾದ ಮೂಲಕ ಕಟ್ಟಿಕೊಟ್ಟಿದ್ದರು. ಇದನ್ನೂ ಓದಿ : ಸೆನ್ಸಾರ್ ಪಾಸ್ ಆದ ರಾಕಿಭಾಯ್ : ಕೆಜಿಎಫ್ 1 ಗಿಂತ ಕೆಜಿಎಫ್ 2 ಸಿನಿಮಾ 13 ನಿಮಿಷ ಉದ್ದ
ಟಗರು ಸಿನಿಮಾದಲ್ಲಿ ಶ್ರೀಗಳು
ಶಿವರಾಜ್ ಕುಮಾರ್ ನಟನೆಯ ಟಗರು ಸಿನಿಮಾದಲ್ಲಿಯೂ ಒಂದು ಸಣ್ಣ ಪಾತ್ರದಲ್ಲಿ ಶಿವಕುಮಾರ ಸ್ವಾಮಿಗಳು ಕಾಣಿಸಿಕೊಂಡಿದ್ದರು. ಈ ಮಠದಲ್ಲಿ ಬೆಳೆದ ಹುಡುಗನೊಬ್ಬ ದೊಡ್ಡ ಅಧಿಕಾರಿಯಾಗಿ ಬೆಳೆಯುತ್ತಾನೆ ಎನ್ನುವ ಕಥೆಯನ್ನು ಈ ಸಿನಿಮಾ ಹೊಂದಿತ್ತು. ಹಾಗಾಗಿ ಶ್ರೀಗಳು ನಾಯಕನಿಗೆ ಆಶೀರ್ವಾದ ಮಾಡುವಂತಹ ದೃಶ್ಯವನ್ನು ಈ ಸಿನಿಮಾದಲ್ಲಿ ತೋರಿಸಲಾಗಿತ್ತು.
ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ಜನುಮದಿನವನ್ನು ರಾಜ್ಯದ ಜನತೆ ಬಹಳ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಈ ನಡುವೆ ನಟಿ ಸುಮಲತಾ ಅಂಬರೀಶ್ ಅವರು ಪುನೀತ್ ಜೊತೆಗಿರುವ ಒಂದಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಪ್ರೀತಿಯ ಅಪ್ಪುಗೆ ಶುಭ ಕೋರಿದ್ದಾರೆ.
ಮೊದಲಿನಿಂದಲೂ ವರನಟ ಡಾ. ರಾಜ್‍ಕುಮಾರ್ ಹಾಗೂ ರೆಬೆಲ್‍ಸ್ಟಾರ್ ಅಂಬರೀಶ್ ಕುಟುಂಬಗಳು ಬಹಳ ಆತ್ಮೀಯತೆಯನ್ನು ಹೊಂದಿದೆ. ಅಲ್ಲದೇ ಪುನೀತ್ ಚಿಕ್ಕ ವಯಸಿನಿಂದಲೂ ಅಂಬರೀಶ್ ಅವರನ್ನು ಪ್ರೀತಿಯಿಂದ ಅಂಬಿ ಮಾಮ ಎಂದು ಕರೆಯುತ್ತಿದ್ದರು. ಅಂದಿನಿಂದಲೂ ಅಂಬಿ ಕುಟುಂಬಕ್ಕೆ ರಾಜ್ ಕುಟುಂಬ ಬಹಳ ಹತ್ತಿರವಾಗಿದ್ದು, ಇತ್ತೀಚೆಗಷ್ಟೇ ಪುನೀತ್ ಅಗಲಿಕೆಯಿಂದ ಸುಮಲತಾ ಅವರು ದುಃಖ ವ್ಯಕ್ತಪಡಿಸಿದ್ದರು. ಅಲ್ಲದೇ ಪುನೀತ್ ಸಾವಿನಿಂದ ಇಡೀ ಕರುನಾಡು ಶೋಕ ಸಾಗರದಲ್ಲಿ ಮುಳುಗಿತ್ತು. ಇದನ್ನೂ ಓದಿ: ಎಂದಿಗೂ ಕಸಿದುಕೊಳ್ಳಲಾಗದ ಎನರ್ಜಿ: ಅಪ್ಪುಗೆ ಯಶ್ ವಿಶ್
ಬಾಲ್ಯದಿಂದ ಸಿನಿಮಾದಲ್ಲೇ ಜೀವಿಸಿ, ಯಾರಿಗೂ ಗೊತ್ತಾಗದಂತೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ, ಸಿನಿಮಾ ರಂಗಕ್ಕೆ ಮತ್ತು ಸಮಾಜಕ್ಕೆ ಅಪಾರ ಕೊಡುಗೆ ನೀಡಿರುವ ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ಅವರ ಹುಟ್ಟು ಹಬ್ಬದಂದು, ಸದಾ ನಮ್ಮ ಹೃದಯಲ್ಲಿರುವ ಅವರ ಸವಿ ನೆನಪುಗಳನ್ನು ನೆನೆಯೋಣ. #PuneethRajkumar 1/2 pic.twitter.com/ipBKI9wd1N
— Sumalatha Ambareesh ???????? ಸುಮಲತಾ ಅಂಬರೀಶ್ (@sumalathaA) March 17, 2022
ಇದೀಗ ಪುನೀತ್ ಹುಟ್ಟುಹಬ್ಬವನ್ನು ರಾಜ್ಯದ ಜನತೆ ಹಬ್ಬದಂತೆ ಬಹಳ ಸಡಗರದಿಂದ ಆಚರಿಸಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸ್ಯಾಂಡಲ್‍ವುಡ್ ಕಲಾವಿದರೂ ಸಹ ಪುನೀತ್ ಹುಟ್ಟುಹಬ್ಬಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿ ಮಳೆಯನ್ನೇ ಹರಿಸುತ್ತಿದ್ದಾರೆ. ಈ ಮಧ್ಯೆ ನಟಿ, ಸಂಸದೆ ಸುಮಲತಾ ಅವರು, ಪುನೀತ್ ಫ್ಯಾಮಿಲಿ ಜೊತೆಗೆ ತಮ್ಮ ಫ್ಯಾಮಿಲಿ ಕ್ಲಿಕ್ಲಿಸಿಕೊಂಡಿರುವ ಫೋಟೋ ಹಾಗೂ ದೊಡ್ಮನೆ ಹುಡ್ಗ ಸಿನಿಮಾದ ಶೂಟಿಂಗ್ ವೇಳೆ ಹಿಡಿಸಿಕೊಂಡ ಒಂದಷ್ಟು ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳುವ ಮೂಲಕ ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ನೆನೆದು ನಟಿ ಪ್ರಿಯಾ ಆನಂದ್ ಕಣ್ಣೀರು
— Sumalatha Ambareesh ???????? ಸುಮಲತಾ ಅಂಬರೀಶ್ (@sumalathaA) March 17, 2022
ಫೋಟೋ ಜೊತೆಗೆ ಕ್ಯಾಪ್ಷನ್‍ನಲ್ಲಿ ಬಾಲ್ಯದಿಂದ ಸಿನಿಮಾದಲ್ಲೇ ಜೀವಿಸಿ, ಯಾರಿಗೂ ಗೊತ್ತಾಗದಂತೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ, ಸಿನಿಮಾ ರಂಗಕ್ಕೆ ಮತ್ತು ಸಮಾಜಕ್ಕೆ ಅಪಾರ ಕೊಡುಗೆ ನೀಡಿರುವ ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ಅವರ ಹುಟ್ಟು ಹಬ್ಬದಂದು, ಸದಾ ನಮ್ಮ ಹೃದಯಲ್ಲಿರುವ ಅವರ ಸವಿ ನೆನಪುಗಳನ್ನು ನೆನೆಯೋಣ. ಅಪಾರ ದುಃಖದಲ್ಲೂ, ಅಪ್ಪುವಿನ ಅನುಪಸ್ಥಿತಿಯನ್ನು ಮರೆಸುವಂತೆ ಅವರ ಹುಟ್ಟುಹಬ್ಬ ಆಚರಣೆ ಮಾಡುತ್ತಿರುವ ಅವರ ಕೋಟ್ಯಂತರ ಅಭಿಮಾನಿಗಳಿಗೆ ನನ್ನ ಪ್ರೀತಿಯ ನಮನಗಳು ಎಂದು ಬರೆದುಕೊಂಡಿದ್ದಾರೆ.
ಅಂಬರೀಶ್ ನಿಧನದ ನಂತರ ರಾಜಕಾರಣಕ್ಕೆ ಅವರ ಪುತ್ರ ಅಭಿಷೇಕ್ ಬರುತ್ತಾನೆ ಎಂದು ಹೇಳಲಾಗಿತ್ತು. ಆದರೆ, ಅದರ ಮೊದಲು ಅಂಬಿ ಪತ್ನಿ ಸುಮಲತಾ ಅಖಾಡಕ್ಕೆ ಇಳಿದರು. ಇದೀಗ ಅವರು ಮಂಡ್ಯದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಮತ್ತೊಂದು ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದಾರೆ. ಇದರ ಬೆನ್ನಲ್ಲೇ ಮತ್ತೆ ಅಭಿಷೇಕ್ ಹೆಸರು ರಾಜಕೀಯ ಕಣದಲ್ಲಿ ಹರಿದಾಡುತ್ತಿದೆ. ಈ ಬಾರಿ ಅಭಿಷೇಕ್ ಅವರು ವಿಧಾನಸಭೆ ಚುನಾವಣೆಗೆ ನಿಲ್ಲಲಿದ್ದಾರೆಂಬ ಸುದ್ದಿಯಾಗಿದೆ. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಅವರ ‘ಮಿಷನ್ ಮಜ್ನು’ ಬರ್ತಿದ್ದಾನೆ, ದಾರಿ ಬಿಡಿ
ಸುಮಲತಾ ಅವರು ಮಂಡ್ಯ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೆ, ಮಂಡ್ಯ ಅಥವಾ ಮದ್ದೂರಿನಲ್ಲಿ ಮಗನನ್ನು ಶಾಸಕನನ್ನಾಗಿ ಮಾಡಲಿದ್ದಾರೆ ಎನ್ನುವ ಮಾತು ರಾಜಕೀಯ ಪಡಸಾಲೆಯಲ್ಲಿ ಜೋರಾಗಿಯೇ ಕೇಳಿ ಬರುತ್ತಿದೆ. ಇದನ್ನೂ ಓದಿ : ಆಟಿಸಂ ಸಮಸ್ಯೆ ಕುರಿತಾದ ಕನ್ನಡದ ಮೊದಲ ಸಿನಿಮಾ ‘ವರ್ಣಪಟಲ’
ಈ ಕುರಿತು ಪ್ರತಿಕ್ರಿಯಿಸಿದ ಸುಮಲತಾ ಅಂಬರೀಶ್, “ಮಗನ ಕುರಿತು ನಾನು ಯಾವ ನಿರ್ಧಾರವನ್ನೂ ತಗೆದುಕೊಂಡಿಲ್ಲ. ಸಿನಿಮಾಗೆ ಬರುವಾಗಲೂ ಅವನು ಸ್ವತಂತ್ರವಾಗಿಯೇ ನಿರ್ಧಾರ ತಗೆದುಕೊಂಡು ಬಂದ. ಯಾವತ್ತೂ ನಾವು ಅವನಿಗೆ ಸಿನಿಮಾಗೆ ಬಾ ಅಂತ ಕರೆಯಲಿಲ್ಲ. ಈಗ ರಾಜಕೀಯಕ್ಕೆ ಬರುವಂತೆ ಹೇಗೆ ಒತ್ತಾಯಿಸಲಿ. ಅದು ಅಭಿಷೇಕ್ ನಿರ್ಧಾರ ಆಗಬೇಕು. ಅವನು ಸಿನಿಮಾಗೆ ಬರುತ್ತಾನೋ ಇಲ್ಲವೋ ಎನ್ನುವುದನ್ನು ಅವನನ್ನೇ ಕೇಳಿ” ಎಂದಿದ್ದಾರೆ ಸುಮಲತಾ. ಇದನ್ನೂ ಓದಿ : ಸ್ಸಾರಿ.. ಈ ಬಾರಿ ಹುಟ್ಟು ಹಬ್ಬ ಆಚರಿಸಲ್ಲ : ಜಗ್ಗೇಶ್
ಸುಮಲತಾ ಅವರು ರಾಜಕೀಯಕ್ಕೆ ಬರುವಾಗಲೂ ಇಂಥದ್ದೇ ಮಾತುಗಳನ್ನು ಹೇಳಿದರು. ಕೊನೆಗೆ ಸ್ವಾಭಿಮಾನಿ ಮತದಾರರ ಒತ್ತಾಸೆಯಂತೆ ಸ್ಪರ್ಧಿಸಿದರು. ಅಭಿಷೇಕ್ ನಿರ್ಧಾರ ಕೂಡ ಅದೇ ಮಾದರಿಯಲ್ಲಿರುತ್ತಾ ಕಾದು ನೋಡಬೇಕು.
ರೆಬಲ್ ಸ್ಟಾರ್ ಅಂಬರೀಶ್ ಅವರ 14 ಅಡಿ ಕಂಚಿನ ಪ್ರತಿಮೆಯನ್ನು ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅಂಬರೀಶ್ ಸಮಾಧಿ ಎದುರು ತಲೆಯತ್ತಲಿದೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಂಬರೀಶ್ ಅವರ ಸ್ಮಾರಕಕ್ಕೆ ಶಂಕುಸ್ಥಾಪನೆ ಮಾಡಿ, 12 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸ್ಮಾರಕಕ್ಕೆ ಚಾಲನೆ ನೀಡಿದ್ದಾರೆ. ಮುಂದುವರೆಕೆಯಾಗಿ ಈ ಸ್ಥಳದಲ್ಲಿಯೇ ಅಂಬರೀಶ್ ಕಂಚಿನ ಪ್ರತಿಮೆಯಾಗಲಿದ್ದಾರೆ. ಇದನ್ನೂ ಓದಿ : ಉಪಗ್ರಹವಾದ ಪುನೀತ್ ರಾಜ್ ಕುಮಾರ್: 100 ಸಾಹಸಿ ಮಕ್ಕಳ ಕೆಲಸವಿದು
ಪಕ್ಕದಲ್ಲಿಯೇ ಡಾ.ರಾಜ್ ಕುಮಾರ್ ಅವರ ಸ್ಮಾರಕ ನಿರ್ಮಾಣವಾಗಿದೆ. ಒಂದಷ್ಟು ಅದೇ ಮಾದರಿಯನ್ನು ಅನುಸರಿಸಿ, ಮತ್ತಷ್ಟು ವಿಭಿನ್ನವಾಗಿ ಸ್ಮಾರಕ ಮಾಡುವ ಯೋಜನೆ ಸರಕಾರದ್ದು. ಕಂಚಿನ ಪ್ರತಿಮೆಗೆ ಹೊಂದಿಕೊಂಡಂತೆ ಕಾರಂಜಿ, ವಸ್ತು ಸಂಗ್ರಹಾಲಯ, ಬಯಲು ರಂಗಮಂದಿರ, ಅಂಬರೀಶ್ ಅವರ ಸಿನಿಮಾಗಳ ಭಿತ್ತಿಚಿತ್ರಗಳು, ಆಡಿಯೋ, ವಿಡಿಯೋ ಪ್ರಸಾರ ಸೇರಿದಂತೆ ಅಂಬರೀಶ್ ಅವರ ಹೆಸರಿನಲ್ಲಿ ಹತ್ತು ಹಲವು ಯೋಜನೆಗಳನ್ನು ಡಾ.ಅಂಬರೀಶ್ ಪ್ರತಿಷ್ಠಾನ ಹಾಗೂ ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ನಡೆಯಲಿವೆ.
ರೆಬಲ್ ಸ್ಟಾರ್ ಅಂಬರೀಶ್ ಅವರ ಸ್ಮಾರಕದ ಶಂಕು ಸ್ಥಾಪನೆ ಕಾರ್ಯಕ್ರಮ ಫೆ.27 ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದ, ಅಂಬರೀಶ್ ಅವರ ಸಮಾಧಿ ಸ್ಥಳದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಮಾರಕದ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಇದನ್ನೂ ಓದಿ : ವಿಮಾನದಲ್ಲೂ ಯಶ್-ರಾಧಿಕಾ ಪಂಡಿತ್ ಅವರ ಮಕ್ಕಳ ಆಟ
ಅಬಕಾರಿ ಸಚಿವ ಕೆ.ಗೋಪಾಲಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ನಟಿ, ಸಂಸದೆ ಸುಮಲತಾ ಅಂಬರೀಶ್, ಸರಕಾರದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಆಯುಕ್ತ ಪಿ.ಎಸ್ ಹರ್ಷ ಸೇರಿದಂತೆ ಚಿತ್ರೋದ್ಯಮದ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ : ನಟ ಚೇತನ್ ಬಂಧನ ಹಿಂದಿನ ರೋಚಕ ಸ್ಟೋರಿ : ಜೈಲಿನಲ್ಲಿ ಚೇತನ್ 4ನೇ ದಿನ
ಅಂಬರೀಶ್ ನಿಧನರಾಗಿ ಮೂರುವರೆ (2018 ನವೆಂಬರ್ 24) ವರ್ಷದ ನಂತರ ಸ್ಮಾರಕ ನಿರ್ಮಾಣವಾಗುತ್ತಿದೆ. ಅಲ್ಲದೇ, ಕಳೆದ ಬಜೆಟ್ ನಲ್ಲಿ ಸ್ಮಾರಕಕ್ಕಾಗಿಯೇ ಸರಕಾರ 12 ಕೋಟಿ ರೂಪಾಯಿಗಳನ್ನೂ ಮಂಜೂರು ಮಾಡಿದೆ. ಕಂಠೀರವ ಸ್ಟುಡಿಯೋ ಆವರಣದಲ್ಲಿ ಒಟ್ಟು ನಾಲ್ಕು ಸ್ಮಾರಕಗಳು ತಲೆಯೆತ್ತಲಿವೆ. ಡಾ.ರಾಜ್ ಕುಮಾರ್ ಸ್ಮಾರಕ ಈಗಾಗಲೇ ಅಭಿವೃದ್ಧಿಯಾಗಿದೆ. ಪಾರ್ವತಮ್ಮ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಸಮಾಧಿ ಸ್ಥಳಗಳೂ ಅಲ್ಲಿವೆ. ಅವುಗಳನ್ನೂ ಹಂತ ಹಂತವಾಗಿ ಅಭಿವೃದ್ಧಿ ಪಡಿಸುವ ಗುರಿ ಸರಕಾರದ ಮುಂದಿದೆ.
ಬೆಂಗಳೂರು: ಚಂದನವನದ ಹಿರಿಯ ನಟ ಅಂಬರೀಶ್ ಹೆಸರಲ್ಲಿ ಏನೂ ಮಾಡಿಲ್ಲ ಅನ್ನೋ ಬೇಸರ ಅಭಿಮಾನಿಗಳಲ್ಲಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಬೇಸರ ವ್ಯಕ್ತಪಡಿಸಿದರು.
ಇಂದು ಅಂಬರೀಶ್ ಅವರ ಮೂರನೇ ವರ್ಷದ ಪುಣ್ಯತಿಥಿ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಪತ್ನಿ ಸುಮಲತಾ ಅಂಬರೀಶ್ ಅವರು, ಅಂಬರೀಶ್ ಇಲ್ಲವಾಗಿ 3 ವರ್ಷವಾಗಿದೆ. ಅವರ ಹೆಸರಲ್ಲಿ ಏನೂ ಮಾಡಿಲ್ಲ ಎನ್ನುವ ಬೇಸರ ಅಭಿಮಾನಿಗಳಲ್ಲಿದೆ. ಸ್ಮಾರಕ ಸೇರಿ ಎಲ್ಲೂ ಅಂಬರೀಶ್ ಅವರ ಹೆಸರು ಕೇಳಿಬಂದಿಲ್ಲ ಎಂದು ಅಭಿಮಾನಿಗಳ ಬೇಸರದ ಬಗ್ಗೆ ಹೇಳಿದರು. ಇದನ್ನೂ ಓದಿ: ಕಾವೇರಿದ ಮಂಡ್ಯ ಎಂಎಲ್‍ಸಿ ಚುನಾವಣೆ – ಯಾರಿಗೆ ಸಿಗುತ್ತೆ ಸುಮಲತಾ ಬೆಂಬಲ?
ಅಭಿಮಾನಿಗಳಿಗೆ ಈ ಬಗ್ಗೆ ನೋವಿದೆ. ಅದಕ್ಕೆ ಹೋರಾಟ ಮಾಡ್ತೀವಿ ಅಂತಿದ್ದಾರೆ. ಆದರೆ ಹೋರಾಟದ ಸಮಯ ಇದಲ್ಲ ಎಂದು ಹೇಳಿದ್ದೀನಿ. ಅಪ್ಪು ಅಗಲಿಕೆಯ ನೋವು ಎಲ್ಲರನ್ನೂ ಕಾಡಿದೆ. ಈ ಸಮಯದಲ್ಲಿ ಹೋರಾಟ ಮಾಡಬಾರದು ಎಂದಿದ್ದೇನೆ ಎಂದು ತಿಳಿಸಿದರು.
ಅಂಬರೀಶ್ ಅವರು ಯಾವ ಪ್ರಶಸ್ತಿ, ಹೆಸರನ್ನು ಕೇಳಿ ಪಡೆದಿರಲಿಲ್ಲ. ನಾವೂ ಸಹ ಅಂಬರೀಶ್ ಅವರಿಗೆ ಪ್ರಶಸ್ತಿ ಕೊಡಿ, ಅದು ಮಾಡಿ, ಇದು ಮಾಡಿ ಎಂದು ಕೇಳಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅಂಬಿ ತುಂಬಾ ಒಳ್ಳೇಯ ಸ್ನೇಹಿತರಾಗಿದ್ದರು. ಈಗ ಅವರೇ ಸಿಎಂ ಆಗಿರೋದ್ರಿಂದ ಮಾಡ್ತಾರೆ ಅನ್ನೋ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಭಾರತದಲ್ಲಿ ಮೂರನೇ ಅಲೆ ಸಾಧ್ಯತೆ ಕಡಿಮೆ: ಗುಲೇರಿಯಾ
ಮಗ ಅಭಿಷೇಕ್ ಹಾಗೂ ಸುಮಲತಾ ಅಂಬರೀಶ್ ಅಂಬರೀಶ್ 3ನೇ ಪುಣ್ಯತಿಥಿ ಹಿನ್ನೆಲೆ ಕಂಠೀರವ ಸ್ಟುಡಿಯೋಗೆ ಬಂದಿದ್ದಾರೆ.