Tag: Ambareesh fans

  • ಅಂಬಿ-ಸುಮಲತಾ ಬಗ್ಗೆ ಮಾತಾಡಿದ್ರೆ ಹುಷಾರ್-ಅಂಬಿ ಅಭಿಮಾನಿಗಳಿಂದ ಎಚ್ಚರಿಕೆ

    ಅಂಬಿ-ಸುಮಲತಾ ಬಗ್ಗೆ ಮಾತಾಡಿದ್ರೆ ಹುಷಾರ್-ಅಂಬಿ ಅಭಿಮಾನಿಗಳಿಂದ ಎಚ್ಚರಿಕೆ

    ಮಂಡ್ಯ: ಅಂಬಿ-ಸುಮಲತಾ ಬಗ್ಗೆ ಮಾತಾಡಿದ್ರೆ ಹುಷಾರ್ ಎಂದು ಹೇಳುವ ಮೂಲಕ ಜೆಡಿಎಸ್ ನಾಯಕರಿಗೆ ಅಂಬಿ ಅಭಿಮಾನಿಗಳು ಮಂಡ್ಯದಲ್ಲಿ ಎಚ್ಚರಿಕೆಯನ್ನು ನೀಡಿದ್ದಾರೆ.

    ಸುಮಲತಾ ಅಂಬರೀಶ್ ಹಾಗೂ ಅಂಬರೀಶ್ ಅವರ ವಿರುದ್ಧ ಜೆಡಿಎಸ್ ನಾಯಕರ ವಾಗ್ದಾಳಿ ಹಿನ್ನೆಲೆ ಇಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಅಂಬರೀಶ್ ಅಭಿಮಾನಿಗಳು ಸಭೆ ನಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಜೆಡಿಎಸ್ ವಿರುದ್ಧ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

    ಅಂಬರೀಶ್ ಅಭಿಮಾನಿಗಳ ಸಂಘಟನೆಯ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ನೇತೃತ್ವದಲ್ಲಿ ಸಭೆ ಸೇರಿದ ಅಭಿಮಾನಿಗಳು ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಂಬರೀಶ್ ಅವರು ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಿಲ್ಲ. ಹೀಗಿರುವಾಗ ರವೀಂದ್ರ ಶ್ರೀಕಂಠಯ್ಯ ಅವರು ಅಂಬರೀಶ್ ಕಾಲದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು ಎನ್ನುವುದು ಸರಿಯಲ್ಲ ಎಂದು ರವೀಂದ್ರ ಶ್ರೀಕಂಠಯ್ಯ ವಿರುದ್ಧ ಕಿಡಿಕಾರಿದರು.

    ಸಭೆಯಲ್ಲಿ ಅಂಬರೀಶ್ ಅಭಿಮಾನಿಗಳು ಮೂರು ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ. ಅಂಬರೀಶ್ ಅವರ ವಿರುದ್ಧ ಮಾತನಾಡಿದ್ರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸುವುದು. ಮಂಡ್ಯ ಜಿಲ್ಲೆಯ ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆ ವಹಿಸುವಂತೆ ಆಗ್ರಹಿಸಿ ಹೋರಾಟ ನಡೆಸುವುದು. ಶಾಸಕ ರವೀಂದ್ರ ಶ್ರೀಕಂಠಯ್ಯ ಅಂಬರೀಶ್ ಹಾಗೂ ಸುಮಲತಾ ಅವರ ಬಗ್ಗೆ ಮಾತಮಾಡಿದರೆ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಘೇರಾವು ಹಾಕುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

  • ನನಗೂ ಸುಮಲತಾಗಿಂತ ಎರಡರಷ್ಟು ಭಾವನಾತ್ಮಕವಾಗಿ ಮಾತನಾಡಲು ಬರುತ್ತೆ : ಸಿಎಂ

    ನನಗೂ ಸುಮಲತಾಗಿಂತ ಎರಡರಷ್ಟು ಭಾವನಾತ್ಮಕವಾಗಿ ಮಾತನಾಡಲು ಬರುತ್ತೆ : ಸಿಎಂ

    – ನನಗೆ ಆತಂಕ ಯಾಕೆ, ಅಂಬಿ ಅಭಿಮಾನಿಗಳು ನಮಗೆ ವೋಟ್ ಹಾಕ್ತಾರೆ

    ಮಂಡ್ಯ: ನೋವಾಗುವಂತ ಮಾತು ಯಾವ ನಾಯಕರು ಮಾತನಾಡಿದ್ದಾರೆ. ಅವರು ಯಾವ ಉತ್ತರ ಕೊಡ್ತಾರೆ ಕೊಡಲಿ. ಅವರನ್ನ ಯಾರು ಹಿಡಿದುಕೊಂಡಿಲ್ಲ ಎಂದು ಸುಮಲತಾ ಅವರಿಗೆ ಸಿಎಂ ಎಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

    ಮಂಡ್ಯದಲ್ಲಿ ಸುಮಲತಾ ಅವರು ರೋಡ್ ಶೋ ಮಾಡಿ, ಬಹಿರಂಗ ಸಮಾವೇಶ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅಂಬರೀಶ್ ಅಭಿಮಾನಿಗಳು ನಮಗೇ ವೋಟ್ ಹಾಕ್ತಾರೆ. ಸುಮ್ಮನೆ ಅಲ್ಲಿ ಹೋಗಿದ್ದಾರೆ, ವೋಟ್ ನಮಗೆ ಹಾಕ್ತಾರೆ. ನಾನು ಎಲ್ಲಾ ಕಡೆ ಪ್ರಚಾರಕ್ಕೆ ಹೋಗ್ತೇನೆ. ನನ್ನ ಕಾರ್ಯಕರ್ತರು ಬಲವಾಗಿದ್ದಾಗ ಯಾವ ಮುಖಂಡರ ಬಗ್ಗೆ ನಾನು ಯಾಕೆ ತಲೆ ಕೆಡಿಸಿಕೊಳ್ಳಬೇಕು? ನಮ್ಮ ನಾಯಕರು ಸುಮಲತಾ ಅವರಿಗೆ ನೋವಾಗುವಂತ ಮಾತನ್ನು ಆಡಿಲ್ಲ. ನನಗೂ ಅವರ ಎರಡರಷ್ಟು ಭಾವನಾತ್ಮಕವಾಗಿ ಮಾತನಾಡಲು ಬರುತ್ತದೆ ಎಂದು ಹೇಳಿದರು.

    ಮಾದ್ಯಮಗಳಲ್ಲಿ ಸಿಎಂ ಅತಂಕದಲ್ಲಿ ಕೂತಿದ್ದಾರೆ ಅಂತಾ ಸುದ್ದಿ ಹಾಕುತ್ತಿದ್ದರು. ನನಗೇಕೆ ಆತಂಕ? ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಯಾವ ರೀತಿ ನಡೆಸಬೇಕು ಅಂತಾ ಚರ್ಚಿಸೋಕೆ ಬಂದಿರೋದು. ಮಂಡ್ಯ ಕ್ಷೇತ್ರವನ್ನ ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ ಎಂದರು.

    ಕಳೆದ ಎರಡು ತಿಂಗಳಿಂದ ಕೊಟ್ಟಿರುವ ಪ್ರಚಾರ ಜೋರಾಗಿದೆ. ದೇಶದಲ್ಲಿ ಮೋದಿ, ರಾಹುಲ್ ಗಾಂಧಿಯವರ ಕ್ಷೇತ್ರಗಳಿಗೂ ಇಷ್ಟು ಪ್ರಾಧಾನ್ಯತೆ ನೀಡಿಲ್ಲ. ಮಂಡ್ಯದ ಚುನಾವಣೆಗೆ ಕೊಟ್ಟಿರುವ ಪ್ರಚಾರದಿಂದ ಮೈಮರೆಯದೇ ಕೆಲಸ ಮಾಡಬೇಕಿದೆ. ಕದ್ದುಮುಚ್ಚಿ ನಡೆಸುವ ಅವಶ್ಯಕತೆ ಇಲ್ಲ. ಪ್ರಚಾರದ ಬಗ್ಗೆಯಷ್ಟೇ ಇಂದು ಮಂಡ್ಯದ ಜಿಲ್ಲಾ ಪಂಚಾಯತ್ ಸದಸ್ಯರ ಜೊತೆ ಚರ್ಚೆ ನಡೆಸಿದ್ದೇನೆ. ಮಂಡ್ಯದಲ್ಲಿ ಜೆಡಿಎಸ್ ಉಳಿಸಿ ಬೆಳೆಸಿದ ಮತದಾರರು ಅಪಪ್ರಚಾರಗಳಿಗೆ ಒಳಗಾಗಬೇಕಿಲ್ಲ. ಮಂಡ್ಯದ ಜನರ ಕಷ್ಟಕ್ಕೆ ಸ್ಪಂದಿಸಿದ್ದೇವೆ ಎಂದು ತಿಳಿಸಿದರು.

    ನಾರಾಯಣಗೌಡರಿಗೆ ಬುದ್ದಿ ಹೇಳಿದ್ದೇನೆ. ಹೊಗಳುವವರು ಇರ್ತಾರೆ ತೆಗಳುವವರು ಇರ್ತಾರೆ. ಇಬ್ಬರು ನಟರಿಗೆ ಧಮ್ಕಿ ಹಾಕಿದ್ದಾರೆ ಅಂತಾ ಹೇಳಿದ್ದಾರೆ. ಆದ್ರೆ ನಾವು ಅಧಿಕಾರ ಬಳಸಿಕೊಂಡು ರಾಜಕೀಯ ಮಾಡಿಲ್ಲ. ಇವತ್ತು ನಮ್ಮ ವಿರುದ್ಧ ಹೋರಾಡುವುದು ಅವರ ಹಕ್ಕು. ಭಯಬೀತರನ್ನಾಗಿ ಮಾಡುವುದು ನಮ್ಮ ಜಾಯಮಾನದಲ್ಲಿ ಬಂದಿಲ್ಲ. ಆ ರೀತಿ ಮಾತನಾಡದಂತೆ ಹೇಳಿದ್ದೇನೆ ಎಂದು ಸಿಎಂ ಹೇಳಿದರು.

  • ಸಂಸದ ಶಿವರಾಮೇಗೌಡ ವಿರುದ್ಧ ಅಂಬಿ ಫ್ಯಾನ್ಸ್ ಗರಂ

    ಸಂಸದ ಶಿವರಾಮೇಗೌಡ ವಿರುದ್ಧ ಅಂಬಿ ಫ್ಯಾನ್ಸ್ ಗರಂ

    ಮಂಡ್ಯ: ಸುಮಲತಾ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೇ ಸಂಸದ ಶಿವರಾಮೇಗೌಡ ಅವರು ನೀಡಿದ ಹೇಳಿಕೆಗೆ ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳು ಸಿಟ್ಟಿಗೆದ್ದಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಶಿವರಾಮೇಗೌಡರ ವಿರುದ್ಧ ಅಂಬಿ ಅಭಿಮಾನಿಗಳು ಸಿಡಿದೆದ್ದಿದ್ದಾರೆ. ಶಿವರಾಮೇಗೌಡ ಚುನಾವಣೆಯಲ್ಲಿ ಗೆಲ್ಲುವಾಗ ಅಂಬಿ ಅಣ್ಣನ ಆಶೀರ್ವಾದ ಬೇಕಿತ್ತು. ಗೆಲ್ಲುವ ತನಕ ಅಣ್ಣನ ಕಾಲಿಗೆ ಬಿದ್ದಿದ್ದೋ ಬಿದ್ದಿದ್ದು. ಆದ್ರೆ ಈಗ ಅಂಬಿ ಅಣ್ಣನ ಕುಟುಂಬದ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಬರೆದು ಶಿವರಾಮೇಗೌಡ ಅವರು ಅಂಬರೀಶ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವ ಭಾವಚಿತ್ರ ಹಾಕಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಂಬರೀಶ್ ಕುಟುಂಬದ ಬಗ್ಗೆ ಮಾತನಾಡುವ ಮೊದಲು ಯೋಚನೆ ಮಾಡಿ, ಅಂಬರೀಶ್ ಅವರು ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿದ್ದಾರೆ ಎನ್ನುವುದನ್ನು ನೆನಪಿಟ್ಟುಕೊಳ್ಳಿ ಎಂದು ಅಂಬಿ ಅಭಿಮಾನಿಗಳು ಎಚ್ಚರಿಕೆ ನೀಡಿ ಪೋಸ್ಟ್‌ಗೆ ಕಮೆಂಟ್ ಮಾಡುತ್ತಿದ್ದಾರೆ.

    ಶನಿವಾರದಂದು ಸುಮಲತಾ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಶಿವರಾಮೇಗೌಡ ಅವರು ಪ್ರತಿಕ್ರಿಯಿಸಿದ್ದರು. ಈ ವೇಳೆ ಅಂಬರೀಷ್ ಅವರನ್ನು ನಾವು ಹೆಗಲ ಮೇಲೆ ಹೊತ್ತು ಮೆರೆಸಿದ್ದೇವೆ. ಆದ್ರೆ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದರು. ಅಲ್ಲದೆ ಈಗ ಸುಮಲತಾ ಕೂಡ ಕಾಂಗ್ರೆಸ್ ನಿಂದಲೇ ಸ್ಪರ್ಧಿಸಬಹುದು. ಅವರ ಸ್ಪರ್ಧೆ ಬಗ್ಗೆ ನಾವು ಹೇಳಲು ಹೇಗೆ ಸಾಧ್ಯ ಎಂದಿದ್ದರು.

    https://www.facebook.com/1704366873200381/photos/a.1712030999100635/1981469002156832/?type=3&theater

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv