Tag: ambarish

  • ಅಂಬರೀಶ್ ಜನ್ಮದಿನ; ಪೂಜೆ ಸಲ್ಲಿಸಿದ ಕುಟುಂಬ, ಫ್ಯಾನ್ಸ್

    ಅಂಬರೀಶ್ ಜನ್ಮದಿನ; ಪೂಜೆ ಸಲ್ಲಿಸಿದ ಕುಟುಂಬ, ಫ್ಯಾನ್ಸ್

    ಹೆಸರಾಂತ ಹಿರಿಯ ನಟ ಅಂಬರೀಶ್ (Ambarish) ಅವರ ಹುಟ್ಟುಹಬ್ಬವನ್ನು (Birthday) ಅಭಿಮಾನಿಗಳು ಮತ್ತು ಅವರ ಕುಟುಂಬ ಬೆಂಗಳೂರಿನ ಕಂಠೀರವ ಸ್ಟುಡಿಯೋದ ಅಂಬಿ ಸಮಾಧಿ ಬಳಿ ಆಚರಿಸಿದರು. ಅಂಬರೀಶ್ ಅವರ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

    ಬೆಳಗ್ಗೆ ಅಂಬರೀಶ್ ಸಮಾಧಿ ಬಳಿ ಆಗಮಿಸಿದ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮತ್ತು ಅಸಂಖ್ಯಾತ ಅಭಿಮಾನಿಗಳು ಸಮಾಧಿಗೆ ಪೂಜೆ ಸಲ್ಲಿಸಿದರು. ಕುಟುಂಬಸ್ಥರು ಪೂಜೆ ಸಲ್ಲಿಸಿದ ನಂತರ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನ ಸಮಾಧಿಗೆ ಪೂಜೆ ಸಲ್ಲಿಸಿದರು.

     

    ಅಂಬರೀಶ್ ಅವರ ಹುಟ್ಟು ಹಬ್ಬದ ನಿಮಿತ್ತ ಮಂಡ್ಯದಲ್ಲಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

  • ಅಂಬಿ ಅಗಲಿ ಐದು ವರ್ಷ: ಸುಮಲತಾ ಅಂಬರೀಶ್ ಭಾವುಕ ಪೋಸ್ಟ್

    ಅಂಬಿ ಅಗಲಿ ಐದು ವರ್ಷ: ಸುಮಲತಾ ಅಂಬರೀಶ್ ಭಾವುಕ ಪೋಸ್ಟ್

    ಮಂಡ್ಯದ ಗಂಡು ಅಂಬರೀಶ್ ಅವರು ಅಗಲಿ ಇಂದಿಗೆ ಐದು ವರ್ಷಗಳಾಗಿವೆ. ಅವರ ಪುಣ್ಯ ಸ್ಮರಣೆಯ ನಿಮಿತ್ತ ಹಲವಾರು ಕಾರ್ಯಕ್ರಮಗಳನ್ನು ಅಂಬರೀಶ್ ಅವರ ಕುಟುಂಬ ಮತ್ತು ಅಭಿಮಾನಿಗಳು ಆಯೋಜಿಸಿದ್ದಾರೆ. ಬೆಳಗ್ಗೆ ಸುಮಲತಾ ಅಂಬರೀಶ್ (Sumalatha), ಅಭಿಷೇಕ್ ಅಂಬರೀಶ್ (Abhishek), ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವಾರು ಚಿತ್ರೋದ್ಯಮದ ಗಣ್ಯರು ಮತ್ತು ಅಂಬಿ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ಬಂದು ಪೂಜೆ ಸಲ್ಲಿಸಿದ್ದಾರೆ.

    ಅಂಬಿ ಸ್ಮರಣೆ (Punyasmarane) ಕುರಿತಂತೆ ಸುಮಲತಾ ಅಂಬರೀಶ್ (Ambarish) ಅವರು ಭಾವುಕ ಪೋಸ್ಟ್ ಮಾಡಿದ್ದಾರೆ. ‘ಇರುವುದೊಂದೇ ಜೀವನ ಅದೆಷ್ಟು ವ್ಯತ್ಯಾಸವಿದೆ. ಎಂದೆಂದಿಗೂ ನಮ್ಮ ನೆನಪುಗಳಲ್ಲಿ, ಸುಖ, ದುಃಖ, ನಗು, ಕಣ್ಣೀರು. ಪ್ರತಿಯೊಂದು ಕ್ಷಣವೂ ನೀವು ಬಿಟ್ಟ ನಿರ್ವಾತವನ್ನು ಅಳೆಯಲಾಗದು.ನಾನು ಆ ಪ್ರೀತಿಯನ್ನು ಕಾಪಿಟ್ಟುಕೊಳ್ಳುತ್ತೇನೆ, ನಷ್ಟವನ್ನಲ್ಲ. ಅನೇಕರನ್ನು ಒಳಗೊಂಡ ಜೀವನವನ್ನು ಎಂದಿಗೂ ಕಳೆದುಕೊಳ್ಳಲು ಆಗುವುದಿಲ್ಲ. ನೀವು ಶಾಶ್ವತವಾಗಿರುತ್ತೀರಿ.ನೀವೊಂದು ಜೀವ ಮೀರಿದ, ಒಂದು ಪ್ರಪಂಚ. ಇಂದು ನನಗೆ ಖಾತ್ರಿಯಿದೆ, ನೀವು ಅತ್ಯಂತ ಹೆಮ್ಮೆಯಿಂದ ಸಂಭ್ರಮದಲ್ಲಿರುವಿರಿ ಮತ್ತು ನಿಮ್ಮ ಆ ಪ್ರಪಂಚದಿಂದ ಅಭಿಷೇಕ್ ಅವರ ಚಲನಚಿತ್ರವನ್ನು ಆಶೀರ್ವದಿಸುತ್ತೀರಿ’ ಎಂದು ಬರೆದುಕೊಂಡಿದ್ದಾರೆ.

    ಐದನೇ ವರ್ಷದ ಪುಣ್ಯಸ್ಮರಣೆಗೆ ಮಂಡ್ಯ ಮತ್ತು ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮತ್ತು ಈ ವರ್ಷ ಅಂಬರೀಶ್ ಅವರ ಹೆಸರಿನಲ್ಲಿ ಡಾ.ಅಂಬರೀಶ್ ಫೌಂಡೇಶನ್ ಕೂಡ ಶುರು ಮಾಡಲಾಗುತ್ತಿದ್ದು, ಹಲವಾರು ಜನಪರ ಕೆಲಸಗಳನ್ನು ಈ ಫೌಂಡೇಶನ್ ಮಾಡಲಿದೆ.

  • ಬೀಗರೂಟದಲ್ಲಿ ರಾಜಕೀಯ ತರಬೇಡಿ : ಅಭಿಷೇಕ್ ಅಂಬರೀಶ್ ಮನವಿ

    ಬೀಗರೂಟದಲ್ಲಿ ರಾಜಕೀಯ ತರಬೇಡಿ : ಅಭಿಷೇಕ್ ಅಂಬರೀಶ್ ಮನವಿ

    ಇಂದು ಮಂಡ್ಯದಲ್ಲಿ ನಡೆದ ಅಭಿಷೇಕ್ ಅಂಬರೀಶ್ (Ambarish) ಮತ್ತು ಅವಿವಾ (Aviva) ಮದುವೆಯ ಬೀಗರೂಟದ ಬಗ್ಗೆ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ಬೀಗರೂಟ (Beegaruta) ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಅಭಿಷೇಕ್ (Abhishek) ಅಂಬರೀಶ್ ಪ್ರತಿಕ್ರಿಯೆ ನೀಡಿದ್ದು, ಇದನ್ನು ರಾಜಕೀಯಕ್ಕೆ ತರಬೇಡಿ ಎಂದು ಹೇಳಿದ್ದಾರೆ.

    ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಪ್ರೀತಿ ತೋರಿಸಿದ್ದಾರೆ. ಊಟಕ್ಕಿಂತ ನಿಮ್ಮನ್ನು ನೋಡಲು ಬಂದೆ ಅನ್ನೋರು ಇದ್ರು. ಊಟ ಮಿಸ್ ಆಗಿದ್ದಕ್ಕೆ ಬೇಜಾರಾಗಿದೆ. ರಾಜಕೀಯ ವಿರೋಧಿಗಳು ಇದನ್ನು ಬಳಸಿಕೊಂಡರೆ ಅವರಿಗೂ ಒಳ್ಳೆಯದು ಆಗಲಿ. ಊಟ ಶಾರ್ಟೇಜ್ ಅನ್ನೋದು ಸುಳ್ಳು. ಊಟ ಬಿದ್ದಿದೆ. ನಮ್ಮ ತಂದೆಯ ಆಸೆಯಂತೆ ಮದುವೆಯಾಗಿದ್ದೇನೆ. ಇಲ್ಲದಿದ್ದರೆ ಸಿಂಪಲ್ ಆಗಿ ಮದುವೆಯಾಗುತ್ತಿದ್ದೆ ಎಂದಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಟೀ ಕುಡಿದ ಅಭಿಷೇಕ್: ಥೇಟ್ ಅಪ್ಪನಂತೆ ಮಗ ಎಂದ ಫ್ಯಾನ್ಸ್

    ಲವ್ ಮಾಡುವಾಗ ಎಷ್ಟು ಈಜಿಯಾಗಿ ನಿಭಾಸಬಹುದೋ, ಮದುವೆಯಾದ ಮೇಲೂ ಈಜಿಯಾಗಿ ನಿಭಾಯಿಸಬಹುದು ಅನ್ನೋ ಉದ್ದೇಶದಿಂದ ಮದುವೆಯಾದೆ. ಮುಂದಿನ ದಿನಗಳಲ್ಲಿ ಅವಿವಾ ನನ್ನ ಮೂವಿ ಪ್ರಮೋಷನ್ ಗೂ ಬರಬಹುದು. ನಮ್ಮ ಮಂಡ್ಯ ಜಿಲ್ಲೆಯ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮಂಡ್ಯ ಜನತೆ ಆರ್ಶೀವಾದ ಮಾಡಿದ್ದಾರೆ. ನಮ್ಮ ತಂದೆ-ತಾಯಿ ಆಸೆಯಂತೆ ಮಂಡ್ಯದಲ್ಲಿ ಬೀಗರ ಊಟ ಏರ್ಪಿಡಿಸಿದ್ದೇವೆ. ತುಂಬಾ ಜನ ಕಷ್ಟಪಟ್ಟು ವ್ಯವಸ್ಥೆ ಮಾಡಿದ್ರು. ಬೀಗರ ಊಟದಲ್ಲಿ ಶಾರ್ಟೇಜ್ ಆಗಿಲ್ಲ. ಯಾರಿಗೂ ದುಡ್ಡು ಕೊಟ್ಟು ಕರೆಸಿಲ್ಲ. ಪ್ರೀತಿ,ಅಭಿಮಾನದಿಂದ ಬಂದಿದ್ದಾರೆ. ಕೆಲವರು ಪ್ರವೋಕ್ ಮಾಡಿದಾಗ ಸಣ್ಣ ಪ್ರವೋಕ್ ಆದಾಗ ಅವ್ಯವಸ್ಥೆ ಆಗಿದೆ. ಅಡುಗೆ ಮನೆಗೆ ಕೆಲವರು ನುಗ್ಗಿದಾಗ ಘಟನೆ ಆಗಿದೆ. ಊಟ ಇಲ್ಲದೇ ಹೋಗಬೇಕು ಅಂತಾ ಕರೆಸಿಲ್ಲ. ದಯವಿಟ್ಟು ಕ್ಷಮಿಸಿ ಬಿಡಿ. ಯಾರು ಬೇಜಾರಾಗಬೇಡಿ ಎಂದು ಕ್ಷಮೆ ಕೇಳಿದ್ದಾರೆ ಅಭಿಷೇಕ್.

    ತಂದೆ ಮೇಲೆ ಪ್ರೀತಿ ಇಟ್ಟುಕೊಂಡು ಬಂದಿದ್ದರು. ಊಟ ಖಾಲಿಯಾಗತ್ತಾ ಬಂದ ಹಾಗೆ ರೆಡಿ ಮಾಡಿ ಅಂತಾ ಹೇಳಿದ್ದೇನೆ. ತುಂಬಾ ಊಟ ಹಾಳಾಗಿದೆ. ಬೀಗರ ಊಟ ಹಾಳು ಮಾಡಿದ್ದು ಯಾರು ಅಂತಾ ಗೊತ್ತಿಲ್ಲ. ಎಲೆಕ್ಷನ್ ಉದ್ದೇಶ ಇಟ್ಟುಕೊಂಡು ಬೀಗರ ಊಟ ಏರ್ಪಡಿಸಿಲ್ಲ. ಇದು ಅಂಬರೀಶ್ ಅಣ್ಣನ ಮಗನ ಸಮಾರಂಭ. ಇದರಲ್ಲಿ ರಾಜಕೀಯ ತರಬೇಡಿ ಎಂದು ಅಭಿಷೇಕ್ ವಿರೋಧಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

  • ‘ಅವಿವಾ ಮುದ್ದೆ ತಿನ್ನಲ್ಲ’: ಪತ್ನಿಯ ಇಷ್ಟದ ಮೆನು ಹಂಚಿಕೊಂಡ ಅಭಿಷೇಕ್

    ‘ಅವಿವಾ ಮುದ್ದೆ ತಿನ್ನಲ್ಲ’: ಪತ್ನಿಯ ಇಷ್ಟದ ಮೆನು ಹಂಚಿಕೊಂಡ ಅಭಿಷೇಕ್

    ದುವೆಯ ನಂತರ ಇದೇ ಮೊದಲ ಬಾರಿಗೆ ಪತ್ನಿ ಅವಿವಾರನ್ನು ಮಂಡ್ಯಕ್ಕೆ ಕರೆದುಕೊಂಡು ಬಂದಿದ್ದರು ನಟ ಅಭಿಷೇಕ್ (Abhishek) ಅಂಬರೀಶ್. ಇಂದು ಮಂಡ್ಯದ ಜನತೆಗಾಗಿ ಅಂಬರೀಶ್ (Ambarish) ಕುಟುಂಬ ಬೀಗರೂಟವನ್ನು ಹಮ್ಮಿಕೊಳ್ಳಲಾಗಿತ್ತು. ಮಂಡ್ಯದ ಜನರೊಂದಿಗೆ ಬೀಗರೂಟ ಸವಿಯುವುದಕ್ಕಾಗಿ ಪತ್ನಿ ಸಮೇತ ಆಗಮಿಸಿದ್ದರು ಅಭಿಷೇಕ್. ಈ ಸಂದರ್ಭದಲ್ಲಿ ಆ ಭಾಗದ ಮುದ್ದೆ (Mudde) ಬಗ್ಗೆ ಮಾತನಾಡಿದರು. ಅವಿವಾಗೆ ಮುದ್ದೆ ತಿನ್ನೋಕೆ ಬರುವುದಿಲ್ಲ. ಮಟನ್, ಚಿಕನ್ ತಿನ್ನುತ್ತಾರೆ ಎಂದು ಹೆಂಡತಿಯ ಮೆನು ಹಂಚಿಕೊಂಡರು.

    ಜೂನ್ 5ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ನವಜೋಡಿ ಮುಂಜಾನೆ ಮಂಡ್ಯದ ಬೀಗರೂಟದಲ್ಲಿ (Beegaroota) ಪಾಲ್ಗೊಂಡಿದ್ದಾರೆ. ನಿರೀಕ್ಷೆಗೂ ಮೀರಿ ಮಂಡ್ಯದಲ್ಲಿ ಅಭಿವಾ ಜೋಡಿಯನ್ನು ನೋಡಲು ಜನ ಸೇರಿದ್ದರು. ಇದನ್ನೂ ಓದಿ:‘ದೇವರ ಆಟ ಬಲ್ಲವರಾರು’ ಎನ್ನುತ್ತಾ 3 ವರ್ಷಗಳ ನಂತರ ಬಣ್ಣ ಹಚ್ಚಿದ ಸಿಂಧೂ ಲೋಕನಾಥ

    ಹಲವು ವರ್ಷಗಳ ಪ್ರೀತಿಗೆ ಜೂನ್ 5ರಂದು ಅಭಿ- ಅವಿವಾ (Aviva) ಜೋಡಿ ಮದುವೆ ಮುದ್ರೆ ಒತ್ತುವ ಮೂಲಕ ಹೊಸ ಬಾಳಿಗೆ ಕಾಲಿಟ್ಟರು. ಜೂನ್ 7ರಂದು ಅಭಿವಾ ಆರತಕ್ಷತೆಯನ್ನ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಕನ್ನಡ ಮಾತ್ರವಲ್ಲದೇ ಸೌತ್, ಬಾಲಿವುಡ್ ಸೂಪರ್ ಸ್ಟಾರ್ಸ್ ಕೂಡ ಆಗಮಿಸಿದ್ದರು. ಅಂಬಿ ಸ್ನೇಹ ವರ್ಗವೇ ಅಭಿಷೇಕ್ ವಿವಾಹ ಸಮಾರಂಭದಲ್ಲಿ ಸಾಕ್ಷಿಯಾದರು.

    ಮಂಡ್ಯಗೆ (Mandya) ಈಗಾಗಲೇ ಅಭಿವಾ ಎಂಟ್ರಿ ಕೊಟ್ಟಿದ್ದಾರೆ. ಮಂಡ್ಯದ ಜನತೆ ಬೀಗರೂಟ ಮಾಡುವ ಮೂಲಕ ನಮ್ಮನ್ನ ಹರಿಸಲಿ ಅಂತಾ ಕೇಳಿಕೊಳ್ತೀನಿ. ಮಂಡ್ಯದೂ ಅಂಬರೀಶ್ ಅವರ ನಂಟು ಹೇಗಿದೆ ಅಂತಾ ಎಲ್ಲರಿಗೂ ಗೊತ್ತು. ಎಲ್ಲರೂ ರಾಜಕಾರಣವನ್ನ ಪಕ್ಕಕ್ಕಿಟ್ಟು ಅಂಬರೀಶ್ ಅವರ ಮೇಲಿನ ಪ್ರೀತಿಗೆ ಇವತ್ತು ಎಲ್ಲರೂ ಬೀಗರೂಟಕ್ಕೆ ಬಂದಿದ್ದಾರೆ. ಮಂಡದ್ಯ ಜನರಿಗೆ ಊಟ ಹಾಕಿಸೋದು ನಮ್ಮ ಭಾಗ್ಯ ಎಂದು ಅಂಬಿ ಪುತ್ರ ಅಭಿಷೇಕ್ ಹೇಳಿದ್ದಾರೆ.

    ಮಂಡ್ಯದ ಜನ ಸೇರಿರೋದು ರೀತಿ ನೋಡಿ ಅವಿವಾಗೆ ಭಯ ಆಗಿದೆ, ಹೆದರಿದ್ದಾಳೆ. ಅವರು ಯಾವತ್ತು ಇಷ್ಟು ಜನನಾ ಒಟ್ಟಿಗೆ ನೋಡಿಲ್ಲ. ಇನ್ನೂ ಅಂಬರೀಶ್ ಅವರಿಗೆ ಇಷ್ಟದ ಊಟವೇ ಇವತ್ತಿನ ಬೀಗರೂಟದ ಮೆನು ಆಗಿದೆ ಎಂದು ಅಭಿಷೇಕ್ ಮಾತನಾಡಿದ್ದಾರೆ. ಅಂಬಿ ಕುಟುಂಬಕ್ಕೂ ಮಂಡ್ಯಗೂ ನಂಟಿದೆ. ಹಾಗಾಗಿ ಮಂಡ್ಯದ ಜನರಿಗೆ ಅಭಿವಾ ಮದುವೆಯ ಬೀಗರೂಟಕ್ಕೆ ಅದ್ದೂರಿಯಾಗಿ ಸಿದ್ಧತೆ ಮಾಡಲಾಗಿದೆ. ಮಂಡ್ಯದಲ್ಲಿ ವಿಶಾಲವಾದ ಜಾಗದಲ್ಲಿ ಬೃಹತ್ ಜರ್ಮನ್ ಟೆಂಟ್ ಹಾಕಿ ಜನರು ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಒಂದೇ ಬಾರಿಗೆ 4500 ಮಂದಿ ಕುಳಿತು ಊಟ ಮಾಡಬಹುದಾಗಿದೆ. ಇಂದು ಬೆಳಗ್ಗೆ 11ರಿಂದ ಔತಣಕೂಟ ಆರಂಭವಾಗಿದೆ.

     

    ಮಂಡ್ಯ ಶೈಲಿಯಲ್ಲಿ ಬಾಡೂಟ ತಯಾರಿಗೊಳ್ಳುತ್ತಿದ್ದು, ಮಂಡ್ಯದ ಪ್ರಖ್ಯಾತ ಬಾಣಸಿಗರ ತಂಡದ 900 ಮಂದಿಯಿಂದ ಅಡುಗೆ ತಯಾರಿ ಕಾರ್ಯಗಳು ಬಿರುಸಿನಿಂದ ನಡೆದಿದೆ. 7 ಟನ್ ಮಟನ್, 8 ಟನ್ ಚಿಕನ್ ಬಳಸಿ ಭರ್ಜರಿ ಬಾಡೂಟವನ್ನು ಸಿದ್ಧಗೊಳಿಸಲಾಗಿದೆ. ರಾಗಿಮುದ್ದೆ, ಮಟನ್ ಬಿರಿಯಾನಿ, ಬೋಟಿ ಗೊಜ್ಜು, ನಾಟಿಕೋಳಿ ಸಾಂಬಾರ್, ಕಬಾಬ್, ಮೊಟ್ಟೆ, ರೈಸ್, ತಿಳಿ ಸಾಂಬಾರ್, ಬಾದುಶಾ, ಪಾಯಸ, ಬೀಡಾ, ಐಸ್‌ಕ್ರೀಂ, ಬಾಳೆಹಣ್ಣು ಇದು ಬೀಗರೂಟದ ಮೆನು ಆಗಿದೆ.

  • ಮಂಡ್ಯದಲ್ಲಿ ಟೀ ಕುಡಿದ ಅಭಿಷೇಕ್: ಥೇಟ್ ಅಪ್ಪನಂತೆ ಮಗ ಎಂದ ಫ್ಯಾನ್ಸ್

    ಮಂಡ್ಯದಲ್ಲಿ ಟೀ ಕುಡಿದ ಅಭಿಷೇಕ್: ಥೇಟ್ ಅಪ್ಪನಂತೆ ಮಗ ಎಂದ ಫ್ಯಾನ್ಸ್

    ನಾಳೆ ಮಂಡ್ಯದಲ್ಲಿ (Mandya) ಅಂಬಿ ಕುಟುಂಬ ಬೀಗರೂಟವನ್ನು ಆಯೋಜನೆ ಮಾಡಿದೆ. ಬೀಗರೂಟಕ್ಕೆ ಸಕಲ ಸಿದ್ಧತೆಯನ್ನೂ ಮಾಡಿಕೊಳ್ಳಲಾಗುತ್ತಿದೆ. ಸಿದ್ದತೆಯನ್ನು ಪರಿಶೀಲಿಸಲು ಅಭಿಷೇಕ್ ಅಂಬರೀಶ್ (Abhishek) ಇಂದು ಮಂಡ್ಯಗೆ ಆಗಮಿಸಿದ್ದರು. ಪರಿಶೀಲನೆ ಮುಗಿಸಿ ಮಂಡ್ಯದಲ್ಲಿಯ ಮಹಾವೀರ ವೃತ್ತದಲ್ಲಿರುವ ಟೀ ಅಂಗಡಿಯಲ್ಲಿ ಚಹಾ (Tee) ಕುಡಿದ ಸಂಭ್ರಮಿಸಿದರು ಯಂಗ್ ರೆಬಲ್ ಸ್ಟಾರ್. ತಮ್ಮ ಕುಟುಂಬದ ಅತ್ಯಾಪ್ತ ಇಂಡುವಾಳು ಸಚ್ಚಿದಾನಂದ ಜೊತೆಗೆ ಆಗಮಿಸಿದ್ದ ಅಭಿ, ಕೆಲ ಹೊತ್ತು ಅಂಗಡಿಯಲ್ಲಿ ಕಾಲ ಕಳೆದರು.

    ಅಂಬರೀಶ್ (Ambarish) ಅವರು ಮಂಡ್ಯಗೆ ಬಂದಾಗ ಹೀಗೆಯೇ ಮಾಡುತ್ತಿದ್ದರಂತೆ. ಯಾವುದೋ ಟೀ ಅಂಗಡಿ, ಇನ್ನ್ಯಾವುದೋ ಹೋಟೆಲ್ ಹೊಕ್ಕು ಖುಷಿ ಖುಷಿಯಾಗಿ ತಿಂದು ಹೋಗುತ್ತಿದ್ದರಂತೆ. ಅಭಿಷೇಕ್ ಕೂಡ ತಂದೆಯಂತೆಯೇ ಎಲ್ಲರೊಂದಿಗೆ ಬರೆಯುತ್ತಿದ್ದಾರೆ. ಹಾಗಾಗಿ ಥೇಟ್ ಅಂಬಿಯನ್ನೇ ಅಭಿಷೇಕ್ ಗುಣದಲ್ಲಿ ಹೋಲುತ್ತಿದ್ದಾರೆ ಎನ್ನುತ್ತಾರೆ ಅಭಿಮಾನಿಗಳು. ಇದನ್ನೂ ಓದಿ:ಹೊಸ ಐಷಾರಾಮಿ ಕಾರು ಖರೀದಿಸಿದ ‘ಕೆಜಿಎಫ್’ ಸ್ಟಾರ್ ಯಶ್

    ಮಂಡ್ಯ ಜಿಲ್ಲೆಯ ಮದ್ದೂರು ಸಮೀಪದ ಗೆಜ್ಜಲಗೆರೆ ಕಾಲೋನಿ ಬಳಿಯ 15 ಎಕರೆ ಪ್ರದೇಶದಲ್ಲಿ ಈ ಬೀಗರ ಔತಣಕೂಟ (Beegaruta) ನಡೆಯಲಿದೆ. ಈ ಬೀಗರ ಊಟಕ್ಕೆ ಸುಮಾರು 50 ಸಾವಿರ ಜನರು ಆಗಮಿಸಿವ ನಿರೀಕ್ಷೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಕುಟುಂಬಸ್ಥರು ಇದ್ದಾರೆ. ಹೀಗಾಗಿ ವಿಶಾಲ ಜಾಗದಲ್ಲಿ ಬೃಹತ್ ಜರ್ಮನ್ ಟೆಂಟ್‌ ಹಾಕಿ ಜನರು ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಒಂದೇ ಬಾರಿಗೆ 4500 ಮಂದಿ ಕುಳಿತು ಊಟ ಮಾಡಲು ಆಸನದ ವ್ಯವಸ್ಥೆ ಮಾಡಲಾಗಿದೆ. ಅಭಿಷೇಕ್ ಅವಿವಾ ಅವರ ಮಂಡ್ಯದ ಬೀಗರ ಔತಣಕೂಟಕ್ಕೆ ರಾಜಕೀಯ ಹಾಗೂ ಸಿನಿಮಾ ರಂಗದ ಹಲವು ಗಣ್ಯರು ಭಾಗವಹಿಸುವ ಸಾಧ್ಯತೆ ಇದ್ದು ಹೀಗಾಗಿ ವಿಐಪಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.

    ನಾಳೆ ಬೆಳಿಗ್ಗೆ 11:30ರಿಂದ ಆರಂಭವಾಗಲಿರುವ ಔತಣಕೂಟದಲ್ಲಿ 5-6 ಟನ್ ಮಟನ್, 7 ಟನ್ ಚಿಕನ್ ಬಳಸಿ ಭರ್ಜರಿ ಬಾಡೂಟ ತಯಾರಿ ಮಾಡಲಾಗುತ್ತದೆ. ಮಂಡ್ಯ ಶೈಲಿಯಲ್ಲಿ ಬಾಡೂಟ ತಯಾರಿಯಾಗಲಿದ್ದು ಮಂಡ್ಯದ ಪ್ರಖ್ಯಾತ ಬಾಣಸಿಗರ ತಂಡದಿಂದ ಅಡುಗೆ ತಯಾರಿ ಕಾರ್ಯ ಇಂದು ರಾತ್ರಿಯಿಂದಲೇ ನಡೆಯುತ್ತದೆ. ಬೀಗರ ಔತಣಕೂಟ ಮೆನು ಮುದ್ದೆ, ಮಟನ್ ಬಿರಿಯಾನಿ, ಬೋಟಿ ಗೊಜ್ಜು, ಮಟನ್, ಎರಡು ಬಗೆಯ ಚಿಕನ್, ಮೊಟ್ಟೆ, ರೈಸ್, ತಿಳಿಸಾಂಬಾರ್, ಬೀಡಾ, ಐಸ್ ಕ್ರೀಂ, ಬಾಳೆಹಣ್ಣು ಇರಲಿದೆ.

  • ಬೀಗರೂಟಕ್ಕೆ ಬನ್ನಿ: ಮಂಡ್ಯದ ಜನತೆಗೆ ಆಹ್ವಾನ ನೀಡಿದ ಸುಮಲತಾ ಅಂಬರೀಶ್

    ಬೀಗರೂಟಕ್ಕೆ ಬನ್ನಿ: ಮಂಡ್ಯದ ಜನತೆಗೆ ಆಹ್ವಾನ ನೀಡಿದ ಸುಮಲತಾ ಅಂಬರೀಶ್

    ಭಿಷೇಕ್ (Abhishek) ಅಂಬರೀಶ್-ಅವಿವಾ (Aviva)  ಮದುವೆಯ ಬೀಗರೂಟ ನಾಳೆ ಮಂಡ್ಯದಲ್ಲಿ ನಡೆಯಲಿದೆ. ಮಂಡ್ಯದ ಸರ್ವ ಜನರೂ ಬೀಗರೂಟಕ್ಕೆ (Beegaruta) ಬರುವಂತೆ ಸುಮಲತಾ (Sumalatha) ಅಂಬರೀಶ್ ಆಹ್ವಾನ ನೀಡಿದ್ದಾರೆ. ಸುದೀರ್ಘ ಬರಹವೊಂದನ್ನು ಪೋಸ್ಟ್ ಮಾಡಿರುವ ಸುಮಲತಾ, ಕುಟುಂಬ ಸಮೇತ ಎಲ್ಲರೂ ಬೀಗರೂಟಕ್ಕೆ ಬರುವಂತೆ ವಿನಂತಿಸಿಕೊಂಡಿದ್ದಾರೆ.

    ಸೋಷಿಯಲ್ ಮೀಡಿಯಾದ ಮೂಲಕ ಆಹ್ವಾನ ನೀಡಿರುವ ಸುಮಲತಾ, ‘ಮಂಡ್ಯ ಜಿಲ್ಲೆಯ ಆತ್ಮೀಯ ಜನತೆಗೆ ನಿಮ್ಮ ಸುಮಲತಾ ಅಂಬರೀಶ್ ಮಾಡುವ ನಮಸ್ಕಾರಗಳು. ತಮ್ಮೆಲ್ಲರ ಆಶೀರ್ವಾದ ಮತ್ತು ಶುಭ ಹಾರೈಕೆಗಳೊಂದಿಗೆ  ನನ್ನ ಮಗನಾದ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಮದುವೆಯನ್ನು  ಮತ್ತು  ಆರತಕ್ಷತೆ ಕಾರ್ಯಕ್ರಮವನ್ನು  ಬೆಂಗಳೂರಿನಲ್ಲಿ ನೆರವೇರಿಸಿರುತ್ತೇನೆ. ಮಂಡ್ಯದ  (Mandya) ಸ್ವಾಭಿಮಾನಿ ಜನತೆ  ಅಂಬರೀಶ್ ಕುಟುಂಬದ ಮೇಲೆ  ಇಟ್ಟಿರುವ ಪ್ರೀತಿ ವಾತ್ಸಲ್ಯ ಅಭಿಮಾನಕ್ಕೆ  ನಾವು ಸದಾ ಚಿರಋಣಿಯಾಗಿರುತ್ತೇವೆ. ಅಭಿಷೇಕ್ ಹಾಗೂ ಅವಿವಾ ಮದುವೆಯ  ಸಂಭ್ರಮವನ್ನು  ತಮ್ಮೊಂದಿಗೆ ಹಂಚಿಕೊಳ್ಳುವ  ಉದ್ದೇಶದಿಂದ ಇದೇ ಶುಕ್ರವಾರ,  ದಿನಾಂಕ 16/06/2023 ರಂದು  ಬೆಳಿಗ್ಗೆ 11:30  ರಿಂದ  ಬೀಗರ ಔತಣವನ್ನು ಏರ್ಪಡಿಸಲಾಗಿದೆ.  ಇದಕ್ಕಾಗಿ ಮಂಡ್ಯ ಬಳಿಯ ಗೆಜ್ಜಲಗೆರೆಯಲ್ಲಿ  ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಮದುವೆ ಕಾರ್ಯಕ್ರಮಗಳು ಮತ್ತು  ಇನ್ನಿತರೆ  ಕಾರ್ಯದ  ಒತ್ತಡದಿಂದ  ನಾನು ಖುದ್ದಾಗಿ  ಬಂದು ಬೀಗರ ಔತಣಕ್ಕೆ ತಮ್ಮನ್ನು ಆಹ್ವಾನಿಸಲು ಸಾಧ್ಯವಾಗುತ್ತಿಲ್ಲ.  ಆದ್ದರಿಂದ ತಾವೆಲ್ಲರೂ ಅನ್ಯತಾ ಭಾವಿಸದೆ ತಮ್ಮ ಕುಟುಂಬ ಸಮೇತರಾಗಿ ಬೀಗರ ಔತಣಕ್ಕೆ ಆಗಮಿಸಿ  ನಮ್ಮ ಆತಿಥ್ಯವನ್ನು ಸ್ವೀಕರಿಸಿ,  ವಧು ವರರನ್ನು ಆಶೀರ್ವದಿಸಬೇಕಾಗಿ  ಈ ಮೂಲಕ ಕೋರುತ್ತೇನೆ.  ಈ ಸಂದೇಶವನ್ನು ನನ್ನ ವೈಯಕ್ತಿಕ ಆಹ್ವಾನವೆಂದು ಭಾವಿಸಿ,  ತಮ್ಮ ಕುಟುಂಬ ಸಮೇತರಾಗಿ ಬೀಗರ  ಔತಣಕ್ಕೆ ಆಗಮಿಸಲು  ಮತ್ತೊಮ್ಮೆ ಕೋರುತ್ತೇನೆ. ಅಂಬರೀಶ್ ಅವರ ಕುಟುಂಬಕ್ಕೆ ತಾವು  ಇಲ್ಲಿಯವರೆಗೆ ತೋರಿದ  ಪ್ರೀತಿ ವಿಶ್ವಾಸ ಮತ್ತು ಆಶೀರ್ವಾದವನ್ನು,  ಇನ್ನು ಮುಂದೆಯೂ ಸಹ ನೀಡಲು ತಮ್ಮನ್ನು ಕೋರುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

    ಜನರಿಗೆ ಬೊಂಬಾಟ್ ಬಾಡೂಟ ಹಾಕಿಸಲು ಅಂಬಿ (Ambarish) ಕುಟುಂಬ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಮಂಡ್ಯ ಜಿಲ್ಲೆಯ ಮದ್ದೂರು ಸಮೀಪದ ಗೆಜ್ಜಲಗೆರೆ ಕಾಲೋನಿ ಬಳಿಯ 15 ಎಕರೆ ಪ್ರದೇಶದಲ್ಲಿ ಈ ಬೀಗರ ಔತಣಕೂಟ ನಡೆಯಲಿದೆ. ಈ ಬೀಗರ ಊಟಕ್ಕೆ ಸುಮಾರು 50 ಸಾವಿರ ಜನರು ಆಗಮಿಸಿವ ನಿರೀಕ್ಷೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಕುಟುಂಬಸ್ಥರು ಇದ್ದಾರೆ. ಹೀಗಾಗಿ ವಿಶಾಲ ಜಾಗದಲ್ಲಿ ಬೃಹತ್ ಜರ್ಮನ್ ಟೆಂಟ್‌ ಹಾಕಿ ಜನರು ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಒಂದೇ ಬಾರಿಗೆ 4500 ಮಂದಿ ಕುಳಿತು ಊಟ ಮಾಡಲು ಆಸನದ ವ್ಯವಸ್ಥೆ ಮಾಡಲಾಗಿದೆ. ಅಭಿಷೇಕ್ ಅವಿವಾ ಅವರ ಮಂಡ್ಯದ ಬೀಗರ ಔತಣಕೂಟಕ್ಕೆ ರಾಜಕೀಯ ಹಾಗೂ ಸಿನಿಮಾ ರಂಗದ ಹಲವು ಗಣ್ಯರು ಭಾಗವಹಿಸುವ ಸಾಧ್ಯತೆ ಇದ್ದು ಹೀಗಾಗಿ ವಿಐಪಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.

    ನಾಳೆ ಬೆಳಿಗ್ಗೆ 11:30ರಿಂದ ಆರಂಭವಾಗಲಿರುವ ಔತಣಕೂಟದಲ್ಲಿ 5-6 ಟನ್ ಮಟನ್, 7 ಟನ್ ಚಿಕನ್ ಬಳಸಿ ಭರ್ಜರಿ ಬಾಡೂಟ ತಯಾರಿ ಮಾಡಲಾಗುತ್ತದೆ. ಮಂಡ್ಯ ಶೈಲಿಯಲ್ಲಿ ಬಾಡೂಟ ತಯಾರಿಯಾಗಲಿದ್ದು ಮಂಡ್ಯದ ಪ್ರಖ್ಯಾತ ಬಾಣಸಿಗರ ತಂಡದಿಂದ ಅಡುಗೆ ತಯಾರಿ ಕಾರ್ಯ ಇಂದು ರಾತ್ರಿಯಿಂದಲೇ ನಡೆಯುತ್ತದೆ. ಬೀಗರ ಔತಣಕೂಟ ಮೆನು ಮುದ್ದೆ, ಮಟನ್ ಬಿರಿಯಾನಿ, ಬೋಟಿ ಗೊಜ್ಜು, ಮಟನ್, ಎರಡು ಬಗೆಯ ಚಿಕನ್, ಮೊಟ್ಟೆ, ರೈಸ್, ತಿಳಿಸಾಂಬಾರ್, ಬೀಡಾ, ಐಸ್ ಕ್ರೀಂ, ಬಾಳೆಹಣ್ಣು ಇರಲಿದೆ.

  • ನಾಳೆ ಮಂಡ್ಯದಲ್ಲಿ ಅಭಿಷೇಕ್-ಅವಿವಾ ಮದುವೆ ಬೀಗರ ಊಟ: ಭರ್ಜರಿ ಭೋಜನ

    ನಾಳೆ ಮಂಡ್ಯದಲ್ಲಿ ಅಭಿಷೇಕ್-ಅವಿವಾ ಮದುವೆ ಬೀಗರ ಊಟ: ಭರ್ಜರಿ ಭೋಜನ

    ನಾಳೆ ರೆಬಲ್ ಸ್ಟಾರ್ ಅಂಬರೀಶ್ (Ambarish)  ಹಾಗೂ ಸಂಸದೆ ಸುಮಲತಾ ಅಂಬರೀಶ್ ಅವರ ಪುತ್ರ ಅಭಿಷೇಕ್ (Abhishek) ಅಂಬರೀಶ್ ಅವರ ಮದುವೆಯ ಬೀಗರ ಔತಣಕೂಟ ಮಂಡ್ಯದಲ್ಲಿ ಜರುಗಲಿದೆ. ಮಂಡ್ಯ ಜನರಿಗೆ ಬೊಂಬಾಟ್ ಬಾಡೂಟ ಹಾಕಿಸಲು ಅಂಬಿ ಕುಟುಂಬ ಭರ್ಜರಿ ತಯಾರಿ ಮಾಡಿಕೊಂಡಿದೆ.

    ಮಂಡ್ಯ (Mandya) ಜಿಲ್ಲೆಯ ಮದ್ದೂರು ಸಮೀಪದ ಗೆಜ್ಜಲಗೆರೆ ಕಾಲೋನಿ ಬಳಿಯ 15 ಎಕರೆ ಪ್ರದೇಶದಲ್ಲಿ ಈ ಬೀಗರ ಔತಣಕೂಟ ನಡೆಯಲಿದೆ. ಈ ಬೀಗರ ಊಟಕ್ಕೆ ಸುಮಾರು 50 ಸಾವಿರ ಜನರು ಆಗಮಿಸಿವ ನಿರೀಕ್ಷೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ (Sumalatha) ಕುಟುಂಬಸ್ಥರು ಇದ್ದಾರೆ. ಹೀಗಾಗಿ ವಿಶಾಲ ಜಾಗದಲ್ಲಿ ಬೃಹತ್ ಜರ್ಮನ್ ಟೆಂಟ್‌ ಹಾಕಿ ಜನರು ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಒಂದೇ ಬಾರಿಗೆ 4500 ಮಂದಿ ಕುಳಿತು ಊಟ ಮಾಡಲು ಆಸನದ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ:ಮಾಡ್ರನ್ ಅವತಾರ ಬದಿಗಿಟ್ಟು ಲೆಹೆಂಗಾದಲ್ಲಿ ಮಿಂಚಿದ ‘ಪುಟ್ಟಗೌರಿ’- ಸೊಂಟ ಸೂಪರ್ ಎಂದ ನೆಟ್ಟಿಗರು

    ಅಭಿಷೇಕ್ – ಅವಿವಾ (Aviva) ಅವರ ಮಂಡ್ಯದ ಬೀಗರ ( Begaruta) ಔತಣಕೂಟಕ್ಕೆ ರಾಜಕೀಯ ಹಾಗೂ ಸಿನಿಮಾ ರಂಗದ ಹಲವು ಗಣ್ಯರು ಭಾಗವಹಿಸುವ ಸಾಧ್ಯತೆ ಇದ್ದು ಹೀಗಾಗಿ ವಿಐಪಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.

    ನಾಳೆ ಬೆಳಿಗ್ಗೆ 11:30ರಿಂದ ಆರಂಭವಾಗಲಿರುವ ಔತಣಕೂಟದಲ್ಲಿ 5-6 ಟನ್ ಮಟನ್, 7 ಟನ್ ಚಿಕನ್ ಬಳಸಿ ಭರ್ಜರಿ ಬಾಡೂಟ ತಯಾರಿ ಮಾಡಲಾಗುತ್ತದೆ. ಮಂಡ್ಯ ಶೈಲಿಯಲ್ಲಿ ಬಾಡೂಟ ತಯಾರಿಯಾಗಲಿದ್ದು ಮಂಡ್ಯದ ಪ್ರಖ್ಯಾತ ಬಾಣಸಿಗರ ತಂಡದಿಂದ ಅಡುಗೆ ತಯಾರಿ ಕಾರ್ಯ ಇಂದು ರಾತ್ರಿಯಿಂದಲೇ ನಡೆಯುತ್ತದೆ. ಬೀಗರ ಔತಣಕೂಟ ಮೆನು ಮುದ್ದೆ, ಮಟನ್ ಬಿರಿಯಾನಿ, ಬೋಟಿ ಗೊಜ್ಜು, ಮಟನ್, ಎರಡು ಬಗೆಯ ಚಿಕನ್, ಮೊಟ್ಟೆ, ರೈಸ್, ತಿಳಿಸಾಂಬಾರ್, ಬೀಡಾ, ಐಸ್ ಕ್ರೀಂ, ಬಾಳೆಹಣ್ಣು ಇರಲಿದೆ.

  • ಅಂಬರೀಶ್ ಜನ್ಮದಿನಕ್ಕೆ ಸುಮಲತಾ ಅಂಬರೀಶ್ ಭಾವುಕ ಪತ್ರ

    ಅಂಬರೀಶ್ ಜನ್ಮದಿನಕ್ಕೆ ಸುಮಲತಾ ಅಂಬರೀಶ್ ಭಾವುಕ ಪತ್ರ

    ರ್ನಾಟಕದ ರೆಬಲ್ ಸ್ಟಾರ್ ಅಂಬರೀಶ್ (Ambarish) ಅವರ 71ನೇ ಜನ್ಮದಿನಕ್ಕೆ ಅನೇಕರು ಶುಭಾಶಯಗಳನ್ನು ತಿಳಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮಂತ್ರಿ ಸುಧಾಕರ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವಾರು ರಾಜಕೀಯ ಗಣ್ಯರು ಅಂಬರೀಶ್ ಹುಟ್ಟು ಹಬ್ಬಕ್ಕೆ (Birthday) ಶುಭಾಶಯ ಹೇಳಿದ್ದಾರೆ. ಅಂಬರೀಶ್ ಪತ್ನಿ, ನಟಿ, ಸಂಸದೆ ಸುಮಲತಾ ಅಂಬರೀಶ್ (Sumalatha) ಭಾವುಕ ಪತ್ರವೊಂದನ್ನು (Letter) ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಫೇಸ್ ಬುಕ್ ಹಾಗೂ ಟ್ವೀಟರ್ ನಲ್ಲಿ ಭಾವುಕ ಪೋಸ್ಟ್ ಮಾಡಿರುವ ಸುಮಲತಾ, ‘ನಿಮ್ಮ ಬಾಲ್ಯದ ದಿನಗಳನ್ನು ಆಗಾಗ್ಗೆ ಹೇಳುತ್ತಿದ್ದಿರಿ. ಬಾಲ್ಯದ ಆ ತುಂಟತನ ಅದು ನಿಮ್ಮಲ್ಲಿ ಕೊನೆವರೆಗೂ ಇತ್ತು. ಹಾಗಾಗಿ ನಿಮ್ಮ ಹುಟ್ಟು ಹಬ್ಬ ಅದೊಂದು ಸಡಗರವಾಗಿರುತ್ತಿತ್ತು. ಅದು ನಮಗಷ್ಟೇ ಅಲ್ಲ, ಅಭಿಮಾನಿಗಳ ಪಾಲಿಗೆ ನಿಜವಾದ ಹಬ್ಬ. ಭೌತಿಕವಾಗಿ ನಮ್ಮೊಂದಿಗೆ ನೀವು ಇದ್ದಿದ್ದರೆ, ಇಂದು 71ನೇ ವರ್ಷದ ಹುಟ್ಟು ಹಬ್ಬವನ್ನೂ ಅಭಿಮಾನಿಗಳ ಜೊತೆಯಾಗಿ ಮತ್ತಷ್ಟು ಅದ್ಧೂರಿಯಾಗಿ ಆಚರಿಸುತ್ತಿದ್ದೆವು’ ಎಂದು ಬರೆದಿದ್ದಾರೆ.

    ಮುಂದುವರೆದ ಪತ್ರದಲ್ಲಿ, ‘ಮನೆ ಮುಂದೆ ಜನಸಾಗರ, ನಿಮ್ಮ ಆರ್ಭಟ, ಹಾಸ್ಯ ಪ್ರಜ್ಞೆಯ ಮಾತು, ರಾತ್ರಿ ಇಡೀ ಕಾಯುತ್ತಾ ನಿಂತಿದ್ದ ಅಭಿಮಾನಿಗಳ ಘೋಷಣೆ ಇನ್ನೂ ಹಾಗೆಯೇ ಇದೆ. ಇವತ್ತೂ ಕೂಡ ಅವೆಲ್ಲವೂ ನಿಮಗೆ ಶುಭಾಶಯ ಹೇಳುತ್ತಿವೆ. ಸ್ವೀಕರಿಸಿ. ಹ್ಯಾಪಿ ಬರ್ತಡೇ ಮೈ ಅಂಬಿ. ಜತೆಗಿರದ ಜೀವ ಎಂದೆಂದಿಗೂ ಜೀವಂತ’ ಎಂದು ಸುಮಲತಾ ಪೋಸ್ಟ್ ಮಾಡಿದ್ದಾರೆ.

    ಅಂಬರೀಶ್ ಸಿನಿಮಾ ರಂಗದ ಅಜಾತಶತ್ರು. ಹಿರಿ ಕಿರಿಯರ ಜೊತೆ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡಿದ್ದರು. ಸಿನಿಮಾ ರಂಗದಲ್ಲಿ ಏನೇ ಸಮಸ್ಯೆಯಾದರೂ ಅದನ್ನು ಬಗೆಹರಿಸುವ ತಾಕತ್ತು ಕೇವಲ ಅಂಬರೀಶ್ ಅವರಿಗೆ ಮಾತ್ರವಿತ್ತು. ನೂರಾರು ಚಿತ್ರಗಳಲ್ಲಿ ನಟಿಸಿ, ಅನೇಕರ ಬದುಕಿಗೆ ಆಸರೆಯಾಗಿದ್ದರು. ಹಾಗಾಗಿ ಸಿನಿಮಾ ರಂಗ ಕೂಡ ಅಂಬಿ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದೆ.

  • ಅಂಬರೀಶ್ ಹುಟ್ಟುಹಬ್ಬಕ್ಕೆ ‘ಅಂತ’ ಸಿನಿಮಾ  ರೀ ರಿಲೀಸ್

    ಅಂಬರೀಶ್ ಹುಟ್ಟುಹಬ್ಬಕ್ಕೆ ‘ಅಂತ’ ಸಿನಿಮಾ ರೀ ರಿಲೀಸ್

    ಮೇ 29 ರೆಬಲ್ ಸ್ಟಾರ್ ಅಂಬರೀಶ್ (Ambarish) ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರು ಅಭಿನಯಿಸಿದ್ದ ಸೂಪರ್ ಹಿಟ್ “ಅಂತ” (Anta) ಚಿತ್ರ ಮೇ 26ರಂದು ಮರು ಬಿಡುಗಡೆಯಾಗುತ್ತಿದೆ. ನಲವತ್ತು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಈಗ ನೂತನ ತಂತ್ರಜ್ಞಾನ ಅಳವಡಿಸಲಾಗಿದೆ.

    1981 ಇಸವಿಯಲ್ಲಿ ಈ ಚಿತ್ರ ತೆರೆ ಕಂಡ ಚಿತ್ರವಿದು. ಈ ಚಿತ್ರವನ್ನು ಬೇರೆಯವರು ನಿರ್ದೇಶಿಸಬೇಕಿತ್ತು. ಆದರೆ ಪತ್ರಕರ್ತ ಎಂ.ಬಿ ಸಿಂಗ್ ಅವರ ಮೂಲಕ ಕಥೆ ನನಗೆ ದೊರಕಿತು. ಪರಿಮಳ ಆರ್ಟ್ಸ್ ಮೂಲಕ ಮಾರುತಿ, ವೇಣು ಹಾಗೂ ಕೆ.ಸಿ.ಎನ್ ಚಂದ್ರಶೇಖರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಅಂಬರೀಶ್ ಅವರು ನಾಯಕ ಎಂದು ತಿರ್ಮಾನಿಸಲಾಯಿತು. ಲಕ್ಷ್ಮೀ ಈ ಚಿತ್ರದ ನಾಯಕಿ. ವಜ್ರಮುನಿ, ಸುಂದರಕೃಷ್ಣ ಅರಸ್, ಮುಸುರಿ ಕೃಷ್ಣಮೂರ್ತಿ, ಪ್ರಭಾಕರ್ ಮುಂತಾದವರು ಇದರಲ್ಲಿ ನಟಿಸಿದ್ದಾರೆ. ಇಡೀ ಚಿತ್ರದ ಚಿತ್ರೀಕರಣ ಮೈಸೂರಿನಲ್ಲೇ ನಡೆದಿದೆ. ಹದಿನೆಂಟು ಅದ್ದೂರಿ ಸೆಟ್ ಹಾಕಲಾಗಿತ್ತು. “ಅಂತ” ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸಿತ್ತು.  ನನಗೆ ತಿಳಿದಿರುವ ಪ್ರಕಾರ ಈ ಚಿತ್ರದ ಸ್ಪೂರ್ತಿಯಿಂದ ಸಾವಿರಾರು ಚಿತ್ರಗಳು ಬಂದಿದೆ. “ಅಂತ” ಆಗಲೇ ಪ್ಯಾನ್ ಇಂಡಿಯಾ ಸಿನಿಮಾ ಆಗಿತ್ತು. ಬೇರೆ ಬೇರೆ ಭಾಷೆಯಲ್ಲಿ ತುಂಬಾ ಬೇಡಿಕೆಯಿತ್ತು. ನನ್ನ ಪ್ರಕಾರ ಚಿತ್ರದ ನಿಜವಾದ ಹೀರೋ ಕಥೆ. ಆ ಕಥೆ ಚೆನ್ನಾಗಿತ್ತು ಎಂದರೆ ಯಶಸ್ಸು ಖಂಡಿತ. ಇಂತಹ ಅದ್ಭುತ “ಅಂತ” ಚಿತ್ರ ಇದೇ ಮೇ 26 ಮರು ಬಿಡುಗಡೆಯಾಗುತ್ತಿದೆ. ಒಳ್ಳೆಯದಾಗಲಿ ಎಂದು ನಿರ್ದೇಶಕ ರಾಜೇಂದ್ರಸಿಂಗ್ ಬಾಬು (Rajendra Singh Babu) ತಿಳಿಸಿದರು. ಇದನ್ನೂ ಓದಿ:ಕಡಲ ಕಿನಾರೆಯಲ್ಲಿ ‘ಬಿಗ್ ಬಾಸ್’ ದೀಪಿಕಾ ದಾಸ್

    ಮೇ29, ಅಂಬರೀಶ್ 71ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಮೇ 26 ರಂದು “ಅಂತ” ಚಿತ್ರವನ್ನು 70 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಮಾಡುತ್ತಿದ್ದೇವೆ. ಜಯಣ್ಣ ಫಿಲಂಸ್ ಅವರು ಬಿಡುಗಡೆ ಮಾಡುತ್ತಿದ್ದಾರೆ.  35 ಎಂ ಎಂ ನಿಂದ 70 ಎಂ ಎಂ ಮಾಡಲಾಗಿದೆ. ಸೌಂಡ್, ಕಲರಿಂಗ್ ಎಲ್ಲವನ್ನೂ ಈಗಿನ ರೀತಿಗೆ ಬದಲಿಸಲಾಗಿದೆ ಎಂದು ನಿರ್ಮಾಪಕ ವೇಣು ತಿಳಿಸಿದರು.

  • ಅಂಬಿ ಹುಟ್ಟು ಹಬ್ಬಕ್ಕೆ ‘ಅಂತ’ ರೀ ರಿಲೀಸ್

    ಅಂಬಿ ಹುಟ್ಟು ಹಬ್ಬಕ್ಕೆ ‘ಅಂತ’ ರೀ ರಿಲೀಸ್

    ರೆಬೆಲ್ ಸ್ಟಾರ್ ಅಂಬರೀಶ್ (Ambarish) ವೃತ್ತಿ ಬದುಕಿಗೆ ಬಹುದೊಡ್ಡ ಬ್ರೇಕ್ ನೀಡಿದ ‘ಅಂತ’ (Antha) ಸಿನಿಮಾವನ್ನು ಅವರ ಹುಟ್ಟು ಹಬ್ಬದ ದಿನದಂದು ಮರು ಬಿಡುಗಡೆ (Re Release) ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅತ್ಯುತ್ತಮ ತಂತ್ರಜ್ಞಾನದ ಮೂಲಕ ಚಿತ್ರಕ್ಕೆ ಮತ್ತಷ್ಟು ಮೆರಗು ತುಂಬಿದ್ದು, ಹಲವು ಚಿತ್ರ ಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

    ಮೇ 29 ಅಂಬರೀಶ್ ಅವರ ಹುಟ್ಟು ಹಬ್ಬ. ಅವರ ಹುಟ್ಟು ಹಬ್ಬದ ಉಡುಗೊರೆ ಎನ್ನುವಂತೆ ಚಿತ್ರವನ್ನು ರಿಲೀಸ್ ಮಾಡುತ್ತಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಈ ಸಿನಿಮಾ ಮೊದಲ ಬಾರಿಗೆ ಬಿಡುಗಡೆ ಆಗಿದ್ದು 1981ರಲ್ಲಿ, ಇದೀಗ ಅದೇ ಚಿತ್ರವನ್ನು ಕಲರ್ ಸ್ಕೋಪ್ ಮಾಡಿ, 5.1 ಸೌಂಡ್ ವ್ಯವಸ್ಥೆಯನ್ನು ಅಳವಡಿಸಿ ಮತ್ತೆ ಬಿಡುಗಡೆ ಮಾಡಲಾಗುತ್ತಿದೆ. ಇದನ್ನೂ ಓದಿ:ಮಗಳ ಭವಿಷ್ಯಕ್ಕಾಗಿ ದೇಶ ಬಿಡಲು ಸಿದ್ಧ ಎಂದ ಪ್ರಿಯಾಂಕಾ ಚೋಪ್ರಾ

    ಎಚ್.ಕೆ ಅನಂತ್ ರಾವ್ ಅವರ ಸರಣಿಯ ಕಥೆಗಳನ್ನು ಆಧರಿಸಿ ತಯಾರಾದ ಈ ಚಿತ್ರಕ್ಕೆ ರಾಜೇಂದ್ರ ಸಿಂಗ್ ಬಾಬು (Rajendra Singh Babu) ನಿರ್ದೇಶಕರು. ಆರಂಭದಲ್ಲಿ ಈ ಸಿನಿಮಾ ನಿರ್ಮಾಣಕ್ಕೆ ಯಾರೂ ಮನಸ್ಸು ಮಾಡಲಿಲ್ಲ. ಕೊನೆಗೆ ಕೈ ಹಿಡಿದದ್ದು ಎಚ್.ಎನ್. ಮಾರುತಿ ಹಾಗೂ ವೇಣು ಗೋಪಾಲ್. ಸೆನ್ಸಾರ್ ಮಂಡಳಿಯ ವಿಪರೀತ ತೊಂದರೆ ನಡುವೆಯೂ ಸಿನಿಮಾ ರಿಲೀಸ್ ಆಗಿತ್ತು.